ಮಡಿಕೇರಿ ಫೆ.20 NEWS DESK : ಮೈಸೂರ್ ನಲ್ಲಿ ನಡೆದ ರಾಜ್ಯಮಟ್ಟದ “ಚಿರಾಯು ಸ್ಟಾರ್ ಚಾಂಪಿಯನ್ ಶಿಪ್-2026” ನೃತ್ಯ ಸ್ಪರ್ಧೆಯಲ್ಲಿ ಮಡಿಕೇರಿಯ ಕೂರ್ಗ್ ವಿಂಗ್ಸ್ ಆಫ್ ಫ್ಯಾಷನ್ ಡ್ಯಾನ್ಸ್ ಸ್ಟುಡಿಯೋಗೆ ಸೂಪರ್ ಮಾಮ್ ಕ್ಯಾಟಗರಿಯಲ್ಲಿ ದ್ವಿತೀಯ ಬಹುಮಾನವನ್ನು ತನ್ನದಾಗಿಸಿಕೊಂಡಿದೆ.
ಲೇಖಕ: admin
ಪಾಲಿಬೆಟ್ಟ ಫೆ.19 NEWS DESK : ಅಮ್ಮತ್ತಿ-ಪಾಲಿಬೆಟ್ಟ ಲಯನ್ಸ್ ಕ್ಲಬ್ ಗೆ ಗವರ್ನರ್ ಕುಡ್ಪಿ ಅರವಿಂದ ಶೆಣೈ ವಾರ್ಷಿಕ ಭೇಟಿ ಸಮಾರಂಭದಲ್ಲಿ ಪಾಲ್ಗೊಂಡರು. ಪಾಲಿಬೆಟ್ಟ ಅನುಗ್ರಹ ಲಯನ್ಸ್ ಭವನ ದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಲಯನ್ಸ್ ಅಂತರಾಷ್ಟ್ರೀಯ ಸಂಸ್ಥೆ ಜಗತ್ತಿನ 210 ದೇಶಗಳಲ್ಲಿ ಸುಮಾರು 50 ಸಾವಿರ ಗ್ರಾಮಗಳಲ್ಲಿ ಕೆಲಸ ನಿರ್ವಹಿಸುತ್ತಿದೆ. 14 ಲಕ್ಷ ಸದಸ್ಯತ್ವದಲ್ಲಿ ಭಾರತದಲ್ಲಿ 3 ಲಕ್ಷ ಸದಸ್ವತ ಹೊಂದಿದ್ದು, ಲಯನ್ಸ್ 317 ಡಿ ಸಂಸ್ಥೆಗಳಲ್ಲಿ ನಾಲ್ಕುವರೆ ಸಾವಿರ ಸದಸ್ಯರಿದ್ದಾರೆ ಜಿಲ್ಲೆಯಲ್ಲಿ 12 ಕ್ಲಬ್ ಗಳು ಕಾರ್ಯ ನಿರ್ವಹಿಸುತ್ತಿದ್ದು ಇದರಲ್ಲಿ ಐವತ್ತು ವರ್ಷಗಳು ಪೂರೈಸಿರುವ ಪಾಲಿಬೆಟ್ಟ ಲೈನ್ಸ್ ಕ್ಲಬ್ ಸಾಮಾಜಿಕ, ಶೈಕ್ಷಣಿಕ, ಆರೋಗ್ಯ, ಪರಿಸರ ಸೇರಿದಂತೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದ್ದು ಮಾದರಿ ಸಂಸ್ಥೆಯಾಗಿ ಗುರುತಿಸಿಕೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು ಸಮೀಪದ ಅಮ್ಮತ್ತಿ ಕ್ಲಬ್ ಕೂಡ ಎಂಟು ವರ್ಷಗಳಿಂದ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದ ಅವರು ಸಂಸ್ಥೆ ಮೂಲಕ ಸಂಘಟಿತರಾಗಿ ಸೇವಾ…
ಮಡಿಕೇರಿ ಫೆ.20 NEWS DESK : ರೋಟರಿ ದಿನಾಚರಣೆ ಅಂಗವಾಗಿ ಮಡಿಕೇರಿಯಲ್ಲಿ ರೋಟರಿ ಮಿಸ್ಟಿ ಹಿಲ್ಸ್ ಮತ್ತು ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ವತಿಯಿಂದ ಫೆ.23 ರಂದು ಸೋಮವಾರ ಮಹಿಳೆಯರಿಗಾಗಿ ರಕ್ತದಾನ ಶಿಬಿರ ಹಾಗೂ ಕೃತಕ ಕೈಕಾಲು ಜೋಡಣಾ ಶಿಬಿರ ಆಯೋಜಿಸಲಾಗಿದೆ. ನಗರದಲ್ಲಿಂದು ಸುದ್ಗಿಗೋಷ್ಟಿಯಲ್ಲಿ ಮಾಹಿತಿ ನೀಡಿದ ರೋಟರಿ ಮಿಸ್ಟಿ ಹಿಲ್ಸ್ ನ ವೃತ್ತಿ ಸೇವಾ ಯೋಜನಾ ನಿದೇ೯ಶಕ ಡಾ.ಚೆರಿಯಮನೆ ಪ್ರಶಾಂತ್, ಮಹಿಳೆಯರೂ ರಕ್ತದಾನ ಮಾಡಬಹುದು ಎಂದು ಸ್ತ್ರೀಯರನ್ನು ರಕ್ತದಾನಕ್ಕೆ ಪ್ರೇರೇಪಿಸುವ ನಿಟ್ಟಿನಲ್ಲಿ ಮಹಿಳೆಯರಿಗಾಗಿಯೇ ವಿಶೇಷವಾಗಿ ರಕ್ತದಾನ ಶಿಬಿರವನ್ನು ಮಿಸ್ಟಿ ಹಿಲ್ಸ್ ವತಿಯಿಂದ ಆಯೋಜಿಸಲಾಗಿದೆ. ಅಂತೆಯೇ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಸಂಸ್ಥೆಯ ಸಹಭಾಗಿತ್ವದಲ್ಲಿ 22 ಮಂದಿಗೆ ಕೖತಕವಾದ ಕೈ ಮತ್ತು ಕಾಲು ಜೋಡಣಾ ಶಿಬಿರವನ್ನು ರೋಟರಿ ದಿನಾಚರಣೆ ಸಂದಭ೯ ಫೆ.23 ರಂದು ನಗರದ ರೋಟರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು. ರೋಟರಿ ಜಿಲ್ಲೆ 3092 ನ ಮಾಜಿ ಗವನ೯ರ್ ನಾಗೇಂದ್ರ ಪ್ರಸಾದ್, ಕೊಡಗು ವೈದ್ಯಕೀಯ ಕಾಲೇಜಿನ ರಕ್ತ ನಿಧಿ…
ಮಡಿಕೇರಿ ಫೆ.20 NEWS DESK : ಕಾರ್ಮಿಕರು ಹಾಗೂ ಜೀಪಿನ ಮೇಲೆ ಕಾಡಾನೆ ದಾಳಿ ಮಾಡಿದ ಘಟನೆ ವಿರಾಜಪೇಟೆ ತಾಲೂಕಿನ ಮಾಲ್ದಾರೆ ಸಮೀಪದ ತಟ್ಟಳ್ಳಿಯಲ್ಲಿ ನಡೆದಿದೆ. ಕಾರ್ಮಿಕರು ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಕಾಡಾನೆಯೊಂದು ಏಕಾಏಕಿ ದಾಳಿ ಮಾಡಿದೆ. ಕಾರ್ಮಿಕರು ಭಯಭೀತರಾಗಿ ಓಡುವ ಸಂದರ್ಭ ಕಾರ್ಮಿಕ ಮಹಿಳೆ ಸುನಿತಾ ಎಂಬುವವರು ಬಿದ್ದು ಗಂಭೀರ ಗಾಯಗಳಾಗಿವೆ. ಇವರಿಗೆ ಮಾಲ್ದಾರೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಸಿದ್ದಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಫಿ ತೋಟದಿಂದ ರಸ್ತೆಗೆ ಬಂದ ಕಾಡಾನೆ ಪ್ರವೀಣ ಎಂಬುವವರಿಗೆ ಸೇರಿದ ಜೀಪಿನ ಮೇಲೆ ದಾಳಿ ಮಾಡಿ ಜಖಂಗೊಳಿಸಿದೆ. ಕಾಡಾನೆಯನ್ನು ಕಾಡಿಗಟ್ಟಲು ಬಂದ ಅರಣ್ಯ ಇಲಾಖೆ ಸಿಬ್ಬಂದಿಗಳ ಮೇಲೂ ದಾಳಿಗೆತ್ನಿಸಿದ್ದು, ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿದ್ದು, ಕಾರ್ಯಾಚರಣೆ ಕೈಗೊಂಡಿದ್ದಾರೆ. ಗ್ರಾಮದಲ್ಲಿ ಆತಂಕದ ವಾತಾವರಣವಿದ್ದು, ಕಾಡಾನೆಯನ್ನು ತಕ್ಷಣ ಸೆರೆ ಹಿಡಿಯಬೇಕೆಂದು ಕಾರ್ಮಿಕ ಮುಖಂಡರು ಆಗ್ರಹಿಸಿದ್ದಾರೆ.
ಮಡಿಕೇರಿ ಫೆ.20 NEWS DESK : ಕಾಫಿ ತೋಟದಿಂದ ಏಕಾಏಕಿ ರಸ್ತೆಗೆ ಬಂದ ಕಾಡುಕೋಣ ಡಿಕ್ಕಿಯಾದ ಪರಿಣಾಮ ಗೂಡ್ಸ್ ಆಟೋ ಪಲ್ಟಿಯಾದ ಘಟನೆ ಸಿದ್ದಾಪುರ ಸಮೀಪದ ಕರಡಿಗೋಡು ಗ್ರಾಮದಲ್ಲಿ ಇಂದು ನಡೆದಿದೆ. ಘಟನೆಯಲ್ಲಿ ಚಾಲಕ ಹಾಗೂ ಕಾರ್ಮಿಕ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಡುಕೋಣಕ್ಕೂ ಗಾಯಗಳಾಗಿದ್ದು, ಚಿಕಿತ್ಸೆಗೆಂದು ಆನೆಚೌಕೂರು ವನ್ಯ ಜೀವಿ ಸಂರಕ್ಷಣಾ ಕೇಂದ್ರದಲ್ಲಿ ದಾಖಲಿಸಲಾಗಿದೆ. ಸ್ಥಳಕ್ಕೆ ವಿರಾಜಪೇಟೆ ವಲಯ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಂ, ಉಪವಲಯ ಅರಣ್ಯಾಧಿಕಾರಿ ಸಂಜಿತ್ ಸೋಮಯ್ಯ, ತಿತಿಮತಿ ವಲಯ ಅರಣ್ಯ ಸಂರಕ್ಷಣಾಧಿಕಾರಿ ಗಂಗಾಧರ್, ಆನೆ ಚೌಕೂರು ವಲಯ ಅರಣ್ಯ ಸಂರಕ್ಷಣಾಧಿಕಾರಿ ದೇವರಾಜ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಡಿಕೇರಿ NEWS DESK ಫೆ.20 : ಕೊಡಗು ಕ್ರಿಶ್ಚಿಯನ್ ಅಸೋಸಿಯೇಷನ್ (ರಿ) ವತಿಯಿಂದ ಇದೇ ಏ.24 ಮತ್ತು 25 ರಂದು ನಡೆಯಲಿರುವ ಸಂಭ್ರಮದ ಕೆಸಿಎ ಕ್ರಿಕೆಟ್ ಟೂರ್ನಿಯ ಪೂರ್ವಭಾವಿ ಸಭೆ ವಿರಾಜಪೇಟೆಯಲ್ಲಿ ನಡೆಯಿತು. ಅಸೋಸಿಯೇಷನ್ ನ ಅಧ್ಯಕ್ಷ ಎ.ಜೆ.ಬಾಬು ಅವರ ಅಧ್ಯಕ್ಷತೆಯಲ್ಲಿ ವಿರಾಜಪೇಟೆಯ ಸಂತ ಅನ್ನಮ್ಮ ದೇವಾಲಯದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಹಾಜರಿದ್ದ ಪದಾಧಿಕಾರಿಗಳು ಕ್ರಿಕೆಟ್ ಟೂರ್ನಿಯ ಯಶಸ್ಸಿಗೆ ಅಗತ್ಯವಿರುವ ರೂಪರೇಷಗಳ ಕುರಿತು ಚರ್ಚಿಸಿದರು. ಸಮುದಾಯದ ಸಂಘಟನೆ ಹಾಗೂ ಮನೋರಂಜನೆಗಾಗಿ ಕ್ರಿಕೆಟ್ ಟೂರ್ನಿಯೊಂದಿಗೆ ಹಗ್ಗಜಗ್ಗಾಟ, ಥ್ರೋಬಾಲ್ ಮತ್ತು ಶಾಟ್ ಪೂಟ್ ಸ್ಪರ್ಧೆಯನ್ನು ಎರಡು ದಿನಗಳ ಕಾಲ ಅತ್ಯಂತ ಅದ್ದೂರಿಯಾಗಿ ಆಯೋಜಿಸಲು ನಿರ್ಧರಿಸಲಾಯಿತು. ಕೆಸಿಎ ಕ್ರಿಕೆಟ್ ಟೂರ್ನಿಯ ವಿಜೇತ ತಂಡಕ್ಕೆ ರೂ.1 ಲಕ್ಷ ಮತ್ತು ದ್ವಿತೀಯ ರೂ.50 ಸಾವಿರ ನಗದು ಬಹುಮಾನ ನೀಡಲಾಗುವುದು. ಪುರುಷರು ಹಾಗೂ ಮಹಿಳೆಯರಿಗಾಗಿ ಪ್ರತ್ಯೇಕ ವಿಭಾಗಗಳಲ್ಲಿ ಹಗ್ಗಜಗ್ಗಾಟ, ಶಾಟ್ ಪೂಟ್ ಮತ್ತು ಮಹಿಳೆಯರಿಗಾಗಿ ಥ್ರೋಬಾಲ್ ಪಂದ್ಯ ನಡೆಯಲಿದೆ. ವಿರಾಜಪೇಟೆಯ ಸಂತ ಅನ್ನಮ್ಮ ಚರ್ಚ್ ಮೈದಾನದಲ್ಲಿ ಪಂದ್ಯಾವಳಿಗಳು ನಡೆಯಲಿದ್ದು, ಪ್ರತಿಯೊಂದು…
ಮಡಿಕೇರಿ NEWS DESK ಫೆ.20 : 2026-27ನೇ ಸಾಲಿನ ಬಜೆಟ್‌ನಲ್ಲಿ ಮಡಿಕೇರಿ ನಗರದ ಸಮಗ್ರ ಅಭಿವೃದ್ಧಿಗೆ ಹಾಗೂ ಏಕಗವಾಕ್ಷಿ ಪ್ರವಾಸಿ ಸೇವಾ ಕೇಂದ್ರ ಸ್ಥಾಪನೆಗೆ ಅಗತ್ಯ ಅನುದಾನ ಬಿಡುಗಡೆ ಮಾಡಬೇಕೆಂದು ಮಡಿಕೇರಿ ನಗರ ಚೇಂಬರ್ ಆಫ್ ಕಾಮರ್ಸ್ ಶಾಸಕ ಡಾ.ಮಂತರ್ ಗೌಡ ಅವರಲ್ಲಿ ಮನವಿ ಮಾಡಿಕೊಂಡಿದೆ. ಈ ಕುರಿತು ಶಾಸಕರಿಗೆ ಪತ್ರ ಬರೆದಿರುವ ಚೇಂಬರ್ ಆಫ್ ಕಾಮರ್ಸ್ನ ನಗರಾಧ್ಯಕ್ಷ ಸಂತೋಷ್ ಅಣ್ವೇಕರ್ ಮಡಿಕೇರಿ ನಗರಕ್ಕೆ ಭೇಟಿ ನೀಡುವ ಪ್ರವಾಸಿಗರ ಹಿತದೃಷ್ಟಿಯಿಂದ ಏಕಗವಾಕ್ಷಿ ಪ್ರವಾಸಿ ಸೇವಾ ಕೇಂದ್ರ ಸ್ಥಾಪನೆಗೆ ಮತ್ತು ನಗರದ ಸಮಗ್ರ ಅಭಿವೃದ್ಧಿಗಾಗಿ ಮುಖ್ಯ ಯೋಜನೆಗಳಿಗೆ ಮುಂಬರುವ ರಾಜ್ಯ ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕೆಂದು ಕೋರಿದ್ದಾರೆ. *ಪ್ರಮುಖ ಬೇಡಿಕೆಗಳು* ಪ್ರವಾಸಿಗರಿಗೆ ಒಂದೇ ಸೂರಿನಡಿ ಮಾಹಿತಿ ಕೇಂದ್ರ, ಪ್ರವಾಸಿ ತಾಣಗಳ ಟಿಕೆಟ್ ಬುಕ್ಕಿಂಗ್ ಮತ್ತು ರೈಲ್ವೆ ಟಿಕೆಟ್ ಬುಕ್ಕಿಂಗ್ ಸೌಲಭ್ಯ ಒದಗಿಸುವ ಸುಸಜ್ಜಿತವಾದ ಏಕಗವಾಕ್ಷಿ ಪ್ರವಾಸಿ ಸೇವಾ ಕೇಂದ್ರದ ಕಚೇರಿಯನ್ನು ಸ್ಥಾಪಿಸಬೇಕು. ನಗರದ ಭದ್ರತೆ ಮತ್ತು ಸುಗಮ ಸಂಚಾರಕ್ಕಾಗಿ ಪ್ರಮುಖ ಜಂಕ್ಷನ್‌ಗಳಲ್ಲಿ ಎಐ (ಕೃತಕ…
ಮಡಿಕೇರಿ ಫೆ.19 NEWS DESK : ಇತ್ತೀಚೆಗೆ ನಿಧನರಾದ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯೆ, ಕವಯತ್ರಿ ನಾಯಕಂಡ ಬೇಬಿ ಚಿಣ್ಣಪ್ಪರ ನಿಧನಕ್ಕೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಸಂತಾಪ ಸೂಚಿಸಲಾಯಿತು. ಅಕಾಡೆಮಿ ಕಚೇರಿಯಲ್ಲಿ ಅಧ್ಯಕ್ಷರಾದ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ಅವರ ಅಧ್ಯಕ್ಷತೆಯಲ್ಲಿ ಸರ್ವ ಸಮಿತಿ ಸಭೆಯಲ್ಲಿ ಬೇಬಿ ಚಿಣ್ಣಪ್ಪರ ಅನಿರೀಕ್ಷಿತವಾದ ನಿಧನಕ್ಕೆ ಕಂಬನಿ ಮಿಡಿಯಲಾಯಿತು. ಈ ವೇಳೆ ಮಾತನಾಡಿದ ಅಕಾಡೆಮಿಯ ಅಧ್ಯಕ್ಷ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ಕೊಡವ ಕವನ, ಕತೆಗಳನ್ನು ಓದುಗರ ಮನ ಮಿಡಿಯುವ ರೀತಿಯಲ್ಲಿ ಬರೆಯುತ್ತಿದ್ದ ಬೇಬಿ ಚಿಣ್ಣಪ್ಪನವರ ಅಗಲಿಕೆ ಕೊಡವ ಸಾಹಿತ್ಯ ಲೋಕಕ್ಕೆ ಬಹುದೊಡ್ಡ ನಷ್ಟವನ್ನುಂಟು ಮಾಡಿದೆ. ಹಿರಿಯರ ಸ್ಥಾನದಲ್ಲಿದ್ದು, ಮಾರ್ಗದರ್ಶಕರಾಗಿದ್ದ ಇವರು ಕೊಡವ, ಕನ್ನಡ ಸಾಹಿತ್ಯ ಲೋಕದಲ್ಲಿ ಅಮರರಾಗಿದ್ದಾರೆಂದು ಹೇಳಿದರು. ಹಿರಿಯ ಸದಸ್ಯರಾದ ನಾಪಂಡ ಗಣೇಶ್ ಮಾತನಾಡಿ, ಬೇಬಿ ಚಿಣ್ಣಪ್ಪನವರು ಮೃಧು ಸ್ವಭಾವದ ಹಿರಿಯ ಸಾಹಿತಿಗಳು, ಅಕಾಡೆಮಿಯ ಕಾರ್ಯಕ್ರಮಗಳೆಂದರೆ ಅಭಿಮಾನದಿಂದ ಪಾಲ್ಗೊಳ್ಳುತ್ತಿದ್ದರೆಂದರು. ಕೊಂಡಿಜಮ್ಮನ ಎಂ.ಬಾಲಕೃಷ್ಣ ಮಾತನಾಡಿ, ಬೇಬಿ ಚಿಣ್ಣಪ್ಪನವರ ಅಗಲಿಕೆ ದುಃಖಕರ, ಹಿರಿಯರಾಗಿದ್ದು, ಮಾರ್ಗದರ್ಶಕರಾಗಿದ್ದರು ಎಂದರು.…
ನಾಪೋಕ್ಲು ಫೆ.19 NEWS DESK : ಕಕ್ಕಬ್ಬೆ ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕಿ ಸಿ.ಎನ್.ತಾರಾ ಲೈಬ್ರರಿ ಮತ್ತು ಇನ್ಫಾರ್ಮಶನ್ ಸೈನ್ಸ್ ನ ಸರ್ಟಿಫಿಕೇಟ್ ಕೋರ್ಸ್ ನಲ್ಲಿ ಶೇ.75.6 ಅಂಕಗಳಿಸಿ ತೇರ್ಗಡೆಯಾಗಿದ್ದಾರೆ. ಕಕ್ಕಬ್ಬೆ ಗ್ರಾಮ ಪಂಚಾಯಿತಿ ಅರಿವು ಕೇಂದ್ರದಲ್ಲಿ ಗ್ರಂಥಾಲಯ ಮೇಲ್ವಿಚಾರಕಿ ಆಗಿರುವ ಸಿ.ಎನ್.ತಾರಾ ಗದಗ ಜಿಲ್ಲೆಯ ಮಹಾತ್ಮ ಗಾಂಧಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಕೌಶಲ್ಯ ವಿಕಾಸ ಭವನ ಗ್ರಾಮ ಗಂಗೋತ್ರಿಯಲ್ಲಿ ನಡೆದ ಲೈಬ್ರರಿ ಮತ್ತು ಇನ್ಫಾರ್ಮಶನ್ ಸೈನ್ಸ್ ನ ಸರ್ಟಿಫಿಕೇಟ್ ಕೋರ್ಸ್ ನಲ್ಲಿ ಶೇ. 75.6 ಅಂಕಗಳಿಸಿ ತೇರ್ಗಡೆಯಾಗಿದ್ದಾರೆ. ಕಕ್ಕಬ್ಬೆಯ ನಾಟೋಳಂಡ ನಂಜುಂಡ ಅವರ ಪತ್ನಿ. ವರದಿ : ದುಗ್ಗಳ ಸದಾನಂದ.
ನಾಪೋಕ್ಲು ಫೆ.19 NEWS DESK : ಮೂರ್ನಾಡು ಅನುದಾನಿತ ಪ್ರೌಢಶಾಲೆಯ ಹಳೆ ವಿದ್ಯಾರ್ಥಿಗಳಿಂದ ಶಿಕ್ಷಕರನ್ನು ಸನ್ಮಾನಿಸಲಾಯಿತು. ಮೂರ್ನಾಡು ಅನುದಾನಿತ ಪ್ರೌಢಶಾಲೆಯ 1999-2002 ಸಾಲಿನಲ್ಲಿ ವ್ಯಾಸಂಗ ಮಾಡಿದ ಹಳೆಯ ವಿದ್ಯಾರ್ಥಿಗಳು ಕನ್ನಡ ಅಧ್ಯಾಪಕರಾಗಿದ್ದ ಎಸ್.ಡಿ.ಪ್ರಶಾಂತ್ ಹಾಗೂ ಶಿಕ್ಷಕರಾದ ಕೃಷ್ಣಪ್ಪ, ಗೀತಾ ಹಾಗೂ ಸುಜಾತ ಅವರನ್ನು ಸನ್ಮಾನಿಸಿ, ಗೌರವಿಸಿದರು. ಕಾರ್ಯಕ್ರಮದಲ್ಲಿ ತಮ್ಮ ಶಾಲಾ ದಿನದ ಘಟನೆಗಳನ್ನು ಮೆಲುಕು ಹಾಕುತ್ತಾ ಭಾವುಕರಾದ ಹಳೆಯ ವಿದ್ಯಾರ್ಥಿಗಳು, ಗುರುಗಳ ಸ್ಪೂರ್ತಿದಾಯಕ ಮಾತುಗಳಿಗೆ ಕಿವಿಯಾದರು. ಶಾಲಾ ಮಕ್ಕಳಿಗೆ ಸಿಹಿವಿತರಿಸಿ ಸಂಭ್ರಮಿಸಿದರು. ಈ ಸಂದರ್ಭ ಶಿಕ್ಷಕ ವರ್ಗ, ಸಿಬ್ಬಂದಿಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವರದಿ : ದುಗ್ಗಳ ಸದಾನಂದ.






