ನಾಪೋಕ್ಲು ಜೂ.1 : ಹೊದವಾಡ ಗ್ರಾಮದ ಶ್ರೀ ಭಗವತಿ ಅಮ್ಮೆರಪ್ಪ ದೇವಾಲಯದ ಜೀರ್ಣೋದ್ಧಾರ ಹಾಗೂ ಪ್ರತಿಷ್ಠಾಪನ ಅಷ್ಟಮಂಗಲ ಮಹೋತ್ಸವವು ಆರಂಭಗೊಂಡಿತು. ಪ್ರತಿಷ್ಠಾಪನ ಮಹೋತ್ಸವದ ಅಂಗವಾಗಿ ಸಂಜೆ ದೇವಾಲಯದಲ್ಲಿ ವಾಸ್ತು ಹೋಮ, ವಾಸ್ತು ಬಲಿ ಹಾಗೂ ವಾಸ್ತು ಕಲಶಾ ಪೂಜೆಗಳು ಜರುಗಿತು. ಬೆಳಿಗ್ಗೆ ಗಣ ಹೋಮ, ಅನುಜ್ಞಾ ಕಲಶ ಪೂಜೆ, ಅನುಜ್ಞಾ ಕಳಸಾಭಿಷೇಕ, ಜೀವ ಕಲಶ ಹಾಗೂ ಬಿಂಬಶುದ್ಧಿ ಕಳಶ ಪೂಜೆಗಳು ಜರುಗಿ ಸಂಜೆ ಆದಿವಾಸ ಹೋಮ ಹಾಗೂ ಮಂಡಲ ಪೂಜೆಗಳು ನೆರವೇರಿಸಲಾಯಿತು. ದೇವಾಲಯವು ಸುಮಾರು 600 ವರ್ಷಗಳ ಇತಿಹಾಸವನ್ನು ಹೊಂದಿದ್ದು, ರಾಜರ ಕಾಲದಲ್ಲಿ ಕಟ್ಟಲ್ಪಟ್ಟದ್ದಾಗಿರುತ್ತದೆ. ದೇವಾಲಯದ ಜೀರ್ಣೋದ್ಧಾರಕ್ಕಾಗಿ ಗ್ರಾಮಸ್ಥರು ಹಾಗೂ ದಾನಿಗಳು ಧನಸಹಾಯವನ್ನು ನೀಡಿದ್ದಾರೆ. ದೇವಾಲಯದ ಜೀರ್ಣೋದ್ಧಾರದ ಜೊತೆಗೆ ಗಣಪತಿ ಗುಡಿ ಹಾಗೂ ಸುಬ್ರಮಣ್ಯ ಗುಡಿಗಳನ್ನು ನಿರ್ಮಿಸಲಾಗಿದೆ. ದೇವಸ್ಥಾನದ ಪ್ರತಿಷ್ಠಾಪನ ಅಷ್ಟಬಂಧ ಬ್ರಹ್ಮಕಲಶ ಮೂರು ದಿನಗಳ ಕಾಲ ನಡೆಯಲಿದ್ದು, ಪೂಜಾ ಕೈಂಕರ್ಯಗಳನ್ನು ಕೇರಳದ ಪಾಲೆಘಾಟ್ನ ಶ್ರೀ ನಾರಾಯಣ ತಂತ್ರಿ ನೆರವೇರಿಸಲಿರುವರು. ಕಾರ್ಯಕ್ರಮದಲ್ಲಿ ದೇವಾಲಯದ ತಕ್ಕ ಮುಖ್ಯಸ್ಥರು ಜೀರ್ಣೋದ್ಧಾರ ಸಮಿತಿ ಪ್ರಮುಖರು ಹಾಗೂ…
ಲೇಖಕ: admin
ನಾಪೋಕ್ಲು ಜೂ.1 : ಮೂರ್ನಾಡಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಕಾಲೇಜು ವಾಣಿಜ್ಯ ಫೆಸ್ಟ್ ಕಾಲೇಜಿನ ಸಭಾಂಗಣದಲ್ಲಿ ಜರುಗಿತು. ಈ ಸಂದರ್ಭ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು ನಡೆಯಿತು. ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಫೀಲ್ಡ್ ಮಾರ್ಷಲ್ ಕೆಎಂ ಕಾರ್ಯಪ್ಪ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಚೌರಿರ ಡಾ. ಜಗತ್ ತಿಮ್ಮಯ್ಯ ಮಾತನಾಡಿ, ಇಂತಹ ಕಾರ್ಯಕ್ರಮ ಪ್ರತಿ ವಿದ್ಯಾರ್ಥಿಗಳಲ್ಲಿ ಉತ್ಸಾಹವನ್ನು ತುಂಬುತ್ತದೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ವಿದ್ಯಾಸಂಸ್ಥೆಯ ಅಧ್ಯಕ್ಷ ಬಾಚಟ್ಟಿರ ಜಿ ಮಾದಪ್ಪ ವಿದ್ಯಾರ್ಥಿಗಳ ಪ್ರತಿಭೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ರೇಖಾ ಚಿಣ್ಣಪ್ಪ ಮಾತನಾಡಿ, ಪ್ರತಿ ವಿದ್ಯಾರ್ಥಿಯಲ್ಲೂ ಪ್ರತಿಭೆ ಇದ್ದೇ ಇರುತ್ತದೆ ಅದನ್ನು ಹೊರ ಸೂಸಲು ಇಂತಹ ವೇದಿಕೆಗಳ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಉಪಾಧ್ಯಕ್ಷರುಗಳಾದ ಪುದಿಯೋಕ್ಕಡ ಸುಬ್ರಮಣಿ, ಕಾರ್ಯದರ್ಶಿ ಪೆಮ್ಮಡಿಯಂಡ ವೇಣು ಅಪ್ಪಣ್ಣ, ಖಜಾಂಚಿ ಬಡುವಂಡ ಸುಬ್ರಮಣಿ ಹಾಗೂ ಕಾರ್ಯಕ್ರಮ ಸಂಯೋಜಕ ಉಪನ್ಯಾಸಕ ಸೋಮಯ್ಯ, ಮೂರ್ನಾಡು ವಿದ್ಯಾ ಸಂಸ್ಥೆಯ ಎಲ್ಲಾ ವಿಭಾಗದ ಮುಖ್ಯಸ್ಥರು, ವಿವಿಧ…
ಸುಂಟಿಕೊಪ್ಪ ಜೂ.1 : ಹುಲಿ ಚಾಮುಂಡೇಶ್ವರಿ ದೇವಾಲಯದ 8ನೇ ವರ್ಷದ ವಾರ್ಷಿಕೋತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು. ಶ್ರೀಚಾಮುಂಡಿ ಹೋಮ ಹಾಗೂ ಅಭಿಷೇಕ ಪೂಜೆ, ಅಲಂಕಾರ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ವಿಧಿವಿಧಾನಗಳ ಬಳಿಕ ಮಹಾಮಂಗಳಾರತಿ ನೆರವೇರಿತು. ನಂತರ ನೆರೆದಿದ್ದ ಭಕ್ತಾಧಿಗಳಿಗೆ ತೀರ್ಥ ಪ್ರಸಾದ ಹಾಗೂ ಅನ್ನ ಸಂತರ್ಪಣೆನಡೆಯಿತು. ಈ ಸಂದರ್ಭ ಸುಂಟಿಕೊಪ್ಪ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರುಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ವಾರ್ಷಿಕೋತ್ಸವದ ಅಂಗವಾಗಿ ವಿಶೇಷ ಪೂಜಾ ವಿಧಿವಿಧಾನಗಳನ್ನು ಅಂದಗೋವೆ ಗ್ರಾಮದ ಅರ್ಚಕ ಗಣೇಶ ಭಟ್ ಹಾಗೂ ಮಂಜುನಾಥ್ ಭಟ್ ನೆರವೇರಿಸಿದರು.
ಸುಂಟಿಕೊಪ್ಪ ಜೂ.1 : ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಯಲ್ಲಿ ಶಾಲೆ ಪ್ರಾರಂಭೋತ್ಸವವನ್ನು ಆಚರಿಸಲಾಯಿತು. ಶಾಲಾಭಿವೃದ್ಧಿ ಸಮಿತಿ ಹಾಗೂ ಶಿಕ್ಷಕರು ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಿ ಸ್ವಾಗತಿಸಿದರು. ಇದೇ ಸಂದರ್ಭ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ಹಾಗೂ ಸಮವಸ್ತ್ರವನ್ನು ವಿತರಿಸಿಸಲಾಯಿತು. ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಾಲೆಯ ಶಿಕ್ಷಕರು ಹಾಗೂ ಮಕ್ಕಳು ವಾದ್ಯಗೋಷ್ಠಿಯೊಂದಿಗೆ ಜಾಥದ ಮೂಲಕ ಶಿಕ್ಷಕಣದ ಕುರಿತು ಅರಿವು ಮೂಡಿಸಲಾಯಿತು. ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ರಫೀಕ್ ಖಾನ್, ಪಂಚಾಯಿತಿ ಸದಸ್ಯೆ ವಸಂತಿ, ಎಸ್‍ಡಿಎಂಸಿ ಸದಸ್ಯ ಶಿವಪ್ಪ, ಮುಖ್ಯೋಪಾದ್ಯಾಯನಿ ಗೀತಾ, ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಬಾಲಕೃಷ್ಣ, ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಸಿ.ಟಿಸೋಮಶೇಖರ್, ಲಿಯೋನ, ಪ್ರಕಾಶ್, ಸುನಂದ, ಚಿತ್ರ, ಶಾಂತಹೆಗ್ಡೆ, ಜಯಶ್ರೀ, ಪ್ರಾಥಮಿಕ ಶಾಲೆಯ ಶಿಕ್ಷಕರುಗಳಾದ ದೈಹಿಕ ಶಿಕ್ಷಣ ಶಿಕ್ಷಕ ಪಿ.ಇ.ನಂದ, ಸಹಶಿಕ್ಷಕರುಗಳಾದ ಸೌಭಾಗ್ಯ, ಚಂದ್ರವತಿ, ಉಷಾ, ಇಂದಿರಾ ಹಾಗೂ ಪೋಷಕರು ಹಾಜರಿದ್ದರು.
ಮಡಿಕೇರಿ ಜೂ. 1 : ನಗರದ ಹಾಪ್ ಕಾಮ್ಸ್ ಆವರಣದಲ್ಲಿ ಮೂರು ದಿನಗಳ ಕಾಲ ಆಯೋಜಿಸಲಾಗಿದ್ದ ಮಾವು ಮತ್ತು ಹಲಸು ಮೇಳ ಉತ್ತಮ ಯಶಸ್ಸು ಕಂಡಿದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕಾ ಇಲಾಖಾ ವತಿಯಿಂದ ನಡೆದ ಮೇಳದಲ್ಲಿ ರಾಜ್ಯದ ವಿವಿಧೆಡೆಗಳ ಮಾವು ಬೆಳೆಗಾರರು ಹಾಗೂ ಹಲಸು ಬೆಳೆಗಾರರು ತಮ್ಮ ಉತ್ಪನ್ನಗಳೊಂದಿಗೆ ಪಾಲ್ಗೊಂಡಿದ್ದು, ಜಿಲ್ಲೆಯ ಜನರಿಂದ ಉತ್ತಮ ಸ್ಪಂದನೆ ದೊರೆತಿದೆ. ಮೂರು ದಿನಗಳಲ್ಲಿ ಸುಮಾರು 6 ಸಾವಿರದಿಂದ 17 ಸಾವಿರದಷ್ಟು ಮಂದಿ ಭಾಗಿಗಳಾಗಿ ವಹಿವಾಟು ನಡೆಸಿದ್ದಾರೆ. 21 ಸಾವಿರ ಕೆ.ಜಿ. (21 ಮೆಟ್ರಿಕ್ ಟನ್) ಗಳಷ್ಟು ವ್ಯಾಪಾರ ನಡೆದಿದೆ. ಇದರ ಒಟ್ಟು ಮೊತ್ತ ಅಂದಾಜು 20 ರಿಂದ 21 ಲಕ್ಷಗಳಷ್ಟಾಗಿದೆ ಎಂದು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಚೆಕ್ಕೇರ ಪ್ರಮೋದ್ ಮಾಹಿತಿ ನೀಡಿದ್ದಾರೆ.
ಮಡಿಕೇರಿ ಮೇ ಜೂ.1 : ಮಡಿಕೇರಿ ನಗರಕ್ಕೆ ಶಾಶ್ವತ ಕುಡಿಯುವ ನೀರನ್ನು ಒದಗಿಸುವಲ್ಲಿ ವಿಫಲವಾಗಿರುವ ಕುಂಡಾಮೇಸ್ತ್ರಿ ಯೋಜನೆಯ ಕುರಿತು ಸಮಗ್ರ ತನಿಖೆ ನಡೆಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಸೋಮವಾರಪೇಟೆ ಘಟಕ ಸಂಸದ ಪ್ರತಾಪ್ ಸಿಂಹ ಅವರಿಗೆ ಮನವಿ ಸಲ್ಲಿಸಿದೆ. ಸಂಘದ ತಾಲ್ಲೂಕು ಸಂಚಾಲಕ ಲಕ್ಷ್ಮಣ್ ಗರಗಂದೂರು ಅವರು ಮಡಿಕೇರಿಯಲ್ಲಿ ಸಂಸದರನ್ನು ಭೇಟಿಯಾಗಿ ಬೇಡಿಕೆಗಳ ಕುರಿತು ಗಮನ ಸೆಳೆದರು. ಮಡಿಕೇರಿ ನಗರಕ್ಕೆ ಶಾಶ್ವತವಾಗಿ ಕುಡಿಯುವ ನೀರನ್ನು ಒದಗಿಸಲು ಕೆಲವು ವರ್ಷಗಳ ಹಿಂದೆ ಬೇತ್ರಿ ಯೋನೆಯನ್ನು ರೂಪಿಸಲಾಗಿತ್ತು. ಆದರೆ ಕೆಲವು ಜನಪ್ರತಿನಿಧಿಗಳ ಸ್ವಹಿತಾಸಕ್ತಿಗಾಗಿ ಕುಂಡಾಮೇಸ್ತ್ರಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಯಿತು. ಈ ಯೋಜನೆ ಅನುಷ್ಠಾನಗೊಂಡು 7 ವರ್ಷ ಕಳೆದರೂ ನಗರಕ್ಕೆ ಕುಡಿಯುವ ನೀರಿನ ಭಾಗ್ಯ ದೊರೆತ್ತಿಲ್ಲ. ಬೇಸಿಗೆಯಲ್ಲಿ ಟ್ಯಾಂಕರ್ ಗಳ ಮೂಲಕ ನೀರು ಸರಬರಾಜು ಮಾಡುವ ದೌರ್ಭಾಗ್ಯ ತಪ್ಪಿಲ್ಲ ಎಂದು ಆರೋಪಿಸಿದರು. ತಕ್ಷಣ ಕುಂಡಾಮೇಸ್ತ್ರಿ ಯೋಜನೆಯ ಲೋಪವನ್ನು ಪತ್ತೆ ಹಚ್ಚಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ತನಿಖೆ ನಡೆಸಬೇಕೆಂದು…
ಮಡಿಕೇರಿ ಜೂ.1 : ಭಾರೀ ಮಳೆಗೆ ನಿಟ್ಟೂರು ಕಾರ್ಮಾಡು ಚಿಣ್ಣರ ಹಾಡಿಯಲ್ಲಿ ಮನೆಯ ಮೇಲೆ ಮರ ಬಿದ್ದ ಘಟನೆ ನಡೆದಿದೆ. ಘಟನೆಯಿಂದ ಹಾಡಿಯ ತಾಯಮ್ಮ ಎಂಬುವವರ ಮನೆಯ ಮೇಲ್ಚಾವಣಿ ಮತ್ತು ಗೋಡೆ ಜಖಂಗೊಂಡಿದ್ದು, ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮಡಿಕೇರಿ ಜೂ.1 : ಹತ್ತನೇ ತರಗತಿ ವಿದ್ಯಾರ್ಥಿಯೊಬ್ಬ ಕಾಲು ಜಾರಿ ಬಿದ್ದು ನದಿ ಪಾಲಾದ ಘಟನೆ ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕೊಂಡಂಗೇರಿಯಲ್ಲಿ ನಡೆದಿದೆ. ಆಸಿಮ್ (15) ಮೃತ ದುರ್ದೈವಿಯಾಗಿದ್ದು, ನದಿ ದಡದಲ್ಲಿ ಬರುತ್ತಿದ್ದ ಸಂದರ್ಭ ಕಾಲು ಜಾರಿ ಬಿದ್ದಿರುವುದಾಗಿ ಹೇಳಲಾಗಿದೆ. ಸ್ಥಳಕ್ಕೆ ಸಿದ್ದಾಪುರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸತತ ಪ್ರಯತ್ನದ ನಂತರ ಮೃತ ದೇಹ ಪತ್ತೆಯಾಗಿದೆ.
ಮಡಿಕೇರಿ ಮೇ 31 : ಪೊನ್ನಂಪೇಟೆ 66/11 ಕೆವಿ ವಿದ್ಯುತ್ ಉಪ-ಕೇಂದ್ರದಿಂದ ಹೊರಹೋಗುವ ಎಫ್10 ಹೈಸೊಡ್ಲೂರು ಫೀಢರ್‍ನಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಕೈಗೊಳ್ಳಬೇಕಿರುವುದರಿಂದ ಜೂ.1 ರಂದು ಬೆಳಗ್ಗೆ 9.30 ರಿಂದ ಮಧ್ಯಾಹ್ನ 3 ಗಂಟೆವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು. ಆದ್ದರಿಂದ ಹುದಿಕೇರಿ, ಹೈಸೊಡ್ಲೂರು, ಬೆಳ್ಳೂರು, ಕೋಣಂಗೇರಿ ಸುತ್ತಮುತ್ತಲವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಕೋರಿದ್ದಾರೆ.
ಮಡಿಕೇರಿ ಮೇ 31 : ಆಲೂರು ಸಿದ್ದಾಪುರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗೆ 2023-24 ನೇ ಸಾಲಿನ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ. ಪ್ರವೇಶಕ್ಕೆ ಜೂ. 7 ಕೊನೆಯ ದಿನವಾಗಿದೆ. ಎಲೆಕ್ಟ್ರಾನಿಕ್ (ಎನ್‍ಸಿವಿಟಿ), ಎಲೆಕ್ಟ್ರಾನಿಕ್ ಮೆಕ್ಯಾನಿಕ್(ಎನ್‍ಸಿವಿಟಿ), ಫಿಟ್ಟರ್(ಎನ್‍ಸಿವಿಟಿ), ಟರ್ನರ್(ಎನ್‍ಸಿವಿಟಿ) ಹಾಗೂ ಮೆಕ್ಯಾನಿಕ್ ಎಲೆಕ್ಟ್ರಿಕ್ ವೆಹಿಕಲ್ (ಎನ್‍ಸಿವಿಟಿ) ಕೋರ್ಸ್ ಇದೆ. ಕೋರ್ಸ್ ಅವಧಿ 2 ವರ್ಷ ಆಗಿರುತ್ತದೆ ಎಂದು ಆಲೂರು ಸಿದ್ದಾಪುರ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲರು ತಿಳಿಸಿದ್ದಾರೆ.






