ಲೇಖಕ: admin

ಸುಂಟಿಕೊಪ್ಪ ಜೂ.8 : ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ನಿರಂತರವಾಗಿ ಡೆಂಗ್ಯೂ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನಲೆಯಲ್ಲಿ ಸುಂಟಿಕೊಪ್ಪ 1ನೇ ವಿಭಾಗದ ಜನತಾ ಕಾಲೋನಿ ಸೇರಿದಂತೆ ವಿವಿಧ ಬಡಾವಣೆಗಳಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸತೀಶ್ ಕುಮಾರ್ ಹಾಗೂ ಅಧಿಕಾರಿಗಳು ಭೇಟಿ ನೀಡಿದರು. ನಂತರ ಮನೆಯ ನೀರು ತುಂಬಿಸಿರುವ ಡ್ರಾಮ್, ಪಾತ್ರೆ ಸೇರಿದಂತೆ ಸುತ್ತ ಮುತ್ತಲ್ಲ ಪ್ರದೇಶಗಳನ್ನು ಪರಿಶೀಲಿಸಿ ಟೈಯರ್, ತೆಂಗಿನ ಚಿಪ್ಪಿ ಹಾಗೂ ಗುಂಡಿಗಳಲ್ಲಿ ನೀರು ಶೇಖರಣೆಗೊಳ್ಳದಂತೆ ನೋಡಿಕೊಳ್ಳಲು ಸಲಹೆ ನೀಡಿದರು. ಈ ಸಂದರ್ಭ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸತೀಶ್ ಕುಮಾರ್, ಪ್ರಸ್ತುತ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದ್ದು, ಜನರು ಅತಂಕ್ಕೆ ಒಳಗಾಗದಂತೆ ಮನವಿ ಮಾಡಿದರು. ತಾಲೂಕು ಆರೋಗ್ಯ ಅಧಿಕಾರಿ ಡಾ.ಶ್ರೀನಿವಾಸ್, ಸುಂಟಿಕೊಪ್ಪ ಪ್ರಾಥಮಿಕ ವೈದ್ಯಾಧಿಕಾರಿ ಡಾ. ಪ್ರಗತಿ, ಬಿಎಚ್‍ಇಓ (ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ)ಹೆಚ್.ಕೆ.ಶಾಂತಿ, ಹೇಲ್ತ್ ಇನ್ಸ್‍ಪೇಕ್ಟರ್‍ಗಳಾದ ಶೀನಿವಾಸ್, ಮುತ್ತುರಾಜ್, ಜನಾರ್ಧನ, ವಿಶ್ವಜ್ಞ, ಆರೋಗ್ಯ ಕಾರ್ಯಕರ್ತೆಯರು, ಸುಗಮಕಾರರು ಜ್ಯೋತಿ ಭಾಸ್ಕರ್ ಹಾಗೂ ಆಶಾ ಕಾರ್ಯಕರ್ತೆಯರು ಹಾಜರಿದ್ದರು.

Read More

ಮಡಿಕೇರಿ ಜೂ.8 : ನಗರಸಭೆಯ ಆಡಳಿತ ವೈಫಲ್ಯದಿಂದ ಮಡಿಕೇರಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಮಿತಿ ಮೀರಿದೆ ಎಂದು ನಗರಸಭಾ ಸದಸ್ಯ ಹಾಗೂ ಕಾಂಗ್ರೆಸ್ ನಗರಾಧ್ಯಕ್ಷ ಬಿ.ವೈ.ರಾಜೇಶ್ ಆರೋಪಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಪ್ರಸ್ತುತ ವರ್ಷ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದ್ದು, ಪರಿಹಾರ ಸೂಚಿಸುವಲ್ಲಿ ನಗರಸಭೆಯ ಬಿಜೆಪಿ ಆಡಳಿತ ವಿಫಲವಾಗಿದೆ ಎಂದು ಟೀಕಿಸಿದ್ದಾರೆ. ಕಾವೇರಿ ನದಿ ಹುಟ್ಟುವ ನಾಡು ಕೊಡಗು ಜಿಲ್ಲೆಯ ಹೃದಯ ಭಾಗದಲ್ಲಿರುವ ಮಡಿಕೇರಿ ನಗರಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ನೀಡದೆ ನಿರ್ಲಕ್ಷಿಸಲಾಗಿದೆ. ಟ್ಯಾಂಕರ್ ಗಳ ಮೂಲಕ ನೀರು ಸರಬರಾಜು ಮಾಡಬೇಕಾದ ಪರಿಸ್ಥಿತಿ ಉದ್ಭವಿಸಿರುವುದರಿಂದ ಇಂದು ನಗರಸಭೆ ತಲೆ ತಗ್ಗಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಕೂಟುಹೊಳೆ ಕೇಂದ್ರದಲ್ಲಿ 300 ಹೆಚ್.ಪಿ ಸಾಮಥ್ರ್ಯದ ಎರಡು ಮೋಟರ್ ಇದ್ದು ಒಂದು ದುರಸ್ತಿಯಾದರೆ ಮತ್ತೊಂದನ್ನು ಉಪಯೋಗಿಸಬಹುದಾಗಿದೆ. ಆದರೆ ಕಳೆದ ವರ್ಷ ಒಂದು ಮೋಟಾರ್ ದುರಸ್ತಿಯಾಗಿದ್ದು, ಅಧಿಕಾರಿ ವರ್ಗ ಬಿಲ್ ಪಾವತಿಸದ ಕಾರಣ ಆ ಮೋಟಾರ್…

Read More

ವಿರಾಜಪೇಟೆ ಜೂ.8 : ಬೇಟೋಳಿ ಗ್ರಾ.ಪಂ ವತಿಯಿಂದ ಗ್ರಾಮಾಭಿವೃದ್ಧಿ ಯೋಜನೆ ಅನುದಾನದಿಂದ ಬೇಟೋಳಿ ಒಂದನೇ ವಾರ್ಡಿನ ರಾಮನಗರ- ಪಾಕೋಡು ರಸ್ತೆಯ ಅಗಲೀಕರಣ ಕಾರ್ಯ ನಡೆಯಿತು. ಸ್ಥಳೀಯ ತೋಟದ ಮಾಲೀಕರ ಸಹಕಾರದಿಂದ ಸಂಚಾರಕ್ಕೆ ಇಕ್ಕಟ್ಟಾಗಿದ್ದ ರಾಮನಗರದಿಂದ ಕಂಬಂಡ ಐನ್ ಮನೆವರೆಗಿನ ರಸ್ತೆಯನ್ನು ಅಗಲೀಕರಣಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಲಾಯಿತು. ಈ ಸಂದರ್ಭ ಬೇಟೋಳಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಮಣಿ, ಗ್ರಾ.ಪಂ ಅಧ್ಯಕ್ಷೆ ಯಶೋಧ, ಸದಸ್ಯರಾದ ಅಮ್ಮಣಕುಟ್ಟಂಡ ಕಟ್ಟಿ, ರಜಾಕ್ ಹಾಗೂ ಗುತ್ತಿಗೆದಾರರಾದ ಪಟ್ಟಡ ಮನು ರಾಮಚಂದ್ರ, ಗ್ರಾಮಸ್ಥರಾದ ಬಿ.ಕೆ. ವಿಶ್ವನಾಥ್ ಹಾಗೂ ತೋಟದ ಮಾಲೀಕರು, ಸ್ಥಳೀಯರು ಹಾಜರಿದ್ದರು.

Read More

ಮಡಿಕೇರಿ ಜೂ.8 : ಕೊಡಗು ವಿದ್ಯಾಲಯದ ಎನ್‍ಸಿಸಿ ಕೆಡೆಟ್‍ಗಳಿಂದ ವಿಶ್ವ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ವಿದ್ಯಾಲಯದ ಆವರಣದಲ್ಲಿ ಗಿಡನೆಟ್ಟು ಪರಿಸರದ ಕುರಿತು ಜಾಗೃತಿ ಮೂಡಿಸಿದರು. ಈ ಸಂದರ್ಭ ವಿದ್ಯಾಲಯದ ಪ್ರಾಂಶುಪಾಲೆ ಕೆ.ಎಸ್.ಸುಮಿತ್ರ ದಿನದ ಮಹತ್ವದ ಕುರಿತು ಕೆಡೆಟ್‍ಗಳಿಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಶಾಲೆಯ ಮ್ಯಾನೆಜರ್ ಪಿ.ರವಿ ಹಾಜರಿದ್ದರು.

Read More

ಮಡಿಕೇರಿ ಜೂ.7 : ಕೊಡಗು ಪ್ರೆಸ್ ಕ್ಲಬ್ ಬೆಳ್ಳಿಹಬ್ಬ ಪ್ರಯುಕ್ತ ಕೊಡವಾಮೆ ಸಂಘಟನೆ ಆಶ್ರಯದಲ್ಲಿ ಜೂ.10 ರಂದು ಮಡಿಕೇರಿಯಲ್ಲಿರುವ ಪತ್ರಿಕಾ ಭವನದಲ್ಲಿ ಕೊಡವ ಸಂಸ್ಕೃತಿ ವಿಚಾರಗೋಷ್ಠಿ ಆಯೋಜಿಸಲಾಗಿದೆ. ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ, ಕೊಡವಾಮೆ ಸಂಘಟನೆ, ಬುಡಕಟ್ಟು ಸಂಸ್ಕೃತಿ ಅಧ್ಯಯನ ಕೇಂದ್ರದ ಸಂಯುಕ್ತಾಶಯದಲ್ಲಿ ವಿಚಾರಗೋಷ್ಠಿ ಆಯೋಜಿಸಲಾಗಿದೆ ಎಂದು ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಕೆ. ರೆಜಿತ್‍ಕುಮಾರ್ ಗುಹ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಡಾ.ಉಳ್ಳಿಯಡ ಎಂ. ಪೂವಯ್ಯ ಅಧ್ಯಕ್ಷತೆಯಲ್ಲಿ ಅಂದು ಬೆಳಗ್ಗೆ 10 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಮರ್‍ಂದ್ ಮರೆಯಾನ ಕೊಡವ ನಡ್‍ಪ್ ತೊಡ್‍ಪ್ ವಿಚಾರದ ಕುರಿತು ಹಿರಿಯ ಸಾಹಿತಿ ಬಾಚರಣಿಯಂಡ ರಾಣಿ ಅಪ್ಪಣ್ಣ ವಿಷಯ ಮಂಡಿಸಲಿದ್ದಾರೆ. ಮಾಳೇಟಿರ ಸೀತಮ್ಮ ವಿವೇಕ್ ಬರೆದಿರುವ ಭಾವ ಕುಸುಮ ಕವನ ಸಂಕಲನ ಲೋಕಾರ್ಪಣೆ ಮಾಡಲಾಗುತ್ತದೆ. ಮಧ್ಯಾಹ್ನ ಮೇಲೆ ನಡೆಯುವ ವಿಚಾರಗೋಷ್ಠಿಯಲ್ಲಿ ಲೋಕ ಮೆಚ್ಚ್‌ನ ಕೊಡವ ಸಂಸ್ಕೃತಿ ವಿಷಯದ…

Read More

ಮಡಿಕೇರಿ ಜೂ.8 : ಕೊಡಗು ಜಿಲ್ಲಾ ಕಿವುಡರ ಸಂಘದ ಆಡಳಿತ ಮಂಡಳಿಯ ವಾರ್ಷಿಕ ಮಹಾಸಭೆಯು ಜೂ.26 ರಂದು ನಡೆಯಲಿದೆ. ವಿರಾಜಪೇಟೆಯ ಪುರಸಭೆಯ ಸಭಾಂಗಣದಲ್ಲಿ ಬೆಳಿಗ್ಗೆ 10.30ಕ್ಕೆ ಸಭೆ ನಡೆಯಲಿದ್ದು, ಕರ್ನಾಟಕ ರಾಜ್ಯ ಕಿವುಡರ ಸಂಘದ ಅಧ್ಯಕ್ಷ ಗಣೇಶ್ ರಾವ್ ಮಾತನಾಡಲಿದ್ದಾರೆ. ಸರ್ವ ಸದಸ್ಯರು ಸಭೆಗೆ ಹಾಜರಾಗುವಂತೆ ಸಮಿತಿ ಉಪಾಧ್ಯಕ್ಷ ಶಂಕರನಾರಾಯಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 9632759874 ಸಂಪರ್ಕಿಸಬಹುದಾಗಿದೆ.

Read More

ಮಡಿಕೇರಿ ಜೂ.8 : ಎಸ್‌.ಕೆ.ಎಸ್.ಎಸ್.ಎಫ್ ಕಂಡಕರೆ ಯೂನಿಟ್ ವತಿಯಿಂದ ಕಂಡಕರೆಯ ಹಯಾತುಲ್ ಇಸ್ಲಾಂ ಮದರಸದ ಆವರಣದಲ್ಲಿ ಮಜ್ಲಿಸುನ್ನೂರ್ ಮೊದಲನೇ ವಾರ್ಷಿಕೋತ್ಸವ ಸಂಭ್ರಮದಿಂದ  ನಡೆಯಿತು. ಮಜ್ಲಿಸುನ್ನೂರ್ ನೇತೃತ್ವ ವಹಿಸಿ ಮಾತನಾಡಿದ, ಹಾಫಿಳ್ ಸಯ್ಯಿದ್ ಅಬ್ದುಲ್ ಖಾದಿರಿ ಪಟ್ಟಾಂಬಿ, ಮನಸ್ಸು ಶುದ್ಧೀಕರಣಗೊಳಿಸಿದರೆ ಮಾತ್ರ, ನಾವು ಮಾಡುವ ಆರಾಧನಾ ಕರ್ಮಗಳು ಸ್ವೀಕಾರಾರ್ಹವಾಗುವುದು. ಮನುಷ್ಯರು ಮನಸ್ಸಿನಲ್ಲಿ, ದ್ವೇಷ,ಅಸೂಯೆಯನ್ನು ತ್ಯಜಿಸಿ ದೇವರಿಗೆ ಹತ್ತಿರವಾಗಿ ಬಡವರಿಗೆ ಸಹಾಯ ಹಸ್ತ ನೀಡಬೇಕಾಗಿದೆ ಎಂದು ಕರೆ ನೀಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೊಡಗು ಜಿಲ್ಲಾ ನಾಯಿಬ್ ಖಾಝಿ ಅಬ್ದುಲ್ಲ ಫೈಜಿ ಎಡಪಲಾ ಹಾಗೂ ಕಂಡಕರೆ ಮಹಲ್ ಖತೀಬ್ ಮುಸ್ತಫಾ ಸಖಾಫಿ‌ ಶುಭಕೋರಿದರು. ಎಸ್‌.ಕೆ.ಎಸ್.ಎಸ್.ಎಫ್ ಕಂಡಕರೆ ಯೂನಿಟ್ ವತಿಯಿಂದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಕಂಡಕರೆಯ ವಿದ್ಯಾರ್ಥಿ ಸಿ.ಎಂ.ಮುಜಮ್ಮಿಲ್ ಅವರಿಗೆ ಪ್ರೋತ್ಸಾಹ ಧನ ನೀಡಿ ಸನ್ಮಾನಿಸಲಾಯಿತು. ಅದೇ ರೀತಿಯಲ್ಲಿ ಹಾಫಿಳ್ ಸಯ್ಯಿದ್ ಅಬ್ದುಲ್ ಖಾದಿರಿ ಫೈಜಿ ಪಟ್ಟಾಂಬಿ, ಅಬ್ದುಲ್ಲಾ ಫೈಜಿ ಹಾಗೂ ಮುಸ್ತಫಾ ಸಖಾಫಿ ಅವರನ್ನು ಎಸ್.ಕೆ.ಎಸ್.ಎಸ್.ಎಫ್‌‌ ಕಂಡಕರೆ ಯೂನಿಟ್ ವತಿಯಿಂದ ಶಾಲು…

Read More

ಮಡಿಕೇರಿ ಜೂ.8 : ಮುಂಗಾರು ಅವಧಿಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮವಾಗಿ ಎನ್‍ಡಿಆರ್‍ಎಫ್ ತಂಡವು ಮಡಿಕೇರಿಗೆ ಆಗಮಿಸಿದೆ. ಇನ್ಸ್‍ಪೆಕ್ಟರ್ ಶಾಂತಿಲಾಲ್ ಜಾಟಿಯಾ ನೇತೃತ್ವದಲ್ಲಿ 23 ಸಿಬ್ಬಂದಿಯ ತಂಡ ಆಗಮಿಸಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.

Read More

ಮಡಿಕೇರಿ ಜೂ.8 : ಚೆಟ್ಟಳ್ಳಿ ಗ್ರಾ.ಪಂ  ವತಿಯಿಂದ ಪಂಚಾಯಿತಿ ಸಭಾಂಗಣದಲ್ಲಿ ಆಕ್ಯುಾಪ್ರೆಶರ್ ಮತ್ತು ಫಿಜಿಯೋ ತೆರಪಿ ಚಿಕಿತ್ಸಾ ಶಿಬಿರ ನಡೆಯಿತು. ಚೆಟ್ಟಳ್ಳಿ ಗ್ರಾ.ಪಂ ಅಧ್ಯಕ್ಷ ಪಿ.ಟಿ.ಮುತ್ತಪ್ಪ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹೆಚ್.ಈ. ರಾಕೇಶ್ ಉದ್ಘಾಟಿಸಿದರು.  ಈ ಸಂದರ್ಭ ಮೈಸೂರು ಜಿಲ್ಲಾ ಪ್ರಕೃತಿ ಸಂಸ್ಥೆಯ ಚಿಕಿತ್ಸಕ ಆರ್ .ಸತ್ಯೆಶ್ ಹಾಗೂ ಗ್ರ‍ಾ.ಪಂ ಸದಸ್ಯೆ ಪೊರಿಮಂಡ ತಂಗಮ್ಮ ಕಾರ್ಯಕ್ರಮದಲ್ಲಿ ಹಾಜರಿದ್ದರು. ಶಿಬಿರದಲ್ಲಿ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಲಾಯಿತು. ಜೂ.7 ರಿಂದ ಒಂದು ತಿಂಗಳ ಕಾಲ ಚೆಟ್ಟಳ್ಳಿ ಗ್ರಾ.ಪಂ  ಸಭಾಂಗಣದಲ್ಲಿ ನಡೆಯುವ ಆಕ್ಯುಾ ಪ್ರೆಶರ್ ಮತ್ತು ಫಿಜಿಯೋತೆರಪಿ ಚಿಕಿತ್ಸಾ ಶಿಬಿರ  ನಡೆಯಲಿದ್ದು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳ ಬೇಕೆಂದು ಆಯೋಜಕರು ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ- 9916224330 ಸಂಪರ್ಕಿಸಬಹುದಾಗಿದೆ.

Read More

ವಿರಾಜಪೇಟೆ ಜೂ.8 : ಪ್ರತಿಯೊಬ್ಬರೂ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಮೂಲಕ ಉತ್ತಮ ಜೀವನವನ್ನು ಪಡೆದುಕೊಳ್ಳಬೇಕು ಎಂದು ಸೌಭಾಗ್ಯ ವಿಕಲಚೇತನರ ಸೇವಾ ಟ್ರಸ್ಟಿನ ಅಧ್ಯಕ್ಷ ಸಾಯಿನಾಥ್ ನಾಯಕ್ ಅಭಿಪ್ರಾಯಪಟ್ಟರು. ಕೊಡಗು ಆಯುರ್ವೇದ ಕೇಂದ್ರ ಹಾಗೂ ಸೌಭಾಗ್ಯ ವಿಕಲಚೇತನರ ಸೇವಾ ಟ್ರಸ್ಟ್(ರಿ) ವತಿಯಿಂದ ವಿರಾಜಪೇಟೆ ಪುರಭವನದಲ್ಲಿ ನಡೆದ ಹಿರಿಯ ನಾಗರೀಕರು ಹಾಗೂ ವಿಶೇಷ ಚೇತನರಿಗಾಗಿ ವಿಶೇಷ ಆರೋಗ್ಯ ತಪಾಸಣಾ ಶಿಬಿರವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಈ ಶಿಬಿರವನ್ನು ಆಯೋಜಿಸಲಾಗಿದೆ. ಶಿಬಿರದ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳುವಂತಾಗಬೇಕು ಎಂದು ಹೇಳಿದರು. ವಿರಾಜಪೇಟೆ ಗ್ರಾಮಾಂತರ ಠಾಣಾಧಿಕಾರಿ ರವಿಕುಮಾರ್ ಮಾತನಾಡಿ, ಮನುಷ್ಯನ ಜೀವನದಲ್ಲಿ ಆರೋಗ್ಯ ಚೆನ್ನಾಗಿದ್ದರೇ ಮಿಕ್ಕ ಎಲ್ಲವೂ ಚೆನ್ನಾಗಿರುತ್ತವೆ. ಪ್ರತಿ ಎರಡು ತಿಂಗಳಿಗೊಮ್ಮೆ ಹಿರಿಯ ನಾಗರೀಕರು ಹಾಗೂ ವಿಶೇಷ ಚೇತನರಿಗೋಸ್ಕರ ಶಿಬಿರ ನಡೆಯಲಿದ್ದು, ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಪ್ರತಿಯೊಬ್ಬರು ಅವರ ದೇಹದ ಅಂಗಾಂಗಗಳ ಸ್ಥಿತಿಗತಿ ತಿಳಿದುಕೊಂಡು ಅದಕ್ಕೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ ಎಂದು ಸಲಹೆ…

Read More