ಲೇಖಕ: admin

ಮಡಿಕೇರಿ ಆ.15 : ಕೊಡಗು ಜಿಲ್ಲಾಡಳಿತ ವತಿಯಿಂದ 77ನೇ ಸ್ವಾತಂತ್ರ್ಯ ದಿನಾಚರಣೆಯು ನಗರದ ಕೋಟೆ ಆವರಣದಲ್ಲಿ ಅರ್ಥಪೂರ್ಣವಾಗಿ ಜರುಗಿತು. ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಧ್ವಜಾರೋಹಣ ನೆರವೇರಿಸಿದರು. ಶಾಸಕ ಡಾ.ಮಂತರ್ ಗೌಡ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷರಾದ ಎನ್.ಪಿ.ಅನಿತಾ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿ.ಪಂ.ಸಿಇಒ ವರ್ಣಿತ್ ನೇಗಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಂ.ಪಿ.ಕೇಶವ ಕಾಮತ್ ಇತರರು ಪಾಲ್ಗೊಂಡಿದ್ದರು. ಪ್ರಸ್ತುತ ಸರ್ಕಾರದ ಸಾಧನೆ ಸಂಬಂಧ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಹೊರತಂದಿರುವ ‘ಪ್ರಗತಿಪರ ಅಭಿವೃದ್ಧಿಗಾಗಿ ನುಡಿದಂತೆ ನಡೆದಿದ್ದೇವೆ’ ಕಿರುಹೊತ್ತಿಗೆಯನ್ನು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು ಅವರು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು.

Read More

ಮಡಿಕೇರಿ ಆ.15 : ಕೊಡಗು ಪತ್ರಿಕಾ ಭವನ ಟ್ರಸ್ಟ್‍ನಿಂದ 77ನೇ ಸ್ವಾತಂತ್ರ್ಯೋತ್ಸವವನ್ನು ಪತ್ರಿಕಾ ಭವನದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕೊಡಗು ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷರಾದ ಎಂ.ಪಿ.ಕೇಶವ ಕಾಮತ್ ಅವರು ತ್ರಿವರ್ಣ ಧ್ವಜಾರೋಹಣಗೈಯ್ದು, ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ಕೋರಿದರು. ಈ ಸಂದರ್ಭ ಟ್ರಸ್ಟ್‍ನ ಸ್ಥಾಪಕ ಮ್ಯಾನೇಜಿಂಗ್ ಟ್ರಸ್ಟ್ ಟಿ.ಪಿ. ರಮೇಶ್, ಪ್ರಧಾನ ಕಾರ್ಯದರ್ಶಿ ಎಸ್.ಜಿ. ಉಮೇಶ್, ಕೊಡಗು ಪತ್ರಕರ್ತರ ಸಂಘದ ಸಹ ಕಾರ್ಯದರ್ಶಿ ಪ್ರಸಾದ್ ಸಂಪಿಗೆ ಕಟ್ಟೆ, ಸರ್ವೋದಯ ಸಮಿತಿಯ ಸದಸ್ಯರಾದ ಸುರಯ್ಯ ಅಬ್ರಾರ್, ಮಿನಾಜ್ ಪ್ರವೀಣ್, ಪತ್ರಿಕಾ ಭವನದ ಸಿಬ್ಬಂದಿಗಳಾದ ಬಿ.ಪಿ.ರಾಜೇಶ್, ಸವಿತಾ ಜೆ.ಎ., ಚರಿತಾ ಜೆ.ಎ. ಹಾಗೂ ರಾಮಣ್ಣ, ಲೀಲಾವತಿ, ಯಶ್ವಂತ್, ಅಶ್ರಫ್, ರೆಹಮಾನ್, ಸುಮೇಶ್, ಸಿಕಂದರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. 

Read More

ಮಡಿಕೇರಿ ಜು.15 :ವಿರಾಜಪೇಟೆ ಕ್ಷೇತ್ರದಲ್ಲಿ ಕಳೆದ 20 ವರ್ಷಗಳಿಂದ ಸೃಷ್ಟಿಯಾದ ಸಮಸ್ಯೆಗಳನ್ನು ಬಗೆಹರಿಸಲು ಕನಿಷ್ಠ 20 ತಿಂಗಳು ಅವಕಾಶ ನೀಡಿ. ಈಗ ತಾವು ಶಾಸಕರಾಗಿ ಮೂರು ತಿಂಗಳು ಆಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ  ಎ.ಎಸ್.ಪೊನ್ನಣ್ಣ ಮನವಿ ಮಾಡಿದರು. ಬಿಟ್ಟಂಗಾಲದ ಹೆಗ್ಡೆ ಸಮಾಜದ ಕಟ್ಟಡದಲ್ಲಿ ನಡೆದ ವಿರಾಜಪೇಟೆ  ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ  ಅಹವಾಲು ಸಂವಾದ ಕಾರ್ಯಕ್ರಮ ನಡೆಸಿ ಮಾತನಾಡಿದ ಅವರು, ಕಾರ್ಯಕರ್ತರು ಗಮನ ಸೆಳೆದ ಕ್ಷೇತ್ರದ ಸಮಸ್ಯೆಗಳನ್ನು ಆಲಿಸಿ ಬಗೆಹರಿಸುವ ಭರವಸೆ ನೀಡಿದರು. ಸರ್ಕಾರ ಜನಪರ ಕಾರ್ಯಕ್ರಮ ಜಾರಿಗೆ ತಂದಿದ್ದು, ಅದನ್ನು ಕ್ಷೇತ್ರದ ಕಟ್ಟ ಕಡೆಯ ಪ್ರಜೆಗೆ ತಲುಪಿಸುವ ಹೊಣೆಗಾರಿಕೆಯನ್ನು ನಿಭಾಯಿಸುತ್ತೇನೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ  ಭೋಸ್ ರಾಜ್ ಮಾತನಾಡಿ, ಈಗಾಗಲೇ ಜಿಲ್ಲಾ ಮಟ್ಟದಲ್ಲಿ ಕೆಡಿಪಿ ಸಭೆ ನಡೆಸಿದ್ದು, ತಾಲ್ಲೂಕು ಮಟ್ಟದ ಸಭೆ ಆರಂಭಗೊಂಡಿದೆ. ಮುಂದೆ ಹೋಬಳಿ ಮಟ್ಟದಲ್ಲಿ…

Read More

ಸತ್ಯ ಶಾಂತಿಯ ನಾಡು ಹತ್ತು ಮತಗಳ ಜೇನುಗೂಡು ಹಸಿರು ಹೊತ್ತಿಹ ಚೆಲುವ ಬೀಡು ಹಲವು ಭಾಷೆಗಳ ಒಂದು ಗೂಡು| ಸಂಸ್ಕೃತಿಯ ಸಮೃದ್ಧಿಯ ಸೂರು ಸಂಸ್ಕಾರಗಳ ಜೀವ ತೇರು ಸದ್ಭಕ್ತಿ ಸದ್ಭಾವಗಳ ಜೀವದುಸಿರು ಸ್ವ ಪ್ರೇಮ ಸದ್ಗುಣಗಳ ಭಾವ ತೇರು | ಪ್ರಗತಿ ಮುಂಚೂಣಿಯ ಪ್ರತೀಕ ಸಾಗುತ್ತಿರಲಿ ನಿತ್ಯ ತತ್ವ ಬೋಧಕ ಮೌಲ್ಯಧಾರಿತ ಗುಣದಿ ಸುಪ್ರೀತ ಐಕ್ಯತೆಯ ಮಂತ್ರ ಒಂದೇ ಸಂಗೀತ| ವಿಭಿನ್ನ ಭಾಷೆಯಲ್ಲಿ ಏಕತೆಯ ಸಾರ ಭಾವತನವೊಂದೇ ಭಾರತದ ವಿಚಾರ ವೇಷ ಭಾಷೆ ಬೇರೆ ಭಾವ ಜೀವಸಾಗರ ಸಾಮರಸ್ಯ ಸಹಮತ ದೇಶದ ಪ್ರಚಾರ… ಇದುವೇ ನಮ್ಮ ಭಾರತ | ಬರಹ : ಈರಮಂಡ ಹರಿಣಿ ವಿಜಯ್ ಮಡಿಕೇರಿ, ಕೊಡಗು ಮೊ.9740970840 

Read More

ಚೆಯ್ಯಂಡಾಣೆ  ಆ 15 : ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಭಾರತೀಯ ಸೇನೆಯ ಯೋಧ ಹವಾಲ್ದಾರ್ ಚೈಯಂಡ ಶಂಕರಿ ಧ್ವಜಾರೋಹಣ  ನೆರವೆರಿಸಿದರು. ಮುಖ್ಯ ಶಿಕ್ಷಕಿ ಹೇಮಾ ಕುಮಾರಿ ದಿನದ ಮಹತ್ವದ ಕುರಿತು ಮಾತನಾಡಿದರು. ವಿದ್ಯಾರ್ಥಿಗಳಿಂದ ದಿನದ ಮಹತ್ವದ ಕುರಿತು ಭಾಷಣ, ಹಾಡು, ರಾಷ್ಟ ಗೀತೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶಾಲೆಯಿಂದ ಪಟ್ಟಣದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಈ ಸಂದರ್ಭ ಎಸ್ ಡಿ ಎಂ ಸಿ ಅಧ್ಯಕ್ಷ ರತ್ನಾ,ಚೈಯಂಡ ಲವ ಅಪ್ಪಚ್ಚು, ಶಾಲಾ ಶಿಕ್ಷಕ ವೃಂದ ದವರು,ಎಸ್ ಡಿ ಎಂ ಸಿ ಸದಸ್ಯರು,ಪೋಷಕರು, ವಿದ್ಯಾರ್ಥಿಗಳು ಹಾಜರಿದ್ದರು. ವರದಿ :  ಅಶ್ರಫ್ 

Read More

ಮಡಿಕೇರಿ ಆ.15 : ನಮ್ಮ ದೇಶದ ಶಾಂತಿ ಮತ್ತು ಐಕ್ಯತೆಯನ್ನು ರಕ್ಷಿಸುವ ಪ್ರತಿಜ್ಞೆಯನ್ನು ತೆಗೆದುಕೊಳ್ಳೋಣ. ಸರ್ವರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳು.(ತೀತಿರ ಧರ್ಮಜ ಉತ್ತಪ್ಪ, ಅಧ್ಯಕ್ಷರು, ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ)

Read More

ಮಡಿಕೇರಿ ಆ.15 : ಹಿರಿಯರ ಬಲಿದಾನ ಎಂದಿಗೂ ವ್ಯರ್ಥವಾಗಲು ಬಿಡುವುದಿಲ್ಲ, ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು, ನಾವು ದೇಶದ ರಕ್ಷಣೆಗಾಗಿ ಸದಾ ಸಿದ್ಧ. ನಾಡಿನ ಸಮಸ್ತ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. (ಬಲ್ಲಾರಂಡ ಮಣಿ ಉತ್ತಪ್ಪ, ಅಧ್ಯಕ್ಷರು, ಚೆಟ್ಟಳ್ಳಿ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘ)

Read More

ಮಡಿಕೇರಿ ಆ.15 : ನಮ್ಮ ದೇಶಕ್ಕಾಗಿ ಮಡಿದ ಪ್ರತಿಯೊಬ್ಬ ಯೋಧನನ್ನೂ ನೆನೆಯುತ್ತ ಸಾತಂತ್ರ್ಯ ದಿನವನ್ನು ಯೋಧರಿಗೆ ಅರ್ಪಿಸೋಣ. ಕೊಡಗಿನ ಸಮಸ್ತ ಜನತೆಗೆ 77 ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು.(ಸುರೇಶ್ ಮುತ್ತಪ್ಪ, ಕಾರ್ಯಾಧ್ಯಕ್ಷರು, ವಿಶ್ವ ಹಿಂದೂ ಪರಿಷತ್, ಕೊಡಗು ಜಿಲ್ಲೆ) 

Read More

ಮಡಿಕೇರಿ ಆ.15 : ವಿವಿಧತೆಯಲ್ಲಿ ಏಕತೆ ನಮ್ಮ ಹೆಮ್ಮೆ, ಅದಕ್ಕಾಗಿಯೇ ನನ್ನ ಭಾರತ ಶ್ರೇಷ್ಠವಾಗಿದೆ. ನಾಡಿನ ಸಮಸ್ತ ಜನತೆಗೆ 77 ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು. (ಎಂ.ಪಿ.ಕೇಶವ ಕಾಮತ್, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್, ಕೊಡಗು ಜಿಲ್ಲೆ)

Read More

ಮಡಿಕೇರಿ ಆ.15 : ನಾಡಿನ ಸಮಸ್ತ ಜನತೆಗೆ 77 ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು. ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕಾಗಿ ಪಣ ತೊಡೋಣ, ದೇಶಕ್ಕಾಗಿ ತ್ಯಾಗ ಮಾಡೋಣ. (ಬಿ.ಬಿ.ಐತ್ತಪ್ಪ ರೈ, ಅಧ್ಯಕ್ಷರು, ಕೊಡಗು ಜಿಲ್ಲಾ ತುಳುವೆರ ಜನಪದ ಕೂಟ) 

Read More