ಮಡಿಕೇರಿ ಮೇ 18 : ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಅಪೂರ್ಣಗೊಂಡ ಕಾಮಗಾರಿಗಳಿಗೆ ‘ಬಿಲ್’ ಮಾಡುವ ಪ್ರಯತ್ನಗಳು ನಡೆಯುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ಗಂಭೀರ ಆರೋಪ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಅಪೂರ್ಣ ಕಾಮಗಾರಿಗಳಿಗೆ ಬಿಲ್ ಮಾಡಬಾರದು. ಒಂದು ವೇಳೆ ನಿಯಮ ಮೀರಿ ಇಂತಹ ಕಾರ್ಯಕ್ಕೆ ಕೈಹಾಕಿದರೆ ತಪ್ಪಿತಸ್ಥ ಅಧಿಕಾರಿಗಳ ತಲೆದಂಡ ಖಚಿತವೆಂದು ತಿಳಿಸಿದರು. ಮಡಿಕೇರಿಯ ಜಿಲ್ಲಾಡಳಿತ ಭವನದ ತಡೆಗೋಡೆಯ ಕಾಮಗಾರಿ ಅಪೂರ್ಣಗೊಂಡಿದೆ. ಪ್ರಸಕ್ತ ಸಾಲಿನ ಮುಂಗಾರು ಜೂನ್ ಎರಡನೇ ವಾರದಲ್ಲಿ ಆರಂಭವಾಗುವ ಸಾಧ್ಯತೆ ಇದೆ. ಹೀಗಿದ್ದೂ ಇಲ್ಲಿಯವರೆಗೂ ಇದರ ದುರಸ್ತಿ ಕಾರ್ಯ ಪೂರ್ಣವಾಗಿಲ್ಲ, ಮಳೆೆಗಾಲದಲ್ಲಿ ಮತ್ತೆ ಈ ತಡೆಗೋಡೆಯ ಭಾಗ ಕುಸಿಯುವ ಸಾಧ್ಯತೆ ಇದೆ ಆತಂಕ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನ ಹರಿಸಿ, ಸಾರ್ವಜನಿಕರ ಹಿತದೃಷ್ಟಿಯಿಂದ ಜಿಲ್ಲಾಡಳಿತ ಭವನದ ತಡೆಗೋಡೆ ಕೆಳಭಾಗದಲ್ಲಿರುವ ಮಡಿಕೇರಿ-ಮಂಗಳುರು ರಸ್ತೆಯ ಸಂಚಾರವನ್ನು ಮುಂಗಾರಿನ ಆಗಸ್ಟ್ ಅಂತ್ಯದವರೆಗೆ ಬಂದ್ ಮಾಡಬೇಕೆಂದು ಮೈನಾ ಒತ್ತಾಯಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲುವಿನೊಂದಿಗೆ ಸರ್ಕಾರ…
ಲೇಖಕ: admin
ಮಡಿಕೇರಿ ಮೇ 18 : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ 4ನೇ ಅಂಗವಾಗಿರುವ ಪತ್ರಿಕಾರಂಗ ಸಮಾಜದ ಕೈಗನ್ನಡಿಯಂತೆ ಕಾರ್ಯನಿರ್ವಹಿಸುವ ದಿಟ್ಟತನವನ್ನು ಹೊಂದಿದೆ. ಪತ್ರಕರ್ತರಾದವರಿಗೆ ವಿವೇಚನಾ ಶಕ್ತಿಯ ಅಗತ್ಯವಿದೆ ಎಂದು ಕೊಡಗು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ.ಅಶೋಕ್ ಸಂಗಪ್ಪ ಅಭಿಪ್ರಾಯಪಟ್ಟಿದ್ದಾರೆ. ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ನಡೆದ ಶಕ್ತಿ ಪತ್ರಿಕೆಯ ಸಲಹಾ ಸಂಪಾದಕ ಬಿ.ಜಿ.ಅನಂತಶಯನ ರಚಿತ “ಸೊಡರು” ಪುಸ್ತಕ ವಿಮರ್ಶೆ ಮತ್ತು ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪತ್ರಕರ್ತರಿಗೆ ಭಾಷಾ ಕೌಶಲ್ಯ, ವಿಷಯದ ಆಳವಾದ ಜ್ಞಾನ, ಅಧ್ಯಯನ, ವಿಷಯವನ್ನು ವಿಶ್ಲೇಷಿಸುವ ಅರಿವು ಇರಬೇಕು, ವಿವೇಚನಾತ್ಮಕ ಶಕ್ತಿಯನ್ನು ಹೊಂದಿರಬೇಕು ಮತ್ತು ಸನ್ನಿವೇಶದ ಗಾಂಭೀರ್ಯತೆ ತಿಳಿದಿರಬೇಕು ಎಂದರು. ವಿದ್ಯಾರ್ಥಿಗಳಿಗಾಗಿ ಪತ್ರಿಕೋದ್ಯಮದ ಬಗ್ಗೆ ಕಾರ್ಯಾಗಾರ ಮತ್ತು ಸಮಾಜದ ಅಂಕು ಡೊಂಕುಗಳನ್ನು ಸರಿಪಡಿಸುವ ಕುರಿತು ಹಿರಿಯರ ಮಾರ್ಗದರ್ಶನದಲ್ಲಿ ಚಿಂತನ-ಮಂಥನ ಕಾರ್ಯಕ್ರಮ ನಡೆಸುವುದಾಗಿ ತಿಳಿಸಿದರು. ಸೊಡರು ಎಂದರೆ ದೀಪ ಎಂದರ್ಥ, ಸೊಡರು ಎಂಬ ಜ್ಞಾನದ ಜ್ಯೋತಿಯ ಮೂಲಕ ನಮ್ಮಲ್ಲಿರುವ ಅಜ್ಞಾನವನ್ನು ತೊಡೆದು ಹಾಕಬೇಕು. ಸತ್ಯವನ್ನು ಎಂದೂ ಅಸತ್ಯ ಎಂದು…
ಮಡಿಕೇರಿ ಮೇ.18 : ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2 ಅಧ್ಯಕ್ಷರಾದ ಟಿ.ಎಂ.ವಿಜಯ ಭಾಸ್ಕರ್ ಮತ್ತು ಸಲಹೆಗಾರ ಪ್ರಸನ್ನ ಕುಮಾರ್ ನಗರದ ಅರಣ್ಯ ಭವನ, ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕøತಿ ಹಾಗೂ ಅಬಕಾರಿ ಇಲಾಖೆಗಳಲ್ಲಿ ಆಡಳಿತ ಸುಧಾರಣೆ ಸಂಬಂಧಿಸಿದಂತೆ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದರು. ನಗರದ ಅರಣ್ಯ ಭವನದಲ್ಲಿ ಅರಣ್ಯ ಇಲಾಖೆಯಲ್ಲಿ ಆಡಳಿತ ಸುಧಾರಣೆ ಸಂಬಂಧಿಸಿದಂತೆ ಮಾಹಿತಿ ಪಡೆದರು. ಕೊಡಗು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್.ಎನ್.ಮೂರ್ತಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಮೊಹಿಸಿನ್ ಭಾಷಾ, ಶ್ರೀನಿವಾಸ್ ನಾಯಕ್, ವೃತ್ತ ಅರಣ್ಯ ಅಧಿಕಾರಿ ಹನುಮಂತ ರಾಜು ಹಾಗೂ ಇತರರು ಹಲವು ಮಾಹಿತಿ ನೀಡಿದರು. ಪ್ರವಾಸೋದ್ಯಮ ಇಲಾಖೆಗೆ ಭೇಟಿ ನೀಡಿ ಪ್ರವಾಸೋದ್ಯಮ ಇಲಾಖೆಯ ಕಾರ್ಯಚಟುವಟಿಕೆ ಮತ್ತು ಆಡಳಿತ ಸುಧಾರಣೆ ಬಗ್ಗೆ ಮಾಹಿತಿ ಪಡೆದರು. ಹಾಗೆಯೇ ಅಬಕಾರಿ ಇಲಾಖೆಗೆ ಭೇಟಿ ನೀಡಿ ಆಡಳಿತ ಸುಧಾರಣೆ ಸಂಬಂಧಿಸಿದಂತೆ ಅಬಕಾರಿ ಉಪ ಆಯುಕ್ತರಾದ ಜಗದೀಶ ನಾಯ್ಕ್ ಅವರಿಂದ ಮಾಹಿತಿ ಪಡೆದರು.
ಮಡಿಕೇರಿ ಮೇ.18 : ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ‘ಅಂತರರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆ’ ಪ್ರಯುಕ್ತ ‘ವಸ್ತು ಸಂಗ್ರಹಾಲಯಗಳು ಮತ್ತು ಸುಸ್ಥಿರತೆ ಮತ್ತು ಯೋಗಕ್ಷೇಮ’ ಎಂಬ ಘೋಷವಾಕ್ಯದಡಿ ಕೊಡಗು ಜಿಲ್ಲೆಯ ಪಾರಂಪರಿಕ ಪರಿಕರಗಳ ವಿಶೇಷ ಪ್ರದರ್ಶನಕ್ಕೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಚಾಲನೆ ನೀಡಿದರು. ನಗರದ ಕೋಟೆ ಆವರಣದಲ್ಲಿರುವ ಸರ್ಕಾರಿ ಸಂಗ್ರಹಾಲಯ ಬಳಿ ಪಾರಂಪರಿಕ ಪರಿಕರಗಳ ವಿಶೇಷ ಪ್ರದರ್ಶನ ಉದ್ಘಾಟಿಸಿದರು. ವೈದ್ಯರು ಹಾಗೂ ಪ್ರಾಚೀನ ವಸ್ತುಗಳ ಸಂಗ್ರಹಕಾರರಾದ ಡಾ.ಎಂ.ಜಿ.ಪಾಟ್ಕರ್, ಪ್ರಾಚೀನ ವಸ್ತುಗಳ ಸಂಗ್ರಹಕಾರರಾದ ಪಿ.ಕೆ.ಕೇಶವ ಮೂರ್ತಿ, ಪೊನ್ನಚ್ಚನ ಮಧು ಸೋಮಣ್ಣ ಇತರರು ಪಾಲ್ಗೊಂಡಿದ್ದರು. 50 ವರ್ಷಗಳ ಹಿಂದೆ ಬಳಸುತ್ತಿದ್ದ ಕಂಚಿನ ಪದಾರ್ಥಗಳಾದ ತಟ್ಟೆ, ಲೋಟ, ಕಡಾಯಿ, ಪಾವು, ಸೇರು, ಕಂಚಿನ ತಪ್ಲ, ಕಂಚಿನ ಚೆಂಬು, ಪೆಟ್ಟಿಗೆ, ಊಟದ ಬಾಕ್ಸ್, ಹಾಗೆಯೇ ಮರದ ವಸ್ತುಗಳಾದ ಸೇವಿಗೆ ಮಣೆ, ಬುಟ್ಟಿ, ತಂಬಿಗೆ, ಕಳಸ, ನೀರಿನ ಫಿಲ್ಟರ್, ಮರದ ದುಡಿ, ಕಂಜಿಕಲ, ಕಳಿಕೋಲ್, ಎಲ್‍ತಟ್ಟೆ, ಪಲಿಯ, ಪೋಂದಾಯ ಚಂದುಕ, ಕುರಿ ಕುಟ್ಟ್, ಚೇಕಲ, ಉದಿ, ಪರೆ,…
ಮಡಿಕೇರಿ ಮೇ 18 : ಜಿಲ್ಲೆಯ ಹಲವೆಡೆ ಇಂದು ಸಂಜೆ ಭಾರೀ ಗಾಳಿ ಮಳೆಯಾಗಿದ್ದು, ಸುಂಟಿಕೊಪ್ಪದಲ್ಲಿ ಬೃಹತ್ ಮರವೊಂದು ಮನೆಯ ಮೇಲಕ್ಕೆ ಬಿದ್ದ ಘಟನೆ ನಡೆದಿದೆ. ಮನೆ ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುಂಟಿಕೊಪ್ಪ ನಾಡಕಚೇರಿ ಹಿಂಭಾಗದಲ್ಲಿನ ಲೋಕೋಪಯೋಗಿ ಇಲಾಖಾ ವಸತಿ ಗೃಹದಲ್ಲಿ ಮುಕ್ತಾರ್ ಎಂಬವರು ವಾಸವಿದ್ದು, ಗಾಳಿ ಮಳೆಯ ಸಂದರ್ಭ ಮಾವಿನ ಮರ ಮನೆಯ ಮೇಲೆ ಉರುಳಿ ಬಿದ್ದಿದೆ. ಮನೆಯಲ್ಲಿದ್ದ ನಾಲ್ವರು ಮಕ್ಕಳು ಸೇರಿದಂತೆ ಆರು ಮಂದಿ ಆಶ್ಚರ್ಯಕರ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಗ್ರಾಮ ಪಂಚಾಯ್ತಿ ಸಿಬ್ಬಂದಿಗಳು ಹಾಗೂ ಸುಂಟಿಕೊಪ್ಪ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿ, ಮರ ತೆರವಿಗೆ ಅಗತ್ಯ ಕ್ರಮ ಕೈಗೊಂಡಿದ್ದಾರೆ.
ಮಡಿಕೇರಿ ಮೇ 18 : ಪರದಂಡ ಚಂಗಪ್ಪ ಅವರ ಕೃತಿಯಲ್ಲಿ ಕಂಡು ಬರುವ ಗ್ರಾಮ ವ್ಯವಸ್ಥೆಯ ಆದರ್ಶಗಳು ಮತ್ತೊಮ್ಮೆ ಪುನರ್ ನಿರ್ಮಾಣವಾಗಬೇಕೆಂದು ಬೆಂಗಳೂರಿನ ಓಶಿಯಾನಿಕ್ ಕಾಲೇಜ್ ಆಫ್ ಹೈಯರ್ ಎಜುಕೇಶನ್ ಚೇರ್‍ಮೆನ್ ಡಾ.ತೇಜ್ ಪೂವಯ್ಯ ನಡಿಕೇರಿಯಂಡ ಆಶಯ ವ್ಯಕ್ತಪಡಿಸಿದರು. ಅಲ್ಲಾರಂಡ ರಂಗಚಾವಡಿ ಹಾಗೂ ಪರದಂಡ ಚಂಗಪ್ಪ ಕುಟುಂಬಸ್ಥರ ಸಹಯೋಗದಲ್ಲಿ ನಗರದ ಭಾರತೀಯ ವಿದ್ಯಾಭವನದಲ್ಲಿ ನಡೆದ ಪರದಂಡ ಚಂಗಪ್ಪ ಅವರ 105ನೇ ಸಂಸ್ಮರಣಾ ದಿನವನ್ನು ಉದ್ಘಾಟಿಸಿ ಮಾತನಾಡಿದರು. ಪರದಂಡ ಚಂಗಪ್ಪ ಅವರ ಕೃತಿಯಲ್ಲಿ ಕೊಡಗಿನ ಎಲ್ಲಾ ಸಮುದಾಯಗಳು ಕೊಡವ ಭಾಷಿಕ ಸಮುದಾಯದ ಪುರಾತನ ಗ್ರಾಮ ವ್ಯವಸ್ಥೆಯಲ್ಲಿ ಒಟ್ಟಾಗಿ ಬಾಳುತ್ತಿದ್ದರು. ಒಂದು ಸಮುದಾಯ ಮತ್ತೊಂದು ಸಮುದಾಯದೊಂದಿಗೆ ಹೊಂದಿಕೊಂಡು ಬದುಕುತ್ತಿದ್ದ ಆದರ್ಶ ಸಮುದಾಯ ಇತ್ತು ಎಂಬುದನ್ನು ಪರದಂಡ ಚಂಗಪ್ಪ ಅವರ ಕೃತಿಯಲ್ಲಿ ನಿರೂಪಿಸಿದ್ದಾರೆ ಎಂದರು. ಆದರೆ ಜಾಗತೀಕರಣ ಸಂದರ್ಭದಲ್ಲಿ ಹಣಗಳಿಕೆ ಉಂಟಾದ ಕಾರಣ ಹಳೆಯ ಗ್ರಾಮ ವ್ಯವಸ್ಥೆ ಕುಸಿದು ಹೋಗಿ ಹೊಸ ಆರ್ಥಿಕ ವ್ಯವಸ್ಥೆ ಬಂದ ಕಾರಣ ಸಣ್ಣ ಸಮುದಾಯ ಮೂಲೆ ಗುಂಪಾದವು. ಇದರಿಂದ ಕೊಡಗಿನ…
ನಾಪೋಕ್ಲು ಮೇ 18 : ಕುಂಜಿಲದ ಪಯ್ಯಡಿ ಕುಟುಂಬಸ್ಥರು ವರ್ಷಂಪ್ರತೀ ನಡೆಸಿಕೊಂಡು ಬರುತ್ತಿರುವ ಮೂರನೇ ವರ್ಷದ ಗ್ರಾಂಡ್ ರಾತೀಬ್ ಮಜ್ಲಿಸ್ ಹಾಗೂ ಖತಮ್ ದುವಾ ಪಯ್ಯಡಿ ಮೂಸಾರವರ ಮನೆಯಲ್ಲಿ ಸಂಭ್ರಮದಿಂದ ನಡೆಯಿತು. ಕುಂಜಿಲ ಖುತುಬುಲ್ ಆರಿಫೀನ್ ರಾತೀಬ್ ಸಂಘ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕುಟುಂಬಸ್ಥರು ಹಾಗೂ ಸಮಾಜ ಬಾಂಧವರು ದುವಾ ಮಜ್ಲಿಸ್ ನಲ್ಲಿ ಪಾಲ್ಗೂಂಡರು. ಈ ಸಂದರ್ಭ ಮಾತನಾಡಿದ ಪಯ್ಯಡಿ ಹಂಸ ಹಸನ್ ಮುಂದಿನ ವರ್ಷ ರಾತೀಬ್ ಅನ್ನು ಅತ್ಯಂತ ವಿಜ್ರಂಭಣೆಯಿಂದ ನಡೆಸುವುದಾಗಿ ತಿಳಿಸಿದರು. ವರದಿ:ಸಾಜಿದ್ ಪಯ್ಯಡಿ
ಮಡಿಕೇರಿ ಮೇ 18 : ಬಾಳೆಯಡ ಕುಟುಂಬಸ್ಥರಿಂದ ನಾಪೋಕ್ಲುವಿನಲ್ಲಿ ಆಯೋಜಿತ 21ನೇ ವರ್ಷದ ‘ಬಾಳೆಯಡ ಕಪ್ ಕ್ರಿಕೆಟ್ ನಮ್ಮೆ’ಯ ಫೈನಲ್ ಹಾಗೂ ಸಮಾರೋಪ ಸಮಾರಂಭ ಮೇ 21 ರಂದು ನಡೆಯಲಿದೆ ಎಂದು ಕ್ರೀಡಾಕೂಟದ ಅಧ್ಯಕ್ಷ ¯ಫ್ಟಿನೆಂಟ್ ಕರ್ನಲ್ ಬಾಳೆಯಡ ಸುಬ್ರಮಣಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಪೋಕ್ಲು ಚೆರಿಯಪರಂಬುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಬೆಳಗ್ಗೆ 11 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಬಳಿಕ ಫೈನಲ್ ಪಂದ್ಯ ನಡೆಯಲಿದೆಯೆಂದು ತಿಳಿಸಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ 1975ರ ಹಾಕಿ ವಲ್ರ್ಡ್ ಕಪ್ ವಿಜೇತ ಭಾರತ ತಂಡದ ಆಗಿನ ಕ್ಯಾಪ್ಟನ್ ಪದ್ಮಶ್ರೀ ಅಜಿತ್ ಪಾಲ್ ಸಿಂಗ್, ಅಂದಿನ ಭಾರತ ತಂಡದ ಸದಸ್ಯ ಅರ್ಜುನ ಪ್ರಶಸ್ತಿ ಪುರಸ್ಕೃತ ಬಿ.ಪಿ.ಗೋವಿಂದ, ಒಲಂಪಿಯನ್ ವಿ.ಜೆ. ಫಿಲಿಪ್ಸ್, ಒಲಂಪಿಯನ್ ಅಸ್ಲಾಂ ಶೇರ್ ಖಾನ್, ವಿಶ್ವ ಕಪ್ ಹಾಕಿ ವಿಜೇತ 1975ರ ಭಾರತ ತಂಡದ ಸದಸ್ಯ ಪೈಕೆರ ಕಾಳಯ್ಯ, ಬ್ರಿಗೇಡಿಯಾರ್ ಹರಿ ಚರಣ್ ಸಿಂಗ್, ಟ್ರಿಪಲ್ ಒಲಂಪಿಯನ್ ಮನೆಯಪಂಡ ಎಂ.ಸೊಮಯ್ಯ, ವಿರಾಜಪೇಟೆ ಕ್ಷೇತ್ರದ…
ಮಡಿಕೇರಿ ಮೇ 18 : ಎಸ್‌ವೈಎಸ್ ಕೊಡಗು ಜಿಲ್ಲಾ ಸಮಿತಿಯಿಂದ ಸುಸಜ್ಜಿತವಾಗಿ ನವೀಕರಿಸಲ್ಪಟ್ಟ ಸಿದ್ದಾಪುರದ ವರಕ್ಕಲ್ ಸಮಸ್ತ ಭವನ, ಖಾಝಿ ಹೌಸ್ ಹಾಗೂ ಸಂಸ್ಥೆಯ ಕೇಂದ್ರ ಸಮಿತಿಯ ಅಮೃತ ಮಹೋತ್ಸವದ ಪ್ರಯುಕ್ತ ಆಯೋಜಿತ ಜಾಗೃತಿ ಯಾತ್ರೆಯ ಉದ್ಘಾಟನಾ ಸಮಾವೇಶ ಮೇ 21 ರಂದು ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಎಸ್‌ವೈಎಸ್ ಕೊಡಗು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ವೈ.ಅಶ್ರಫ್ ಫೈಝಿ ಮಾತನಾಡಿ, ಅಂದು ಸಂಜೆ ಸಿದ್ದಾಪುರದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಸಮಸ್ತ ಕೇಂದ್ರ ಮುಶಾವರ ಸದಸ್ಯ ಎಂ.ಎಂ.ಅಬ್ದುಲ್ಲಾ ಫೈಝಿ ಧಜ್ವಾರೋಹಣದ ಮೂಲಕ ಚಾಲನೆ ನೀಡಲಿದ್ದಾರೆ. ವರಕ್ಕಲ್ ಭವನ ಹಾಗೂ ಖಾಝಿ ಹೌಸ್‌ನ್ನು ಸಮಸ್ತ ಕೇಂದ್ರ ಜಂ-ಇಯ್ಯತುಲ್ ಉಲಮಾ ಅಧ್ಯಕ್ಷ ಸಯ್ಯಿದುಲ್ ಉಲಮಾ ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕ್ಕೋಯ ತಂಙಳ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಎಸ್.ವೈ.ಎಸ್ ಜಿಲ್ಲಾಧ್ಯಕ್ಷ ಜನಾಬ್ ಸಿ.ಪಿ.ಎಂ.ಬಶೀರ್ ಹಾಜಿ ವಹಿಸಲಿದ್ದಾರೆಂದರು. ಕಾರ್ಯಕ್ರಮದಲ್ಲಿ ಹಲವಾರು ಉಲಮಾ ಉಮರಾ ನಾಯಕರು ಪಾಲ್ಗೊಳ್ಳಲಿದ್ದು, ಸಮಸ್ತ ಕೇಂದ್ರ ಮುಶಾವರ ಸದಸ್ಯ ಎಂ.ಎ.ಅಬ್ದುಲ್ಲಾ ಫೈಝಿ ಉಸ್ತಾದ್, ಎಸ್‌ಕೆಜೆಎಂಸಿಸಿ ಕೇಂದ್ರ ಸಮಿತಿ ಕಾರ್ಯದರ್ಶಿ ಅಬ್ದುಲ್…
ಬೆಂಗಳೂರು: ಕಳೆದ ಕೆಲ ದಿನಗಳಿಂದ ನಡೆಯುತ್ತಿದ್ದ ಸಿಎಂ ಆಯ್ಕೆ ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಆಯ್ಕೆಯಾಗಿದ್ದು, ಉಪಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಎ.ಎನ್.ಐ ಮೂಲಗಳು ತಿಳಿಸಿದೆ. ಆ ಮೂಲಕ ಸಿದ್ದರಾಮಯ್ಯ ಅವರಿಗೆ 2ನೇ ಬಾರಿಗೆ ಮುಖ್ಯಮಂತ್ರಿ ಪಟ್ಟ ಲಭಿಸಿದೆ.






