ಮಡಿಕೇರಿ ಆ.17 : ಅಖಿಲ ಅಮ್ಮಕೊಡವ ವಿದ್ಯಾಭಿವೃದ್ಧಿ ಸಂಘದ ವತಿಯಿಂದ ಜನಾಂಗದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪ್ರತಿವರ್ಷದಂತೆ ಈ ಬಾರಿಯೂ ಪ್ರೋತ್ಸಾಹ ಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. 7ನೇ ತರಗತಿ ಮೇಲ್ಪಟ್ಟ ಜನಾಂಗದ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿ ಮತ್ತು ವ್ಯಾಸಂಗ ಮಾಡುತ್ತಿರುವ ಬಗ್ಗೆ ಶಾಲೆಯಿಂದ ದೃಡೀಕರಣ ಪತ್ರ ಅಥವಾ ಶುಲ್ಕ ಪಾವತಿಯ ಪ್ರತಿಯೊಂದಿಗೆ ಅರ್ಜಿಯನ್ನು ಸೆ.15ರ ಒಳಗಾಗಿ ಆಯಾ ಗ್ರಾಮದಲ್ಲಿನ ಸಂಘದ ಪ್ರತಿನಿಧಿಗಳಿಗೆ ಅಥವಾ ಎನ್.ಕೆ.ಉಮೇಶ್ ಕೇಚಮಯ್ಯ, ಅಧ್ಯಕ್ಷರು, ಅ.ಅ.ಕೊ.ವಿ.ಸಂ. ಪೊನ್ನಂಪೇಟೆ, ಕುಟ್ಟಂದಿ ಗ್ರಾಮ ಮತ್ತು ಅಂಚೆ, 9480425773 ವಿಳಾಸಕ್ಕೆ ಸಲ್ಲಿಸುವಂತೆ ಸಂಘದ ಅಧ್ಯಕ್ಷ ಉಮೇಶ್ ಕೇಚಮಯ್ಯ ತಿಳಿಸಿದ್ದಾರೆ.
ಲೇಖಕ: admin
ಪೊನ್ನಂಪೇಟೆ, ಆ.17: ದೇಶದ 77ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕೊಂಡಂಗೇರಿಯ ಬುಲ್ಲೆಟ್ ಫ್ರೆಂಡ್ಸ್ ತಂಡದ ಆಶ್ರಯದಲ್ಲಿ ನಡೆದ 5ನೇ ವರ್ಷದ ಜಿಲ್ಲಾ ಮಟ್ಟದ ಕೆಸರುಗದ್ದೆ ಕ್ರೀಡಾಕೂಟದ ಫುಟ್ಬಾಲ್ ಪಂದ್ಯಾವಳಿಯಲ್ಲಿ ಕುಂಜಿಲ ಚಾಲೆಂಜರ್ಸ್ ಮತ್ತು ವಾಲಿಬಾಲ್ ಪಂದ್ಯಾವಳಿಯಲ್ಲಿ ಎಮ್ಮೆಮಾಡಿನ ಆರ್. ವೈ. ಸಿ. ತಂಡ ಚಾಂಪಿಯನ್ ಪಟ್ಟವನ್ನು ಮುಡುಗೇರಿಸಿಕೊಂಡಿತು. ಕೊಂಡಂಗೇರಿಯ ಅಮ್ಮತಿ ರಸ್ತೆಯಲ್ಲಿರುವ ಡಾ. ಮುಕ್ಕಾಟಿರ ಸಿ. ಕಾರ್ಯಪ್ಪ ಅವರ ಭತ್ತದ ಗದ್ದೆಯಲ್ಲಿ ನಡೆದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಜಿಲ್ಲೆಯ ವಿವಿಧ ಭಾಗಗಳ ಕ್ರೀಡಾಪಟುಗಳು ದಿನವಿಡೀ ಕೆಸರಿನಲ್ಲಿ ಮಿಂದೆದ್ದು, ಕೆಸರುಗದ್ದೆ ಕ್ರೀಡಾಕೂಟವನ್ನು ಮತ್ತಷ್ಟು ರಂಗೇರಿಸುವಲ್ಲಿ ಯಶಸ್ವಿಯಾದರು. ವಿನ್ನರ್ಸ್ ಪ್ರಶಸ್ತಿ ಪಡೆಯುವ ತವಕದಲ್ಲಿ ಪ್ರಬಲ ಸ್ಪರ್ಧೆಯೊಡ್ಡಿದ ಅತಿಥಿಯ ಕೊಂಡಂಗೇರಿಯ ಬುಲ್ಲೆಟ್ ಫ್ರೆಂಡ್ಸ್ ತಂಡ ಫುಟ್ಬಾಲ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದರೆ, ಬಾಣಂಗಾಲದ ಸಿಗ್ನೇಚರ್ ತಂಡ ವಾಲಿಬಾಲ್ ಪಂದ್ಯಾವಳಿಯಲ್ಲಿ ಎದುರಾಳಿ ತಂಡದೆದುರು ಶರಣಾಗಿ ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಸಂಜೆ ಕತ್ತಲಾಗುವವರೆಗೂ ರೋಚಕವಾಗಿ ನಡೆದ ವಾಲಿಬಾಲ್ ಪಂದ್ಯಾವಳಿಯ ಫೈನಲ್ಸ್ ನಲ್ಲಿ ಮೊದಲ ಸೆಟ್ಟಿನಲ್ಲಿ ಬಾಣಂಗಾಲ ಸಿಗ್ನೇಚರ್ ತಂಡ ಮೇಲುಗೈ…
ಸೋಮವಾರಪೇಟೆ, ಆ.17 : ಹನ್ನೆರಡನೇ ಶತಮಾನದಲ್ಲಿ ಎಲ್ಲಾ ಜಾತಿ ಸಮುದಾಯಗಳ ಶರಣರಿಂದ ರೂಪಿತವಾದ ವಚನಸಾಹಿತ್ಯ ಮನುಷ್ಯನ ಆತ್ಮದ ಉದ್ಧಾರಕ್ಕೆ ದಿವ್ಯ ಔಷಧಿಯಿದ್ದಂತೆ ಎಂದು ಸೋಮವಾರಪೇಟೆ ತಾಲ್ಲೂಕು ದಂಡಾಧಿಕಾರಿ, ತಹಶೀಲ್ದಾರ್ ಎಸ್.ಎನ್.ನರಗುಂದ ಹೇಳಿದರು. ಕೊಡಗು ಜಿಲ್ಲಾ ವಚನ ಸಾಹಿತ್ಯ ವೇದಿಕೆ ವತಿಯಿಂದ ತೋಳೂರು ಶೆಟ್ಟಳ್ಳಿಯ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ “ವಚನಗಳ ನಡಿಗೆ – ಶಾಲಾ ಕಾಲೇಜುಗಳೆಡೆಗೆ ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಜಾತಿ ಪದ್ದತಿ, ಅಜ್ಞಾನದ ಅಂಧ ಶ್ರದ್ಧೆಗಳೇ ತುಂಬಿದ ಅಂದಿನ ದಿನಗಳಲ್ಲಿ ಅಮೃತಮಯವಾದ ಶರಣರ ನುಡಿಗಳು ವಿಚಾರದ ಜ್ಯೋತಿಯನ್ನು ಹೊತ್ತಿಸಿ ಸಾಮಾಜಿಕ ಪರಿವರ್ತನೆಯ ಬೆಳಕು ನೀಡಿದರು. ಹಾಗಾಗಿ ಇಂದಿನ ವಿದ್ಯಾರ್ಥಿಗಳು ವಚನ ಸಾಹಿತ್ಯವನ್ನು ಅರಿಯುವ ಹಾಗೂ ಅವುಗಳ ಸಾರದಂತೆ ನಡೆದುಕೊಳ್ಳುವುದು ಎಲ್ಲರಿಗೂ ಇಂದು ಅತೀ ಅನಿವಾರ್ಯವಿದೆ. ಹಾಗಾಗಿ ಶಾಲಾ ಕಾಲೇಜುಗಳೆಡೆಗೆ ವಚನಗಳ ನಡಿಗೆ ಉತ್ತಮ ಕಾರ್ಯಕ್ರಮ ಎಂದು ನರಗುಂದ ಬಣ್ಣಿಸಿದರು. ಬಸವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಶಿಕ್ಷಕ ಕೆ.ಆರ್.ರಮೇಶ್ ಮಾತನಾಡಿ, ವಿಶ್ವ ಸಾಹಿತ್ಯಕ್ಕೆ ಕನ್ನಡ ಸಾಹಿತ್ಯ…
ನಾಪೋಕ್ಲು ಆ.17 : ಬೆಟ್ಟಗೇರಿ ಗ್ರಾ.ಪಂ ವತಿಯಿಂದ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಪಂಚಾಯತಿ ಆವರಣದಲ್ಲಿ ಪಂಚಾಯತಿ ಅಧ್ಯಕ್ಷರಾದ ಕಮಲ ಉತ್ತಯ್ಯ ಧ್ವಜಾರೋಹಣ ನೆರವೇರಿಸಿದರು. ನಂತರ ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಹುತಾತ್ಮ ಯೋಧರ ಹೆಸರಿನಲ್ಲಿ ನಿರ್ಮಿಸಲಾಗಿರುವ ಶಿಲಾಪಲಕಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಗೌರವವನ್ನು ಸಲ್ಲಿಸಲಾಯಿತು. ಈ ಸಂದರ್ಭ ಹುತಾತ್ಮ ಯೋಧ ಎ.ಯ0.ಬಿದ್ದಪ್ಪ ಅವರ ಮಾತೃಶ್ರೀ ಶಾಂತಿ ಹಾಗೂ ಪತ್ನಿ ಎ.ಬಿ.ಲೀನಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಪಂಚಾಯತಿ ಉಪಾಧ್ಯಕ್ಷ ಬೈತಡ್ಕ ದೇವಯ್ಯ, ನಿವೃತ ಯೋಧ ಅಬೂಬಕರ್, ಪಂಚಾಯತಿ ಸದಸ್ಯರು ಗ್ರಾಮ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ವರದಿ : ದುಗ್ಗಳ ಸದಾನಂದ
ನಾಪೋಕ್ಲು ಆ.17 : ವಾಹನ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ 77ನೇ ಸ್ವಾತಂತ್ರೋತ್ಸವವನ್ನು ಆಚರಿಸಲಾಯಿತು. ಪಟ್ಟಣದ ಆಟೋ ನಿಲ್ದಾಣದಲ್ಲಿ ಪೊಲೀಸ್ ಠಾಣಾ ಅಧಿಕಾರಿ ಮಂಜುನಾಥ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ಎಂ.ಎ.ಮನ್ಸೂರ್ ಆಲಿ, ಸಂಘದ ಅಧ್ಯಕ್ಷ ರಜಾಕ್, ಸಂಘದ ಪದಾಧಿಕಾರಿಗಳು ಸದಸ್ಯರು ಸಾರ್ವಜನಿಕ ಹಾಜರಿದ್ದರು.
ನಾಪೋಕ್ಲು ಆ.17 : ಬಲ್ಲಮಾವಟಿ ಗ್ರಾ.ಪಂ ವತಿಯಿಂದ ಪೇರೂರು ಗ್ರಾಮದ ಅಮೃತ ಸರೋವರದ ಬಳಿ 77ನೇ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ನಿವೃತ್ತ ಸೇನಾಧಿಕಾರಿ ಬಾಲೆಯಡ ಅಪ್ಪಣ್ಣ ಮತ್ತು ಮಾಜಿ ಸೈನಿಕ ಬೊಟ್ಟೋಳಂಡ ರಾಜಪ್ಪ ಧ್ವಜಾರೋಹಣ ನೆರವೇರಿಸಿದರು. ಆನಂತರ ವೀರಯೋಧ ಹೊಸೊಕ್ಲು ಸುಂದರೇಶ್ ಅವರ ಸ್ಮಾರಕವನ್ನು ಸಹೋದರ ವಸಂತ ಹಾಗೂ ಕುಟುಂಬಸ್ಥರು ಊರಿನ ಹಿರಿಯರು ಮುಗ್ದಾಟಿಸಿ ಪುಷ್ಪ ನಮನ ಸಲ್ಲಿಸಿದರು. ಅಮೃತ ಸರೋವರ ಜವಾಬ್ದಾರಿಯನ್ನು ಪೇರೂರು ಶ್ರೀ ಇಗ್ಗುತ್ತಪ್ಪ ದೇವಾಲಯದ ಆಡಳಿತ ಮಂಡಳಿಗೆ ಒಪ್ಪಿಸಲಾಯಿತು. ಈ ಸಂದರ್ಭ ಗ್ರಾ.ಪಂ ಅಧ್ಯಕ್ಷ ಮೇದರ ಶಾಂತಿ ಪೂವಯ್ಯ, ಉಪಾಧ್ಯಕ್ಷ ಚೋಕಿರ ಬಾಬಿ ಭೀಮಯ್ಯ, ಮುಕ್ಕಾಟಿರ ಸುತನ್ ಸುಬ್ಬಯ್ಯ, ಮಣವಟ್ಟಿರ ಕುಶಾಲಪ್ಪ, ಮಚ್ಚುರ ರವೀಂದ್ರ, ದೀನಾ ಮಾಯಮ್ಮ, ಗ್ರಾ.ಪಂ ಸದಸ್ಯರು ಹಾಗೂ ಊರಿನ ಹಿರಿಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪ್ರಾಥಮಿಕ ಹಾಗೂ ಪ್ರೌಡಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ಬಹುಮಾನ ವಿತರಿಸಲಾಯಿತು. ವರದಿ : ದುಗ್ಗಳ ಸದಾನಂದ
ನಾಪೋಕ್ಲು ಆ.17 : ನಾಪೋಕ್ಲುವಿನ ವಿವಿಧ ಶಾಲಾ ಕಾಲೇಜು, ವಿವಿಧ ಸಂಘ ಸಂಸ್ಥೆಗಳು, ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಲ್ಲಿ, ಅಂಗನವಾಡಿ ಕೇಂದ್ರಗಳಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳಿಂದ 77ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಸ್ವಾತಂತ್ರ್ಯೋತ್ಸ ಅಂಗವಾಗಿ ಅಂಕುರ್ ಪಬ್ಲಿಕ್ ಶಾಲಾ ವತಿಯಿಂದ ಕೊಟ್ಟ ಮುಡಿ ಜಂಕ್ಷನ್‍ನಿಂದ ಏಕತೆಗಾಗಿ ಓಟ ಕಾರ್ಯಕ್ರಮ ನಡೆಯಿತು. ನಾಪೋಕ್ಲು ಪೊಲೀಸ್ ಠಾಣಾಧಿಕಾರಿ ಮಂಜುನಾಥ್ ಮಾತನಾಡಿ, ಎಲ್ಲಾ ಸಮುದಾಯದವರನ್ನು ಒಗ್ಗೂಡಿಸುವ ವೇದಿಕೆ ಇದಾಗಿದೆ. ಇಂಥ ಓಟ ಕ್ರೀಡಾ ಚಟುವಟಿಕೆಗಳಿಂದಾಗಿ ವಿದ್ಯಾರ್ಥಿಗಳು ಸದೃಢರಾಗಲು ಸಾಧ್ಯ. ಇದು ಒಂದು ಉತ್ತಮ ಕಾರ್ಯಕ್ರಮ ಎಂದರು. ಸಂಸ್ಥೆಯ ಕಾರ್ಯದರ್ಶಿ ರತ್ನಾ ಚರ್ಮಣ ಮಾತನಾಡಿ, ಮಕ್ಕಳಿಗೆ ಸ್ವಾತಂತ್ರ್ಯದ ಪ್ರೇರಣೆ ನೀಡುವಂತಹ ಕಾರ್ಯಕ್ರಮ ಇದಾಗಿದ್ದು, ಎಲ್ಲರೂ ಭೇದಭಾವ ಇಲ್ಲದೆ ಭಾವೈಕ್ಯತೆಯಿಂದ ಬಾಳುವಂತಹ ಉದ್ದೇಶದಿಂದ ಎರಡನೇ ವರ್ಷದ ಏಕತಾ ಓಟವನ್ನು ಏರ್ಪಡಿಸಲಾಗಿದೆ ಎಂದರು. ಅಂಕುರ್ ಪಬ್ಲಿಕ್ ಶಾಲೆ, ಶ್ರೀ ರಾಮ ಟ್ರಸ್ಟ್ ,ಕೆಪಿಎಸ್ ಶಾಲೆ ಹಾಗೂ ಮರ್ಕಝ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಏಕತಾ ಓಟದಲ್ಲಿ ಪಾಲ್ಗೊಂಡಿದ್ದರು. ಬಳಿಕ ಶಾಲೆಯಲ್ಲಿ ಸಂಸ್ಥೆಯ…
ಮಡಿಕೇರಿ ಆ.17 : ಗೌಡಳ್ಳಿ ಗ್ರಾ.ಪಂ ವ್ಯಾಪ್ತಿಯ ರಾಮನಹಳ್ಳಿ ಗ್ರಾಮಕ್ಕೆ ತೆರಳುವ ಹೊಳೆಗೆ ಸಂಪರ್ಕ ಸೇತುವೆ ಇಲ್ಲದಿರುವ ಬಗ್ಗೆ ಗ್ರಾಮಸ್ಥರು ಶಾಸಕರ ಗಮನ ಸೆಳೆದ ಹಿನ್ನೆಲೆ ಇಂದು ಶಾಸಕ ಡಾ.ಮಂತರ್ ಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ತಕ್ಷಣವೇ ಈ ಬಗ್ಗೆ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು. ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಹಾಗೂ ಬಸನಕೊಪ್ಪ ಸುರೇಶ್, ಅರುಣ್ ಕೂಗುರು, ಪ್ರವೀಣ್ ಈ ಹಾಜರಿದ್ದರು.
ವಿರಾಜಪೇಟೆ ಆ.17 : ಭಾರತವು ವಿಭಿನ್ನ ಸಂಸ್ಕೃತಿ, ಆಚಾರ, ವಿಚಾರ, ಪರಂಪರೆಯನ್ನು ಹೊಂದಿರುವ ದೇಶವಾಗಿದೆ ಎಂದು ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ರೆ.ಫಾ.ಐಸಾಕ್ ರತ್ನಕರ್ ಅಭಿಪ್ರಾಯಪಟ್ಟರು. ಸಂತ ಅನ್ನಮ್ಮ ವಿದ್ಯಾಸಂಸ್ಥೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸ್ವಾತಂತ್ರ್ಯವು ಹಲವಾರು ಜನರ ತ್ಯಾಗ ಬಲಿದಾನಗಳ ಸಂಕೇತವಾಗಿದ್ದು, ನಮ್ಮ ಹಿರಿಯರ ಪರಿಶ್ರಮ ಅದರಲ್ಲಿ ಅಡಗಿದೆ. ಹಿರಿಯರು ಕಷ್ಟಪಟ್ಟು ದೊರಕಿಸಿದ ಸ್ವಾತಂತ್ರ್ಯವನ್ನು ರಾಷ್ಟ್ರದ ಸರ್ವ ಪ್ರಗತಿಗೆ ಬಳಸಿಕೊಳ್ಳುವಂತಾಗಬೇಕೆಂದರು. ವ್ಯಕ್ತಿ ಸ್ವಾತಂತ್ರ್ಯವು ರಾಷ್ಟ್ರದ ಪ್ರತೀ ಪ್ರಜೆಗೆ ಅಗತ್ಯವಾಗಿದೆ, ನಮ್ಮ ಸಂವಿಧಾನವು ಸಮಾನತೆ, ನ್ಯಾಯ, ಹಕ್ಕುಗಳು, ಕರ್ತವ್ಯಗಳ ತಳಹದಿ ಮೇಲೆ ನಿಂತಿದೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರಜೆಗಳೇ ಶ್ರೇಷ್ಠರು ಎಂದು ತಿಳಿಸಿದರು. ಮಾಜಿ ಸೈನಿಕ ಹಾಗೂ ಮಡಿಕೇರಿ ನಗರಸಭೆಯ ಅಭಿಯಂತರರಾದ ಹೇಮಕುಮಾರ್ ಮಾತನಾಡಿ, ನಮಗೆ ಸಿಕ್ಕ ಸ್ವಾತಂತ್ರ್ಯವನ್ನು ಬಳಸಿಕೊಂಡು ರಾಷ್ಟ್ರದ ಅಭಿವೃದ್ಧಿಗೆ ಶ್ರಮಿಸಬೇಕು, ಯುವ ಜನರು ಸಾಮಾಜಿಕ ಸಮಸ್ಯೆಗಳ ನಿವಾರಣೆಗೆ ಪಣ ತೊಡಬೇಕು. ಅದೆಷ್ಟೋ ಮಹಾನ್ ಪುರುಷರ ತ್ಯಾಗ ಸ್ವತಂತ್ರ ಭಾರತದಲ್ಲಿ ಅಡಗಿದೆ. ವಿದ್ಯಾರ್ಥಿಗಳು…
ವಿರಾಜಪೇಟೆ ಆ.17 : ವಿರಾಜಪೇಟೆಯ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಸ್ವಾತಂತ್ರೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 35 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಅಧಿಕಾರಿಗಳಾದ ಮೀನ ಮುತ್ತಮ್ಮ ಧ್ವಜಾರೋಹಣ ನೆರವೇರಿಸಿದರು. ನಂತರ ರಾಷ್ಟ್ರ ದ್ವಜಕ್ಕೆ ನಮಿಸಿ, ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಆಸ್ಪತ್ರೆಯ ಶುಶ್ರೂಕಿಯರು ದೇಶ ಭಕ್ತಿಗೀತೆಯನ್ನು ಹಾಡಿದರು. ಈ ಸಂದರ್ಭದಲ್ಲಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾದ ಡಾ. ಹೇಮಪ್ರಿಯ, ಇತರ ವೈದ್ಯಾಧಿಕಾರಿಗಳು, ಶುಶ್ರೂಕರು, ಕಚೇರಿ ಸಿಬ್ಬಂದಿಗಳು ಹಾಗೂ ಆಸ್ಪತ್ರೆಯ ನೌಕರರು, ಸಾರ್ವಜನಿಕರು ಹಾಜರಿದ್ದರು.






