ಲೇಖಕ: admin

ಮಡಿಕೇರಿ ಜು.19 : ಜಿಲ್ಲೆಯ ಕುಟುಂಬದಲ್ಲಿನ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ರೂ. 2000 ಗಳನ್ನು ನೀಡುವ ಸರ್ಕಾರದ ಪ್ರಮುಖ ಕರ್ಯಕ್ರಮಗಳಲ್ಲಿ ಗೃಹಲಕ್ಷ್ಮಿ ಯೋಜನೆಯು ಬುಧವಾರ ಚಾಲನೆ ದೊರೆತಿದ್ದು, ಜು.20 ರಿಂದ ಕೊಡಗು ಜಿಲ್ಲೆಯಲ್ಲಿ ನೋಂದಣಿ ಕಾರ್ಯ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ  ತಿಳಿಸಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ಸೌಲಭ್ಯ ಪಡೆಯಲು ಪ್ರಮುಖ ಅರ್ಹತೆಗಳು:-ಗೃಹಲಕ್ಷ್ಮಿ ಯೋಜನೆಯು ಕರ್ನಾಟಕ ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ವಿತರಿಸಿರುವ ಪಡಿತರ ಚೀಟಿಯಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆಗೆ ಮಾತ್ರ ಅನ್ವಯವಾಗುತ್ತದೆ. ಗೃಹಲಕ್ಷ್ಮಿ ಯೋಜನೆಗೆ ಯಾರು ಅರ್ಹರಾಗುವುದಿಲ್ಲ :  ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ತೆರಿಗೆ ಪಾವತಿದಾರರಾಗಿದ್ದಲ್ಲಿ ಈ ಯೋಜನೆಗೆ ಅರ್ಹರಾಗುವುದಿಲ್ಲ. ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಜಿಎಸ್‍ಟಿ ರಿಟನ್ರ್ಸ್ ಸಲ್ಲಿಸುವವರಾಗಿದ್ದಲ್ಲಿ ಅರ್ಹರಾಗುವುದಿಲ್ಲ. ಯೋಜನೆಯಡಿ ನೋಂದಾಯಿಸಲು ಬೇಕಾದ ದಾಖಲಾತಿಗಳು: ಪಡಿತರ ಚೀಟಿಯ ಸಂಖ್ಯೆ, ಯಜಮಾನಿಯ ಹಾಗೂ ಯಜಮಾನಿ ಪತಿಯ ಆಧಾರ್ ಕಾರ್ಡ್ ಸಂಖ್ಯೆ, ಯಜಮಾನಿ ಆಧಾರ್‍ಗೆ ಜೋಡಣೆಯಾಗಿರುವ ಬ್ಯಾಂಕ್…

Read More

ಮಡಿಕೇರಿ ಜು.19 :  ರಾತ್ರಿ ಸುರಿದ ಭಾರೀ ಮಳೆಗೆ ಮನೆಯ ಮೇಲ್ಛಾವಣಿ  ಕುಸಿದು ಗೋಡೆಗಳಿಗೆ ಹಾನಿಯಾಗಿರುವ ಘಟನೆ  ಸೋಮವಾರಪೇಟೆ ಮಾದೇಶ್ವರ ಬ್ಲಾಕ್ ನಡೆದಿದೆ.   ಮಾದೇಶ್ವರ ಬ್ಲಾಕ್ ನ  ನಿವಾಸಿ  ತಿಮ್ಮಯ್ಯ ಎಂಬುವವರ ಮನೆಯ  ಮೇಲ್ಚಾವಣಿ ಕುಸಿದು ಅಡುಗೆ ಮನೆ ಹಾಗೂ ಕೊಣೆಯ ಗೋಡೆಗಳಿಗೆ ಸಂಪೂರ್ಣ ಹಾನಿಯಾಗಿದ್ದು, ಅಪಾರ ನಷ್ಟ ಉಂಟಾಗಿದೆ.     

Read More

ಮಡಿಕೇರಿ ಜು.19 : ಬೆಟ್ಟಗೇರಿ ಗ್ರಾಮ ಪಂಚಾಯ್ತಿಯ ಅರ್ವತ್ತೊಕ್ಲು ಗ್ರಾಮದಲ್ಲಿ ಬೇಕೋಟ್ ಮಕ್ಕ ಕ್ಲಬ್ ವತಿಯಿಂದ ಜು.23 ರಂದು ತೃತೀಯ ವರ್ಷದ ಹಿಂದು ಬಾಂಧವರ ಕೆಸರುಗದ್ದೆ ಕ್ರೀಡಾಕೂಟವನ್ನು ಆಯೋಜಿಸಲಾಗಿದೆಯೆಂದು ಕ್ಲಬ್ ಸಲಹೆಗಾರರಾದ ಕಡ್ಲೇರ ಕೀರ್ತನ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರ್ವತ್ತೊಕ್ಲು ಗ್ರಾಮದ ತಳೂರು ಎಂ.ಚಂಗಪ್ಪ ಮತ್ತು ತಳೂರು ಎಂ.ಕುಶಾಲಪ್ಪನವರ ಗದ್ದೆಯಲ್ಲಿ ವೈವಿಧ್ಯಮಯವಾದ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಕ್ರೀಡಾಕೂಟಕ್ಕೆ ಬೆಳಗ್ಗೆ 8 ಗಂಟೆಗೆ ಸಂಸದ ಪ್ರತಾಪ ಸಿಂಹ ಮತ್ತು ಸ್ಥಳ ದಾನಿಗಳಾದ ತಳೂರು ಎಂ.ಚಂಗಪ್ಪ, ತಳೂರು ಎಂ.ಕುಶಾಲಪ್ಪ ಮತ್ತು ತಳೂರು ಜಿ. ದೇವರಾಜ್ ಅವರು ಚಾಲನೆ ನೀಡಲಿದ್ದು, ಹಲ ಗಣ್ಯರನ್ನು ಅತಿಥಿಗಳನ್ನಾಗಿ ಆಹ್ವಾನಿಸಲಾಗಿದೆ. ಸಮಾರಂಭದಲ್ಲಿ ಸಾಧಕರನ್ನು ಸನ್ಮಾನಿಸಲಾಗುತ್ತದೆಂದು ಹೇಳಿದರು. ಸ್ಪರ್ಧೆಗಳು- ಕೆಸರು ಗದ್ದೆ ಕ್ರೀಡಾ ಕೂಟದಲ್ಲಿ ತಲಾ 16 ತಂಡಗಳಿಗೆ ಸೀಮಿತವಾಗಿ ಪುರುಷರ ಕ್ರಿಕೆಟ್, ಪುರುಷರ ಮತ್ತು ಮಹಿಳೆಯರ ಹಗ್ಗ ಜಗ್ಗಾಟ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಆಸಕ್ತ ತಂಡಗಳು ಜು.21 ರ ಸಂಜೆ 5 ಗಂಟೆಯ ಒಳಗಾಗಿ ತಮ್ಮ ತಂಡದ ಹೆಸರನ್ನು ನೋಂದಾಯಿಸಿಕೊಳ್ಳಬೇಕು.…

Read More

ಮಡಿಕೇರಿ ಜು.19 : ಸರ್ಕಾರಿ ಕಚೇರಿಗಳಲ್ಲಿ ಕಳೆದ ಹಲವು ವರ್ಷಗಳಿಂದ ಖಾಯಂ ಆಗಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳಿಂದ ಸಾರ್ವಜನಿಕರ ಸಮಸ್ಯೆಗಳಿಗೆ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ ಮತ್ತು ಅರ್ಜಿಗಳನ್ನು ವಿಲೇವಾರಿ ಮಾಡದೆ ಸತಾಯಿಸಲಾಗುತ್ತಿದೆ ಎಂದು ಸೋಮವಾರಪೇಟೆ ರೈತ ಸಂಘದ ಸಂಚಾಲಕ ಕೆ.ಎಂ.ಲಕ್ಷ್ಮಣ್ ಆರೋಪಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಕೂರು ಗಾಮದ ವ್ಯಕ್ತಿಯೊಬ್ಬರು ಜಾಗವನ್ನು ಮಾರಾಟ ಮಾಡಲು ಅನುಮತಿ ಕೋರಿ ಕಳೆದ ಐದು ವರ್ಷಗಳಿಂದ ಸೋಮವಾರಪೇಟೆ ಹಾಗೂ ಕುಶಾಲನಗರ ತಾಲ್ಲೂಕು ಕಚೇರಿಗೆ ಹಲವು ಬಾರಿ ಅರ್ಜಿ ಸಲ್ಲಿಸಿದ್ದು, ಅಧಿಕಾರಿಗಳು ಇಲ್ಲಸಲ್ಲದ ಸಬೂಬು ನೀಡಿ ಕಚೇರಿಯಿಂದ ಕಚೇರಿಗೆ ಅಲೆದಾಡಿಸುತ್ತಿದ್ದಾರೆ ಎಂದು ಆರೋಪಿಸಿದರು. ಸಂಬಂಧಿಸಿದ ವ್ಯಕ್ತಿಯು ವೃದ್ದಾಪ್ಯ ಮತ್ತು ಹೃದಯ ಸಂಬಂಧಿ ತೊಂದರೆಯಿಂದ ಬಳಲುತ್ತಿದ್ದು, ಜಾಗವನ್ನು ಮಾರಾಟ ಮಾಡಿ ಮಗನ ಮನೆಗೆ ತೆರಳಲು ಇಚ್ಛೆ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಂಡು ನ್ಯಾಯ ಒದಗಿಸುವಂತೆ ಮನವಿ ಮಾಡಿದರು. ಕಳೆದ ಹಲವು ವರ್ಷಗಳಿಂದ ಒಂದೇ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳಿಂದ ತೊಂದರೆಯಾಗುತ್ತಿದೆ. ಸಾರ್ವಜನಿಕರ ಸಮಸ್ಯೆಗಳಿಗೆ…

Read More

ಮಡಿಕೇರಿ ಜು.19 : ನಗರಸಭಾ ಸದಸ್ಯ ಕಾಳಚಂಡ ಅಪ್ಪಣ್ಣ ಅವರ ಮೇಲೆ ಐಟಿಐ ಜಂಕ್ಷನ್ ಬಳಿ ನಡೆದಿರುವ ಹಲ್ಲೆ ಪ್ರಕರಣ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಘಟನೆಯಾಗಿದ್ದು, ಇದನ್ನು ತೀವ್ರವಾಗಿ ಖಂಡಿಸುವುದಾಗಿ ಎಸ್‌ಆರ್‌ವಿಕೆಎಲ್ ಫೇರ್ ಅಸೋಸಿಯೇಷನ್ ತಿಳಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್ ಅಧ್ಯಕ್ಷ ಡಾ.ಮೋಹನ್ ಅಪ್ಪಾಜಿ, ನಗರಸಭಾ ಸದಸ್ಯರಾಗಿರುವ ಕಾಳಚಂಡ ಅಪ್ಪಣ್ಣ ಅವರು ನಮ್ಮ ವೆಲ್ ಫೇರ್ ಅಸೋಸಿಯೇಷನ್ ಸದಸ್ಯರೂ ಆಗಿದ್ದಾರೆ. ಜಾಗದ ದಾಖಲೆಗಳಿಗೆ ಸಂಬಂಧಿಸಿದಂತೆ ಇವರ ಮೇಲೆ ಹಲ್ಲೆ ನಡೆಸಿರುವುದು ಸರಿಯಲ್ಲ. ದಾಖಲೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಅಥವಾ ಉಪ ವಿಭಾಗಾಧಿಕಾರಿಗಳಿಗೆ ದೂರನ್ನು ನೀಡಬಹುದಿತ್ತು. ಆದರೆ, ನಗರಸಭಾ ಸದಸ್ಯನ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯವೆಂದರು. ಇತ್ತೀಚೆಗೆ ಐಟಿಐ ಜಂಕ್ಷನ್ ಬಳಿ ಸಾಕಷ್ಟು ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ. ಈ ಬಗ್ಗೆಯೂ ಪೊಲೀಸ್ ಇಲಾಖೆಯ ಗಮನವನ್ನು ಅಸೋಸಿಯೇಷನ್ ಸೆಳೆದಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಅಸೋಸಿಯೇಷನ್ ಸದಸ್ಯ, ಸುಬ್ರಮಣ್ಯ ನಗರದ ನಿವಾಸಿ ಹುದೇರಿ ನಾಗೇಶ್ ಮಾತನಾಡಿ, ಐಟಿಐ ಜಂಕ್ಷನ್ ಬಳಿ ಬೆಳಗ್ಗೆ…

Read More

ಮಡಿಕೇರಿ ಜು.19 :  ನಗರದ  ಜನರಲ್ ತಿಮ್ಮಯ್ಯ ಮ್ಯೂಸಿಯಂಗೆ ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಭೇಟಿ ನೀಡಿದರು. ಜನರಲ್ ತಿಮ್ಮಯ್ಯ ಅವರ ಸೇನಾ ಸಾಧನೆ ಬಗ್ಗೆ ಮಾಹಿತಿ ಪಡೆದ ಅಖಿಲೇಶ್ ಯಾದವ್, ತಿಮ್ಮಯ್ಯ ಅವರ ಅಪ್ರತಿಮ ಸೇನಾ ಸೇವೆ ಎಲ್ಲರಿಗೂ ಮಾದರಿ ಎಂದು ಶ್ಲಾಘಿಸಿದರು. ಮೈಸೂರಿನಲ್ಲಿ ವಿಧ್ಯಾಭ್ಯಾಸ ಪಡೆದಿದ್ದೆ. ಹೀಗಾಗಿ ಆಗಾಗ್ಗೆ ಕೊಡಗಿಗೆ ಭೇಟಿ ನೀಡುತ್ತಿದ್ದೆ. ಮಡಿಕೇರಿಯ ದಸರಾ ಉತ್ಸವಕ್ಕೂ ಭೇಟಿ ನೀಡಿದ್ದೇನೆ. ಬಹಳ ಸುಂದರವಾದ ಜಿಲ್ಲೆ ಇದಾಗಿದೆ ಆದರೆ ಇದೇ ಮೊದಲ ಬಾರಿಗೆ ಜನರಲ್ ತಿಮ್ಮಯ್ಯ ಮ್ಯೂಸಿಯಂಗೆ ಭೇಟಿ ನೀಡಿರುವೆ. ಸೇನೆಯಲ್ಲಿರುವ ಕೊಡಗಿನ ಸೈನಿಕರ ಸಾಹಸಗಾಥೆಯನ್ನು ಸೈನಿಕಶಾಲೆಯಲ್ಲಿ ಓದುತ್ತಿರುವ ಸಂದಭ೯ ಸಹಪಾಠಿಗಳಿಂದ ಕೇಳಿತಿಳಿದಿದ್ದೆ. ಆದರೆ ಭಾರತದ ಪಾಲಿಗೆ ಮಹಾನ್ ಸೇನಾಧಿಕಾರಿಯಾಗಿದ್ದ ಜನರಲ್ ತಿಮ್ಮಯ್ಯ ಅವರ ಜೀವನ, ಸೇನಾ ಸಾಧನೆಗಳ ಬಗ್ಗೆ ಪ್ರತ್ಯಕ್ಷವಾಗಿ ವಸ್ತುಸಂಗ್ರಹಾಲಯದಲ್ಲಿ ವೀಕ್ಷಿಸಿ ಸಂತೋಷವಾಗಿದೆ.  ವಿದೇಶಗಳಲ್ಲಿಯೂ ಭಾರತದ ಕೀತಿ೯ಪತಾಕೆ ಹಾರಿಸಿರುವ ತಿಮ್ಮಯ್ಯ ಅವರ ಜನ್ಮನಿವಾಸದಲ್ಲಿಯೇ ಆ ಮಹಾನ್ ಸೇನಾನಿಗೆ ಗೌರವ ನಮನ ಸಲ್ಲಿಸುವ ಅಪೂವ೯…

Read More

ಮಡಿಕೇರಿ ಜು.19 :   ಕಾಂಗ್ರೆಸ್, ಸಮಾಜವಾದಿ ಪಕ್ಷಗಳೂ ಸೇರಿದಂತೆ 26 ಪಕ್ಷಗಳ ಹೊಸ ಘಟ್ ಬಂಧನ್ ಬಿಜೆಪಿ ಮಿತ್ರ ಪಕ್ಷಗಳಿಗೆ ಭಯ ಉಂಟು ಮಾಡಿದ್ದು ಸೋಲಿನ ಹತಾಶೆಯಿಂದ ವಿದಾಯದ ಕೂಟ ನಡೆಸುತ್ತಿವೆ ಎಂದು ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಮಡಿಕೇರಿಯಲ್ಲಿ ಜನರಲ್ ತಿಮ್ಮಯ್ಯ ಮ್ಯೂಸಿಯಂಗೆ ಭೇಟಿ ನೀಡಿ ಮಹಾನ್ ಸೇನಾನಿಯ ಸೇನಾಜೀವನದ ಮಾಹಿತಿ ಪಡೆದ ಬಳಿಕ ಮಾಧ್ಯಮದವರೊಂದಿಗೆ ಅಖಿಲೇಷ್ ಯಾದವ್ ಪ್ರತಿಕ್ರಿಯಿಸಿದರು. ಬೆಂಗಳೂರಿನಲ್ಲಿ ಹವಾಮಾನದಂತೆ ಮೈತ್ರಿ ಕೂಟದ ಸಭೆಯ ವಾತಾವರಣವೂ ಬಹಳ ಉತ್ತಮವಾಗಿತ್ತು. ಲೋಕಸಭಾ ಚುನಾವಣೆಯನ್ನು ಮೈತ್ರಿಕೂಟದ ಪಕ್ಷಗಳು ಒಟ್ಟಾಗಿ ಎದುರಿಸುತ್ತೇವೆ ಎಂದು ಅವರು ಹೇಳಿದರು. .ಮೈತ್ರಿಕೂಟದ ಸಭೆಯ ದಿನದಂದೇ ಬಿಜೆಪಿಯು ತನ್ನ ಮಿತ್ರ ಪಕ್ಷಗಳ ಸಭೆ ಕರೆದಿದ್ದು ಅವರಿಗೆ ಮೈತ್ರಿ ಕೂಟದ ಬಗ್ಗೆ ಬಿಜೆಪಿ ಮುಖಂಡರಿಗೆ ಪ್ರಾರಂಭವಾಗಿರುವ ಭಯಕ್ಕೆ ನಿದಶ೯ನವಾಗಿದೆ. ಬಿಜೆಪಿ ನೇತೖತ್ವದ ಪಕ್ಷಗಳ ಸಭೆ ವಿದಾಯ ಕೂಟದ ಸಭೆಯಾಗಲಿದೆ. ಇಲ್ಲಿಯವರೆಗೆ ಮೋಜುಮಸ್ತಿ ಅನುಭವಿಸಿದ್ದಾಯಿತು. ಇನ್ನು ಅಧಿಕಾರದಿಂದ ವಿದಾಯ ಹೇಳುವ ಕಾಲ ಬರುತ್ತಿದೆ. ಹೊಸ ಘಟ್…

Read More

ಮಡಿಕೇರಿ ಜು.19 : ಮಡಿಕೇರಿ ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಗರದ ಲಯನ್ಸ್ ಸಭಾಂಗಣದಲ್ಲಿ ನಡೆಯಿತು. ಅಧ್ಯಕ್ಷರಾಗಿ ಲಯನ್ ಡಿ.ಮಧುಕರ್ ಶೇಟ್, ಕಾರ್ಯದರ್ಶಿಯಾಗಿ ಲಯನ್ ನಟರಾಜ್ ಕೆಸ್ತೂರು, ಜಂಟಿ ಕಾರ್ಯದರ್ಶಿಯಾಗಿ ಎಂ.ಪಿ.ನಾಗೇಂದ್ರ, ಖಜಾಂಚಿಯಾಗಿ ಲಯನ್ ಎನ್.ಬಿ.ರವಿ, ಉಪಾಧ್ಯಕ್ಷರಾಗಿ ಲಯನ್ ದಿನೇಶ್ ರಾವ್, ಲಯನ್ ಜೆ.ವಿ.ಕೋಟಿ, ಟೇಮರ್ ಆಗಿ ಲಯನ್ ಹೆಚ್.ಟಿ.ಚಾಮ, ಟೈಲ್ ಟ್ವಿಸ್ಟರ್ ಆಗಿ ಲಯನ್ ಕಮಲಾ ಮುರುಗೇಶ್, ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಲಯನ್ ಮೋಹನ್ ಕುಮಾರ್, ಸದಸ್ಯತ್ವ ಸಮಿತಿಯ ಅಧ್ಯಕ್ಷರಾಗಿ ಲಯನ್ ಎಂ.ಎ.ನಿರಂಜನ್, ಕ್ಲಬ್ ಮೆಲ್ವಿಚರಕಾಗಿ ಲಯನ್ ಬಿ.ವಿ.ಮೋಹನ್ ದಾಸ್, ಎಲ್‍ಸಿಐಎಫ್ ಅಧ್ಯಕ್ಷರಾಗಿ ಲಯನ್ ಕವಿತಾ ಕಾವೇರಮ್ಮ, ನಿರ್ದೇಶಕರುಗಳಾಗಿ ಲಯನ್ ಕೆ.ಮಧುಕರ್, ಲಯನ್ ಪಿ.ಪಿ.ಸೋಮಣ್ಣ, ಲಯನ್ ಎಸ್.ಬಿ.ಮುರುಗೇಶ್, ಲಯನ್ ಸಂಗೀತಾ ಮೋಹನ್‍ದಾಸ್, ಲಯನ್ ಕೆ.ಕೆ.ದಾಮೋದರ್, ಲಯನ್ ಕೆ.ಟಿ.ಬೇಬಿ ಮ್ಯಾಥ್ಯು, ಲಯನ್ ಡಿ.ಜಿ.ಕಿಶೋರ್, ಲಯನ್ ಅಗಸ್ಟಿನ್ ಜಯರಾಜ್ ಪ್ರಮಾಣ ವಚನ ಸ್ವೀಕರಿಸಿದರು. ಲಯನ್ಸ್ ಸಂಸ್ಥೆ 317 ಡಿ ಯ 2ನೇ ಉಪ ರಾಜ್ಯಪಾಲ ಲಯನ್ ಕುಡುಪಿ ಅರವಿಂದ್ ಶೆಣೈ ಅವರು…

Read More

ವಿರಾಜಪೇಟೆ ಜು.19 : ಬಿಳುಗುಂದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕಾರ್ಯನಿರ್ವಹಿಸಿ ವರ್ಗಾವಣೆಯಾದ ಶಿಕ್ಷಕರಾದ ಪಿ.ಕೆ.ಪವಿತ್ರ ಹಾಗೂ ಕಿರಣ್ ಕುಮಾರ್ ಅವರಿಗೆ ಬೀಳ್ಕೊಡಲಾಯಿತು. ಬಿಳುಗುಂದ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಐನಂಡ ಪ್ರತಾಪ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಶಿಕ್ಷಕಿ ಅರುಣ್ ಆನ್ಸಿ ಡಿಸೋಜ ಶಿಕ್ಷಕರ ಅತ್ಯುತ್ತಮ ಸೇವೆಯ ಬಗ್ಗೆ ಮಾತನಾಡಿದರು. ಪಿ.ಡಿ.ಓ ಚಂದ್ರಶೇಖರ್ ಮಾತನಾಡಿ ಶಿಕ್ಷಕರ ವರ್ಗದಿಂದ ಶಾಲೆಗೆ ಅಪಾರ ನಷ್ಟವಾಗುತ್ತಿದೆ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಈ ಸಂದರ್ಭ ಶಾಲೆಯ ಎಲ್ಲಾ ಶಿಕ್ಷಕರು ವರ್ಗಾವಣೆಗೊಂಡ ಶಿಕ್ಷಕರ ಉತ್ತಮ ಕಾರ್ಯವೈಖರಿಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು. ವರ್ಗಾವಣೆಗೊಂಡ ಶಿಕ್ಷಕರು ಮಕ್ಕಳ ಬಿಸಿ ಊಟಕ್ಕೆ ತಟ್ಟೆಗಳನ್ನು ಕೊಡುಗೆಯಾಗಿ ನೀಡಿದರು. ಇವರಿಗೆ ಶಾಲಾ ಮಕ್ಕಳು, ಶಾಲಾ ಸಿಬ್ಬಂದಿಗಳು, ಅಡುಗೆ ಸಹಾಯಕರು, ಪ್ರಾಥಮಿಕ ಶಾಲಾ ಶಿಕ್ಷಕರು ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಅಮ್ಮತ್ತಿ ಕ್ಲಸ್ಟರ್ ಸಿ.ಆರ್.ಪಿ. ಪ್ರವೀಣ್ ಶಿಕ್ಷಕರ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು. ಈ ಸಂದರ್ಭದಲ್ಲಿ ಶಿಕ್ಷಕರಾದ ಜ್ಞಾನಮಣಿ, ಲೀಲಾವತಿ, ಲಿನ್ನಿ, ಸಾವಿತ್ರಿ, ಆಶಾರಾಣಿ ಸೇರಿದಂತೆ ಅಡುಗೆ ಸಹಾಯಕರು,…

Read More

ಮಡಿಕೇರಿ ಜು.19 :  ಬುಲೆಟ್ ಫ್ರೆಂಡ್ಸ್ ಕೊಂಡಂಗೇರಿ ವತಿಯಿಂದ ಆ.14 ಮತ್ತು ‌15 ರಂದು ಎರಡು ‌ದಿನಗಳ ಕಾಲ‌ ಕೊಂಡಂಗೇರಿಯಲ್ಲಿ ಜಿಲ್ಲಾ ಮಟ್ಟದ ಕೆಸರುಗದ್ದೆ ಕಾಲ್ಚೆಂಡು ಹಾಗೂ ಫುಟ್ಬಾಲ್ ಪಂದ್ಯಾವಳಿಯ ನ ನಡೆಯಲಿದ್ದು, ಆಸಕ್ತ ತಂಡಗಳು 7259499680, 9731311197,9483104412 ಸಂಖ್ಯೆಯನ್ನು ಸಂಪರ್ಕಿಸಿ ತಂಡವನ್ನು ನೋಂದಣಿ ಮಾಡಬಹುದಾಗಿದೆ ಎಂದು ಬುಲೆಟ್ ಫ್ರೆಂಡ್ಸ್ ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More