ಲೇಖಕ: admin

ವಿರಾಜಪೇಟೆ ಜು.13 : ಮಡಿಕೇರಿ ನಗರಸಭಾ ಸದಸ್ಯ ಹಾಗೂ ಮಡಿಕೇರಿ ಕೊಡವ ಸಮಾಜದ ನಿರ್ದೇಶಕ ಕಾಳಚಂಡ ಅಪ್ಪಣ್ಣ ಅವರ ಮೇಲಿನ ಹಲ್ಲೆಗೆ ಖಂಡನೆ ವ್ಯಕ್ತಪಡಿಸಿದರುವ ವಿರಾಜಪೇಟೆ ಕೊಡವ ಸಂಘ ಹಲ್ಲೆ ಮಾಡಿದವರನ್ನು ಗಡಿಪಾರು ಮಾಡುವಂತೆ ಒತ್ತಾಯಿಸಿದೆ. ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೊಡವ ಸಂಘಗಳ ಒಕ್ಕೂಟದ ಅಧ್ಯಕ್ಷ ಮೆಕೇರಿರ ರವಿ ಪೆಮ್ಮಯ್ಯ, ಪೊಲೀಸ್ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಹಲ್ಲೆ ಮಾಡಿದವರನ್ನು ರೌಡಿ ಶೀಟರ್ ಪಟ್ಟಿಗೆ ಸೇರಿಸಬೇಕು ಮತ್ತು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು. ಕಾಳಚಂಡ ಅಪ್ಪಣ್ಣ ಅವರು ಕೊಡವ ಜನಾಂಗಕ್ಕೆ ಸೇರಿದವರಾಗಿದು,್ದ ಜನ ಸಾಮಾನ್ಯರಿಂದ ಚುನಾಯಿಸಲ್ಪಟ್ಟ ಜನಪ್ರತಿನಿಧಿ. ಓರ್ವ ಜನಪ್ರತಿನಿಧಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಾಡುಹಗಲೆ ನಡುರಸ್ತೆಯಲ್ಲಿ ಹಲ್ಲೆ ಮಾಡಿರುವುದು ಖಂಡನೀಯ ಎಂದರು. ಐಟಿಐ ಬಳಿ ಇರುವ ಕ್ಯಾಂಟೀನ್ ಜಾಗದ ಸಮಸ್ಯೆ ಹಲವಾರು ವರ್ಷಗಳ ಹಿಂದಿನದು. ಅದನ್ನು ಕಾನೂನು ರೀತಿಯಲ್ಲಿ ವ್ಯವಹರಿಸಬೇಕೆ ವಿನಾಃ ಕಾನೂನುನ್ನು ಕೈಗೆತ್ತಿಕೊಳ್ಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ಬುಡಕಟ್ಟು ಜನಾಂಗದ ಮೇಲೆ ಇದೇ ರೀತಿ ಮುಂದುವರೆದರೆ…

Read More

ಮಡಿಕೇರಿ ಜು.13 : ಪುತ್ತೂರಿನ ಖಿದ್ಮಾ ಫೌಂಡೇಶನ್ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ನಡೆದ ರಾಜ್ಯ ಮಟ್ಟದ ಕಾವ್ಯ ಮತ್ತು ಸಾಂಸ್ಕೃತಿಕ ಸಂಭ್ರಮ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೊಡಗು ಜಿಲ್ಲೆಯ ಸಾಹಿತಿ ಹಾಗೂ ಚಲನಚಿತ್ರ ನಿರ್ಮಾಪಕಿ ಈರಮಂಡ ಹರಿಣಿ ವಿಜಯ್ ಅವರು ಪಾಲ್ಗೊಂಡು ಕವನ ವಾಚಿಸಿ ಗಮನ ಸೆಳೆದರು. ಬೆಂಗಳೂರಿನ ಚಾಮರಾಜಪೇಟೆ ರಸ್ತೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಎಂಪವರ್ಡ್ ಮೈಂಡ್ಸ್ ಎಡು ಸೆಲ್ಯೂಷನ್ಸ್ ಸಂಸ್ಥಾಪಕ ಅಧ್ಯಕ್ಷರಾದ ಡಾ.ಲತಾ ಮೂರ್ತಿ ಉದ್ಘಾಟಿಸಿದರು. ಕವಿಗಳು ಮತ್ತು ಚಿಂತಕರಾದ ಹೆಚ್.ಬಿ. ಯೂಸಫ್ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದರೆ, ತುಮಕೂರು ಮಾತೃಭೂಮಿ ಸೇವಾ ಟ್ರಸ್ಟ್ ಸಂಸ್ಥಾಪಕ ಜ್ಯೋತಿ ಶ್ರೀನಿವಾಸ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮೈಸೂರು ಸಮಾಜ ವಿಜ್ಞಾನ ವಿಭಾಗದ ಮುಖ್ಯಸ್ಥ ಎನ್. ಮೊಹಮ್ಮದ್ ಹುಮಾಯೂನ್ ವಹಿಸಿದ್ದರು. ವಿಮರ್ಶಕರು ಹಾಗೂ ಉಪನ್ಯಾಸಕರಾದ ವೈ.ಜೆ.ಮೈಜೂಬಸಾಹೇಬ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಡಾ.ಎಪಿಜೆ ಅಬ್ದುಲ್ ಕಲಾಂ ಫೌಂಡೇಶನ್‍ನ ರಾಜ್ಯಾಧ್ಯಕ್ಷ ಡಾ.ಎಂ.ಎಂ.ಭಾಷ ನಂದಿ, ದಾಸನಪುರ…

Read More

ಮಡಿಕೇರಿ ಜು.13 :  ತೆಕ್ಕಿಲ್ ಮಾದರಿ ಶಾಲೆಯಲ್ಲಿ ತರಕಾರಿಗಳ ದಿನವನ್ನು ಆಚರಣೆ ಆಚರಿಸಲಾಯಿತು. ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹ ದಿಂದ ಪಾಲ್ಗೊಂಡು  ತಂದ ತರಕಾರಿಗಳ ಮಹತ್ವವನ್ನು ವಿವರಿಸಿದರು. ಶಾಲೆಯ ಸಹ ಶಿಕ್ಷಕಿ ಸೌಮ್ಯ ಮಕ್ಕಳಿಗೆ ಹಲವು ತರಕಾರಿಗಳ ಮಹತ್ವವನ್ನು ತಿಳಿಸಿದರು. ಈ ಸಂದರ್ಭ  ಶಾಲೆಯ ಮುಖ್ಯೋಪಾಧ್ಯಾಯ  ಜೆ.ಡಿ.ಸಂಪತ್  ಮತ್ತು ಎಲ್ಲಾ ಶಿಕ್ಷಕ ವೃಂದದವರು ಮತ್ತು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಉನೈಸ್ ಪೆರಾಜೆ ಉಪಸ್ಥಿತರಿದ್ದರು.

Read More

ಮಡಿಕೇರಿ ಜು.13 :  ಸೋಮವಾರಪೇಟೆ ಹಾಗೂ ಕುಶಾಲನಗರ ತಾಲ್ಲೂಕಿನ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಳಿಗೆ ಕ್ಷಯ ರೋಗದ ಬಗ್ಗೆ ಅರಿವು ಮೂಡಿಸಲಾಯಿತು. ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ  ತಾಲ್ಲೂಕು ಅಧಿಕಾರಿ ಶ್ರೀನಿವಾಸ್  ಕ್ಷಯ ರೋಗದ ಬಗ್ಗೆ  ಮಾಹಿತಿ ನೀಡಿದರು. ತಾಲ್ಲೂಕು ಆರೋಗ್ಯ ಅಧಿಕಾರಿ  ಕ್ಷಯ ಮುಕ್ತ ಗ್ರಾ.ಪಂ  ಅಭಿಯಾನದ ಬಗ್ಗೆ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಿದರು.  ಕಾರ್ಯಕ್ರಮದಲ್ಲಿ NTEP ಸಿಬ್ಬಂದಿಗಳಾದ ಉಮೇಶ್ ಶ್ರೀಧರ್, ಅರಳಪ್ಪ ಹಾಜರಿದ್ದರು. ಇ.ಒ.ಶಾಂತಿ ಸ್ವಾಗತಿಸಿದರು. ಹಿರಿಯ ಚಿಕಿತ್ಸ ಮೇಲ್ವಿಚಾರಕ  ಉಮೇಶ್  ಸರ್ವರನ್ನು ವಂದಿಸಿದರು.     

Read More

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ  ಫ್ರಾನ್ಸ್ ಪ್ರವಾಸ ಆರಂಭಿಸಿದ್ದಾರೆ. ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರ ಆಹ್ವಾನದ ಮೇರೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ಫ್ರಾನ್ಸ್‌ಗೆ ತೆರಳಿದ್ದಾರೆ.  ಇಂದು ಮತ್ತು ನಾಳೆ ಅವರು ಫ್ರಾನ್ಸ್ ನಲ್ಲಿಯೇ ಇದ್ದು ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ನಾಳೆ ಮೋದಿಯವರು ಫ್ರಾನ್ಸ್ ನ ವಾರ್ಷಿಕ ಬಾಸ್ಟಿಲ್ ಡೇ ಪರೇಡ್‌ನಲ್ಲಿ ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಇದರಲ್ಲಿ 269 ಸದಸ್ಯರನ್ನೊಳಗೊಂಡ ಭಾರತೀಯ ಸೇನೆಯ ಮೂರೂ ಸೇವೆಗಳ ತುಕಡಿ ಭಾಗವಹಿಸಲಿವೆ.

Read More

ಮಡಿಕೇರಿ ಜು.13 :  ಇಂದಿನ ಜಾಗತೀಕರಣದ ಅಬ್ಬರದ ದಿನಗಳಲ್ಲಿ ಎಲ್ಲೆಲ್ಲೂ ಕಾಂಕ್ರೀಟ್ ಕಾಡುಗಳೇ ಕಂಡು ಬರುತ್ತಿರುವಾಗ ವನ ಸಂಪತ್ತನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಸಿಗಳ ನೆಡುವಿಕೆ ಹೆಚ್ಚಾಗಬೇಕಾದ ಅತ್ಯಗತ್ಯವಾಗಿದೆ ಎಂದು ಕೊಡಗು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಸುಂದರರಾಜ್ ಅಭಿಪ್ರಾಯಪಟ್ಟಿದ್ದಾರೆ. ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ನಗರದ ಪೀಲ್ಡ್ ಮಾಷ೯ಲ್ ಕೆ.ಎಂ.ಕಾಯ೯ಪ್ಪ ವೖತ್ತದಲ್ಲಿನ ಮಿಸ್ಟಿ ಹಿಲ್ಸ್ ನಿವ೯ಹಣೆಯ ಉದ್ಯಾನವನದಲ್ಲಿ ಆಯೋಜಿಸಲಾಗಿದ್ದ ವನ ಮಹೋತ್ಸವವನ್ನು ಸಸಿ ನೆಡುವ ಮೂಲಕ ಸುಂದರ ರಾಜ್ ಉದ್ಘಾಟಿಸಿದರು. ಈ ಸಂದಭ೯ ಮಾತನಾಡಿದ ಸುಂದರರಾಜ್, ನಗರ ಪ್ರದೇಶಗಳು ಮಾತ್ರವಲ್ಲ ಗ್ರಾಮೀಣ ಪ್ರದೇಶಗಳಲ್ಲಿಯೂ ಇತ್ತೀಚಿನ ವಷ೯ಗಳಲ್ಲಿ ಕಾಂಕ್ರೀಟಿಕರಣವಾಗುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ. ಹೀಗಾಗಿ ವನ ಸಂಪತ್ತನ್ನು ಸಂರಕ್ಷಿಸಬೇಕಾದ ಅಗತ್ಯತೆ ಮನಗಂಡು ಸಸ್ಯ ಸಂಕುಲ ವೖದ್ದಿಸುವ ದೖಷ್ಟಿಯಲ್ಲಿ ವನಮಹೋತ್ಸವದಂಥ ಕಾಯ೯ಕ್ರಮಗಳು ಹೆಚ್ಚಾಗಬೇಕಾಗಿದೆ ಎಂದರು. ರೋಟರಿಯಂಥ ಸಂಸ್ಥೆಗಳು ವನಮಹೋತ್ಸವ ಮೂಲಕ ವಾಷಿ೯ಕ ಸಾವಿರಾರು ಗಿಡಗಳನ್ನು ಬೆಳೆಸುವ ಮೂಲಕ ಸಮಾಜಕ್ಕೆ ಮಹತ್ವದ ಕೊಡುಗೆ ನೀಡುತ್ತಿದೆ ಎಂದೂ ಸುಂದರರಾಜ್ ಶ್ಲಾಘಿಸಿದರು. ಯುವಪೀಳಿಗೆಗೂ ಸಸ್ಯಸಂಕುಲದ ಅಗತ್ಯತೆಯನ್ನು ಮನವರಿಕೆ ಮಾಡಿಕೊಡುವ…

Read More

ಹೊಸದಿಲ್ಲಿ : ರಾಷ್ಟ್ರ ರಾಜಧಾನಿ ಹೊಸದಿಲ್ಲಿ ಸೇರಿದಂತೆ ದೇಶದ ವಿವಿಧೆಡೆ ಟೊಮೆಟೊ ಧಾರಣೆ ಪ್ರತೀ ಕೆ.ಜಿ ಗೆ ರೂ.200 ದಾಟಿದ್ದು, ಬೆಲೆಏರಿಕೆಗೆ ಕಡಿವಾಣ ಹಾಕಲು ಆಂಧ್ರಪ್ರದೇಶ, ಕರ್ನಾಟಕ ಹಾಗೂ ಮಹಾರಾಷ್ಟ್ರದಿಂದ ಟೊಮೆಟೊಗಳನ್ನು ಖರೀದಿಸುವಂತೆ ಕೇಂದ್ರ ಸರಕಾರವು ಸಹಕಾರಿ ಮಾರುಕಟ್ಟೆ ಸಂಘಟನೆಗಳಾದ ನಾಫೆಡ್ ಹಾಗೂ ಎನ್‍ಸಿಸಿಎಫ್‍ಗೆ ಸೂಚನೆ ನೀಡಿದೆ. ನಾಫೆಡ್ ಹಾಗೂ ಎನ್‍ಪಿಸಿಎಫ್ ಮೂಲಕ ಖರೀದಿಸಲಾದ ಟೊಮೆಟೊ ದಾಸ್ತಾನನ್ನು ದಿಲ್ಲಿ-ಎನ್‍ಸಿಆರ್ ಪ್ರಾರಂಭದಲ್ಲಿ ಜು.14 ರಿಂದ ದರಕಡಿತದೊಂದಿಗೆ ರಿಟೇಲ್ ಮಳೆಗೆಗಳಲ್ಲಿ ಮಾರಾಟ ಮಾಡಲಾಗುವುದು ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.

Read More

ಮಡಿಕೇರಿ ಜು.13 : ಮೂನಾ೯ಡು ಪ.ಪೂ.ಕಾಲೇಜಿನ ರೋಟರ್ಯಾಕ್ಟ್ ನ ನಿಕಟಪೂವ೯ ಅಧ್ಯಕ್ಷೆ ಶ್ರೀರಕ್ಷಾ ಪ್ರಭಾಕರ್ ಅವರಿಗೆ ರೋಟರ್ಯಾಕ್ಟ್ ನವರತ್ನ -2023 ಎಂಬ ಪ್ರಶಸ್ತಿ ದೊರಕಿದೆ. ಪುತ್ತೂರಿನಲ್ಲಿ ನಡೆದ ಜಿಲ್ಲಾ ರೋಟರಾಕ್ಟ್ ಕ್ಲಬ್ ನ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮೂರ್ನಾಡು ಪದವಿ ಕಾಲೇಜಿನ ರೋಟರಾಕ್ಟ್ ಕ್ಲಬ್ ನ ನಿಕಟಪೂವ೯ ಅಧ್ಯಕ್ಷೆ ಶ್ರೀ ರಕ್ಷಾ ಪ್ರಭಾಕರ್ ಅವರಿಗೆ ರೋಟರಾಕ್ಟ್ ನ ನವರತ್ನ -2023 ಪ್ರಶಸ್ತಿಯನ್ನು ರೋಟರ್ಯಾಕ್ಟ್ ಜಿಲ್ಲಾ ಸಮಿತಿಯ ನಿಕಟಪೂವ೯ ಅಧ್ಯಕ್ಷ ನಿಖಿಲ್ ಆರ್.ಕೆ., ನೂತನ ಸಾಲಿನ ಸಂಚಾಲಕ ಮಹಮ್ಮದ್ ಅಸ್ಲಂ ಪ್ರಧಾನ ಮಾಡಿದರು. ಶ್ರೀರಕ್ಷಾ ರೋಟರ್ಯಾಕ್ಟ್ ಅಧ್ಯಕ್ಷೆಯಾಗಿ ಕೈಗೊಂಡ ಅನೇಕ ಸಮಾಜಮುಖಿ ಕಾಯ೯ಗಳಿಗಾಗಿ ಈ ಪ್ರಶಸ್ತಿ ಲಭಿಸಿದೆ. ಈ ಹಿನ್ನಲೆಯಲ್ಲಿಯೇ ಶ್ರೀರಕ್ಷಾರನ್ನು 2023-24 ಸಾಲಿನ ಜಿಲ್ಲಾ ರೋಟರ್ಯಾಕ್ಟ್ ನ ಸಾಂಸ್ಕೃತಿಕ ತಂಡದ ಅಧ್ಯಕ್ಷರಾಗಿ ನೇಮಕಮಾಡಲಾಗಿದೆ. ಮೂರ್ನಾಡು ಪದವಿ‌ ಕಾಲೇಜಿನ ರೋಟರಾಕ್ಟ್ ಕ್ಲಬ್ ನ ಸಲಹೆಗಾರರಾಗಿ ರೋಟರಿ ಮಡಿಕೇರಿ ವುಡ್ಸ್ ಸಂಸ್ಥೆಯ ಸಂಪತ್ ಕುಮಾರ್, ವಸಂತ್‌ ಕುಮಾರ್, ಹರೀಶ್ ಕಿಗ್ಗಾಲು, ಎನ್.ಸಿ.ನವೀನ್, ಬೋಪಣ್ಣ ಕಾರ್ಯ‌…

Read More

ಮಡಿಕೇರಿ ಜು.13 : ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 13.56 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 49.28 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 844.86 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 1470.37 ಮಿ.ಮೀ ಮಳೆಯಾಗಿತ್ತು. ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 27.93 ಮಿ.ಮೀ. ಕಳೆದ ವರ್ಷ ಇದೇ ದಿನ 44.40 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1330.92 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 2090.56 ಮಿ.ಮೀ. ಮಳೆಯಾಗಿತ್ತು. ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 3.08 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 43.83 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 603.83 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 1150.15 ಮಿ.ಮೀ. ಮಳೆಯಾಗಿತ್ತು. ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 9.67 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 59.60 ಮಿ.ಮೀ.…

Read More

ನಾಪೋಕ್ಲು ಜು.13 : ಪಾರಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಕಂಡಬಾಣೆಯ ಅಂಗನವಾಡಿ ಸಮೀಪ ಇದ್ದ  ನಾಗರಹಾವನ್ನು ಸ್ಥಳೀಯರು ರಕ್ಷಿಸಿದ್ದಾರೆ. ಏಕಾಏಕಿ ಕಾಣಿಸಿಕೊಂಡ ನಾಗರಹಾವನ್ನುಕಂಡು ಪುಟಾಣಿ ಮಕ್ಕಳು ಹಾಗೂ ಸ್ಥಳೀಯರು ಭಯಭೀತರಾದರು. ಸ್ಥಳೀಯರೇ ಚಾಣಾಕ್ಷತನದಿಂದ ಡ್ರಮ್‍ನಲ್ಲಿ ತುಂಬಿಸಿ ಕಾಡಿಗೆ ಬಿಟ್ಟ ರೋಚಕ ಘಟನೆ ನಡೆದಿದೆ.  ವರದಿ :  ದುಗ್ಗಳ ಸದಾನಂದ  

Read More