ಮಡಿಕೇರಿ ಮೇ 9 NEWS DESK : ಗ್ರಾಮೀಣ ಪುನರ್ವಸತಿ ಯೋಜನೆಯಡಿ ನಗರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಯುಆರ್‍ಡಬ್ಲ್ಯು/ವಿಆರ್‍ಡಬ್ಲ್ಯು ಹುದ್ದೆಗಳು ಖಾಲಿ ಇದ್ದು ಬೌದ್ಧಿಕ ವಿಕಲತೆ ಹಾಗೂ ಮಾನಸಿಕ ಅಸ್ವಸ್ಥರನ್ನು ಹೊರತುಪಡಿಸಿ ಅರ್ಜಿ ಸಲ್ಲಿಸಬಯಸುವವರು ಮೇ, 30 ರೊಳಗೆ ಅರ್ಜಿ ಸಲ್ಲಿಸಬಹುದು. ನಗರದ ಪುನರ್ವಸತಿ ಕಾರ್ಯಕರ್ತರು (ಯುಆರ್‍ಡಬ್ಲ್ಯು) ಹುದ್ದೆಗೆ ಮಾಸಿಕ ಗೌರವಧನ ರೂ.10 ಸಾವಿರ, ಎಸ್‍ಎಸ್‍ಎಲ್‍ಸಿ ಉತ್ತೀರ್ಣ, ಅನುತ್ತೀರ್ಣ, ವಿಕಲತೆಯ ಪ್ರಮಾಣ ಶೇ.40 ಕ್ಕಿಂತ ಮೇಲ್ಪಟ್ಟು ಶೇ.75 ಕ್ಕಿಂತ ಕಡಿಮೆ ಇರಬೇಕು. 18 ರಿಂದ 45 ವರ್ಷದ ವಯೋಮಾನದವರಾಗಿರಬೇಕು. ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು (ವಿಆರ್‍ಡಬ್ಲ್ಯು) ಹುದ್ದೆಗೆ ಮಾಸಿಕ ಗೌರವಧನ 10 ಸಾವಿರ, ಎಸ್‍ಎಸ್‍ಎಲ್‍ಸಿ ಉತ್ತೀರ್ಣ/ ಅನುತ್ತೀರ್ಣ, ವಿಕಲತೆಯ ಪ್ರಮಾಣ ಶೇ.40 ಕ್ಕಿಂತ ಮೇಲ್ಪಟ್ಟು ಶೇ.75 ಕ್ಕಿಂತ ಕಡಿಮೆ ಇರಬೇಕು. 18 ರಿಂದ 45 ವರ್ಷದ ವಯೋಮಾನದವರಾಗಿರಬೇಕು. ಯುಆರ್‍ಡಬ್ಲ್ಯು ಹುದ್ದೆಗಳು ನಗರಸಭೆ ಮಡಿಕೇರಿ, ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಹಾಗೂ ವಿಆರ್‍ಡಬ್ಲ್ಯು ಹುದ್ದೆಗಳು ಮಡಿಕೇರಿ ತಾಲ್ಲೂಕಿನ ಹಾಕತ್ತೂರು, ಕಾಂತೂರು ಮುರ್ನಾಡು, ಸೋಮವಾರಪೇಟೆ…
ಲೇಖಕ: admin
ಮಡಿಕೇರಿ ಮೇ 9 NEWS DESK : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮೇ, 10 ರಂದು ಬೆಳಗ್ಗೆ 11 ಗಂಟೆಗೆ ನಗರದ ಗಾಂಧಿ ಭವನದಲ್ಲಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮ ನಡೆಯಲಿದೆ. ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಮೈಸೂರು, ಮೇ 9 NEWS DESK : ಮೈಸೂರಿನ ಪಾರಂಪರಿಕ ಕಟ್ಟಡಗಳಾಗಿರುವ ದೇವರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್‌ಡೌನ್ ಕಟ್ಟಡದ ಸಂರಕ್ಷಣೆ ಹಾಗೂ ನವೀಕರಣಕ್ಕೆ ಅನುದಾನವನ್ನು ಶೀಘ್ರ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮನವಿ ಮಾಡಿದ್ದಾರೆ. ಮೈಸೂರಿನ ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಣೆ ಮಾಡುವುದೇ ನಮ್ಮ ಮುಖ್ಯ ಧ್ಯೇಯ. ಈ ಸಂಬಂಧ ಮುಖ್ಯಮಂತ್ರಿಗೆ ಪತ್ರ ಬರೆಯಲಾಗಿದೆ ಎಂದು ಸಂಸದರು ಹೇಳಿದ್ದಾರೆ. ಮೈಸೂರಿನ ಐತಿಹಾಸಿಕ ಕಟ್ಟಡಗಳಾದ ದೇವರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್‌ಡೌನ್ ಕಟ್ಟಡದ ಸಂರಕ್ಷಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ 4 ಮೇ 2026 ರಂದು ನೀಡಿದ ತೀರ್ಪು ಅತ್ಯಂತ ಮಹತ್ವದ್ದಾಗಿದೆ ಎಂದು ವಿವರಿಸಿದ್ದಾರೆ. :: ಸುಪ್ರೀಂ ಕೋರ್ಟ್ ತೀರ್ಪು ಮನವರಿಕೆ :: ಕಟ್ಟಡ ಕೆಡವಿ ಪುನರ್ ನಿರ್ಮಾಣದ ಪ್ರಸ್ತಾವನೆಯನ್ನು ತಿರಸ್ಕರಿಸಿದೆ. 19ನೇ ಶತಮಾನದ ಈ ಐತಿಹಾಸಿಕ ಕಟ್ಟಡವನ್ನು ಸಂರಕ್ಷಿಸಿ, ನವೀಕರಿಸಲು ಆದೇಶಿಸಿದೆ ಎಂದು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದಿದ್ದಾರೆ. ::…
ಕರ್ಕಾಳ ಮೇ 9 NEWS DESK : ರಾಷ್ಟ್ರೀಯ ರಕ್ಷಣಾ ಪಡೆಗೆ ಸೇರಬಯಸುವವರಿಗೆ ಕೇಂದ್ರ ಲೋಕಸೇವಾ ಆಯೋಗದವರು ನಡೆಸುವ 2026ರ ಎನ್ ಡಿ ಎ-1 ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ಕ್ರಿಯೇಟಿವ್ ಕಾಲೇಜಿನ ಸುಕ್ಷಿತ್ ಗಿರೀಶ್ ಗೌಡ, ಸಂವಿತ್ ಅಮಿತ್ ಗೋಕರ್ಣ, ಅಭಿಷೇಕ್ ಜೋಶಿ ಮತ್ತು ನಾಗದೇವ್‍ಎಂ.ಜಿ. ತೇರ್ಗಡೆಗೊಂಡು ಮುಂದಿನ ದೈಹಿಕ ಸಾಮಥ್ರ್ಯ ಪರೀಕ್ಷೆಗೆ ಆಯ್ಕೆಗೊಂಡಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಪ್ರಾಂಶುಪಾಲರು, ಆಡಳಿತ ಮಂಡಳಿ,ಉಪನ್ಯಾಸಕ ವರ್ಗದವರು, ಬೋಧಕೇತರ ಸಿಬ್ಬಂದಿಗಳು ಹಾಗೂ ಪರೀಕ್ಷಾ ಸಂಯೋಜಕರಾದ ಸುಮಂತ್ ದಾಮ್ಲೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಮಡಿಕೇರಿ ಮೇ 9 NEWS DESK : ವಿವಿಧತೆಯಲ್ಲಿ ಏಕತೆಯನ್ನು ಸಾರುವ ನಮ್ಮ ದೇಶದಲ್ಲಿ ಬಹುಸಂಸ್ಕೃತಿ ಮತ್ತು ಸೌಹಾರ್ದತೆಯೇ ನಮ್ಮ ಅಸ್ಮಿತೆ, ಬಹು ಸಂಸ್ಕೃತಿ ಉತ್ಸವಗಳು ಭಾಷೆ ಮತ್ತು ಸಂಸ್ಕೃತಿಯ ಉಳಿವಿಗೆ ಮತ್ತು ಬೆಳವಣಿಗೆಗೆ ಪೂರಕ” ಎಂದು ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಜಿ ನುಡಿದರು. ಅವರು ಅಕಾಡೆಮಿಯ ಸಹಯೋಗದೊಂದಿಗೆ ಬಂಟ್ವಾಳ ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಆಶ್ರಯದಲ್ಲಿ ನಡೆದ ಅರೆಭಾಷೆ ಸಾಂಸ್ಕೃತಿಕ ಸಂಭ್ರಮ – 2026 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಬಹು ಸಂಸ್ಕೃತಿ ಉತ್ಸವದ ಅಡಿಯಲ್ಲಿ ಅರೆಭಾಷಿಕರು ಕಡಿಮೆ ಇರುವಂತಹ ಸ್ಥಳದಲ್ಲಿ ಅರೆಭಾಷೆ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಂಡು ಭಾಷೆಯ ಸೊಬಗು, ಸೊಗಡು ಮತ್ತು ಸಂಸ್ಕೃತಿಯನ್ನು ಪರಿಚಯಿಸುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅರೆಭಾಷೆ ಸಾಂಸ್ಕೃತಿಕ ಸಂಭ್ರಮ -2026 ಇದರ ಅಧ್ಯಕ್ಷರಾಗಿರುವ ವಕೀಲ ಉಮೇಶ್ ಕುಮಾರ್ ವೈ ಅವರು ಹಲವು ಭಾಷೆಗಳು ಹಲವು ಸಂಸ್ಕೃತಿಗಳು ನಮ್ಮ ದೇಶದ ವಿಶಿಷ್ಟತೆ. ಪ್ರಪಂಚದ…
ಮಡಿಕೇರಿ ಮೇ 9 NEWS DESK : ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗೆ ಶಾಸಕ ಡಾ. ಮಂತರ್ ಗೌಡ ಅವರು ಪ್ರಾಥಮಿಕ ಚಿಕಿತ್ಸೆ ನೀಡುವ ಮೂಲಕ ತಮ್ಮ ವೈದ್ಯ ಧರ್ಮ ಪಾಲಿಸಿದರು. ಹಾಸನ-ಕುಶಾಲನಗರ ಮುಖ್ಯ ರಸ್ತೆಯ ಕಣಿವೆ ಗ್ರಾಮದಲ್ಲಿ ಬೈಕ್ ಒಂದು ಸವಾರನ ನಿಯಂತ್ರಣ ಕಳೆದುಕೊಂಡು ರಸ್ತೆಗೆ ಬಿದ್ದಿತ್ತು. ಈ ವೇಳೆ ಬೈಕ್ ಸವಾರನ ಕೈ ಹಾಗೂ ಕಾಲುಗಳಿಗೆ ಗಾಯಗಳಾಗಿತ್ತು. ಕಣಿವೆ ರಾಂಪುರ ಗ್ರಾಮದಲ್ಲಿ ನೂತನ ಬಸ್ ಸ್ಟಾಪ್ ಕಾಮಗಾರಿ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಅತ್ತ ಕಡೆಗೆ ತೆರಳುತ್ತಿದ್ದ ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ, ತಕ್ಷಣವೇ ತಮ್ಮ ವಾಹನ ನಿಲ್ಲಿಸಿ ವಾಹನದಲ್ಲಿದ್ದ ಫಸ್ಟ್ ಏಯ್ಡ್ ಕಿಟ್ ಬಳಸಿ ಗಾಯಗೊಂಡಿದ್ದ ಬೈಕ್ ಸವಾರನ ಗಾಯಗಳಿಗೆ ಬ್ಯಾಂಡೇಜ್ ಸುತ್ತಿ ಪ್ರಥಮ ಚಿಕಿತ್ಸೆ ಮೂಲಕ ಉಪಚರಿಸಿದರು. ಬಳಿಕ ಬೇರೊಂದು ವಾಹನದಲ್ಲಿ ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿದರು. ಶಾಸಕ ಡಾಕ್ಟರ್ ಮಂತರ್ ಗೌಡ ಅವರ ಕಾಳಜಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಮಡಿಕೇರಿ NEWS DESK ಮೇ 9 : ಕೊಡಗಿನ ಕ್ರೀಡಾಪಟುಗಳನ್ನು ಒಳಗೊಂಡ ಕರ್ನಾಟಕ ತಂಡ ರಾಷ್ಟçಮಟ್ಟದ ಸೆಸ್ಟೋಬಾಲ್ ಕ್ರೀಡೆಯಲ್ಲಿ ಇದೇ ಮೊದಲ ಬಾರಿಗೆ ಚಿನ್ನವನ್ನು ಗೆದ್ದು ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ತೆಲಂಗಾಣದಲ್ಲಿ ನಡೆದ ಕ್ರೀಡಾಕೂಟದಲ್ಲಿ ಕರ್ನಾಟಕ ತಂಡ ಕ್ವಾಟರ್ ಫೈನಲ್ ನಲ್ಲಿ ವಿದರ್ಭ ತಂಡವನ್ನು 21-18 ರ ಅಂತರದಲ್ಲಿ ಮಣಿಸಿತು. ಸೆಮಿಫೈನಲ್ ನಲ್ಲಿ 18-40 ಭಾರೀ ಅಂತರದಿoದ ಗೆಲುವು ದಾಖಲಿಸಿತು. ನಂತರ ನಡೆದ ಅಂತಿಮ ಪಂದ್ಯದಲ್ಲಿ ಪಂಜಾಬ್ ವಿರುದ್ಧ 58-30 ಅಂತರದಲ್ಲಿ ಜಯಗಳಿಸುವ ಮೂಲಕ ಕರ್ನಾಟಕ ಬಾಲಕರ ತಂಡ 4ನೇ ಸಬ್ ಜೂನಿಯರ್ ಪಂದ್ಯಾಟದ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿತು. ಬಾಲಕಿಯರ ತಂಡ ಮೊದಲಿಗೆ ಕೇರಳದ ವಿರುದ್ಧ ಎಡವಿದರೂ ನಂತರದಲ್ಲಿ ತೆಲಂಗಾಣ ತಂಡದ ಮೇಲೆ ಸಮಬಲವನ್ನು ಸಾಧಿಸಿತು. ಅಸ್ಸಾಂ, ಚಂಡೀಗಡ್ ತಂಡದ ಮೇಲೆ ಅತೀ ಹೆಚ್ಚಿನ ಅಂಕ ಪಡೆದು ಸೆಮಿಫೈನಲ್ ಪಂದ್ಯಾಟಕ್ಕೆ ಆಯ್ಕೆಯಾಗಿ ಬಲಿಷ್ಠ ತಮಿಳುನಾಡು ತಂಡವನ್ನು ಮಣಿಸಿತು. ಅಂತಿಮ ಪಂದ್ಯಾಟದಲ್ಲಿ ಆಂಧ್ರಪ್ರದೇಶ ತಂಡವನ್ನು ಸೋಲಿಸಿ 4ನೇ ಸಬ್ ಜೂನಿಯರ್ ಪಂದ್ಯಾಟದ…
ಮಡಿಕೇರಿ NEWS DESK ಮೇ 9 : ಇತ್ತೀಚೆಗೆ ನವದೆಹಲಿಯ ತ್ಯಾಗರಾಜ ಸ್ಟೇಡಿಯಂನಲ್ಲಿ ನಡೆದ “ರಾಷ್ಟ್ರಮಟ್ಟದ ಬ್ರೈನೋಬ್ರೈನ್ ಸ್ಪರ್ಧೆ : ಮಡಿಕೇರಿಯ ಅನ್ವಿತ್.ಎಸ್ ಚಾಂಪಿಯನ್ಮಟ್ಟದ 47ನೇ ಬ್ರೈನೋಬ್ರೈನ್ ಸ್ಪರ್ಧೆಯಲ್ಲಿ ಮಡಿಕೇರಿಯ ಅನ್ವಿತ್.ಎಸ್ (9) ಜೂನಿಯರ್ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ. ಸ್ಪರ್ಧೆಯಲ್ಲಿ ದೇಶದ 2000 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬ್ರೈನೋಬ್ರೈನ್ ಅಂತರಾಷ್ಟ್ರೀಯ ದುಬೈ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆನಂದ್ ಸುಬ್ರಮಣ್ಯಂ, ತಾಂತ್ರಿಕ ನಿರ್ದೇಶಕ ಅರುಲ್ ಸುಬ್ರಮಣ್ಯಂ ಹಾಗೂ ರಾಜ್ಯದ ಸ್ಥಳೀಯ ವ್ಯವಸ್ಥಾಪಕ ನಿರ್ದೇಶಕರುಗಳು ಉಪಸ್ಥಿತರಿದ್ದು, ಅನ್ವಿತ್ ಜಾಣ್ಮೆಗೆ ಶ್ಲಾಘನೆ ವ್ಯಕ್ತಪಡಿಸಿದರು. ಅನ್ವಿತ್ ಎಸ್. ಮಡಿಕೇರಿಯ ಬ್ರೈನೋಬ್ರೈನ್ ಅಬಾಕಾಸ್ ಸಂಸ್ಥೆಯ ಮಾಪಂಗಡ ಕವಿತಾ ಕರುಂಬಯ್ಯ ಅವರ ಬಳಿ ತರಬೇತಿ ಪಡೆಯುತ್ತಿದ್ದಾನೆ. ಮದೆನಾಡಿನ ಬಿಜಿಎಸ್ ಶಾಲೆಯ 3ನೇ ತರಗತಿಯ ವಿದ್ಯಾರ್ಥಿಯಾಗಿರುವ ಈತ ಮದೆನಾಡಿನ ಮದೆ ಮಹೇಶ್ವರ ಪದವಿಪೂರ್ವ ಕಾಲೇಜ್ ನ ಉಪನ್ಯಾಸಕ ಶ್ರೀನಿವಾಸ ವಿ. ಹಾಗೂ ಪವಿತ್ರ ಎಂ.ಎನ್ ದಂಪತಿಯ ಪುತ್ರ. ಅನ್ವಿತ್ ಸಣ್ಣ ವಯಸ್ಸಿನಲ್ಲೇ ಈ ಮಟ್ಟದ ಯಶಸ್ಸು ಗಳಿಸಲು…
ಮಡಿಕೇರಿ NEWS DESK ಮೇ 9 : ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಕಲೆ ಸಹಕಾರಿಯಾಗಿದೆ, ಕಲೆಯ ಅನಾವರಣಕ್ಕೆ ಸೂಕ್ತ ವೇದಿಕೆ ಕಲ್ಪಿಸಿಕೊಡುವ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮೇಜರ್ ಪ್ರೊ.ರಾಘವ ಬಿ. ಅವರು ಕರೆ ನೀಡಿದ್ದಾರೆ. ನಗರದ ಕೊಡಗು ವಿಶ್ವ ವಿದ್ಯಾನಿಲಯದ ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜು ವತಿಯಿಂದ ಕಾಲೇಜ್ ನಲ್ಲಿ ನಡೆದ ಪ್ರತಿಭಾನ್ವೇಷಣೆಯ ಕಲೆಯ ಹಬ್ಬ “ಕಲಾ ವೈಭವ” ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಕಲೆ ಸಹಕಾರಿಯಾಗಿದೆ. ಶಿಕ್ಷಣದ ಜೊತೆಯಲ್ಲಿ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಕಾಲೇಜು ಶ್ರಮಿಸುತ್ತಿದ್ದು, ಕಲಾ ವೈಭವ ಇದರ ಒಂದು ಭಾಗವಾಗಿದೆ. ಇಂತಹ ವೇದಿಕೆಗಳನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಬೇಕು ಎಂದು ಕಿವಿಮಾತು ಹೇಳಿದರು. ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ವಿದ್ಯಾರ್ಥಿಗಳ ರೂಪದಲ್ಲಿ ನೀಡುವ ಕಾರ್ಯವನ್ನು ನಿಸ್ವಾರ್ಥವಾಗಿ ಕಾಲೇಜುಗಳು ಮಾಡುತ್ತಿವೆ. ಎಲ್ಲರೂ ಕೈ ಜೋಡಿಸಿದರೆ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಕಾಲೇಜು ಕೂಡ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಮೇಜರ್ ಪ್ರೊ.ರಾಘವ ಬಿ. ತಿಳಿಸಿದರು. ಮುಖ್ಯ ಅತಿಥಿಗಳಾಗಿ…
ಮಡಿಕೇರಿ NEWS DESK ಮೇ 8 : ಮುಂಬರುವ ಮುಂಗಾರಿನಲ್ಲಿ ಜಿಲ್ಲೆಯಲ್ಲಿ ಉಂಟಾಗಬಹುದಾದ ಸಂಭವನೀಯ ಭೂಕುಸಿತ, ನದಿ ಪ್ರವಾಹದಂತಹ ವಿಕೋಪದ ಸಮಯದಲ್ಲಿ ಜನರ ಪ್ರಾಣ, ಆಸ್ತಿ ರಕ್ಷಿಸುವ ನಿಟ್ಟಿನಲ್ಲಿ ಕ್ಷಿಪ್ರವಾಗಿ ಸ್ಪಂದಿಸುವ ಸಲುವಾಗಿ ಮತ್ತು ಇತರ ಇಲಾಖೆಗಳೊಡನೆ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಪೊಲೀಸ್, ಜಿಲ್ಲಾ ವಿಪತ್ತು ನಿಯಂತ್ರಣ ಕೇಂದ್ರ ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳ ಸಭೆ ಕರೆದು ಜಿಲ್ಲೆಯಲ್ಲಿ ತುರ್ತು ಸಂದರ್ಭದಲ್ಲಿ ಲಭ್ಯವಿರುವ ಜೀವ ರಕ್ಷಣಾ ಸಾಮಗ್ರಿಗಳು, ವಾಹನಗಳು, ಸ್ವಯಂಸೇವಕರ ಸಹಕಾರ, ಬದಲಿ ರಸ್ತೆ ಮಾರ್ಗಗಳ ಗುರುತಿಸುವಿಕೆ ಮುಂತಾದ ವಿಷಯಗಳ ಬಗ್ಗೆ ಚರ್ಚಿಸಲಾಯಿತು.






