ಲೇಖಕ: admin

ಮಡಿಕೇರಿ ಮೇ 20 :  ಬೆಂಗಳೂರಿನ ಕೈವಲ್ಯ ಕಲಾ ಕೇಂದ್ರದಿಂದ ಬಾಳೆಲೆ ವಿಜಯಲಕ್ಷ್ಮಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ  ಇಂದು  (ಮೇ 20) ರಂದು ಮಾಧವಿ ಕನ್ನಡ ನಾಟಕ ಪ್ರದರ್ಶನ  ನಡೆಯಲಿದೆ. ಸಂಜೆ 7 ಗಂಟೆಯಿಂದ 65 ನಿಮಿಷಗಳ ಕಾಲ ನಡೆಯಲಿರುವ ನಾಟಕವನ್ನು ಸುಧಾ ಅಡುಕಳ ಇವರು ರಚಿಸಿದ್ದು ಡಾ ಶ್ರೀಪಾದ ಭಟ್ಟ್ ನಿರ್ದೇಸಿರುತ್ತಾರೆ.  ಈ ನಾಟಕದಲ್ಲಿ ಇಬ್ಬರು ಕಲವಿದರಾದ ಮಾಚಂಗಡ ಶರತ್ ಬೋಪಣ್ಣ ಮತ್ತು ದಿವ್ಯಶ್ರೀ ನಾಯಕ್ ಸುಳ್ಯ  ಅಭಿನಯಿಸಿದ್ದಾರೆ. ಬೆಳಕು ಮತ್ತು ನಾಟಕದ ಸಹ ನಿರ್ದೇಶನವನ್ನು ಗಣೇಶ್. ಎಮ್. ಭೀಮನಕೋಣೆ  ನಿರ್ವಹಿಸಿದ್ದಾರೆ.  “ಹಾಡುತ್ತದೆ ಪಂಜರದ ಹಕ್ಕಿ ಭಯ ಕಂಪಿತ ದನಿಯಲ್ಲಿ ತಿಳಿಯದ ಲೋಕದ ಬಗೆಗೆ ಹಂಬಲಿಸುವ ಲೋಕದ ಬಗೆಗೆ, ಕೇಳುತ್ತದೆ ಅದರ ದನಿ ದೂರದ ಬೆಟ್ಟಕ್ಕೆ ಯಾಕೆಂದರೆ ಅದರ ಹಾಡು ಬಿಡುಗಡೆಯ ಪಾಡು” ಜ.ನ.ತೇಜಶ್ರೀ ಅನುವಾದಿಸಿದ ಮಾಯಾ ಏಂಜಲೋ ಅವರ ಕವನದ ಸಾಲುಗಳಿವು. ಬಿಡುಗಡೆಯ ಪಾಡನ್ನು ಹಾಡುವ ಯಾರದೇ ದನಿಯಿರಲಿ ಅದು ದೂರದ ಬೆಟ್ಟಕ್ಕೂ ಕೇಳಿಸಲೇ ಬೇಕು.…

Read More

ಕಡಂಗ ಮೇ 20 : ಕಳೆದ ವಾರ ಸುರಿದ ಬಾರಿ ಗಾಳಿ ಮಳೆಯಿಂದ ಕಾಕೋಟು ಪರಂಬು ಗ್ರಾ.ಪಂ  ವ್ಯಾಪ್ತಿಯ ಕಲ್ಲು ಮೊಟ್ಟೆ ವಿರಾಜಪೇಟೆ ಕಡಂಗ ಮುಖ್ಯ ರಸ್ತೆಯಲ್ಲಿ ಬಿದ್ದಿದ್ದ ಭಾರೀ ಗಾತ್ರದ ಮರದ ತಂಡುಗಳು ರಸ್ತೆಬದಿಯಲ್ಲಿ ಬಿದ್ದಿದ್ದು, ವಾಹನ ಸವಾರರಿಗೆ ತೊಂದರೆ ಉಂಟಾಗಿತ್ತು. ಇದನ್ನು ಮನಗಂಡ  ಕಡಂಗ ಎಸ್ ವೈ ಎಸ್, ಎಸ್ ಕೆ ಎಸ್ ಎಸ್ ಎಫ್ ಸದಸ್ಯರು ಅಲ್ಲಿದ್ದ ಮರಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವುಮಾಡಿಕೊಟ್ಟರು. ಮತಗಳ ತುಂಡುಗಳ ತೆರವಿಗೆ ಸಂಬಂಧಪಟ್ಟ ಅಧಿಕಾರಿಗಳೂ ಮತ್ತು ಕಾಕೊಟು ಗ್ರಾ.ಪಂ ಮಾಹಿತಿ ನೀಡಿದರೂ ಯಾವುದೇ ಸ್ಪಂದನೆ ದೊರೆಯದ ಕಾರಣ  ಕಡಂಗ ಎಸ್ ವೈ ಎಸ್, ಎಸ್ ಕೆ ಎಸ್ ಎಸ್ ಎಫ್  ಸದಸ್ಯರೇ ತೆರವುಗೊಳಿಸಿರು. ಇವರ ಈ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭ  ಸದಸ್ಯರಾದ ಜಮಾತ್ ಅಧ್ಯಕ್ಷ  ಅಬ್ದುಲ್ಲ ಝಕರಿಯ, ಇರ್ಶಾದ್ ಇಸಾಕ್, ಸಿಯಬ್ ,ಸಿದ್ದಿಕ್, ರಜಾಕ್ ಹಾರಿಸ್ ಮುಂತಾದವರು ಹಾಜರಿದ್ದರು. ವರದಿ  : ನೌಫಲ್ ಕಡಂಗ  

Read More

ನಾಪೋಕ್ಲು ಮೇ 20 :  ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕ್ರೀಡಾ ಅಕಾಡೆಮಿ ವತಿಯಿಂದ ಆಯೋಜಿಸಲಾದ 23ನೇ ವರ್ಷದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ನಾಪೋಕ್ಲು ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ  ನಡೆಯಿತು. ಕಾರ್ಯಕ್ರಮವನ್ನು ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಭಾರ ಪ್ರಾಂಶುಪಾಲೆ ಡಾ. ಅವನಿಜ ಸೋಮಯ್ಯ ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅಕಾಡೆಮಿಯ ಅಧ್ಯಕ್ಷ ಕಲಿಯಂಡ ಸಾಬು ಅಯ್ಯಣ್ಣ,  ಈ ವರ್ಷದ ಬೇಸಿಗೆ ಶಿಬಿರದ ತರಬೇತಿಯಲ್ಲಿ 80 ಮಕ್ಕಳು ಭಾಗವಹಿಸಿದ್ದು, ಸುಮಾರು ಒಂದು ತಿಂಗಳಕಾಲ ಹಾಕಿ ಸೇರಿದಂತೆ ವಿವಿಧ ಕ್ರೀಡೆ ಹಾಗೂ ಇನ್ನಿತರ ಚಟುವಟಿಕೆಗಳ ತರಬೇತಿಯನ್ನು ಶಿಬಿರಾರ್ಥಿಗಳಿಗೆ ನೀಡಲಾಗಿದೆ. ಶಿಬಿರಲ್ಲಿ ಭಾಗವಹಿಸುವುದರಿಂದ ಮಕ್ಕಳ ಮುಂದಿನ ಭವಿಷ್ಯ ಉಜ್ವಲವಾಗಲಿದೆ. ನಮ್ಮಲ್ಲಿ ಈ ಹಿಂದೆ ತರಬೇತಿ ಪಡೆದ ಅನೇಕ ಶಿಬಿರಾರ್ಥಿಗಳು ಉತ್ತಮ ಸ್ಥಾನ ಮಾನವನ್ನು ಅಲಂಕರಿಸಿದ್ದು, ಅಕಾಡೆಮಿಗೆ ಗೌರವ ತಂದಂತಾಗಿದೆ ಎಂದರು. ನಾಪೋಕ್ಲು ಲಯನ್ಸ್ ಕ್ಲಬ್ ಅಧ್ಯಕ್ಷ ಕುಂದ್ಯೋಳಂಡ ಗಣೇಶ್ ಮುತ್ತಪ್ಪ ಮಾತನಾಡಿ, ಮಕ್ಕಳು ಜೀವನದಲ್ಲಿ ಸದ್ಗುಣಗಳನ್ನು ಮೈಗೂಡಿಸಿಕೊಂಡು ಉತ್ತಮ ಪ್ರಜೆಯಾಗಿ…

Read More

ಚೆಯ್ಯಂಡಾಣೆ  ಮೇ 19 :  ವಿರಾಜಪೇಟೆ ವ್ಯಾಪ್ತಿಯ ಗುತ್ತಿಗೆದಾರರ ಸ್ನೇಹ ಸಮ್ಮಿಲನ ಕಾರ್ಯಕ್ರಮ ಕದನೂರು ವೇ ಬ್ರಿಡ್ಜ್ ಸಮೀಪದ ಎಸಿಸಿ ಕಟ್ಟಡದಲ್ಲಿ ನಡೆಯತು. ಕಾರ್ಯಕ್ರಮದಲ್ಲಿ  ಎಸಿಸಿ ಸಂಸ್ಥೆಯ ಕೊಡಗು ಹಾಗೂ ಹಾಸನ ತಾಂತ್ರಿಕ ಅಧಿಕಾರಿ ಯೋಗಾನಂದ್ ಮಾತನಾಡಿ, ಇಂಡಿಯಾದಲ್ಲಿ ಪ್ರಥಮ ಸಿಮೆಂಟ್ ಕಂಪನಿ ಎಸಿಸಿ, ಸಿಮೆಂಟ್ ಬಳಕೆ ಬಗ್ಗೆ ಗ್ರಾಹಕರಿಗೆ ಹಾಗೂ ಗುತ್ತಿಗೆದಾರರಿಗೆ ಸಮಗ್ರ ಮಾಹಿತಿ ನೀಡಿ, ಸಿಮೆಂಟ್ ಯಾವ ರೀತಿಯಲ್ಲಿ ಉಪಯೋಗಿಸಬೇಕು, ಸಿಮೆಂಟ್ ನಲ್ಲಿ ಯಾವುದೆಲ್ಲ ಮಿಶ್ರಣ ಉಪಯೋಗಿಸುತ್ತಾರೆಂದು  ಮಾಹಿತಿ ನೀಡಿದರು. ಕೊಡಗಿನಲ್ಲಿ ಅತೀ ಹೆಚ್ಚು ಸಿಮೆಂಟ್ ಖರೀದಿಸಿ ಅದನ್ನು ಗ್ರಾಹಕರಿಗೆ ತಲುಪಿಸಿ ನಂಬರ್ ಒನ್ ಡೀಲರ್ ಆಗಿ ಆಯ್ಕೆಯಾದ ಶಹಲಾ ಹಾರ್ಡ್ ವೆರ್ ಮಾಲೀಕ, ಮಾಜಿ ಸೈನಿಕ ಸಲಾಂ ಅವರಿಗೆ ಬುಲ್ಲೆಟ್ ಎನ್ ಫಿಲ್ಡ್ ಮೋಟಾರ್ ಬೈಕ್ ಅನ್ನು ಅದಾನಿ ಎಸಿಸಿ ಸಂಸ್ಥೆಯ ಮೈಸೂರು ವಲಯ ಅಧಿಕಾರಿ ಝಕೀ ಮುಹಮ್ಮದ್ ಅವರು  ಕೀ ನೀಡುವುದರ ಮೂಲಕ ಹಸ್ತಾಂತರಿಸಿದರು. ಈ ಸಂದರ್ಭ ಎಸಿಸಿ ಕೊಡಗು ಜಿಲ್ಲಾ ಅಧಿಕಾರಿ ಶೋಭಿತ್, ಕೊಡಗು…

Read More

ಮಡಿಕೇರಿ ಮೇ 19 : ಕೊಡಗು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರದಲ್ಲಿ ನೂತನವಾಗಿ ಆಯ್ಕೆಯಾಗಿರುವ ಇಬ್ಬರು ಶಾಸಕರು ಬಡವರಿಗೆ ನಿವೇಶನ ನೀಡಲು ಕ್ರಮ ಕೈಗೊಳ್ಳಬೇಕೆಂದು ಮಡಿಕೇರಿ ನಗರಸಭಾ ಸದಸ್ಯ ಎಂ.ಕೆ.ಮನ್ಸೂರ್ ಆಲಿ ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಇಬ್ಬರು ಶಾಸಕರಿಗೆ ಅಭಿನಂದನೆ ಸಲ್ಲಿಸುವುದರೊಂದಿಗೆ ಅಭಿವೃದ್ಧಿಪರ ಕಾರ್ಯಗಳಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ. ಕಳೆದ 30 ವರ್ಷಗಳಿಂದ ಜಿಲ್ಲೆಯಾದ್ಯಂತ ನಿವೇಶನ ರಹಿತರಿಗೆ ನಿವೇಶನ ನೀಡುವ ಮತ್ತು ಸ್ವಂತ ಸೂರು ಕಲ್ಪಿಸುವ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿಲ್ಲ. ಬೃಹತ್ ಪ್ರಮಾಣದ ಸರ್ಕಾರಿ ಭೂಮಿಯನ್ನು ಗುರುತಿಸಿ ನಿವೇಶನ ಹಂಚಿಕೆ ಮಾಡುವ ಕಾರ್ಯಕ್ಕೆ ಇಬ್ಬರು ನೂತನ ಶಾಸಕರು ನಾಂದಿ ಹಾಡಬೇಕೆಂದು ಆಗ್ರಹಿಸಿದ್ದಾರೆ. ಮಡಿಕೇರಿ ನಗರಸಭಾ ಕಚೇರಿಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕೊರತೆ ಇದೆ. ಇದರಿಂದ ಸಾರ್ವಜನಿಕರ ಕೆಲಸಗಳು ವಿಳಂಬವಾಗುತ್ತಿದೆ. ತಕ್ಷಣ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಈ ಕ್ಷೇತ್ರದ ಶಾಸಕರು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ…

Read More

ಮಡಿಕೇರಿ ಮೇ 19 : ಜನ ವಿರೋಧಿ ಆಡಳಿತವನ್ನು ನೀಡಿ ಭಾವನಾತ್ಮಕ ವಿಚಾರಗಳನ್ನು ಮುನ್ನಲೆಗೆ ತಂದು ಜನರ ಗಮನವನ್ನು ಬೇರೆಡೆ ಸೆಳೆದು ರಾಜಕಾರಣ ಮಾಡುತ್ತಿದ್ದ ಬಿಜೆಪಿ ಪಕ್ಷಕ್ಕೆ ಮತದಾರರು ಈ ಬಾರಿ ಸರಿಯಾದ ಪಾಠವನ್ನು ಕಲಿಸಿದ್ದಾರೆ ಎಂದು ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕಲೀಲ್ ಬಾಷಾ ಹಾಗೂ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಬ್ದುಲ್ ರಜಾಕ್ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಉತ್ತಮ ಸಮಾಜ ನಿರ್ಮಾಣಕ್ಕಾಗಿ ಮತದಾರರು ಈ ಬಾರಿ ವಿದ್ಯಾವಂತ ಅಭ್ಯರ್ಥಿಗಳಾದ ಡಾ.ಮಂತರ್ ಗೌಡ ಹಾಗೂ ಪೊನ್ನಣ್ಣ ಅವರನ್ನು ಆಯ್ಕೆ ಮಾಡಿದ್ದಾರೆ. ನೂತನ ಶಾಸಕ ಮಂತರ್ ಗೌಡ ಅವರು ಅಭಿವೃದ್ಧಿಯ ಕುರಿತು ತಮ್ಮದೇ ಆದ ಯೋಚನೆ ಮತ್ತು ಯೋಜನೆಯನ್ನು ಹೊಂದಿದ್ದಾರೆ. ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತದoತೆ ಸರ್ವರನ್ನು ಒಂದಾಗಿ ಕಾಣುವ ಮನೋಭಾವದೊಂದಿಗೆ ಸಮಾಜವನ್ನು ಒಗ್ಗಟ್ಟಾಗಿ ಮುನ್ನಡೆಸಬಲ್ಲ ಶಕ್ತಿ ಮತ್ತು ಸಾಮರ್ಥ್ಯ ಇವರಿಗೆ ಎಂದು ಹೇಳಿದ್ದಾರೆ. ಈ ಬಾರಿ ಮಡಿಕೇರಿ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಸಮುದಾಯ…

Read More

ಮಡಿಕೇರಿ ಮೇ 19 : ರೋಟರಿ ಮಡಿಕೇರಿ ವತಿಯಿಂದ ಜಲಸಿರಿ ಯೋಜನೆಯಡಿ ಪಾರಾಣೆ ಪ್ರೌಢಶಾಲೆಗೆ ರೂ.50 ಸಾವಿರ ಮೌಲ್ಯದ ಶುದ್ಧ ಕುಡಿಯುವ ನೀರಿನ ಘಟಕವನ್ನು ಕೊಡುಗೆಯಾಗಿ ನೀಡಲಾಯಿತು. ರೋಟರಿ ಮಡಿಕೇರಿ ಅಧ್ಯಕ್ಷ ಕೆ.ಸಿ.ಕಾರ್ಯಪ್ಪ, ಸಹಾಯಕ ಗವರ್ನರ್ ರತನ್ ತಮ್ಮಯ್ಯ, ರೋಟರಿಯನ್‌ಗಳಾದ ಎಂ.ಎo.ಕಾರ್ಯಪ್ಪ, ಸುರೇಶ್ ಚೆಂಗಪ್ಪ, ಪ್ರಾಂಶುಪಾಲರಾದ ರಜನಿ ಹಾಗೂ ಸಿಬ್ಬಂದಿಗಳು ಈ ಸಂದರ್ಭ ಉಪಸ್ಥಿತರಿದ್ದರು.

Read More

ಮಡಿಕೇರಿ ಮೇ 19 : ಕೊಡಗು ಜಿಲ್ಲಾ ಪಂಚಾಯಿತಿಯ 5 ತಾಲೂಕು ಪಂಚಾಯಿತಿಗಳಲ್ಲಿ ಗ್ರಾಮ ಪಂಚಾಯತ್‍ಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ವಾಣಿಜ್ಯ ಮಳಿಗೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪ್ಲಾಸ್ಟಿಕ್ ಬಳಕೆ ಮಾಡುತಿದ್ದ ವಾಣಿಜ್ಯ ಮಳಿಗೆಗಳಿಂದ ಪ್ಲಾಸ್ಟಿಕ್ ವಶಪಡಿಸಿಕೊಂಡು ದಂಡ ವಿಧಿಸಲಾಗಿದೆ. ಪ್ಲಾಸ್ಟಿಕ್ ಅನಾಹುತದ ಕುರಿತು ಮುಂದಿನ ದಿನಗಳಲ್ಲಿ ವಾಣಿಜ್ಯ ಮಳಿಗೆಗಳಲ್ಲಿ ಏಕ ಬಳಕೆಯ ಪ್ಲಾಸ್ಟಿಕ್‍ಗಳನ್ನು ಸಂಪೂರ್ಣವಾಗಿ  ನಿಷೇಧ ಮಾಡಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಂತೆ ಗ್ರಾಹಕರಿಗೆ ಈ ಕುರಿತು ಜಾಗೃತಿ ಮೂಡಿಸಲಾಯಿತು. ಪ್ಲಾಸ್ಟಿಕ್ ಬಳಕೆಯನ್ನು ಮಾಡಿದ್ದಲ್ಲಿ ದಂಡದ ಮೊತ್ತ ದುಪ್ಪಟ್ಟು ಆಗುವ ಬಗ್ಗೆ ತಿಳಿಸಿ, ಈ ಬಗ್ಗೆ ಗ್ರಾ.ಪಂ ಗಳಲ್ಲಿ ವ್ಯಾಪಕ ಜಾಗೃತಿ ನೀಡಲು ಕ್ರಮವಹಿಸಲಾಗಿದೆ ಎಂದು ಸ್ವಚ್ಛ ಭಾರತ ಅಭಿಯಾನದ ಜಿಲ್ಲಾ ನೋಡಲ್ ಅಧಿಕಾರಿ ಜಗದೀಶ್ ತಿಳಿಸಿದ್ದಾರೆ.

Read More

ಮಡಿಕೇರಿ ಮೇ 19 : ಗೋಣಿಕೊಪ್ಪಲು, ಶ್ರೀಮಂಗಲ ಮತ್ತು ಬಾಳೆಲೆ ಶಾಖಾ ವ್ಯಾಪ್ತಿಯ 11 ಕೆವಿ ಫೀಡರ್‍ಗಳಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಕೈಗೊಳ್ಳಬೇಕಿರುವುದರಿಂದ ಮೇ, 20 ಮತ್ತು 21 ರಂದು ಬೆಳಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು. ಆದ್ದರಿಂದ ಮೇ, 20 ರಂದು ಕಾನೂರು, ನಾಲ್ಕೇರಿ, ಕೆ.ಬಾಡಗ, ತೂಚಮಕೇರಿ, ಚಿಕ್ಕಮಂಡೂರು, ಬೇಗೂರು, ಹರಿಹರ ಹುದಿಕೇರಿ ಸುತ್ತಮುತ್ತಲವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಹಾಗೆಯೇ ಮೇ, 21 ರಂದು ಕುಟ್ಟ, ಮಂಚಳ್ಳಿ, ನಾಗರಹೊಳೆ, ನಲ್ಲೂರು, ಸುಳುಗೋಡು, ಪೊನ್ನಪ್ಪಸಂತೆ, ಸುತ್ತಮುತ್ತಲವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಕೋರಿದ್ದಾರೆ.

Read More

ಮಡಿಕೇರಿ ಮೇ 19 : ಮೈಸೂರಿನ ನೃಪತುಂಗ ಕನ್ನಡ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು ಕನ್ನಡದಲ್ಲಿ ವಿಜ್ಞಾನ ಮತ್ತು ವಾಣಿಜ್ಯವನ್ನು ವಿದ್ಯಾರ್ಥಿಗಳಿಗೆ ಬೋಧಿಸುತ್ತಿರುವ ಕರ್ನಾಟಕದ ಏಕೈಕ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಕಾಲೇಜಿಗೆ ಈ ಬಾರಿ ಅತ್ಯುತ್ತಮ ಫಲಿತಾಂಶ ಕೂಡ ಬಂದಿರುವುದು ಮತ್ತೊಂದು ಸಂತಸದ ವಿಷಯ. ವಾಣಿಜ್ಯದಲ್ಲಿ ಶೇ.75 ವಿದ್ಯಾರ್ಥಿಗಳು ಪಾಸಾಗಿದ್ದು, ವಿಜ್ಞಾನದಲ್ಲಿ ಶೇ.60 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಾಗಿದ್ದರೂ ಕೂಡ ಇಂಗ್ಲೀಷ್ ನಲ್ಲಿ ಒಬ್ಬ ವಿದ್ಯಾರ್ಥಿ ಹೊರತುಪಡಿಸಿ ಉಳಿದ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಾಣಿಜ್ಯದಲ್ಲಿ ಪೂಜಾ ಶೇ.79.33 ಪಡೆದಿದ್ದು, ನಾಲ್ಕು ವಿದ್ಯಾರ್ಥಿಗಳು ಶೇ.60 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ. ಕನ್ನಡ ವಿಕಾಸ ಶೈಕ್ಷಣಿಕ ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆಯು ಈ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸುತ್ತದೆ. ಈ ಸಂಸ್ಥೆ ಮತ್ತು ಇಲ್ಲಿನ ಶಿಕ್ಷಕರು ಅಳವಡಿಸಿದ ಬೋಧನಾ ಕ್ರಮಗಳು ಈ ಯಶಸ್ಸಿಗೆ ಕಾರಣ. ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ಎಂಬ ನೀತಿಗೆ ಅನುಸಾರವಾಗಿ ಸಂಸ್ಥೆಯು ಮೂವತ್ತ ಮೂರು ವರ್ಷದಿಂದ ಶಿಕ್ಷಣವನ್ನು…

Read More