ಮಡಿಕೇರಿ,ಫೆ.20 ; ಮಾದಾಪುರ ಬಳಿಯ ಜಂಬೂರು ಬಾಣೆಯ ಆಶ್ರಯ ಕಾಲೋನಿಯ ಶ್ರೀ ಭಗತ್ ಸಿಂಗ್ ಯುವಕ ಸಂಘದ ೪ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಮಡಿಕೇರಿಯ ಕಿಂಗ್ಸ್ ಆಫ್ ಕೂರ್ಗ್ ಪ್ರಥಮ ಸ್ಥಾನದೊಂದಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಆಶ್ರಯ ಕಾಲೋನಿಯ ಶ್ರೀ ಚಾಮುಂಡೇಶ್ವರಿ ದೇವಾಲಯದ ಆವರಣದಲ್ಲಿ ನಡೆದ ಸ್ಪರ್ಧೆಯಲ್ಲಿ ವಿವಿಧ ಕಲಾತಂಡಗಳು ಭಾಗವಹಿಸಿದ್ದವು. ಈ ಪೈಕಿ ಕಿಂಗ್ಸ್ ಆಫ್ ಕೂರ್ಗ್ ತಂಡ ಪ್ರಥಮ ಸ್ಥಾನದೊಂದಿಗೆ ಚಾಂಪಿಯನ್ ಪಟ್ಟ ಗಳಿಸಿದೆ. ದ್ವಿತೀಯ ಸ್ಥಾನವನ್ನು ಮಡಿಕೇರಿಯ ನಾಟ್ಯಕಲಾ ತಂಡ ಹಾಗೂ ಸೋಮವಾರಪೇಟೆಯ ಅಡ್ವೆಂಚರ್ ಡಾನ್ಸ್ ಕಂಪೆನಿ ತಂಡಗಳು ಹಂಚಿಕೊಂಡವು. ಇದರೊಂದಿಗೆ 15 ವರ್ಷ ಮೇಲ್ಪಟ್ಟ ಸೋಲೋ ನೃತ್ಯ ವಿಭಾಗದಲ್ಲಿ ಕಿಂಗ್ಸ್ ಆಫ್ ಕೂರ್ಗ್ ವರ್ಷಿಣಿ ಶೆಟ್ಟಿ ದ್ವಿತೀಯ ಬಹುಮಾನ ಪಡೆದುಕೊಂಡಿದ್ದಾಳೆ. ಕಿಂಗ್ಸ್ ನೃತ್ಯ ತರಬೆತುದಾರರಾದ ಮಹೇಶ್ ಹಾಗೂ ಕಿರಣ್ ಅವರುಗಳ ಮಾರ್ಗದರ್ಶನದಲ್ಲಿ ಕಲಾವಿದರು ರಾಮಾಯಣದ ಸಿತಾಪಾಹರಣ, ರಾವಣ ಸಂಹಾರ ಹಾಗೂ ಶ್ರೀರಾಮನ ಪಟ್ಟಾಭಿಷೇಕ ನೃತ್ಯ ರೂಪಕವನ್ನು ಪ್ರಸ್ತುತಪಡಿಸಿದರು.
ಲೇಖಕ: admin
ಕರಿಕೆ ಫೆ.20 : ಕೊಡಗು ಜಿಲ್ಲೆಯ ಗಡಿ ಗ್ರಾಮ ಕರಿಕೆಯಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ನಡೆ, ಹಳ್ಳಿಯ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಯಿತು. ಸಭೆಯಲ್ಲಿ ಗ್ರಾಮಸ್ಥರು ಬಸ್ ಸೌಲಭ್ಯ, ಮೂಲಭೂತ ಸೌಲಭ್ಯ ಹಾಗೂ ಕುಡಿಯುವ ನೀರಿನ ಸಮಸ್ಯೆ ಕುರಿತು ಅಧಿಕಾರಿಗಳ ಗಮನ ಸೆಳೆದರು. ಗ್ರಾ.ಪಂ ಅಧ್ಯಕ್ಷರು, ಕಂದಾಯ ಇಲಾಖೆಯ ಅಧಿಕಾರಿಗಳು, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು, ಅರಣ್ಯ ಇಲಾಖೆಯ ಅಧಿಕಾರಿಗಳು, ಆರೊಗ್ಯ ಇಲಾಖೆಯ ಅಧಿಕಾರಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದು, ಸಮಸ್ಯೆಗಳ ಕುರಿತು ಚರ್ಚಿಸಿದರು.
ವಿರಾಜಪೇಟೆ ಫೆ.20 : ಜೆಡಿಎಸ್ ಪಕ್ಷ ಅಧಿಕಾರದ ಅವಧಿಯಲ್ಲಿ ಮಾಜಿ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಅವರು ಬಡ ಕಾರ್ಮಿಕ ಕುಟುಂಬಗಳಿಗೆ ಹಾಗೂ ರೈತರಿಗೆ ನೀಡಿದ ಕನಸಿನ ಯೋಜನೆಯ ಕೊಡುಗೆಯನ್ನು ರಾಜ್ಯದ ಜನರ ಮನೆ ಮನೆಗೆ ಕರಪತ್ರ ಹಂಚುವ ಕಾರ್ಯಕ್ಕೆ ಜೆಡಿಎಸ್ ಪಕ್ಷದ ಜಿಲ್ಲಾ ಉಸ್ತುವಾರಿ ರಾಜ್ಯ ಮಾದ್ಯಮ ವಕ್ತಾರ ನರಸಿಂಹ ಮೂರ್ತಿ ವಿರಾಜಪೇಟೆಯಲ್ಲಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ರಾಜ್ಯದಲ್ಲಿ ಕುಮಾರಸ್ವಾಮಿ ಎರಡು ಬಾರಿ ಮುಖ್ಯ ಮಂತ್ರಿಯಾಗಿದ್ದ ಸಂದರ್ಭ ರಾಜ್ಯದ ಜನತೆಗೆ ನೀಡಿದ ಕೊಡುಗೆ ಗ್ರಾಮ ವಾಸ್ತವ್ಯ, ಜನತಾ ದರ್ಶನ, ಕೊಡಗು ಜಿಲ್ಲೆಯ ಪ್ರವಾಹ ಪೀಡಿತ ಪ್ರತಿಯೊಬ್ಬ ಸಂತ್ರಸ್ತರಿಗೆ 10 ಲಕ್ಷ ವೆಚ್ಚದ ಸುಸಜ್ಜಿತ ವಸತಿ ಸೌಕರ್ಯ ಕಲ್ಪಿಸಲಾಗಿದ್ದು, ಮಕ್ಕಳ ಉತ್ತಮ ಶಿಕ್ಷಣ ಪಡೆಯಲು ಅವಕಾಶ ಹಾಗೂ ಉಚಿತ ಸೈಕಲ್ ವಿತರಣೆ ಮತ್ತು ಭಾಗ್ಯಲಕ್ಷ್ಮಿ ಯೋಜನೆ, ಬಡವರ ಬಂಧು ಯೋಜನೆ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದ್ದು. ಕುಮಾರ ಸ್ವಾಮಿ ಅವರ ಪಂಚರತ್ನ ಯೋಜನೆ ಮನೆ ಮನೆಗೆ ತಲುಪಿಸುವಂತ…
ಮಡಿಕೇರಿ ಫೆ.20 : ನಗರದ ಬ್ರಹ್ಮಕುಮಾರಿ ಲೈಟ್‍ಹೌಸ್‍ನಲ್ಲಿ ಮಹಾಶಿವರಾತ್ರಿಯ ಅಂಗವಾಗಿ ವಿಶೇಷ ದ್ಯಾನ ಕಾರ್ಯಕ್ರಮ ನಡೆಯಿತು. ಲಾಮಕ್ಯಾಬ್ರ ದಿಂದ ಗುರೂಜಿ ಆಗಮಿಸಿ ವಿಶೇಷ ದ್ಯಾನದ ಮೂಲಕ ಹಾಗೂ ತಮ್ಮ ಭಕ್ತ ಸಮೂಹಕ್ಕೆ ಪರಮಾತ್ಮ ಶಿವನ ವಿಶೇಷ ಗುಣ ಗಾಯನ ಮಾಡಿದರು. ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ತಮ್ಮ ಪತ್ನಿ, ಮಗುವಿನೊಂದಿಗೆ ಆಗಮಿಸಿ ಜ್ಯೋತಿರ್ಲಿಂಗ ದರ್ಶನ ಪಡೆದರು. ನಂತರ ಮಾತನಾಡಿದ ಅವರು, ಸಮಾಜದ ಶಾಂತಿ ಸ್ಥಾಪನೆಯಲ್ಲಿ ಬ್ರಹ್ಮಕುಮಾರಿಯರ ಸೇವೆ ಶ್ಲಾಘನೀಯ ಎಂದರು. ರಾಜಯೋಗಿನಿ ಬ್ರಹ್ಮಕುಮಾರಿ ಗಾಯತ್ರಿಜೀ ಅವರು ಓಂ ಧ್ವನಿಯ ಮುಖಾಂತರ ನೆರೆದಿದ್ದ ಎಲ್ಲರಿಗೂ ಪರಮಾತ್ಮ ಶಿವನ ಅನುಭೂತಿ ಮಾಡಿಸಿದರು. ವಿಶೇಷ ಸಾಮೂಹಿಕ ಯೋಗದಲ್ಲಿ ಪಾಲ್ಗೊಂಡ ಎಲ್ಲರಿಗೂ ಪ್ರಸಾದ್ ವಿತರಿಸಲಾಯಿತು.
ನಾಪೋಕ್ಲು ಫೆ.20 : ಸ್ಥಳೀಯ ಗ್ರಾ.ಪಂ ವಾರ್ಷಿಕ ಹರಾಜು ಪ್ರಕ್ರಿಯೆಯಲ್ಲಿ ಹಲವು ವರ್ಷಗಳಿಂದ ಒಳಒಪ್ಪಂದ ಮಾಡಿಕೊಂಡು ಬೇನಾಮಿ ಹೆಸರಿನಲ್ಲಿ ಪಂಚಾಯಿತಿಯ ಕೆಲವು ಸದಸ್ಯರುಗಳು ಮೀನು ಮತ್ತು ಮಾಂಸ ಮಾರಾಟದ ಲೈಸೆನ್ಸ್ ಪಡೆದು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸಾರ್ವಜನಿಕರು ಗ್ರಾ.ಪಂ ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ನೀಡಿದ್ದಾರೆ. ಈ ಸಂದರ್ಭ ಮಾತನಾಡಿದ ಆರ್‌ಟಿಐ ಕಾರ್ಯಕರ್ತ ಕೆ.ಎ.ಹಾರಿಸ್ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ 4 ವರ್ಷಗಳಿಂದ ಹಸಿಮೀನು ಮಾರಾಟ ಹಕ್ಕು ಎರಡು ಎಂದು ನಿಗದಿಪಡಿಸಿದ್ದು, ಈ ಹಕ್ಕನ್ನು ಇಬ್ಬರು ಗ್ರಾ.ಪಂ ಸದಸ್ಯರು ಒಳ ಒಪ್ಪಂದ ಮಾಡಿಕೊಂಡು ಬೇನಾಮಿ ಹೆಸರಿನಲ್ಲಿ ಪಟ್ಟಣದಲ್ಲಿ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಅಲ್ಲದೆ ಕೋಳಿ, ಕುರಿ ಮಾಂಸ ವ್ಯಾಪಾರ ಕೂಡ ಪಟ್ಟಣದಲ್ಲೇ ಅಂಗಡಿಗಳನ್ನು ತೆರೆದು ಮಾರಾಟ ಮಾಡುತ್ತಿದ್ದು, ಇದರಿಂದ ಶಾಲಾ ಮಕ್ಕಳಿಗೆ ಸಾರ್ವಜನಿಕರಿಗೆ ಇದರ ದುರ್ವಾಸನೆಯಿಂದ ಪಟ್ಟಣದಲ್ಲಿ ನಡೆದಾಡಲು ತೊಂದರೆ ಉಂಟಾಗುತ್ತಿದೆ ಎಂದರು. ಕುರಿ ಕೋಳಿ,ಮಾಂಸ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಎಲ್ಲಾ ರೀತಿಯ…
ಚೆಯ್ಯಂಡಾಣೆ ಫೆ.20 : ಕರ್ನಾಟಕ ಬ್ಯಾಂಕ್ ಶಾಖೆಯು 99 ವರ್ಷ ಪೂರ್ಣ ಗೊಳಿಸಿ 100ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು. ಇದರ ಅಂಗವಾಗಿ ಬ್ಯಾಂಕ್ ನಲ್ಲಿ ಕಾರ್ಯಕ್ರಮ ಶತಮಾನೋತ್ಸವದ ಸಂಭ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಶಾಖೆಯ ವ್ಯವಸ್ಥಾಪಕ ಉಮೇಶ್, ಕರ್ನಾಟಕ ಬ್ಯಾಂಕ್ ನ ಶತಮಾನೋತ್ಸವದ ಕುರಿತು ಗ್ರಾಹಕರಿಗೆ ಮಾಹಿತಿ ನೀಡಿದರು. ಸ್ಥಳೀಯ ಗ್ರಾಹಕರಾದ ಎನ್.ಸಿ.ಗಣಪತಿ ಮಾತನಾಡಿ, ಕರ್ನಾಟಕ ಬ್ಯಾಂಕ್ ನ ಕಾರ್ಯವೈಖರಿಯ ಕುರಿತು ಶ್ಲಾಘಿಸಿದರು. ಶತಮಾನೋತ್ಸವ ಸಂಭ್ರಮಾಚರಣೆಗೆ ಶುಭ ಹಾರೈಸಿದರು. ಈ ಸಂದರ್ಭ ಪ್ರಾರ್ಥನೆಯನ್ನು ಮೀನಾಕ್ಷಿ ನಡೆಸಿದರು. ಬ್ಯಾಂಕ್ ಸಿಬ್ಬಂದಿಗಳು ಗ್ರಾಹಕರರು ಹಾಜರಿದ್ದರು. ವರದಿ : ಅಶ್ರಫ್
ನಾಪೋಕ್ಲು ಫೆ.20 : ಗ್ರಾಮೀಣ ಪ್ರದೇಶಗಳಲ್ಲಿ ಎಲ್ಲಾ ಜನಾಂಗದವರನ್ನು ಒಗ್ಗೂಗೂಡಿಸಿ ಕ್ರೀಡೆಗಳನ್ನು ಆಯೋಜಿಸುವುದರಿಂದ ಸಾಮರಸ್ಯದೊಂದಿಗೆ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಎ.ಎಸ್.ಪೊನ್ನಣ್ಣ ಹೇಳಿದರು. ಸ್ಥಳೀಯ ಕರ್ನಾಟಕ ಪಬ್ಲಿಕ್ ಪ್ರಾಥಮಿಕ ಶಾಲಾ ಮೈದಾನದಲ್ಲಿ ಹಳೇ ತಾಲ್ಲೂಕುವಿನ ಅಲ್ ಅಮೀನ್ ಕ್ರಿಕೆಟರ್ಸ್ ವತಿಯಿಂದ ಆಯೋಜಿಸಲಾದ 4ನೇ ವರ್ಷದ ಹಳೇ ತಾಲ್ಲೂಕು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು. ಕ್ರೀಡೆಯಲ್ಲಿ ಜಾತಿ, ಧರ್ಮ, ಬಡವ ಶ್ರೀಮಂತ ಎನ್ನುವ ಬೇಧ ಭಾವ ಕಾಣಲು ಸಾಧ್ಯವಿಲ್ಲ. ಜಿಲ್ಲೆಯಲ್ಲಿ ವಿವಿಧ ಸಂಸ್ಥೆಗಳು ಹಲವಾರು ರೀತಿಯ ಕ್ರೀಡಾಕೂಟಗಳನ್ನು ಆಯೋಜಿಸುತ್ತಿದೆ. ಅದಕ್ಕೆ ನಾವೆಲ್ಲರೂ ಎಲ್ಲಾ ರೀತಿಯಲ್ಲಿ ಸಹಕಾರ ಪ್ರೋತ್ಸಾಹ ನೀಡಬೇಕು. ಆಗ ಮಾತ್ರ ಕ್ರೀಡಾಪಟುಗಳು ಭವಿಷ್ಯದಲ್ಲಿ ಮುಂದೆ ಬರಲು ಸಾಧ್ಯ ಎಂದರು. ಕ್ರೀಡೆಗೆ ಪ್ರಸಿದ್ಧವಾದ ಕೊಡಗು ಜಿಲ್ಲೆಯಿಂದ ಕ್ರೀಡಾಪಟುಗಳು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ರಾಜ್ಯ,ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುತ್ತಿದ್ದಾರೆ. ಆದರೂ ನಮ್ಮ ಜಿಲ್ಲೆಯಲ್ಲಿ ಉತ್ತಮ ಕ್ರೀಡಾಂಗಣ, ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಮೈದಾನಗಳ…
ಮಡಿಕೇರಿ ಫೆ.20 : ತೊರೆನೂರು ಗ್ರಾ.ಪಂ ವ್ಯಾಪ್ತಿಯ ಚಿಕ್ಕ ಅಳುವಾರ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ ಬಿ.ಸಿ.ಸತೀಶ್ ಅವರು ಜನರ ಅಹವಾಲು ಸ್ವೀಕರಿಸಿ ಮಾತನಾಡಿದರು.
ಮಡಿಕೇರಿ ಫೆ.20 : ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಕೊಡಗು ಮತ್ತು ಪುತ್ತೂರು, ಸುಳ್ಯ ಕಾಲೇಜಿನ ಎನ್.ಸಿ.ಸಿ. ಅಂತಿಮ ವರ್ಷದ ಕೆಡೆಟ್‍ಗಳಿಗೆ ಎನ್.ಸಿ.ಸಿ ಪ್ರಮಾಣಪತ್ರ ಪರೀಕ್ಷೆ ನಡೆಯಿತು. ಪ್ರಾಯೋಗಿಕ ಮತ್ತು ಲಿಖಿತ ರೂಪದಲ್ಲಿ ಪ್ರಮಾಣ ಪತ್ರಕ್ಕೆ ಸಂಬಂಧಿಸಿದ ಮ್ಯಾಪ್ ರೀಡಿಂಗ್, ಲೀಡರ್ಶಿಪ್, ವ್ಯಕ್ತಿತ್ವ ವಿಕಸನ ಮತ್ತು ನಾಯಕತ್ವ, ಡ್ರಿಲ್, ಶಸ್ತ್ರಾಸ್ತ್ರ ತರಬೇತಿ ಮತ್ತು ಯುದ್ಧ ಕೌಶಲ್ಯ, ರಾಷ್ಟ್ರೀಯ ಭಾವೈಕ್ಯತೆ, ಆರೋಗ್ಯ ಮತ್ತು ನೈರ್ಮಲೀಕರಣ, ವಿಪತ್ತು ನಿರ್ವಹಣೆ, ಆತ್ಮರಕ್ಷಣೆ, ಸೈನಿಕ ಇತಿಹಾಸ, ಪರಿಸರ ಜಾಗೃತಿ ಮತ್ತು ಸಂರಕ್ಷಣೆ, ಸಾಮಾಜಿಕ ಜಾಗೃತಿ ಮತ್ತು ಸಮುದಾಯ ಅಭಿವೃದ್ಧಿ, ವೈದ್ಯಕೀಯ ಶ್ರೂಶುಷೆ ಇತ್ಯಾದಿ ವಿಷಯದ ಕುರಿತು ಒಟ್ಟು ಐನೂರು ಅಂಕಗಳನ್ನು ಒಳಗೊಂಡ ಪರೀಕ್ಷೆಯನ್ನು ನಡೆಸಲಾಯಿತು. ಈ ಪರೀಕ್ಷೆಯಲ್ಲಿ ವಿವಿಧ ಕಾಲೇಜುಗಳ ಅರ್ಹ 25 ಪುರುಷ ಕೆಡೆಟ್‍ಗಳು, 44 ಅರ್ಹ ಮಹಿಳಾ ಕೆಡೆಟ್‍ಗಳು ಭಾಗವಹಿಸಿದ್ದರು. ಪರೀಕ್ಷಾ ಕಾರ್ಯದಲ್ಲಿ ಉಡುಪಿ ಬೆಟಾಲಿಯನ್ ಕಮಾಂಡಿಂಗ್ ಆಫೀಸರ್ ಕರ್ನಲ್ ಆರ್.ಕೆ. ಸಿಂಗ್, ಮಡಿಕೇರಿ ಬೆಟಾಲಿಯನಿನ ಆಡಳಿತ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಚಾಕೋ,…
ವಿರಾಜಪೇಟೆ ಫೆ.20 : ಕೊಡಗು ಸನಾತನ ಧರ್ಮ ಸಭಾ ವೇದಿಕೆ ವತಿಯಿಂದ ಸದ್ಗುರು ಅಪ್ಪಯ್ಯ ಸ್ವಾಮಿ ರಸ್ತೆಯಲ್ಲಿರುವ ಶ್ರೀ ಕಾವೇರಿ ಆಶ್ರಮದಲ್ಲಿ ದಿವಂಗತ ಕೋರಿಕ್ಕಾರು ಕೇಶವ ಭಟ್ಟ ಅವರಿಗೆ ನುಡಿನಮನ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಶಿಕ್ಷಕ ದಂಪತಿಗಳಾದ ಕೇಶವ ಭಟ್ಟ ಹಾಗೂ ಶಾರದಮ್ಮ ಅವರ ಹೆಸರಿನಲ್ಲಿ ಅವರ ಪುತ್ರಿಯರಾದ ವಾಣಿಶ್ರೀ, ಜ್ಯೋತಿ ಹಾಗೂ ಗೀತಾ ಇವರು ಕನ್ನಡ ಸಾಹಿತ್ಯ ಪರಿಷತ್ತಿಗೆ ದತ್ತಿನಿಧಿಯನ್ನು ಸ್ಥಾಪಿಸಲು ರೂಪಾಯಿ ಐವತ್ತು ಸಾವಿರಗಳ ಡಿ.ಡಿ ಯನ್ನು ವಿರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾಜೇಶ್ ಪದ್ಮನಾಭ ಅವರಿಗೆ ಹಸ್ತಾಂತರಿಸಿದರು. ಕ.ಸಾ.ಪ. ಕೋಶಾಧಿಕಾರಿ ಶಬರೀಶ್ ಶೆಟ್ಟಿ, ಗೌರವ ಕಾರ್ಯದರ್ಶಿ ಹೆಚ್.ಜಿ.ಸಾವಿತ್ರಿ, ಸದಸ್ಯರಾದ ಪುಷ್ಪಲತಾ ಶಿವಪ್ಪ ಹಾಗೂ ವಿಮಲಾ ದಶರಥ ಹಾಜರಿದ್ದರು.






