ಮಡಿಕೇರಿ ಆ.14 : ಕೊಡಗು ಪ್ರೆಸ್ ಕ್ಲಬ್, ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ವತಿಯಿಂದ ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಪ್ರಯುಕ್ತ “ಕದನ ಕಲಿಗಳಿಗೆ ಗೌರವ” ಕಾರ್ಯಕ್ರಮ ನಡೆಯಿತು. ನಗರದ ಕೊಹಿನೂರು ರಸ್ತೆಯಲ್ಲಿರುವ ರೆಡ್‍ಬ್ರಿಕ್ಸ್ ಇನ್‍ನ ಸತ್ಕಾರ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಏರ್ ಮಾರ್ಷಲ್ ನಂದ ಕಾರ್ಯಪ್ಪ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಒಬ್ಬ ಉತ್ತಮ ಸೇನಾನಿ ನಮ್ಮ ದೇಶದಲ್ಲಿ ಕಾರ್ಯನಿರ್ವಹಿಸಲು ಧನಾತ್ಮಕ ಚಿಂತನೆ, ಸಮಗ್ರತೆ, ಸ್ವಯಂ ನಿಯಂತ್ರಣವನ್ನು ಅಳವಡಿಸಿಕೊಳ್ಳಬೇಕಾಗುತ್ತದೆ ಎಂದರು. ಈಗಾಗಲೇ ಮಾಜಿ ಸೈನಿಕರ ಕುಂದುಕೊರತೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನದಲ್ಲಿದ್ದು, ಅವರು ಸ್ಪಂಧಿಸುತ್ತಾರೆ ಎಂಬ ನಂಬಿಕೆ ನನಗಿದೆ ಎಂದರು. ಕೊಡಗು ಪ್ರೆಸ್ ಕ್ಲಬ್ ಯೋಧರನ್ನು ಸನ್ಮಾನಿಸಿ ಗೌರವಿಸುತ್ತಿರುವುದು ಸಂತೋಷದಾಯಕ ವಿಚಾರ ಎಂದು ಶ್ಲಾಘೀಸಿದರು. ರಾಷ್ಟ್ರಪತಿಗಳ ಗೌರವ ಚಿಕಿತ್ಸಕರು, ಆಸ್ಪತ್ರೆ ಸೇವಾ ವಿಭಾಗ ಮತ್ತು ಮುಖ್ಯ ಸಮಾಲೋಚಕರು, ಮಾಜಿ ಮಹಾ ನಿರ್ದೇಶಕರಾದ ಲೆ/ಜ/ ಡಾ. ಬಿ.ಎನ್ ಬಿ.ಎಂ.ಪ್ರಸಾದ್ ಮಾತನಾಡಿ, ಸಮವಸ್ತ್ರದಲ್ಲೇ ದೇಶ ಸೇವೆ ಮಾಡಬೇಕೆಂದೇನಿಲ್ಲ, ವಿದ್ಯಾಭ್ಯಾಸ ಹಾಗೂ ಜೀವನದ ಅನೇಕ…
ಲೇಖಕ: admin
ಮಡಿಕೇರಿ ಆ.14 : ಅರೆಕಾಡುವಿನಲ್ಲಿ ಆನೆ ತುಳಿತಕ್ಕೆ ಸಾವನ್ನಪ್ಪಿದ ಕಟ್ಟೆಮಾಡು ಗ್ರಾಮದ ನಿವಾಸಿ ದೇವಪ್ಪ ಎಂಬುವ ನಿವಾಸಕ್ಕೆ ಮಡಿಕೇರಿ ತಾಲೂಕು ದಂಡಧಿಕಾರಿ ಪ್ರವೀಣ್ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಕುಶಾಲನಗರ,ಆ.14 : ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕೊಡಗು ಪ್ರೆಸ್ ಕ್ಲಬ್ ಬೆಳ್ಳಿಮಹೋತ್ಸವ ಆಚರಣಾ ಸಮಿತಿ ಇವರ ಸಹಯೋಗದಲ್ಲಿ ಪತ್ರಕರ್ತರ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ ಮಿಂಟನ್ ಪಂದ್ಯಾವಳಿಯು, ಕುಶಾಲನಗರದ ಜಂಪ್ ಸ್ಮಾಷ್ ಬ್ಯಾಡ್ ಮಿಂಟನ್ ಅಕಾಡೆಮಿಯ ಕ್ರೀಡಾಂಗಣದಲ್ಲಿ ನಡೆಯಿತು. ಪತ್ರಕರ್ತರ ಜಿಲ್ಲಾ ಮಟ್ಟದ ಶಟಲ್ ಬ್ಯಾಟ್ ಮಿಂಟನ್ ಪಂದ್ಯಾವಳಿಯ ಸಿಂಗಲ್ಸ್ ವಿಭಾಗದಲ್ಲಿ ಆದರ್ಶ್ ಅವರು ಪ್ರಥಮ ಸ್ಥಾನ ಪದೆಡು, ಟ್ರೋಫಿ ಹಾಗೂ 5 ಸಾವಿರ ನಗದನ್ನು ಸ್ವೀಕರಿಸಿದರು. ಸಿಂಗಲ್ಸ್ ನಲ್ಲಿ ಲೋಕೇಶ್ ಕಾಟಲೇರಿಯವರು ದ್ವಿತೀಯ ಸ್ಥಾನ ಪಡೆದು, ಟ್ರೋಫಿ ಹಾಗೂ 3 ಸಾವಿರ ರೂ ನಗದನ್ನು ಸ್ವೀಕರಿಸಿದರು. ಸುಬ್ರಮಣಿಯವರು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟು, ಟ್ರೋಫಿ ಹಾಗೂ 1 ಸಾವಿರ ನಗದನ್ನು ಪಡೆದುಕೊಂಡರು. ನಾಲ್ಕನೇ ಸ್ಥಾನ ಪಡೆದ ವಿನೋದ್ ಅವರು, ಟ್ರೋಫಿ ಹಾಗೂ 500 ರೂನಗದನ್ನು ಪಡೆದುಕೊಂಡರು. ಡಬಲ್ಸ್ ನಲ್ಲಿ ನವೀನ್ ಹಾಗೂ ವಿಶ್ವ ಕುಂಬೂರು ಅವರು ಪ್ರಥಮ ಸ್ಥಾನವನ್ನು ಅಲಂಕರಿಸಿ, ಟ್ರೋಫಿ ಹಾಗೂ 5 ಸಾವಿರ ನಗದನ್ನು…
ಮಡಿಕೇರಿ ಆ.14 : ನೇರಪ್ರಸಾರ ಕಾರ್ಯಕ್ರಮದಲ್ಲಿ ನಟ ಹಾಗೂ ನಿರ್ದೇಶಕ ಉಪೇಂದ್ರ ಅವರು ದಲಿತ ಸಮುದಾಯಕ್ಕೆ ನೋವಾಗುವ ರೀತಿಯಲ್ಲಿ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದು, ಇವರನ್ನು ತಕ್ಷಣ ಬಂಧಿಸಬೇಕೆoದು ದಲಿತ ಸಂಘರ್ಷ ಸಮಿತಿಯ ಐಕ್ಯತಾ ಚಾಲನಾ ಸಮಿತಿಯ ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷ ಜೆ.ಎಲ್.ಜನಾರ್ಧನ್ ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ದಲಿತರನ್ನು ಗುರಿಯಾಗಿಸಿಕೊಂಡು ಪದ ಬಳಕೆ ಮಾಡಿರುವುದರಿಂದ ಉಪೇಂದ್ರ ಅವರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ. ಆದರೆ ಇಲ್ಲಿಯವರೆಗೆ ಅವರನ್ನು ಬಂಧಿಸದೆ ಇರುವುದು ಖಂಡನೀಯವೆoದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಮಾಜದ ಸಮಾನತೆಗೆ ದಕ್ಕೆ ತಂದು ಜಾತೀಯತೆಗೆ ಆಸ್ಪದ ನೀಡಿರುವ ಈ ನಟನ ಚಿತ್ರಗಳು ಮತ್ತು ಪ್ರಜಾಕೀಯ ಎನ್ನುವ ರಾಜಕೀಯ ಪಕ್ಷವನ್ನು ಬಹಿಷ್ಕರಿಸಬೇಕೆಂದು ಜನಾರ್ಧನ್ ಕರೆ ನೀಡಿದ್ದಾರೆ.
ಮಡಿಕೇರಿ ಆ.14 : “ಜಾತ್ಯಾತೀತತೆ ಭಾರತದ ಧರ್ಮ” ಎಂಬ ಧ್ಯೇಯ ವಾಕ್ಯದೊಂದಿಗೆ ಆಗಸ್ಟ್ 15 ರ ಸ್ವಾತಂತ್ರ್ಯೋತ್ಸವದಂದು SYS ಕೊಡಗು ಜಿಲ್ಲಾ ಸಮಿತಿಯ ವತಿಯಿಂದ ನೆಲ್ಯಹುದಿಕೇರಿಯಲ್ಲಿ ನಡೆಯಲಿರುವ ರಾಷ್ಟ್ರ ರಕ್ಷಾ ಸಂಗಮ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ SKSSF ಕೊಡಗು ಜಿಲ್ಲಾ ಸಮಿತಿಯು ಕರೆ ನೀಡಿದೆ. ಭಾರತ ಮಣ್ಣಿನ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ ಪುರುಷರನ್ನು ಎಂದಿಗೂ ನೆನಪಿಸಬೇಕಾಗಿದೆ. ಜಾತಿ ಭೇದ ಮರೆತು ಒಗ್ಗಟ್ಟಿನ ಹೋರಾಟ ನಡೆಸಿದ ಫಲವಾಗಿ ದೇಶ 1947ರಲ್ಲಿ ಪಡೆದ ಸ್ವಾತಂತ್ರ್ಯ, ಹಲವಾರು ಹೋರಾಟಗಾರರ ಪ್ರಾಣತ್ಯಾಗದ ಫಲವಾಗಿದೆ ಎಂಬುದನ್ನು ಪ್ರತ್ಯೇಕವಾಗಿ ಸ್ಮರಿಸಬೇಕಾಗಿದೆ. ದೇಶದ ಸೌಹಾರ್ದತೆಯ ಉಳಿವಿಗಾಗಿ, ಜಾತ್ಯಾತೀತ ಬಲಿಷ್ಠ ಭಾರತದ ನಿರ್ಮಾಣಕ್ಕಾಗಿ ಎಸ್ ವೈ ಎಸ್ ಕೊಡಗು ಜಿಲ್ಲಾ ಸಮಿತಿಯು ಹಮ್ಮಿಕೊಂಡಿರುವ ರಾಷ್ಟ್ರ ರಕ್ಷಾ ಸಂಗಮವನ್ನು ಯಶಸ್ವಿಗೊಳಿಸುವುದು ನಮ್ಮೆಲ್ಲರ ಕರ್ತವ್ಯ. ಸರ್ವ ಧರ್ಮ ಮುಖಂಡರುಗಳು, ಜಿಲ್ಲೆಯ ಶಾಸಕರುಗಳು, ರಾಜಕೀಯ, ಧಾರ್ಮಿಕ, ಸಾಮಾಜಿಕ ನೇತಾರರು ಭಾಗವಹಿಸುವ ಪ್ರಸ್ತುತ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಎಸ್ ಕೆ ಎಸ್ ಎಸ್ ಎಫ್ ಜಿಲ್ಲಾಧ್ಯಕ್ಷರಾದ ತಮ್ಲೀಖ್ ದಾರಿಮಿ ಮಡಿಕೇರಿ ಹಾಗೂ…
ಮಡಿಕೇರಿ. ಆ.14 : ಮಡಿಕೇರಿ ವಕೀಲರ ಸಂಘದ ವತಿಯಿಂದ ನ್ಯಾಯಾಲಯದಲ್ಲಿ ಹರ್ ಘರ್ ತಿರಂಗ ಕಾಯ೯ಕ್ರಮದಡಿಯಲ್ಲಿ ರಾಷ್ಟ್ರದ್ವಜವನ್ನು ಪ್ರತೀ ಮನೆಯಲ್ಲಿ ಹಾರಿಸುವ ಕಾಯ೯ಕ್ರಮಕ್ಕೆ ಚಾಲನೆ ನೀಡಲಾಯಿತು. ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಶ್ಯಾಮ್ ಪ್ರಸಾದ್, ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶೆ ಶ್ರೀಮತಿ ಪ್ರಶಾಂತಿ, ಕಾನೂನು ಸೇವಾ ಪ್ರಾಧಿಕಾರದ ಕಾಯ೯ದಶಿ೯ ಕೆ.ಬಿ. ಪ್ರಸಾದ್, ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಮುನಿರತ್ನ, ಸಿವಿಲ್ ನ್ಯಾಯಾಧೀಶರಾದ ನಾಗೇಶ್, ವಕೀಲರ ಸಂಘದ ಅಧ್ಯಕ್ಷ ಎಂ.ಎ.ನಿರಂಜನ್, ಕಾಯ೯ದಶಿ೯ ಡಿ.ಎಂ.ಕೇಶವ, ಸಂಘದ ಸದಸ್ಯರು, ನ್ಯಾಯಾಲಯದ ಆಡಳಿತಾಧಿಕಾರಿ ಕೆಂಪರಾಜು, ನ್ಯಾಯಾಲಯದ ಸಿಬ್ಬಂದಿವಗ೯ದವರು ಕಾಯ೯ಕ್ರಮದಲ್ಲಿ ಪಾಲ್ಗೊಂಡಿದ್ದರು.
ಕುಶಾಲನಗರ ಆ.14 : ಸಮಾಜದಲ್ಲಿ ಜನರಿಗೆ ಮೌಢ್ಯ ಬಿತ್ತುವ ಕೆಲಸ ನಿರಂತರವಾಗಿ ನಡೆಯುತ್ತಿದ್ದು, ಇದನ್ನು ತಡೆಯಬೇಕಾದರೆ ವೈಜ್ಞಾನಿಕ ಮನೋಭಾವನೆ ಮತ್ತು ಮೌಢ್ಯಾಚರಣೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದು ಹೆಸರಾಂತ ವಿಚಾರವಾದಿಯೂ ಆದ ಅಖಿಲ ಭಾರತ ವಿಚಾರವಾದಿ ಒಕ್ಕೂಟದ ಅಧ್ಯಕ್ಷ ಪ್ರೊ|| ನರೇಂದ್ರನಾಯಕ್ ಹೇಳಿದರು. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿ ಹಾಗೂ ಅಖಿಲ ಭಾರತ ವಿಚಾರವಾದಿ ಒಕ್ಕೂಟದ ವತಿಯಿಂದ ಕುಶಾಲನಗರ ಕನ್ನಿಕಾ ಹೋಟೆಲ್ ಸಭಾಂಗಣದಲ್ಲಿ ಸುಂಟಿಕೊಪ್ಪ ಜೆಸಿಐ, ಕುಶಾಲನಗರ ಕಾವೇರಿ ಜೆಸಿಐ ಹಾಗೂ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಎನ್.ಎಸ್.ಎಸ್.ಘಟಕದ ಸಹಯೋಗದೊಂದಿಗೆ “ಮೌಢ್ಯದ ವಿರುದ್ಧ ವಿಜ್ಞಾನ ನಡಿಗೆ” ಎಂಬ ಕಾರ್ಯಕ್ರಮದಡಿ ವೈಜ್ಞಾನಿಕ ಮನೋಭಾವನೆ ಕುರಿತು ಉಪನ್ಯಾಸ ಹಾಗೂ ಪವಾಡಗಳ ರಹಸ್ಯ ಬಯಲು ಕಾರ್ಯಕ್ರಮ ನಡೆಯಿತು. ವೈಜ್ಞಾನಿಕ ಚಿಂತನೆಗಳು ಜನರಿಗೆ ತಲುಪುತ್ತಿದ್ದು ಅರಿವು ಉಂಟಾಗುತ್ತಿದೆ. ಆದರೆ, ಕೆಲವರು ವಿಚಾರವಾದಿಗಳ ಧ್ವನಿ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ನರೇಂದ್ರನಾಯಕ್ ವಿಷಾದಿಸಿದರು. ಸಮಾಜದಲ್ಲಿ ಹೆಚ್ಚುತ್ತಿರುವ ಕೋಮುವಾದ ಹಾಗೂ ಮೌಢ್ಯತೆಯನ್ನು ಹತ್ತಿಕ್ಕಬೇಕಾದಲ್ಲಿ ಯುವ ಜನರು ಮುಂದೆ ಬಂದು…
ಮಡಿಕೇರಿ ಆ.14 : ಮಡಿಕೇರಿ ತಾಲ್ಲೂಕಿನ ಮೇಕೇರಿ ಗ್ರಾ.ಪಂ ಗೆ ಸ್ವಂತ ಕಟ್ಟಡವಿಲ್ಲದೆ ಸಾರ್ವಜನಿಕರ ಕೆಲಸಗಳಿಗೆ ಅಡಚಣೆಯಾಗುತ್ತಿರುವುದರಿಂದ ತಕ್ಷಣ ಸ್ವಂತ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾ.ಪಂ ಸದಸ್ಯರುಗಳಾದ ಅಬ್ದುಲ್ ಖಾದರ್, ಎಂ.ಯು.ಹನೀಫ್ ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಂಚಾಯ್ತಿ ಸದಸ್ಯರು, ಸುಮಾರು 7 ವರ್ಷಗಳ ಹಿಂದೆ ಹಾಕತ್ತೂರು ಗ್ರಾ.ಪಂ ಯಿಂದ ಬೇರ್ಪಟ್ಟು ಪ್ರತ್ಯೇಕವಾಗಿ ರಚನೆಯಾದ ಮೇಕೇರಿ ಗ್ರಾ.ಪಂ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಬಳಿ ಕೊಠಡಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಆದ್ದರಿಂದ ಪಂಚಾಯ್ತಿಗೆ ಸ್ವಂತ ಕಟ್ಟಡದ ಅಗತ್ಯವಿದೆ ಎಂದರು. ಕಿರಿಯ ಪ್ರಾಥಮಿಕ ಶಾಲೆ ಪಕ್ಕದಲ್ಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. ಇದರ ಬಳಿಯೇ ಗ್ರಾ.ಪಂ ಕಟ್ಟಡ ನಿರ್ಮಾಣ ಮಾಡಬೇಕೆನ್ನುವ ಅಭಿಲಾಷೆ ಎಲ್ಲಾ ಗ್ರಾಮಸ್ಥರದ್ದಾಗಿದೆ. ಈ ಹಿನ್ನೆಲೆ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಚರ್ಚೆ ಮಾಡಿ ಆರೋಗ್ಯ ಕೇಂದ್ರದ ಪಕ್ಕದಲ್ಲಿ ಪಂಚಾಯಿತಿ ಕಟ್ಟಡ ನಿರ್ಮಾಣ ಮಾಡುವ ಕುರಿತು ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿತ್ತು. ಇತ್ತೀಚೆಗೆ ಆರೋಗ್ಯ ಕೇಂದ್ರದ ಪಕ್ಕದಲ್ಲಿ ಜಿ.ಪಂ ವತಿಯಿಂದ…
ಸುಂಟಿಕೊಪ್ಪ,ಆ.14: ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ಪಿ.ಆರ್.ಸುನಿಲ್ ಕುಮಾರ್ ಅವರನ್ನು ಸುಂಟಿಕೊಪ್ಪ ಮೋಟಾರ್ ವಾಹನ ವರ್ಕ್‍ಶಾಪ್ ಮಾಲೀಕರ ಹಾಗೂ ಕಾರ್ಮಿಕರ ಸಂಘದ ವತಿಯಿಂದ ಮಾಲಾರ್ಪನೆ ಮಾಡಿ ಸನ್ಮಾನಿಸಲಾಯಿತು. ಸುಂಟಿಕೊಪ್ಪ ಮೋಟಾರ್ ವಾಹನ ವರ್ಕ್‍ಶಾಪ್ ಸಂಘದ ಅಧ್ಯಕ್ಷರಾದ ಪಿ.ಆರ್.ಸುನಿಲ್‍ಕುಮಾರ್ ಅವರನ್ನು ಸುಂಟಿಕೊಪ್ಪ ವರ್ಕ್‍ಶಾಪ್ ಮಾಲೀಕ ಸಂಘದ ಗೌರವಧ್ಯಕ್ಷರುಗಳಾದ ವಿ.ಎ.ಸಂತೋಷ್,ವಿನೋದ್, ಪಿ.ಆರ್.ಸುಕುಮಾರ್ ಅವರುಗಳು ಸಭೆಯನ್ನು ಉದ್ದೇಶಿಸಿ ಮಾತನಾಡಿ ಅವರನ್ನು ಶಾಲು ಹೊದಿಸಿ ಫಲತಾಂಬೂಲ ನೀಡಿ ಸನ್ಮಾನಿಸಿ ಗೌರವಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸಂಘದ ಅಧ್ಯಕ್ಷ ಕಳೆದ 25 ವರ್ಷಗಳ ಹಿಂದೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲು ಮೊದಲ ಪ್ರೇರಣೆಯಾಗಿದ್ದು ವರ್ಕ್‍ಶಾಪ್ ಮಾಲೀಕರ ಸಂಘ ಎಂದರು. ಪಕ್ಷದಲ್ಲಿ ಅಧ್ಯಕ್ಷ ಸೇರಿದಂತೆ ಆನೇಕ ಹುದ್ದೆಗಳನ್ನು ನಿರ್ವಹಿಸಿದ್ದ ನನಗೆ ಊರಿನ ಅಧ್ಯಕ್ಷ ಪದವಿ ದೊರೆಯಲು ಈ ಸಂಘವೇ ಕಾರಣವಾಗಿದೆ ಎಂದರು. ಸಮಾರಂಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಮಣಿಕಂಠ, ಸಹಕಾರ್ಯದರ್ಶಿ ಜಿಬಿನ್, ಬಿ.ಎಸ್.ರಮೇಶ್,ತಂಗವೇಲು,ಜೇಸುದಾಸ್,ಪಿಲಿಪ್, ಸುರೇಶ್, ಹೂವೇಗೌಡ, ಕಿರಣ್, ಸತೀಶ ಮತ್ತಿತರರು ಇದ್ದರು.
ಮಡಿಕೇರಿ ಆ.14 : “ಜಾತ್ಯಾತೀತತೆ ಭಾರತದ ಧರ್ಮ” ಎಂಬ ಧ್ಯೇಯ ವಾಕ್ಯದೊಂದಿಗೆ ಆ.15 ರ ಸ್ವಾತಂತ್ರ್ಯೋತ್ಸವದಂದು ಎಸ್‍ವೈಎಸ್ ಕೊಡಗು ಜಿಲ್ಲಾ ಸಮಿತಿಯ ವತಿಯಿಂದ ನೆಲ್ಯಾಹುದಿಕೇರಿಯಲ್ಲಿ ನಡೆಯಲಿರುವ ರಾಷ್ಟ್ರ ರಕ್ಷಾ ಸಂಗಮ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಎಸ್‍ವೈಎಸ್ ಕೊಡಗು ಜಿಲ್ಲಾ ಸಮಿತಿ ಕರೆ ನೀಡಿದೆ. ಭಾರತ ಮಣ್ಣಿನ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ ಪುರುಷರನ್ನು ಎಂದಿಗೂ ನೆನಪಿಸಬೇಕಾಗಿದೆ. ಜಾತಿ ಭೇದ ಮರೆತು ಒಗ್ಗಟ್ಟಿನ ಹೋರಾಟ ನಡೆಸಿದ ಫಲವಾಗಿ ದೇಶ 1947ರಲ್ಲಿ ಪಡೆದ ಸ್ವಾತಂತ್ರ್ಯ, ಹಲವಾರು ಹೋರಾಟಗಾರರ ಪ್ರಾಣತ್ಯಾಗದ ಫಲವಾಗಿದೆ ಎಂಬುದನ್ನು ಪ್ರತ್ಯೇಕವಾಗಿ ಸ್ಮರಿಸಬೇಕಾಗಿದೆ. ದೇಶದ ಸೌಹಾರ್ದತೆಯ ಉಳಿವಿಗಾಗಿ, ಜಾತ್ಯಾತೀತ ಬಲಿಷ್ಠ ಭಾರತದ ನಿರ್ಮಾಣಕ್ಕಾಗಿ ಎಸ್ ವೈ ಎಸ್ ಕೊಡಗು ಜಿಲ್ಲಾ ಸಮಿತಿಯು ಹಮ್ಮಿಕೊಂಡಿರುವ ರಾಷ್ಟ್ರ ರಕ್ಷಾ ಸಂಗಮವನ್ನು ಯಶಸ್ವಿಗೊಳಿಸುವುದು ನಮ್ಮೆಲ್ಲರ ಕರ್ತವ್ಯ. ಸರ್ವ ಧರ್ಮ ಮುಖಂಡರುಗಳು, ಜಿಲ್ಲೆಯ ಶಾಸಕರುಗಳು, ರಾಜಕೀಯ, ಧಾರ್ಮಿಕ, ಸಾಮಾಜಿಕ ನೇತಾರರು ಭಾಗವಹಿಸುವ ಪ್ರಸ್ತುತ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಎಸ್ ಕೆ ಎಸ್ ಎಸ್ ಎಫ್ ಜಿಲ್ಲಾಧ್ಯಕ್ಷ ತಮ್ಲೀಖ್ ದಾರಿಮಿ ಮಡಿಕೇರಿ ಹಾಗೂ ಪ್ರಧಾನ…






