ಲೇಖಕ: admin

ಮಡಿಕೇರಿ ಮೇ 23 : ಕೊಡಗು ಜಿಲ್ಲಾ ಮರಾಠ, ಮರಾಟಿ ಸಮಾಜ ಸೇವಾ ಸಂಘ, ಅಂಬಾಭವಾನಿ ಯುವಕ-ಯುವತಿ ಕ್ರೀಡಾ ಮತ್ತು ಮನೋರಂಜನಾ ಸಂಘದ 27ನೇ ವಾರ್ಷಿಕ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಮೇ 28 ರಂದು ನಡೆಯಲಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಮರಾಠ-ಮರಾಟಿ ಸಮಾಜ ಸೇವಾ ಸಂಘದ ಜಿಲ್ಲಾಧ್ಯಕ್ಷ ಎಂ.ಎಂ.ಪರಮೇಶ್ವರ್, ಅಂದು ಬೆಳಿಗ್ಗೆ 10 ಗಂಟೆಗೆ ತಾಳತ್ತಮನೆಯ ಸಂಘದ ನಿವೇಶನದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯನ್ನು ಉಡುಪಿ ಸಹಾಯಕ ಔಷಧಿ ನಿಯಂತ್ರಕ ಶಂಕರ್ ನಾಯ್ಕ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಿದ್ದಾಪುರ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಾಬು ನಾಯ್ಕ್ ಡಿ. ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ. ::: ಪ್ರತಿಭಾ ಪುರಸ್ಕಾರ ::: 2021-22ನೇ ಸಾಲಿನ 7ನೇ ತರಗತಿ, 10ನೇ ತರಗತಿ, ಪದವಿ ಪೂರ್ವ, ಅಂತಿಮ ಪದವಿ ಹಾಗೂ ಕೊಡಗಿನಲ್ಲಿ ವ್ಯಾಸಂಗ ಮಾಡಿರುವ ಮತ್ತು ವೃತ್ತಿಪರ ಪದವಿ, ಸ್ನಾತಕೋತ್ತರ ಪದವಿಯಲ್ಲಿ ಜಿಲ್ಲೆಯ ಹೊರ ಭಾಗದಲ್ಲಿ ವ್ಯಾಸಂಗ ಮಾಡಿ ಅತೀ ಹೆಚ್ಚು ಅಂಕ ಗಳಿಸಿದ…

Read More

ನಾಪೋಕ್ಲು ಮೇ 23 : ಮೂರ್ನಾಡು ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರತಿಭಾ ದಿನಾಚರಣೆಯನ್ನು ಆಚರಿಸಲಾಯಿತು. ಮಡಿಕೇರಿಯ ಮೆಡಿಕಲ್ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ.ಪ್ರಿಯದರ್ಶಿನಿ ಮಾತನಾಡಿ ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕಲು ಇದು ಸೂಕ್ತವಾದ ವೇದಿಕೆಯಾಗಿದೆ. ಯಾವುದೇ ಹಿಂಜರಿಕೆ ಇಲ್ಲದೆ ತಮ್ಮಲ್ಲಿನ ಪ್ರತಿಭೆಯನ್ನು ಪ್ರದರ್ಶಿಸಬೇಕು ಎಂದು ಕಿವಿಮಾತು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ರೇಖಾ ಚಿಣ್ಣಪ್ಪ ಮಾತನಾಡಿ, ವಿದ್ಯಾರ್ಥಿಗಳು ಈ ರೀತಿಯ ವೇದಿಕೆಯನ್ನು ಹೆಚ್ಚು ಹೆಚ್ಚು ಉಪಯೋಗಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು. ಸಂಸ್ಥೆಯ ಉಪಾಧ್ಯಕ್ಷ ಪುದಿಯೋಕ್ಕಡ ಸುಬ್ರಮಣ್ಯ ಮಾತನಾಡಿ ಶೈಕ್ಷಣಿಕ ಪಠ್ಯಗಳ ನಡುವೆ ಇಂತಹ ಕಾರ್ಯಕ್ರಮ ವಿದ್ಯಾರ್ಥಿಗಳಲ್ಲಿ ಉತ್ಸಾಹವನ್ನು ತರುತ್ತದೆ ಎಂದು ಅಭಿಪ್ರಾಯಪಟ್ಟರು. ಮೂರ್ನಾಡು ವಿದ್ಯಾಸಂಸ್ಥೆಯ ನಿರ್ದೇಶಕರಾದ ತೇಲಪಂಡ ಶೈಲ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ವೇದಿಕೆಯಲ್ಲಿ ಸಂಸ್ಥೆಯ ನಿರ್ದೇಶಕ ಮೂಡೇರ ಕಾಳಯ್ಯ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ವರದಿ : ದುಗ್ಗಳ ಸದಾನಂದ.

Read More

ಮಡಿಕೇರಿ ಮೇ 23 : ಮಡಿಕೇರಿ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಜೆಡಿಎಸ್‍ನ ನಾಪಂಡ ಮುತ್ತಪ್ಪ ತಮ್ಮ ವಿರುದ್ಧ ಕೇಳಿ ಬಂದ ಆರೋಪಗಳು ಸತ್ಯಕ್ಕೆ ದೂರವೆಂದು ಸಾಬೀತು ಪಡಿಸಲು ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಸನ್ನಿಧಾನದಲ್ಲಿ ಆಣೆ ಪ್ರಮಾಣ ಮಾಡಿದರು. ಜೆಡಿಎಸ್‍ನ ಪರಾಜಿತ ಅಭ್ಯರ್ಥಿ ನಾಪಂಡ ಮುತ್ತಪ್ಪ ವಿಧಾನಸಭಾ ಚುನಾವಣೆಯ ಮತದಾನದ ಹಿಂದಿನ ದಿನ ಯಾವುದೇ ಪ್ರಚಾರ ನಡೆಸದೆ ತಟಸ್ಥ ನಿಲುವು ಹೊಂದಿದ್ದರು. ಈ ಸಂದರ್ಭ ಅವರ ವಿರುದ್ಧ ಹಣ ಪಡೆದ ಆರೋಪ ಕೇಳಿ ಬಂದಿತ್ತಲ್ಲದೇ, ಮತ ಎಣಿಕೆಯ ಬಳಿಕ ಕಾಂಗ್ರೆಸ್ ಅಭ್ಯರ್ಥಿ ಡಾ.ಮಂಥರ್ ಗೌಡ ಅವರ ಗೆಲುವಿಗೆ ನಾಪಂಡ ಮುತ್ತಪ್ಪ ಕಾರಣರಾಗಿದ್ದಾರೆ ಎಂಬ ಆರೋಪಗಳನ್ನು ಹೊರಿಸಲಾಗಿತ್ತು. ಎರಡು ರಾಷ್ಟ್ರೀಯ ಪಕ್ಷಗಳಿಂದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ತಾವು ಹಣ ಪಡೆದಿರುವುದು ನಿಜವೇ ಆಗಿದ್ದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ ಎಂದು ಇತರ ಪಕ್ಷಗಳಿಗೆ ಸವಾಲೆಸಗಿದ್ದರು. ಅದರಂತೆ ನಾಪಂಡ ಮುತ್ತಪ್ಪ ಕುಟುಂಬ ಸಮೇತರಾಗಿ ಶ್ರೀ ಕ್ಷೇತ್ರ…

Read More

ಮಡಿಕೇರಿ ಮೇ 23 :  ಪೊನ್ನಂಪೇಟೆ ಸಮೀಪದ ಹಳ್ಳಿಗಟ್ಟು ಭದ್ರಕಾಳಿ ಹಾಗೂ ಗುಂಡಿಯತ್‌ ಅಯ್ಯಪ್ಪ ದೇವರ ವಾರ್ಷಿಕ ಬೇಡು ಹಬ್ಬ ಎರಡು ದಿನ ಶ್ರದ್ಧಾಭಕ್ತಿಯಿಂದ ನಡೆಯಿತು. ಊರು ತಕ್ಕರಾದ ಚಮ್ಮಟೀರ ಕುಟುಂಬದ ಮನೆಯಿಂದ ಮೂಲ ನಿವಾಸಿಗಳಲ್ಲಿ ಒಬ್ಬರಾದ ಪಣಿಕ ಜನಾಂಗದಿಂದ ಪೊಲವಂದೆರೆ ಹೊರಡುವ ಮೂಲಕ ಎರಡು ದಿನಗಳ ಹಬ್ಬಕ್ಕೆ ಚಾಲನೆ ದೊರೆಯಿತು. ನಂತರ ಊರಿನ ನಿಗದಿತ ಅಂಬಲಗಳಲ್ಲಿ ವಿವಿಧ ಕಟ್ಟುಪಾಡಿನೊಂದಿಗೆ ಸಾಂಪ್ರದಾಯಿಕ ಆಚರಣೆಗಳು ನಡೆದು ಅಪರಾಹ್ನ  ಊರಿನ ಪ್ರಮುಖ ದೇವಾಲಯಗಳಲ್ಲೊಂದಾದ “ಪೊಲವಪ್ಪಂಡ ಕೋಟ”ದಲ್ಲಿ ಜಿಲ್ಲೆಯ ಮೂಲನಿವಾಸಿಗಳಲ್ಲೊಬ್ಬರಾದ ಪಣಿಕ ಜನಾಂಗದ ವ್ಯಕ್ತಿಯೊಬ್ಬರಿಗೆ ಪೊಲಂದೆರೆ ಆವೇಶ ಬರುವ ಮೂಲಕ ಹಬ್ಬವನ್ನು ವಿಭಿನ್ನವಾಗಿ  ಆಚರಿಸಲಾಯಿತು. ಮರುದಿನ  ಚಮ್ಮಟೀರ ಬಲ್ಯಮನೆಯಲ್ಲಿ ಹಬ್ಬದ ಸಂಭ್ರಮದ ನಂತರ  ಕೃತಕವಾಗಿ ಶೃಂಗರಿಸಲಾದ  ಕುದುರೆ ಹಾಗೂ ಮೊಗ(ಪೂಮೊಗ) ಹೊರಡುವುದು , ಅಪರಾಹ್ನ 3-30 ಗಂಟೆಗೆ ಮೂಕಳೇರ ಬಲ್ಯಮನೆಯಿಂದ ಕುದುರೆ ಹಾಗೂ ಮೊಗ ಹೊತ್ತವರು ಹಳ್ಳಿಗಟ್ಟು ಶ್ರೀ ಭದ್ರಕಾಳಿ ದೇವಸ್ಥಾನದ ಅಂಬಲದಲ್ಲಿ ಸೇರಿ  ಶ್ರದ್ಧಾಭಕ್ತಿಯಿಂದ ಹಬ್ಬವನ್ನು ಆಚರಿಸಿದರು. ನಂತರ ಊರಿನವರಿಂದ ಪರಸ್ಪರ ಕೆಸರು ಎರಚಾಟದ…

Read More

ಸಿದ್ದಾಪುರ ಮೇ 23 :   ಸುನ್ನಿ ಯುವಜನ ಸಂಘ (ಎಸ್.ವೈ.ಎಸ್) ಕೊಡಗು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ  ಸಿದ್ದಾಪುರದಲ್ಲಿ ನಿರ್ಮಾಣಗೊಂಡಿರುವ  ವರ್ಕಲ ಮುಲ್ಲಕೋಯ ತಙಳ್ ಸಮತಾ ಭವನ ಹಾಗೂ ಖಾಝಿ ಭವನವನ್ನು  ಸೈಯದ್ ಉಲಾಮ ಮೊಹಮ್ಮದ್ ಜಫ್ರೀ  ಉದ್ಘಾಟಿಸಿದರು. ಎಸ್.ವೈ.ಎಸ್. ಸಂಘಟನೆಯು ದಾನಿಗಳ ಸಹಾಯದಿಂದ ಭವ್ಯ ಭವನವನ್ನು ನಿರ್ಮಾಣ ಮಾಡಿದ್ದು, ಸಂಘಟನೆಯ ಕಾರ್ಯಕ್ಕೆ ಗಣ್ಯರು ಶ್ಲಾಘನೆ ವ್ಯಕ್ತಪಡಿಸಿದರು. ನಂತರ  ಜಾತ್ಯತೀತ, ಸೌಹಾರ್ದ ಸಮಾಜ ನಿರ್ಮಾಣದ ಸಂದೇಶದ ಜಾಗೃತಿ ಜಾಥಕ್ಕೆ ಚಾಲನೆ ನೀಡಲಾಯಿತು.  ಜಾಥವು  ಕೊಡಗು ಜಿಲ್ಲೆಯಿಂದ ತಮಿಳುನಾಡು ಪ್ರವೇಶಿಸಿ ನಂತರ ಕೇರಳದ ಕೆಲವು ಜಿಲ್ಲೆಗಳಲ್ಲಿ ಸಂಚರಿಸಿ ತಿರುವನಂತಪುರಂ ನಲ್ಲಿ ಸಮಾಪ್ತಿಗೊಳ್ಳಲಿದೆ ಎಂದು ಸಂಘಟನೆಯ ಸಂಚಾಲಕ ತಿಳಿಸಿದರು. ಈ ಸಂದರ್ಭ ಪ್ರಮುಖರಾದ ಉಸ್ಮಾನ್ ಫೈಝಿ, ಉಮ್ಮರ್ ಫೈಜಝಿ, ಎಂ ಅಬ್ದುಲ್ ರೆಹಮಾನ್, ಸಿಪಿಎಂ ಬಶೀರಾ ಹಾಜೀ, ಅಬ್ದುಲ್ಲಾ ಫೈಝಿ, ಅಶ್ರಫ್ ಫೈಝೀ  ಹಾಗೂ ಮತ್ತಿತರ ಗಣ್ಯರು  ಹಾಜರಿದ್ದರು.

Read More

ಮಡಿಕೇರಿ ಮೇ 23 : ಅರಂತೋಡು ಗ್ರಾ.ಪಂ ವತಿಯಿಂದ ಗ್ರಾಮೀಣ ಮಕ್ಕಳಿಗೆ ಬೇಸಿಗೆ ಶಿಬಿರ ನಡೆಸಲಾಯಿತು. ಅರಂತೋಡು ಗ್ರಾ.ಪಂ ಅಮೃತ ಸಭಾಭವನದಲ್ಲಿ  ನಡೆಸಲಾದ ಶಿಬಿರವನ್ನು  ಗ್ರಾ.ಪಂ ಅಧ್ಯಕ್ಷೆ ಹರಿಣಿ ದೇರಾಜೆ ಉದ್ಘಾಟಿಸಿದರು. ಈ ಸಂದರ್ಭ ಗ್ರಾ.ಪಂ  ಉಪಾಧ್ಯಕ್ಷರಾದ ಶ್ವೇತ , ಪಂಚಾಯತ್ ಅಭಿವೃದ್ಧಿ ಆಧಿಕಾರಿ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಹಾರೈಸಿದರು.  ವೇದಿಕೆಯಲ್ಲಿ ಸದಸ್ಯರಾದ ಕೇಶವ ಅಡ್ತಲೆ, ಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿ ನಿವೃತ್ತಿ ಶಿಕ್ಷಕಿ ಗಂಗಮ್ಮ ಜಾನಪದ ಕಥೆ, ಪದ್ಯ ಮುಂತಾದ ಚಟುವಟಿಕೆಗಳನ್ನು ಮಾಡಿಸಿದರು. ಸುಮಾರು ಹದಿನೈದು ಶಿಬಿರಾರ್ಧಿಗಳು ಭಾಗವಹಿಸಿದರು.

Read More

ಮಡಿಕೇರಿ ಮೇ 23 :  ಕೊಡಗು ಜಿಲ್ಲೆಯಲ್ಲಿ ಪ್ರಸ್ತುತ‌ ಸಾಲಿನ‌‌ ಮುಂಗಾರಿನ ಸಮಯದಲ್ಲಿ‌ ಸಂಭವಿಸಬಹುದಾದ‌ ವಿಪತ್ತುಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಲು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ತಯಾರಾಗಿದೆ. ಈ‌‌ ನಿಟ್ಟಿನಲ್ಲಿ, ಭೂಕುಸಿತ, ಪ್ರವಾಹ, ಮಳೆ ಹಾನಿ, ಭೂಮಿಯಲ್ಲಿ ನೀರು ಹರಿಯುವ ಸದ್ದು, ಭೂಮಿಯಲ್ಲಿ ಹೊಸದಾಗಿ‌ ಮೂಡಿರುವ ಬಿರುಕುಗಳು ಇದ್ದಲ್ಲಿ ಅಥವಾ ಪ್ರಾಕೃತಿಕ ವಿಕೋಪಕ್ಕೆ‌ ಸಂಬಂಧಿಸಿದಂತೆ ಯಾವುದಾದರೂ ದೂರುಗಳಿದ್ದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ 08272-221077,  08272-221099 ಗೆ ಕರೆ ಮಾಡಿ ಮಾಹಿತಿ‌ ನೀಡಬಹುದು. ಹಾಗೆಯೇ 8550001077 ಈ‌ ಸಂಖ್ಯೆಗೆ ವಾಟ್ಸಾಪ್ ಮಾಡಬಹುದು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ.

Read More

ಮಡಿಕೇರಿ ಮೇ 23 :  ಮಡಿಕೇರಿ ನಗರಸಭಾ ವ್ಯಾಪ್ತಿಯಲ್ಲಿ ಮಳೆಗಾಲ ಪ್ರಾರಂಭವಾಗುವ ಪೂರ್ವ ನಿವೇಚಿತ ಕೆಲಸ ಕಾರ್ಯಗಳಲ್ಲಿ ಒಂದಾದ ರಾಜ ಕಾಲುವೆ ಮತ್ತು ತೋಡುಗಳ ಹೂಳೆತ್ತುವ ಮತ್ತು ಸ್ವಚ್ಛಗೊಳಿಸುವ ಕೆಲಸ ಕಾರ್ಯಗಳ ಕಾಮಗಾರಿ ಕೈಗೊಂಡಿದ್ದು, ಈ ಸಂಬಂಧ ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕ  ಬಸಪ್ಪ, ಪೌರಾಯುಕ್ತ  ವಿಜಯ್ ಹಾಗೂ ಎಇಇ ಹೇಮಂತ್ ಕುಮಾರ್   ಪರಿಶೀಲಿಸಿದರು.

Read More

ಮಡಿಕೇರಿ, ಮೇ 23: ರಾಜ್ಯದಾದ್ಯಂತ ಗ್ರಾಮೀಣ ಪ್ರತಿಭೆಗಳ ಅನಾವರಣಕ್ಕೆ ವೀರಲೋಕ ಪ್ರಕಾಶನ ಮುಂದಾಗಿದ್ದು, ಎಲ್ಲ ಜಿಲ್ಲೆಗಳಲ್ಲೂ ಸಂಚಾಲಕರುಗಳನ್ನು ನೇಮಿಸಲಾಗಿದೆ. ಕೊಡಗಿನಿಂದ ಸಂಚಾಲಕರನ್ನಾಗಿ ಬಿ.ಜಿ. ಅನಂತ ಶಯನ ಅವರನ್ನು ನೇಮಿಸಲಾಗಿದೆ. ನಿನ್ನೆ ದಿನ ಬೆಂಗಳೂರಿನಲ್ಲಿ ನಡೆದ ಸಂಚಾಲಕರುಗಳ ಪ್ರಥಮ ಸಭೆಯಲ್ಲಿ ಪ್ರಕಾಶನದ ವ್ಯವಸ್ಥಾಪಕ ನಿರ್ದೇಶಕ ವೀರಕಪುತ್ರ ಶ್ರೀನಿವಾಸ್ ಈ ಕುರಿತು ಮಾಹಿತಿ ನೀಡಿದರು. ಪ್ರಕಾಶನವು ತರಬೇತಿ ಕಮ್ಮಟದ ಮೂಲಕ ಕಥಾಸಂಕಲನ ಹೊರತರಲು ಉದ್ದೇಶಿಸಿದ್ದು, 2024 ರಲ್ಲಿ ನಡೆಸಲು ಉದ್ದೇಶಿಸಿರುವ ‘ಲಿಟ್ ಫೆಸ್ಟ್’ನಲ್ಲಿ ವಿಶೇಷವಾಗಿ ಆಯ್ದ ಕಥೆಗಾರರನ್ನು ಗುರುತಿಸಲಾಗುವುದು ಎಂದಿದ್ದಾರೆ. ಸಮಾಲೋಚನಾ ಸಭೆಯಲ್ಲಿ ಸಾಹಿತಿ ಕಾ.ತಾ. ಚಿಕ್ಕಣ್ಣ ಹಾಗೂ ಲಕ್ಷ್ಮಣ ಕೊಡಸೆ ಹಾಜರಿದ್ದು ಇದೊಂದು ‘ದೇಸಿ ಜಗಲಿ’ ಕಥಾ ಕಮ್ಮಟ ಯೋಜನೆ ಆಗಿದ್ದು, ಗ್ರಾಮೀಣ ವಿಭಾಗಗಳಲ್ಲಿ ಅವಕಾಶ ವಂಚಿತರಾಗಿ ಉಳಿವ, ನಲವತ್ತು ವರುಷದೊಳಗಿನ ಯುವ ಪ್ರತಿಭೆಗಳಿಗೆ ಉಪಯುಕ್ತ ಕಾರ್ಯಕ್ರಮವಾಗಲಿದೆ ಎಂದರು. ಈ ಸಂದರ್ಭ ಮಾತನಾಡಿದ ಶ್ರೀನಿವಾಸ್ ಅವರು, ಇಂದು ಫ್ಲಿಪ್‍ಕಾರ್ಟ್ ಮೂಲಕ ಸೆಗಣಿ ತರಿಸುವಷ್ಟೂ ಸಮಾಜ ಮುಂದುವರಿದಿದ್ದು, ಕನ್ನಡ ಪುಸ್ತಕಗಳು ಮಾತ್ರ ಲಭ್ಯವಿಲ್ಲ ಎಂದು…

Read More

ಸುಂಟಿಕೊಪ್ಪ ಮೇ 22: ಹರದೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದಲ್ಲಿ ಆಯೋಜಿಸಲಾಗಿರುವ ಗ್ರಾಮೀಣ ಬೇಸಿಗೆ ಶಿಬಿರಕ್ಕೆ ಗ್ರಾ.ಪಂ ಅಧ್ಯಕ್ಷ ಬಿ.ಡಿ.ಪದ್ಮನಾಭ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಿ.ಬಿ.ಪೂರ್ಣಿಮ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ವೈಯಕ್ತಿಕ ಪ್ರತಿಭೆ ಬೆಳಸಿ ಪ್ರೋತ್ಸಾಹಿಸುವ ಹಾಗೂ ಅವರ ಜ್ಞಾನ ಆರೋಗ್ಯದ ಬಗ್ಗೆ ಆರಿವು ನೀಡುವ ದಿಸೆಯಲ್ಲಿ ಬೇಸಿಗೆ ಶಿಬಿರವನ್ನು ಗ್ರಾಮೀಣ ಮಟ್ಟದಲ್ಲಿ ಆಯೋಜಿಸಲಾಗಿದೆ ಇದರ ಪ್ರಯೋಜನವನ್ನು ಮಕ್ಕಳು ಪಡೆದುಕೊಳ್ಳುವಂತೆ ಸಲಹೆ ನೀಡಿದರು. ಈ ಸಂದರ್ಭ ಗ್ರಂಥಾಲಯ ಮೇಲ್ವಿಚಾರಕಿ ಸಂದ್ಯಾ, ಗ್ರಾ.ಪಂ ಸಿಬ್ಬಂದಿಗಳು, ಮಕ್ಕಳು ಇದ್ದರು.

Read More