ಸಿದ್ದಾಪುರ ಆ.19 : ಸಿದ್ದಾಪುರ ಗುಯ್ಯ ಅಗಸ್ತೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಂ.ಎಸ್. ವೆಂಕಟೇಶ್ 6ನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾದರೆ, ಉಪಾಧ್ಯಕ್ಷರಾಗಿ ಎಂ.ಬಿಜೋಯ್ 3ನೇ ಬಾರಿಗೆ ಆಯ್ಕೆಯಾಗಿದ್ದಾರೆ. ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ನಿರ್ದೇಶಕರುಗಳಾಗಿ ಕೆ.ಕೆ ಚಂದ್ರಕುಮಾರ್, ಪಿ.ಕೆ .ಚಂದ್ರನ್, ಶಿಬು ಚಾಕೋ,ಕೆ.ಎಸ್ ಸುನೀಲ್, ದೇವಯಾನಿ,ಪ್ರಮೀಳಾ, ಎಸ್.ಬಿ ಪ್ರತೀಶ್,ಬಶೀರ್ ವಿ.ಕೆ, ಕೆ.ಸಿ ಮಿಲನ್, ಚೆಲುವಯ್ಯ ಹೆಚ್.ಕೆ, ಸಿ.ವಾಸು ಅಯ್ಕೆಯಾಗಿದ್ದಾರೆ. ಈ ಸಂದರ್ಭ ಚುನಾವಣಾ ಅಧಿಕಾರಿ ಸಂದೀಪ್, ಕಾರ್ಯನಿರ್ವಣಾಧಿಕಾರಿ ಪ್ರಸನ್ನ ಹಾಜರಿದ್ದರು. ಇತ್ತೀಚಿಗೆ ಆಡಳಿತ ಮಂಡಳಿ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಎಂ.ಎಸ್.ವೆಂಕಟೇಶ್ ಪಡೆದ ಮತಗಳು (619), ಕೆ.ಕೆ.ಚಂದ್ರಕುಮಾರ್ ಪಡೆದ ಮತಗಳು (504)ಗೆಲುವು, ಬಿಜೋಯ್ ಎಂ ಪಡೆದ ಮತಗಳು (499)ಗೆಲುವು, ಪಿ.ಕೆ .ಚಂದ್ರನ್ ಪಡೆದ ಮತಗಳು (486)ಗೆಲುವು, ಕುಕ್ಕೂನೂರು ಸುನೀಲ್ ಪಡೆದ ಮತಗಳು (478)ಗೆಲುವು, ಶಿಬು ಚಾಕೋ ಪಡೆದ ಮತಗಳು(457)ಗೆಲುವು, ರಂಜನ್ ಪಿ ಕುಕ್ಕೂನೂರು(300)ಸೋಲು, ಟಿ.ಹೆಚ್.ಮಂಜುನಾಥ (277)ಸೋಲು, ಮಹಿಳಾ ಕ್ಷೇತ್ರದಲ್ಲಿ ದೇವಯಾನಿ(506) ಗೆಲುವು,…
ಲೇಖಕ: admin
ಮಡಿಕೇರಿ ಆ.19 : ಮಣಿಪುರದ ಜನಾಂಗೀಯ ಗಲಭೆಗಳು ತಾರಕಕ್ಕೆ ಏರಲು ಈ ಹಿಂದೆ ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರ್ಕಾರದ ದಿವ್ಯ ನಿರ್ಲಕ್ಷ್ಯವೇ ಪ್ರಮುಖ ಕಾರಣ ಎಂದು ಯುವ ಬ್ರಿಗೇಡ್ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಯ ವ್ಯಕ್ತಪಡಿಸಿದರು. ಕುಶಾಲನಗರದ ಗಾಯತ್ರಿ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಪ್ರಜ್ಞ ಕಾವೇರಿ ಆಶ್ರಯದಲ್ಲಿ ನಡೆದ ‘ಉರಿಯುತ್ತಿದೆ ಮಣಿಪುರ ಏನಿದಕ್ಕೆ ಪರಿಹಾರ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಜಾತಿ ಹೆಸರನ್ನು ಬಳಸಿ ದೇಶ ವಿಭಜನೆ ಆಗುವ ರೀತಿಯ ಜಾತಿವಾರು ವರದಿ ಹೊರ ಬಿದ್ದ ಬೆನ್ನಲ್ಲೇ ಮಣಿಪುರದಲ್ಲಿ ಆತಂಕಕಾರಿ ಬೆಳವಣಿಗೆ ಕಂಡು ಬಂದಿದೆ. ಪ್ರಯೋಗ ಶಾಲೆಯನ್ನಾಗಿ ಮಣಿಪುರವನ್ನು ಬಳಸುವ ಪಯತ್ನ ಕೆಲವರಿಂದ ನಡೆದಿದ್ದು, ಇದೇ ರೀತಿ ಮುಂದಿವರೆದಲ್ಲಿ ದೇಶ ವಿವಿಧೆಡೆ ಅಂತಹ ಘಟನೆಗಳು ಮರುಕಳಿಸುವ ಆತಂಕ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ಮಣಿಪುರದಲ್ಲಿ ಮತ್ತೆ ಗಲಭೆ ಸಂಭವಿಸದಂತೆ ಕಾರ್ಯಯೋಜನೆ ರೂಪಿಸುತ್ತಿದೆ. ಆದರೆ, ಮಣಿಪುರದ ಗಡಿಭಾಗದ ದೇಶಗಳ ಜೊತೆ ಕೇಂದ್ರ ಸರ್ಕಾರ ಚರ್ಚಿಸಿ ನುಸುಳುಕೋರರು ಗಡಿಭಾಗದಿಂದ ನುಗ್ಗಿ ಗಲಭೆ ನಡೆಸದಂತೆ ಎಚ್ಚರಿಕೆಯ ಕ್ರಮ ಕೈಗೊಳ್ಳಬೇಕಾಗಿದೆ ಎಂದರು.…
ನಾಪೋಕ್ಲು ಆ.19 : ಮೇಯಲು ಬಿಟ್ಟ ಹಸುವೊಂದು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿರುವ ಘಟನೆ ಕಿರುಂದಾಡು ಗ್ರಾಮದಲ್ಲಿ ನಡೆದಿದೆ. ಗ್ರಾಮದ ದೇವಜನ ಪಳಂಗಪ್ಪ ತಮ್ಮ ಹಸುವನ್ನು ಗದ್ದೆಯಲ್ಲಿ ಮೇಯಲು ಬಿಟ್ಟಿದ್ದರು. ಈ ಸಂದರ್ಭ ಗದ್ದೆಯಲ್ಲಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಹಸು ಮೃತಪಟ್ಟಿದೆ ಎನ್ನಲಾಗಿದೆ. ಕಳೆದ ಒಂದೂವರೆ ತಿಂಗಳಿನಿಂದ ವಿದ್ಯುತ್ ತಂತಿಯ ಮೇಲೆ ಮರ ಬಿದ್ದು ತಂತಿ ನೆಲವನ್ನು ಸ್ಪರ್ಶಿಸಿದೆ. ಈ ಬಗ್ಗೆ ವಿದ್ಯುತ್ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಇಲಾಖೆಯ ಸಿಬ್ಬಂದಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿರುವ ಪಳಂಗಪ್ಪ, ಹಾಲು ಕರೆಯುವ ಹಸು ಮರಣ ಹೊಂದಿದ್ದು, ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ. ವರದಿ : ದುಗ್ಗಳ ಸದಾನಂದ
ನಾಪೋಕ್ಲು ಆ.20 : ನಾಪೋಕ್ಲು ಗ್ರಾ.ಪಂ ಎರಡನೇ ಅವಧಿಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಆರ್.ವನಜಾಕ್ಷಿ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಕೆ.ಎ.ಹೇಮಾವತಿ ಆಯ್ಕೆಯಾಗಿದ್ದಾರೆ. ಪಂಚಾಯಿತಿ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ವನಜಾಕ್ಷಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಅಮೀನ ವಿರುದ್ದ 15-8 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಹೇಮಾವತಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ನೀಲಮ್ಮ ವಿರುದ್ದ 14-8 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಪಂಚಾಯತಿಯಲ್ಲಿ ಒಟ್ಟು 23 ಸದಸ್ಯರಿದ್ದು, ಒಬ್ಬರು ಗೈರು ಹಾಜರಾಗಿದ್ದರು. 22 ಮಂದಿ ಮತದಾನದಲ್ಲಿ ಪಾಲ್ಗೊಂಡಿದ್ದರು. ಚುನಾವಣಾ ಅಧಿಕಾರಿಯಾಗಿ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಸೀತಾ ಲಕ್ಷ್ಮಿ ಕಾರ್ಯನಿರ್ವಹಿಸಿದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಚೋಂದಕ್ಕಿ ಇದ್ದರು. ಈ ಸಂದರ್ಭ ಕಾಂಗ್ರೆಸ್ ವಲಯ ಅಧ್ಯಕ್ಷ ಕೆ.ಎ.ಇಸ್ಮಾಯಿಲ್, ಬೂತ್ ಅಧ್ಯಕ್ಷ ಮಾಚೇಟಿರ ಕುಶು ಕುಶಾಲಪ್ಪ, ಗ್ರಾ.ಪಂ ನಿಕಟಪೂರ್ವ ಅಧ್ಯಕ್ಷೆ ಹೆಚ್.ಎಸ್.ಪಾರ್ವತಿ, ಉಪಾಧ್ಯಕ್ಷ ಮಹಮ್ಮದ್ ಕೆ.ಎ.ಪಂಚಾಯಿತಿ, ಸದಸ್ಯರು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಜರಿದ್ದರು. ಬಸ್ ನಿಲ್ದಾಣದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ…
ನಾಪೋಕ್ಲು ಆ.19 : ಬೈನೆ ಮರದ ಕಾಯಿಗಳನ್ನು ಕೀಳಲು ಬಂದ ಕೇರಳದ ಅಪರಿಚಿತ ನಾಲ್ವರನ್ನು ದೊಡ್ಡಪುಲಿಕೋಟು ಗ್ರಾಮಸ್ಥರು ವಿಚಾರಣೆ ಒಳಪಡಿಸಿ, ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ಬಲ್ಲಮಾವಟ್ಟಿ ಗ್ರಾಮ ಪಂಚಾಯತಿಯ ಪುಲಿಕೋಟು ವ್ಯಾಪ್ತಿಯಲ್ಲಿ ಬೈನೆ ಮರದ ಬೀಜ ಸಂಗ್ರಹಿಸಲು ಅಯ್ಯಂಗೇರಿ ಗ್ರಾಮದ ನಿವಾಸಿ ಕುಂಞಬ್ದುಲ್ಲ ಹಾಗೂ ಕೊಡ್ಲಿಪೇಟೆಯ ದಾವೂದ್ ಅವರ ಜೊತೆ ಕೇರಳದ ವಯನಾಡು ಮತ್ತು ಮಾನಂದವಾಡಿ ಕಾರ್ಮಿಕರು ಬಂದು ಸ್ಥಳೀಯ ರೈತರನ್ನು ಸಂಪರ್ಕಿಸಿದ ಸಂದರ್ಭ ಪುಲಿಕೋಟು ಗ್ರಾಮದ ನಿವಾಸಿ ಕಾಫಿ ಬೆಳೆಗಾರ ಕರವಂಡ ಲವ ನಾಣಯ್ಯ ಮತ್ತು ಇತರರು ಈ ಬಗ್ಗೆ ಪ್ರಶ್ನಿಸಿದ್ದಾರೆ. ಕೊಡಗಿನ ವಿವಿಧ ಭಾಗಗಳಿಂದ ಬೈನೆ ಮರದ ಕಾಯಿಗಳನ್ನು ರೈತರಿಂದ ಸಂಗ್ರಹಿಸಿ ಕೇರಳಕ್ಕೆ ತೆಗೆದುಕೊಂಡು ಹೋಗಿ ಒಣಗಿಸಿ ಬಳಿಕ ವಿವಿಧ ಉತ್ಪನ್ನಗಳೊಂದಿಗೆ ಮಾರಾಟ ಮಾಡಲಿರುವುದಾಗಿ ವ್ಯಾಪಾರಿಗಳು ಮಾಹಿತಿ ನೀಡಿದ್ದಾರೆ ಎಂದು ಎಂದು ನಾಣಯ್ಯ ತಿಳಿಸಿದ್ದಾರೆ. ಈ ಬಗ್ಗೆ ಭಾಗಮಂಡಲ ಪೊಲೀಸರಿಗೆ ಮಾಹಿತಿ ನೀಡಿದ್ದು, ತನಿಖೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆಯನ್ನು ಪೊಲೀಸರು ನೀಡಿದ್ದಾರೆ. ಈ ಸಂದರ್ಭ ಬಲ್ಲಮಾವಟ್ಟಿ…
ಮಡಿಕೇರಿ ಆ.19 : ಬ್ರಹ್ಮಕುಮಾರಿ ಮಡಿಕೇರಿ ಶಾಖೆಯಿಂದ ಆ.20 ರಿಂದ ಒಂದು ವಾರದ ರಾಜಯೋಗ ಧ್ಯಾನದ ತರಬೇತಿ ನಡೆಯಲಿದೆ. ಬ್ರಹ್ಮಕುಮಾರೀಸ್ ಲೈಟ್ಔಟ್ ಸಭಾಂಗಣದಲ್ಲಿ ಸಂಜೆ 6 ಗಂಟೆಯಿಂದ 7 ಗಂಟೆವರೆಗೆ ತರಬೇತಿ ನಡೆಯಲಿದೆ. ಮನಸ್ಸಿನ ನೆಮ್ಮದಿಗಾಗಿ ಜೀವನದ ಸುಖ ಶಾಂತಿ ಗಾಗಿ ರಾಜಯೋಗದ ಅಭ್ಯಾಸ ಬಹಳ ಸಹಾಯಕ. ಆದ್ದರಿಂದ ಆಸಕ್ತಿ ಇರುವವರು 9449239750 ಸಂಪರ್ಕಿಸಬಹುದಾಗಿದೆ.
ಸೋಮವಾರಪೇಟೆ ಆ.19 : ಸಾರ್ವಜನಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ದೈಹಿಕ ಶಿಕ್ಷಣ ವಿಭಾಗದ ಆಶ್ರಯದಲ್ಲಿ ಗೌಡಳ್ಳಿ ಬಿಜಿಎಸ್ ಪಬ್ಲಿಕ್ ಶಾಲಾ ಮೈದಾನದಲ್ಲಿ ನಡೆದ ಪ್ರೌಢಶಾಲಾ ವಿಭಾಗದ ಸೋಮವಾರಪೇಟೆ ಎ ವಲಯ ಮಟ್ಟದ ಕ್ರೀಡಾಕೂಟದ ಬಾಲಕಿಯರ ವಿಭಾಗದ ಕಬಡ್ಡಿ ಪಂದ್ಯಾವಳಿಯಲ್ಲಿ ಬಿಜಿಎಸ್ ಗೌಡಳ್ಳಿ ಪ್ರಥಮ ಮತ್ತು ಸೋಮವಾರಪೇಟೆ ಎಸ್‍ಜೆಎಂ ದ್ವಿತೀಯ ಸ್ಥಾನ ಪಡೆದಿದೆ. ವಾಲಿಬಾಲ್‍ನಲ್ಲಿ ವಿಶ್ವ ಮಾನವ ಕುವೆಂಪು ವಿದ್ಯಾಸಂಸ್ಥೆ(ಪ್ರ) ಸೋಮವಾರಪೇಟೆ ಸರ್ಕಾರಿ ಪ್ರೌಢಶಾಲೆ(ದ್ವಿ) ಸ್ಥಾನ ಪಡೆಯಿತು. ಥ್ರೋಬಾಲ್‍ನಲ್ಲಿ ಎಸ್‍ಜೆಎಂ ಸೋಮವಾರಪೇಟೆ(ಪ್ರ), ನೇರುಗಳಲೆ ಸರ್ಕಾರಿ ಪ್ರೌಢಶಾಲೆ(ದ್ವಿ), ಖೋಖೋ ನಲ್ಲಿ ಸೋಮವಾರಪೇಟೆ ಎಸ್‍ಜೆಎಂ (ಪ್ರ), ಸೋಮವಾರಪೇಟೆ ಸರ್ಕಾರಿ ಪ್ರೌಢಶಾಲೆ (ದ್ವಿ),. ಹಾಕಿಯಲ್ಲಿ ಸೋಮವಾರಪೇಟೆ ಎಸ್‍ಜೆಎಂ(ಪ್ರ), ಬಾಲ್ ಬ್ಯಾಡ್ಮಿಂಟನ್ ನಲ್ಲಿ ನೇರುಗಳಲೆ ಸರ್ಕಾರಿ ಪ್ರೌಢಶಾಲೆ(ಪ್ರ), ಹ್ಯಾಂಡ್ ಬಾಲ್‍ನಲ್ಲಿ ಗೌಡಳ್ಳಿ ಬಿಜಿಎಸ್(ಪ್ರ), ಟೇಬಲ್ ಟೆನ್ನಿಸ್‍ನಲ್ಲಿ ವಿಶ್ವ ಮಾನವ ಕುವೆಂಪು ವಿದ್ಯಾಸಂಸ್ಥೆ (ಪ್ರ), ಫುಟ್‍ಬಾಲ್‍ನಲ್ಲಿ ಗೌಡಳ್ಳಿಯ ಬಿಜಿಎಸ್ (ಪ್ರ) ಸ್ಥಾನ ಪಡೆಯಿತು. ಬಾಲಕರ ವಿಭಾಗದ ಕಬಡ್ಡಿಯಲ್ಲಿ ಸೋಮವಾರಪೇಟೆ ಎಸ್‍ಜೆಎಂ(ಪ್ರ), ವಿಶ್ವ ಮಾನವ ಕುವೆಂಪು…
ಸೋಮವಾರಪೇಟೆ ಆ.18 : ಮಡಿಕೇರಿ ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶುಕೃತ ಇಂದೂಧರ್ ಮಿಸ್ಸಸ್ ಇಂಡಿಯಾ ಕರ್ನಾಟಕ 2023 ಕ್ವೀನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಅಲ್ಲದೆ ಮಿಸ್ಸೆಸ್ ಕೊಡಗು, ಮಿಸ್ಸೆಸ್ ಇಂಡಿಯಾ ಕರ್ನಾಟಕ ರೀಮಾರ್ಕ್‍ಯಬಲ್ ಕ್ವೀನ್ ಪಟ್ಟವನ್ನು ತನ್ನದಾಗಿಸಿಕೊಂಡಿದ್ದಾರೆ. ಬೆಂಗಳೂರಿನ ಕೋಣನಕುಂಟೆ ಶ್ರೀಹರಿ ಖೋಡೆ ಆಡಿಟೋರಿಯಮ್ ನಲ್ಲಿ ನಡೆದ ಪ್ರತಿಭಾಸೌಶಿಮಠ್ ಆಹ್ವಾನಿತ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಪಡೆದರು. ಸ್ಪರ್ಧೆಯಲ್ಲಿ 35 ಮಂದಿ ಭಾಗವಹಿಸಿದ್ದರು. ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ 1993 ಮಿಸ್‍ಇಂಡಿಯಾ ರೇಖಾ ಹಂಡೆ, 2018 ಮಿಸ್ ಇಂಡಿಯಾ ಉಜಾಲ ಸಾಬರವಲ್, ಕಲಾವಿಧರಾದ ಸಿಲ್ಲಿಲಲ್ಲಿ ಖ್ಯಾತಿಯ ಸುನೇತ್ರ ಪಂಡಿತ್, ಪೋಷಕ ನಟ ಮೂಗು ಸುರೇಶ್, ಆಯೋಜಕರಾದ ಪ್ರತಿಭಾ ಸೌಶಿಮಠ್ ಇದ್ದರು. ಸೋಮವಾರಪೇಟೆ ತಾಲ್ಲೂಕಿನ ಗೌಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಇಂದೂಧರ್ ಅವರ ಪತ್ನಿಯಾಗಿದ್ದು, ಕುಶಾಲನಗರದಲ್ಲಿ ವಾಸವಾಗಿದ್ದಾರೆ.
ಸೋಮವಾರಪೇಟೆ ಆ.18 : ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ಎರಡನೇ ಅವಧಿಗೆ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಕೆ.ಜೆ.ತಮ್ಮಯ್ಯ ಹಾಗೂ ಉಪಾಧ್ಯಕ್ಷರಾಗಿ ಬಿಜೆಪಿಯ ವಿಮಲಾಕ್ಷಿ ಆಯ್ಕೆಯಾದರು. ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರಾಗಿ ಸ್ಪರ್ಧಿಸಿದ್ದ ಜೋಯಪ್ಪ 3 ಮತಗಳನ್ನು ಪಡೆದರೆ, ಕಾಂಗ್ರೆಸ್ ಬೆಂಬಲಿತ ತಮ್ಮಯ್ಯ 4 ಮತಗಳನ್ನು ಪಡೆದು ಜಯಗಳಿಸಿದರು. ಉಪಾಧ್ಯಕ್ಷರಿಗೆ ಒಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಬಿಸಿಎಂ ಇಲಾಖೆಯ ಸ್ವಾಮಿ ಕಾರ್ಯನಿರ್ವಹಿಸಿದರು. ಈ ಸಂದರ್ಭ ಗ್ರಾ.ಪಂ ಸದಸ್ಯರಾದ ಡಿ.ಇ.ರಮ್ಯ, ಡಿ.ಬಿ. ಶಿವಮ್ಮ, ಡಿ.ಆರ್. ಬಸವಕುಮಾರ್, ಕೆ.ಕೆ. ಸಾಕಮ್ಮ ಇದ್ದರು. ಕಾಂಗ್ರೆಸ್ ಪ್ರಮುಖರಾದ ಕೆ.ಎಂ.ಲೋಕೇಶ್, ಕೆ.ಎಸ್.ಹರೀಶ್ ಮತ್ತಿತರರು ಇದ್ದರು.
ಮಡಿಕೇರಿ ಆ.18 : ಮಡಿಕೇರಿಯ ಸರಕಾರಿ ಪದವಿ ಪೂರ್ವ ಕಾಲೇಜಿನ 8, 9 ಮತ್ತು 10 ನೇ ತರಗತಿ ವಿದ್ಯಾರ್ಥಿಗಳಿಗೆ ಬಿಸಿಯೂಟದ ಜೊತೆಗೆ ಪೌಷ್ಟಿಕ ಆಹಾರವಾದ ಮೊಟ್ಟೆ ವಿತರಿಸಲಾಯಿತು. ಕಾರ್ಯಕ್ರಮಕ್ಕೆ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಚಾಲನೆ ನೀಡಿದರು. ಈ ಸಂದರ್ಭ ಕಾಲೇಜಿನ ಆಡಳಿತ ಮಂಡಳಿ ಹಾಜರಿದ್ದರು.






