ಕಡಂಗ ಮಾ.20: ಅರಪಟ್ಟು ಗ್ರಾಮದಲ್ಲಿರುವ ಪುರಾತನ ದೇವಾಲಯ ಶ್ರೀ ಪಟ್ಟೋಟು ಉಮಾ ಮಹೇಶ್ವರ ದೇವರ ಪ್ರತಿಷ್ಠ ಮಹೋತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು. ಉತ್ಸವದ ಅಂಗವಾಗಿ ಸಾಮೂಹಿಕ ರುದ್ರಾಭಿಷೇಕ ಹಾಗೂ ಮಹಾ ಪೂಜಾ ಕಾರ್ಯಕ್ರಮವನ್ನು ಅರ್ಚಕರಾದ ವಿದ್ಯಾಧರ್ ಭಟ್ ಹಾಗೂ ತಂಡದವರು ನೆರವೇರಿಸಿದರು. ದೇವಸ್ಥಾನ ಸಮಿತಿ ಅಧ್ಯಕ್ಷ ನೆರಪಂಡ ಚಿತ್ರ ಬೆಳ್ಯಪ್ಪ ಹಾಗೂ ಸಮಿತಿ ಸದಸ್ಯರು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪೂಜಾ ವಿಧಿಗಳಲ್ಲಿ ಭಾಗವಹಿಸಿದರು. ನಂಬಿಯಪ0ಡ ದಿವಂಗತ ಪೂವಯ್ಯ ಜ್ಞಾಪಕಾರ್ಥವಾಗಿ ಅವರ ಮಕ್ಕಳು ನೆರೆದಿದ್ದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇಸಿದರು. ವರದಿ : ನೌಫಲ್ ಕಡಂಗ
ಲೇಖಕ: admin
ಮಡಿಕೇರಿ ಮಾಚ್೯ 20 – ಸತ್ಪ್ರಜೆಗಳನ್ನು ರೂಪಿಸುವ ಹೊಣೆಗಾರಿಕೆಯುಳ್ಳ ಶಿಕ್ಷಕ ವೃತ್ತಿಯಲ್ಲಿರುವವರಿಗೆ ಎಂದಿಗೂ ನಿವೃತ್ತಿ ಎಂಬುದಿಲ್ಲ. ಇವರು ಸಮಾಜಕ್ಕೆ ಸದಾ ಮಾಗ೯ದಶ೯ಕರಾಗಿರುತ್ತಾರೆ ಎಂದು ಹಿರಿಯ ಚಿಂತಕ, ವೈದ್ಯ ಡಾ.ಎಂ.ಜಿ.ಪಾಟ್ಕರ್ ಅಭಿಪ್ರಾಯಪಟ್ಟಿದ್ದಾರೆ. ಕೂಡಿಗೆ ಕ್ರೀಡಾಶಾಲೆಯಲ್ಲಿ 36 ವಷ೯ಗಳ ಸುಧೀಘ೯ ಸೇವೆ ಸಲ್ಲಿಸಿದ್ದ ಕುಂತಿಬೋಪಯ್ಯ ಅವರ ಕುರಿತ ಕುಂತಿಬೋಪಯ್ಯ ಸಾಕ್ಷ್ಯ ಚಿತ್ರ ಕುಂತಿಟೀಚರ್ ನ್ನು ನಗರದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಲೋಕಾಪ೯ಣೆ ಮಾಡಿ ಮಾತನಾಡಿದ ಡಾ.ಎಂ.ಜಿ.ಪಾಟ್ಕರ್, ಸಾವಿರಾರು ವಿದ್ಯಾಥಿ೯ಗಳಿಗೆ ಪಾಠ ಹೇಳಿ, ಸಂಸ್ಕಾರ ಕಲಿಸಿದ ಶಿಕ್ಷಕರು ನಿವೖತ್ತಿಯಾಗುವುದು ಸೇವಾ ದಾಖಲೆಗೆ ಮಾತ್ರವೇ ಆಗಿದ್ದು ನಿಜವಾದ ಅಥ೯ದಲ್ಲಿ ಸಮಾಜಕ್ಕೆ ಸದಾ ಮಾಗ೯ದಶ೯ಕರಾಗಿಯೇ ಇರುವ ಶಿಕ್ಷಕರಿಗೆ ನಿವೖತ್ತಿ ಎಂಬುದೇ ಇಲ್ಲ. ಆ ಪವಿತ್ರ ವೖತ್ತಿಯಲ್ಲಿರುವವರು ಸದಾ ಸಮಾಜದ ಹಿತಚಿಂತನೆ ಮಾಡುತ್ತಿರುತ್ತಾರೆ ಎಂದರು. ಪ್ರತೀಯೋವ೯ರ ಜೀವನದಲ್ಲಿಯೂ ಓವ೯ ಆದಶ೯ ಶಿಕ್ಷಕ ಪ್ರಮುಖ ಪಾತ್ರ ವಹಿಸಿರುತ್ತಾನೆ ಎಂದು ಹೇಳಿದ ಪಾಟ್ಕರ್ ಕೂಡಿಗೆ ಕ್ರೀಡಾಶಾಲೆಯಲ್ಲಿ ಸುಧೀಘ೯ ಸೇವೆ ಸಲ್ಲಿಸಿದ ಕುಂತಿಬೋಪಯ್ಯ ಅವರು ಕೊಡಗಿಗೆ ಮಾತ್ರವಲ್ಲ ದೇಶದಲ್ಲಿಯೇ ಆದಶ೯ ಶಿಕ್ಷಕಿಯರ ಸಾಲಿನಲ್ಲಿ ಮುಂಚೂಣಿಯಲ್ಲಿರುವ…
ನಾಪೋಕ್ಲು ಮಾ.20 : ಚೆರಿಯಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆರಂಭಗೊಂಡಿರುವ ಅಪ್ಪಚೆಟ್ಟೋಳಂಡ ಕುಟುಂಬಸ್ಥರು ಸಾರಥ್ಯ ವಹಿಸಿದ್ದ 23ನೇ ಕೊಡವ ಕೌಟುಂಬಿಕ ಹಾಕಿ ನಮ್ಮೆಯ ಪಂದ್ಯಾವಳಿಯ ಮೊದಲ ದಿನ ವಿವಿಧ ತಂಡಗಳು ಸೆಣೆಸಾಟ ನಡೆಸಿದವು. ಮೂರು ಮೈದಾನಗಳಲ್ಲಿ ನಡೆದ ಪಂದ್ಯಗಳಲ್ಲಿ ಪೆಮ್ಮಡಿಯಂಡ, ಚೊಟ್ಟೆಯಂಡ, ಪುಟ್ಟಿಚಂಡ, ಚೇರಂಡ, ಕಬ್ಬಚ್ಚಿರ, ಅಮ್ಮಂಡ, ಕೊಂಡಿರ ಸೇರಿದಂತೆ ವಿವಿಧ ತಂಡಗಳು ಗೆಲುವು ಸಾಧಿಸಿದವು. ಮೈದಾನ ಒಂದರಲ್ಲಿ ನಡೆದ ಮೊದಲ ಪಂದ್ಯದಲ್ಲಿ ಪೆಮ್ಮಡಿಯಂಡ ಮತ್ತು ಮಚ್ಚುರ ತಂಡಗಳು ಸೆಣೆಸಾಟ ನಡೆಸಿದವು. ಪೆಮ್ಮಡಿಯಂಡ ತಂಡ ನಾಲ್ಕು ಗೋಲು ಗಳಿಸಿದರೆ ಮಚ್ಚುರತಂಡ ಮೂರು ಗೋಲು ಗಳಿಸಿ ಸೋಲನ್ನನುಭವಿಸಿತು. ಎರಡನೇ ಪಂದ್ಯದಲ್ಲಿ ಕಾಂಡಂಡ ಮತ್ತು ಪುಟ್ಟಿಚಂಡ ತಂಡಗಳು ಸೆಣೆಸಾಡಿದವು ಪುಟ್ಟಿಚಂಡ ತಂಡ ಒಂದು ಗೋಲು ಗಳಿಸಿದರೆ ಕಾಂಡಂಡ ತಂಡ ಯಾವುದೇ ಗೋಲುಗಳಿಸಲಿಲ್ಲ. ಮೂರನೇ ಪಂದ್ಯದಲ್ಲಿ ಚೇರಂಡ ತಂಡ ಎರಡು ಗೋಲು ಗಳಿಸಿದರೆ ಅಲ್ಲಾರಂಡ ತಂಡ ಯಾವುದೇ ಗೋಲು ಗಳಿಸಲು ಶಕ್ತವಾಗಲಿಲ್ಲ. ಐದನೇ ಪಂದ್ಯದಲ್ಲಿ ಕಬ್ಬಚ್ಚಿರ ತಂಡ ಗೆಲುವು ಸಾಧಿಸಿತು. ಮೇಚಿಯಂಡ ತಂಡದ ವಿರುದ್ದ…
ಮಡಿಕೇರಿ ಮಾ.20 : ಅಹ್ಮದಿಯಾ ಮುಸ್ಲಿಮ್ ಜಮಾಅತ್ ನ ಯುವ ವಿಭಾಗವಾದ ಮಜ್ಲಿಸ್ ಖುದ್ದಾಮುಲ್ ಅಹ್ಮದಿಯಾ ವತಿಯಿಂದ ಕರ್ನಾಟಕದಾದ್ಯಂತ ನಡೆಯುತ್ತಿರುವ ಸಾಮೂಹಿಕ ಸ್ವಚ್ಛತಾ ಕಾರ್ಯಕ್ರಮದ ಅಂಗವಾಗಿ ಮಡಿಕೇರಿಯ ಸಂಪಿಗೆ ಕಟ್ಟೆಯಿಂದ ರಾಜೇಶ್ವರಿ ಶಾಲೆಯವರೆಗೆ ಸ್ವಚ್ಛತಾ ಕಾರ್ಯ ನಡೆಯಿತು. ಯುವ ಅಧ್ಯಕ್ಷ ಹದ್ಸರ್ ಅಹ್ಮದ್ ನೇತೃತ್ವದಲ್ಲಿ ಯುವ ವಿಭಾಗದ ಸದಸ್ಯರು ಹಾಗೂ ಪದಾಧಿಕಾರಿಗಳು ರಸ್ತೆ ಬದಿಯಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಸೇರಿದಂತೆ ಇತ್ಯಾದಿ ತ್ಯಾಜ್ಯಗಳನ್ನು ಸ್ವಚ್ಛಗೊಳಿಸಿ ಸಂಗ್ರಹಿಸಿದ ಕಸವನ್ನು ನಗರಸಭಾ ಸದಸ್ಯರಾದ ಮನ್ಸೂರ್ ಅವರ ಸಮ್ಮುಖದಲ್ಲಿ ನಗರ ಸಭಾ ವಾಹನಕ್ಕೆ ನೀಡಲಾಯಿತು. ಈ ಸಂದರ್ಭ ಅಹ್ಮದಿಯಾ ಮುಸ್ಲಿಮ್ ಜಮಾಅತಿನ ಅಧ್ಯಕ್ಷ ಜಿ.ಎಂ.ಮೊಹಮ್ಮದ್ ಶರೀಫ್, ಖಾಲಿದ್ ಹಾಗೂ ಯುವ ವಿಭಾಗದ ಇತರ ಪದಾಧಿಕಾರಿಗಳು ಹಾಜರಿದ್ದರು.
ನಾಪೋಕ್ಲು ಮಾ.20 : ನಾಪೋಕ್ಲು ಗ್ರಾ.ಪಂ ವ್ಯಾಪ್ತಿಯ ಬೇತು ಗ್ರಾಮದಲ್ಲಿ ಸರ್ಕಾರದ ಮಳೆ ಪರಿಹಾರ ನಿಧಿ ಯೋಜನೆಯಡಿಯಲ್ಲಿ ನಿರ್ಮಿಸಲಾಗುತ್ತಿರುವ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗ್ರಾ.ಪಂ ಅಧ್ಯಕ್ಷೆ ಎಚ್.ಎಸ್ ಪಾರ್ವತಿ ಚಾಲನೆ ನೀಡಿದರು. ನಾಪೋಕ್ಲು -ಮಡಿಕೇರಿ ಮುಖ್ಯರಸ್ತೆಯ ತೋಟಗಾರಿಕಾ ಕ್ಷೇತ್ರದದಿಂದ 5.16 ಲಕ್ಷರೂ ವೆಚ್ಚದಲ್ಲಿ ಬೇತು ಗ್ರಾಮಕ್ಕೆ ಸಂಪರ್ಕಕಲ್ಪಿಸುವ ರಸ್ತೆ, ಬೇತಗ್ರಾಮದ ಕೊಂಡೀರ ಕುಟುಂಬಸ್ಥರ ಐನ್ ಮನೆಗೆ 1.88 ಲಕ್ಷದ ಕಾಂಕ್ರೆಟ್ ರಸ್ತೆ ಹಾಗೂ 2.36 ಲಕ್ಷ ರೂ ವೆಚ್ಚದಲ್ಲಿ ಬೇತು ಗ್ರಾಮದಿಂದ ಬಲಮುರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಕ್ಕಿ ಕಡವು ರಸ್ತೆ ಸೇರಿ ಒಟ್ಟು 9.4 ಲಕ್ಷರೂ ವೆಚ್ಚದಲ್ಲಿ ನಿರ್ಮಾಣವಾಗಲಿರುವ ರಸ್ತೆ ಮರುಡಾಂಬರೀಕರಣ ಹಾಗೂ ಕಾಂಕ್ರೆಟ್ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು. ಗ್ರಾಮಸ್ಥರಾದ ಕೊಂಡೀರ ರಾಜಪ್ಪಮಾತನಾಡಿ, ನಮ್ಮ ಗ್ರಾಮದ ವಿವಿಧ ರಸ್ತೆಕಾಮಗಾರಿಗೆ ಚಾಲನೆ ನೀಡಿರುವುದು ಸಂತಸ ತಂದಿದೆ. ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಿಕೊಡುವಂತೆ ಮನವಿ ಮಾಡಿದರು. ಈ ಸಂದರ್ಭ ಗ್ರಾ.ಪಂ ಸದಸ್ಯರಾದ ಕಾಳೆಯಂಡ ಸಾಬಾ ತಿಮ್ಮಯ್ಯ, ಕೆ.ಎ.ಇಸ್ಮಾಯಿಲ್, ಮಾಚೇಟ್ಟಿರ ಕುಶು ಕುಶಾಲಪ್ಪ,…
ನಾಪೋಕ್ಲು ಮಾ.20 : ಚೆರಿಯಪರಂಬು ಮುಹಿಯದ್ದೀನ್ ಜುಮಾ ಮಸೀದಿಯ 2023-24 ನೇ ಸಾಲಿನ ನೂತನ ಆಡಳಿತ ಮಂಡಳಿ ಅಧ್ಯಕ್ಷರಾಗಿ ಪರವಂಡ ಝುಬೈರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಪಿ.ಎ ಸಿರಾಜುದ್ದೀನ್, ಉಪಾಧ್ಯಕ್ಷರಾಗಿ ಪಿ. ಎ.ಹಾರಿಸ್, ಸಹ ಕಾರ್ಯದರ್ಶಿಯಾಗಿ ಕೆ.ಎ.ಹಾರಿಸ್, ಕೆ.ಎ.ಮಾಹಿನ್, ಕೋಶಾಧಿಕಾರಿಯಾಗಿ ಪಿ.ಹೆಚ್.ಬಶೀರ್, ಸಮಿತಿ ಸದಸ್ಯರಾಗಿ ಪಿ.ಐ.ರಫೀಕ್ ಸಖಾಫಿ, ಅಶ್ರಫ್ ಪಿ.ಎಂ, ಅಬ್ದುಲ್ ರಹ್ಮಾನ್, ಪಿ.ಎ.ಹಾಶಿಮ್ , ಎಂ.ಎಸ್.ಹುಸೈನ್, ಎನ್.ಎ .ಅಶ್ರಫ್ , ಎಂ.ಎ.ಸಲಾಂ , ವಿ.ಎ.ನಝೀರ್ ಇವರುಗಳನ್ನು ಚೆರಿಯಪರಂಬುವಿನ ಮದರಸ ಸಭಾಂಗಣದಲ್ಲಿ ನಡೆದ ಜಮಾಅತ್ ವಾರ್ಷಿಕ ಮಹಾಸಭೆಯಲ್ಲಿ ಆಯ್ಕೆಮಾಡಲಾಯಿತು. ವರದಿ :ಝಕರಿಯ ನಾಪೋಕ್ಲು
ಮಡಿಕೇರಿ ಮಾ.19 : ನಗರದ ಜನರಲ್ ತಿಮ್ಮಯ್ಯ ಸ್ಮಾರಕ ಭವನಕ್ಕೆ ಭಾರತೀಯ ಸೇನಾ ದಕ್ಷಿಣ ವಲಯದ (ಸದರನ್ ಆರ್ಮಿ ಕಮಾಂಡ್) ಮುಖ್ಯಸ್ಥರಾದ ಲೆಫ್ಟಿನೆಂಟ್ ಜನರಲ್ ಎ.ಕೆ. ಸಿಂಗ್ ಅವರು ಭಾನುವಾರ ಭೇಟಿ ನೀಡಿ, ವೀಕ್ಷಿಸಿದರು. ಜನರಲ್ ತಿಮ್ಮಯ್ಯ ಅವರ ಬಾಲ್ಯದ ಜೀವನ, ಶಿಕ್ಷಣ, ರಾಷ್ಟ್ರ ಮತ್ತು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಸೇನಾ ಕ್ಷೇತ್ರದಲ್ಲಿನ ಸಾಧನೆ ಮತ್ತಿತರ ಬಗ್ಗೆ ಮಾಹಿತಿ ಪಡೆದರು. ಜನರಲ್ ತಿಮ್ಮಯ್ಯ ಅವರು ಭಾರತೀಯ ಸೇನಾ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿದ್ದು, ಜನರಲ್ ತಿಮ್ಮಯ್ಯ ಅವರನ್ನು ಸದಾ ಸ್ಮರಿಸಬೇಕಿದೆ ಎಂದರು. ಮೇಜರ್ ಜನರಲ್ ಪ್ರೀತ್ ಪಾಲ್ ಸಿಂಗ್ ಇತರರು ಇದ್ದರು. ಮೇಜರ್ (ನಿವೃತ್ತ) ಬಿದ್ದಂಡ ನಂಜಪ್ಪ ಅವರು ಜನರಲ್ ಕೆ.ಎಸ್.ತಿಮ್ಮಯ್ಯ ಅವರ ಬಾಲ್ಯ ಜೀವನ, ರಾಷ್ಟ್ರ ಮತ್ತು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಜನರಲ್ ತಿಮ್ಮಯ್ಯ ಅವರ ಸೇನಾ ಕ್ಷೇತ್ರದಲ್ಲಿನ ಸಾಧನೆ ಮತ್ತಿತರ ಮಾಹಿತಿಯನ್ನು ಸವಿವರವಾಗಿ ವಿವರಿಸಿದರು. ಸೈನಿಕ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಮೇಜರ್ (ನಿವೃತ್ತ) ಡಾ.ಬಾಲಸುಬ್ರಮಣ್ಯಂ, ಕನ್ನಡ ಮತ್ತು…
ಮಡಿಕೇರಿ ಮಾ.19 : ಭಾರತೀಯ ಜನತಾ ಪಾರ್ಟಿಯ ಸಿದ್ದಾಪುರ ಶಕ್ತಿ ಕೇಂದ್ರದ ವತಿಯಿಂದ ಇಂದು ಸಿದ್ದಾಪುರದಲ್ಲಿ “ಮಹಾಶಕ್ತಿ ಸಂಗಮ” ಮತ್ತು ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಿತು. ಪಕ್ಷಕ್ಕಾಗಿ ದುಡಿದ ಹಿರಿಯರನ್ನು ಸನ್ಮಾನಿಸಲಾಯಿತು.ಶಾಸಕ ಕೆ.ಜಿ.ಬೋಪಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯ ಗಣೇಶ್ ಕಾರ್ಣಿಕ್ ಹಾಗೂ ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮಡಿಕೇರಿ ಮಾ.19 : ಏಳನೇ ತರಗತಿ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶನಿವಾರಸಂತೆಯ ಕೊಡ್ಲಿಪೇಟೆ ಸಮೀಪದ ಶಿವರಳ್ಳಿ ಗ್ರಾಮದಲ್ಲಿ ನಡೆದಿದೆ. ಖಾಸಗಿ ಬಸ್ ಚಾಲಕ ಜಿತೇಂದ್ರ ಹಾಗೂ ಅಕ್ಷತಾ ದಂಪತಿಯ ಪುತ್ರಿ ವೈಷ್ಣವಿ (12) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಈಕೆ ಸೋಮವಾರಪೇಟೆಯ ಖಾಸಗಿ ಶಾಲೆಯಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ನೇಣಿಗೆ ಶರಣಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.
ಮಡಿಕೇರಿ ಮಾ.19 : ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎರಡನೇ ವಾರ್ಡಿನ ನಿವಾಸಿಗಳು ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಶೀಘ್ರ ರಸ್ತೆಯನ್ನು ಅಭಿವೃದ್ಧಿ ಪಡಿಸದಿದ್ದಲ್ಲಿ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ವಾರ್ಡ್ನಲ್ಲಿ 25 ಕ್ಕೂ ಅಧಿಕ ಮನೆಗಳಿದ್ದು, 150 ಮತದಾರರು ಇದ್ದಾರೆ. ಹೊಂಡ, ಗುಂಡಿಗಳ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರು ಸಂಚರಿಸಲು ಕಷ್ಟ ಪಡಬೇಕಾಗಿದೆ. ಶಾಲಾ, ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ವೃದ್ಧರು ಮೂರು ಕಿ.ಮೀ ದೂರ ಕಷ್ಟಪಟ್ಟು ನಡೆದುಕೊಂಡೇ ಹೋಗಬೇಕಾಗಿದೆ. ವಿನಾಕಾರಣ ರಸ್ತೆ ದುರಸ್ತಿ ಪಡಿಸದೆ ನಿರ್ಲಕ್ಷಿಸಲಾಗಿದೆ ಎಂದು ಸ್ಥಳೀಯರು ಆರೋಪಿಸಿದರು. ಪ್ರತಿಭಟನೆ ಮೂಲಕ ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದೇವೆ ಎಂದು ಗ್ರಾಮಸ್ಥರಾದ ಸೌಮ್ಯ ಹಾಗೂ ಅವಿನಾಶ್ ಅಸಮಾಧಾನ ವ್ಯಕ್ತಪಡಿಸಿದರು. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಸಿ.ಜಗನ್ನಾಥ್ ಮಾತನಾಡಿ ಈಗಾಗಲೇ ರೂ.5 ಲಕ್ಷ ಅನುದಾನ ಬಿಡುಗಡೆಯಾಗಿದೆ. ಪಂಚಾಯಿತಿ ವತಿಯಿಂದ ಉದ್ಯೋಗ ಖಾತ್ರಿ ಯೋಜನೆಯಡಿ 2ಲಕ್ಷ ರೂ. ನೀಡಲಾಗುತ್ತದೆ. ಸೋಮವಾರ ಗ್ರಾಮಸ್ಥರ ನಿಯೋಗದೊಂದಿಗೆ ಕುಶಾಲನಗರದಲ್ಲಿರುವ…






