ಮಡಿಕೇರಿ ಆ.20 : ಜನಪರವಾಗಿ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಸೇರಿದಂತೆ ಸರ್ಕಾರದ ಎಲ್ಲಾ ಕಾರ್ಯಕ್ರಮಗಳನ್ನು ಗ್ರಾಮ ಗ್ರಾಮಗಳಿಗೆ ತಲುಪಿಸುವ ಮೂಲಕ ಕಾರ್ಯಕರ್ತರು ಜನರ ಭಾವನೆಗಳಿಗೆ ಸ್ಪಂದಿಸಬೇಕೆಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಕರೆ ನೀಡಿದ್ದಾರೆ. ಸುಂಟಿಕೊಪ್ಪದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಹಾಗೂ ಕೃತಜ್ಞತೆ ಸಮರ್ಪಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪಕ್ಷದ ಗೆಲುವಿಗಾಗಿ ಶ್ರಮಿಸಿದಂತೆ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲೂ ಕಾರ್ಯಪ್ರವೃತ್ತರಾಗಬೇಕು ಎಂದರು. ಗೃಹಜ್ಯೋತಿ, ಗೃಹಲಕ್ಷ್ಮಿ, ಯುವನಿಧಿ, ಅನ್ನಭಾಗ್ಯ ಸೇರಿದಂತೆ ಸರ್ಕಾರದ ಎಲ್ಲಾ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸಲು ಪಂಚಾಯಿತಿ ಹಾಗೂ ಆಯಾ ಇಲಾಖೆಗಳ ಮೂಲಕ ಸಹಕರಿಸಬೇಕು ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳಡಿ ಪ್ರತಿಯೊಬ್ಬ ಕಾರ್ಯಕರ್ತನು ಜನಪರವಾಗಿ ತೊಡಗಿಸಿಕೊಳ್ಳಬೇಕು. ಗ್ರಾಮೀಣ ಭಾಗದ ಜನರಿಗೆ ಸರ್ಕಾರದ ಸೌಲಭ್ಯ ತಲುಪುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಜಿ.ಪಂ ಮಾಜಿ ಸದಸ್ಯ ಪಿ.ಎಂ.ಲತೀಫ್ ಮಾತನಾಡಿ ಸ್ಥಳೀಯ…
ಲೇಖಕ: admin
ಮಡಿಕೇರಿ ಅ 20 : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ದಿ. ಬಿ.ಎಸ್ ಗೋಪಾಲಕೃಷ್ಣ ಅವರ ಹೆಸರಿನಲ್ಲಿ ಸ್ಥಾಪಿತವಾಗಿರುವ ದತ್ತಿ ಕಾರ್ಯಕ್ರಮದಂತೆ ಕೊಡಗು ಜಿಲ್ಲಾ ಮಟ್ಟದ ಮುಕ್ತ ಕಥಾ ಸ್ಪರ್ಧೆಯನ್ನು ಏರ್ಪಡಿಸಿದೆ. ಜಿಲ್ಲೆಯ ಹಿರಿಯ ಸಾಹಿತಿಗಳು ಪತ್ರಕರ್ತರು ಶಕ್ತಿ ದಿನ ಪತ್ರಿಕೆಯ ಸಂಸ್ಥಾಪಕರು ಆಗಿದ್ದ ಬಿ.ಎಸ್ ಗೋಪಾಲಕೃಷ್ಣ ಅವರ ನೆನಪಿನಲ್ಲಿ ಅವರ ಪುತ್ರ ಬಿ.ಜಿ ಅನಂತಶಯನ ಈ ದತ್ತಿ ಸ್ಥಾಪಿಸಿದ್ದು, ಕೊಡಗು ಜಿಲ್ಲೆಯ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಈ ಕಥಾಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ ಕಥೆಯನ್ನು ಎ4 ಅಳತೆಯ ಹಾಳೆಯಲ್ಲಿ 2 ಪುಟ ಮೀರದಂತೆ ರಚಿಸತಕ್ಕದ್ದು. ಕಥೆ ಬರೆದು ಸಲ್ಲಿಸಲು ದಿನಾಂಕ.28.08.2023 ಕೊನೆಯ ದಿನವಾಗಿದ್ದು, ಕಳುಹಿಸಬೇಕಾದ ವಿಳಾಸ : *ಅಧ್ಯಕ್ಷರು,* *ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು*, *ಎಸ್.ಜಿ.ಆರ್.ವೈ ಕಟ್ಟಡ,* *ಅಂಬೇಡ್ಕರ್ ಭವನದ ಬಳಿ,* *ಸುದರ್ಶನ ವೃತ್ತ,* *ಮಡಿಕೇರಿ.* ಸಂಪರ್ಕಿಸಲು ದೂರವಾಣಿ ಸಂಖ್ಯೆ: ಎಂ.ಪಿ.ಕೇಶವ ಕಾಮತ್, ಅಧ್ಯಕ್ಷರು. 94483 46276 ಎಸ್.ಐ. ಮುನೀರ್ ಅಹಮದ್, ಗೌರವ ಕಾರ್ಯದರ್ಶಿ. 98861…
ಮಡಿಕೇರಿ ಆ.20 : ಮಾನಸಿಕ ಒತ್ತಡ ಕಡಮೆಮಾಡಿ ಕ್ರಿಯಾಶೀಲತೆಯನ್ನು ಹೆಚ್ಚಿಸುವ ಶಕ್ತಿ ಸಂಗೀತಕ್ಕಿದ್ದು, ಭಾವನಾತ್ಮಕವಾಗಿ ಒಗ್ಗೂಡಿಸುವ ಅದ್ಪುತ ಕಲೆಯಾಗಿಯೂ ಸಂಗೀತವಾಗಿದೆ ಎಂದು ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ. ಹೇಳಿದ್ದಾರೆ. ನಗರದ ಬ್ರಾಹ್ಮಣ ವಿದ್ಯಾಭಿವೖದ್ದಿ ನಿಧಿಯ ಶತಮಾನೋತ್ಸವ ಸಭಾಂಗಣದಲ್ಲಿ ಮುಳಿಯ ಜ್ಯುವೆಲ್ಲರ್ಸ್ ಸಂಸ್ಥೆಯ ವತಿಯಿಂದ ಆಯೋಜಿತ ಗಾನರಥ ಸಂಗೀತ ಸ್ಪಧೆ೯ಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಅನಿಲ್, ಮನಸ್ಸನ್ನು ಉಲ್ಲಾಸಗೊಳಿಸುವ , ಜಗತ್ತನ್ನು ಲವಲವಿಕೆಯಿಂದ ಇರಿಸುವ ಅಪೂವ೯ ಶಕ್ತಿ ಸಂಗೀತಕ್ಕಿದೆ. ಅನೇಕ ಕಾಯಿಲೆಗಳ ನಿವಾರಣೆಗೂ ಸಂಗೀತ ಮದ್ದಾಗಿದೆ. ಮ್ಯೂಸಿಕ್ ತೆರಪಿ ಜಗತ್ತಿನಾದ್ಯಂತ ಆರೋಗ್ಯ ಕ್ಷೇತ್ರದಲ್ಲಿ ಜನಪ್ರಿಯವಾಗುತ್ತಿದೆ. ಮನರಂಜನೆಯ ಪ್ರಮುಖ ಅಂಶವಾಗಿರುವ ಸಂಗೀತ ಕಲೆ, ನಮ್ಮ ಸಂಸ್ಕೖತಿಯ ಪ್ರತಿಬಿಂಬವಾಗಿ ಕೂಡ ಗುರುತಿಸಲ್ಪಟ್ಟಿದೆ ಎಂದು ಸಂಗೀತ ಕ್ಷೇತ್ರದ ಹಿರಿಮೆಯನ್ನು ವಣಿ೯ಸಿದರು. ಮುಳಿಯ ಸಂಸ್ಥೆಯ ವಹಿವಾಟು ಚಿನ್ನಾಭರಣಗಳ ಮಾರಾಟವಾಗಿದ್ದರೂ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳ ಸಾಂಸ್ಕೖತಿಕ ರಾಯಭಾರಿಗಳಂತೆ ಗಾನರಥ ಕಾಯ೯ಕ್ರಮದ ಮೂಲಕ ದಕ್ಷಿಣಕನ್ನಡ, ಕೊಡಗು ಜಿಲ್ಲೆಗಳ ಅನೇಕ ಯುವ ಕಲಾವಿದರನ್ನು ಬೆಳಕಿಗೆ ತರುವ…
ಮಡಿಕೇರಿ ಆ.20 : ಮಡಿಕೇರಿ ರೋಟರಿ ವುಡ್ಸ್ ಮತ್ತು ಭಾರತೀಯ ರೆಡ್ ಕ್ರಾಸ್ ನ ಕೊಡಗು ಘಟಕದ ಸಹಯೋಗದಲ್ಲಿ ನಗರದ ರೆಡ್ ಕ್ರಾಸ್ ಭವನದಲ್ಲಿ ಆಟೋ ಚಾಲಕರು ಹಾಗು ಮಾಲೀಕರಾಗಿ, ಆರೋಗ್ಯ ಶಿಬಿರ ಜರುಗಿತು. ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ನಾಗರಾಜ್ ಆಚಾರ್ ಉದ್ಘಾಟಿಸಿ, ಮಾತನಾಡಿ , ದಿನದಲ್ಲಿ ಹತ್ತರಿಂದ ಹನ್ನೆರಡು ಗಂಟೆ ದುಡಿಯುವ ಆಟೋ ಚಾಲಕರು ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಬೇಕು. ದೈಹಿಕ ಚಟುವಟಿಕೆಗಳೂ ಈ ಸಂಧರ್ಭದಲ್ಲಿ ಅನಿವಾರ್ಯ. ಕನಿಷ್ಠ ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಂಡರೆ ಸೂಕ್ತ ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ರೋಟರಿ ವಲಯ 6 ರ ಸಹಾಯಕ ಗವರ್ನರ್ ದೇವಣಿರ ತಿಲಕ್ ಪೊನ್ನಪ್ಪ , ರೋಗಪೀಡಿತರು ಮಾತ್ರ ತಪಾಸಣೆಗೆ ಒಳಗಾಗುವುದು ಎಂಬುದು ತಪ್ಪು ಅಭಿಪ್ರಾಯ. ಆಗಾಗ ಆರೋಗ್ಯ ತಪಾಸಣೆಗೆ ಒಳಗಾಗುವುದರಿಂದ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು ಎಂದರು. ಜಿಲ್ಲಾ ರೆಡ್ ಕ್ರಾಸ್ ಸಭಾಪತಿ ಬಿ.ಕೆ. ರವೀಂದ್ರ ರೈ ಮಾತನಾಡಿ ಈ ರೀತಿಯ…
ಮಡಿಕೇರಿ ಆ.19 : ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಇಂದು ನಗರ ಸಂಚಾರ ಮಾಡಿದರು. ನಗರದ ತ್ಯಾಗರಾಜ ಕಾಲೋನಿಗೆ ಭೇಟಿ ನೀಡಿದ್ದ ಅವರು ಅಲ್ಲಿನ ನಿವಾಸಿಗಳ ಸಮಸ್ಯೆಗಳನ್ನು ಆಲಿಸಿದರು. ಮಳೆಯಿಂದ ಹಾನಿಯಾದ ರಸ್ತೆ, ಚರಂಡಿ, ಮೋರಿ ವೀಕ್ಷಿಸಿದ ಅವರು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಹಾನಿಯಾಗಿರುವ ರಸ್ತೆಯ ಸುರಕ್ಷತೆಗೆ ತಡೆಗೋಡೆ ನಿರ್ಮಿಸಲು ತಿಳಿಸಿದರು. ಸ್ಥಳೀಯ ನಿವಾಸಿಗಳೊಂದಿಗೆ ಕುಂದುಕೊರತೆಗಳ ಕುರಿತು ಚರ್ಚಿಸಿದ ಶಾಸಕರು, ಶೀಘ್ರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರು. ಈ ಸಂದರ್ಭ ಪೌರಾಯುಕ್ತ ವಿಜಯ, ಸಹಾಯಕ ಅಭಿಯಂತರ ರಂಗರಾಮ್, ಪರಿಸರ ಅಭಿಯಂತರ ಸೌಮ್ಯ, ಕೊಡಗು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮ್ಮದ್, ನಗರಾಧ್ಯಕ್ಷ ಬಿ.ವೈ.ರಾಜೇಶ್, ಬೂತ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಂ.ಯಾಕುಬ್, ನಗರಸಭಾ ಸದಸ್ಯರಾದ ಮೇರಿ ವೇಗಸ್, ಮಹಿಳಾ ಕಾಂಗ್ರೆಸ್ ನಗರಾಧ್ಯಕ್ಷೆ ಫ್ಯಾನ್ಸಿ ಪಾರ್ವತಿ ಬೆಳ್ಯಪ್ಪ, ರೆಹಮಾನ್ ಖಾನ್, ನಗರ ಕಾಂಗ್ರೆಸ್, ಬೂತ್ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹಾಜರಿದ್ದರು.
ಮಡಿಕೇರಿ ಆ.19 : ಭಾಷೆ ಬೆಳೆದರೆ ಮಾತ್ರ ಸಂಸ್ಕೃತಿ ಬೆಳೆಯಲು ಸಾಧ್ಯ. ಈ ನಿಟ್ಟಿನಲ್ಲಿ ಭಾಷೆಯ ಬೆಳವಣಿಗೆಗೆ ಸಿನಿಮಾ ಕೂಡ ಒಂದು ಉತ್ತಮ ಮಾಧ್ಯಮವಾಗಿದೆ ಎಂದು ಆಕಾಶವಾಣಿಯ ನಿವೃತ್ತ ಉದ್ಘೋಷಕಿ ಕೂಪದಿರ ಶಾರದಾ ನಂಜಪ್ಪ ಅಭಿಪ್ರಾಯಪಟ್ಟಿದ್ದಾರೆ. ಕೂರ್ಗ್ ಕಾಫಿ ವುಡ್ ಮೂವೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಕಥೆ-ನಿರ್ದೇಶನದ “ಬೇರ್” (The Root) ಕೊಡವ ಸಿನಿಮಾದ ಪೋಸ್ಟರ್ ಮತ್ತು ಪ್ರೋಮೋ ಬಿಡುಗಡೆ ಸಮಾರಂಭ ನಗರದ ಪತ್ರಿಕಾ ಭವನ ಸಭಾಂಗಣದಲ್ಲಿ ನಡೆಯಿತು. ಚಿತ್ರದ ಪ್ರೋಮೊ ಬಿಡುಗಡೆಗೊಳಿಸಿ ಮಾತನಾಡಿದ ಶಾರದಾ ನಂಜಪ್ಪ, ತಾಂತ್ರಿಕ ಲೋಕ ಪ್ರಗತಿ ಸಾಧಿಸಿರುವುದರಿಂದ ಸಂಸ್ಕೃತಿಯ ಬೆಳವಣಿಗೆಗೆ ಸಹಕಾರಿಯಾಗಿದೆ, ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಸಿನಿಮಾಗಳ ಅವಶ್ಯಕತೆ ಇದೆ ಎಂದರು. ಇಂದಿನ ಯುವಕ ಯುವತಿಯರಿಗೆ ಸಂದೇಶ ನೀಡಲು ಸಿನಿಮಾ ಉತ್ತಮ ಮಾಧ್ಯಮವಾಗಿದ್ದು, ಕೊಡವರು ಕೊಡವ ಭಾಷಾ ಚಿತ್ರವನ್ನು ಅಭಿಮಾನದಿಂದ ನೋಡಿ ಚಿತ್ರ ತಂಡವನ್ನು ಪ್ರೋತ್ಸಾಹಿಸಬೇಕು. ಪೋಷಕರು ಕೊಡವ ಭಾಷೆ ಮತ್ತು ಕೊಡವ ಸಿನಿಮಾದ ಬಗ್ಗೆ ಮಕ್ಕಳಲ್ಲಿ ಅಭಿಮಾನ…
ಸೋಮವಾರಪೇಟೆ ಆ.19 : ಸೋಮವಾರಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಬಿಸಿಯೂಟ ಅಡುಗೆ ಮನೆಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಹಾಗೂ ಸಿ.ಇ.ಒ.ವರ್ಣಿತ್ ನೇಗಿ ಭೇಟಿ ನೀಡಿ ಪರಿಶೀಲಿಸಿದರು. ಕಳಪೆ ಕಾಮಗಾರಿಯಿಂದ ಶಾಲಾ ಕಟ್ಟಡ ಸೋರುತ್ತಿರುವ ಬಗ್ಗೆ ಪ್ರಾಂಶುಪಾಲ ಬೆಳ್ಳಿಯಪ್ಪ ಅವರಿಂದ ಮಾಹಿತಿ ಪಡೆದುಕೊಂಡರು. ಈ ಸಂದರ್ಭ ಚೌಡ್ಲು ಗ್ರಾ.ಪಂ ಸದಸ್ಯ ಮಹೇಶ್ ತಿಮ್ಮಯ್ಯ, ಉದ್ಯಮಿ ಗಿರೀಶ್ ಮಲ್ಲಪ್ಪ ಮತ್ತು ಉಪನ್ಯಾಸಕರು, ಶಿಕ್ಷಕರು ಇದ್ದರು.
ಸೋಮವಾರಪೇಟೆ ಆ.19 : ಗರ್ವಾಲೆ ಗ್ರಾಮ ಪಂಚಾಯಿತಿಗೆ ಎರಡನೇ ಅವಧಿಗೆ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ನೇತ್ರಾವತಿ ಬಾಯಿ, ಉಪಾಧ್ಯಕ್ಷರಾಗಿ ಎಂ.ಎಂ. ಚಿಣ್ಣಮ್ಮ ಅವಿರೋಧವಾಗಿ ಆಯ್ಕೆಯಾದರು. ಪಂಚಾಯಿತಿ ಸದಸ್ಯರಾದ ಕೆ.ಎ.ನಂಜುಂಡ, ಎಚ್.ಎಚ್. ರತ್ನ, ಟಿ.ಬಿ. ಸುರೇಶ್, ಬಿಜೆಪಿ ಪ್ರಮುಖರಾದ ಕೆ.ಎಂ ಸುಭಾಷ್ , ಓ.ಎನ್.ಅಶೋಕ್, ಎಂ.ಎಂ. ಸಚಿನ್, ಪಿ.ಕೆ. ಅಯ್ಯಪ್ಪ ಇದ್ದರು.
ಸೋಮವಾರಪೇಟೆ ಆ.19 : ಜೀಪು ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿ ಜೀಪು ಪಲ್ಟಿಯಾದ ಘಟನೆ ಮಸಗೋಡು ತಿರುವಿನಲ್ಲಿ ನಡೆದಿದೆ. ತಣ್ಣೀರುಹಳ್ಳ ಗ್ರಾಮದ ಶೇಷಪ್ಪ ಅವರ ಜೀಪು ಹಾಗೂ ಮಸಗೋಡು ಗೋವರ್ಧನ್ ಅವರ ಕಾರು ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಜೀಪು ಮಗುಚಿಕೊಂಡಿದ್ದು, ಜೀಪಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.
ಸೋಮವಾರಪೇಟೆ ಆ.19 : ಮಡಿಕೇರಿ ವನ್ಯಜೀವಿ ವಿಭಾಗ ಕೊಡಗು ವೃತ್ತದ ವತಿಯಿಂದ ವಿಶ್ವ ಆನೆ ದಿನಾಚರಣೆ ಅಂಗವಾಗಿ ಪೊನ್ನಂಪೇಟೆ ಫಾರೆಸ್ಟ್ರಿ ಕಾಲೇಜಿನಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಸೋಮವಾರಪೇಟೆ ವಿಶ್ವಮಾನವ ಕುವೆಂಪು ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಎಸ್.ವಿ.ತ್ರಿಶಾಲಗೌಡ ಪ್ರಥಮ ಸ್ಥಾನ ಗಳಿಸಿದ್ದಾರೆ. ತ್ರಿಶಾಲಗೌಡ ಶುಂಠಿ ಗ್ರಾಮದ ಎಸ್.ಆರ್.ವರುಣ್, ಎಸ್.ವಿ.ಕೃತಿ ದಂಪತಿಗಳ ಪುತ್ರಿ.






