ಲೇಖಕ: admin

ಮಡಿಕೇರಿ ಆ.19 : ಪಶುಪಾಲನೆ ಇಲಾಖೆಯ ಅಸಂಘಟಿತ ವಲಯದಲ್ಲಿನ ಹಂದಿ, ಕುರಿ, ಮೇಕೆ ಸಾಕಾಣಿಕೆಯನ್ನು ಸಂಘಟಿತ ವಲಯಕ್ಕೆ ಕರೆದೊಯ್ಯಲು ಹಾಗೂ ಪ್ರಗತಿಪರ ರೈತರನ್ನು ಉದ್ಯಮೆದಾರರನ್ನಾಗಿ ಪರಿವರ್ತಿಸುವ ಉದ್ದೇಶದೊಂದಿಗೆ ಕೇಂದ್ರ ಸರ್ಕಾರದ ಆತ್ಮ ನಿರ್ಭರ ಅಭಿಯಾನ ಯೋಜನೆಯಡಿಯಲ್ಲಿ ಕೆಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಇದರ ಮೂಲಕ ಜಾನುವಾರು ಉತ್ಪನ್ನ ಒದಗಿಸುವುದು, ಯುವಜನತೆಗೆ ಉದ್ಯೋಗ ಸೃಷ್ಟಿ, ರೈತರ ಆದಾಯ ದ್ವಿಗುಣಗೊಳಿಸಲು ಪ್ರೋತ್ಸಾಹ ನೀಡುವುದು. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮಗಳ ಪ್ರಯೋಜನ ಪಡೆದುಕೊಳ್ಳಲು www.udyamimitra.com  ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮ(ಎನ್‍ಎಲ್‍ಎಂ-ಇಡಿ) ದಡಿ ಹಂದಿ ಘಟಕ(50 ಹೆಣ್ಣು, 5 ಗಂಡು) ಕ್ಕೆ ರೂ.30 ಲಕ್ಷ, ಸಹಾಯಧನ ರೂ.15 ಲಕ್ಷ(ಶೇ.50), ಹಂದಿ ಘಟಕ(100 ಹೆಣ್ಣು, 10 ಗಂಡು) ರೂ.60 ಲಕ್ಷ, ಸಹಾಯಧನ ರೂ.30 ಲಕ್ಷ, ಕುರಿ-ಮೇಕೆ ಘಟಕ(100 ಹೆಣ್ಣು, 5 ಗಂಡು)ಕ್ಕೆ ರೂ.20 ಲಕ್ಷ, ಸಹಾಯಧನ ರೂ.10 ಲಕ್ಷ ಆಗಿರುತ್ತದೆ. ಪ್ರಧಾನ ಮಂತ್ರಿಗಳ ಅತೀ ಸಣ್ಣ ಆಹಾರ ಸಂಸ್ಕರಣಾ…

Read More

ಮಡಿಕೇರಿ ಆ.19 : ಉತ್ತರ ಕೊಡಗಿನ ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು ಗ್ರಾ.ಪಂ ಸಹಕಾರದೊಂದಿಗೆ ಕೂಡುಮಂಗಳೂರು (ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯ ಗ್ರಾಮದ ದೇವಾಲಯ ಸಮಿತಿಯ ಆಶ್ರಯದಲ್ಲಿ ಕೂಡ್ಲೂರು ಗ್ರಾಮದ ಪ್ರಗತಿಪರ ರೈತ ಕೆ.ಎಸ್.ರಾಜಾಚಾರಿ ಗದ್ದೆಯಲ್ಲಿ ಏರ್ಪಡಿಸಿದ್ದ ಎರಡನೇ ವರ್ಷದ ಜನಪದಶೈಲಿಯ ಗ್ರಾಮೀಣ ಕೆಸರು ಗದ್ದೆ ಕ್ರೀಡಾಕೂಟ ಸಂಭ್ರಮ, ಸಡಗರದಿಂದ ಜರುಗಿತು. ಶಾಲೆಯ ರಾಷ್ಟ್ರೀಯ ಹಸಿರು ಪಡೆ ಇಕೋ ಕ್ಲಬ್, ರಾಷ್ಟ್ರೀಯ ಸೇವಾ ಯೋಜನಾ (ಎನ್.ಎಸ್.ಎಸ್.) ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ವತಿಯಿಂದ ಶಾಲಾ ವಿದ್ಯಾರ್ಥಿ ಸಂಘ, ಎಸ್.ಡಿ.ಎಂ.ಸಿ. ಹಾಗೂ ಗ್ರಾಮದ ಬಸವೇಶ್ವರ ಹಾಗೂ ದೊಡ್ಡಮ್ಮ ದೇವಾಲಯ ಸಮಿತಿ, ಸುಂಟಿಕೊಪ್ಪ ಜೆ.ಸಿ.ಐ.ಸಂಸ್ಥೆ ಹಾಗೂ ಕುಶಾಲನಗರ ಕಾವೇರಿ ಜೆ.ಸಿ.ಐ.ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ 77ನೇ ಸ್ವಾತಂತ್ರ್ಯೋತ್ಸವ-2023 ಗೋ ಗ್ರೀನ್ ಅಭಿಯಾನದ ಅಂಗವಾಗಿ ಏರ್ಪಡಿಸಿದ್ದ ಕೆಸರು ಗದ್ದೆ ಕ್ರೀಡಾಕೂಟ ಜನರ ಗಮನ ಸೆಳೆಯಿತು. ಕ್ರೀಡಾಕೂಟದಲ್ಲಿ ಶಾಲಾ ವಿದ್ಯಾರ್ಥಿಗಳು ಕೆಸರು ಗದ್ದೆಯಲ್ಲಿ ಮಿಂದೆದ್ದು, ಆಟವಾಡುತ್ತಾ ಕುಣಿದು ಕುಪ್ಪಳಿಸಿದರು. ಕೆಸರು ಗದ್ದೆಯಲ್ಲಿ ಮಕ್ಕಳ ಓಟದ ಸ್ಪರ್ಧೆ, ಹಗ್ಗ ಜಗ್ಗಾಟ,…

Read More

ಮಡಿಕೇರಿ ಆ.19 : ಕೊಡಗಿನಲ್ಲಿ ಕಳೆದ ಕೆಲವು ದಿನಗಳಿಂದ ಬಿಡುವು ನೀಡಿದ್ದ ಮಳೆ ಮತ್ತೆ ಸುರಿಯಲಾರಂಭಿಸಿದೆ. ಆದರೆ ಜಿಲ್ಲೆಯ ವಿವಿಧೆಡೆ ಸಾಧಾರಣ ಮಳೆಯಾಗುತ್ತಿದ್ದು, ಈ ಬಾರಿ ಶೇ.50 ರಷ್ಟು ಮಳೆಯ ಕೊರತೆ ಎದುರಾಗಿದೆ. 2018ರ ನಂತರ ಪ್ರತಿವರ್ಷ ಆಗಸ್ಟ್ ತಿಂಗಳಿನಲ್ಲಿ ಉತ್ತಮ ಮಳೆಯಾಗುತ್ತಿತ್ತು. ಆದರೆ ಪ್ರಸ್ತುತ ಬಿಸಿಲಿನಲ್ಲೇ 15 ದಿನ ಕಳೆದು ಹೋಗಿದ್ದು, ಇದೀಗ ಮತ್ತೆ ಮಳೆಯ ವಾತಾವರಣ ಕಂಡು ಬಂದಿದೆ. ಜುಲೈ ತಿಂಗಳಿನಲ್ಲಿ ಸುರಿದ ಮಳೆಗೆ ತುಂಬಿ ಹರಿದಿದ್ದ ನದಿ, ತೊರೆ, ಜಲಾಶಯಗಳು ಬಿಸಿಲಿನ ವಾತಾವರಣದಿಂದಾಗಿ ನೀರಿನ ಕೊರತೆಯನ್ನು ಎದುರಿಸುತ್ತಿವೆ. ಬರದ ಛಾಯೆ ಕಂಡು ಬಂದ ಹಿನ್ನೆಲೆಯಲ್ಲಿ ಇತ್ತೀಚೆಗೆ ಅಖಿಲ ಕೊಡವ ಸಮಾಜ ಹಾಗೂ ಸಾರ್ವಜನಿಕ ಸಂಘ ಸಂಸ್ಥೆಗಳು ಕೊಡಗಿನ ಮಳೆ ದೈವ ಎಂದೇ ಕರೆಯಲ್ಪಡುವ ಶ್ರೀಪಾಡಿ ಇಗ್ಗುತ್ತಪ್ಪನಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದರು. ಶುಕ್ರವಾರ ರಾತ್ರಿಯಿಂದ ಮಳೆ ಸುರಿಯಲು ಆರಂಭಗೊಂಡಿದ್ದು, ಜಿಲ್ಲೆಯ ಜನ ಹಾಗೂ ಕೃಷಿಕ ವರ್ಗ ಕೊಂಚ ನೆಮ್ಮದಿಯಿಂದ ಇದ್ದಾರೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಜಿಲ್ಲೆಯನ್ನು…

Read More

ಮಡಿಕೇರಿ ಆ.19 : ವಿಶ್ವ ಛಾಯಾಗ್ರಹಣ ದಿನಾಚರಣೆಯಲ್ಲಿ ಗಣ್ಯರಿಗೆ ಸನ್ಮಾನ, ಪ್ರಶಸ್ತಿ ಪ್ರದಾನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳು ನಡೆದವು. ಕೊಡಗು ಪತ್ರಕರ್ತರ ಸಂಘದಿಂದ ಮಡಿಖೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ , ಮಾಧ್ಯಮ ಅಕಾಡೆಮಿ ಪ್ರಶಸ್ತಿ ವಿಜೇತರಾದ ಶಕ್ತಿ ಪತ್ರಿಕೆಯ ಸಲಹಾ ಸಂಪಾದಕರಾದ ಬಿ.ಜಿ.ಅನಂತ ಶಯನ, ಪತ್ರಿಕಾ ಛಾಯಾಗ್ರಹಣ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸುತ್ತಿರುವ ವಿಶ್ವ ಕುಮಾರ್ ಗುಡ್ಡೆಮನೆ, ಪೊನ್ನಂಪೇಟೆ ಶೈಲೇಂದ್ರ ಮತ್ತು ಎಸ್.ಆರ್.ವಸಂತ್ ಅವರುಗಳನ್ನು ಹಾಗೂ ಛಾಯಾಗ್ರಾಹಕರ ಸಂಘದಿಂದ ಹಿರಿಯ ಛಾಯಾಗ್ರಾಹಕರಾದ ಸುರೇಶ್ ಮಾವಡ್ಕರ್ ಮತ್ತು ನಾಗೇಂದ್ರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಹ್ಯಾಪಿ ಟೀತ್ ಪ್ರಶಸ್ತಿ-ಸಂಘದ ಗೌರವ ಸಲಹೆಗಾರರಾದ ಬಿ.ಜಿ.ಅನಂತ ಶಯನ ಅವರು ತಮ್ಮ ಪುತ್ರಿ ಡಾ. ಅನುಶ್ರೀ ಅವರ ಹ್ಯಾಪಿ ಟೀತ್ ಕ್ಲಿನಿಕ್ ಹೆಸರಲ್ಲಿ ಸ್ಥಾಪಿಸಿರುವ ಮಾನವೀಯ ಮೌಲ್ಯಗಳ ಕುರಿತಾದ ಅತ್ಯುತ್ತಮ ಫೋಟೋ ಗ್ರಫಿ ಸ್ಪರ್ಧೆಯ ಪ್ರಶಸ್ತಿಯನ್ನು ಅನಿಲ್ ಎಚ್.ಟಿ. ಅವರಿಗೆ ನೀಡಿ ಗೌರವಿಸಲಾಯಿತು. ಸಂಘದಿಂದ ಕೊಡಮಾಡುವ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಅತ್ಯುತ್ತಮ ಫೋಟೋಗ್ರಫಿ ಸ್ಪರ್ಧೆಯಲ್ಲಿ…

Read More

ಮಡಿಕೇರಿ ಆ.19 : ಬದಲಾಗುತ್ತಿರುವ ಕಾಲಘಟ್ಟದಲ್ಲಿ ಛಾಯಾಗ್ರಾಹಕರು ಆಧುನಿಕ ತಾಂತ್ರಿಕತೆಗಳಿಗೆ ಹೊಂದಿಕೊಂಡು ಉನ್ನತೀಕರಣ ಸಾಧಿಸಬೇಕು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಕರೆ ನೀಡಿದ್ದಾರೆ. ಕೊಡಗು ಪತ್ರಕರ್ತರ ಸಂಘ ಹಾಗೂ ಕೊಡಗು ಜಿಲ್ಲಾ ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಮಂಜಿನನಗರಿ ಛಾಯಾಗ್ರಾಹಕರ ಸಂಘದ ಆಶ್ರಯದಲ್ಲಿ ನಗರದ ಲಯನ್ಸ್ ಸಭಾಂಗಣದಲ್ಲಿ ಆಯೋಜಿತ 184ನೇ ‘ವಿಶ್ವ ಛಾಯಾಗ್ರಹಣ ದಿನ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಬ್ಬರ ಕೈಯಲ್ಲಿ ಇಂದು ಮೊಬೈಲ್‍ಗಳು ಬಂದಿರುವುದರಿಂದ ಎಲ್ಲರೂ ಛಾಯಾಗ್ರಾಹಕರಾಗುತ್ತಿರುವುದಲ್ಲದೆ, ಸಾಮಾಜಿಕ ಜಾಲತಾಣಗಳ ಬರವಣಿಗೆಗಳ ಮೂಲಕ ವರದಿಗಾರರು ಆಗುತ್ತಿದ್ದಾರೆ. ಈ ಹಿನ್ನೆಲೆ ಛಾಯಾಗ್ರಾಹಕರು ಬದಲಾಗುತ್ತಿರುವ ಸಂದರ್ಭಕ್ಕೆ ತಕ್ಕಂತೆ ತಾಂತ್ರಿಕತೆಗಳನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕೆಂದು ಕರೆ ನೀಡಿದರು. ::: ದತ್ತಿ ಪ್ರಶಸ್ತಿಯ ಘೋಷಣೆ ::: ಛಾಯಾ ಜಿಲ್ಲಾ ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಸ್.ಆರ್. ವಸಂತ್ ಅವರ ಮನವಿಯ ಮೇರೆ ಇದೇ ಸಂದರ್ಭ ಶಾಸಕ ಡಾ. ಮಂತರ್ ಗೌಡ ಅವರು, ತಮ್ಮ ಅಜ್ಜಿ ಸಾಕಮ್ಮ ಅವರ ಸ್ಮರಣಾರ್ಥ ಛಾಯಾಗ್ರಾಹಕರ ಸಂಘ ಮತ್ತು ಕೊಡಗು…

Read More

ಮಡಿಕೇರಿ ಆ.19 :  ಮಡಿಕೇರಿ ನಗರದ ವಿವಿಧ ಬಡಾವಣೆಗಳಲ್ಲಿ  ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ  ಶಾಸಕ ಡಾ.ಮಂತರ್ ಗೌಡ  ಭೇಟಿ ನೀಡಿ ಪರಿಶೀಲಿಸಿದರು. ಮಡಿಕೇರಿಯ  ಭಗವತಿ ನಗರ ಮತ್ತು ತ್ಯಾಗರಾಜ ಕಾಲೋನಿ  ಭೇಟಿ ನೀಡಿ , ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಈ ಸಂದರ್ಭ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ,  ಉಪಾಧ್ಯಕ್ಷೆ ಸವಿತಾ ರಾಕೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಸಿ.ಸತೀಶ್ , ಪೌರಾಯುಕ್ತ ವಿಜಯ ಹಾಗೂ ಕಾಂಗ್ರೆಸ್ ನಗರಾಧ್ಯಕ್ಷ ಬಿ.ವೈ.ರಾಜೇಶ್, ಮಹಿಳಾ ಘಟಕದ ನಗರಾಧ್ಯಕ್ಷೆ ಫ್ಯಾನ್ಸಿ ಪಾರ್ವತಿ ಬೆಳ್ಯಪ್ಪ, ಪ್ರಮುಖರಾದ ಪ್ರಕಾಶ್ ಆಚಾರ್ಯ, ಮುನಿರ್ ಅಹಮ್ಮದ್ ಸೇರಿದಂತೆ ಮತ್ತಿರು ಹಾಜರಿದ್ದರು.

Read More

ಮಡಿಕೇರಿ ಆ.19 :  ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಪೊನ್ನಂಪೇಟೆ ಸ್ಥಳೀಯ ಸಂಸ್ಥೆ ಯ ವಾರ್ಷಿಕ ಮಹಾ ಸಭೆ ನಡೆಯಿತು. ಸಭೆಯಲ್ಲಿ  ಸಂಸ್ಥೆ ಯ ಅಧ್ಯಕ್ಷ ಕಾಳಿಮಡ ಮೋಟಯ್ಯ ಮಾತನಾಡಿ,  ವಾರ್ಷಿಕ ಕ್ರಿಯಾಯೋಜನೆ ತಯಾರಿ ಅದರಂತೆ ಎಲ್ಲಾ ಶಾಲೆಗಳಲ್ಲಿ ದಳಗಳನ್ನು ತೆರೆದು ಚಟುವಟಿಕೆಗಳನ್ನು ಮಾಡಿಸಿ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ಹೊರಹೊಮ್ಮಿಸುವ ಕೆಲಸಗಳನ್ನು ಮಾಡಬೇಕೆಂದು ಅಧ್ಯಕ್ಷ  ಕಾಳಿಮಡ ಮೋಟಯ್ಯ ತಿಳಿಸದರು. ಜಿಲ್ಲಾ ಸಂಘಟಕಿ ಮಾತನಾಡಿ ಹೆಚ್ಚು ಮಕ್ಕಳನ್ನು ಜಿಲ್ಲಾ ಪುರಸ್ಕಾರ ಮತ್ತು ರಾಜ್ಯ ಪುರಸ್ಕಾರ ಪರೀಕ್ಷೆಗೆ ಸಜ್ಜು ಗೊಳಿಸಬೇಕು. ತರಬೇತಿ ಆದವರು ಮುಂದುವರೆದ ತರಬೇತಿ ಪಡೆದು ಕೊಳ್ಳಬೇಕು ಎಂದು ತಿಳಿಸಿ. ಬೇಸಿಗೆ ಶಿಬಿರ ಮಾಡಿದ ಲಯನ್ಸ್ ಶಾಲೆ ಮತ್ತು ಕಾಪ್ಸ್ ಶಾಲೆಗಳಿಗೆ ಪ್ರಶಸ್ತಿ ಪತ್ರ ನೀಡಿದರು. ಉಪಾಧ್ಯಕ್ಷ ಕಾಟಿಮಾಡ  ಜಿಮ್ಮಿ ಅಣ್ಣಯ್ಯ ಮಾತನಾಡಿ, ಸಂಸ್ಥೆ ಉತ್ತಮವಾಗಿ ಬೆಳೆಯಲು ಎಲ್ಲರೂ ಸಹಕರಿಸಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಎಂದರು. ಮತ್ತೋರ್ವ ಉಪಾಧ್ಯಕ್ಷ  ಬೋಪಣ್ಣ  ಮಾತನಾಡಿ, ಮಕ್ಕಳ ಮೇಳವನ್ನು ಉತ್ತಮವಾಗಿ ನಡೆಸಲು  ಯೋಜನೆಯನ್ನು ಮಾಡಿ ಎಲ್ಲರ…

Read More

ಮಡಿಕೇರಿ ಆ.19 :  ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 20.51 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 2.76 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 1640.34 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 2665.73 ಮಿ.ಮೀ ಮಳೆಯಾಗಿತ್ತು. ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 26.95 ಮಿ.ಮೀ. ಕಳೆದ ವರ್ಷ ಇದೇ ದಿನ 8.05 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 2417.09 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 3800.11 ಮಿ.ಮೀ. ಮಳೆಯಾಗಿತ್ತು. ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 14.20 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 0.00 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1190.27 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 2036.86 ಮಿ.ಮೀ. ಮಳೆಯಾಗಿತ್ತು. ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 20.38 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 0.23 ಮಿ.ಮೀ.…

Read More

ಮಡಿಕೇರಿ ಆ.19 :  ಎರಡು ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿ ಸಂಭವಿಸಿ ಯುವತಿಯೋರ್ವಳು ಮೃತಪಟ್ಟಿರುವ ಘಟನೆ ವಿರಾಜಪೇಟೆ – ಅಮ್ಮತ್ತಿ ರಸ್ತೆಯ ಸುಂಕದಕಟ್ಟೆ ಬಳಿ ನಡೆದಿದೆ. ಅಮ್ಮತ್ತಿ ಕೆನರಾ ಬ್ಯಾಂಕ್ ಉದ್ಯೋಗಿ, ಕೇರಳ ಮೂಲದ ತ್ರಿಶೂರ್ ಜಿಲ್ಲೆಯ ಅಮೃತ (24)  ಚಿಕಿತ್ಸೆ ಫಲಕಾರಿಯಾಗದೆ ಮೈಸೂರಿನ ಆಸ್ಪತ್ರೆಯಲ್ಲಿ  ಮೃತಪಟ್ಟಿದ್ದಾರೆ. ಒಂದು ವರ್ಷದ ಹಿಂದೆ ಅಮ್ಮತ್ತಿಯ ಕೆನರಾ ಬ್ಯಾಂಕ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಮೃತ ವಿರಾಜಪೇಟೆ ನಗರದ ಖಾಸಗಿ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.  

Read More

ಸಿದ್ದಾಪುರ ಆ.19 :   ಸಿದ್ದಾಪುರ ಗುಯ್ಯ ಅಗಸ್ತೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಂ.ಎಸ್. ವೆಂಕಟೇಶ್ 6ನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾದರೆ, ಉಪಾಧ್ಯಕ್ಷರಾಗಿ ಎಂ.ಬಿಜೋಯ್ 3ನೇ ಬಾರಿಗೆ ಆಯ್ಕೆಯಾಗಿದ್ದಾರೆ. ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ  ಚುನಾವಣೆಯಲ್ಲಿ  ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ನಿರ್ದೇಶಕರುಗಳಾಗಿ ಕೆ.ಕೆ ಚಂದ್ರಕುಮಾರ್, ಪಿ.ಕೆ .ಚಂದ್ರನ್, ಶಿಬು ಚಾಕೋ,ಕೆ.ಎಸ್ ಸುನೀಲ್, ದೇವಯಾನಿ,ಪ್ರಮೀಳಾ, ಎಸ್.ಬಿ ಪ್ರತೀಶ್,ಬಶೀರ್ ವಿ.ಕೆ, ಕೆ.ಸಿ ಮಿಲನ್, ಚೆಲುವಯ್ಯ ಹೆಚ್.ಕೆ, ಸಿ.ವಾಸು ಅಯ್ಕೆಯ‍ಾಗಿದ್ದಾರೆ. ಈ ಸಂದರ್ಭ ಚುನಾವಣಾ ಅಧಿಕಾರಿ ಸಂದೀಪ್, ಕಾರ್ಯನಿರ್ವಣಾಧಿಕಾರಿ ಪ್ರಸನ್ನ ಹಾಜರಿದ್ದರು. ಇತ್ತೀಚಿಗೆ ಆಡಳಿತ ಮಂಡಳಿ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಎಂ.ಎಸ್.ವೆಂಕಟೇಶ್ ಪಡೆದ ಮತಗಳು (619), ಕೆ.ಕೆ.ಚಂದ್ರಕುಮಾರ್ ಪಡೆದ ಮತಗಳು (504)ಗೆಲುವು, ಬಿಜೋಯ್ ಎಂ ಪಡೆದ ಮತಗಳು (499)ಗೆಲುವು, ಪಿ.ಕೆ .ಚಂದ್ರನ್ ಪಡೆದ ಮತಗಳು (486)ಗೆಲುವು, ಕುಕ್ಕೂನೂರು ಸುನೀಲ್ ಪಡೆದ ಮತಗಳು (478)ಗೆಲುವು, ಶಿಬು ಚಾಕೋ ಪಡೆದ ಮತಗಳು(457)ಗೆಲುವು, ರಂಜನ್ ಪಿ ಕುಕ್ಕೂನೂರು(300)ಸೋಲು, ಟಿ.ಹೆಚ್.ಮಂಜುನಾಥ (277)ಸೋಲು, ಮಹಿಳಾ ಕ್ಷೇತ್ರದಲ್ಲಿ ದೇವಯಾನಿ(506) ಗೆಲುವು,…

Read More