ಮಡಿಕೇರಿ ಸೆ.8 : ವಿರಾಜಪೇಟೆಯ ಡಾ.ಬಿ.ಆರ್.ಅಂಬೇಡ್ಕರ್ ಭವನ ಯೋಜನಾಭಿವೃದ್ಧಿ ಸಂಘದ ನೂತನ ಅಧ್ಯಕ್ಷರಾಗಿ ಜೀವವಿಮಾ ನಿಗಮದ ನಿವೃತ್ತ ನೌಕರ ಹೆಚ್.ಆರ್.ಶಿವಪ್ಪ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಹೆಚ್.ಎನ್.ಮಹದೇವ್, ಕಾರ್ಯದರ್ಶಿಯಾಗಿ ಪುರಸಭಾ ಸದಸ್ಯ ರಜನಿಕಾಂತ್, ಸಹ ಕಾರ್ಯದರ್ಶಿಯಾಗಿ ಶಿಕ್ಷಕರಾದ ಸತೀಶ್, ಖಜಾಂಚಿಯಾಗಿ ಮಾಜಿ ಸೈನಿಕ ಗೋಪಾಲ ರಾಜ್, ಗೌರವಾಧ್ಯಕ್ಷರಾಗಿ ಶಿಕ್ಷಣ ಇಲಾಖೆಯ ನಿವೃತ್ತ ನೌಕರ ಸಣ್ಣಯ್ಯ, ಸಲಹೆಗಾರರಾಗಿ ನಿವೃತ್ತ ಶಿಕ್ಷಕ ವೀರಭದ್ರಯ್ಯ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕಿ ಗಾಯತ್ರಿ ನರಸಿಂಹ ನೇಮಕಗೊಂಡಿದ್ದಾರೆ. ವಿರಾಜಪೇಟೆಯಲ್ಲಿ ಸಂಘದ ನಿಕಟ ಪೂರ್ವ ಅಧ್ಯಕ್ಷ ಎನ್.ವೀರಭದ್ರಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಯೋಜನಾಭಿವೃದ್ಧಿ ಸಂಘವನ್ನು ಪುನರ್ ರಚಿಸಲಾಯಿತು. ಈ ಸಂದರ್ಭ ದಲಿತ ಮುಖಂಡ ಕೆ.ಪಳನಿ ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.
ಲೇಖಕ: admin
ಮಡಿಕೇರಿ ಸೆ.8 : ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕೊಡಗು ಜಿಲ್ಲಾ ಘಟಕದ ವತಿಯಿಂದ ಸೆ.10 ರಂದು ಡಾ.ಬಿ.ಆರ್.ಅಂಬೇಡ್ಕರ್ ಅವರ 132ನೇ ಜಯಂತಿಯನ್ನು ಆಚರಿಸಲಾಗುವುದು. ನಗರದ ಕಾವೇರಿ ಕಲಾ ಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರನ್ನು ಸನ್ಮಾನಿಸಲಾಗುವುದು ಎಂದು ದಸಂಸಯ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್ ತಿಳಿಸಿದ್ದಾರೆ. ಅಂದು ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಕಾರ್ಯಕ್ರಮವನ್ನು ಜಿಲ್ಲಾ ಆಸ್ಪತ್ರೆಯ ಉಪ ಮುಖ್ಯ ವೈದ್ಯಾಧಿಕಾರಿ ಹೆಚ್.ವಿ.ದೇವದಾಸ್ ಉದ್ಘಾಟಿಸಲಿದ್ದಾರೆ. ಮುಖ್ಯ ಭಾಷಣಕಾರರಾಗಿ ಕೊಡಗು ವೈದ್ಯಕೀಯ ವಿಭಾಗ ಸಂಸ್ಥೆ ಮತ್ತು ಭೋದಕ ಆಸ್ಪತ್ರೆಯ ಸ್ಥಾನೀಯ ವೈದ್ಯಾಧಿಕಾರಿ ಡಾ.ಸತೀಶ್ ಪಾಲ್ಗೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸ್ತ್ರೀರೋಗ ತಜ್ಞೆ ಡಾ.ಸೌಮ್ಯ ಪ್ರಕಾಶ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಲ್ಯಾಣಾಧಿಕಾರಿ ಹೆಚ್.ಎ.ಮೋಹನ್, ದಲಿತ ಸಂಘರ್ಷ ಸಮಿತಿಯ ವಿಭಾಗೀಯ ಸಂಚಾಲಕ ಎನ್.ವೀರಭದ್ರಯ್ಯ, ಮಡಿಕೇರಿ ತಾಲ್ಲೂಕು ಸಂಚಾಲಕ ದೀಪಕ್ ಪೊನ್ನಪ್ಪ, ಜಿಲ್ಲಾ ಸಂಘಟನಾ ಸಂಚಾಲಕರುಗಳಾದ ಡಿ.ಜೆ.ಈರಪ್ಪ, ಹೆಚ್.ಎಸ್.ಗಣೇಶ್, ದಲಿತ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಸಂಚಾಲಕ ಹೆಚ್.ಬಿ.ಸಂತೋಷ್ ಕುಮಾರ್, ಮಡಿಕೇರಿ ನಗರ…
ಮಡಿಕೇರಿ ಸೆ.8 : ಪೊನ್ನಂಪೇಟೆಯ ಮದರ್ಸ್ ಆರ್ಮ್ ಮೊಂಟೆಸ್ಸರಿ ಪ್ಲೇ ಹೋಂ ನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ರಾಧಾಕೃಷ್ಣನ ವೇಷಧಾರಿಗಳಾಗಿ ಪುಟಾಣಿಗಳು ಮಿಂಚಿದರು. ಶ್ಲೋಕ ಮತ್ತು ಹಾಡುಗಳನ್ನು ಹೇಳಿ ಗಮನ ಸೆಳೆದರು. ಬೆಣ್ಣೆ, ಚಕ್ಕುಲಿ, ರವೆ ಉಂಡೆ ಮುಂತಾದ ಖಾದ್ಯಗಳನ್ನು ಸವಿದು ಪೋಷಕರೊಂದಿಗೆ ಸಂಭ್ರಮಿಸಿದರು. ಪ್ಲೇ ಹೋಂ ನ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ಹಾಗೂ ಪುಟಾಣಿಗಳ ಪೋಷಕರು ಕೂಡ ಪಾಲ್ಗೊಂಡು ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸಿದರು.
ಸುಂಟಿಕೊಪ್ಪ ಸೆ.8 : ಅನಾರೋಗ್ಯದಿಂದ ಬಳಲುತ್ತಿರುವ ಯುವತಿಯ ಹೆಚ್ಚಿನ ಚಿಕಿತ್ಸೆಗಾಗಿ ನಾಕೂರು ಶಿರಂಗಾಲ ಫ್ರೆಂಡ್ಸ್ ಯೂತ್ ಕ್ಲಬ್ ವತಿಯಿಂದ ಆರ್ಥಿಕ ನೆರವು ನೀಡಲಾಯಿತು. ಯುವತಿಯ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ತೆರಳುವ ಅಗತ್ಯ ಇರುವುದರಿಂದ ಫ್ರೆಂಡ್ಸ್ ಯೂತ್ ಕ್ಲಬ್ ಗ್ರಾಮಸ್ಥರಿಂದ ಸಂಗ್ರಹಿಸಿಲಾದ ರೂ 30,350 ಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದರು. ಈ ಸಂದರ್ಭ ನಾಕೂರು ಶಿರಂಗಾಲ ಫ್ರೆಂಡ್ಸ್ ಯೂತ್ ಕ್ಲಬ್ ಕಾರ್ಯದರ್ಶಿ ಶಂಕರನಾಯಣ, ಸದಸ್ಯ ದಯಾನಂದ, ಎಕೆಜಿ ಟಿಂಬರ್ ಬಾಯ್ಸ್ ಮಾಲೀಕ ಗಣೇಶ್, ಗ್ರಾಮಸ್ಥರಾದ ಹೆಚ್.ಪಿ.ಶಾಂತಪ್ಪ, ಪ್ರಕಾಶ ಮತ್ತಿತರರು ಹಾಜರಿದ್ದರು.
ಸುಂಟಿಕೊಪ್ಪ,ಸೆ.8 : ಸುಂಟಿಕೊಪ್ಪ ನಾಡಕಚೇರಿ ವತಿಯಿಂದ ನಾಕೂರು ಶಿರಂಗಾಲ ಗ್ರಾ.ಪಂ ವ್ಯಾಪ್ತಿಯ ಕಂದಾಯ ನಿಗಧಿ ಆಂದೋಲ ನಡೆಯಿತು. ನಾಕೂರು ಶಿರಂಗಾಲ ಗ್ರಾ.ಪಂ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಕುಶಾಲನಗರ ತಾಲೂಕು ತಹಶೀಲ್ದಾರ್ ಕಿರಣ್‍ಗೌರಯ್ಯ ಉದ್ಘಾಟಿಸಿ, ಕೃಷಿಭೂಮಿ ಸೇರಿದಂತೆ ಭೂಮಾಲೀಕರ ಹಕ್ಕುದಾರರು ದಾಖಲಾತಿಗಳನ್ನು ಹೊಂದಿಸಿಕೊಳ್ಳಲು ಕಚೇರಿಯಿಂದ ಕಚೇರಿಗೆ ಅಲೆಯುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಸರಕಾರವು ಸಂಬಂಧಿಸಿದ ಇಲಾಖೆಯ ಮೂಲಕ ಪ್ರತಿ ಗ್ರಾಮಳಿಗೆ ಇಲಾಖೆಯ ಅಧಿಕಾರಿಗಳೇ ತೆರಳಿ ಗ್ರಾಮಸ್ಥರಿಂದ ಅರ್ಜಿಗಳನ್ನು ಸ್ವೀಕರಿಸಿ ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಕೃಷಿಕರು ಮತ್ತು ಭೂ ಸಮಸ್ಯೆಗಳನ್ನು ಎದುರಿಸುತ್ತಿರುವ ಮಂದಿ ಮೂಲ ದಾಖಲಾತಿಗಳನ್ನು ನೀಡುವ ಸಮಸ್ಯೆಗೆ ಪರಿಹಾರ ಒದಗಿಸಿಕೊಡಲಾಗುವುದು ಇದರ ಸದುಪಯೋಗವನ್ನು ಗ್ರಾಮಸ್ಥರು ಪಡೆದುಕೊಳ್ಳಬೆಕೆಂದರು. ಸರ್ವೆ ವಿಭಾಗದ ಮುಖ್ಯಅಧಿಕಾರಿ ಮಹೇಶ್ ಸಭೆಯನ್ನುದ್ದೇಶಿಸಿ ಮತನಾಡಿದ ಅವರು ಗ್ರಾಮಸ್ಥರಿಗೆ ಸರ್ವೆ ಇಲಾಖೆಯ ವತಿಯಿಂದ ಕೃಷಿ ಹಾಗೂ ಭೂಮಾಲೀಕರು ಹಕ್ಕುದಾರರಿಗೆ ಆಂದೋಲನದ ಸದುಉದ್ದೇಶವನ್ನು ತಿಳಿಸಿದರು. ಸುಂಟಿಕೊಪ್ಪ ಉಪ ತಹಶೀಲ್ದಾರ್ ಶಿವಪ್ಪ, ಸರ್ವೆಯರ್‍ಗಳಾದ ಶ್ರೀನಿವಾಸ್, ಸಿದ್ದರಾಜು, ಸಹಾಯಕಗುರು, ಕಂದಾಯ ಪರಿವೀಕ್ಷಕರಾದ ಪ್ರಶಾಂತ್, ಗ್ರಾಮ…
ಮಡಿಕೇರಿ ಸೆ.8 : ಮಡಿಕೇರಿಯ ವಿದ್ಯಾನಗರದ ಶ್ರೀ ಶಕ್ತಿ ಗಣಪತಿ ದೇವಾಲಯದ 28ನೇ ಗಣೇಶೋತ್ಸವದ ಪ್ರಯುಕ್ತ ಸೆ.19 ರಂದು ಚಿತ್ರಕಲಾ ಸ್ಪರ್ಧೆ ನಡೆಯಲಿದೆ. ಅಂದು ಮಧ್ಯಾಹ್ನ 3 ಗಂಟೆಗೆ ದೇವಾಲಯದ ಆವರಣದಲ್ಲಿ “ಗಣೇಶ” ವಿಷಯ ಕುರಿತು ಚಿತ್ರಕಲೆ ಸ್ಪರ್ಧೆ ನಡೆಯಲಿದ್ದು, 1 ರಿಂದ 8ನೇ ತರಗತಿ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಪ್ರಥಮ ಹಾಗೂ ದ್ವಿತೀಯ ವಿಜೇತರನ್ನು ಆಯ್ಕೆ ಮಾಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವವರು ಸೆ.17ರ ಒಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಗಣಪತಿ ಉತ್ಸವ ಸಮಿತಿ ತಿಳಿಸಿದೆ. ವಿಜೇತರ ಹೆಸರನ್ನು ಸೆ.23 ರಂದು ಘೋಷಿಸಲಾಗುವುದು. ಚಿತ್ರ ಬಿಡಿಸಲು ಬಣ್ಣದ ಪೆನ್ಸಿಲ್ ಮತ್ತು ಕ್ರಯೋನ್‍ಗಳನ್ನು ಮಾತ್ರ ಅನುಮತಿಸಲಾಗಿದೆ. ಚಿತ್ರಕಲೆಗೆ ಬಳಸುವ ಡ್ರಾಯಿಂಗ್ ಪೇಪರ್ ಅನ್ನು ಸಮಿತಿಯ ಕಡೆಯಿಂದ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ 9611496538, 8105160547 ಸಂಪರ್ಕಿಸಬಹುದಾಗಿದೆ.
ನಾಪೋಕ್ಲು ಸೆ.8 : ಭಾರತ ಮಾತೆಯ ಛದ್ಮವೇಷದಲ್ಲಿ ವಾಟೆಕಾಡು ಸ.ಹಿ.ಪ್ರಾ.ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಫಾತಿಮತ್ ರಿಸ್ಪಾ ಗಮನ ಸೆಳೆದಳು. ಮೂರ್ನಾಡು ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ (ಮೇರಾ ಮಿಟ್ಟಿ ಮೇರಾ ದೇಶ್ ) “ನನ್ನ ಮಣ್ಣು ನನ್ನ ದೇಶ” ಭಾರತ ಮಾತೆಯ ಛದ್ಮವೇಷ ಧರಿಸಿ ಎಲ್ಲರ ಪ್ರಸಂಶೆಗೆ ಪಾತ್ರಳಾದಳು. ಈಕೆ ಅಬ್ದುಲ್ ರಜಾಕ್, ರೆಹಾನತ್ ದಂಪತಿಗಳ ಪುತ್ರಿ. ವರದಿ : ದುಗ್ಗಳ ಸದಾನಂದ
ಮಡಿಕೇರಿ ಸೆ.8 : ಗೋಣಿಕೊಪ್ಪ ಕಾವೇರಿ ದಸರಾ ಸಮಿತಿ ಅಧ್ಯಕ್ಷರಾಗಿ ಕುಲ್ಲಚಂಡ ಪ್ರಮೋದ್ ಗಣಪತಿ ಆಯ್ಕೆಯಾಗಿದ್ದಾರೆ. ಗೋಣಿಕೊಪ್ಪ ಗ್ರಾ.ಪಂ ಅಧ್ಯಕ್ಷೆ ಸೌಮ್ಯ ಬಾಲು ಅಧ್ಯಕ್ಷತೆಯಲ್ಲಿ ನಡೆದ ದಸರಾ ಸಮಿತಿ ಸಭೆಯಲ್ಲಿ ಆಯ್ಕೆ ಮಾಡಲಾಯಿತು. ಶಾಸಕ ಎ.ಎಸ್.ಪೊನ್ನಣ್ಣ ಸಹಕಾರದೊಂದಿಗೆ ಅದ್ದೂರಿ ದಸರಾ ಉತ್ಸವಕ್ಕೆ ಸಭೆಯಲ್ಲಿ ನಿರ್ಧರಿಸಲಾಯಿತು.
ನಾಪೋಕ್ಲು ಸೆ.9 : ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಕೇವಲ ಶಿಕ್ಷಣ ನೀಡುವುದು ಮಾತ್ರವಲ್ಲ. ಅವರನ್ನು ಆದರ್ಶ ನಾಗರಿಕರನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ನಿವೃತ್ತ ಶಿಕ್ಷಕ ಎ.ಜಿ.ಗಣೇಶ್ ಹೇಳಿದರು. ಮೂರ್ನಾಡು ಪದವಿಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ಯಾಸಂಸ್ಥೆಯ ಅಧ್ಯಕ್ಷ ಬಾಚಿಟ್ಟಿರ ಮಾದಪ್ಪ ಮಾತನಾಡಿ, ಶಿಕ್ಷಕರ ಸ್ಥಾನ ಅತ್ಯಂತ ಪವಿತ್ರವಾದದ್ದು. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ ಎಂದರು. ಮುರ್ನಾಡು ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ವೇಣು ಅಪ್ಪಣ್ಣ, ಖಜಾಂಚಿ ಸುಬ್ರಮಣಿ, ಪ್ರಾಂಶುಪಾಲರಾದ ದೇವಕ್ಕಿ, ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಧಮಯಂತಿ ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು. ವರದಿ : ದುಗ್ಗಳ ಸದಾನಂದ.
ಮಡಿಕೇರಿ ಸೆ.8 : ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಸೆ.9 ರಂದು ಕೊಡಗು ಜಿಲ್ಲೆಯ ವಿವಿಧ ಹಂತದ ಎಲ್ಲಾ ನ್ಯಾಯಾಲಯಗಳಲ್ಲಿ ‘ರಾಷ್ಟ್ರೀಯ ಲೋಕ್ ಅದಾಲತ್’ ನಡೆಯಲಿದೆ. ಸಾರ್ವಜನಿಕರು ತಮ್ಮ ವ್ಯಾಜ್ಯ ಪೂರ್ವ ಮತ್ತು ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳಿಗೆ ತಕ್ಷಣ ಪರಿಹಾರ ಪಡೆದುಕೊಳ್ಳಲು ರಾಷ್ಟ್ರೀಯ ಲೋಕ ಅದಾಲತ್ ಸುವರ್ಣ ಅವಕಾಶವಾಗಿದೆ. ಲೋಕ ಅದಾಲತ್‍ನಲ್ಲಿ ರಾಜಿಯಾಗಬಲ್ಲ ಅಪರಾಧಿತ ಪ್ರಕರಣಗಳು, ಬ್ಯಾಂಕ್ ವಸೂಲಾತಿ ಪ್ರಕರಣಗಳು, ಉದ್ಯೋಗದಲ್ಲಿ ಪುನರ್ ಸ್ಥಾಪಿಸಲ್ಪಡುವ ಪ್ರಕರಣಗಳು, ಕೈಗಾರಿಕಾ ಕಾರ್ಮಿಕರ ವೇತನಕ್ಕೆ ಸಂಬಂಧಿಸಿದ ಕ್ಲೇಮುಗಳು, ಜಿಲ್ಲಾ ಗ್ರಾಹಕರ ವೇದಿಕೆಯಲ್ಲಿನ ಪ್ರಕರಣಗಳು, ಕರ್ನಾಟಕ ರಿಯಲ್ ಎಸ್ಟೇಟ್ ಪ್ರಾಧಿಕಾರಕ್ಕೆ ಸಂಬಂಧಪಟ್ಟ ಪ್ರಕರಣಗಳು, ಸಾಲ ವಸೂಲಾತಿ ನ್ಯಾಯಾಧೀಕರಣದ ಪ್ರಕರಣಗಳು, ಖಾಯಂ ಜನತಾ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳು, ಚೆಕ್ಕು ಅಮಾನ್ಯದ ಪ್ರಕರಣಗಳು, ಮೋಟಾರು ಅಪಘಾತ ಪರಿಹಾರ ನ್ಯಾಯಾಧೀಕರಣದ ಪ್ರಕರಣಗಳು, ಕಾರ್ಮಿಕ ವಿವಾದಗಳು, ವಿದ್ಯುತ್ ಹಾಗೂ ನೀರಿನ ಶುಲ್ಕಗಳು, ಭೂಸ್ವಾಧೀನ ಪ್ರಕರಣಗಳು, ವೇತನ ಮತ್ತು ಭತ್ಯೆಗಳಿಗೆ ಸಂಬಂಧಿಸಿದ ಸೇವಾ ಪ್ರಕರಣಗಳು…






