ಮಡಿಕೇರಿ ಜೂ.6 : ಮಾದಕ ವಸ್ತುವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಜಿಲ್ಲಾ ಪೊಲೀಸರು ಬಂಧಿಸಿರುವ ಘಟನೆ ಎಂ.ಬಾಡಗ ಗ್ರಾಮದಲ್ಲಿ ನಡೆದಿದೆ. ಮೂರ್ನಾಡು ನಿವಾಸಿ ಅಲ್ತಾಫ್ ಹುಸೇನ್ (34) ಎಂಬಾತನೆ ಬಂಧಿತ ವ್ಯಕ್ತಿಯಾಗಿದ್ದು, ಈತನ ಬಳಿಯಲ್ಲಿದ್ದ 12.150 ಗ್ರಾಂ ಎಂಡಿಎಂಎ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ. ಜಿಲ್ಲಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಮಾರಾಟದ ಬಗ್ಗೆ ನಮ್ಮ ಕಛೇರಿ ಠಾಣೆಗಳಿಗೆ ಸಾರ್ವಜನಿಕರಿಂದ ದೂರು ಬರುತ್ತಿರುವ ಹಿನ್ನೆಲೆ ಮಡಿಕೇರಿ ಉಪವಿಭಾಗದ ಡಿವೈಎಸ್‍ಪಿ ಎಂ.ಜಗದೀಶ್, ಮಡಿಕೇರಿ ಗ್ರಾಮಾಂತರ ಠಾಣೆ ವೃತ್ತ ನಿರೀಕ್ಷಕ ಉಮೇಶ್.ಯು., ಮಡಿಕೇರಿ ಗ್ರಾಮಾಂತರ ಠಾಣಾ ಪಿಎಸೈ ಶ್ರೀನಿವಾಸಲು ಹಾಗೂ ಸಿಬ್ಬಂದಿಗಳ ತಂಡವನ್ನು ಎಸ್‍ಪಿ ಅವರ ಮಾರ್ಗದರ್ಶನದಲ್ಲಿ ರಚಿಸಲಾಗಿದೆ. ಈ ತಂಡ ದೊರೆತ ಖಚಿತ ಮಾಹಿತಿಯನ್ನು ಆಧರಿಸಿ ಎಂ.ಬಾಡಗ ಗ್ರಾಮದ ಕಿಗ್ಗಾಲು ರಸ್ತೆಯ ಜಂಕ್ಷನ್ ಬಳಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಅಲ್ತಾಫ್ ಹುಸೇನ್‍ನನ್ನು ಸ್ಥಳಕ್ಕೆ ದಾಳಿ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದೆ. ವಿಶೇಷ ಸೂಚನೆ : ಯುವಕ-ಯುವತಿಯರು ಮಾದಕ ವ್ಯಸನಿಗಳಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುವುದನ್ನು ತಡೆಗಟ್ಟುವ…
ಲೇಖಕ: admin
ಮಡಿಕೇರಿ ಜೂ.6 : ಕಾಂಗ್ರೆಸ್ ಸರ್ಕಾರ ಜನವಿರೋಧಿ ನೀತಿಯನ್ನು ಖಂಡಿಸಿ ಕೊಡಗು ಜಿಲ್ಲಾ ಬಿಜೆಪಿ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು. ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಪ್ರಮುಖರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ನೇತೃತ್ವದ ಸರ್ಕಾರದ ವಿರುದ್ಧ ಘೋಷಣೆಯನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಹಿಂದು ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದು, ಜನರ ಅಭಿವ್ಯಕ್ತಿ ಹಾಗೂ ವಾಕ್ ಸ್ವಾತಂತ್ರವನ್ನು ಕಿತ್ತುಕೊಳ್ಳುತ್ತಿದೆ ಎಂದು ಆರೋಪಿಸಿದರು. ಎಲ್ಲಾ ಬಸ್‍ಗಳಲ್ಲಿ ಮಹಿಳೆಯರಿಗೆ ಉಚಿತ ಎಂದು ಹೇಳಿ ಇದೀಗ ಕೆಂಪು ಬಸ್‍ಗಳಲ್ಲಿ ಅರ್ಹ ಮಹಿಳೆಯರಿಗೆ ಮಾತ್ರ ಅವಕಾಶ ಎಂದು ಹೇಳಲಾಗುತ್ತಿದೆ. ಐದು ಗ್ಯಾರಂಟಿ ಆಧಾರದಲ್ಲಿ ಮತವನ್ನು ಪಡೆದು ಅಧಿಕಾರಕ್ಕೆ ಬಂದ ನಂತರ ನುಣಿಚಿಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ ಎಂದು ದೂರಿದರು. 200 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡುವುದಾಗಿ ಪ್ರಣಾಳಿಕೆಯಲ್ಲಿ ಹೇಳಿ ಇದೀಗ ಹಲವಾರು ನೀತಿಯ ಪಾಲನೆ ಮಾಡುವಂತೆ ಹೇಳಿದೆ. ಅಲ್ಲದೇ ಯಾರಿಗೂ…
ಕೊಡ್ಲಿಪೇಟೆ ಜೂ.6 : “ನೆಟ್ಟು ಬೆಳೆಸೋಣ, ಫಲಗಳನ್ನು ಪಡೆಯೋಣ” ಎಂಬ ಧ್ಯೇಯ ವಾಕ್ಯದೊಂದಿಗೆ ಎಸ್‌ಕೆಎಸ್‌ಎಸ್‌ಎಫ್ ಹಾಗೂ ಎಸ್‍ವೈಎಸ್ ಕೊಡ್ಲಿಪೇಟೆ ಶಾಖೆಯ ವತಿಯಿಂದ ವಿಶ್ವ ಪರಿಸರ ದಿನದ ಅಂಗವಾಗಿ ಸಮೀಪದ ತಜಲ್ಲಿಯಾತ್ ಮದರಸದ ಮುಂಭಾಗ ಗಿಡ ನೆಡುವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ತಜಲ್ಲಿಯಾತ್ ಮದರಸ ಮುಖ್ಯೋಪಾಧ್ಯಾಯರಾದ ರಝಾಕ್ ಫೈಝಿ, ಹಿರಿಯರಾದ ಕತರ್ ಮೋನು, ಎಸ್‌ಕೆಎಸ್‌ಎಸ್‌ಎಫ್ ಕೊಡ್ಲಿಪೇಟೆ ಶಾಖಾಧ್ಯಕ್ಷರಾದ ಬಾಸಿತ್ ಹಾಜಿ, ಪ್ರಧಾನ ಕಾರ್ಯದರ್ಶಿ ತಫ್ಸೀರ್ ಹಾಗೂ ಇತರ ಕಾರ್ಯಕರ್ತರುಗಳು ಭಾಗವಹಿಸಿದ್ದರು.
ಮಡಿಕೇರಿ ಜೂ.6 : ಕೊಡವ ಕೂಟಾಳಿಯಡ ಕೂಟ ಸಂಘಟನೆಯ ವತಿಯಿಂದ ಕೊಡವ ಮಕ್ಕಳಿಗಾಗಿ 3ನೇ ವರ್ಷದ “ಕೊಡಗ್’ರ ಚುಪ್ಪಿ ಕೋಗಿಲೆಯ” ಎಂಬ ಗಾಯನ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. 15 ವರ್ಷದೊಳಗಿನ ಕೊಡವ ಮಕ್ಕಳು ಯಾವುದೇ ಮ್ಯೂಸಿಕ್, ಕರೋಕೆ, App ಬಳಸದೇ 3 ನಿಮಿಷದ ಒಳಗೆ ಹಾಡಿದ ಕೊಡವ ಭಾಷೆಯ ಹಾಡನ್ನು ದಿನಾಂಕ 25-6-2023 ರರೊಳಗಾಗಿ 9972538030 ವಾಟ್ಸಪ್ ಸಂಖ್ಯೆಗೆ ಕಳಿಸಬಹುದು. ಎರಡು ಸುತ್ತಿನಲ್ಲಿ ನಡೆಯುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ವಿಜೇತರಾದವರಿಗೆ ಬಿರುದು ಹಾಗೂ ಪ್ರಥಮ ದ್ವಿತೀಯ ತೃತೀಯ ಸ್ಥಾನ ವಿಜೇತರಿಗೆ ನಗದು ಬಹುಮಾನ ಮತ್ತು ಎರಡನೇ ಸುತ್ತಿನಲ್ಲಿ ಭಾಗವಹಿಸಿದ ಸ್ಪರ್ಧಿಗಳಿಗೆ ಅಭಿನಂದನಾ ಪತ್ರ ನೀಡಲಾಗುವುದು. ಸ್ಪರ್ಧೆಯ ಮತ್ತಷ್ಟು ಮಾಹಿತಿ ಮತ್ತು ನಿಯಮಗಳಿಗಾಗಿ ಸಂಘಟನೆಯ ಅಧ್ಯಕ್ಷೆ ಚಿಮ್ಮಚಿರ ಪವಿತ ರಜನ್-9663267249 , ಕಾರ್ಯದರ್ಶಿ ಚೆಟ್ಟೋಳಿರ ಶರತ್ ಸೋಮಣ್ಣ -9972538030 ಸಂಪರ್ಕಿಸಬಹುದು ಎಂದು ಕೂಟದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮಡಿಕೇರಿ ಜೂ.6 : ಕರ್ನಾಟಕ ಅರಣ್ಯ ಇಲಾಖೆ ಭಾಗಮಂಡಲ ವಲಯ ಮತ್ತು ಕೆವಿಜಿ ಐಟಿಐ ಸಹಯೋಗದಲ್ಲಿ ಕೆವಿಜಿ ಕೈಗಾರಿಕಾ ತರಬೇತಿ ಸಂಸ್ಥೆಯ ಆವರಣದಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಲಯ ಅರಣ್ಯಾಧಿಕಾರಿ ರವೀಂದ್ರ ಮಾತನಾಡಿ, ಅರಣ್ಯ ಇಲಾಖೆ, ಪರಿಸರ ಮತ್ತು ಮನುಷ್ಯನ ನಡುವಿನ ಸಂಬಂಧ, ಪರಿಸರ ದಿನಾಚರಣೆ ಮಹತ್ವವನ್ನು ಹೇಳಿದರು. ಈ ಸಂದರ್ಭದಲ್ಲಿ ಇಲಾಖೆ ವತಿಯಿಂದ ವಿತರಿಸಲಾದ ಗಿಡಗಳನ್ನು ಸಂಸ್ಥೆ ಆವರಣದಲ್ಲಿ ವಿದ್ಯಾರ್ಥಿಗಳ ನೇತೃತ್ವದಲ್ಲಿ ನೆಡಲಾಯಿತು. ಕಾರ್ಯಕ್ರಮದಲ್ಲಿ ಉಪವಲಯ ಅರಣ್ಯ ಅಧಿಕಾರಿಗಳಾದ ಶ್ರೀಧರ್, ನಂದಿನಿ, ಭಾಗಮಂಡಲ ಅರಣ್ಯ ಇಲಾಖೆ ಸಿಬ್ಬಂದಿಗಳು ಮತ್ತು ಕೈಗಾರಿಕಾ ತರಬೇತಿ ಸಂಸ್ಥೆಯ ಬೋಧಕ ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಜರಿದ್ದರು.
ನಾಪೋಕ್ಲು ಜೂ.7 : ನಾಪೋಕ್ಲು ವಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಶಾಲೆಯಲ್ಲಿ ನಡೆದ ಕಾರ್ಯಕ್ರಮವನ್ನು ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್ ಗಿಡ ನೆಡುವುದರ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಪರಿಸರ ದಿನಾಚರಣೆಯು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಿರಬಾರದು, ಪರಿಸರವನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ, ಗಿಡವನ್ನು ನೆಟ್ಟರೆ ಸಾಲದು ಅದು ಬೆಳೆಯುವ ತನಕ ಅದನ್ನು ಪೋಶಿಸುವಂತ್ತಾಗಬೇಕು ಎಂದರು.ಪ್ರತಿಯೊಬ್ಬರು ತಮ್ಮ ಶಾಲೆ ಮತ್ತು ಮನೆಯ ಸುತ್ತಮುತ್ತಲಿನ ವಠಾರದಲ್ಲಿ ಗಿಡಗಳನ್ನು ನೆಟ್ಟು ಪರಿಸರವನ್ನು ಕಾಪಾಡಬೇಕು.ಅದರಂತೆ ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿತ್ವವನ್ನು ಹೊಂದಿಕೊಳ್ಳಬೇಕೆಂದು ಸಲಹೆ ನೀಡಿದರು.ಬಳಿಕ ಶಾಲೆಯ ವಠಾರ ಹಾಗೂ ತರಗತಿಗಳನ್ನು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಅವರು ವಿದ್ಯಾರ್ಥಿಗಳಿಗೆ ಸಿಹಿ ಹಂಚಿ ಶುಭ ಹಾರೈಸಿದರು. ಶಾಲೆಯ ಆಡಳಿತ ಮಂಡಳಿ ಉಪಾಧ್ಯಕ್ಷ ಕೆ. ಎ. ಹಾರಿಸ್ ದಿನದ ಮಹತ್ವದ ಕುರಿತು ಮಾತನಾಡಿದರು. ಬಳಿಕ ಶಾಲಾ ವಠಾರದಲ್ಲಿ ವಿವಿಧ ತಳಿಯ ಮರದ ಸಸ್ಯಗಳನ್ನು ನೆಡಲಾಯಿತು.…
ಮಡಿಕೇರಿ ಜೂ.6 : ನಗರಕ್ಕೆ ಕುಡಿಯುವ ನೀರು ಸರಬರಾಜಾಗುವ ಕೂಟುಹೊಳೆ ಜಾಕ್‍ವೆಲ್‍ನಲ್ಲಿರುವ 300 ಎಚ್.ಪಿಯ ಪಂಪು ಮತ್ತು ಮೋಟಾರು ತಾಂತ್ರಿಕ ದೋಷಗಳು ಮತ್ತು ವಿದ್ಯುತ್ ವ್ಯತ್ಯಯದಿಂದ ಅನಿವಾರ್ಯವಾಗಿ ದುರಸ್ತಿಯಾಗಿದೆ. ಈ ಸಂಬಂಧ ಮೋಟಾರನ್ನು ಸರಿಪಡಿಸಲು ಮೈಸೂರಿಗೆ ಕಳುಹಿಸಲಾಗಿದೆ. ಮೋಟಾರನ್ನು ಸರಿಪಡಿಸಿ ಅಳವಡಿಸಲು ಕನಿಷ್ಠ ಎರಡು ದಿನಗಳ ಕಾಲವಕಾಶಬೇಕಿದ್ದು, ಈ ಹಿನ್ನೆಲೆಯಲ್ಲಿ ಎರಡು ದಿನಗಳು ಕುಡಿಯುವ ನೀರು ಸರಬರಾಜು ಇರುವುದಿಲ್ಲ. ಆದರೆ 90 ಎಚ್.ಪಿ.ಪಂಪ್ ಮೋಟಾರ್‍ನಿಂದ ನೀರು ಸರಬರಾಜು ಆಗುತ್ತಿದ್ದು, ಇದರೊಂದಿಗೆ ಕೈಪಂಪು ಮತ್ತು ಕೊಳವೆ ಬಾವಿಗಳಿಂದ ಬರುವ ನೀರನ್ನು ಮಿತವಾಗಿ ಬಳಸಿಕೊಂಡು ನಗರಸಭೆಯೊಂದಿಗೆ ಸಹಕರಿಸುವಂತೆ ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ ಮತ್ತು ಪೌರಾಯುಕ್ತ ವಿಜಯ ತಿಳಿಸಿದ್ದಾರೆ.
ಮಡಿಕೇರಿ ಜೂ.6 : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಬ್ಯಾಂಕ್ ಅಧಿಕಾರಿಗಳ ಮತ್ತು ಗುಮಾಸ್ತರ ಹುದ್ದೆಗಳಿಗೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 45 ದಿನಗಳ ತರಬೇತಿಯು ಜೂ.8 ರಂದು ಆರಂಭವಾಗಲಿದೆ. ಆಸಕ್ತರು ಜೂ.7 ರೊಳಗೆ ಬೆಳಗ್ಗೆ 10 ರಿಂದ ಸಂಜೆ 5 ಗಂಟೆ ವರೆಗೆ ಮೈಸೂರಿನಲ್ಲಿರುವ ಕೇಂದ್ರ ಕಚೇರಿಗೆ ಆಗಮಿಸಿ ಹೆಸರು ನೋಂದಾಯಿಸಿ ತರಬೇತಿ ಪಡೆಯಬಹುದು. ಹೆಚ್ಚಿನ ವಿವರಗಳಿಗೆ ದೂ.ಸಂ.0821-2515944, 9964760090 ಸಂಪರ್ಕಿಸಬಹುದು ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕರಾಮುವಿ ಕುಲಸಚಿವರು ತಿಳಿಸಿದ್ದಾರೆ.
ಮಡಿಕೇರಿ ಜೂ.6 : ಪ್ರಸಕ್ತ(2023-24) ಸಾಲಿನ ಭಾರತ ಸರ್ಕಾರದ ಪ್ರಧಾನಮಂತ್ರಿ ಉದ್ಯೋಗ ಸೃಜನ (ಪಿಎಂಇಜಿಪಿ) ಕಾರ್ಯಕ್ರಮದಡಿಯಲ್ಲಿ ಉತ್ಪಾದನಾ/ ಸೇವಾ ಘಟಕಗಳಿಗೆ ಸಾಲ ಸೌಲಭ್ಯ ಪಡೆಯಲು ಎಲ್ಲಾ ವರ್ಗದ ಹೊಸದಾಗಿ ಸ್ವಂತ ಉದ್ಯೋಗ ಆರಂಭಿಸುವ ನಿರುದ್ಯೋಗಿ ಯುವಕ, ಯುವತಿಯರಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಸ್ವಉದ್ಯೋಗ ಮಾಡಿಕೊಳ್ಳುವವರಿಗೆ ಪಟ್ಟಣ, ನಗರ, ಗ್ರಾಮೀಣ ಪ್ರದೇಶದಲ್ಲಿ ಹೊಸ ಉದ್ದಿಮೆ ಘಟಕಗಳನ್ನು ಸ್ಥಾಪಿಸುವವರಿಗೆ ಬ್ಯಾಂಕಿನಿಂದ ಗರಿಷ್ಠ 50 ಲಕ್ಷಗಳವರೆಗೆ ಸಾಲವನ್ನು ನೀಡಿ ಗರಿಷ್ಠ ಶೇ.25 ರಿಂದ 35 ರವರೆಗೆ ಸಹಾಯಧನ ನೀಡಲಾಗುವುದು. ಕಾಫಿ ಗ್ರೈಂಡಿಂಗ್, ಪ್ಲೋರ್ ಮಿಲ್, ಸಿಮೆಂಟ್ ಬ್ಲಾಕ್ಸ್, ವರ್ಮಿ ಕಾಂಪೋಸ್ಟ್, ಜೇನು ಕೃಷಿ, ಎಣ್ಣೆ ತಯಾರಿಕೆ, ರಬ್ಬರ್, ಪಶು ಆಹಾರ, ಜ್ಯೂಸ್ ತಯಾರಿಕೆ, ರೆಡಿಮೇಡ್ ಗಾರ್ಮೇಂಟ್ಸ್, ಫ್ಲಕ್ಸ್ ಅಂಡ್ ಪ್ರಿಂಟಿಂಗ್ ಪ್ರೆಸ್, ಬ್ಯೂಟಿ ಪಾರ್ಲರ್, ಸಲೂನ್, ಎಕ್ಸ್-ರೇ ಸ್ಕ್ಯಾನಿಂಗ್, ಮೆಡಿಕಲ್, ಲ್ಯಾಬ್, ಡೆಂಟಲ್ ಲ್ಯಾಬ್, ಅಡಿಕೆ ಮತ್ತು ಪೇಪರ್ ಪ್ಲೇಟ್ಸ್, ಶಾಮಿಯಾನ, ಸೆಂಟ್ರಿಂಗ್ ವಕ್ರ್ಸ್, ಎಂಜಿನಿಯರಿಂಗ್ ವಕ್ರ್ಸ್, ವೆಲ್ಡಿಂಗ್, ವಾಟರ್ ಸರ್ವೀಸ್ ಸ್ಟೇಷನ್, ಹಸು,…
ಮಡಿಕೇರಿ ಜೂ.6 : ವಿರಾಜಪೇಟೆ ತಾಲ್ಲೂಕಿನಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಕ್ಕೆ 2023-24 ನೇ ಸಾಲಿಗೆ ಆಸಕ್ತ ಮತ್ತು ಅರ್ಹ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಶೇ.75 ಸ್ಥಾನಗಳು ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗ ಮತ್ತು ಉಳಿದ ಶೇ.25 ಸ್ಥಾನಗಳು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಲಭ್ಯವಿದೆ. ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳಿಗೆ 5 ನೇ ತರಗತಿಯಿಂದ 10 ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿಯನ್ನು ಆನ್‍ಲೈನ್ ಮೂಲಕ ಸಲ್ಲಿಸಬಹುದಾಗಿದೆ. ವಿದ್ಯಾರ್ಥಿ ನಿಲಯಗಳಲ್ಲಿ ವಾರದ 7 ದಿನಗಳಲ್ಲಿ ಪೌಷ್ಠಿಕಯುಕ್ತ ಊಟ ತಿಂಡಿ ವ್ಯವಸ್ಥೆ, ಉಚಿತವಾಗಿ ವಸತಿ, ಪುಸ್ತಕ, ಲೇಖನ ಸಾಮಗ್ರಿ, ಸಮವಸ್ತ್ರ, ಶೂ ಮತ್ತು ಸಾಕ್ಸ್ ವಿತರಣೆ, ವೈದ್ಯಕೀಯ ತಪಾಸಣೆ, ಅಂಶಕಾಲಿಕ ಬೋಧಕರಿಂದ ವಿಶೇಷ ಬೋಧನೆ ವ್ಯವಸ್ಥೆ, ಡಿಜಿಟಲ್ ಗ್ರಂಥಾಲಯ ವ್ಯವಸ್ಥೆ, ಬಾಲಕಿಯರಿಗೆ ಒನಕೆ ಓಬವ್ವ ಆತ್ಮ ರಕ್ಷಣಾ ಕೌಶಲ್ಯ ತರಬೇತಿಯನ್ನು ನೀಡಲಾಗುವುದು. ನಿಲಯಗಳ ವಿವರ ನೀಡಲಾಗಿದೆ. ಹೊಸದಾಗಿ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಸಮಾಜ ಕಲ್ಯಾಣ ಇಲಾಖೆಯ ವೆಬ್‍ಸೈಟ್…






