ಲೇಖಕ: admin

ಮಡಿಕೇರಿ ಮಾ.20 : ಕರ್ನಾಟಕ ದಲಿತ ಸಂಘರ್ಷ ಸಮಿತಿ ಕೊಡಗು ಜಿಲ್ಲಾ ಘಟಕದ ವತಿಯಿಂದ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಕಳೆದ ಶೈಕ್ಷಣಿಕ ಸಾಲಿನಲ್ಲಿ ಅತೀ ಹೆಚ್ಚು ಅಂಕ ಗಳಿಸಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದ ಸಮಾಜ ಸೇವಕ ಡಾ. ಮಂಥರ್ ಗೌಡ, ಶಿಕ್ಷಣದಿಂದ ಮಾತ್ರ ಬದಲಾವಣೆ ತರಲು ಸಾಧ್ಯ. ವಿದ್ಯೆಯನ್ನು ಯಾರು ಕಸಿಯುವುದಿಲ್ಲ. ಜೊತೆಗೆ ಸಮಾಜದಲ್ಲಿ ಗೌರವವೂ ದೊರೆಯುತ್ತದೆ. ಇಂದು ವಿವಿಧ ಕ್ಷೇತ್ರಗಳಲ್ಲಿ ವಿಪುಲ ಅವಕಾಶಗಳಿವೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ದೊರೆಯಬೇಕು. ಎಚ್ಚರಿಕೆ ಹೆಜ್ಜೆ ಇಡುವ ಮೂಲಕ ಉತ್ತಮ ಸತ್ಪ್ರಜೆಯಾಗಿ ರೂಪುಗೊಳ್ಳಬೇಕು. ತಂತ್ರಜ್ಞಾನ ವೇಗದಲ್ಲಿ ನಾವು ಮುನ್ನಡೆಯಬೇಕು. ವಿದ್ಯಮಾನಗಳ ಬಗ್ಗೆ ಅರಿತುಕೊಳ್ಳ ಬೇಕೆಂದು ಕಿವಿಮಾತನಾಡಿದರು. ಸಭಾಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ನೇತ್ರ ತಜ್ಞ ಡಾ. ಪ್ರಶಾಂತ್, ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿದರೆ ಅವರಲ್ಲಿ ಸಕಾರಾತ್ಮಕ ಗುಣ ಹೆಚ್ಚಿ ಮತಷ್ಟು ಸಾಧನೆ ಮಾಡುವ ಗುರಿ ಬರುತ್ತದೆ ಎಂದರು. ಮಡಿಕೇರಿ ನಗರ ಸಹಾಯಕ…

Read More

ಶ್ರೀಮಂಗಲ ಮಾ.20 :  ಪೊನ್ನಂಪೇಟೆ ತಾಲೂಕು ಬೆಳ್ಳೂರು-ಹರಿಹರ ಗ್ರಾಮದ ಬಾಚೀರ ಕುಟುಂಬದಿಂದ ಹರಿಹರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೈದಾನದಲ್ಲಿ ಏ.1 ರಿಂದ 9 ರವರೆಗೆ ನಡೆಯುವ ಕೊಡವ ಕೌಟುಂಬಿಕ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ ಟೈಸ್ ಬಿಡುಗಡೆ ಮಾಡಲಾಯಿತು. ಟಿ. ಶೆಟ್ಟಿಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿಯ ಅಧ್ಯಕ್ಷ ಬಾಚೀರ ಎನ್.ಕಾರ್ಯಪ್ಪ , ಬಾಚೀರ ಕುಟುಂಬ ಅಧ್ಯಕ್ಷ ಸುಜಾ ಉತ್ತಯ್ಯ, ಸಂಚಾಲಕ ರಾಜ ಉತ್ತಪ್ಪ ನೇತೃತ್ವದಲ್ಲಿ ಟೈಸ್ ಬಿಡುಗಡೆ ನಡೆಯಿತು. ಈ ಸಂದರ್ಭ ಕುಟುಂಬ ಅಧ್ಯಕ್ಷ  ಸುಜಾ ಉತ್ತಯ್ಯ ಮತ್ತು ಪಂದ್ಯಾವಳಿ ಅಧ್ಯಕ್ಷ  ಕಾಶಿ ಕಾರ್ಯಪ್ಪ ವಿವರಣೆ ನೀಡಿ, ಪಂದ್ಯಾವಳಿಗೆ ಮೊದಲು ನೋಂದಾಯಿಸುವ 64 ತಂಡಗಳಿಗೆ ಮಾತ್ರ ಆದ್ಯತೆ ನೀಡಲು ನಿರ್ಧರಿಸಲಾಗಿತ್ತು, ಅದರಂತೆ 64 ತಂಡ ನೋಂದಣಿ ಆಗಿದೆ. ಈಗಾಗಲೇ ಪಂದ್ಯಾವಳಿಯ ವಿನ್ನರ್ಸ್ ತಂಡಕ್ಕೆ ರೂ.50 ಸಾವಿರ ಮತ್ತು ಟ್ರೋಫಿ, ರನ್ನರ್ಸ್ ತಂಡಕ್ಕೆ ರೂ.30 ಸಾವಿರ ಮತ್ತು ಟ್ರೋಫಿ, ಮೂರನೇ ಸ್ಥಾನ ಪಡೆಯುವ ತಂಡಕ್ಕೆ…

Read More

ಮಡಿಕೇರಿ ಮಾ.20 : ರಾಷ್ಟ್ರೀಯ ಶಿಕ್ಷಣ ನೀತಿ (ಎನ್‍ಇಪಿ)ಯು ನಿರ್ಗತಿಕರ ಉನ್ನತಿಗೆ ಸಹಕಾರಿಯಾಗಲಿದ್ದು, ಇದು ಸಮಾನತೆ, ಪಾರದರ್ಶಕತೆ ಮತ್ತು ಸಮಾಜದಲ್ಲಿ ಉನ್ನತ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ಎನ್‍ಸಿಸಿ ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯದ ಉಪ ಮಹಾನಿರ್ದೇಶಕ ಏರ್ ಕಮೊಡರ್ ಬಿ.ಎಸ್.ಕನ್ವರ್ (ವಿಶಿಷ್ಟ ಸೇವಾ ಪದಕ ವಿಜೇತರು) ಅಭಿಪ್ರಾಯಪಟ್ಟಿದ್ದಾರೆ. ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಎನ್‍ಸಿಸಿ ಘಟಕದ ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ಎನ್‍ಸಿಸಿ ಕೆಡೆಟ್‍ಗಳಿಗೆ “ರಾಷ್ಟ್ರೀಯ ಶಿಕ್ಷಣ ನೀತಿ (ಎನ್‍ಇಪಿ) ಯಲ್ಲಿ ಎನ್‍ಸಿಸಿಯ ಅಗತ್ಯತೆ”ಗಳ ಕುರಿತು ನಡೆದ ರಾಜ್ಯಮಟ್ಟದ ಕಾರ್ಯಾಗಾರ ಮತ್ತು ಸಮಾಲೋಚನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. “ಶಿಕ್ಷಣದಲ್ಲಿ ಭಾರತೀಯತೆಯನ್ನು ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮಹತ್ತರವಾದ ನೀತಿ ಇದಾಗಿದ್ದು, ವಿದ್ಯಾರ್ಥಿಗಳಲ್ಲಿ ಗುಣಾತ್ಮಕತೆ ಹಾಗೂ ರಾಷ್ಟ್ರೀಯತೆಯನ್ನು ಬೆಳೆಸುವ ನಿರ್ದಿಷ್ಟ ಗುರಿಯನ್ನು ಹೊಂದಿದೆ. ಕೋವಿಡ್ ಜಾಗೃತಿ, ಲಸಿಕೆ, ಆಸ್ಪತ್ರೆ, ಸ್ವಸ್ಥ ಅಭಿಯಾನದ ಮೂಲಕ ನೀರಿನ ಸ್ವಚ್ಛತೆ, ಪ್ಲಾಸ್ಟಿಕ್ ಮರುಬಳಕೆಯಂತಹ ಜಾಗೃತಿ ಮೂಡಿಸುವಲ್ಲಿ ಮಹತ್ತರ ಪಾತ್ರ ವಹಿಸಿದೆ. ಇದು ಕ್ರೀಯಾತ್ಮಕ ಚಿಂತನೆಯನ್ನು ಬೆಳೆಸುತ್ತದೆ. ಕಲಿಕೆ…

Read More

ಮಡಿಕೇರಿ ಮಾ.20 : ಗಿರಿಜನ ಬಾಹುಳ್ಯವಿರುವ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಪೊನ್ನಪೇಟೆಯಲ್ಲಿ ಕಾಂಗ್ರೆಸ್ ಎಸ್‍ಟಿ ಘಟಕದ ವತಿಯಿಂದ ‘ಬುಡಕಟ್ಟು ಸಮುದಾಯಗಳ ಸಮಾವೇಶ’ ಬೃಹತ್ ಮೆರವಣಿಗೆಯೊಂದಿಗೆ ನಡೆಯಿತು. ಸಮಾವೇಶದಲ್ಲಿ ಪಾಲ್ಗೊಂಡ ಶ್ರೀ ಬೋಧಾನಂದ ಸ್ವಾಮೀಜಿ, ಕಳೆದ ಎರಡು ದಶಕಗಳಿಂದ ಜಿಲ್ಲೆಯಲ್ಲಿ ಒಂದೇ ಪಕ್ಷದ ಶಾಸಕರು ಅಧಿಕಾರದಲ್ಲಿದ್ದರೂ, ಗಿರಿಜನ ಸಮೂಹಕ್ಕೆ ಇಂದಿಗೂ ನೆಮ್ಮದಿಯ ಬದುಕಿಗೆ ಸೂಕ್ತ ಸೂರು, ಕುಡಿಯುವ ನೀರು, ಮೂಲ ಸೌಲಭ್ಯ ದೊರಕಿಲ್ಲ. ಬುಡಕಟ್ಟು ಸಮುದಾಯಕ್ಕೆ ವಿನಿಯೋಗವಾಗಬೇಕಾದ ಸರ್ಕಾರದ ಅನುದಾನ ಕೊಡಗಿನಲ್ಲಿ ಸಮರ್ಪಕವಾಗಿ ಬಳಕೆಯಾಗಿಲ್ಲವೆಂದು ಬೇಸರ ವ್ಯಕ್ತಪಡಿಸಿದರು. ಆದಿವಾಸಿ ಸಮೂಹವನ್ನು ಸದಾ ಕತ್ತಲಲ್ಲಿಯೇ ಇರಿಸಲಾಗಿದೆ, ಶೋಷಿತ ಸಮೂಹವನ್ನು ನಿರ್ಲಕ್ಷಿಸಿದ ರಾಜಕಾರಣಿಗಳು ಮಾತ್ರ ಬೆಳೆದಿದ್ದಾರೆ ಎಂದು ಆರೋಪಿಸಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಸ್.ಅರುಣ್ ಮಾಚಯ್ಯ ಮಾತನಾಡಿ, ಕಳೆದ 20 ವರ್ಷಗಳಿಂದ ಆದಿವಾಸಿಗಳ ಜೀವನದಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಟೀಕಿಸಿದರು. ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ.ಎಸ್.ಪೊನ್ನಣ್ಣ ಮಾತನಾಡಿ, ಕಾಂಗ್ರೆಸ್‍ನಿಂದ ವಿತರಿಸಲಾಗುತ್ತಿರುವ ‘ಗ್ಯಾರಂಟಿ ಕಾರ್ಡ್’ ಬೋಗಸ್ ಕಾರ್ಡ್’ ಅಲ್ಲ, ಇದು ಬದಲಾವಣೆಯ ಕಾರ್ಡ್. ಪ್ರತಿಯೊಬ್ಬರ…

Read More

ಶ್ರೀಮಂಗಲ ಮಾ.20 :  ಯಾವುದೇ ಪಕ್ಷದಲ್ಲಿ ಗುರ್ತಿಸಿಕೊಂಡರೂ ಆ ಪಕ್ಷ ಅಥವಾ ಆ ಪಕ್ಷದ ಮುಖಂಡರಿಂದ ಜನಾಂಗಕ್ಕೆ ಆಗುತ್ತಿರುವ ದ್ರೋಹವನ್ನು ಅದುಮಿಟ್ಟುಕೊಳ್ಳಬಾರದು. ಕೊಡವ ಜನಾಂಗದ ಕೋವಿ ಹಕ್ಕು ಸೇರಿದಂತೆ ಜನಾಂಗದ ಹಕ್ಕುಗಳನ್ನು ಕಸಿದು ಜನಾಂಗವನ್ನು ನಿರ್ನಾಮ ಮಾಡಲು ಕೊಡವರ ಒಡನಾಟ ಇಟ್ಟುಕೊಂಡ ಮುಖಂಡರು ಕುತಂತ್ರ ರೂಪಿಸುತ್ತಿದ್ದಾರೆ. ಈ ಬಗ್ಗೆ ಎಚ್ಚರವಹಿಸಬೇಕು, ಕೊಡವರ ವಿಶೇಷವಾದ ಕೋವಿ ಹಕ್ಕನ್ನು ಸೂರ್ಯ ಚಂದ್ರ ಇರುವವರೆಗೆ ಅಭಾದಿತವಾಗಿ ಮುಂದುವರಿಯಬೇಕು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ (ಸಿ.ಎಸ್.ಸಿ.)ಅಧ್ಯಕ್ಷ ನಂದಿನೆರವಂಡ ಯು.ನಾಚಪ್ಪ ಹೇಳಿದರು. ಬಿರುನಾಣಿಯ ಮರೆನಾಡು ಪ್ರೌಢಾಶಾಲೆ ಮೈದಾನದಲ್ಲಿ ಮರೆನಾಡ್ ಶೂಟರ್ಸ್ ಕ್ಲಬ್ ವತಿಯಿಂದ ಆಯೋಜಿಸಿದ್ದ 3ನೇ ವರ್ಷದ ರಾಜ್ಯ ಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. “ನಮ್ಮ ತಾಯಿ, ಸಹೋದರಿಯರ ಮೇಲೆ ದೌರ್ಜನ್ಯ ಮಾಡಿದವರು ನಮ್ಮ ಪಕ್ಷದವರು”ಎಂದು ಮನ್ನಿಸಲು ಸಾಧ್ಯವಿಲ್ಲ ಎಂದ ಅವರು ಮಹಾಭಾರತ ಯುದ್ಧದಲ್ಲಿ ಪಾಂಡವ-ಕೌರವ ಸಹೋದರರೇ ಎದುರಾಗಿ ಹೋರಾಟ ಮಾಡುವ ಸಂದರ್ಭದಲ್ಲಿ ದಯೆ, ಕನಿಕರ ಕಟ್ಟಿಟ್ಟು ಯುದ್ಧ ಮಾಡುವಂತೆ ಶ್ರೀ ಕೃಷ್ಟನ ಉಪದೇಶ…

Read More

ಮಡಿಕೇರಿ ಮಾ.20 :  ಗುಡ್ಡೆಹೊಸೂರು ಸಮೀಪದ ಬಾಳುಗೋಡು ವ್ಯಾಪ್ತಿಯ ರಸುಲ್ ಪುರ ಕಲ್ಲುಮಂಟಿ ಬಸವೇಶ್ವರ ದೇವಾಲಯದ ವಾರ್ಷಿಕೋತ್ಸವ  ಶ್ರದ್ಧಾಭಕ್ತಿಯಿಂದ ನೆರವೇರಿತು. ದೇವಾಲಯ ಮಂಡಳಿ ಅಧ್ಯಕ್ಷ ಪಿ.ಬಿ.ಈರಪ್ಪ, ಕಾರ್ಯದರ್ಶಿ ರಾಮಚಂದ್ರ ನೇತೃತ್ವದಲ್ಲಿ ನಡೆದ ವಿಶೇಷ ಪೂಜಾ ಕೈಂಕರ್ಯಗಳನ್ನು ಯೋಗೇಶ್ ಭಟ್ಟರು ನೆರವೇರಿಸಿಕೊಟ್ಟರು. ಬೆಳಗ್ಗಿನಿಂದಲೇ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಎಲ್ಲರಿಗೂ ದೇವರ ಪ್ರಸಾದ ವಿನಿಯೋಗ ಮತ್ತು ಅನ್ನ ಸಂತರ್ಪಣೆ ನಡೆಯಿತು. 

Read More

ಮಡಿಕೇರಿ ಮಾ.20 : ಕರ್ನಾಟಕ ಅರಣ್ಯ ಇಲಾಖೆಯ ಕೊಡಗು ವೃತ್ತದಲ್ಲಿ ಒಟ್ಟು 5 ಆನೆ ಕಾವಾಡಿಗ ಹುದ್ದೆಯ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು 2023 ರ ಮಾರ್ಚ್, 30 ರಿಂದ ಏಪ್ರಿಲ್, 29 ರ ಸಂಜೆ 5.30 ಗಂಟೆಗೆ ಕೊನೆಯ ದಿನವಾಗಿದೆ. ಪೂರ್ಣ ಮಾಹಿತಿ ಇಲಾಖಾ ವೆಬ್‍ಸೈಟ್ www.kfdrecruitment.in ನಲ್ಲಿ ಹಾಗೂ ಕಚೇರಿಯಲ್ಲಿ ಲಭ್ಯವಿರುತ್ತದೆ ಎಂದು ಆನೆ ಕಾವಾಡಿಗ ಹುದ್ದೆಯ ನೇರ ನೇಮಕಾತಿ ಆಯ್ಕೆ ಪ್ರಾಧಿಕಾರಿ ಹಾಗೂ ಅರಣ್ಯ ಸಂರಕ್ಷಣಾಧಿಕಾರಿ ಅವರು ತಿಳಿಸಿದ್ದಾರೆ.

Read More

ಮಡಿಕೇರಿ ಮಾ.20 : ಅರೆ ಸೇನಾಪಡೆ ನಿವೃತ್ತ (ಮಾಜಿ) ಯೋಧರ ಸಮಾವೇಶವು ಮಾರ್ಚ್, 23 ರಂದು ಬೆಳಗ್ಗೆ 10.30 ಗಂಟೆಗೆ ಪೊನ್ನಂಪೇಟೆ ತಾಲ್ಲೂಕಿನ ಗೋಣಿಕೊಪ್ಪದ ಪರಿಮಳ ಮಂಗಳ ವಿಹಾರ ಸಭಾಂಗಣದಲ್ಲಿ ನಡೆಯಲಿದೆ. ಮಾಜಿ ಯೋಧರು ಅನುಭವಿಸುತ್ತಿರುವ ಸಮಸ್ಯೆಗಳು ಕುಂದುಕೊರತೆಗಳ ಬಗ್ಗೆ ಸಭೆ ನಡೆಯಲಿದೆ. ಅಡ್ವೋಕೇಟ್ ಜನರಲ್ ಮತ್ತು ಸಮಾಜ ಸೇವಕರಾದ ಎಸ್.ಎಸ್.ಪೊನ್ನಣ್ಣ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಅರುಣ್ ಮಾಚಯ್ಯ ಅವರು ಸಮಸ್ಯೆಗಳ ಬಗ್ಗೆ ಸಮಾಲೋಚಿಸಿ ವಿಚಾರ ವ್ಯಕ್ತಪಡಿಸಲಿದ್ದಾರೆ. ಫೀಲ್ಡ್ ಮಾರ್ಷಲ್ ಕೊಡವ ಕ್ಷೇಮಾಭಿವೃದ್ಧಿ ಸಂಘ ಹಾಗೂ ಗುರುಮನೆ-12 ಹಾಲಿ ಅಧ್ಯಕ್ಷರು, ಉದ್ಯಮಿ ಹಾಗೂ ಸಮಾಜ ಸೇವಕರಾದ ದೇಯಂಡ ಜಯಾಚಂಗಪ್ಪ ಇತರರು ಪಾಲ್ಗೊಳ್ಳಲಿದ್ದಾರೆ. ಅರೆಸೇನಾಪಡೆ ಮಾಜಿ ಯೋಧರು ಕರ್ತವ್ಯ ನಿರತ ಯೋಧರ ಕುಟುಂಬದವರು, ಅವಲಂಬಿತರು ಸಮಾವೇಶಕ್ಕೆ ಆಗಮಿಸುವಂತೆ ಅರೆ ಸೇನಾಪಡೆ ನಿವೃತ್ತ(ಮಾಜಿ) ಯೋಧರ ಒಕ್ಕೂಟದ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪರವಾಗಿ ಕಾರ್ಯದರ್ಶಿ ಹಾಗೂ ಸಂಚಾಲಕರಾದ ನೂರೇರ ಎಂ.ಭೀಮಯ್ಯ ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಕಾರ್ಯದರ್ಶಿ ಮೊ. 9481057868 ನ್ನು ಸಂಪರ್ಕಿಸಬಹುದು.

Read More

ಮಡಿಕೇರಿ ಮಾ.20 : ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ(ಸ್ವೀಪ್) ರಾಜ್ಯ ನೋಡಲ್ ಅಧಿಕಾರಿ ಪಿ.ಎಸ್.ವಸ್ತ್ರದ್ ಅವರು ಸೋಮವಾರ ನಗರದ ಹಿಲ್ ರಸ್ತೆಯಲ್ಲಿ ಇರುವ ನಗರಸಭಾ ಹಿರಿಯ ಪ್ರಾಥಮಿಕ ಶಾಲೆ, ಮಹದೇವಪೇಟೆಯ ನಗರಸಭಾ ಹಿರಿಯ ಪ್ರಾಥಮಿಕ ಶಾಲೆ, ಸಂತ ಜೋಸೆಫರ ಕಾಲೇಜು ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಮತಗಟ್ಟೆ ಕೇಂದ್ರಗಳಿಗೆ ಭೇಟಿ ನೀಡಿ ವೀಕ್ಷಿಸಿದರು. ರ್ಯಾಂಪ್ ವ್ಯವಸ್ಥೆ ಮಾಡಬೇಕು. ಜೊತೆಗೆ ರೈಲಿಂಗ್ಸ್ ಇರಬೇಕು. ಗಾಲಿ ಕುರ್ಚಿ ವ್ಯವಸ್ಥೆ ಮಾಡಬೇಕು. ಒಂದು ಮತಗಟ್ಟೆಯಲ್ಲಿ 80 ವರ್ಷ ಮೇಲ್ಪಟ್ಟವರು ಎಷ್ಟು ಮಂದಿ ಇದ್ದಾರೆ ಎಂಬುದನ್ನು ಖಾತರಿ ಪಡಿಸಿಕೊಳ್ಳಬೇಕು ಎಂದು ಪಿ.ಎಸ್.ವಸ್ತ್ರದ್ ಅವರು ಬಿಎಲ್‍ಒಗಳಿಗೆ ಸೂಚಿಸಿದರು. ಕಳೆದ ಬಾರಿ ಶೇ.60 ಕ್ಕಿಂತ ಕಡಿಮೆ ಮತದಾನವಾಗಿರುವ ಮತಗಟ್ಟೆಗಳಿಗೆ ತೆರಳಿ ಮಾಹಿತಿ ಪಡೆದ ಸ್ವೀಪ್ ನೋಡಲ್ ಅಧಿಕಾರಿ ಅವರು ವೋಟರ್ ಹೆಲ್ಫ್‍ಲೈನ್ ಆ್ಯಪ್ ಮೂಲಕ ಮತದಾರರ ಪಟ್ಟಿಯಲ್ಲಿ ಹೆಸರು ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಕೆಲವು ಸಂದರ್ಭದಲ್ಲಿ ಮತದಾರರ ಗುರುತಿನ ಚೀಟಿ ಇದ್ದರೂ ಸಹ, ಮತದಾರರ ಪಟ್ಟಿಯಲ್ಲಿ ಹೆಸರು…

Read More

ಮಡಿಕೇರಿ ಮಾ.20 : ಸೋಮವಾರಪೇಟೆ ತಾಲ್ಲೂಕು ನ್ಯಾಯಬೆಲೆ ಅಂಗಡಿ ಮಾಲೀಕರು ಹಾಗೂ ಕಾರ್ಯದರ್ಶಿಗಳ ನೂತನ ಸಂಘ ಅಸ್ತಿತ್ವಕ್ಕೆ ಬಂದಿದೆ. ಸಂಘದ ನೂತನ ಅಧ್ಯಕ್ಷರಾಗಿ ಗೌತಮ್ ಶಿವಪ್ಪ ಸರ್ವಾನುಮತದಿಂದ ಆಯ್ಕೆಯಾದರು. ಖಜಾಂಚಿಯಾಗಿ ಕೆ.ರಾಜೀವನ್, ಕಾರ್ಯದರ್ಶಿಯಾಗಿ ನವೀನ ಬೆಂಬಳೂರು ಹಾಗೂ ಉಪಾಧ್ಯಕ್ಷರನ್ನಾಗಿ ಸುಮಂಗಳ ಅವರನ್ನು ಆಯ್ಕೆ ಮಾಡಲಾಯಿತು. ಸೋಮವಾರಪೇಟೆ ಕಚೇರಿ ಸಭಾಂಗಣದಲ್ಲಿ ನಡೆದ ತಾಲ್ಲೂಕು ಸಂಘದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಇದೇ ಸಂದರ್ಭ ತಾಲ್ಲೂಕು ಆಹಾರ ಶಿರಸ್ತುದಾರರು ಹಾಗೂ ಆಹಾರ ನಿರೀಕ್ಷಕರ ಸಮ್ಮುಖದಲ್ಲಿ “ಅನ್ನಭಾಗ್ಯ” ಯೋಜನೆಯ ಸಮರ್ಪಕ ವಿತರಣೆಯ ಕುರಿತು ಚರ್ಚಿಸಲಾಯಿತು.

Read More