ಲೇಖಕ: admin

ಮಡಿಕೇರಿ ಏ.28 :  ಬೆಂಗಳೂರಿನ ಟಯೋಟದ ಪ್ರಮುಖ ಡೀಲರ್ ಗಳಲ್ಲಿ ಒಂದಾಗಿರುವ ನಂದಿ ಟೊಯೋಟೊ ಸಂಸ್ಥೆಯು ಭಾಗಮಂಡಲದ  ಕೆವಿಜಿ ಐಟಿಐ ನಲ್ಲಿ ಕ್ಯಾಂಪಸ್ ಸಂದರ್ಶನ ನಡೆಸಿದರು. ಈ ಸಂದರ್ಭದಲ್ಲಿ  ಆಯ್ಕೆಯಾದ ತರಬೇತುದಾರರಿಗೆ ಪ್ರಾಂಶುಪಾಲರು ಅಭಿನಂದನೆ ಸಲ್ಲಿಸಿದರು. ನಂದಿ ಟೊಯೋಟಾದ ಹೆಚ್ ಆರ್ ಮಧುಸೂಧನ್ , ಕಾಲೇಜಿನ ಪ್ರಾಂಶುಪಾಲ ಕೆ.ವಿ.ಶ್ರೀಕಾಂತ್   , ಕಿರಿಯ ತರಬೇತಿ ಅಧಿಕಾರಿಗಳಾದ  ಜೆ.ಕೃಷ್ಣಮೂರ್ತಿ,  ಪದ್ಮ ಕುಮಾರ್ ಮತ್ತು ಪುನೀತ್ ಉಪಸ್ಥಿತರಿದ್ದರು.

Read More

ಮಡಿಕೇರಿ ಏ.28 :  ವಿರಾಜಪೇಟೆಯ ಮೈತಾಡಿ ಗ್ರಾಮದ ಐಯ್ಯಮಂಡ ಸುಗುಣ ಅವರ  ಮನೆಯ ಅಂಗಳದಲ್ಲಿದ್ದ ನಾಗರ ಹಾವನ್ನು ಉರಗ ಪ್ರೇಮಿ ಒಂಟಿ ಅಂಗಡಿಯ ಬೊಪ್ಪoಡ ರೋಷನ್  ರಕ್ಷಿಸಿ  ಮಾಲ್ದಾರೆ ಅರಣ್ಯಕ್ಕೆ ಸುರಕ್ಷಿತವಾಗಿ ಬಿಟ್ಟಿದ್ದಾರೆ. ಹಾವುಗಳನ್ನು ಕಂಡರೆ ಕೊಲ್ಲದೆ ಈ ಸಂಖ್ಯೆಗೆ  7022373921 ಕರೆ ಮಾಡುವಂತೆ ರೋಷನ್  ಮನವಿ ಮಾಡಿದ್ದಾರೆ.

Read More

ಸೋಮವಾರಪೇಟೆ ಏ.28 :   ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆ ನೂತನವಾಗಿ ಪರಿಚಯಿಸಿರುವ ಆನ್ ಲೈನ್ ಕೌಂಟರ್ ನ್ನು ಸೋಮವಾರಪೇಟೆ ತಹಸೀಲ್ದಾರ್ ನರಗುಂದ  ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಇನ್ನು ಮುಂದೆ ನೋಂದಣಿ ಕಚೇರಿಯಲ್ಲಿ ನಡೆಯುವ ಎಲ್ಲ ಕೆಲಸಗಳಿಗೂ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದಾಗಿದೆ ಎಂದರು. ಈ ಸಂದರ್ಭ ಜಿಲ್ಲಾ ನೋಂದಣಿ ಅಧಿಕಾರಿ ಸಿದ್ದೇಶ್ , ಸೋಮವಾರಪೇಟೆ ಉಪ ನೋಂದಣಿ ಅಧಿಕಾರಿ ಬಿ.ಸಿ. ಶಿವಪ್ಪ ಮತ್ತು ಸಿಬ್ಬಂದಿ ಗಳು ಉಪಸ್ಥಿತರಿದ್ದರು.

Read More

ಮಡಿಕೇರಿ ಏ.28 : ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜನ್ನು ಕೊಡಗು ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕೇಂದ್ರವನ್ನಾಗಿ ಉನ್ನತೀಕರಿಸುವ ಯೋಜನೆ ಇದೆ ಎಂದು ನೂತನ ಕೊಡಗು ವಿಶ್ವ ವಿದ್ಯಾನಿಲಯದ ಕುಲಪತಿಗಳಾದ ಡಾ.ಅಶೋಕ ಸಂಗಪ್ಪ ಆಲೂರ್ ತಿಳಿಸಿದ್ದಾರೆ. ಫೀ.ಮಾ.ಕಾರ್ಯಪ್ಪ ಕಾಲೇಜ್ ಗೆ ಭೇಟಿ ನೀಡಿದ ಅವರು ಸಭಾ ಕಾರ್ಯಕ್ರಮದಲ್ಲಿ ಮಾತನಾಡಿ ಮುಂದಿನ ವರ್ಷ ಕಾಲೇಜು ಅಮೃತ ಮಹೋತ್ಸವ ಆಚರಿಸುವ ಸುಸಂದರ್ಭದಲ್ಲಿ ನೂತನ ಶೈಕ್ಷಣಿಕ ಸಂಕೀರ್ಣವನ್ನು ನಿರ್ಮಿಸುವುದು ಮತ್ತು ಇರುವ ಕಟ್ಟಡಗಳನ್ನು ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ಕೊಡಗು ವಿಶ್ವವಿದ್ಯಾನಿಲಯ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಮುಂಚೂಣಿ ವಿಶ್ವವಿದ್ಯಾನಿಲಯಗಳ ಪಟ್ಟಿಯಲ್ಲಿ ಸ್ಥಾನಗಳಿಸುವಂತಾಗಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಈ ಪ್ರಯತ್ನಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ಕರೆ ನೀಡಿದರು. ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ದಕ್ಷತೆಯಿಂದ ಕಾರ್ಯ ನಿರ್ವಹಿಸಬೇಕೆಂದು ಕಿವಿ ಮಾತು ಹೇಳಿದರು. ಇದಕ್ಕೂ ಮೊದಲು ಕುಲಪತಿಗಳಾದ ಡಾ.ಅಶೋಕ ಸಂಗಪ್ಪ ಆಲೂರ್, ಅವರು ಪ್ರಚಲಿತದಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಸೌಲಭ್ಯಗಳ ಕುರಿತು ಎಲ್ಲಾ ವಿಭಾಗಗಳಿಗೆ…

Read More

ಮಡಿಕೇರಿ ಏ.28 : ಸೋಲಿನ ಭೀತಿಯಲ್ಲಿ ಪ್ರತಿಸ್ಪರ್ಧಿಗಳು ನಿರಾಧಾರ ಆರೋಪಗಳನ್ನು ಮಾಡುತ್ತಿದ್ದು, ಜನ ಇದಕ್ಕೆ ಕಿವಿಗೊಡಬಾರದು ಎಂದು ಮನವಿ ಮಾಡಿರುವ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ.ಎಸ್.ಪೊನ್ನಣ್ಣ, ಈಗಾಗಲೇ ರದ್ದಾಗಿರುವ ಟಿಪ್ಪು ಜಯಂತಿ ವಿಚಾರ ಮುಗಿದು ಹೋದ ಅಧ್ಯಾಯ ಎಂದು ಸ್ಪಷ್ಟಪಡಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮೂರು ವರ್ಷಗಳ ಹಿಂದೆಯೇ ಟಿಪ್ಪು ಜಯಂತಿ ರದ್ದಾಗಿದೆ. ಉಚ್ಚ ನ್ಯಾಯಾಲಯದಲ್ಲಿ ರದ್ದು ಮಾಡಿದ ಕ್ರಮವನ್ನು ಅರ್ಜಿದಾರರು ಪ್ರಶ್ನಿಸಿದಾಗ ನ್ಯಾಯಾಲಯ ಈ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡುವುದಿಲ್ಲ ಎಂದು ಹೇಳಿತ್ತು. ಆದ್ದರಿಂದ ಇದು ಮುಗಿದು ಹೋಗಿರುವ ಅಧ್ಯಾಯ ಎಂದು ತಿಳಿಸಿದ್ದಾರೆ. ಕಳೆದ 20 ವರ್ಷಗಳಿಂದ ಅಭಿವೃದ್ಧಿ ಕಾರ್ಯಗಳನ್ನು ಮಾಡದವರು ಅಭಿವೃದ್ಧಿ ಆಧಾರದಲ್ಲಿ ಚುನಾವಣೆ ಎದುರಿಸದೆ ಭಾವನೆಗಳನ್ನು ಕೆಣಕುವ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಮತಯಾಚಿಸಲು ಯಾವುದೇ ಅಭಿವೃದ್ಧಿ ಪರ ಚಿಂತನೆಗಳಿಲ್ಲ ಎಂದು ಟೀಕಿಸಿದ್ದಾರೆ. ತಾಯಿ ಕಾವೇರಿಯ ತೀರ್ಥೋದ್ಭವ ಹಾಗೂ ಕಾವೇರಮ್ಮನ ಮೇಲೆ ನಾನು ಅಪಾರ ವಿಶ್ವಾಸ ಮತ್ತು ನಂಬಿಕೆಯನ್ನಿಟ್ಟುಕೊoಡಿದ್ದೇನೆ. ಪ್ರತಿನಿತ್ಯ ಕಾವೇರಿ ತಾಯಿಯನ್ನು ಪೂಜಿಸುವ…

Read More

ಮಡಿಕೇರಿ ಏ.29 :  ಕೊಡಗು ಜಿಲ್ಲಾ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ನೂತನ‌ ಅಧ್ಯಕ್ಷರಾಗಿ ಆಯ್ಕೆಯಾದ ಜಾಶೀರ್  ಅವರನ್ನು  ಸುಂಟ್ಟಿಕೊಪ್ಪ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭ ಇಲ್ಲಿನ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಸನ್ಮಾನಿಸಿ ಗೌರವಿಸಿದರು. ‌ಸನ್ಮಾನ‌ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಜಾಶೀರ್, ಜಿಲ್ಲೆಯ ವಿವಿಧ ಭಾಗಗಳಿಗೆ ಈಗಾಗಲೇ ಭೇಟಿ ನೀಡಿದ್ದೇನೆ. ಜೆಡಿಎಸ್ ಪಕ್ಷದ ಪರವಾದ ಒಲವು ವ್ಯಕ್ತವಾಗುತ್ತಿದೆ.  ಎಚ್.ಡಿ.ಕುಮಾರಸ್ವಾಮಿ ಅವರು ‌ಮುಖ್ಯಮಂತ್ರಿ‌ಯಾಗಿದ್ದ ಸಂದರ್ಭ  ಕೊಡಗು ಜಿಲ್ಲೆಗೆ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಜನರು ಸ್ಮರಿಸುತ್ತಿದ್ದಾರೆ ಎಂದು ಹೇಳಿದರು. ಸುಂಟ್ಟಿಕೊಪ್ಪ ಜೆಡಿಎಸ್ ಯುವ ಮುಖಂಡರಾದ ಜೆಡಿಎಸ್ ಯುವ ಘಟಕದ ವಕ್ತಾರ ಜಿನಾಸುದ್ದೀನ್, ಮುಬಶ್ಶೀರ್, ರಂಶೀದ್, ಅಬ್ಬಾಸ್, ಉಸೈನ್ ಹಾಗೂ ಷರೀಫ್ ಇದ್ದರು.

Read More

ಸೋಮವಾರಪೇಟೆ ಏ.27 : ಕೊಡಗು ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಚೌಡ್ಲು ಗ್ರಾಮದ ಜಾನಕಿ ವೆಂಕಟೇಶ್ ನೇಮಕಗೊಂಡಿದ್ದಾರೆ. ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಅಮರನಾಥ್ ನೇಮಕ ಮಾಡಿದ್ದಾರೆ. ಜೆಡಿಎಸ್ ಮಡಿಕೇರಿ ಕ್ಷೇತ್ರ ಸಮಿತಿ ಅಧ್ಯಕ್ಷರಾಗಿದ್ದ ಜಾನಕಿ ಅವರು ಹತ್ತು ದಿನದ ಹಿಂದೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಚೌಡ್ಲು ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Read More

ಸೋಮವಾರಪೇಟೆ ಏ.27 : ಕಾರ್ಮಿಕ ಭವಿಷ್ಯನಿಧಿ ಸಂಘಟನೆ ವತಿಯಿಂದ ಕಾರ್ಮಿಕರ ಭವಿಷ್ಯ ನಿಧಿ ಜಾಗೃತಿ ಕಾರ್ಯಾಗಾರ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆಯಿತು. ಉದ್ಯೋಗದಾತರು, ಉದ್ಯೋಗಿಗಳು, ಪಿಂಚಣಿದಾರರ ಕುಂದುಕೊರತೆಗಳನ್ನು ಅಧಿಕಾರಿಗಳು ಆಲಿಸಿ, ಸೂಕ್ತ ವಿವರಗಳನ್ನು ನೀಡಿದರು. ಸೋಮವಾರಪೇಟೆ ಪತ್ರಿಕಾ ಭವನದ ಅಧ್ಯಕ್ಷ ಎಸ್.ಮಹೇಶ್ ಮಾತನಾಡಿ, ಕೆಲ ಸರ್ಕಾರಿ ಸಂಸ್ಥೆಗಳಿಗೆ ಖಾಸಗಿ ಕಂಪನಿಗಳು ನೌಕರರನ್ನು ಒದಗಿಸುತ್ತವೆ. ಕಂಪೆನಿಗಳು ಸೂಕ್ತ ವೇತನ, ಭವಿಷ್ಯನಿಧಿ ನೀಡದೆ ವಂಚಿಸಲಾಗುತ್ತಿದೆ. ಈ ಕಾರಣದಿಂದ ಉದ್ಯೋಗಿಗಳು ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಇಂತಹ ಶೋಷಣೆಯನ್ನು ನಿಲ್ಲಿಸುವ ಜವಾಬ್ದಾರಿ ಸಂಘಟನೆಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಂಘಟನೆಯ ಪ್ರವರ್ತನ ಅಧಿಕಾರಿ ಬಿ.ಎನ್.ರಮೇಶ್, ಅಧಿಕಾರಿಗಳಾದ ಸಂಪತ್ ಕುಮಾರ್, ಪಿ.ಎಂ.ಸುಲೋಚನಾ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಚಪ್ಪ, ಅರೋಗ್ಯ ನಿರೀಕ್ಷಕರಾದ ಜಾಸಿಂ ಖಾನ್ ಇದ್ದರು.

Read More

ಸೋಮವಾರಪೇಟೆ ಏ.27 : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅನುದಾನದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಓ.ಡಿ.ಪಿ ಮಹಿಳಾ ಸಾಂತ್ವನ ಕೌಟಂಬಿಕ ಸಲಹಾ ಕೇಂದ್ರವು ಕಳೆದ 5 ವರ್ಷಗಳಲ್ಲಿ 542 ಮಹಿಳಾ ದೌರ್ಜನ್ಯ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ ಎಂದು ಸಂಸ್ಥೆಯ ನಿರ್ದೇಶಕರಾದ ಅಲೆಕ್ಸಾ ಪ್ರಶಾಂತ್ ಸಿಕ್ವೇರಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ. ಕೌಟಂಬಿಕಾ ದೌರ್ಜನ್ಯ, ಗಂಡನಿoದ ಹಿಂಸೆ, ಅತ್ಯಾಚಾರ, ವರದಕ್ಷಿಣೆ ಕಿರುಕುಳ ಹಾಗು ಇನ್ನಿತರ ಮಾನಸಿಕ ಹಿಂಸೆಗಳಿಗೆ ಸಂಬoಧಪಟ್ಟoತೆ 553 ಪ್ರಕರಣಗಳು ದಾಖಲಾಗಿದ್ದು 542 ಇತ್ಯರ್ಥವಾಗಿ 11 ಪ್ರಕರಣಗಳು ಇತ್ಯಾರ್ಥದ ಹಂತದಲ್ಲಿವೆ ಎಂದು ಹೇಳಿದರು. ದೈಹಿಕವಾಗಿ, ಮಾನಸಿಕವಾಗಿ ಹಿಂಸೆ ಅನುಭವಿಸುತ್ತಿರುವ ನೊಂದ ಮಹಿಳೆಯರಿಗೆ ಕಾನೂನು ನೆರವು ಹಾಗೂ ಆಪ್ತಸಮಾಲೋಚನೆಯ ಸೇವೆಯನ್ನು ಪ್ರತಿದಿನ ಒದಗಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಮಹಿಳಾ ದೌರ್ಜನ್ಯಕ್ಕೆ ಒಳಗಾದ ನೊಂದ ಮಹಿಳೆಯರು ಸಹಾಯವಾಣಿ ಸಹಕಾರ ಪಡೆದುಕೊಳ್ಳಲು ಓ.ಡಿ.ಪಿ, ಮಹಿಳಾ ಸಾಂತ್ವಾನ ಕೇಂದ್ರ, ಮನೆ ಸಂಖ್ಯೆ 57/ಅ ಸರ್ಕಾರಿ ಆಸ್ಪತ್ರೆ ಹತ್ತಿರ, ಸೋಮವಾರಪೇಟೆ. ಕೊಡಗು, ದೂ. ಸಂಖ್ಯೆ 08276 282195 ಗೆ ಕರೆ ಮಾಡಬಹುದಾಗಿದೆ.

Read More

ಮಡಿಕೇರಿ ಏ.27 :   ಉರಿ ಬಿಸಿಲ ಬೇಗೆಯಿಂದ ಬಳಲಿದ್ದ ನಗರದ ಜನತೆಗೆ ನೆಮ್ಮದಿಯನ್ನು ತರುವಂತೆ, ಗುರುವಾರ ಸಂಜೆ ಮಳೆ ಸುರಿದು ವಾತಾವರಣಕ್ಕೆ ತಂಪನ್ನೆರಚಿತು. ಫೆಬ್ರವರಿಯಲ್ಲಿ ಬಂದ ಅಲ್ಪ ಪ್ರಮಾಣದ ಮಳೆ ಬಿಟ್ಟರೆ ಪ್ರಸಕ್ತ ಸಾಲಿನಲ್ಲಿ ಜಿಲ್ಲಾ ಕೇಂದ್ರಕ್ಕೆ ಹನಿ ಮಳೆಯಾಗಿರಲಿಲ್ಲ. ಇಂದು ಮಧ್ಯಾಹ್ನ ನಿಧಾನವಾಗಿ ಕವಿದ ಮೋಡ, ಸಂಜೆ ಸುಮಾರು ಅರ್ಧಗಂಟೆಗಳ ಕಾಲ ಸುರಿಸಿದ ಮಳೆ ಬಿಸಿಲ ಬೇಗೆಯನ್ನು ಸಾಕಷ್ಟು ಪ್ರಮಾಣದಲ್ಲಿ ಕಡಿಮೆ ಮಾಡಿತು. ಫೆಬ್ರವರಿ ಮತ್ತು ಮಾರ್ಚ್ ತಿಂಗಳಿನಲ್ಲಿ ವರ್ಷಂಪ್ರತಿ ಸುರಿಯುತ್ತಿದ್ದ ಮಳೆ ಈ ಬಾರಿ ಕೈಕೊಟ್ಟ ಪರಿಣಾಮ, ಏಪ್ರಿಲ್‍ನಲ್ಲಿ ಮಡಿಕೇರಿಯ ತಾಪಮಾನ 35 ಡಿಗ್ರಿ ಆಸುಪಾಸಿಗೆ ತಲುಪುವ ಮೂಲಕ ಬಿಸಿಲ ಬೇಗೆಗೆ ಜನತೆ ಕಂಗಾಲಾಗಿದ್ದರು. ಇಂದು ಸುರಿದ ಮಳೆ ಬಿಸಿಲ ವಾತಾವರಣದ ನಡುವೆ ಒಂದಷ್ಟು ತಂಪನ್ನು ನೀಡಿ ನಗರದ ಜನತೆಗೆ ಸಂತಸವನ್ನು ಉಂಟುಮಾಡಿದೆ.

Read More