ಲೇಖಕ: admin

ಮಡಿಕೇರಿ ಆ.17 : ಕೊಡಗು ವಿಶ್ವವಿದ್ಯಾನಿಲಯವು ಭಾರತ ಸರ್ಕಾರದ ಅಡಿಯಲ್ಲಿ ಕೆಲಸ ಮಾಡುತ್ತಿರುವ ಹೈದರಾಬಾದ್‍ನ ರಾಷ್ಟ್ರೀಯ ಕೃಷಿ ವಿಸ್ತರಣೆ ಮತ್ತು ನಿರ್ವಹಣೆ ಸಂಸ್ಥೆ ಜೊತೆಗೆ ಒಡಂಬಡಿಕೆಗೆ ಸಹಿ ಹಾಕಿದೆ. ರಾಷ್ಟ್ರೀಯ ಕೃಷಿ ವಿಸ್ತರಣೆ ಮತ್ತು ನಿರ್ವಹಣೆ ಸಂಸ್ಥೆ, ಹೈದರಾಬಾದ್ ಮತ್ತು ಕೊಡಗು ವಿಶ್ವವಿದ್ಯಾಲಯ, ಕೊಡಗು ಇವರುಗಳ ಒಡಬಂಡಿಕೆಯ ಮೂಲಕ ಎರಡೂ ಸಂಸ್ಥೆಗಳ ಮಧ್ಯೆ ಜಂಟಿಯಾಗಿ ಸಂಶೋಧನಾ ಚಟುವಟಿಕೆಗಳನ್ನು ಮತ್ತು ಯೋಜನೆಗಳನ್ನು ಏರ್ಪಡಿಸುವುದು, ಸಮ್ಮೇಳನ ಮತ್ತು ಕಾರ್ಯಗಾರಗಳನ್ನು ಹಮ್ಮಿಕೊಳ್ಳುವುದು. ಈ ಭಾಗಕ್ಕೆ ಸಂಬಂಧಿಸಿದ ವಿಷಯಾಧಾರಿತ ಅಧ್ಯಯನಗಳನ್ನು ಅಭಿವೃದ್ಧಿಪಡಿಸುವುದು. ಈ ಭಾಗದ ಜನತೆಗೆ ಪೂರಕವಾಗುವಂತಹ ಕೃಷಿ ಅಧ್ಯಯನಗಳನ್ನು ಕೈಗೊಳ್ಳುವುದು. ವಿಶ್ವವಿದ್ಯಾಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧ್ಯಾಪಕರುಗಳು ಮತ್ತು ಹೈದರಾಬಾದ್‍ನ ರಾಷ್ಟ್ರೀಯ ಕೃಷಿ ವಿಸ್ತರಣೆ ಮತ್ತು ನಿರ್ವಹಣೆ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧ್ಯಾಪಕರುಗಳು ಪರಸ್ಪರ ವಿನಿಮಯ ಮಾಡಿಕೊಳ್ಳುವುದು. ಕೃಷಿ ಹಾಗೂ ಸಂಬಂಧಿಸಿದ ಯೋಜನೆಗಳ ಬಗೆಗೆ ಜಂಟಿಯಾಗಿ ಅಧ್ಯಯನ ಮತ್ತು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ಹಾಗೆಯೇ ಕೊಡಗು ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕ ವೃಂದದವರಿಗೆ ಪೂರಕವಾಗಿರುವ ಸಂಬಂಧವನ್ನು…

Read More

ಮಡಿಕೇರಿ ಆ.18 : ಯಾವುದೇ ಒಂದು ಒಳ್ಳೆಯ ಹವ್ಯಾಸವನ್ನು ಪ್ರೀತಿಯಿಂದ ಅಧ್ಯಯನ ಮಾಡಿದರೆ ಅದು ಜೀವ ಪೂರ್ತಿ ಮರೆಯಲು ಸಾಧ್ಯವಾಗುವುದಿಲ್ಲ. ಅದು ನಮಗೆ ನೀಡುವ ಜ್ಞಾನ ಮತ್ತು ಶಾಂತಿ, ಸಮಾಧಾನಗಳು ವರ್ಣನೆಗೆ ನಿಲುಕದ್ದು ಎಂದು ಖ್ಯಾತ ಪಕ್ಷಿ ತಜ್ಞ ಡಾ.ಎಸ್.ವಿ. ನರಸಿಂಹನ್ ಹೇಳಿದ್ದಾರೆ. ಕೊಡಗು ಪತ್ರಕರ್ತರ ಸಂಘದ ಕುಶಾಲನಗರ ತಾಲೂಕು ಘಟಕದಿಂದ ಮಾದಾಪುರದ ಡಿ.ಚೆನ್ನಮ್ಮ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿತವಾಗಿದ್ದ ವಿಶ್ವ ಛಾಯಾಗ್ರಹಣ ದಿನಾಚರಣೆಯನ್ನು ಫೋಟೋ ಕ್ಲಿಕ್ಕಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಛಾಯಾಗ್ರಹಣ ಕೂಡ ಒಂದು ಅದ್ಭುತ ಹವ್ಯಾಸ. ಕ್ಯಾಮೆರಾ ಮುಂದೆ ಗಂಟೆಗಟ್ಟಲೆ ಕೂರುವುದು ಕೂಡ ಒಂದು ಹವ್ಯಾಸದಂತಾಗಿ ಹತ್ತು ಫೋಟೋಗಳಿಗೆ ಒಂದು ಫೋಟೋ ಚನ್ನಾಗಿ ಬಂದರೂ ಕೂಡ ಅದನ್ನು ಸಂಭ್ರಮಿಸುವವರು ನಮ್ಮ ನಡುವೆ ಇದ್ದು, ಅಂತಹವರಲ್ಲಿ ನಾನು ಕೂಡ ಒಬ್ಬ ಎಂದರು. ಛಾಯಾಗ್ರಹಣ ಪಕ್ಷಿ ವೀಕ್ಷಣೆ, ಪ್ರಕೃತಿ ಮತ್ತು ಪರಿಸರ ಪ್ರೇಮ, ಖಗೋಳಶಾಸ್ತ್ರ ಇವೆಲ್ಲವನ್ನು ನಾನು ನನ್ನ ವೃತ್ತಿಯ ನಡುವೆ ಪ್ರೀತಿಯಿಂದ ಬೆಳೆಸಿಕೊಂಡ ಹವ್ಯಾಸಗಳಾದ ಹಿನ್ನೆಲೆಯಲ್ಲಿ ಈ ಹವ್ಯಾಸಗಳು…

Read More

ಮಡಿಕೇರಿ ಆ.18 : ಮಾದಕ ವಸ್ತುಗಳಾದ ಎಂಡಿಎಂಎ ಮತ್ತು ಕೊಕೇನ್ ಸಹಿತ ಕೇರಳ ಮೂಲದ ಮೂವರು ಆರೋಪಿಗಳನ್ನು ಕೊಡಗು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಾಪೋಕ್ಲು ಪೊಲೀಸ್ ಠಾಣೆ ಸರಹದ್ದಿನ ಬಲಮುರಿ-ಮೂರ್ನಾಡು ರಸ್ತೆ ಬಳಿ ಮಾದಕ ವಸ್ತು ಮಾರಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ದಾಳಿ ಮಾಡಿದ ಪೊಲೀಸರು ಕೇರಳ ರಾಜ್ಯ ಮೂಲದ ರವೀಶ್ ಕುಮಾರ್ (26) ಮಹಮ್ಮದ್ ನಾಸಿರ್ (27) ಹಾಗೂ ಜೀಷ್ಣು ಮುರುಳಿ (23) ಎಂಬುವವರನ್ನು ಮಾಲು ಸಹಿತ ಬಂಧಿಸಿದರು. ಆರೋಪಿಗಳ ಬಳಿಯಿಂದ 24.61 ಗ್ರಾಂ ಎಂಡಿಎಂಎ ಮತ್ತು 3.45 ಗ್ರಾಂ ಕೊಕೇನ್ ನನ್ನು ವಶಕ್ಕೆ ಪಡೆಯಲಾಗಿದೆ. ಮಡಿಕೇರಿ ಉಪವಿಭಾಗದ ಡಿವೈಎಸ್‌ಪಿ ಎಂ.ಜಗದೀಶ್, ಮಡಿಕೇರಿ ಗ್ರಾಮಾಂತರ ಠಾಣಾ ಸಿಪಿಐ ಅನೂಪ್ ಮಾದಪ್ಪ, ಪಿಎಸ್‌ಐ ಈ.ಮಂಜುನಾಥ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು. ಪೊಲೀಸರ ಕಾರ್ಯದಕ್ಷತೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಶ್ಲಾಘಿಸಿದ್ದಾರೆ.

Read More

ಬೆಂಗಳೂರು: ಹಿರಿಯ ರಾಜಕಾರಣಿ, ಮಾಜಿ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರನ್ನು ಈ ಬಾರಿಯ ಡಿ. ದೇವರಾಜ ಅರಸು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸಾಹಿತಿ ಹಿ.ಶಿ. ರಾಮಚಂದ್ರೇಗೌಡ ಅವರ ನೇತೃತ್ವದ ಆಯ್ಕೆ ಸಮಿತಿಯು ಕಾಗೋಡು ತಿಮ್ಮಪ್ಪ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್.ತಂಗಡಗಿ ತಿಳಿಸಿದ್ದಾರೆ. ಪ್ರಶಸ್ತಿಯು 5 ಲಕ್ಷ ರೂಪಾಯಿ ನಗದು ಹಾಗೂ ಫಲಕವನ್ನು ಒಳಗೊಂಡಿದೆ. ಆ.20ರಂದು ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಬೆಳಗ್ಗೆ 11 ಗಂಟೆಗೆ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ 108ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಗೋಡು ತಿಮ್ಮಪ್ಪ ಅವರಿಗ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಾಗೋಡು ತಿಮ್ಮಪ್ಪ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನೆ ಸಲ್ಲಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಮುಖ್ಯಮಂತ್ರಿ, ದೇವರಾಜ ಅರಸು ಅವರ ಗರಡಿಯಲ್ಲಿಯೇ ಬೆಳೆದಿರುವ ತಿಮ್ಮಪ್ಪನವರು ಭೂ ಸುಧಾರಣಾ ಕಾಯ್ದೆಯಷ್ಟೇ…

Read More

ನಾಪೋಕ್ಲು ಆ.18 : ಮಳೆಗಾಗಿ ಸಮೀಪದ ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತಪ್ಪ ದೇವಸ್ಥಾನದಲ್ಲಿ ಅಖಿಲ ಕೊಡವ ಸಮಾಜ, ದೇವಸ್ಥಾನದ ಭಕ್ತ ಜನ ಸಂಘದ ನೇತೃತ್ವದಲ್ಲಿ ವಿವಿಧ ಕೊಡವ ಸಮಾಜ, ವಿವಿಧ ಸಂಘ ಸಂಸ್ಥೆಗಳು ತಕ್ಕ ಮುಖ್ಯಸ್ಥರು ಸೇರಿದಂತೆ ಕೊಡಗಿನ ಮೂಲನಿವಾಸಿ ಜನಾಂಗ ಸಾಮೂಹಿಕ ಪ್ರಾರ್ಥನೆ ನಡೆಸಿದರು. ಅಖಿಲ ಕೊಡವ ಸಮಾಜ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಮಾತನಾಡಿ, ಕೊಡಗಿನಲ್ಲಿ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಮಳೆಯ ಕೊರತೆ ಕಾಣಿಸಿಕೊಂಡಿದ್ದು, ಮಳೆಯ ಕೊರತೆಯಿಂದ ಭತ್ತ ಬೆಳೆಯುವ ಪ್ರದೇಶ ಪಾಳು ಬಿದ್ದಿವೆ. ಕಾಫಿ, ಕರಿಮೆಣಸು ಏಲಕ್ಕಿಗೂ ಬಿಸಿ ತಟ್ಟಿದೆ. ಕುಡಿಯುವ ನೀರಿಗೂ ಹಾಹಾಕಾರ ಎದುರಾಗಲಿದ್ದು, ಮಾನವ ಕುಲ ಮಾತ್ರವಲ್ಲ, ಪ್ರಾಣಿಪಕ್ಷಿಗಳಿಗೂ ಕೂಡ ನೀರಿಲ್ಲದೆ ಪರಿತಪಿಸುವ ಸೂಚನೆ ಕಾಣುತ್ತಿದೆ. ಇದನ್ನು ಮನಗಂಡು ಮಳೆ ಬೆಳೆ ದೇವರಾದ ಇಗ್ಗುತಪ್ಪನಲ್ಲಿ ಪ್ರಾರ್ಥಿಸಿದ್ದೇವೆ ಎಂದರು. ಮಳೆ ಇಲ್ಲದೆ ಕೃಷಿಯನ್ನೇ ನಂಬಿ ಬದುಕುವ ಕೊಡಗಿನ ಜನ ಸಮಸ್ಯೆ ಎದುರಿಸುವಂತಾಗಿದೆ. ಇಲ್ಲಿನ ನೆಲ ಬರಡಾಗಿದೆ. ಜಲ ಬತ್ತಿ ಹೋಗಿದೆ. ಜೀವಸಂಕುಲ, ಸಸ್ಯ ಸಂಕುಲ…

Read More

ಮಡಿಕೇರಿ ಆ.18 : ಮಡಿಕೇರಿ ವಿಭಾಗದ ಸೋಮವಾರಪೇಟೆ ಅರಣ್ಯ ವಲಯ ವ್ಯಾಪ್ತಿಯಲ್ಲಿರುವ ಗರ್ವಾಲೆ, ಸೂರ್ಲಬ್ಬಿ, ಮಂಕ್ಯ ಗ್ರಾಮಗಳ ರೈತರ ಜಮೀನಿನಲ್ಲಿ ಬೀಡುಬಿಟ್ಟು ಬೆಳೆ ನಷ್ಟ ಮಾಡುತ್ತಿರುವ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ. ಕೃಷಿ ಹಾಗೂ ಜನವಸತಿ ಪ್ರದೇಶಗಳಲ್ಲಿ ಓಡಾಡುತ್ತಾ ಬೆಳೆನಷ್ಟದೊಂದಿಗೆ ಸಾರ್ವಜನಿಕರಲ್ಲಿ ಜೀವ ಭಯ ತಂದೊಡ್ಡಿರುವ ಮರಿಯಾನೆಯನ್ನು ಒಳಗೊಂಡಂತೆ ಇರುವ ಒಟ್ಟು 4 ಕಾಡಾನೆಗಳನ್ನು ಅರಣ್ಯಕ್ಕೆ ಓಡಿಸುವ ಕಾರ್ಯಾಚರಣೆಯನ್ನು ಆ.19 ಮತ್ತು 20 ರಂದು ಕೈಗೊಳ್ಳಲಾಗುತ್ತಿದೆ. ಸೂರ್ಲಬ್ಬಿ, ಮಂಕ್ಯ, ತಾಕೇರಿ, ಕಿರಂಗದೂರು, ಕಾಜೂರು ಮಾರ್ಗವಾಗಿ ಕ್ರಮಕೈಗೊಳ್ಳುವುದರಿಂದ ಮೇಲ್ಕಂಡ ಗ್ರಾಮಗಳೂ ಸೇರಿದಂತೆ ತಾಕೇರಿ, ಕಿರಗಂದೂರು, ಕಾಜೂರು ಮತ್ತು ಸುತ್ತಮುತ್ತಲಿನ ಗ್ರಾಮದ ಗ್ರಾಮಸ್ಥರು ಹಾಗೂ ತೋಟದ ಮತ್ತು ಜಮೀನಿನ ಕೆಲಸಗಳನ್ನು ನಿಲ್ಲಿಸುವಂತೆ ಅರಣ್ಯ ಇಲಾಖೆ ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದೆ. ಕಾಡಾನೆ ಓಡಿಸುವ ಸಮಯದಲ್ಲಿ ಶಾಲಾ ಮಕ್ಕಳು, ಗ್ರಾಮಸ್ಥರು ಹಾಗೂ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಸೋಮವಾರಪೇಟೆ ವಲಯದ ವಲಯ ಅರಣ್ಯಾಧಿಕಾರಿ ಹೆಚ್.ಪಿ.ಚೇತನ್ ಪತ್ರಿಕಾ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.

Read More

ಮಡಿಕೇರಿ ಆ.18 :  ಬಾಳೆಲೆ ವಿಜಯಲಕ್ಷ್ಮಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಈ ಮೊದಲು ಸರ್ಕಾರದಿಂದ 8ನೇ ತರಗತಿವರೆಗೆ ಜಾರಿಯಲ್ಲಿದ್ದ ಬಿಸಿಯೂಟ ಜೊತೆ ಮೊಟ್ಟೆ ಮತ್ತು ಬಾಳೆ ಹಣ್ಣನ್ನು9ಮತ್ತು10ನೇ ತರಗತಿ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಬಾಳೆಲೆ ವಿಜಯಲಕ್ಷ್ಮಿ ಸಂಯುಕ್ತ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ  ನಡೆದ ಕಾರ್ಯಕ್ರಮಕ್ಕೆ  ಬಾಳೆಲೆ ಗ್ರಾ.ಪಂ ಅಧ್ಯಕ್ಷ ಮುಕ್ಕಾಟಿರ ಜಾನಕಿ ಕಾವೇರಪ್ಪ ಚಾಲನೆ ನೀಡಿ, ಆರೋಗ್ಯಕರ ಆಹಾರ ಸೇವನೆಯಿಂದ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಹೆಚ್ಚಿಸುತ್ತದೆಯೆಂದು ಅಭಿಪ್ರಾಯ ವ್ಯಕ್ತಪಡಿಸಿದರು.  ವಿಜಯಲಕ್ಷ್ಮಿ ವಿದ್ಯಾಸಂಸ್ಥೆಯ ಅಧ್ಯಕ್ಷ  ಅಳಮೇಂಗಡ ಬೋಸ್ ಮಂದಣ್ಣ, ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಚಂದ್ರಶೇಖರ್ ಹಾಗೂ ಮತ್ತಿತರರು ಹಾಜರಿದ್ದರು.  

Read More

ಮಡಿಕೇರಿ ಆ.18 :  ಎಸ್‍ಎಸ್‍ಎಫ್  ಕೊಡಗು ಜಿಲ್ಲಾ ಸಮಿತಿ ವತಿಯಿಂದ 77ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸುಂಟಿಕೊಪ್ಪ ಪಟ್ಟಣದಲ್ಲಿ ಬ್ರಹತ್ ರ‍್ಯಾಲಿ ನಡೆಸಿದರು. ಕೂರ್ಗ್ ಜಂಇಯ್ಯತುಲ್ ಉಲಮಾ ಅಧ್ಯಕ್ಷ  ಸಯ್ಯದ್ ಶಿಹಾಬುದ್ದೀನ್ ಕಿಲ್ಲೂರು ತಂಙ್ಙಳ್ ಕಾರ್ಯಕ್ರಮ ಉದ್ಘಾಟಿಸಿದರು.  ಎಸ್‍ವೈಎಸ್ ರಾಜ್ಯ ನಾಯಕ  ಅಹ್ಮದ್ ಶರೀಫ್ ಸಖಾಫಿ ಕಿಲ್ಲೂರು ಮಾತನಾಡಿ,  ಭಾರತದಲ್ಲಿರುವ ಭಾವೈಕ್ಯತೆಯ ಕುರಿತು  ವಿವರಿಸಿದರು. ಸೆ.10ರಂದು ಬೆಂಗಳೂರಿನಲ್ಲಿ ನಡೆಯುವ ಎಸ್‍ಎಸ್‍ಎಫ್   ಗೋಲ್ಡನ್ ಫಿಫ್ಟಿ ಮಹಾ ಸಮ್ಮೇಳನವನ್ನು ಯಶಸ್ವಿಗೊಳಿಸಲು ಕರೆ ನೀಡಿದರು. ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಕಾಂಗ್ರೆಸ್ ನಾಯಕ ವಿ.ಪಿ.ಶಶಿಧರ್ ಹಾಗೂ ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಕಾರ್ಯದರ್ಶಿ ಲತೀಫ್ ಸುಂಟಿಕೊಪ್ಪ ಮಾತನಾಡಿದರು. ಜಿಲ್ಲಾಧ್ಯಕ್ಷ  ಝುಬೈರ್ ಸಅದಿ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಅಹ್ಸನಿ ಉಸ್ತಾದ್, ಎಸ್‍ವೈಎಸ್ ರಾಜ್ಯಾದ್ಯಕ್ಷ  ಹಫೀಲ್ ಸಅದಿ, ಮಾಜಿ ರಾಜ್ಯಾಧ್ಯಕ್ಷ  ಇಸ್ಮಾಯಿಲ್ ಸಖಾಫಿ, ಕರ್ನಾಟಕ ಮುಸ್ಲಿಂ ಜಮಾಅತ್ ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಾಜಿ,…

Read More

ಮಡಿಕೇರಿ ಆ.18 :  ಕೊಡ್ಲಿಪೇಟೆ ವಲಯಗಳಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಸಾರ್ವಜನಿಕ ಸಂಪರ್ಕ ಸಭೆ ನಡೆಸಿ, ಜನರ ಅಹವಾಲುಗಳನ್ನು ಸ್ವೀಕರಿಸಿದರು. ಹಂಡ್ಲಿ ಗ್ರಾ.ಪಂ ಯಲ್ಲಿ ಸಭೆ ನಡೆಸಿ, ಅಹವಾಲುಗಳನ್ನು ಆಲಿಸಿದರು. ಈ ಸಂದರ್ಭದಲ್ಲಿ ಪಂಚಾಯಿತಿ ಆಡಳಿತ ಮಂಡಳಿ ವತಿಯಿಂದ  ಶಾಸಕರಿಗೆ ಸನ್ಮಾನ ಮಾಡಲಾಯಿತು. ನಂತರ ಬೆಸೂರು ಗ್ರಾ.ಪಂ, ಬ್ಯಾಡಗೊಟ್ಟ ಗ್ರಾ.ಪಂ ಯಲ್ಲಿ ಸಾರ್ವಜನಿಕ ಸಂಪರ್ಕ ಸಭೆ ನಡೆಸಿ ಪಂಚಾಯಿತಿ ಮಟ್ಟದಲ್ಲಿ ಸಾರ್ವಜನಿಕ ಅಹವಾಲು ಸ್ವೀಕರಿಸಿದರು.  ಇದೇ ಸಂದರ್ಭ  ಬ್ಯಾಡಗೋಟ್ಟದಲ್ಲಿ ಪಂಚಾಯಿತಿಯ ಕಸ ವಿಲೇವಾರಿ ಘಟಕದ ಉದ್ಘಾಟನೆ ಮಾಡಿದರು. ಕೊಡ್ಲಿಪೇಟೆ ಪಂಚಾಯಿತಿ ಮಟ್ಟದಲ್ಲಿ ಸಭೆ ನಡೆಸಿ, ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಸಿ ಮಾತನಾಡಿದರು. ಈ ಸಂದರ್ಭ ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್ ಹಾಗೂ ಕಾಂಗ್ರೆಸ್ ವಲಯ ಅಧ್ಯಕ್ಷರುಗಳು ಮುಖಂಡರುಗಳು ಹಾಗೂ ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು. 

Read More

ಮಡಿಕೇರಿ ಆ.18 :  ಅಪ್ಪಂಗಳದ ಶ್ರೀ ವಿಜಯ ವಿನಾಯಕ ಸೇವಾ ಸಮಿತಿ ವತಿಯಿಂದ 77ನೇ ಸ್ವಾತಂತ್ರ್ಯೋತ್ಸವವನ್ನು  ಅರ್ಥಪೂರ್ಣವಾಗಿ ಆಚರಿಸಲಾಯಿತು. ನೂತನ ಅಧ್ಯಕ್ಷ ಕೆ.ಎಂ.ಮಣಿಕಂಠ  ಮತ್ತು ಊರಿನ ಹಿರಿಯರು ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ  ಹತ್ತನೇ ತರಗತಿಯಲ್ಲಿ ಶೇ.80ಕ್ಕಿಂತ ಹೆಚ್ಚು ಅಂಕ ಪಡೆದ ಕೃತಿ ಅವರಿಗೆ ಅವರನ್ನು ಸನ್ಮಾನಿಸಲಾಯಿತು.

Read More