ಮಡಿಕೇರಿ ಮಾ.19 : ತೊಟ್ಟಿಲ್ಲ ತೂಗುವ ಕೈಗಳು ದೇಶವನ್ನು ಆಳಬಲ್ಲವು ಎಂಬುವುದನ್ನು ಮಹಿಳೆಯರು ಈಗಾಗಲೇ ಸಾಬೀತುಪಡಿಸಿದ್ದು, ಉತ್ತಮ ನಾಗರಿಕ ಸಮಾಜದ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ದೊಡ್ಡದಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಹೇಳಿದ್ದಾರೆ. ಸೋಮವಾರಪೇಟೆ ತಾಲ್ಲೂಕು ಪ್ರಾಥಮಿಕ ಹಾಗೂ ಪೌಢಶಾಲಾ ಶಿಕ್ಷಕರ ಸಂಘದ ವತಿಯಿಂದ ಮಾನಸ ಹಾಲ್ ನಲ್ಲಿ ಆಯೋಜಿಸಿದ್ದ ‘ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ’ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಿತ್ತೂರುರಾಣಿ ಚನ್ನಮ್ಮ, ಝಾನ್ಸಿರಾಣಿ ಲಕ್ಷ್ಮೀಬಾಯಿ, ಬೆಳವಡಿ ಮಲ್ಲಮ್ಮ, ಒನಕೆ ಒಬವ್ವ ಇಂತಹ ವೀರವನಿತೆಯರ ಹೋರಾಟದ ಬಗ್ಗೆ ನಾವೆಲ್ಲ ಓದಿದ್ದೇವೆ. ದಿ.ಇಂದಿರಾಗಾಂಧಿಯವರು ಪ್ರಧಾನಿ ಸ್ಥಾನವನ್ನು ನಿಭಾಯಿಸಿದ್ದಾರೆ. ಬಾಹ್ಯಕಾಶದಲ್ಲೂ ಅನೇಕ ಮಹಿಳೆಯರು ಸಾಧನೆ ಮಾಡಿದ್ದಾರೆ. ಈಗ ಐಎಎಸ್, ಐಪಿಎಸ್, ಐಎಫ್‌ಎಸ್, ಐಆರ್‌ಎಸ್ ಪರೀಕ್ಷೆಯನ್ನು ಅತೀ ಹೆಚ್ಚು ಮಹಿಳೆಯರು ಉತ್ತೀರ್ಣರಾಗಿ ಉನ್ನತಹುದ್ದೆ ಅಲಂಕರಿಸಿದ್ದಾರೆ. ನಮ್ಮ ದೇಶದಲ್ಲಿ ಮಹಿಳೆಯರು ಮತ್ತು ಪುರುಷರಿಗೆ ಸಮಾನವಾದ ಹಕ್ಕುಗಳಿದ್ದು, ಪ್ರತಿಯೊಬ್ಬರು ಮಹಿಳೆಯರ ಬಗ್ಗೆ ಗೌರವ ಇಟ್ಟುಕೊಳ್ಳಬೇಕು ಎಂದು ಹೇಳಿದರು. ಮಹಿಳೆಯರು ತಮಗೆ ಸಿಗುತ್ತಿರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುತ್ತಿರುವುದು ಶ್ಲಾಘನೀಯ…
ಲೇಖಕ: admin
ಸೋಮವಾರಪೇಟೆ ಮಾ.19 : ಜೀವನ ಜಂಜಾಟ, ನಿತ್ಯದ ಸಂಕಷ್ಟದ ನಡುವೆಯೂ ಮಲೆನಾಡಿಗರು ತಮ್ಮ ಮೂಲ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗುತ್ತಿರುವುದಕ್ಕೆ ಮಹಿಳೆಯರೇ ಮುಖ್ಯ ಕಾರಣ ಎಂದು ಶಾಸಕ ಎಚ್.ಕೆ.ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. ಸೋಮವಾರಪೇಟೆ ತಾಲೂಕಿನ ಈಚಲಬೀಡು ಗ್ರಾಮದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಮತ್ತು ಮಲೆನಾಡು ಜಾನಪದ ಉತ್ಸವ ಸಮಿತಿ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಮಲೆನಾಡು ಜಾನಪದ ಉತ್ಸವವನ್ನು ಮೊರದಲ್ಲಿ ಭತ್ತ ಸುರಿದು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಇನ್ನೊಬ್ಬರನ್ನು ತಿದ್ದುವ ಬದಲು ನಾವು ತಿದ್ದಿಕೊಳ್ಳೋಣ ಎಂಬ ಸತ್ಯವನ್ನು ಅರಿತು ಜನಪದ ಕಲೆಗಳನ್ನು ಉಳಿಸುವ ಕೆಲಸ ಮಾಡಬೇಕಿದೆ. ತನ್ನದೇ ಶ್ರೇಷ್ಠತೆ, ಪಾವಿತ್ರ್ಯತೆ ಹೊಂದಿರುವ ಜನಪದ ಕಲೆಗಳಿಗೆ ಸರಿಸಾಟಿ ಇಲ್ಲ. ಅದೇ ನಮ್ಮ ನಾಡಿನ ಮಣ್ಣಿನ ಗುಣ. ನುಡಿ, ನಡೆ ಮಾತ್ರವಲ್ಲದೇ ಕಲಾ ಪ್ರಾವಿಣ್ಯತೆಯಲ್ಲಿ ಜಾನಪದ ಸದಾ ಕಾಲ ಹಸಿರಾಗಿರುತ್ತದೆ. ಆದರೆ ಅವುಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಪ್ರಯತ್ನಗಳು ಹೆಚ್ಚಾಗಬೇಕು ಎಂದರು. ಕರ್ನಾಟಕ ಜಾನಪದ ಪರಿಷತ್ತು ರಾಜ್ಯಾಧ್ಯಕ್ಷ ಹಿ.ಶಿ.ರಾಮಚಂದೇಗೌಡ ಮಾತನಾಡಿ, ಭದ್ರತೆ ನೀಡದ ನಾಗರಿಕತೆಗಿಂತ…
ವಿರಾಜಪೇಟೆ ಮಾ.18 : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ 2022-23 ನೇ ಸಾಲಿನಲ್ಲಿ ನಡೆಸಿದ ಕಿರಿಯ ದರ್ಜೆಯ ಭರತನಾಟ್ಯ ಪರೀಕ್ಷೆಯಲ್ಲಿ ಸಮೃದ್ಧಿ ಎ.ವಿ ಶೇಕಡ 84.75 ಅಂಕ ಪಡೆದು ಕೊಡಗು ಜಿಲ್ಲೆಗೆ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಇವರು ನೆಲ್ಯಹುದಿಕೇರಿ ನಿವಾಸಿ, ಸಿದ್ದಾಪುರದ ಪತ್ರಕರ್ತ ವಾಸು ಎ.ಎನ್ ಹಾಗೂ ವಿಶಾಲಾಕ್ಷಿ ಎ.ಎ ದಂಪತಿ ಪುತ್ರಿಯಾಗಿದ್ದಾಳೆ. ಸಿದ್ದಾಪುರದ ಭಾರತೀಯ ನೃತ್ಯ ಕಲಾ ಶಾಲೆಯ ವಿದೂಷಿ ಜಲಜಾ ನಾಗರಾಜ ಅವರ ಶಿಷ್ಯೆಯಾಗಿದ್ದು, ನೆಲ್ಯಹುದಿಕೇರಿಯ ಆಂಗ್ಲೋ ವರ್ನಾಕ್ಯುಲರ್ ಪ್ರೌಢ ಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದಾಳೆ.
ಮಡಿಕೇರಿ ಮಾ.18 : ಕೊಡವ ಜನಾಂಗ ಶ್ರೇಯೋಭಿವೃದ್ಧಿಗೆ 2022ನೇ ಸಾಲಿನ ಬಜೆಟ್‌ನಲ್ಲಿ 10 ಕೋಟಿ ರೂ. ಅನುದಾನವನ್ನು ಸರ್ಕಾರ ಮೀಸಲಿಟ್ಟಿದೆ. ಇದರ ಜತೆಗೆ ಜನಾಂಗದ ಅಭಿವೃದ್ಧಿ ನಿಟ್ಟಿನಲ್ಲಿ ನಿಗಮದ ಅವಶ್ಯಕತೆಯಿದ್ದು, ಆದಷ್ಟು ಶೀಘ್ರದಲ್ಲಿ ನಿಗಮ ಘೋಷಣೆ ಮಾಡಿ ಇಲ್ಲಿನ ಜನರ ಬೇಡಿಕೆಗೆ ಸ್ಪಂದಿಸುವಂತೆ ಕೊಡಗು ಜಿಲ್ಲಾ ಬಿಜೆಪಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದೆ. ನಾಪೋಕ್ಲುವಿನಲ್ಲಿ ಮನವಿ ಪತ್ರ ಸಲ್ಲಿಸದ ಬಿಜೆಪಿ ಪ್ರಮುಖರು, ಕೊಡಗು ಜಿಲ್ಲೆಯ ಕೊಡವ ಜನಾಂಗದ ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ 10 ಕೋಟಿ ರೂ. ಮೀಸಲಿಟ್ಟಿರುವುದು ಸ್ವಾಗತಾರ್ಹ ಎಂದು ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದೆ. ಕೊಡಗು ಜಿಲ್ಲೆಯಲ್ಲಿರುವ ಹಲವು ಜನಾಂಗಗಲ್ಲಿ ಕೊಡವ ಜನಾಂಗ ಕೂಡಾ ಪ್ರಮುಖವಾದುದು. ಭಾರತೀಯ ಜನತಾ ಪಕ್ಷದೊಂದಿಗೆ ಈ ಜನಾಂಗದ ಅನೇಕರು ಹಲವು ವರ್ಷಗಳಿಂದ ಗುರುತಿಸಿಕೊಂಡಿದ್ದಾರೆ. ಗುಡ್ಡಗಾಡು ಪ್ರದೇಶವಾಗಿರುವ ಜಿಲ್ಲೆಯಲ್ಲಿ ತನ್ನದೇ ಆದ ವಿಶಿಷ್ಟ ಸಂಸ್ಕೃತಿ, ಪರಂಪರೆಯನ್ನು ಹೊಂದಿರುವ ಜನಾಂಗ ಕೊಡವ ಜನಾಂಗ, ಭಾರತೀಯ ಸೇನೆಯಲ್ಲೂ ದೊಡ್ಡ ಪ್ರಮಾಣದ ಸೇವೆಯನ್ನು ಈ ಜನಾಂಗದವರು ಸಲ್ಲಿಸಿದ್ದಾರೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಈ…
ಮಡಿಕೇರಿ ಮಾ.18 : ಕೊಡವ ಕುಟುಂಬಗಳ ನಡುವಿನ 23ನೇ ‘ಅಪ್ಪಚೆಟ್ಟೋಳಂಡ ಕಪ್ ಹಾಕಿ ಉತ್ಸವ-2023’ಕ್ಕೆ ವರ್ಣರಂಜಿತ ಕಾರ್ಯಕ್ರಮದಲ್ಲಿ ನಾಪೋಕ್ಲುವಿನ ಚೆರಿಯಪರಂಬು ಮೈದಾನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿದ್ಯುಕ್ತ ಚಾಲನೆ ನೀಡಿದರು. ಕೊಡವ ಸಾಂಪ್ರದಾಯಿಕ ಉಡುಗೆ ತೊಟ್ಟು ಕೊಡವ ಭಾಷೆಯಲ್ಲಿ ಮಾತು ಪ್ರಾರಂಭಿಸಿದ ಮುಖ್ಯಮಂತ್ರಿ ನಶಿಸಿ ಹೋಗುತ್ತಿರುವ ಕುಟುಂಬಗಳ ನಡುವಿನ ಸಂಬoಧ ಮತ್ತೆ ಬೆಸೆಯಲು ಕುಟುಂಬಗಳ ನಡುವಿನ ಹಾಕಿ ಸಹಕಾರಿಯಾಗಿದೆ ಎಂದರು. ಕುಟುಂಬದಲ್ಲಿ ಸದಸ್ಯರ ಸಂಬoಧ ಉತ್ತಮವಾಗಿದ್ದರೆ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ಇದು ಭಾರತೀಯ ನಾಗರಿಕತೆಯಾಗಿದ್ದು, ಕೊಡವ ಕೌಟುಂಬಿಕ ಹಾಕಿ ಉತ್ಸವ ಇದಕ್ಕೆ ಸೂಕ್ತ ನಿದರ್ಶನವಾಗಿದೆ. ಹಾಕಿ ಕ್ರೀಡೆಯ ಮೂಲಕ ಕೊಡವರು ತಮ್ಮಲ್ಲಿನ ಉತ್ತಮ ಕೌಟುಂಬಿಕ ಸಂಬoಧಗಳಿಗೆ ಮಾದರಿಯಾಗಿದ್ದಾರೆ. ಕೆ.ಜಿ.ಬೋಪಯ್ಯ ಅವರು ಹಾಕಿ ಕ್ರೀಡೆಗೆ ಸೂಕ್ತ ಅನುದಾನ ತರುವಲ್ಲಿ ಶ್ರಮಿಸಿದ್ದಾರೆ. ನನ್ನಲ್ಲಿ ಬೋಪಯ್ಯ ಅವರ ನಿಯೋಗ ಬಂದಾಗ 1 ಕೋಟಿ ಕೇಳಿದ್ದರು. ತಕ್ಷಣವೇ ನಾನು 1 ಕೋಟಿ ಮಂಜೂರು ಮಾಡಿದ್ದೇನೆ ಎಂದರು. ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆಗೆ ತಕ್ಷಣ ಆದೇಶ ಹೊರಡಿಸುತ್ತೇನೆ…
ಮಡಿಕೇರಿ ಮಾ.18 : ಆಧುನಿಕ ಕೃಷಿಯಲ್ಲಿ ಡ್ರೋನ್ ತಂತ್ರಜ್ಞಾನವನ್ನು ಬಳಸಿ ಕೀಟನಾಶಕಗಳು ಮತ್ತು ಬೆಳೆ ಪೋಷಕಾಂಶಗಳನ್ನು ಪರಿಣಾಮಕಾರಿಯಾಗಿ ಹಾಗೂ ನಿಖರವಾಗಿ ಸಿಂಪಡಿಸುವಿಕೆಯ ಮೂಲಕ ಉತ್ಪಾದನೆಯನ್ನು ಹೆಚ್ಚಿಸಬಹುದು. ಡ್ರೋನ್ ಬಳಸಿ ಸಿಂಪಡಿಸುವ ಮೂಲಕ ಕೃಷಿ ಇನ್ಪುಟ್ಗಳ ಅತ್ಯುತ್ತಮ ಬಳಕೆ, ಶ್ರಮ, ಸಮಯವನ್ನು ಉಳಿಸಲು ಮತ್ತು ಕಾರ್ಮಿಕರ ಅವಲಂಬನೆಯನ್ನು ಕಡಿಮೆ ಮಾಡುವ ಮೂಲಕ ರೈತರಿಗೆ ಪ್ರಯೋಜನಕಾರಿಯಾಗಿದೆ. ಈ ನಿಟ್ಟಿನಲ್ಲಿ ರೈತರ ಅನುಕೂಲಕ್ಕಾಗಿ ಭಾರತೀಯ ಸಂಬಾರ ಬೆಳೆಗಳ ಸಂಶೋಧನಾ ಸಂಸ್ಥೆ, ಅಪ್ಪಂಗಳ ಪ್ರಾದೇಶಿಕ ಕೇಂದ್ರದಿಂದ ಕೃಷಿಯಲ್ಲಿ ಡ್ರೋನ್ ಬಳಕೆಯ ಕುರಿತು ಸರಣಿ ಪ್ರಾತ್ಯಕ್ಷಿಕೆಗಳನ್ನು ನಡೆಸಲಾಯಿತು. ಮಾರ್ಚ್, 15 ರಂದು ಮೊದಲು ಪ್ರಾತ್ಯಕ್ಷಿಕೆಯನ್ನು ಅಪ್ಪಂಗಳದ ಪ್ರಾದೇಶಿಕ ಕೇಂದ್ರದಲ್ಲಿ ಮಾಡಲಾಯಿತು. ಅಲ್ಲಿ ರೈತರು ಏಲಕ್ಕಿಯಲ್ಲಿ ಸೂಕ್ಷ್ಮ ಪೋಷಕಾಂಶಗಳನ್ನು ಸಿಂಪಡಿಸುವುದನ್ನು ವೀಕ್ಷಿಸಿದರು. ನಂತರ ಬಿಟಿಗುಂಡಿ ಎಸ್ಟೇಟ್ನಲ್ಲಿ ಕಾಫಿ ಬೆಳೆಯಲ್ಲಿ ಪ್ರಾತ್ಯಕ್ಷಿಕೆ ನಡೆಸಲಾಯಿತು. ನಂತರ ಹಾಕತ್ತೂರು ಕುಮಾರ್ ಮತ್ತು ಮರಗೋಡು ಪ್ರೇಮಾ ಗಣೇಶ್ ಎಂಬುವರಿಗೆ ಸೇರಿದ ಕಾಫಿ ಎಸ್ಟೇಟ್‍ಗಳಲ್ಲಿ ಡ್ರೋನ್ ಪ್ರಾತ್ಯಕ್ಷಿಕೆ ನಡೆಸಲಾಯಿತು. ಮಧ್ಯಾಹ್ನ ಚೆಟ್ಟಳ್ಳಿಯ ಸಿಎಚ್‍ಇಎಸ್‍ನಲ್ಲಿ ತರಕಾರಿ ಬೆಳೆಗಳು ಆವಕಾಡೊ,…
ಮಡಿಕೇರಿ ಮಾ.18 : ಮಡಿಕೇರಿ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 539.86 ಕೋಟಿ ರೂ. ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೆರವೇರಿಸಿದರು. ರಾಜ್ಯ ಸರ್ಕಾರವು ಕಳೆದ ಮೂರುವರೆ ವರ್ಷಗಳಿಂದ ಕೊಡಗು ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು 100 ಕೋಟಿ ರೂ. ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣದಲ್ಲಿ ಮಹಿಳಾ ಮತ್ತು ಮಕ್ಕಳ ವಿಭಾಗದ ಕಟ್ಟಡವನ್ನು ಇಂದು ಉದ್ಘಾಟಿಸಲಾಗುತ್ತಿದೆ. ಕೊಡಗು ಜಿಲ್ಲೆ ಕೃಷಿ ಪ್ರಧಾನವಾಗಿದ್ದು, ಮೂಲ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಪ್ರಸ್ತುತ ಬಜೆಟ್‍ನಲ್ಲಿ ಸರ್ಕಾರ ರಸ್ತೆ ಅಭಿವೃದ್ಧಿಗೆ 100 ಕೋಟಿ ರೂ. ವಿಶೇಷ ಪ್ಯಾಕೇಜ್‍ನ್ನು ಪ್ರಕಟಿಸಲಾಗಿದೆ. ಹಾಗೆಯೇ ಮೈಸೂರು-ಕುಶಾಲನಗರ ಚತುಷ್ಪಥ ಮಾರ್ಗ 92 ಕಿ.ಮೀ. ಉದ್ದದ ಹೆದ್ದಾರಿ ಅಭಿವೃದ್ಧಿಗೆ 4,128 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ. ರಾಜ್ಯವು…
ಮಡಿಕೇರಿ ಮಾ.18 : ರೈತರ ಸಮಸ್ಯೆಗಳು ಬೆಟ್ಟದಷ್ಟಿದೆ, ಜಿಲ್ಲೆಯ ವಿವಿಧ ಭಾಗಗಳಲ್ಲಿ ವಿವಿಧ ಮಾದರಿಯ ಸಮಸ್ಯೆಗಳಿವೆ. ಸರ್ಕಾರ ಮತ್ತು ಅಧಿಕಾರಿಗಳ ವರ್ಗವು ರೈತ ಪರ ಕಾಳಜಿಯಿಲ್ಲದೆ ಭರವಸೆಗಳೊಂದಿಗೆ ದಿನದೂಡುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಹೇಳಿದರು. ಕರ್ನಾಟಕ ರಾಜ್ಯ ರೈತ ಸಂಘ ಗ್ರಾಮ ಘಟಕ ಪೆರಾಜೆ ಮಡಿಕೇರಿ ತಾಲೂಕು ವತಿಯಿಂದ ಪೆರಾಜೆಯ ಶ್ರೀ ಅನ್ನಪೂರ್ಣೇಶ್ವರಿ ಕಲಾ ಮಂದಿರ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ವಾರ್ಷಿಕ ಮಾಹಾಸಭೆ ಮತ್ತು ಘಟಕಕ್ಕೆ ನೂತನ ಸದಸ್ಯರ ಸೇರ್ಪಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ನೂತನ ಸದಸ್ಯರನ್ನು ಶಾಲು ಹೊದಿಸಿ ಬರಮಾಡಿಕೊಂಡರು. ನಂತರ ಮಾತನಾಡಿದ ಅವರು, ಜಿಲ್ಲೆಯಲ್ಲಿ ಹಲವಾರು ಜ್ವಲಂತ ಸಮಸ್ಯೆಗಳಿವೆ. ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸಂಘಟನೆ ಪಾತ್ರ ಬಹಳಷ್ಟಿದೆ. ಸಂಘಟನೆಯೊಂದಿಗೆ ಇಲಾಖಾ ಮಟ್ಟದಲ್ಲಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಸ್ವತಂತ್ರ ಬಂದು ಹಲವು ದಶಕಗಳು ಸಂದರು ರೈತನ ಬವಣೆಯನ್ನು ನೀಗಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿದೆ ಎಂದು ಆರೋಪಿಸಿದರು.…
ಮಡಿಕೇರಿ ಮಾ.18 : ಕೊಡಗಿನ ಕಾಫಿ ಬೆಳೆಗಾರರಿಗೆ 10 ಹೆಚ್.ಪಿ ಪಂಪ್ ಸೆಟ್ ಗೆ ವಿದ್ಯುತ್ ಅನ್ನು ಉಚಿತವಾಗಿ ನೀಡಬೇಕೆನ್ನುವ ಬೇಡಿಕೆ ಇತ್ತು. ಕೊಡಗಿನ ಬೆಳೆಗಾರರ ಸಂಕಷ್ಟವನ್ನು ಅರಿತಿರುವ ನಾನು 10 ಹೆಚ್.ಪಿ.ವಿದ್ಯುತನ್ನು ಉಚಿತವಾಗಿ ನೀಡಲು ಆದೇಶಿಸಿದ್ದೇನೆ. ಬೆಳೆಗಾರರ ಹಳೆಯ ಬಾಕಿಯನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ 10 ಹೆಚ್.ಪಿ.ವಿದ್ಯುತ್ ಅನ್ನು ಉಚಿತವಾಗಿ ನೀಡಬೇಕೆಂದು ಈ ವೇದಿಕೆ ಮೂಲಕ ಅಧಿಕಾರಿಗಳಿಗೆ ಆದೇಶಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮಡಿಕೇರಿ ಮಾ.18 : ಮಹಿಳೆಯರಿಗೆ ಶಿಕ್ಷಣ ಮತ್ತು ಉದ್ಯೋಗ ನೀಡುವ ಮೂಲಕ ಸ್ತ್ರೀ ಸಾಮಾಥ್ರ್ಯವನ್ನು ಹೆಚ್ಚಿಸಲಾಗುತ್ತಿದೆ. ಇಂದು “ದುಡ್ಡೇ ದೊಡ್ಡಪ್ಪ” ಎನ್ನುವ ಕಾಲ ಹೋಗಿ “ದುಡಿಮೆಯೇ ದೊಡ್ಡಪ್ಪ” ಎನ್ನುವ ಕಾಲ ಬಂದಿದೆ. ಎಲ್ಲರಿಗೂ ದುಡಿಮೆ ನೀಡುವ ಯೋಜನೆಯನ್ನು ನಮ್ಮ ಸರ್ಕಾರ ರೂಪಿಸಿದೆ. ದುಡಿಮೆಗೆ ಮಹತ್ವ ನೀಡುವ ನಾಡಿನಲ್ಲಿ ಸ್ವಾವಲಂಬಿ ಬದುಕು ಸಾಗಿಸಲು ಜನರು ಸಮರ್ಥರಾಗಿರುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು. ಅಧಿಕಾರದಲ್ಲಿದ್ದಾಗ ಜನರಿಗೆ ಏನನ್ನೂ ನೀಡಲಾಗದವರು ಈಗ ಗ್ಯಾರಂಟಿ ಕಾರ್ಡ್ ನೀಡುತ್ತಿದ್ದಾರೆ. ಇದು ಗ್ಯಾರಂಟಿ ಕಾರ್ಡ್ ಅಲ್ಲ. ಬೋಗಸ್ ಕಾರ್ಡ್, ವಿಸಿಟಿಂಗ್ ಕಾರ್ಡ್. ಇದನ್ನು ಜನ ಕಸದ ಬುಟ್ಟಿಗೆ ಹಾಕುತ್ತಾರೆ. ಎಲ್ಲರನ್ನು ಎಲ್ಲಾ ಸಂದರ್ಭದಲ್ಲಿ ಮೋಸ ಮಾಡಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳಿಗೆ ಯಾರೂ ಮೋಸ ಮಾಡಬಾರದು. ಸ್ವಾಭಿಮಾನಿಗಳಾಗಿ ಬದುಕುವುದನ್ನು ತೋರಿಸಿಕೊಡಬೇಕೆಂದು ಹೇಳಿದರು.






