ಲೇಖಕ: admin

ಮಡಿಕೇರಿ ಫೆ.19 : ಶಿವಮೊಗ್ಗದಲ್ಲಿ  ವೈದ್ಯಕೀಯ  ಕೋರ್ಸ್ ಅಧ್ಯಯನ ಮಾಡುತ್ತಿದ್ದ ಸೋಮವಾರಪೇಟೆ ತಾಲ್ಲೂಕು ಶನಿವಾರಸಂತೆ ಗುಡುಗಳಲೆಯ ನಿವಾಸಿ ಜಗತ್ (22)  ನಿನ್ನೆ ನಿಧನ ಹೊಂದಿದ್ದಾರೆ. ಬಿಡುವಿನ ವೇಳೆ ಶಿವಮೊಗ್ಗದಲ್ಲಿ ಸ್ನೇಹಿತರ ಜೂತೆ  ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ನೀರಿಗೆ ಬಿದ್ದು ನಿಧನರಾಗಿದ್ದಾರೆ ಎಂದು ಹೇಳಲಾಗಿದೆ. ಇವರು ಹಂಡ್ಲಿ ಸರ್ಕಾರಿ ಪ್ರೌಡ ಶಾಲೆಯ ಶಿಕ್ಷಕಿ ನಳಿನಿ ಹಾಗೂ ನಿವೃತ್ತ ಶಿಕ್ಷಕ ರವಿ ಅವರ ಪುತ್ರರಾಗಿದ್ದಾರೆ. ಮೃತ ಜಗತ್ ಗೆ ಓರ್ವ ಸಹೊದರ ಇದ್ದಾನೆ.

Read More

ಮಡಿಕೇರಿ ಫೆ.19 : ಕೊಡಗು ಜಿಲ್ಲಾ ಬಂಟರ ಸಂಘದ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ನಿರ್ದೇಶಕರನ್ನು ಆಯ್ಕೆ ಮಾಡಲಾಗಿದೆ. ಬಿ.ಡಿ.ಜಗದೀಶ್ ರೈ ಅಧ್ಯಕ್ಷರಾಗಿರುವ ಸಂಘದಲ್ಲಿ ಗೌರವಾಧ್ಯಕ್ಷರಾಗಿ ಐತಪ್ಪ ರೈ, ಉಪಾಧ್ಯಕ್ಷರಾಗಿ ರವೀಂದ್ರ ರೈ ಬಿ.ಕೆ., ಸೋಮವಾರಪೇಟೆ ತಾಲೂಕು ಅಧ್ಯಕ್ಷ ಜನಾರ್ದನ ಶೆಟ್ಟಿ, ಸಹಕಾರ್ಯದರ್ಶಿಯಾಗಿ ಹರೀಶ್ ರೈ ಕೂಟುಹೊಳೆ, ಬಿ.ಜೆ. ಮನೋಜ್ ಶೆಟ್ಟಿ, ಖಜಾಂಚಿಯಾಗಿ ರತ್ನಾಕರ ರೈ ಮೇಕೇರಿ, ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ರವೀಂದ್ರ ವಿ. ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  ನಿರ್ದೇಶಕರಾಗಿ ಶರತ್ ಶೆಟ್ಟಿ, ಸೀತಾರಾಮ ರೈ ಮಡಿಕೇರಿ, ಪ್ರಮೋದ್ ಕುಮಾರ್ ರೈ, ಬಿ.ಯು.‌ಚಂದ್ರಶೇಖರ್ ರೈ, ವಿಜಯಲಕ್ಷ್ಮೀ ಶೆಟ್ಟಿ, ರಾಜಮಣಿ ಶೆಟ್ಟಿ, ಕೆ.ಬಿ. ಹರೀಶ್ ಶೆಟ್ಟಿ, ಬಿ.ಬಿ.‌ ದಿವೇಶ್ ರೈ, ಗಿರೀಶ್ ರೈ ಬಿ.ಕೆ. ಕೆದಮಳ್ಳೂರು, ಬಾಲಕೃಷ್ಣ ಅಪ್ಪು ರೈ, ಸುರೇಶ್ ರೈ ಗೋಣಿಕೊಪ್ಪ, ಅಶ್ವಿನಿ ಪುರುಷೋತ್ತಮ ರೈ, ಸಂಪತ್ ಶೆಟ್ಟಿ, ಪ್ರಭು ರೈ, ದಯಾನಂದ ರೈ ನೀಲುಮಾಡು, ಮನು ಆಳ್ವ ಭಾಗಮಂಡಲ, ಜಯರಾಮ್ ರೈ ಮೂರ್ನಾಡು,…

Read More

ಕುಶಾಲನಗರ ಫೆ.19 : ಕೂಡುಮಂಗಳೂರು ಗ್ರಾ.ಪಂ ನ‌ವಗ್ರಾಮದಲ್ಲಿ ಕಾವೇರಿ ನೀರಾವರಿ ನಿಗಮದ ಅನುದಾನದಡಿ 50 ಲಕ್ಷ ರೂ. ವೆಚ್ಚದ ಕಾಂಕ್ರಿಟ್ ರಸ್ತೆ ಕಾಮಗಾರಿ ನಡೆಯುತ್ತಲಿದ್ದು, ಕಾಮಗಾರಿಯನ್ನು ಸ್ಥಳೀಯ ಗ್ರಾ.ಪಂ ಸದಸ್ಯರಾದ ಕೆ.ಬಿ.ಶಂಶುದ್ದೀನ್ ಅವರು ಪರಿಶೀಲನೆ ನಡೆಸಿದರು. ಕೂಡುಮಂಗಳೂರು ಗ್ರಾ.ಪಂ ನವಗ್ರಾಮವು ಗುಡ್ಡಗಳಿಂದ ಕೂಡಿದ್ದು, ಸೂಕ್ತವಾದ ರಸ್ತೆಯಿಲ್ಲದೇ ಸಾರ್ವಜನಿಕರಿಗೆ ಸಮಸ್ಯೆಯುಂಟಾಗುತ್ತಿತ್ತು. ಈ ಹಿನ್ನೆಲೆ ಸ್ಥಳೀಯ ಗ್ರಾ.ಪಂ ಸದಸ್ಯರ ಆಸಕ್ತಿಯಿಂದ ಹಾಗೂ ಶಾಸಕರಾದ ಅಪ್ಪಚ್ಚುರಂಜನ್ ಅವರ ಸಹಕಾರದಿಂದ ನವಗ್ರಾಮದಲ್ಲಿ 50 ಲಕ್ಷ ರೂ.ಗಳ ಕಾಂಕ್ರಿಟ್ ರಸ್ತೆ ಕಾಮಗಾರಿ ನಡೆಯುತ್ತಿದೆ. ನವಗ್ರಾಮದ ನ್ಯಾಯ ಬೆಲೆ ಅಂಗಡಿ ಬಳಿಯಿಂದ ನಾಲ್ಕು ಮೀಟರ್ ಅಗಲದ ಸುಮಾರು 500 ಮೀಟರ್ ಉದ್ದದ ಕಾಂಕ್ರಿಟ್ ರಸ್ತೆ ಕಾಮಗಾರಿ ನಡೆಯುತ್ತಲಿದೆ. ಈ ಸಂದರ್ಭ ಮಾತನಾಡಿದ ಸದಸ್ಯರಾದ ಕೆ.ಬಿ.ಶಂಶುದ್ದೀನ್, ನವಗ್ರಾಮದಲ್ಲಿ ಈಗಾಗಲೇ ಪಂಚಾಯಿತಿ ವತಿಯಿಂದ ಸಾಕಷ್ಟು ಅನುದಾನವನ್ನು ವ್ಯಯಿಸಲಾಗಿದೆ. 15 ನೇ ಹಣಕಾಸು, ಪಂಚಾಯಿತಿ ನಿಧಿ, ತಾ.ಪಂ, ನರೇಗಾ, ತಾ.ಪಂ, ಶಾಸಕರ ಅನುದಾನ ಹಾಗೂ ಕಾವೇರಿ ನೀರಾವರಿ ನಿಗಮದ ಅನುದಾನ ಸೇರಿದಂತೆ ಅಂದಾಜು ಒಂದು…

Read More

ಸುಂಟಿಕೊಪ್ಪ ಫೆ.18 : ಕ್ರೀಡಾಕೂಟಗಳು ಮನುಷ್ಯರ ಮನಸ್ಸನ್ನು ಒಗ್ಗೂಡಿಸುವ ಸೇತುವೆಯಾಗಿದೆ ಎಂದು ವಿರಾಜಪೇಟೆ ಸಂತ ಅನ್ನಮ್ಮ ದೇವಾಲಯದ ಧರ್ಮಗುರುಗಳಾದ ವಂ.ಫಾ. ದಯಾನಂದ ಪ್ರಭು ಅಭಿಪ್ರಾಯಪಟ್ಟಿದ್ದಾರೆ. ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಕೊಡಗು ಜಿಲ್ಲೆ, ವಿರಾಜಪೇಟೆ ಕೆದಮಳ್ಳೂರುವಿನ ಫಾತಿಮ ಮಾತೆ ದೇವಾಲಯದ ಸಂಯುಕ್ತಾಶ್ರಯದಲ್ಲಿ ಕೆದಮಳ್ಳೂರು ನಿವಾಸಿ ಪೂಳಂಡ ವಿನು ಅವರ ಮೈದಾನದಲ್ಲಿ ನಡೆದ 12ನೇ ವರ್ಷದ ಟೆನ್ನಿಸ್ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕ್ರೀಡಾಕೂಟ ಆಯೋಜಿಸುವುದರಿಂದ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸುವ ಕ್ರೀಡಾ ಪ್ರತಿಭೆಗಳಲ್ಲಿ ಪ್ರೀತಿ, ವಿಶ್ವಾಸವನ್ನು ತುಂಬಿದಂತ್ತಾಗುತ್ತದೆ. ಉತ್ತಮ ಬಾಂಧವ್ಯ ಬೆಸಯಲು ಇದು ಸೌಹರ್ದ ಸೇತುವೆಯಾಗಲಿದೆ ಎಂದರು. ಕೆದಮಳ್ಳೂರುವಿನ ಪಾತಿಮಾ ಮಾತೆ ದೇವಾಲಯದ ಧರ್ಮಗುರುಗಳಾದ ವಂ.ಪಾ.ವಿಲ್ ಫ್ರೆಡ್ ಎ. ಅವರು ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ ಪ್ರತಿಯೊಬ್ಬರು ಸಾಮರಸ್ಯ ಕಾಯ್ದುಕೊಳ್ಳುವುದು ಮುಖ್ಯ ಎಂದರು. ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ತನ್ನದೇ ಆದ ಕೊಡುಗೆ ನೀಡುತ್ತಿದ್ದು, ಶ್ಲಾಘನೀಯವೆಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಉಪಾಧ್ಯಕ್ಷ ಜಾನ್ಸನ್ ಪಿಂಟೋ ವಹಿಸಿ…

Read More

ಕಡಂಗ ಫೆ.19 : ವಿರಾಜಪೇಟೆ ತಾಲ್ಲೂಕಿನ ಕುಂಜಲಗೇರಿ ಗ್ರಾಮದ ಮಡಕೋಡ ಶಾಸ್ತಾವು ಈಶ್ವರ ದೇವಸ್ಥಾನಕ್ಕೆ ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ  ಎ.ಎಸ್.ಪೊನ್ನಣ್ಣ ಅವರು ಭೇಟಿ ನೀಡಿದರು.  ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ  ದೇವಾಲಯದ ಸಮಿತಿ  ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಆರ್ಥಿಕ ನೆರವು ನೀಡಿದರು.   ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ದೇವಾಲಯದ ಸಮಿತಿ ಸದಸ್ಯರು ಮತ್ತಿತರರು ಹಾಜರಿದ್ದರು. ((ವರದಿ : ನೌಫಲ್ ಕಡಂಗ)) 

Read More

ಮಡಿಕೇರಿ ಫೆ.19 : ಎಲ್ಲಾ ಪೊಲೀಸ್ ಠಾಣೆ ಗಳ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ಜರುಗಬಹುದಾದ ಅಪರಾಧ ಕೃತ್ಯಗಳನ್ನು ತಡೆಗಟ್ಟುವ ಹಾಗೂ ಅಪರಾಧಿಗಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ನೂತನ MCCTNS ( Mobile Crime and Criminal Tracking Network System) ಪೋರ್ಟಬಲ್ ಸ್ಕ್ಯಾನರ್ ಬಳಕೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದ ವತಿಯಿಂದ ಪರಿಣಾಮಕಾರಿಯಾಗಿ ಜಾರಿಗೆ ತರಲಾಗಿದೆ.  ಇದರ  ಮೂಲಕ  ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳ  ಅಧಿಕಾರಿ/ಸಿಬ್ಬಂದಿಗಳು ರಾತ್ರಿ ಗಸ್ತು ಕರ್ತವ್ಯದ ವೇಳೆಯಲ್ಲಿ  ಕಾಣಸಿಗುವ ಅಪರಿಚಿತ ಹಾಗೂ ಸಂಶಯಾಸ್ಪದ ವ್ಯಕ್ತಿಗಳ ಅಪರಾಧ ಹಿನ್ನೆಲೆಗಳ ಬಗ್ಗೆ ಈ ಹಿಂದೆ ನಡೆಸುತ್ತಿದ್ದ ಮೌಖಿಕ ವಿಚಾರಣೆಯ ಜೊತೆಜೊತೆಗೆ , ಈ ನೂತನ ತಂತ್ರಜ್ಞಾನದಲ್ಲಿ ಯಾವುದೇ ವ್ಯಕ್ತಿಯು ಈ ಹಿಂದೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದರೆ,ಆತನ ಬೆರಳಚ್ಚುಗಳನ್ನು ಸದರಿ ತಂತ್ರಾಂಶದ ಮೂಲಕ ಪರಿಶೀಲಿಸಿದಾಗ ಆತನ ಅಪರಾಧ ಹಿನ್ನೆಲೆಗಳ ಮಾಹಿತಿ ಕ್ಷಣಮಾತ್ರದಲ್ಲಿ ಅದೇ ಸ್ಥಳದಲ್ಲಿ ಪಡೆಯಬಹುದಾಗಿದೆ. ಇಂತಹ ನೂತನ ತಂತ್ರಜ್ಞಾನ ವನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಬಳಸುತ್ತಿರುವುದರಿಂದ  ಅಪರಾಧ ಹಿನ್ನೆಲೆಯ ವ್ಯಕ್ತಿಗಳನ್ನು…

Read More

ಮಡಿಕೇರಿ ಫೆ.19 : ಜಿಲ್ಲೆಯ ಪ್ರಮುಖ ಪ್ರವಾಸಿತಾಣ ಅಬ್ಬಿಫಾಲ್ಸ್ ಗೆ ಆಗಮಿಸುವ ಪ್ರವಾಸಿಗರಿಂದ ಪ್ರವೇಶ ಶುಲ್ಕ ವಸೂಲಾತಿ ಮಾಡಬಾರದೆಂದು ಜಾಗದ ಮಾಲೀಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಬ್ಬಿಫಾಲ್ಸ್ ಇರುವ ಪ್ರದೇಶ ನೆರವಂಡ ಪಾರ್ವತಿ ನಾಣಯ್ಯ ಎಂಬುವವರ ಖಾಸಗಿ ಆಸ್ತಿಯಾಗಿದ್ದು ಇದು ಪ್ರವಾಸಿತಾಣವಾಗಿ ರೂಪುಗೊಂಡ ಸಂದರ್ಭ ಫಾಲ್ಸ್ ಗೆ ತೆರಳುವ ಪಾದಚಾರಿ ಮಾರ್ಗವನ್ನು ಮಾತ್ರವೇ ಜಿಲ್ಲಾಡಳಿತಕ್ಕೆ ಬಿಟ್ಟು ಕೊಟ್ಟಿದ್ದರು. ಈ ವೇಳೆ ಅಬ್ಬಿಫಾಲ್ಸ್ ಸೌಂದರ್ಯ ಸವಿಯಲು ಆಗಮಿಸುವ ಪ್ರವಾಸಿಗರಿಂದ ಯಾವುದೇ ರೀತಿಯ ಹಣ ಪಡೆಯಬಾರದು ಎಂಬ ಒಪ್ಪಂದ ಮಾಡಿಕೊಳ್ಳಲಾಗಿತ್ತು ಎನ್ನಲಾಗಿದೆ. ಆದರೆ ಕಳೆದ ಕೆಲವು ದಿನಗಳಿಂದ ಅಬ್ಬಿಫಾಲ್ಸ್ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರಿಂದ ಪ್ರವೇಶ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಇದಕ್ಕೆ ಜಾಗದ ಮಾಲೀಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೇ ಈ ಮೊದಲೇ ಜಿಲ್ಲಾಡಳಿತಕ್ಕೆ ಪತ್ರದ ಮೂಲಕ ದೂರು ನೀಡಿದ್ದ ಮಾಲೀಕರು ಅನಧಿಕೃತ ಶುಲ್ಕ ವಸೂಲಿಯನ್ನು ನಿಲ್ಲಿಸಬೇಕೆಂದು ಮನವಿ ಮಾಡಿದ್ದರು. ಇಂದು ಸ್ಥಳಕ್ಕೆ ಭೇಟಿ ನೀಡಿದ್ದ ಮಾಲೀಕರ ಪುತ್ರಿಯರು ಅನುಮತಿಯನ್ನು ಪಡೆಯದೆ ಶುಲ್ಕ ಸಂಗ್ರಹದ ಕೌಂಟರ್ ತೆರೆಯಲಾಗಿದೆ ಎಂದು…

Read More

ಮಡಿಕೇರಿ ಫೆ.19 : ವ್ಯಕ್ತಿಯೊಬ್ಬರು ಗುಂಡೇಟಿನಿoದ ಮೃತಪಟ್ಟ ಘಟನೆ ಮಡಿಕೇರಿ ತಾಲ್ಲೂಕಿನ ಕಟ್ಟೆಮಾಡು ಗ್ರಾಮದಲ್ಲಿ ನಡೆದಿದೆ. ತಂದೆಯಿoದಲೇ ಪುತ್ರನ ಹತ್ಯೆಯಾಗಿದೆ ಎಂದು ಆರೋಪಿಸಲಾಗಿದ್ದು, ಪ್ರಕರಣಕ್ಕೆ ಸಂಬoಧಿಸಿದoತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ನoದೇಟಿರ ನಿರನ್(28) ಎಂಬುವವರೇ ಮೃತ ವ್ಯಕ್ತಿಯಾಗಿದ್ದು, ಆರೋಪಿ ತಂದೆ ನಂದೇಟಿರ ಚಿಟ್ಟಿಯಪ್ಪ ಸಾಬು(58) ಅವರನ್ನು ಮಡಿಕೇರಿ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಬಳಿಯಿಂದ ಕೋವಿಯನ್ನು ವಶಕ್ಕೆ ಪಡೆಯಲಾಗಿದೆ. ಕೌಟುಂಬಿಕ ಕಲಹವೇ ಘಟನೆಗೆ ಕಾರಣವೆಂದು ಹೇಳಲಾಗಿದ್ದು, ನಿರನ್ ಟಿವಿ ನೋಡುತ್ತಿದ್ದ ಸಂದರ್ಭ ತಂದೆ ಸಾಬು ಗುಂಡು ಹಾರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Read More

ಮಡಿಕೇರಿ ಫೆ.19 : ಎಲ್ಲಾ ಪೊಲೀಸ್ ಠಾಣೆ ಗಳ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ಜರುಗಬಹುದಾದ ಅಪರಾಧ ಕೃತ್ಯಗಳನ್ನು ತಡೆಗಟ್ಟುವ ಹಾಗೂ ಅಪರಾಧಿಗಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ನೂತನ MCCTNS ( Mobile Crime and Criminal Tracking Network System) ಪೋರ್ಟಬಲ್ ಸ್ಕ್ಯಾನರ್ ಬಳಕೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದ ವತಿಯಿಂದ ಪರಿಣಾಮಕಾರಿಯಾಗಿ ಜಾರಿಗೆ ತರಲಾಗಿದೆ.  ಇದರ  ಮೂಲಕ  ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳ  ಅಧಿಕಾರಿ/ಸಿಬ್ಬಂದಿಗಳು ರಾತ್ರಿ ಗಸ್ತು ಕರ್ತವ್ಯದ ವೇಳೆಯಲ್ಲಿ  ಕಾಣಸಿಗುವ ಅಪರಿಚಿತ ಹಾಗೂ ಸಂಶಯಾಸ್ಪದ ವ್ಯಕ್ತಿಗಳ ಅಪರಾಧ ಹಿನ್ನೆಲೆಗಳ ಬಗ್ಗೆ ಈ ಹಿಂದೆ ನಡೆಸುತ್ತಿದ್ದ ಮೌಖಿಕ ವಿಚಾರಣೆಯ ಜೊತೆಜೊತೆಗೆ , ಈ ನೂತನ ತಂತ್ರಜ್ಞಾನದಲ್ಲಿ ಯಾವುದೇ ವ್ಯಕ್ತಿಯು ಈ ಹಿಂದೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದರೆ,ಆತನ ಬೆರಳಚ್ಚುಗಳನ್ನು ಸದರಿ ತಂತ್ರಾಂಶದ ಮೂಲಕ ಪರಿಶೀಲಿಸಿದಾಗ ಆತನ ಅಪರಾಧ ಹಿನ್ನೆಲೆಗಳ ಮಾಹಿತಿ ಕ್ಷಣಮಾತ್ರದಲ್ಲಿ ಅದೇ ಸ್ಥಳದಲ್ಲಿ ಪಡೆಯಬಹುದಾಗಿದೆ. ಇಂತಹ ನೂತನ ತಂತ್ರಜ್ಞಾನ ವನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಬಳಸುತ್ತಿರುವುದರಿಂದ  ಅಪರಾಧ ಹಿನ್ನೆಲೆಯ ವ್ಯಕ್ತಿಗಳನ್ನು…

Read More

ಮಡಿಕೇರಿ ಫೆ.19 : ಗೋಣಿಕೊಪ್ಪಲು ಠಾಣಾಧಿಕಾರಿಯಾಗಿ ಮಂಡ್ಯ ಜಿಲ್ಲೆಯ ಟಿ.ಸಿದ್ದರಾಜು ನೇಮಕಗೊಂಡಿದ್ದಾರೆ. ಈ ಹಿಂದೆ ಇದ್ದ ಠಾಣಾಧಿಕಾರಿ ದೀಕ್ಷಿತ್ ಅವರನ್ನು ಮಂಡ್ಯ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ.

Read More