ಮಡಿಕೇರಿ ಏ.20 NEWS DESK : ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಉಸ್ತುವಾರಿ ಸಮಿತಿಯ ಗೌರವ ಸಲಹೆಗಾರರು, ಸಂಶೋಧಕರು ಹಾಗೂ ಲೇಖಕರಾದ ಅನಂತರಾಜ ಗೌಡ (82) ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಮಡಿಕೇರಿ ನಗರದ ಮಾರುಕಟ್ಟೆ ಸಮೀಪ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಅನಂತರಾಜ ಗೌಡ ಅವರಿಗೆ ಲಘು ಹೃದಯಾಘಾತವಾಗಿದೆ ಎಂದು ತಿಳಿದು ಬಂದಿದೆ. ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಗೆ ವಾಲಿದೆ. ಅನಂತರಾಜ ಗೌಡ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತ್ತಾದರೂ ಅಷ್ಟೊತ್ತಿಗಾಗಲೇ ಅವರು ಇಹಲೋಕ ತ್ಯಜಿಸಿದ್ದರು. ಮೂಲತ: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನವರಾದ ಅನಂತರಾಜ ಗೌಡ ಅವರು ಮಡಿಕೇರಿ ತಾಲ್ಲೂಕಿನ ಕೆ.ನಿಡುಗಣೆ ಗ್ರಾ.ಪಂ ವ್ಯಾಪ್ತಿಯ ಕೋಟೆಕಾಡು ಗ್ರಾಮದಲ್ಲಿ ತೋಟವನ್ನು ಹೊಂದಿ ವಾಸವಾಗಿದ್ದರು. ಅರೆಭಾಷೆ ಗೌಡ ಜನಾಂಗದ ಇತಿಹಾಸ, ಐತಿಹಾಸಿಕ ದಾಖಲೆಗಳನ್ನು ಸಂಗ್ರಹಿಸಿ, ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಮುಖ್ಯವಾಗಿ ಕೆದಂಬಾಡಿ ರಾಮಯ್ಯ ಗೌಡರ ಇತಿಹಾಸವನ್ನು ಸಮಾಜಕ್ಕೆ ಒಪ್ಪಿಸಿದ್ದಾರೆ. ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ಸ್ಥಾಪನೆಗೆ ಸಾಕಷ್ಟು ಶ್ರಮಿಸಿದ್ದರು. ಅರೆಭಾಷೆ…
ಲೇಖಕ: admin
ಮಡಿಕೇರಿ ಏ.20 NEWS DESK : ವಿದ್ಯುತ್ ದರ ಏರಿಕೆ ಮಾಡುವ ಮೂಲಕ ರಾಜ್ಯ ಕಾಂಗ್ರೆಸ್ ಸರಕಾರ ಜನಸಾಮಾನ್ಯರಿಗೆ ಶಾಕ್ ನೀಡಿದೆ. ಉಚಿತ ಭಾಗ್ಯದ ಹೆಸರಿನಲ್ಲಿ ಒಂದು ಕೈಯಲ್ಲಿ ಸೌಲಭ್ಯವನ್ನು ನೀಡಿ ಮತ್ತೊಂದು ಕೈಯಲ್ಲಿ ಕಸಿದುಕೊಳ್ಳುವ ಸರ್ವಾಧಿಕಾರಿ ಧೋರಣೆಯನ್ನು ಸರಕಾರ ಅನುಸರಿಸುತ್ತಿದೆ ಎಂದು ವಿರಾಜಪೇಟೆ ಬಿಜೆಪಿ ಮಂಡಲದ ವಕ್ತಾರ ಚೆಪ್ಪುಡಿರ ರಾಕೇಶ್ ದೇವಯ್ಯ ಟೀಕಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಪ್ರತಿ ಯೂನಿಟ್ ವಿದ್ಯುತ್ ದರದ ಮೇಲೆ ಸರಾಸರಿ 56 ಪೈಸೆ ಹೆಚ್ಚಳ ಮಾಡಲಾಗಿದ್ದು, ಈ ಪರಿಷ್ಕರಣೆ ಮೇ ತಿಂಗಳಿನಿಂದಲೇ ಜಾರಿಗೆ ಬರಲಿದೆ. ಎಸ್ಕಾಂಗಳು ಸುಮಾರು 2,068 ಕೋಟಿ ರೂಪಾಯಿಗಳ ಆದಾಯದ ಕೊರತೆಯನ್ನು ಎದುರಿಸುತ್ತಿದ್ದು, ಇದನ್ನು ಸರಿದೂಗಿಸಲು ದರ ಏರಿಕೆ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. 2024-25ರ ಆರ್ಥಿಕ ವರ್ಷದಲ್ಲಿ ಎಸ್ಕಾಂಗಳು ನಿರೀಕ್ಷಿತ ಆದಾಯದ ಕೊರತೆಯನ್ನು ಎದುರಿಸುತ್ತಿರುವುದರಿಂದ ಈ ಹೆಚ್ಚುವರಿ ಹೊರೆಯನ್ನು ಗ್ರಾಹಕರಿಂದ ಸಂಗ್ರಹಿಸಲು ಸರಕಾರ ಮುಂದಾಗಿದೆ. ಇದು ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುವ ಪ್ರಯತ್ನವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಗೃಹಜ್ಯೋತಿ…
ಮಡಿಕೇರಿ NEWS DESK ಏ.20 : ವಿಕಾಸ್ ಜನತಾ ಸೇವಾ ಟ್ರಸ್ಟ್ ನ ನೂತನ ವ್ಯವಸ್ಥಾಪನಾ ಸಮಿತಿ ರಚನೆ ಮಡಿಕೇರಿ ಏ.20 : ಕಳೆದ ಅನೇಕ ವರ್ಷಗಳಿಂದ ನಿರ್ಗತಿಕರು, ವಯೋವೃದ್ಧರು ಹಾಗೂ ಆಶ್ರಯ ಇಲ್ಲದವರಿಗೆ ಆಶ್ರಯ ನೀಡಿ ಸಂತೈಸುತ್ತಿರುವ ಮಡಿಕೇರಿಯ ವಿಕಾಸ್ ಜನತಾ ಸೇವಾ ಟ್ರಸ್ಟ್ ನ ನೂತನ ವ್ಯವಸ್ಥಾಪನಾ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯ ಅಧ್ಯಕ್ಷರಾಗಿ ಮಿನಾಜ಼್ ಪ್ರವೀಣ್, ಗೌರವ ಸಲಹೆಗಾರರಾಗಿ ಮಹಮ್ಮದ್ ಕೆ.ಕೆ, ಪ್ರಧಾನ ಕಾರ್ಯದರ್ಶಿಯಾಗಿ ಗಣೇಶ್ ಕೆ.ಎ, ಖಜಾಂಚಿಯಾಗಿ ಪ್ರಮೋದ್, ಸಂಚಾಲಕರಾಗಿ ಕವನ್ ಕೊತ್ತೋಳಿ, ದಿನೇಶ್ ಕೆ.ಆರ್, ಕಾರ್ಯದರ್ಶಿ ಡೇವಿಡ್ ಡಿಸೋಜ, ಸಹ ಕಾರ್ಯದರ್ಶಿ ಚಿನ್ಮಯಿ, ಉಪಾಧ್ಯಕ್ಷರುಗಳಾಗಿ ಬಿ.ಎ.ಹರಿಣಾಕ್ಷಿ ಹಾಗೂ ಉಮೇಶ್ ಗೌಡ ಪಿ. ಆಯ್ಕೆಯಾಗಿದ್ದಾರೆ. ವಿಕಾಸ್ ಜನತಾ ಸೇವಾ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಡಿ.ಕರಿಯಪ್ಪ, ಅಧ್ಯಕ್ಷ ನವೀನ್ ಬಿ.ಕೆ ಪ್ರಧಾನ ಕಾರ್ಯದರ್ಶಿ ಕೋಚನ ಚೇತನ್ ಹಾಗೂ ಗೌರವ ಅಧ್ಯಕ್ಷ ಪ್ರಸನ್ನ ಭಟ್ ಅವರ ನೇತೃತ್ವದಲ್ಲಿ ನೂತನ ವ್ಯವಸ್ಥಾಪನಾ ಸಮಿತಿಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಮಡಿಕೇರಿ NEWS DESK ಏ.19 : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ’ ಯಲ್ಲಿ ಏ.20 ರ ಪಂದ್ಯಗಳು *ಮೈದಾನ 1* ಬೆಳಿಗ್ಗೆ 9 ಗಂಟೆಗೆ ಮಾಳೇಟಿರ (ಕೆದಮುಳ್ಳೂರು) ಮತ್ತು ಕೊಡಂದೇರ, 10.30ಕ್ಕೆ ತಂಬುಕುತ್ತೀರ ಮತ್ತು ಚೇಂದoಡ, ಮಧ್ಯಾಹ್ನ 12ಕ್ಕೆ ಬೊಜ್ಜಂಗಡ ಮತ್ತು ಚಿರಿಯಾಪಂಡ ಹಾಗೂ 2.30 ಗಂಟೆಗೆ ಕನ್ನಂಡ ಮತ್ತು ಅಲ್ಲಂಗಡ *ಮೈದಾನ 2* ಬೆಳಿಗ್ಗೆ 9 ಗಂಟೆಗೆ ಮುಕ್ಕಾಟಿರ (ಕುಂಬಳದಾಳು) ಮತ್ತು ಚೀಕಂಡ, 10ಕ್ಕೆ ಬಲ್ಲಚಂಡ ಮತ್ತು ಸಿದ್ದಂಡ, 11ಕ್ಕೆ ಬೊಳ್ಳೇರ ಮತ್ತು ಅಣ್ಣಳಮಾಡ (ಪೂಕೊಳ) ಹಾಗೂ ಮಧ್ಯಾಹ್ನ 2 ಗಂಟೆಗೆ ಐಚೋಡಿಯಂಡ ಮತ್ತು ಚೆಕ್ಕೇರ *ಮೈದಾನ 3* *ಮಹಿಳಾ ಕ್ರಿಕೆಟ್* ಬೆಳಿಗ್ಗೆ 9.45 ಗಂಟೆಗೆ ಮಲಚ್ಚೀರ ಮತ್ತು ಕಟ್ಟೆರ (ಅರಮೇರಿ), 10.30 ಕ್ಕೆ ಮಾಚಿಮಂಡ ಮತ್ತು ಕೊಕ್ಕೆಂಗಡ, 11 ಕ್ಕೆ ಅಚ್ಚಪಂಡ ಮತ್ತು ಚೇಂದಿರ, ಮಧ್ಯಾಹ್ನ 12ಕ್ಕೆ ಮೀದೇರಿರ ಮತ್ತು ಮುಕ್ಕಾಟಿರ (ಮೂವತ್ತೊಕ್ಲು), 1ಕ್ಕೆ ಕುಪ್ಪಂಡಮಾಡ ಮತ್ತು…
ಮಡಿಕೇರಿ NEWS DESK ಏ.19 : ಇತ್ತೀಚೆಗೆ ಆನೆ ದಾಳಿಯಿಂದ ಮೃತಪಟ್ಟ ದುರ್ದೈವಿ ಮುಕಳಮಾಡ ರತು ಕಾಯಿಮನೆ, ಪೊನ್ನಂಪೇಟೆ ತಾಲೂಕು, ಇವರ ಕುಟುಂಬದವರಿಗೆ ಸರಕಾರದಿಂದ ನೀಡುವ ಪರಿಹಾರ ಮತ್ತದ ಉಳಿಕೆ ₹15 ಲಕ್ಷಗಳ ಚೆಕ್ಕನ್ನು ಇಂದು ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಹಸ್ತಾಂತರಿಸಿದರು. ಈ ಹಿಂದೆ ಆನೆ ದಾಳಿಯಾದ ಸಂದರ್ಭದಲ್ಲಿ ಮೃತನ ಕುಟುಂಬಕ್ಕೆ ರೂ 5 ಲಕ್ಷದ ಚೆಕ್ಕನ್ನು ಹಸ್ತಾಂತರಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ಸಂದರ್ಭ ಮಿದೇರಿರ ನವೀನ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ಮಡಿಕೇರಿ NEWS DESK ಏ.19 : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ’ ಯಲ್ಲಿ ಏ.19 ರಂದು ಗೆಲುವು ಸಾಧಿಸಿದ ತಂಡಗಳು. *ಮೈದಾನ 1* (ಲಾಲು ಮುದ್ದಯ್ಯ ಮೈದಾನ) ಕೂತಂಡ ಮತ್ತು ಅಪ್ಪುಮಣಿಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಕೂತಂಡ ತಂಡಕ್ಕೆ 7 ವಿಕೆಟ್ ಗಳ ಜಯ ಲಭಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಅಪ್ಪುಮಣಿಯಂಡ 6 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 76 ರನ್ ಗಳನ್ನು ಗಳಿಸಿತು. ಕೂತಂಡ 5 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 79 ರನ್ ಗಳನ್ನು ಸೇರಿಸಿ ಗೆಲುವು ದಾಖಲಿಸಿತು. ಕಂಗಾoಡ ಮತ್ತು ಮಾದೆಯಂಡ (ಎಂ.ಬಾಡಗ) ನಡುವಿನ ಪಂದ್ಯದಲ್ಲಿ ಕಂಗಾoಡ ತಂಡ 10 ವಿಕೆಟ್ ಗಳಿಂದ ಗೆಲುವು ದಾಖಲಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಮಾದೆಯಂಡ 6 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 63 ರನ್ ಗಳನ್ನು ಸೇರಿಸಿತು. ಕಂಗಾAಡ 4.4 ಓವರ್ ಗಳಲ್ಲಿ…
ಮಡಿಕೇರಿ NEWS DESK ಏ.19 : ಕೇಂದ್ರ ಸರಕಾರ ಮಹಿಳಾ ಮೀಸಲಾತಿ ಜಾರಿಗೆ ತರುವ ನೆಪದಲ್ಲಿ ಕ್ಷೇತ್ರ ಪುನರ್ ವಿಂಗಡಣೆಗೆ ಮುಂದಾಗಿ ಎಡವಿ ಬಿದ್ದಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೋಷಪೂರಿತ ವಿಚಾರ ಮಂಡನೆ ಅಸಾಧ್ಯ ಎನ್ನುವುದು ಇದರಿಂದ ಸಾಬೀತಾಗಿದೆ ಎಂದು ಕೊಡಗು ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷೆ ಪುಷ್ಪಲತಾ ಜಿ.ಆರ್ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಎಂದಿಗೂ ಇಂಡಿಯಾ ಒಕ್ಕೂಟ ಮಹಿಳಾ ಮೀಸಲಾತಿಗೆ ವಿರೋಧ ವ್ಯಕ್ತಪಡಿಸಿಲ್ಲ, ಆದರೆ ಕೇಂದ್ರ ಸರಕಾರ ಜಾರಿಗೆ ತರಲು ಪ್ರಯತ್ನಿಸುತ್ತಿರುವ ದೋಷಪೂರಿತ ಕ್ಷೇತ್ರ ಪುನರ್ ವಿಂಗಡಣೆೆಯನ್ನು ವಿರೋಧಿಸುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ. 2010 ರಲ್ಲಿ ಅಂದಿನ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಮಹಿಳಾ ಮೀಸಲಾತಿ ವಿಧೇಯಕವನ್ನು ಜಾರಿಗೆ ತರಲು ಪ್ರಯತ್ನಿಸಿದ್ದರಾದರೂ ಸಫಲರಾಗಿರಲಿಲ್ಲ. 2023 ರಲ್ಲಿ ಅಂಗೀಕಾರವಾಗಿದ್ದ 543 ಲೋಕಸಭೆ ಸ್ಥಾನಗಳಿಗೆ ಶೇ.33ರಷ್ಟು ಮಹಿಳಾ ಮೀಸಲಾತಿಯನ್ನು ಜಾರಿಗೆ ತಂದಿದ್ದರೆ ಇಂದಿನ ಇಂಡಿಯಾ ಒಕ್ಕೂಟ ಬೆಂಬಲ ನೀಡುತ್ತಿತ್ತು ಎಂಬುವುದರಲ್ಲಿ ಯಾವುದೇ ಸಂಶಯವಿಲ್ಲ. ಕೇಂದ್ರ ಸರಕಾರ 2011 ರಲ್ಲಿ ನಡೆಸಿದ ಜಾತಿ…
ಮಡಿಕೇರಿ ಏ.18 NEWS DESK : ಕೊಡವ ಅಭಿವೃದ್ಧಿ ನಿಗಮ ಘೋಷಣೆಯಾಗುವಲ್ಲಿ ಯುಕೊ ಸಂಘಟನೆಯ ಪಾತ್ರವನ್ನು ಪರಿಗಣಿಸಿ ಪೊನ್ನಂಪೇಟೆಯ ವಸಂತನಗರದ ಶ್ರೀ ಇಗ್ಗುತ್ತಪ್ಪ ಕೊಡವ ಕೂಟದ ವತಿಯಿಂದ ಯುಕೊ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಅವರನ್ನು ಸನ್ಮಾನಿಸಲಾಯಿತು. ಅರುವತೊಕ್ಲುವಿನ ಭರಣಿ ಸಭಾಂಗಣದಲ್ಲಿ ಕೂಟದ ಅಧ್ಯಕ್ಷರಾದ ಚೇಂದಿರ ಅಪ್ಪಯ್ಯ ಅವರ ನೇತೃತ್ವದಲ್ಲಿ ನಡೆದ ಕೂಟದ ವಾರ್ಷಿಕ ಮಹಾಸಭೆಯ ಸಂದರ್ಭದಲ್ಲಿ ಮಂಜು ಚಿಣ್ಣಪ್ಪ ಅವರಿಗೆ ಚಿನ್ನದ ಸ್ಮರಣಿಕೆ ನೀಡಿ ಸನ್ಮಾನಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕೂಟದ ಅಧ್ಯಕ್ಷ ಚೇಂದಿರ ಅಪ್ಪಯ್ಯ, ಎಲ್ಲರೂ ಸ್ವಂತಕ್ಕಾಗಿ ದುಡಿಯುವಲ್ಲಿ ನಿರತರಾಗಿರುವಾಗ ಸಮಾಜ ಹಾಗು ಜನಾಂಗಕ್ಕಾಗಿ ದುಡಿಯುವವರನ್ನು ಗೌರವದಿಂದ ಕಾಣಬೇಕಿದೆ. ಈ ನಿಟ್ಟಿನಲ್ಲಿ ಕೊಡವ ಜನಾಂಗದ ಏಳಿಗೆಗಾಗಿ ಅವಿರತವಾಗಿ ಶ್ರಮಿಸುತ್ತಿರುವ ಮಂಜು ಚಿಣ್ಣಪ್ಪ ಹಾಗೂ ಅವರ ಬಳಗದ ಕೊಡುಗೆ ಅಪಾರವಾದುದು. ಕೊಡವ ಅಭಿವೃದ್ಧಿ ನಿಗಮದ ಯಶಸ್ಸು ಸಾಮಾನ್ಯ ವಿಷಯವಲ್ಲ, ಈ ನಿಟ್ಟಿನಲ್ಲಿ ಅವರನ್ನು ಗೌರವಿಸುವುದು ನಮಗೆ ಹೆಮ್ಮೆಯೆನಿಸಿದೆ ಎಂದು ಹೇಳಿದರು. ಹಿರಿಯರಾದ ಕಳ್ಳೆಂಗಡ ಶಂಬು ಮಾತನಾಡಿ, ಕೊಡವ ಅಭಿವೃದ್ಧಿ…
(*ಬರಹ : ಗೀತಾಂಜಲಿ ಎನ್.ಎಂ ಸೋಮವಾರಪೇಟೆ ) ಮಡಿಕೇರಿ ಏ.18 NEWS DESK : ಮಾನವ ಸಮಾಜದ ಬೆಳವಣಿಗೆ ಕೇವಲ ಇಂದಿನ ಆಧುನಿಕರಣದ ಸಾಧನೆಗಳ ಮೇಲೆ ಮಾತ್ರ ಆಧಾರವಾಗಿಲ್ಲ, ಅದು ಸಾವಿರಾರು ವರ್ಷಗಳ ಇತಿಹಾಸ, ಸಂಸ್ಕೃತಿ ಮತ್ತು ‘ಪರಂಪರೆಯ’ ಮೇಲೆಯು ಕಟ್ಟಲಾಗಿದೆ. ಈ ‘ಪರಂಪರೆ’ ಎಂಬ ಪದವು ನಮ್ಮ ಪೂರ್ವಿಕರಿಂದ ನಮಗೆ ಬಂದಿರುವ ಸಂಪತ್ತು ಎಂಬ ಅರ್ಥವನ್ನು ಒಳಗೊಂಡಿದೆ. ಇದು ಕೇವಲ ಕಟ್ಟಡಗಳು ಅಥವಾ ಸ್ಮಾರಕಗಳಷ್ಟೇ ಅಲ್ಲ, ಸಂಸ್ಕೃತಿ, ಭಾಷೆ, ಆಚರಣೆಗಳು, ಕಲೆ, ಸಾಹಿತ್ಯ ಮತ್ತು ನೈಸರ್ಗಿಕ ಸಂಪತ್ತುಗಳನ್ನೂ ಒಳಗೊಂಡಿದೆ. ಈ ನಿಟ್ಟಿನಲ್ಲಿ ಜಗತ್ತಿನ ಸಾಂಸ್ಕೃತಿಕ ವೈವಿಧ್ಯತೆಯನ್ನು ಸಂರಕ್ಷಿಸುವ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಏಪ್ರಿಲ್ 18 ಅನ್ನು ವಿಶ್ವ ಪರಂಪರೆಯ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನವನ್ನು “ಅಂತರರಾಷ್ಟ್ರೀಯ ಸ್ಮಾರಕಗಳು ಮತ್ತು ತಾಣಗಳ ದಿನ”ಎಂದೂ ಕರೆಯಲಾಗುತ್ತದೆ.ಈ ದಿನವನ್ನು ಯುನೆಸ್ಕೋದ ವಿಶ್ವ ಪರಂಪರೆಯ ಪಟ್ಟಿಯಿಂದ ಗುರುತಿಸಲ್ಪಟ್ಟ ಅದ್ಭುತ ಸಾಂಸ್ಕೃತಿಕ ಮತ್ತು ನೈಸರ್ಗಿಕ ಸಂಪತ್ತಿನ ಬಗ್ಗೆ ಜಾಗೃತಿ ಮೂಡಿಸಲು ಸಮರ್ಪಿಸಲಾಗಿದೆ. ಈ ವಿಶ್ವ…
ಮಡಿಕೇರಿ ಏ.18 NEWS DESK : ಜಾಗತಿಕ ಮಟ್ಟದಲ್ಲಿ ಪ್ರತಿಭಾನ್ವಿತರನ್ನು ಗುರುತಿಸಿ, ಅವರ ಉದ್ಯೋಗ ನೇಮಕಾತಿಗೆ ನೆರವಾಗುವ ಪ್ರಕ್ರಿಯೆಯಲ್ಲಿ ತೊಡಗಿರುವ ವೃತ್ತಿಪರ ಸಂಸ್ಥೆ ಅಡೆಕೊ ಗ್ರೂಪ್‍ನ ಅಂಗ ಸಂಸ್ಥೆಯಾಗಿರುವ ಅಡೆಕೊ ಇಂಡಿಯಾ ಕೊಡಗಿನಲ್ಲಿ ಉದ್ಯೋಗ ಮೇಳ ಆಯೋಜಿಸುವ ಮೂಲಕ ಕರ್ನಾಟಕದಲ್ಲಿ ಬಹು ಹಂತಗಳ ಗ್ರಾಮೀಣ ಉದ್ಯೋಗ ಅವಕಾಶ ಉಪಕ್ರಮಕ್ಕೆ ಚಾಲನೆ ನೀಡಿದೆ. ಮುಂದಿನ ಮೂರು ತಿಂಗಳಲ್ಲಿ 2500 ರಿಂದ 3000 ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವ ಗುರಿಯೊಂದಿಗೆ ಅಡೆಕೊ ಇಂಡಿಯಾ ಕಾರ್ಯಪ್ರವೃತ್ತವಾಗಿದ್ದು, ಕೊಡಗು ಸಮಾಜದ ಸಹಯೋಗದಲ್ಲಿ ಉದ್ಯೋಗ ಮೇಳ ಆಯೋಜಿಸುವ ಮೂಲಕ ಚಾಲನೆ ನೀಡಲಾಗಿದೆ. ಇದು ಎಲೆಕ್ಟ್ರಾನಿಕ್ಸ್, ತಯಾರಿಕೆ, ಬ್ಯಾಂಕಿಂಗ್, ಹಣಕಾಸು ಸೇವೆ ಮತ್ತು ವಿಮೆ (ಬಿಎಫ್‍ಎಸ್‍ಐ), ದೂರಸಂಪರ್ಕ, ಎಂಜಿನಿಯರಿಂಗ್ ಮತ್ತು ಇತರ ಪ್ರಮುಖ ವಲಯಗಳಲ್ಲಿ 450-500 ಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ಒದಗಿಸಿದೆ. ಎರಡು ದಿನಗಳ ಕಾರ್ಯಕ್ರಮವನ್ನು ಬೆಂಗಳೂರಿನ ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ, ಮಡಿಕೇರಿಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯೆ ಶ್ರೀಮತಿ ನಿರ್ಮಲಾ ಎಚ್.ಪಿ, ಗೋಣಿಕೊಪ್ಪಲಿನ…






