ಮಡಿಕೇರಿ NEWS DESK ಮಾ.30 : ಸಿಕ್ಕಿಂನ ಬೌದ್ಧ ಸನ್ಯಾಸಿ ಸಮುದಾಯದ “ಸಂಘ” ಕ್ಷೇತ್ರದ ಮಾದರಿಯಲ್ಲೇ ಆದಿಮಸಂಜಾತ ಕೊಡವ ಸಮುದಾಯಕ್ಕೆ ಭಾರತದ ಸಂಸತ್ತು ಮತ್ತು ಕರ್ನಾಟಕ ವಿಧಾನಸಭೆ ಎರಡರಲ್ಲೂ ಪ್ರತ್ಯೇಕ ಪ್ರಾತಿನಿಧ್ಯವನ್ನು ನೀಡಬೇಕೆಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಏ.2 ರಂದು ಮಡಿಕೇರಿಯಲ್ಲಿ ಕೊಡವ ಸತ್ಯಾಗ್ರಹ ನಡೆಯಲಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.ಪತ್ರಿಕಾ ಪ್ರಕಟಣೆ ನೀಡಿರುವ ಅವರು ಗುರುವಾರ ಬೆಳಿಗ್ಗೆ 10.30 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಸತ್ಯಾಗ್ರಹ ನಡೆಸಿ ಭಾರತದ ರಾಷ್ಟçಪತಿ, ಪ್ರಧಾನಮಂತ್ರಿ, ಕೇಂದ್ರ ಕಾನೂನು ಮಂತ್ರಿ ಹಾಗೂ ಭಾರತದ ಚುನಾವಣಾ ಆಯೋಗಕ್ಕೆ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾಡಳಿತದ ಮೂಲಕ ನೀಡಲಾಗುವುದು ಎಂದು ಹೇಳಿದ್ದಾರೆ.ಕೊಡವರು ಪ್ರಕೃತಿಯ ಆರಾಧಕರು, ಅತಿ ಕಡಿಮೆ ಜನಸಂಖ್ಯೆ ಹೊಂದಿರುವ ಇವರು ಆದಿಮಸಂಜಾತ ಸಮುದಾಯದವರಾಗಿದ್ದು, ಭಾರತದ ಪ್ರಜಾಪ್ರಭುತ್ವ ರಚನೆಯಲ್ಲಿ ತಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳಲು ವಿಶೇಷ ಪ್ರಾತಿನಿಧ್ಯದ ಅಗತ್ಯವಿದೆ. ಈ “ವರ್ಚುವಲ್ ಕ್ಷೇತ್ರ” ವು ಯಾವುದೇ ನಿರ್ದಿಷ್ಟ ಭೌಗೋಳಿಕ ಗಡಿಗಳನ್ನು ಹೊಂದಿರುವುದಿಲ್ಲ. 1958 ರಲ್ಲಿ…
ಲೇಖಕ: admin
ಮಡಿಕೇರಿ NEWS DESK ಮಾ.29 : “ಕೆಪಿಎಸ್ ಮ್ಯಾಗ್ನೆಟ್” ಯೋಜನೆ ಜಾರಿಯಾದರೆ ಕೊಡಗಿನ ಬಹುತೇಕ ಸರಕಾರಿ ಶಾಲೆಗಳು ಮುಚ್ಚುವ ಸಾಧ್ಯತೆಗಳಿದೆ ಎಂದು ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಯೂನಿಯನ್(ಎಐಡಿಎಸ್‌ಓ) ಸಂಘಟನೆ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ನೇತೃತ್ವದಲ್ಲಿ ಕುಶಾಲನಗರದ ಮಹಿಳಾ ಸಮಾಜ ಭವನದಲ್ಲಿ ಪ್ರತಿಭಟನಾ ಸಮಾವೇಶ ನಡೆಸಿದ ಪ್ರಮುಖರು ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಎಐಡಿಎಸ್‌ಓ ರಾಜ್ಯ ಉಪಾಧ್ಯಕ್ಷರಾದ ಅಭಯ ದಿವಾಕರ್ ಮಾತನಾಡಿ, ಹಿಂದಿನ ಬಿಜೆಪಿ ಸರ್ಕಾರವು “ಸಂಯೋಜನೆ” ಹೆಸರಿನಲ್ಲಿ 13,800 ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿತ್ತು. ಆ ಸಂದರ್ಭ ರಾಜ್ಯಾದ್ಯಂತ ಹೋರಾಟ ನಡೆಸಿ ಸರಕಾರಿ ಶಾಲೆಗಳನ್ನು ಉಳಿಸಿದ್ದೆವು. ಪ್ರಸ್ತುತ ಅಧಿಕಾರದಲ್ಲಿರುವ ಕಾಂಗ್ರೆಸ್ ಸರಕಾರ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯಡಿಯಲ್ಲಿ 40ಸಾವಿರ ಶಾಲೆಗಳನ್ನು ಮುಚ್ಚಲು ಹೊರಟಿದೆ. ಸರಕಾರಿ ಶಾಲೆಗಳನ್ನು ಮುಚ್ಚಿ ಬಡ ವಿದ್ಯಾರ್ಥಿಗಳಿಂದ ಶಿಕ್ಷಣವನ್ನು ಕಸಿದುಕೊಳ್ಳುವುದೇ ಸರಕಾರದ ಉದ್ದೇಶವಾಗಿದೆ ಎಂದು ಆರೋಪಿಸಿದರು. ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳನ್ನು ಸರಕಾರವು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕಿನಿoದ 2,500 ಕೋಟಿ ಸಾಲ ಮಾಡಿ ತೆರೆಯುತ್ತಿದೆ. ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳನ್ನು…
ಮಡಿಕೇರಿ NEWS DESK ಮಾ.29 : ಕೂಡಿಗೆಯ ಸೈನಿಕ ಶಾಲೆ ಕೊಡಗು ತನ್ನ ಕುವೆಂಪು ವಿವಿಧೋದ್ದೇಶ ಸಭಾಂಗಣದಲ್ಲಿ 2025–26ನೇ ಶೈಕ್ಷಣಿಕ ಸಾಲಿನ ಅಂತರ ನಿಲಯ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ಅತ್ಯಂತ ಸಂಭ್ರಮ ಸಡಗರಗಳಿಂದ, ಎಲ್ಲಾ ನಿಲಯಗಳ ವಿದ್ಯಾರ್ಥಿಗಳು ಅತ್ಯುತ್ಸಾಹದ ಪಾಲ್ಗೊಲ್ಳುವಿಕೆಯ ಮೂಲಕ ನಡೆಯಿತು. ಈ ಸಾಂಸ್ಕೃತಿಕ ಹಬ್ಬದಲ್ಲಿ ಸೃಜನಶೀಲತೆ ಮತ್ತು ಪ್ರತಿಭೆಯನ್ನು ಪ್ರದರ್ಶಿಸಲು ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸಮೂಹ ಗೀತೆ ಗಾಯನ ಸ್ಪರ್ಧೆ “ಭವಿಷ್ಯ ನಮ್ಮದು” ಎನ್ನುವ ಶೀರ್ಷಿಕೆಯಡಿ, ಕಿರುನಾಟಕ “ಡಿಜಿಟಲ್ ಕನ್ನಡಿ: ತಂತ್ರಜ್ಞಾನ ಮತ್ತು ನೈತಿಕತೆ” ಎನ್ನುವ ವಿಷಯದಡಿ, ಜಾನಪದ ನೃತ್ಯ ಸ್ಪರ್ಧೆ ಸ್ಥಳೀಯ ಸಂಪ್ರದಾಯಗಳು ಮತ್ತು ಪುರಾಣ ಕಥೆಗಳಿಗೆ ಸಂಬಧಿಸಿದAತೆ ಹಾಗೂ ಸಮೂಹ ನೃತ್ಯ “ಫ್ರೀ-ಸ್ಟೈಲ್ ಸಿನಿಮಾಟಿಕ್” ಶೈಲಿಯಲ್ಲಿ ಅತ್ಯಾಕರ್ಷಕವಾಗಿ ಮೂಡಿ ಬಂದಿತು. ತೀವ್ರ ಪೈಪೋಟಿಯಿಂದ ಕುಡಿದ್ದ ಸ್ಪರ್ಧೆಗಳಲ್ಲಿ ಕಾರ್ಯಪ್ಪ ನಿಲಯವು ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಭಾವಪೂರ್ಣ ಬೀಳ್ಕೊಡುಗೆ-ಇದೇ ಸಂದರ್ಭ ಶಾಲೆಯ 13ನೇ ಬ್ಯಾಚ್‌ನ 12ನೇ ತರಗತಿಯ ಕೆಡೆಟ್‌ಗಳಿಗೆ ಭಾವಪೂರ್ಣ ಬೀಳ್ಕೊಡುಗೆ ನೀಡಲಾಯಿತು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಉಪ…
ಸುರಪುರ NEWS DESK ಮಾ.29 : ಈಜಲೆಂದು ಕೃಷಿ ಹೊಂಡಕ್ಕೆ ಇಳಿದಿದ್ದ ನಾಲ್ವರು ಮಕ್ಕಳು ಮುಳುಗಿ ದುರಂತ ಅಂತ್ಯ ಕಂಡಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ನಗನೂರು ಗ್ರಾಮದಲ್ಲಿ ನಡೆದಿದೆ. ಕಿರಣ್(6), ಬಸಮ್ಮ(11), ಶರತ್(6) ಹಾಗೂ ಹನುಮೇಶ್(7) ಮೃತ ದುರ್ದೈವಿಗಳಾಗಿದ್ದಾರೆ. ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.
ಬೆಂಗಳೂರು NEWS DESK ಮಾ.29 : ಎಲ್ಲಾ ವಲಯಗಳಿಗೂ ಯಾವುದೇ ಅಡೆತಡೆ ಇಲ್ಲದೆ ಎಲ್.ಪಿ.ಜಿ ಸರಬರಾಜು ಮಾಡಲಾಗುತ್ತಿದೆ ಅಲ್ಲದೇ ವಿಶೇಷವಾಗಿ *ಆಟೋ ಎಲ್.ಪಿ.ಜಿ*.ಗೆ ಯಾವುದೇ ರೀತಿಯ ಕೊರತೆ ಇಲ್ಲ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ. ರಾಜ್ಯದಲ್ಲಿ ಎಲ್‌ಪಿಜಿ ಸರಬರಾಜು ವ್ಯವಸ್ಥೆಯನ್ನು, ವಿಶೇಷವಾಗಿ ಆಟೋ ಎಲ್‌ಪಿಜಿ ಪೂರೈಕೆಯನ್ನು ರಾಜ್ಯ ಸರ್ಕಾರವು ನಿಕಟವಾಗಿ ಗಮನಿಸುತ್ತಿದೆ. ಕರ್ನಾಟಕದಾದ್ಯಂತ ಒಟ್ಟು 72 ಆಟೋ ಎಲ್‌ಪಿಜಿ ಡಿಸ್ಪೆನ್ಸಿಂಗ್ ಸ್ಟೇಷನ್‌ಗಳು (ALDS) ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ ಕೇವಲ ಬೆಂಗಳೂರು ನಗರವೊಂದರಲ್ಲೇ 31 ಕೇಂದ್ರಗಳು ಲಭ್ಯವಿವೆ. ಸಾರ್ವಜನಿಕ ವಲಯದ ಪ್ರಮುಖ ತೈಲ ಮಾರಾಟ ಕಂಪನಿಗಳಾದ (OMCs) IOCL, BPCL ಮತ್ತು HPCL ಮೂಲಕ ಆಟೋ ಎಲ್‌ಪಿಜಿ ಸರಬರಾಜು ಮಾಡಲಾಗುತ್ತಿದೆ. ಪ್ರಸ್ತುತ ಈ ಸಂಸ್ಥೆಗಳು ಪ್ರತಿ ಲೀಟರ್‌ಗೆ ರೂ. 77.74 ರ ದರದಲ್ಲಿ ಆಟೋ ಎಲ್‌ಪಿಜಿ ಪೂರೈಸುತ್ತಿವೆ. ಕಳೆದ ವಾರದಲ್ಲಿ ದಿನಕ್ಕೆ ಸರಾಸರಿ 64.9 ಮೆಟ್ರಿಕ್ ಟನ್ ಆಟೋ ಎಲ್‌ಪಿಜಿಯನ್ನು ವಿತರಿಸಲಾಗಿದೆ. ಸಂಘರ್ಷದ ಮೊದಲು ಈ ಪ್ರಮಾಣವು ದಿನಕ್ಕೆ 57.6 ಮೆಟ್ರಿಕ್…
ಸುಂಟಿಕೊಪ್ಪ NEWS DESK ಮಾ.29 : ಕ್ರೈಸ್ತ ಬಾಂಧವರ ಪವಿತ್ರ ವಾರದ ಸಂಕೇತವಾಗಿ ಗರಿಗಳ ಭಾನುವಾರದ ಅಂಗವಾಗಿ ಸಂತ ಮೇರಿ ಶಾಲಾ ಆವರಣದಲ್ಲಿ ವಿಶೇಷ ಪ್ರಾರ್ಥನೆಯೊಂದಿಗೆ ತೆಂಗಿನ ಗರಿಗಳನ್ನು ಭಕ್ತರಿಗೆ ವಿತರಿಸಲಾಯಿತು. ಸಂತ ಅಂತೋಣಿಯವರ ದೇವಾಲಯದಲ್ಲಿ ಶೃದ್ಧಾಭಕ್ತಿಯಿಂದ ಧಾರ್ಮಿಕ ಆಚರಣೆ ನಡೆಯಿತು.ಸಂತ ಅಂತೋಣಿ ಚರ್ಚ್ ನ ಧರ್ಮಗುರು ರೇ.ಫಾ.ವಿಜಯಕುಮಾರ್ ಅವರು ತೆಂಗಿನ ಗರಿಗಳನ್ನು ವಿತರಿಸಿದರು. ನಂತರ ಶಾಲಾ ಆವರಣದಿಂದ ಚರ್ಚ್ ವರೆಗೆ ಮೆರವಣಿಗೆಯಲ್ಲಿ ಆಗಮಿಸಿದ ಭಕ್ತರು ವಿಶೇಷ ಗಾಯನ ಬಲಿಪೂಜೆ ಹಾಗೂ ಪ್ರಭೋದನೆಯನ್ನು ಆರ್ಪಿಸಿದರು. ಇದರೊಂದಿಗೆ ಪವಿತ್ರ ವಾರಕ್ಕೆ ಮುನ್ನುಡಿ ಇಡಲಾಯಿತು. ಕ್ರೈಸ್ತ ಬಾಂಧವರು 40 ದಿನಗಳ ಉಪವಾಸ ಆಚರಿಸಲಿದ್ದಾರೆ.ಸಂತ ಕ್ಲಾರ ಕನ್ಯಾಸ್ತ್ರೀಯರು ಹಾಗೂ ನೂರಾರು ಸಂಖ್ಯೆಯ ಭಕ್ತರು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.
ಮಡಿಕೇರಿ NEWS DESK ಮಾ.28 : ಪೊಲೀಸ್ ಇಲಾಖೆಯ ದಕ್ಷ ಸೇವೆಗಾಗಿ 2025ನೇ ಸಾಲಿನ ಮುಖ್ಯಮಂತ್ರಿಗಳ ಪದಕಕ್ಕೆ ಕೊಡಗಿನ ಪೊಲೀಸ್ ವೃತ್ತ ನಿರೀಕ್ಷಕ ಶಿವರಾಜ್ ಆರ್.ಮುಧೋಳ್ ಹಾಗೂ ಎಎಸ್‌ಐ ಜೋಷಿ ಕುಟ್ಟಪ್ಪ ಪಾತ್ರರಾಗಿದ್ದಾರೆ. ಇದೇ ಏ.2ರಂದು ಬೆಂಗಳೂರಿನಲ್ಲಿ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿಗಳು ಪದಕ ಪ್ರದಾನ ಮಾಡಲಿದ್ದಾರೆ. ಪೊಲೀಸ್ ವೃತ್ತ ನಿರೀಕ್ಷಕ ಶಿವರಾಜ್ ಆರ್. ಮುಧೋಳ್ ಅವರು ಗೋಣಿಕೊಪ್ಪಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಜೋಷಿ ಕುಟ್ಟಪ್ಪ ಅವರು ಮಡಿಕೇರಿಯ ಕೊಡಗು ಜಿಲ್ಲಾ ಪೊಲೀಸ್ ಇಲಾಖೆಯ ನಿಸ್ತಂತು ನಿಯಂತ್ರಣ ಕೊಠಡಿ (ಕಂಟ್ರೋಲ್ ರೂಂ)ಯಲ್ಲಿ ಎಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಮಡಿಕೇರಿ NEWS DESK ಮಾ.28 : ಕೊಡಗು ಜಿಲ್ಲೆಯ ವಿವಿಧೆಡೆ ಗುಡುಗು, ಸಿಡಿಲು ಸಹಿತ ಸಾಧಾರಣ ಮಳೆಯಾಗಿದೆ. ಸಿಡಿಲಬ್ಬರ ಜನರಲ್ಲಿ ಆತಂಕವನ್ನು ಮೂಡಿಸಿತು. ಸುಂಟಿಕೊಪ್ಪದಲ್ಲಿ ಸಿಡಿಲು ಬಡಿದು ತೆಂಗಿನ ಮರ ಹೊತ್ತಿ ಉರಿದ ಘಟನೆ ನಡೆದಿದೆ. ಮುಂದಿನ ನಾಲ್ಕು ದಿನಗಳ ಕಾಲ ಮಳೆಯಾಗುವ ಸಾಧ್ಯತೆಗಳಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಭಾರೀ ಗಾಳಿಮಳೆಗೆ ಭಾಗಮಂಡಲ – ತಲಕಾವೇರಿ ರಸ್ತೆಗೆ ಅಡ್ಡಲಾಗಿ ಬಿದ್ದ ಮರವನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ತೆರವುಗೊಳಿಸಿದರು. ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.
ಮಡಿಕೇರಿ NEWS DESK ಮಾ.28 : ಮಧ್ಯ ಪ್ರಾಚ್ಯ ಯುದ್ಧದ ಕಾರಣದಿಂದ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದ್ದು, ಹೊಟೇಲ್ ಕಾರ್ಮಿಕರು ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಸರಕಾರ ಹೊಟೇಲ್ ಕಾರ್ಮಿಕರಿಗೆ ಸಹಾಯ ಧನ ನೀಡಬೇಕೆಂದು ಒತ್ತಾಯಿಸಿ ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ನ ಕೊಡಗು ಜಿಲ್ಲಾ ಘಟಕ ಜಿಲ್ಲಾಡಳಿತದ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದೆ.ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ನ ಲಭ್ಯತೆ ಕಡಿಮೆ ಇರುವುದರಿಂದ ಕೊಡಗು ಜಿಲ್ಲೆಯಲ್ಲೂ ಹೊಟೇಲ್ ಮಾಲೀಕರು ಕಾರ್ಯವನ್ನು ಸ್ಥಗಿತಗೊಳಿಸಿದ್ದು, ಹೊಟೇಲ್ ಕಾರ್ಮಿಕರು ಕಷ್ಟ ಎದುರಿಸುತ್ತಿದ್ದಾರೆ. ಹೊಟೇಲ್ ಕೆಲಸವನ್ನೇ ನಂಬಿ ಬದುಕು ಸಾಗಿಸುತ್ತಿದ್ದ ಬಡ ಕಾರ್ಮಿರಿಗೆ ಪರ್ಯಾಯ ಮಾರ್ಗವಿಲ್ಲದೆ ಬೀದಿ ಪಾಲಾಗುವ ಸ್ಥಿತಿ ನಿರ್ಮಾಣವಾಗಿದೆ.ಜಿಲ್ಲೆಯಲ್ಲಿರುವ ಸಾವಿರಾರು ಸಂಖ್ಯೆಯ ಹೊಟೇಲ್ ಕಾರ್ಮಿಕರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಸರಕಾರ ತಕ್ಷಣ ಎಚ್ಚೆತ್ತುಕೊಂಡು ಕಾರ್ಮಿಕರ ಜೀವನೋಪಾಯಕ್ಕೆ ಪರ್ಯಾಯ ಮಾರ್ಗ ಸೂಚಿಸಬೇಕು ಮತ್ತು ಸಹಾಯ ಧನ ವಿತರಿಸಬೇಕು ಎಂದು ಎಸ್‌ಡಿಟಿಯು ನ ಜಿಲ್ಲಾ ಕಾರ್ಯದರ್ಶಿ ಎಂ.ಎ.ಅಬ್ದುಲ್ ರಜಾ಼ಕ್ ಒತ್ತಾಯಿಸಿದರು.ಕಳೆದ ಹಲವಾರು…
ಮಡಿಕೇರಿ ಮಾ.28 NEWS DESK : ನಗರದಲ್ಲಿ ನಡೆಯುತ್ತಿರುವ ಕುಡಿಯುವ ನೀರಿನ ಅಮೃತ್ ಯೋಜನೆಯ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವ ಕುರಿತು ಮಡಿಕೇರಿ ನಗರಸಭೆಯ ಸಾಮಾನ್ಯ ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಯಿತು. ನಗರಸಭೆಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸರ್ವ ಸದಸ್ಯರು ಅಮೃತ್ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದ ವಾಹನ ಚಾಲಕರು ಹಾಗೂ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಸರ್ವ ಸದಸ್ಯರು ಪ್ರಸ್ತಾಪಿಸಿದರು. ಕಾಂಗ್ರೆಸ್ ಸದಸ್ಯ ಬಿ.ವೈ.ರಾಜೇಶ್ ಮಾತನಾಡಿ ಕಾಮಗಾರಿ ಮಳೆಗಾಲಕ್ಕೂ ಮೊದಲು ಪೂರ್ಣಗೊಳ್ಳುವುದು ಅಸಾಧ್ಯ, ಇದರಿಂದ ಹೆಚ್ಚಿನ ತೊಂದರೆ ಎದುರಾಗಲಿದೆ ಎಂದರು. ವಿರೋಧ ಪಕ್ಷದ ನಾಯಕ ಅಮಿನ್ ಮೊಹಿಸಿನ್ ಮಾತನಾಡಿ ನಗರಸಭೆಯ ಆಡಳಿತದ ಅವಧಿ ಇನ್ನು ಕೇವಲ 6 ತಿಂಗಳು ಮಾತ್ರವೇ ಇದೆ. ಈ ಕಾಮಗಾರಿ ಕುರಿತು ಹಲವು ಬಾರಿ ಚರ್ಚೆ ನಡೆದಿದೆ, ಈಗಲಾದರೂ ಗಂಭೀರವಾಗಿ ಪರಿಗಣಿಸಿ ಎಂದು ಒತ್ತಾಯಿಸಿದರು. ಎಸ್‍ಡಿಪಿಐ ಸದಸ್ಯ ಎಂ.ಕೆ.ಮನ್ಸೂರ್ ಆಲಿ ಮಾತನಾಡಿ ಪ್ರತಿ ಸಭೆಯಲ್ಲಿ ಈ ಕುರಿತು ಗಮನ ಸೆಳೆದರೂ ಪ್ರಯೋಜನವಾಗಿಲ್ಲ, ಗುತ್ತಿಗೆದಾರರನ್ನು ಸಭೆಗೆ ಕರೆಸಿ ಕಟ್ಟುನಿಟ್ಟಿನ ಸೂಚನೆ ನೀಡಿ…






