ಲೇಖಕ: admin

ಕುಶಾಲನಗರ, NEWS DESK ಮಾ. 31: ಶ್ರೀ ರಾಮಲಿಂಗೇಶ್ವರ ಸ್ವಾಮಿ ದೇವಾಲಯದ ಅಭಿವೃದ್ಧಿಗೆ ಪೂರಕವಾಗಿ,ಮತ್ತು ಅದಕ್ಕೆ ಸಂಬಂಧಿಸಿದಂತೆ ಕಾಮಗಾರಿಗಳನ್ನು ಕೈಗೊಳ್ಳುವ ಉದ್ದೇಶಗಾಗಿ ಈ ಸಾಲಿನ ಶಾಸಕ ಅನುದಾನದಲ್ಲಿ 10. ಲಕ್ಷ ರೂ ಗಳನ್ನು ನೀಡುವುದಾಗಿ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ರವರು ಶ್ರೀ ರಾಮಲಿಂಗೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ಸಾಂಸ್ಕೃತಿಕ ಕಾರ್ಯಕ್ರಮದ ಸಮಾರೋಪ ಸಮಾರಂಭ ವೇದಿಕೆಯಲ್ಲಿ ತಿಳಿಸಿದ್ದಾರೆ. ಮುಂದುವರೆದು ಮಾತಾನಾಡುತ್ತಾ ಶಾಸಕರು ಮುಂದಿನ ದಿನಗಳಲ್ಲಿ ನೀರಾವರಿ ಇಲಾಖೆಯ ಮುಖೇನ ಈಗಾಗಲೇ ಕೈಗೊಳ್ಳಲಾಗಿರುವ ಕ್ರಿಯಾ ಯೋಜನೆ ಅನುಗುಣವಾಗಿ 5. ಕೋಟಿ ವೆಚ್ಚದ ಕಾಮಗಾರಿಯ ಮೂಲಕ ದೇವಾಲಯ ಮುಂಭಾಗದ ತಡೆಗೋಡೆ, ಸೇರಿದಂತೆ ಪ್ರಮುಖ ಕಾಮಗಾರಿಯನ್ನು ಕೈಗೊಳ್ಳಲಾಗುವುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಮುಖ್ಯ ಅತಿಥಿಗಳಾಗಿ ಅಗಮಿಸಿದ್ದ ಕುಶಾಲನಗರ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಮಾತಾನಾಡಿ ಗ್ರಾಮಾಂತರ ಪ್ರದೇಶಗಳಲ್ಲಿ ನಡೆಯುವ ಜಾತ್ರೋತ್ಸವಗಳ ಆಚರಣೆಯ ಮೂಲಕ ಗ್ರಾಮಗಳ ನಡುವೆ ಸೌಹಾರ್ದ ಮನೋಭಾವ ಬೆಳಸಿಕೊಳ್ಳುವ ಮೂಲಕ ಒಗ್ಗೂಡಿ ಕಾರ್ಯನಿರ್ವಹಿಸುವ ಮುಖೇನ ಧಾರ್ಮಿಕ ಕಾರ್ಯ…

Read More

ಕಣಿವೆ, NEWS DESK ಮಾ.31: ಕುಶಾಲನಗರ ತಾಲ್ಲೂಕಿನ ನಂಜರಾಯಪಟ್ಟಣ ಗ್ರಾಮದ ಕಾವೇರಿ ನದಿ ದಂಡೆಯ ಐತಿಹಾಸಿಕ ನಂಜುಂಡೇಶ್ವರ ಹಾಗು ಬಸವೇಶ್ವರ ದೇವರ ವಾರ್ಷಿಕ ಪೂಜೋತ್ಸವ ಮಂಗಳವಾರ ಶ್ರದ್ದಾಭಕ್ತಿಯಿಂದ ನೆರವೇರಿತು. ಸೋಮವಾರ ಸಂಜೆ ಗ್ರಾಮದ ಪಟೇಲ್ ಮೋಹನ ಕುಮಾರ್ ಎಂಬವರ ಮನೆಯಿಂದ ಕನ್ನಂಬಾಡಮ್ಮ ದೇವರ ಆಭರಣಗಳನ್ನು ಧಾರ್ಮಿಕ ವಿಧಿಗಳೊಂದಿಗೆ ಮಂಗಳವಾದ್ಯ ಹಾಗೂ ಪೂರ್ಣಕುಂಭದೊಂದಿಗೆ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಲಾಯಿತು. ಬಳಿಕ ಮಂಗಳವಾರ ಬೆಳಗ್ಗೆ ಬಸವೇಶ್ವರ ಹಾಗೂ ಕನ್ನಂಬಾಡಮ್ಮ ದೇವತಾ ಮೂರ್ತಿಗಳನ್ನು ಕಾವೇರಿ ನದಿಗೆ ಕೊಂಡೊಯ್ದು ಗಂಗಾ ಪೂಜೆ ನೆರವೇರಿಸಲಾಯಿತು. ಬಳಿಕ ವೀರಗಾಸೆ ಮಂಗಳವಾದ್ಯದೊಂದಿಗೆ ಮೆರವಣಿಗೆಯಲ್ಲಿ ದೇವಾಲಯದ ಆವರಣಕ್ಕೆ ದೇವರನ್ನು ತರಲಾಯಿತು. ಬಳಿಕ ದೇವಾಲಯದ ಮುಂಬದಿ ಅಳವಡಿತ ಕೊಂಡೋತ್ಸವ ಪೂಜೆ ಬಳಿಕ ದೇವತಾ ಮೂರ್ತಿ ಹೊತ್ತೊಯ್ದ ಭಕ್ತರು ವೀರಗಾಸೆಯವರೊಂದಿಗೆ ಬರಿಗಾಲಲ್ಲಿ ಕೊಂಡವನ್ನು ತುಳಿದು ಭಕ್ತಿ ಸಮರ್ಪಿಸಿದರು. ಪೂಜೋತ್ಸವ ದಲ್ಲಿ ವಿರಾಜಪೇಟೆ ಅರಮೇರಿ ಮಠಾಧಿಪತಿ ಶ್ರೀ ಶಾಂತಮಲ್ಲಿಕಾರದಜುನ ಸ್ವಾಮೀಜಿ ಹಾಗೂ ದಿಂಡಗಾಡು ಬಸವಜ್ಯೋತಿ ಮಠದ ಶ್ರೀ ಅಪ್ಪಾಜಿ ಸ್ವಾಮೀಜಿ ಆಶೀರ್ವಚನ ನೀಡಿದರು. ದೇವಾಲಯ ಅಭಿವೃದ್ಧಿ ಸಮಿತಿ…

Read More

(*ಬರಹ : ಗೀತಾಂಜಲಿ ಎನ್.ಎಂ ಸೋಮವಾರಪೇಟೆ : ತ್ರಿವಿಧ ದಾಸೋಹದ ಬ್ರಹ್ಮ : ಸದ್ದುಗದ್ದಲವಿರದ ಸಾಧನೆ ಇಲ್ಲಿ  ಮೌನವಾಗಿ ಗದ್ದುಗೆಯೇರಿದೆ*) ಸದ್ದುಗದ್ದಲವಿರದ ಸಾಧನೆ ಇಲ್ಲಿ ಮೌನವಾಗಿ ಗದ್ದುಗೆಯೇರಿದೆ. ಕಾಯಕವೇ ಕೈಲಾಸವೆನ್ನುವ ಮಾತು ಕಾರ್ಯವಾಗಿ ನಡೆ ನುಡಿಗಳಲಿ ಒಂದಾಗಿದೆ. ಕಾವಿಯ ಆದರ್ಶಕೆ ಪ್ರತಿರೂಪವಾಗಿ ತ್ರಿವಿಧ ದಾಸೋಹವು ಸರ್ವರಿಗೂ ಸಹಾಯ ಹಸ್ತ ಚಾಚಿದೆ. ಎಲ್ಲಾ ನನ್ನವರೆನ್ನುವ ಸಮಾನ ಭಾವ ಸಂಗಮಿಸಿ ಕರುಣೆಯೇ ಕಣ್ಣೆರೆದಿದೆ. ಅದಕ್ಕಿರಬೇಕು ನಭದ ಕಿರಣಗಳೂ ಇವರ ಸೇವೆಗೆ ನಮಿಸಿ ಶರಣಾಗಿದೆ!! ನಿಜವಾದ ಧರ್ಮವೆಂದರೆ ಕೇವಲ ಪೂಜೆ,  ಪುನಸ್ಕಾರಗಳು, ಗುಡಿ,ಗೋಪುರ, ಪದ್ದತಿ ಶಾಸ್ತ್ರಆಚರಣೆಗಳ ಆಚರಣಾತ್ಮಕ ಕ್ರಮಗಳಲ್ಲಿ ಸೀಮಿತವಾಗಿರುವುದಲ್ಲ, ಅದು ಮಾನವನೊಳಗಿನ ಕರುಣೆ, ದಯೆ ಮತ್ತು ಸೇವಾಭಾವದಲ್ಲಿ ವ್ಯಕ್ತವಾಗುತ್ತದೆ. ಇತರರ ನೋವನ್ನು ತನ್ನದಾಗಿ ಭಾವಿಸಿ, ಸಾಧ್ಯವಾದಷ್ಟು ಸಹಾಯ ಮಾಡುವ ಮನೋಭಾವವೇ ನಿಜವಾದ ಧರ್ಮದ ಸಾರವಾಗಿದೆ. ಅದಕ್ಕಾಗಿಯೇ ಬಸವಣ್ಣನವರು “ದಯಯೇ ಧರ್ಮದ ಮೂಲವಯ್ಯ” ಎಂದು ಹೇಳಿರುವುದು. ಹಸಿದವನಿಗೆ ಅನ್ನ ನೀಡುವುದು,ಅಜ್ಞಾನಿಯನ್ನು ಶಿಕ್ಷಣದ ಮೂಲಕ ಜ್ಞಾನಿಯಾಗಿ ಬೆಳಗಿಸುವುದು ನಿರಾಶ್ರಿತನಿಗೆ ಆಶ್ರಯ ಒದಗಿಸುವುದು ಇವುಗಳೆಲ್ಲವೂ ಧರ್ಮದ ಅತ್ಯುನ್ನತ ರೂಪಗಳು. ಸೇವೆಯ ಮೂಲಕ ಸಮಾಜದಲ್ಲಿ ಸಮಾನತೆ, ಸಹಾಯ, ಸಹಾನುಭೂತಿ ಮತ್ತು  ಮಾನವೀಯತೆಯನು ಬೆಳೆಸುವುದು, ಧರ್ಮದ…

Read More

(*ಬರಹ : ಡಾ|| ಕೆ. ಬಿ.ಸೂರ್ಯ ಕುಮಾರ್ …* *ಭಾರತೀಯ ಸೇನೆಯ ಧ್ರುವತಾರೆ ಜನರಲ್ ಕೆ. ಎಸ್.ತಿಮ್ಮಯ್ಯ*) ಭಾರತೀಯ ಸೇನಾ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದ ಹೆಸರು ಜನರಲ್ ಕೊಡಂದೇರ ಸುಬ್ಬಯ್ಯ ತಿಮ್ಮಯ್ಯ . ಕೇವಲ ಒಬ್ಬ ಸೈನ್ಯಾಧಿಕಾರಿಯಾಗಿ ಮಾತ್ರವಲ್ಲದೆ, ವಿಶ್ವಮಟ್ಟದಲ್ಲಿ ಭಾರತದ ಗೌರವವನ್ನು ಎತ್ತಿಹಿಡಿದ ಮುತ್ಸದ್ದಿ ನಾಯಕರಾಗಿ ಅವರು ಚಿರಪರಿಚಿತರು. ಸೈನಿಕರ ಪಾಲಿಗೆ ‘ಟಿಮ್ಮಿ’ ಎಂದೇ ಖ್ಯಾತರಾಗಿದ್ದ ಅವರ ಜೀವನ ಶೌರ್ಯ, ನಾಯಕತ್ವ ಮತ್ತು ಅಚಲ ದೇಶಭಕ್ತಿಯ ಸಂಗಮ.  1906ರ ಮಾರ್ಚ್ 31ರಂದು ಕರ್ನಾಟಕದ ವೀರಭೂಮಿ ಕೊಡಗಿನ ಮಡಿಕೇರಿಯಲ್ಲಿ ತಿಮ್ಮಯ್ಯನವರು ಜನಿಸಿದರು. ಕೊಡಗಿನ ರಕ್ತದಲ್ಲೇ ಬೆರೆತು ಬಂದಿರುವ ಯೋಧ ಪರಂಪರೆ ಅವರಲ್ಲೂ ಬಾಲ್ಯದಿಂದಲೇ ಮನೆಮಾಡಿತ್ತು. ದೆಹಲಿಯ ಪ್ರಿನ್ಸ್ ಆಫ್ ವೇಲ್ಸ್ ರಾಯಲ್ ಇಂಡಿಯನ್ ಮಿಲಿಟರಿ ಕಾಲೇಜಿನಲ್ಲಿ ಪ್ರಾಥಮಿಕ ಸೈನಿಕ ಶಿಕ್ಷಣ ಪಡೆದರು.   ಅಂದಿನ ಕಾಲದಲ್ಲಿ ಅತ್ಯಂತ ಪ್ರತಿಷ್ಠಿತವಾಗಿದ್ದ ಇಂಗ್ಲೆಂಡಿನ ರಾಯಲ್ ಮಿಲಿಟರಿ ಅಕಾಡೆಮಿ ಸ್ಯಾಂಡ್‌ಹರ್ಸ್ಟ್‌ನಲ್ಲಿ ತರಬೇತಿ ಪಡೆದ ಅತಿವಿರಳ ಭಾರತೀಯರಲ್ಲಿ ಇವರೂ ಒಬ್ಬರು. ಬ್ರಿಟಿಷ್ ಇಂಡಿಯನ್ ಆರ್ಮಿಯಲ್ಲಿ ವೃತ್ತಿಜೀವನ ಆರಂಭಿಸಿದ ತಿಮ್ಮಯ್ಯನವರು, ತಮ್ಮ ಅಪ್ರತಿಮ…

Read More

ಮಡಿಕೇರಿ ಮಾ.30 NEWS DESK  : ಅಮ್ಮತ್ತಿ ಕೊಡವ ಸಮಾಜದ ಪ್ರಮುಖರು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರನ್ನು ಸನ್ಮಾನಿಸಿದರು. ತಾವು ಶಾಸಕರಾಗಿ ಆಯ್ಕೆಯಾದಲ್ಲಿನಿಂದ ಕೈಗೊಳ್ಳುತ್ತಿರುವ ಅಭಿವೃದ್ಧಿ ಕಾಮಗಾರಿಗಳು ಹಾಗೂ ನಿರಂತರ ಜನರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಹಗಲಿರಳು ಶ್ರಮಿಸುತ್ತಿರುವುದಕ್ಕೆ ಹಾಗೂ ವಿಶೇಷವಾಗಿ ಜಮ್ಮಾಬಾಣೆ ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ, ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆ ಮತ್ತು ದಶಕಗಳಿಂದ ಕೊಡವ ಸಮುದಾಯದವರನ್ನು ಕೊಡಗರು ಎಂದು ಸಂಬೋಧಿಸುತ್ತಿರುವುದನ್ನು ಸರಕಾರಿ ದಾಖಲೆಗಳಲ್ಲಿ ಅಧಿಕೃತವಾಗಿ ಬದಲಾಯಿಸಿ, ಕೊಡವರು ಎಂದು ನಮೂದಿಸುವಂತೆ ತಿದ್ದುಪಡಿ ಮಾಡಿದ ವಿಶೇಷ ಪ್ರಯತ್ನಕ್ಕೆ ಅಮ್ಮತ್ತಿ ಕೊಡವ ಸಮಾಜದ ಪ್ರಮುಖರು ಶಾಸಕರನ್ನು ಸನ್ಮಾನಿ, ಗೌರವಿಸಿದರು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಪ್ರಕಾಶ್, ಸದಸ್ಯರಾದ ಧನು ಉತ್ತಯ್ಯ, ಭೀಮಯ್ಯ, ಧನ್ಯ ದೇವಯ್ಯ, ಅಪ್ಪಣ್ಣ, ಶ್ಯಾಮ್ ಬೋಪಣ್ಣ, ಸಮಾಜ ಸೇವಕರು ಚೊಕ್ಕಂಡ ಸಂಜು ಸುಬ್ಬಯ್ಯ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Read More

ವಿರಾಜಪೇಟೆ ಮಾ.30 NEWS DESK : ವಿರಾಜಪೇಟೆ ಸಮೀಪದ ಕೆದಮುಳ್ಳುರು ಗ್ರಾಮದಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಶ್ರೀ ಚಾಮುಂಡಿ ದೇವಿಯ ತೆರೆ ಮಹೋತ್ಸವವು ಏ.3 ಮತ್ತು 4 ರಂದು ನಡೆಯಲಿದೆ. ಕೆದಮುಳ್ಳೂರು ಚಾಮುಂಡಿ ಹಬ್ಬ ಎಂದರೆ ಎಲ್ಲೆಡೆ ಪ್ರಚಲಿತದಲ್ಲಿದ್ದು ಅತ್ಯಂತ ಹೆಸರುವಾಸಿಯಾಗಿದೆ. ಹಾಗೂ ಅತ್ಯಂತ ಶಕ್ತಿಯನ್ನು ಹೊಂದಿರತಕ್ಕಂತಹ ಚಾಮುಂಡಿ ದೇವಿಯ ಕ್ಷೇತ್ರವಾಗಿದೆ. ಹಾಗಾಗಿ ಈ ಉತ್ಸವದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ತರು, ದೂರ ದೂರದ ಊರುಗಳಿಂದ ಭಕ್ತರು, ಆಗಮಿಸಿ ದೇವರಲ್ಲಿ ಹರಕೆ ಹೊತ್ತುಕೊಂಡು ತಮ್ಮ ಸಂಕಷ್ಟಗಳನ್ನು ಪರಿಹರಿಸಿಕೊಳ್ಳುತ್ತಾರೆ. 2 ರಂದು ರಾತ್ರಿ 8.30 ಗಂಟೆಗೆ ಕೊಟ್ಟಿಪಾಡೋ, 3 ರಂದು ರಾತ್ರಿ 8:30 ಗಂಟೆಗೆ ತಕ್ಕರ ಮನೆಯಿಂದ ಭಂಡಾರ ಇಳಿಯುವುದು, ಹಾಗೂ ರಾತ್ರಿ ವಿವಿದ ಕೋಲಗಳು, 4ರಂದು ಬೆಳಿಗ್ಗೆ 7.30 ಗಂಟೆಗೆ ವಿಷ್ಣುಮೂರ್ತಿ ತೆರೆ, ಮಧ್ಯಾಹ್ನ 12 ಗಂಟೆಗೆ ಶ್ರೀ ಚಾಮುಂಡಿ ತೆರೆ ನಡೆಯಲಿದೆ. ಬೆಳಿಗ್ಗೆ 4 ರಂದು ಪ್ರಮುಖವಾದ ವಿಷ್ಣುಮೂರ್ತಿ ಕೋಲವು ದೇವಾಲಯದ ಮುಂದೆ ಸಿದ್ಧಪಡಿಸಿದ್ದ ಬೆಂಕಿ ಕೆಂಡದ ಮೇಲೆ 101…

Read More

ವಿರಾಜಪೇಟೆ ಮಾ.30 NEWS DESK : ಕೆದಮುಳ್ಳೂರು ಶ್ರೀ ಭಗವತಿ ದೇವರ 15ನೇ ವರ್ಷದ ವಾರ್ಷಿಕ ಮಹೋತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು. ಉತ್ಸವದ ಪ್ರಯುಕ್ತ ಮುಂಜಾನೆಯಿಂದಲೇ ವಿಶೆಷ ಪೂಜಾ ಕೈಂಕರ್ಯಗಳು, ಗಣಪತಿ ಹೋಮ, ಭಗವತಿ ದೇವರಿಗೆ ಪೂಜೆ, ಕಲಶಾಭಿಷೇಕ ನಡೆಯಿತು. ಮಧ್ಯಾಹ್ನ ಮಹಾಪೂಜೆ ಮತ್ತು ಪ್ರಸಾದ ವಿತರಣೆ ನಡೆಯಿತು. ಬಳಿಕ ಬೆಲಿಕಲ್ಲು ಪೂಜೆ ಹಾಗೂ ದೇವರ ನೃತ್ಯ ಬಲಿ ಪ್ರದಕ್ಷಿಣೆ ನಡೆಯಿತು. ಪೂಜಾ ಕೈಂಕರ್ಯಗಳನ್ನು ಬೈತೂರಿನ ತಂತ್ರಿಗಳಾದ ಶ್ರೀ ರಾಜನ್ ನಂಬೂದರಿಪಾಡ್ ಮತ್ತು ಭಗವತಿ ದೇವಾಲಯದ ಅರ್ಚಕರಾದ ರಾಧಾಕೃಷ್ಣ ಅವರು ನೆರವೇರಿಸಿದರು. ವಾರ್ಷಿಕೋತ್ಸವಕ್ಕೆ ಆಗಮಿಸಿದ ಸರ್ವ ಭಕ್ತಾಧಿಗಳಿಗೆ ದೇವಾಲಯದ ವತಿಯಿಂದ ಅನ್ನ ಸಂತರ್ಪಣೆಯನ್ನು ನಡೆಸಲಾಯಿತು.

Read More

ಮಡಿಕೇರಿ ಮಾ.30 NEWS DESK : ಬೇಸಿಗೆ ಕಾಲದಲ್ಲಿ ಸಾರ್ವಜನಿಕರು ನೀರಿನ ಅಭಾವದಿಂದ ಬಳಲಬಾರದು ಎಂಬ ಸದುದ್ದೇಶದಿಂದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ರೂ.28 ಲಕ್ಷದಲ್ಲಿ ಪೊನ್ನಂಪೇಟೆ ಭಾಗದಲ್ಲಿ ಅಗತ್ಯ ಇರುವ ಸಾರ್ವಜನಿಕರಿಗೆ ತುರ್ತು ನೀರಿನ ಸೌಲಭ್ಯ ಕಲ್ಪಿಸಲು ಟ್ಯಾಂಕರ್ ವಾಹನವನ್ನು ವ್ಯವಸ್ಥೆ ಮಾಡಿದ್ದಾರೆ. ಪೊನ್ನಂಪೇಟೆಯಲ್ಲಿ ನೀರಿನ ಟ್ಯಾಂಕರ್ ಅನ್ನು ಉದ್ಘಾಟಿಸಿ, ತೀವ್ರ ಬೇಸಿಗೆಯಿಂದ ನೀರಿನ ಅಭಾವ ತಲೆದೋರಿದ್ದು, ಸಾರ್ವಜನಿಕರಿಗೆ ನೀರಿನ ಅಭಾವ ಆಗದಂತೆ ನೋಡಿಕೊಳ್ಳಲು ಈ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು. ಈ ಸಂದರ್ಭ ಬ್ಲಾಕ್ ಅಧ್ಯಕ್ಷರಾದ ಮಿದೇರಿರ ನವೀನ್, ಮಹಿಳಾ ಅಧ್ಯಕ್ಷರಾದ ಆಶಾ ಪೂಣಚ್ಚ, ಪಂಚಾಯಿತಿ ಅಧ್ಯಕ್ಷರು ಅಣ್ಣಿರ ಹರೀಶ್, ಉಪಾಧ್ಯಕ್ಷರು ಆಲಿರ ರಶೀದ್, ಮಾಜಿ ಮಹಿಳಾ ಅಧ್ಯಕ್ಷರು ಭಾರತಿ, ಸುನಿತಾ, ಅನಿತಾ, ತಾಲೂಕು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಜುನೈದ್, ಹಿರಿಯರು ಮುಕಳೇರ ಕುಶಾಲಪ್ಪ, ಜಿಮ್ಮಿ ಅಣ್ಣಯ್ಯ, ಕೊಲ್ಲಿರ ಬೋಪಣ್ಣ, ಅಜ್ಜಿಕುಟ್ಟಿರ ಪೊನ್ನು, ಪಮ್ಮು, ಗಿರೀಶ್, ಮನು, ಮಚ್ಚಾಮಾಡ ಮನು,…

Read More

ನಾಪೋಕ್ಲು NEWS DESK ಮಾ.30 : ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಎಮ್ಮೆಮಾಡು ಗ್ರಾಮದಲ್ಲಿ ನಡೆದಿರುವ ಘಟನೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ವಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಅವರು ಈ ಕೆಳಗಿನಂತೆ ಎಚ್ಚರಿಕೆ ನೀಡಿದ್ದಾರೆ.  ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಎಮ್ಮೆಮಾಡು ಗ್ರಾಮದಲ್ಲಿ ನಡೆದಿರುವ ಘಟನೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ಸದರಿ ವಿಡಿಯೋ ಮಾಡಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ದಿನಾಂಕ: 30-03-2026 ರಂದು ದೂರು ಸ್ವೀಕರಿಸಿದ್ದು, ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಮೊ.ಸಂ: 37/2026, ಕಲಂ: 196(1) ಬಿಎನ್ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿರುತ್ತದೆ.  (Facebook/ Whatsapp/ X/ Instagram & etc) ಗಳಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ಯಾವುದೇ ರೀತಿಯ ಸಂದೇಶ/ಭಾವಚಿತ್ರ/ವಿಡಿಯೋಗಳನ್ನು ಹಂಚಿಕೊಳ್ಳುವ ಮುನ್ನ ಸತ್ಯ-ಅಸತ್ಯತೆಯನ್ನು ಪರಿಶೀಲಿಸಿಕೊಳ್ಳುವಂತೆ ಸಾರ್ವಜನಿಕರಲ್ಲಿ ಕೋರಿದೆ ಹಾಗೂ ಕೊಡಗು ಜಿಲ್ಲಾ ಪೊಲೀಸ್ ಸಾಮಾಜಿಕ ಜಾಲತಾಣಗಳ ಮೇಲೆ ಸಂಪೂರ್ಣ ನಿಗಾವಹಿಸಿದ್ದು,…

Read More

ಸೋಮವಾರಪೇಟೆ ಮಾ.30 NEWS DESK : ಮಹಿಳಾ ಸಹಕಾರ ಸಂಘದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಸಮಾಜದ ಸಭಾಂಗಣದಲ್ಲಿ ವಿಶೇಷ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶನಿವಾರಸಂತೆಯ ಸಾಹಿತಿ ಶ.ಗ. ನಯನತಾರ ಮಾತನಾಡಿ, ಮಹಿಳೆಯರು ಇಂದಿನ ದಿನಗಳಲ್ಲಿ ಯಾವುದೇ ಕ್ಷೇತ್ರಕ್ಕೂ ಸೀಮಿತರಾಗದೇ, ಪುರುಷರಿಗೆ ಸರಿಸಮಾನವಾಗಿ ಎಲ್ಲಾ ವಲಯಗಳಲ್ಲಿ ಸಾಧನೆಗೈದು ತಮ್ಮ ಸಾಮಥ್ರ್ಯವನ್ನು ತೋರಿಸುತ್ತಿದ್ದಾರೆ ಎಂದು ಹೇಳಿದರು. ಮಹಿಳಾ ಸಂಘಗಳು ಮಹಿಳೆಯರ ಅಭಿವೃದ್ಧಿಗೆ ಸಹಕಾರಿ ಆಗುವ ಕಾರ್ಯಕ್ರಮಗಳನ್ನು ಹೆಚ್ಚು ಹಮ್ಮಿಕೊಳ್ಳಬೇಕು. ಸಮಾಜದಲ್ಲಿನ ಮಹಿಳೆಯರ ಸಮಸ್ಯೆಗಳ ಪರಿಹಾರಕ್ಕಾಗಿ ಸಂಘದ ಸದಸ್ಯರು ಒಗ್ಗಟ್ಟಿನಿಂದ ಮುಂದಾಗಬೇಕೆಂದು ಕರೆ ನೀಡಿದರು. ಉನ್ನತ ಹುದ್ದೆಗಳಲ್ಲಿ ಇರುವ ಮಹಿಳೆಯರೂ ಇಂದಿಗೂ ಹಲವು ಸವಾಲುಗಳನ್ನು ಎದುರಿಸುತ್ತಿರುವುದು ವಾಸ್ತವ. ಕೆಲವರು ಸ್ವಾಭಿಮಾನದಿಂದ ಸ್ವತಂತ್ರ ಜೀವನ ನಡೆಸುತ್ತಿದ್ದರೂ, ವೃದ್ಧಾಪ್ಯದ ಸಂದರ್ಭದಲ್ಲಿ ಇದು ಸಮಸ್ಯೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಕುಟುಂಬ ಜೀವನದಲ್ಲಿ ಹೊಂದಾಣಿಕೆ ಮನೋಭಾವ ಅತ್ಯಂತ ಮುಖ್ಯವಾಗಿದ್ದು, ಪರಸ್ಪರ ಗೌರವ ಮತ್ತು ಸಹಕಾರದಿಂದ ಜೀವನವನ್ನು ಸಮತೋಲನಗೊಳಿಸಬೇಕು ಎಂದು ಸಲಹೆ ನೀಡಿದರು. ಸಂಘದ ಕಾರ್ಯಾಧ್ಯಕ್ಷೆ…

Read More