ಮಡಿಕೇರಿ ಮಾ.21 : ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಕೊಡಗು ಶಾಖೆ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಕೊಡಗು ಜಿಲ್ಲೆ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಕೊಡಗು ಜಿಲ್ಲೆ, ಮೆಕ್‌ಗಿಲ್ ವಿಶ್ವವಿದ್ಯಾನಿಲಯ ಕೆನಡಾ ಮತ್ತು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಕೊಡಗು ಶಾಖೆ ಹಾಗೂ ಸಮುದಾಯದ ಸಹಭಾಗಿತ್ವದೊಂದಿಗೆ ಮಡಿಕೇರಿಯ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಯ ಸಭಾಂಗಣದಲ್ಲಿ “ವಿಪತ್ತು ನಿರ್ವಹಣೆಯಲ್ಲಿ ವಿಶೇಷಚೇತನರ ಅವಶ್ಯಕತೆಗಳ ಅಳವಡಿಕೆಯ” ವಿಷಯದ ಕುರಿತಂತೆ ಜಿಲ್ಲಾ ಮಟ್ಟದ ಪ್ರಸರಣ ಕಾರ್ಯಾಗಾರ ನಡೆಯಿತು. ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ವಿಪತ್ತು ನಿರ್ವಹಣಾ ಪರಿಣಿತರಾದ ಅನನ್ಯ ವಾಸುದೇವ್ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು 2018 ರಲ್ಲಿ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ವಿಪತ್ತು ಹಾಗೂ ಪ್ರವಾಹದ ಅನುಭವಗಳ ಕುರಿತಾದ ಮಾಹಿತಿಯನ್ನು ಹಂಚಿಕೊಂಡರು. 2018 ಆಗಸ್ಟ್ ಮಾಹೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರವಾಹದ ಅನುಭವಗಳ ಕುರಿತಾಗಿ ಹಾಗೂ ವಿಪತ್ತು ನಿರ್ವಹಣೆ ಯೋಜನೆಗೆ ನಿಯೋಜನೆಗೊಂಡಿದ್ದ ಎನ್.ಡಿ.ಆರ್.ಎಫ್ ತಂಡಗಳ ಕಾರ್ಯ ವೈಕರಿಗಳ…
ಲೇಖಕ: admin
ಚೆಟ್ಟಳ್ಳಿ ಮಾ.21 : ಚೆನ್ನೈನಲ್ಲಿ ನಡೆದ ಇಂಡಿಯನ್ ನ್ಯಾಷನಲ್ ಸೌತ್ ಇಂಡಿಯಾ ರ‍್ಯಾಲಿಯ ಜಿಪ್ಸಿಕ್ಲಾಸ್ ನಲ್ಲಿ ಕೊಡಗಿನ ಪೊನ್ನಂಪೇಟೆಯ ಕೊಕ್ಕೇಂಗಡ ದರ್ಶನ್ ನಾಚಪ್ಪ (ಡ್ರೈವರ್) ಹಾಗೂ ಮೇಕೇರಿರ ಅಭಿನವ್ ಗಣಪತಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಎರಡನೇ ಸ್ಥಾನ ಪಡೆದಿದ್ದಾರೆ. ಮಾ.16 ರಿಂದ ಮಾ.19 ರವರೆಗೆ ಚೆನ್ನೈನಲ್ಲಿ ನಡೆದ ಈ ವರ್ಷದ ಮೊದಲ ಇಂಡಿಯನ್ ನ್ಯಾಷನಲ್ ರ‍್ಯಾಲಿ (INRC)ಯು ಚೆನ್ನೈನಲ್ಲಿ ಐಎನ್ ಆರ್ ಸಿ 1 ರಿಂದ ಐನ್ ಆರ್ ಸಿ 4 ಕ್ಯಾಟಗರಿ ಹಾಗೂ ಜಿಪ್ಸಿ ಕ್ಯಾಟಗರಿಯು ಹೆಚ್ಚಿನ ವೇಗದ ತೀರಾ ಅಪಾಯ ಕಾರಿ ರ‍್ಯಾಲಿ ನಡೆದಿದ್ದು, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ 60 ನುರಿತ ರ‍್ಯಾಲಿ ಪಟುಗಳು ಭಾಗವಹಿಸಿದರು. ಜಿಪ್ಸಿಕ್ಲಾಸ್ ನಲ್ಲಿ ಕೊಡಗಿನ ಪೊನ್ನಂಪೇಟೆಯ ಕೊಕ್ಕೇಂಗಡ ದರ್ಶನ್ ನಾಚಪ್ಪ (ಡ್ರೈವರ್) ಹಾಗೂ ಮೇಕೇರಿರ ಅಭಿನವ್ ಗಣಪತಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಎರಡನೇ ಸ್ಥಾನ ಪಡೆದಿದ್ದಾರೆ. ದರ್ಶನ್ ನಾಚಪ್ಪ ಹಾಗೂ ಮೇಕೇರಿರ ಅಭಿನವ್ ಗಣಪತಿ ಈ ಹಿಂದೆ…
ಮಡಿಕೇರಿ ಮಾ.21 : ಅನಾರೋಗ್ಯದಿಂದ ಬಳಲುತ್ತಿರುವ ಹಿರಿಯ ನಾಗರಿಕರಿರೋವ೯ರಿಗೆ ಮಡಿಕೇರಿಯ ಇನ್ನರ್ ವೀಲ್ ಸಂಸ್ಥೆಯಿಂದ ಆಥಿ೯ಕ ನೆರವು ನೀಡಲಾಯಿತು. ನಗರದ ರೈಫಲ್ ರೇಂಜ್ ಬಡಾವಣೆ ನಿವಾಸಿ ವೇಲಾಯುಧನ್ ತೀವ್ರ ಅನಾರೋಗ್ಯಕ್ಕೊಳಗಾಗಿದ್ದು, ಇವರಿಗೆ ಚಿಕಿತ್ಸೆಗೆ ಅಗತ್ಯವಾಗಿದ್ದ ಆಥಿ೯ಕ ನೆರವಾಗಿ 5 ಸಾವಿರ ರು.ಗಳನ್ನು ಇನ್ನರ್ ವೀಲ್ ಸಂಸ್ಥೆಯಿಂದ ನೀಡಲಾಯಿತು. ಇನ್ನರ್ ವೀಲ್ ಅಧ್ಯಕ್ಷೆ ಡಾ.ರೇಣುಕಾ ಸುಧಾಕರ್, ಕಾಯ೯ದಶಿ೯ ಲಲಿತಾ ರಾಘವನ್, ಸದಸ್ಯರಾದ ಮಲ್ಲಿಗೆ ಪೈ, ಉಮಾಗೌರಿ, ಅ್ಯಗ್ನೇಸ್ ಮುತ್ತಣ್ಣ, ರಾಧಿಕ ವಿಶ್ವನಾಥ್ ಹಾಜರಿದ್ದರು.
ಸುಂಟಿಕೊಪ್ಪ ಮಾ.21 : ಗಡ್ಡಪ್ಪ ರೈ ಬಡಾವಣೆ ನಿವಾಸಿ ಪಾಸ್ಟರ್ ಪಿಲೋಮಿನಾರಾಜ್ ಹಾಗೂ ವರ್ಕ್‍ಶಾಪ್ ಅಂತೋಣಿ ಅವರ ತಾಯಿ ಮೇರಿ ಲೂರ್ದ್ ಸ್ವಾಮಿ (93) ನಿಧನರಾದರು. ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ಅಂತ್ಯ ಕ್ರಿಯೆಯು ಮಡಿಕೇರಿಯ ಸಿ.ಎಸ್.ಐ ಸ್ಮಶಾನದಲ್ಲಿ ನೆರವೇರಿತು.
ನಾಪೋಕ್ಲು ಮಾ.21 : ಹಳೆ ತಾಲೂಕಿನ ನಾಡು ಭಗವತಿ ದೇವರ ವಾರ್ಷಿಕ ಉತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು. ಮಾರ್ಚ್ 17 ರಿಂದ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆದುಕೊಂಡು ಬಂದ ಶ್ರೀ ಭಗವತಿ ದೇವರ ಹಬ್ಬವು ಪಟ್ಟಣಿ ಆಚರಣೆಯೊಂದಿಗೆ ಸಂಪನ್ನ ಗೊಂಡಿತ್ತು. ಆರ0ಭದಲ್ಲಿ ಬಂಡಾರವನ್ನು ದೇವಾಲಯಕ್ಕೆ ತರಲಾಯಿತು. ನಂತರ ಅಂದಿಬೊಳಕು, ರಾತ್ರಿ ಶ್ರೀ ಭದ್ರಕಾಳಿ ದೇವರ ಕೋಲ ನಡೆಯಿತು. ದೇವರ ಊರ ಪ್ರದಕ್ಷಿಣೆ, ಎತ್ತುಪೋರಾಟ. ಪಟ್ಟಣಿ ಹಬ್ಬ ವಿಶೇಷ ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ ಹಾಗೂ ಅನ್ನದಾನ ನಡೆಯಿತು. ಬಳಿಕ ಗ್ರಾಮಸ್ಥರಿಂದ ಬೋಳಕಾಟ್, ದೇವರ ನೃತ್ಯ ಬಲಿ ಸಾಂಗವಾಗಿ ನೆರವೇರಿತು. ಉತ್ಸವದ ಧಾರ್ಮಿಕ ಪೂಜಾ ವಿಧಿ ವಿಧಾನವನ್ನು ಗಿರೀಶ್ ತಂತ್ರಿ ಪೇರೂರು, ದೇವಾಲಯದ ಮುಖ್ಯ ಅರ್ಚಕ ಹರೀಶ್ ಕೆಕುಣ್ಣಾಯ, ಹಾಗೂ ನೃತ್ಯ ಬಲಿಯನ್ನು ಜಯಚಂದ್ರ ನೆರವೇರಿಸಿ ಕೊಟ್ಟರು. ಈ ಸಂದರ್ಭ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ, ನಿವೃತ್ತ ಶಿಕ್ಷಕ ಕುಲ್ಲೇಟಿರ ಗುರುವಪ್ಪ, ಕಾರ್ಯದರ್ಶಿ ಕಂಗಂಡ ಜಾಲಿ ಪೂವಪ್ಪ, ಆಡಳಿತ ಮಂಡಳಿ ನಿರ್ದೇಶಕರು, ತಕ್ಕ ಮುಖ್ಯಸ್ಥರು ಹಾಗೂ…
ನಾಪೋಕ್ಲು ಮಾ.21 : ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಕಾರ್ಯದರ್ಶಿಯಾಗಿ ಎ.ಎ.ಮೊಹಮ್ಮದ್ ಹಾಜಿ ನೇಮಕಗೊಂಡಿದ್ದಾರೆ. ಅಲ್ಪಸಂಖ್ಯಾತ ವಿಭಾಗದ ರಾಜ್ಯಾಧ್ಯಕ್ಷ ಕೆ. ಜಬ್ಬಾರ್ ಒ.ಐ.ಅ ಹಾಗೂ ಕೆಪಿಸಿಸಿ ಸದಸ್ಯ ಕೆ.ಎ.ಯಾಕೂಬ್ ಅವರ ಆದೇಶದ ಮೇರೆಗೆ ಆದೇಶ ಪತ್ರವನ್ನು ಮಹಮ್ಮದ್ ಅವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭ ಕೆಪಿಸಿಸಿ ಸದಸ್ಯ ಕೆ.ಎ.ಯಾಕೂಬ್, ಕೊಡಗು ಜಿಲ್ಲಾ ವಕ್ಷ್ ಬೋರ್ಡ್ ಉಪಾಧ್ಯಕ್ಷ ಎಂ.ಎ.ಮೊಯಿದು, ಕೊಡಗು ಜಿಲ್ಲಾ ಕಾಂಗ್ರೆಸ್ ಮುಖಂಡ ಹನೀಫ್, ಕೆ.ಎಂ.ಅಶ್ರಫ್ ಎಮ್ಮೆಮಾಡು ಇನ್ನಿತರರು ಉಪಸ್ಥಿತರಿದ್ದರು. ಮಹಮ್ಮದ್ ಆಜಿ ಅವರು ಮರ್ಕಜ್ ವಿದ್ಯಾ ಸಂಸ್ಥೆ ಮತ್ತು ಕಾಲೇಜಿನ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಮುಸ್ಲಿಂ ಜಮಾಯತ್ನ ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ ಕುಂಜಿಲ ಜಮಾಯತ್ತಿನ ಅಧ್ಯಕ್ಷರಾಗಿ ಕುಂಜಿಲ ಶಾಲೆಯ ಅಧ್ಯಕ್ಷರಾಗಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಸೇರಿದಂತೆ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ವರದಿ : ದುಗ್ಗಳ ಸದಾನಂದ.
ಸೋಮವಾರಪೇಟೆ ಮಾ.21 : ಗೋಣಿಕೊಪ್ಪದಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರವಿರುವ ಪೋಸ್ಟರ್ ಮೇಲೆ ಚಪ್ಪಲಿ ಚಿತ್ರವನ್ನಿಟ್ಟು ಅವಮಾನ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಪಕ್ಷದ ಪರಿಶಿಷ್ಠಜಾತಿ ಜಿಲ್ಲಾ ಘಟಕದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ. ಸೋಮವಾರಪೇಟೆ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ, ಆರೋಪಿಗಳ ಬಂಧನಕ್ಕೆ ಆಗ್ರಹಿಸಿದರು. ಈ ಸಂದರ್ಭ ಘಟಕದ ಜಿಲ್ಲಾಧ್ಯಕ್ಷ ಬಿ.ಇ.ಜಯೇಂದ್ರ ಮಾತನಾಡಿ, ಬಿಜೆಪಿ, ಸಂಘ ಪರಿವಾರದ ಕೆಲ ಕಿಡಿಕೇಡಿಗಳ ಮನಸ್ಥಿತಿ ಇಂತಹ ಕೃತ್ಯಗಳಿಂದ ತಿಳಿದು ಬರುತ್ತದೆ. ತಕ್ಷಣವೇ ಆರೋಪಿಗಳನ್ನು ಪತ್ತೆಹಚ್ಚಿ ಮೊಕದ್ದಮೆ ದಾಖಲಿಸಿ, ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು. ಬೇಡಿಕೆಯ ಮನವಿ ಪತ್ರವನ್ನು ತಶೀಲ್ದಾರ್ ಚಂದ್ರಹಾಸ್ ಮೂಲಕ ರಾಜ್ಯಪಾಲರಿಗೆ ಸಲ್ಲಿಸಲಾಯಿತು. ವಿಜಯಸಂಕಲ್ಪ ದಿನದ ಕಾರ್ಯಕ್ರಮದ ಆಯೋಜಕರು, ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ವಿರಾಜಪೇಟೆ ಕ್ಷೇತ್ರದ ಅಭ್ಯರ್ಥಿಗಳ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಬಿಜೆಪಿ ಸಭೆಯೊಂದರಲ್ಲಿ ಶಾಸಕ ಕೆ.ಎಸ್.ಈಶ್ವರಪ್ಪ, ಮಸೀದಿಯೊಂದರಲ್ಲಿ ಅಜಾನ್ ಮೊಳಗಿದ ಸಂದರ್ಭ ಅಲ್ಪಸಂಖ್ಯಾತ ಜನಾಂಗದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ.…
ಸೋಮವಾರಪೇಟೆ ಮಾ.21 : ಹಾಸನದ 2ನೇ ಘಟಕದ ವತಿಯಿಂದ ಸೋಮವಾರಪೇಟೆಯಿಂದ ಹಾಸನ, ಅರಸಿಕೆರೆ ಮಾರ್ಗದ ಮೂಲಕ ಶಿವಮೊಗಕ್ಕೆ ನೂತನ ಬಸ್ ಸಂಚಾರ ಪ್ರಾರಂಭಗೊಂಡಿದೆ. ಬೆಳಿಗ್ಗೆ 5 ಗಂಟೆಗೆ ಇಲ್ಲಿಂದ ಹೊರಟು, ಅರಕಲಗೂಡು ಮಾರ್ಗದ ಮೂಲಕ 7-15ಕ್ಕೆ ಹಾಸನ, 8-30ಕ್ಕೆ ಅರಸಿಕೆರೆ, 10ಕ್ಕೆ ಭದ್ರಾವತಿ ಹಾಗೂ 11ಕ್ಕೆ ಶಿವಮೊಗಕ್ಕೆ ತಲುಪುವುದು. ನಂತರ ಮಧ್ಯಾಹ್ನ 12-30ಕ್ಕೆ ಶಿವಮೊಗ್ಗದಿಂದ ಹೊರಟು ಅದೇ ಮಾರ್ಗದಲ್ಲಿ ರಾತ್ರಿ 9ಕ್ಕೆ ಸೋಮವಾರಪೇಟೆ ತಲುಪುವುದು ಎಂದು ನಿಯಂತ್ರಣಾಧಿಕಾರಿ ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮೈಸೂರಿನ ಗ್ರಾಮಾಂತರ ವಿಭಾಗದ ಕೆ.ಆರ್. ನಗರ ಡಿಪೋದಿಂದ ಸೋಮವಾರಪೇಟೆ ಮೂಲಕ ಬೆಂಗಳೂರಿಗೆ ನೂತನ ಮಾರ್ಗ ಪ್ರಾರಂಭಗೊಂಡಿದೆ. ಮಧ್ಯಾಹ್ನ 12ಕ್ಕೆ ಕೆ.ಆರ್. ನಗರದಿಂದ ಹೊರಟು, 2ಕ್ಕೆ ಮೈಸೂರು, 4.45ಕ್ಕೆ ಕುಶಾಲನಗರ, ಸಂಜೆ 6ಕ್ಕೆ ಸೋಮವಾರಪೇಟೆ, ಅರಕಲಗೂಡು, ಚನ್ನರಾಯಪಟ್ಟಣದ ಮೂಲಕ ರಾತ್ರಿ 11.15ಕ್ಕೆ ಬೆಂಗಳೂರು ತಲುಪುತ್ತದೆ ಎಂದು ನಿಯಂತ್ರಣಾಧಿಕಾರಿ ಪರಮೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೋಮವಾರಪೇಟೆ ಮಾ.21 : ಕಂದಾಯ ಇಲಾಖೆ ಮತ್ತು ಸರ್ವೆ ಇಲಾಖೆಯಲ್ಲಿ ಕೆಲ ನೌಕರರಿಂದ ರೈತರ ಶೋಷಣೆ ನಡೆಯುತ್ತಿದೆ ಎಂದು ಆರೋಪಿಸಿ ಕೊಡಗು ಜಿಲ್ಲಾ ಜಾತ್ಯಾತೀತ ಜನತಾದಳದಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು. ವಿವೇಕಾನಂದ ವೃತ್ತದಿಂದ ಮೆರವಣಿಗೆಯಲ್ಲಿ ತೆರಳಿದ ಪ್ರತಿಭಟನಾಕಾರರು ಜೇಸಿ ವೇದಿಕೆಯಲ್ಲಿ ಬಹಿರಂಗ ಸಭೆ ನಡೆಸಿ ಇಲಾಖೆಯ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಮಡಿಕೇರಿ ಕ್ಷೇತ್ರ ಸಮಿತಿ ಅಧ್ಯಕ್ಷ ಎಚ್.ಆರ್.ಸುರೇಶ್ ಮಾತನಾಡಿ, 1993 ಮತ್ತು 99ರಲ್ಲಿ ಅಕ್ರಮ ಸಕ್ರಮದಲ್ಲಿ ಅರ್ಜಿ ಸಲ್ಲಿಸಿದ ಅನೇಕ ರೈತರಿಗೆ ಇದುವರಗೆ ಭೂ ಮಂಜೂರಾತಿ ಆಗಿರುವುದಿಲ್ಲ. ಕೆಲವು ಪ್ರಭಾವಿಗಳಿಗೆ ಮಾತ್ರ ಸಿ ಮತ್ತು ಡಿ ಜಾಗದಲ್ಲಿ ಭೂ ಮಂಜೂರಾತಿ ಆಗಿರುತ್ತದೆ. ಉಳಿದ ರೈತರು ಏನೂ ಅನ್ಯಾಯ ಮಾಡಿದ್ದಾರೆ. ಎಲ್ಲಾ ರೈತರಿಗೂ ಸಿ ಮತ್ತು ಡಿ ಜಾಗದಲ್ಲಿ ಭೂ ಮಂಜೂರಾತಿ ಮಾಡುವಂತೆ ಆಗ್ರಹಿಸಿದರು. ರೈತರು ಬೀದಿಗಿಳಿದು ಪ್ರತಿಭಟನೆ ಮಾಡದಿದ್ದರೆ ರೈತರ ಶೋಷಣೆ ಮುಂದುವರಿಯಲಿದೆ ಎಂದು ಎಚ್ಚರಿಸಿದರು. ಜಮ್ಮಾ ಹಿಡುವಳಿ, ಕಂದಾಯ ವ್ಯಾಪ್ತಿಗೆ ಬಂದೇ ಇಲ್ಲ. ಇಂದಿಗೂ ಜಮ್ಮಾ ಹಿಡುವಳಿದಾರರಿಗೆ ಬೆಳೆಹಾನಿ…
ಮಡಿಕೇರಿ ಮಾ.20 : ಕೊಡವ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ರಾಜ್ಯ ಸರಕಾರ ಕೊಡವ ಅಭಿವೃದ್ಧಿ ನಿಗಮ ಸ್ಥಾಪಿಸಿದೆ. ಇಂದು ಮುಖ್ಯಮಂತ್ರಿಗಳು ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದಾರೆ. ಮಾ.18ರಂದು ನಾಪೋಕ್ಲುವಿನಲ್ಲಿ ಆಯೋಜಿತ 23ನೇ ವರ್ಷದ ಕೊಡವ ಕುಟುಂಬಗಳ ನಡುವಿನ ಕೌಟುಂಬಿಕ ಅಪ್ಪಚೆಟ್ಟೋಳಂಡ ಹಾಕಿ ಉತ್ಸವ 2023ಕ್ಕೆ ಚಾಲನೆ ನೀಡಿ ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವುದಾಗಿ ಘೋಷಿಸಿದ್ದರು. ಈ ಭರವಸೆಯಂತೆೆ ಇಂದು ಅಧಿಕೃತವಾಗಿ ಸಿ.ಎಂ. ನಿಗಮ ಸ್ಥಾಪನೆಯ ಅಧಿಕೃತ ಆದೇಶ ಹೊರಡಿಸಿದ್ದಾರೆ. ಕೊಡವ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಈ ಹಿಂದೆ ಹಲವು ಬಾರಿ ಸರಕಾರದ ಮೇಲೆ ಒತ್ತಡ ಹೇರಲಾಗಿತ್ತು. ಜಿಲ್ಲೆಯ ಶಾಸಕರೊಂದಿಗೆ ವಿವಿಧ ಕೊಡವ ಸಂಘಟನೆಗಳ ಪ್ರಮುಖರು ಹಾಗೂ ಪದಾಧಿಕಾರಿಗಳು ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಿ ನಿಗಮ ಸ್ಥಾಪನೆಗೆ ಆಗ್ರಹಿಸಿದ್ದರು. ಸರಕಾರದ ಅಧಿಕೃತ ಆದೇಶಕ್ಕೆ ಶಾಸಕ ಕೆ.ಜಿ.ಬೋಪಯ್ಯ ಹಾಗೂ ಎಂ.ಪಿ.ಅಪ್ಪಚ್ಚು ರಂಜನ್ ಹರ್ಷ ವ್ಯಕ್ತಪಡಿಸಿದ್ದಾರೆ. ಅನೇಕ ವರ್ಷಗಳ ಬೇಡಿಕೆಯನ್ನು ಬಿಜೆಪಿ ಸರಕಾರ ಈಡೇರಿಸಿದೆ ಎಂದು ಶಾಸಕದ್ವಯರು ಹೇಳಿದ್ದಾರೆ. ಈ ಮೊದಲು ಯುಕೊ…






