ಲೇಖಕ: admin

Dear all, We have upcoming Mega Udyoga Mela at Madikeri(Coorg) 26th may 2023 Friday.  Requesting everyone to refer our post in friend’s circle, social media and what’s app group and status. Click here for location: https://g.co/kgs/q7K8vq Click here for Job Registration: https://forms.gle/TVFcFYGhkFo5jVSd6 Contact Person: – Surya (HR) Contact Number: – 9845378454 Regards, HR Department

Read More

ಮಡಿಕೇರಿ ಮೇ 20 :  ಜೆಸಿಐ ಸೋಮವಾರಪೇಟೆ ಪುಷ್ಪಗಿರಿ ಸಂಸ್ಥೆಯ ವತಿಯಿಂದ ಸೋಮವಾರಪೇಟೆ ಸಾರ್ವಜನಿಕ ಆಸ್ಪತ್ರೆಯ ಡಿ ಗ್ರೂಪ್ ಸಿಬ್ಬಂದಿಗಳಾದ ಕೆ.ಎ. ಸಬಿತ  ಅಡುಗೆ ಸಹಾಯಕಿ ಮತ್ತು  ಅನಿಲ್ ಎಲೆಕ್ಟ್ರಿಷಿಯನ್  ಅವರನ್ನು ಜೆಸಿಐ ಅಧ್ಯಕ್ಷೆ ಎಂ.ಎ.ರುಬೀನಾ ಎಂ.ಎ  ಸೆಲ್ಯೂಟ್ ದಿ ಸೈಲೆಂಟ್ ವರ್ಕರ್ ಪ್ರಶಸ್ತಿ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಶಿವಪ್ರಸಾದ್, ಸರ್ಜನ್ ಡಾ. ಸತೀಶ್, ಗುತ್ತಿಗೆದಾರರು ಚಿಂತು, ನಿಕಟ ಪೂರ್ವ ಅಧ್ಯಕ್ಷ ಪ್ರಕಾಶ್ ಕೆ.ಎ., ಅಶೋಕ್, ಲಕ್ಷ್ಮೀಕುಮಾರ್, ರೇಶ್ಮಾವತಿ, ಆಸ್ಪತ್ರೆಯ ಸಿಬ್ಬಂದಿ ತಸ್ಮಿಯಾ ಮತ್ತು ಭವ್ಯ ಉಪಸ್ಥಿತರಿದ್ದರು.

Read More

ಸೋಮವಾರಪೇಟೆ ಮೇ 20 : ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಆಡಳಿತ ಹಾಗೂ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಸಂಭ್ರಮಾಚರಣೆ ನಡೆಯಿತು. ಪಟ್ಟಣದ ಪುಟ್ಟಪ್ಪ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿದರು ಸಂಭ್ರಮಿಸಿದರು. ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್, ನಗರ ಘಟಕದ ಅಧ್ಯಕ್ಷ ಎಚ್.ಎ. ನಾಗರಾಜು, ಪಕ್ಷದ ಪ್ರಮುಖರಾದ ಈಶ್ವರಚಂದ್ರ ವಿದ್ಯಾಸಾಗರ್, ಎಚ್.ಸಿ. ನಾಗೇಶ್, ಮಂಜುನಾಥ್, ಇಂದ್ರೇಶ್, ಕೆ.ಎ.ಪ್ರಕಾಶ್, ಕುಸುಬೂರು ಉಲ್ಲಾಸ್, ಶಶಿಕಲಾ ಚೌಟ, ಮೀನಾ ಕುಮಾರಿ, ಆನಂದ, ಸಂದ್ಯಾ ಸೇರಿದಂತೆ ಕಾರ್ಯಕರ್ತರು ಹಾಜರಿದ್ದರು.

Read More

ಮಡಿಕೇರಿ ಮೇ 20: ಈ ಬಾರಿಯ ಮಳೆಗಾಲದಲ್ಲಿ ಕೊಡಗು ಮತ್ತು ಕೇರಳ ಪ್ರಾಂತ್ಯದಲ್ಲಿ ಪ್ರವಾಹ ಅಥವಾ ಭೂಕುಸಿತ ಆತಂಕ ಇರುವುದಿಲ್ಲ ಎಂದು ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣ ಇಲಾಖೆಯ ನಿವೃತ್ತ ಉಪ ಮಹಾನಿರ್ದೇಶಕ ಡಾ. ಹೆಚ್ ಎಸ್ ಎಂ ಪ್ರಕಾಶ್ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆಯಲ್ಲಿ ಈ ಬಗ್ಗೆ ಮುನ್ಸೂಚನೆ ಮಾಹಿತಿ ನೀಡಿದ್ದು, 2023ನೇ ವರ್ಷದ ಮುಂಗಾರು ಅವಧಿಯ ಮಳೆ ವಿಷಯದಲ್ಲಿ ಮೀಟಿಯೋರಲಜಿ ಅಧ್ಯಯನ ಆಧಾರದ ಮೇಲೆ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, ಈ ಬಾರಿ ಸಾಮಾನ್ಯ ಮುಂಗಾರು ಗಿಂತಲೂ ಕಡಿಮೆ ಮಳೆ ಬೀಳುವ ಸಾಧ್ಯತೆ ಇದೆ.  ಭಾರತದ ಸುತ್ತಮುತ್ತಲು ಇರುವ ನೆಲದ ಮೇಲಿನ ಹಾಗೂ ಸಮುದ್ರದ ಒಳಗಿನ ಹಲವಾರು ದೊಡ್ಡ ಪ್ರಮಾಣದ ಜ್ವಾಲಾಮುಖಿಗಳು ಸದ್ಯದಲ್ಲಿ ನಿಷ್ಕ್ರಿಯವಾಗಿವೆ. ಇದರಿಂದ ಆವಿಯ ಮೂಲಗಳು ಸ್ಥಗಿತವಾಗಿವೆ. 2017 ರಿಂದ 3 ವರ್ಷಗಳ ಅವಧಿಯಲ್ಲಿ ಇವುಗಳು ಅತಿ ಹೆಚ್ಚಿನ ಮಟ್ಟದಲ್ಲಿ ಸಕ್ರಿಯವಾಗಿದ್ದವು ಎಂದು ತಿಳಿಸಿದ್ದಾರೆ. ಸದ್ಯದ ಮಟ್ಟಿನಲ್ಲಿ ಇವುಗಳು ಸಕ್ರಿಯವಾಗುವ ಮುನ್ಸೂಚನೆಗಳು ಕಂಡು ಬರುತ್ತಿಲ್ಲ. ಅದೇ ರೀತಿಯಲ್ಲಿ ಜಾಗತಿಕ ಮಟ್ಟದ…

Read More

ನಾಪೋಕ್ಲು ಮೇ 20 : ಮೂರ್ನಾಡು ಪದವಿ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ ಸ್ಥಾಪನೆ ಮತ್ತು ಮೊದಲ ಪೂರ್ವಭಾವಿ ಸಭೆಯನ್ನು  IQAC  ಅಡಿಯಲ್ಲಿ ಕಾಲೇಜಿನ ಆವರಣದಲ್ಲಿ ಪ್ರಾಂಶುಪಾಲರಾದ ಡಾ. ರೇಖಾ ಚಿಣ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿಗಳ ಸಂಘದ ಸಂಯೋಜಕ ನವೀನ್ ವಿದ್ಯಾರ್ಥಿ ಸಂಘದ ಪ್ರಾಮುಖ್ಯತೆಯ ಉದ್ದೇಶಗಳನ್ನು ಸಭೆಗೆ ತಿಳಿಸಿದರು. ಹಳೆ ವಿದ್ಯಾರ್ಥಿ ಸಂಘದ ನೂತನ ಉಪಾಧ್ಯಕ್ಷರಾಗಿ ಉಸ್ಮಾನ್, ಕಾರ್ಯದರ್ಶಿಗಳಾಗಿ ನೌಶಾದ್, ಖಜಾಂಚಿಯಾಗಿ ಕವನ್ ಕರುಂಬಯ್ಯ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು IQAC ಸಂಚಾಲಕಿ ವಿಲ್ಮಾ ರವರು ನಡೆಸಿದರೆ, ದೈಹಿಕ ಶಿಕ್ಷಕರಾದ ಬೋಪಣ್ಣನವರು ಸ್ವಾಗತಿಸಿದರು, ಉಪನ್ಯಾಸಕ ಹರೀಶ್ ವಂದಿಸಿದರು. ವರದಿ : ದುಗ್ಗಳ ಸದಾನಂದ. 

Read More

ಮಡಿಕೇರಿ ಮೇ 20 : ಕುಶಾಲನಗರ 220/11 ಕೆವಿ ವಿದ್ಯುತ್ ಉಪ-ಕೇಂದ್ರದಿಂದ ಹೊರಹೋಗುವ ಎಫ್13 ಎಸ್‍ಎಲ್‍ಎನ್ ಫೀಢರ್‍ನಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಕೈಗೊಳ್ಳಬೇಕಿರುವುದರಿಂದ ಮೇ 22 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು. ಆದ್ದರಿಂದ ಚಿಕ್ಕತ್ತೂರು, ದೊಡ್ಡತ್ತೂರು, ಹಾರಂಗಿ ಸುತ್ತಮುತ್ತಲವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.

Read More

ಮಡಿಕೇರಿ ಮೇ 20 : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜನ ಆರೋಗ್ಯ ಸಂಸೆ,್ಥ ಎಪಿಡಿಮಿಯಲಾಜಿ ವಿಭಾಗ, ನಿಮ್ಹಾನ್ಸ್, ಬೆಂಗಳೂರು ಇವರ ಸಹಯೋಗದಲ್ಲಿ ಅನುಷ್ಠಾನಗೊಳ್ಳುತ್ತಿರುವ ಹಾಗೂ ರಾಜ್ಯ ಸರ್ಕಾರದ ಅನುದಾನಿತ ಯೋಜನೆಯಾದ ‘ಯುವ ಸ್ಪಂದನ’ ಯೋಜನೆ-ಯುವಜನರ ಮಾನಸಿಕ ಆರೋಗ್ಯಕ್ಕೆ ಪೂರಕ ಸೇವೆ ಒದಗಿಸಲು ಹಾಗೂ ಸಮಗ್ರ ಅಭಿವೃದ್ಧಿ ಮತ್ತು ಅನುಷ್ಠಾನದಡಿಯಲ್ಲಿ ಕಚೇರಿ ಕೆಲಸಕ್ಕೆ ಯುವ ಸಮಾಲೋಚಕರು ಹಾಗೂ ಯುವ ಪರಿವರ್ತಕರಾಗಿ ಕಾರ್ಯನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 21 ರಿಂದ 35 ವರ್ಷದೊಳಗಿನ ಪದವಿ ಹಾಗೂ ಮೇಲ್ಪಟ್ಟು ವಿದ್ಯಾಭ್ಯಾಸ ಮಾಡಿರುವ, ಕನ್ನಡವನ್ನು ಬರೆಯುವ ಹಾಗೂ ಸ್ಪಷ್ಟವಾಗಿ ಮಾತನಾಡುವ, ಸಮುದಾಯದಲ್ಲಿ ಕೆಲಸ ಮಾಡಲು ಆಸಕ್ತಿ ಹಾಗೂ ಹುಮ್ಮಸ್ಸು, ಉತ್ತಮ ಅಂರ್ತವ್ಯಕ್ತಿತ್ವ, ಸಂವಹನ ಕೌಶಲ್ಯದ ಜೊತೆಗೆ ಸಂವಾದ ಕೌಶಲ್ಯವನ್ನು ಹೊಂದಿರುವ, ಕೊಡಗು ಜಿಲ್ಲೆಯಲ್ಲಿ ಪ್ರಯಾಣಿಸುವಂತಹ, ಸೇವಾ ಮನೋಭಾವ ಹೊಂದಿರುವ ಅಭ್ಯರ್ಥಿಗಳು ತಮ್ಮ ಸ್ವ ವಿವರಗಳು ಮತ್ತು ಅಂಕಪಟ್ಟಿಗಳೊಂದಿಗೆ ಮೇ, 31 ರಂದು ನೇರ ಸಂದರ್ಶನಕ್ಕೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜನರಲ್…

Read More

ಮಡಿಕೇರಿ ಮೇ 20 : ಮಡಿಕೇರಿ ವಿಭಾಗದ ಸೋಮವಾರಪೇಟೆ ಪ್ರಾದೇಶಿಕ ವಲಯ ವ್ಯಾಪ್ತಿಯ ಐಗೂರು ಗ್ರಾಮದ ಕಾಜೂರು ಸಸ್ಯ ಕ್ಷೇತ್ರ ಮತ್ತು ಹೆಬ್ಬಾಲೆ ಗ್ರಾಮದ ಕಣಿವೆ ಸಸ್ಯ ಕ್ಷೇತ್ರ್ರಗಳಲ್ಲಿ ಪ್ರತಿ ವರ್ಷವೂ ಆರ್‍ಎಸ್‍ಪಿಡಿ ಎಂಬ ಯೋಜನೆಯಲ್ಲಿ ವಿವಿಧ ಜಾತಿಯ ಸಸಿಗಳನ್ನು ವಿತರಿಸಲಾಗುತ್ತದೆ. 2023-24 ನೇ ಸಾಲಿನಲ್ಲೂ ಸಹ ಶ್ರೀಗಂಧ, ಹೊನ್ನೆ, ಮಾವು, ಮಹಾಗನಿ, ಬಿದಿರು, ಅತ್ತಿ, ಮತ್ತಿ, ನೇರಳೆ, ನೊಗ, ಹೆಬ್ಬೇವು, ಬಳಂಜಿ, ಗಸಗಸೆ, ಜಂಬೂನೇರಳೆ, ಕರಿಬೇವು, ಪನ್ನೇರಳೆ, ಪುನರ್ಪುಳಿ, ತೇಗ, ಸೀಬೆ, ಕಾಡುನೆಲ್ಲಿ ಮತ್ತಿತರ ಸಸಿಗಳನ್ನು ಮೇ, 22 ರಿಂದ ರೈತರಿಗೆ ರಿಯಾಯಿತಿ ದರದಲ್ಲಿ ವಿತರಿಸಲಾಗುವುದು. ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳುವುದು. ಸಸಿಗಳನ್ನು ಪಡೆಯಲು ಫಲಾನುಭವಿಗಳು ಅರ್ಜಿ, ಸ್ಥಳದ ಆರ್‍ಟಿಸಿ, ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಖಾತೆಯ ವಿವರದ ಪ್ರತಿ, ಪಾಸ್ ಪೋರ್ಟ್ ಅಳತೆಯ 2 ಭಾವಚಿತ್ರದೊಂದಿಗೆ ನಿಗದಿತ ಶುಲ್ಕ ಭರಿಸಿ ಸಸಿ ಪಡೆದುಕೊಳ್ಳುವುದು. ಸಸಿಗಳನ್ನು ಪಡೆಯಲು ವೈ.ಕೆ.ಜಗದೀಶ್ ಉಪ ವಲಯ ಅರಣ್ಯಧಿಕಾರಿ ಮಾದಾಪುರ ಶಾಖೆ(ಕಾಜೂರು ಸಸ್ಯ ಕ್ಷೇತ್ರ) ದೂ.ಸಂ.7349117090,…

Read More

ಮಡಿಕೇರಿ ಮೇ 20 : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ತೋಟಗಾರಿಕೆ ಇಲಾಖೆ ಹಾಗೂ ಕೊಡಗು ಜಿಲ್ಲಾ ಹಾಪ್ ಕಾಮ್ಸ್ ಸಹಯೋಗದಲ್ಲಿ ಮೇ 26 ರಿಂದ 28 ರವರೆಗೆ ಕೊಡಗು ಜಿಲ್ಲಾ  ಹಾಪ್ ಕಾಮ್ಸ್  ನಲ್ಲಿ ಮಾವು ಮತ್ತು ಹಲಸು ಮೇಳ ನಡೆಯಲಿದೆ. ಮಾವು ಮತ್ತು ಹಲಸು ಮೇಳದ ಉದ್ಘಾಟನಾ ಕಾರ್ಯಕ್ರಮವು ಮೇ 26 ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ.

Read More

ಮಡಿಕೇರಿ ಮೇ 20 : ನಗರಸಭೆ ವತಿಯಿಂದ ಟೌನ್ ಹಾಲ್ ಬಳಿಯಲ್ಲಿ ಆರ್‍ಆರ್‍ಆರ್ ಕೇಂದ್ರವನ್ನು ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ, ಪೌರಾಯುಕ್ತ ವಿಜಯ ಹಾಗೂ ಚೇಂಬರ್ ಆಫ್ ಕಾಮರ್ಸ್ ಪದಾಧಿಕಾರಿಗಳು ಸೇರಿ ಕಸ ಸಂಗ್ರಹಣೆ ಹಾಗೂ ತ್ಯಾಜ್ಯವನ್ನು ನೀಡುವ ಮೂಲಕ ‘ನನ್ನ ಜೀವನ, ನನ್ನ ಸ್ವಚ್ಛ ನಗರ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ನಗರಸಭೆ ಪೌರಾಯುಕ್ತ ವಿಜಯ್ ಮಾತನಾಡಿ ತಮ್ಮ ಮನೆಗಳಲ್ಲಿ ಇರುವ ತ್ಯಾಜ್ಯವನ್ನು ಆರ್‍ಆರ್‍ಆರ್ ಕೇಂದ್ರಗಳಿಗೆ ನೀಡಿದ್ದಲ್ಲಿ, ಈ ತ್ಯಾಜ್ಯಗಳಲ್ಲಿ ಉಪಯೋಗವಾಗುವ ಅವಶ್ಯವಿರುವವರಿಗೆ ಉಪಯೋಗಕ್ಕಾಗಿ ನೀಡಲಾಗುತ್ತದೆ. ಇನ್ನುಳಿದ ತ್ಯಾಜ್ಯವನ್ನು ಮರು ಬಳಕೆಗೆ ಕಳುಹಿಸಿಕೊಡಲಾಗುವುದು ಎಂದು ಹೇಳಿದರು. ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ್ ಮಿಷನ್ 2 ಅಡಿಯಲ್ಲಿ ಜೂ.5 ರವರೆಗೆ ‘ನನ್ನ ಜೀವನ, ನನ್ನ ಸ್ವಚ್ಛ ನಗರ’ ಕಾರ್ಯಕ್ರಮದ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಆರ್‍ಆರ್‍ಆರ್(ರೆಡ್ಯೂಸ್, ರೆಸ್ಕ್ಯೂ, ರೀ ಸೈಕಲ್) ಕೇಂದ್ರಗಳನ್ನು ನಗರ ವ್ಯಾಪ್ತಿಯಲ್ಲಿ 5 ಸ್ಥಳಗಳಲ್ಲಿ ಮಡಿಕೇರಿ ನಗರಸಭೆ ವತಿಯಿಂದ ತೆರೆಯಲಾಗಿದೆ. ಸಾರ್ವಜನಿಕರು (ಆಟಿಕೆ ಸಾಮಾಗ್ರಿಗಳು, ಬಟ್ಟೆ-ಹಳೆಯ ಜೀನ್ಸ್, ಸಮವಸ್ತ್ರ,…

Read More