ವಿರಾಜಪೇಟೆ ಜ.30 : ಜನಪರ ಕೆಲಸಗಳನ್ನು ಮಾಡುತ್ತಿರುವ ಬಿಜೆಪಿಯು ಬಲವರ್ಧನೆಗೆ ವಿಜಯ ಸಂಕಲ್ಪ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಈ ಮೂಲಕ ಜನರ ಮನೆ ಮನೆಯನ್ನು ತಲುಪಲಾಗುವುದು ಎಂದು ಬೂತ್ ಉಸ್ತುವಾರಿ ಬಿ.ಎಂ.ಗಣೇಶ್ ಹೇಳಿದರು. ವಿರಾಜಪೇಟೆ ಮಂಡಲ ಆರ್ಜಿ ಗ್ರಾ.ಪಂ ಯ ಬೂತ್ ಸಂಖ್ಯೆ 161ರ ಕಲ್ಲುಬಾಣೆ ವ್ಯಾಪ್ತಿಯಲ್ಲಿ ನಡೆದ ಬೂತ್ ವಿಜಯ ಸಂಕಲ್ಪ ಅಭಿಯಾನ ಅಂಗವಾಗಿ ಕಾರ್ಯಕರ್ತರ ಮನೆ ಮನೆ ಗೋಡೆಗಳ ಮೇಲೆ ಬಿಜೆಪಿ ಚಿಹ್ನೆಯ ಸ್ಟಿಕರ್ ಅಂಟಿಸಿ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಗಣೇಶ್, ನರೇಂದ್ರಮೋದಿ ಅವರ ಸರ್ಕಾರ ಕಿಸಾನ್ ಸಮ್ಮಾನ್, ಮುದ್ರಾ, ಉಜ್ವಲ ಸೇರಿದಂತೆ ಮಹಿಳೆಯರ ಬಲವರ್ಧನೆಗೆ, ಕಲ್ಯಾಣಕ್ಕಾಗಿ ಶಾಶ್ವತ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸುತ್ತಿದ್ದಾರೆ. ಅವರ ಜನಪರ ಯೋಜನೆಗಳು ಮನೆಮನೆಗೂ ತಲುಪುವಂತಾಗಬೇಕು. ಸರಕಾರದ ಯೋಜನೆಗಳ ಕುರಿತು ಅರಿವು ಮೂಡಿಸುವುದು, ಮನ್ ಕಿ ಬಾತ್ ಕಾರ್ಯಕ್ರಮವನ್ನು ಪ್ರತಿ ಬೂತ್‍ನಲ್ಲಿ ಕೇಳುವಂತೆ ಮಾಡುವುದು, ಇನ್ನೂ ಅನೇಕ ಜನಪರ ಕಾರ್ಯಕ್ರಮಗಳ ಅರಿವು ಮೂಡಿಸುವುದು ಇದರ ಉದ್ದೇಶ ಎಂದು ಹೇಳಿದರು. ಬಳಿಕ ಕಲ್ಲುಬಾಣೆಯಲ್ಲಿ…
ಲೇಖಕ: admin
ಸುಂಟಿಕೊಪ್ಪ, ಜ.30 : ಸುಂಟಿಕೊಪ್ಪ ಹೋಬಳಿಯ ಕೊಡಗರಹಳ್ಳಿ, ಕಂಬಿಬಾಣೆ, 7ನೇ ಹೊಸಕೋಟೆ, ಮತ್ತಿಕಾಡು, ಭೂತನಕಾಡು ಹಾಗೂ ಮಿನುಕೊಲ್ಲಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು, ಬೆಳೆಗಾರರಲ್ಲಿ ಆತಂಕ ಸೃಷ್ಟಿಯಾಗಿದೆ. ಹವಾಮಾನ ವೈಪರಿತ್ಯ ಹಿನ್ನಲೆಯಲ್ಲಿ ಆಕಾಲಿಕ ಮಳೆ ಮೋಡಕವಿದ ವಾತವಾರಣದಿಂದಾಗಿ ಕಾಫಿ ಸಂಸ್ಕರಣೆಯ ಮೇಲೆ ದುಷ್ಪಾರಿಣಾಮ ಬೀರಿದ್ದು, ಇದರಿಂದಾಗಿ ಕಾಫಿಯ ಬೆಲೆ ಗಣನೀಯ ಪ್ರಮಾಣದಲ್ಲಿ ಏರಿದ್ದರೂ ಕೂಡ ಹೌಟ್ ಟರ್ನ್ ಮತ್ತು ತೇವಾಂಶದ ಹಿನ್ನಲೆಯಲ್ಲಿ ಬೆಳೆಗಾರರಿಗೆ ತೀವ್ರ ಕುಸಿತ ಕಾಣುತ್ತಿದೆ. ಕೆಲವು ಸಮಯ ಇಲ್ಲವಾಗಿದ್ದ ಕಾಡಾನೆಗಳ ಹಿಂಡು ಇದೀಗ ಮತ್ತೆ ಕಾಣಿಸಿಕೊಂಡಿದ್ದು, ಕಾಫಿ, ಅಡಿಕೆ, ಬಾಳೆ, ಕಿತ್ತಳೆ, ಬೆಣ್ಣೆ ಹಣ್ಣಿನ ಗಿಡಗಳನ್ನು ನಾಶಪಡಿಸುತ್ತಿವೆ. ಕಂಬಿಬಾಣೆ ಗ್ರಾ.ಪಂ ಗೆ ಒಳಪಡುವ ಉಪ್ಪುತೋಡು ವ್ಯಾಪ್ತಿಯಲ್ಲಿ ಕೆ.ಎಸ್.ಮಂಜುನಾಥ್ ಅವರ ತೋಟದಲ್ಲಿ ಆನೆ ದಾಳಿ ನಡೆಸಿ ಸಾಕಷ್ಟು ಪ್ರಮಾಣದಲ್ಲಿ ನಷ್ಟ ಉಂಟುಮಾಡಿದ್ದು, ಅರಣ್ಯ ಇಲಾಖೆ ಹಾಗೂ ಸರ್ಕಾರ ಕಡಾನೆ ಹಾವಳಿ ತಡೆಗಟ್ಟಲು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಬೆಳೆಗಾರರು ಒತ್ತಾಯಿಸಿದ್ದಾರೆ. ಕಾಡಾನೆ ಹಾವಳಿಯನ್ನು ತಡೆಗಟ್ಟಲು ರಾಜ್ಯ ಸರಕಾರವು ಚಿಕ್ಕಮಗಳೂರು,…
ಮಡಿಕೇರಿ ಜ.30 : ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಯಾಪ್ಟನ್ ಎಂ.ಎ.ಅಯ್ಯಪ್ಪ ಅವರು ಗುಪ್ತಚರ ಇಲಾಖೆಗೆ ವರ್ಗಾವಣೆಗೊಂಡಿದ್ದಾರೆ. ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕೆ.ರಾಮರಾಜನ್ ಅವರನ್ನು ಸರ್ಕಾರ ನೇಮಿಸಿದೆ.
ಸುಂಟಿಕೊಪ್ಪ,ಜ.30: ಸ್ವಸ್ಥ ಸಂಸ್ಥೆಯ ಕಾರ್ಯಕ್ರಮ ಸಂಯೋಜಕ ಮತ್ತು ತರಬೇತಿ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಕ್ರಮ ನೀಡಿದ ಜೆಸಿ ಮುರುಗೇಶ್ ಅವರ ನಿಸ್ವಾರ್ಥಸೇವೆಗೆ ಏಷ್ಯಾ ಬುಕ್ ಆಫ್ ರೆಕಾರ್ಡ್ ಸಂಸ್ಥೆಯ ವತಿಯಿಂದ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಜೆಸಿಐ ತುಮಕೂರು ಘಟಕದಿಂದ ತುಮಕೂರು ಚೇತನ ವಿದ್ಯಾಮಂದಿರದ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ಮಾತನಾಡಿದ ಮುರುಗೇಶ್, ತನ್ನ ಸೇವೆ ಮತ್ತು ತರಬೇತಿಗಾಗಿ ಅವಕಾಶ ಕಲ್ಪಿಸಿದ ಸುಂಟಿಕೊಪ್ಪ ಜೆಸಿಐ ಘಟಕ ಜೆಸಿಐನ ಮನಬಲ ತಂಡ ಹಾಗೂ ಏಷ್ಯಾ ಬುಕ್ ಆಫ್ ರೆಕಾರ್ಡ್ ಸಂಸ್ಥೆ ಹಾಗೂ ತಂದೆ ತಾಯಿಯರಿಗೆ ಚಿರಋಣಿ ಎಂದು ಹೇಳಿದರು. ಈ ಸಂದರ್ಭ ಜೆಸಿಐನ ವಿವಿಧ ಘಟಕಗಳ ಅಧ್ಯಕ್ಷರು ಪದಾಧಿಕಾರಿಗಳು ರಾಷ್ಟ್ರೀಯ ತರಬೇತುದಾರರು ಇತರರು ಉಪಸ್ಥಿತರಿದ್ದರು.
ವಿರಾಜಪೇಟೆ ಜ.30 : ವಿರಾಜಪೇಟೆ ಕರ್ನಾಟಕ ಸಂಘದ ವತಿಯಿಂದ ಗಣರಾಜ್ಯೋತ್ಸವದ ಅಂಗವಾಗಿ ಸ್ಥಳಿಯ ಪುರಭವನದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವಿವಿಧ ನೃತ್ಯಾ ಸ್ಪರ್ಧಾ ಕಾರ್ಯಕ್ರಮದಲ್ಲಿ ಅರಮೇರಿಯ ಎಸ್‍ಎಂಎಸ್ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ. ನೃತ್ಯ ಸ್ಪರ್ಧೆಯಲ್ಲಿ ಶ್ರೇಯ ಮತ್ತು ತಂಡ ಪ್ರಥಮ ಸ್ಥಾನ ಹಾಗೂ ತಷ್ಮಾ ಮತ್ತು ತಂಡ ತೃತೀಯ ಸ್ಥಾನ ಪಡೆದರೆ ಛಧ್ಮ ವೇಶ ಸ್ಪರ್ಧೆಯಲ್ಲಿ ಕೆ.ಎನ್. ದೀಕ್ಷಾ ಪ್ರಥಮ ಸ್ಥಾನ ಗಳಿಸಿರುವುದಾಗಿ ಶಾಲಾ ಪ್ರಾಂಶುಪಾಲರು ತಿಳಿಸಿದ್ದಾರೆ. ಈ ವಿದ್ಯಾರ್ಥಿಗಳಿಗೆ ಗುರುಗಳಾದ ಹೇಮಾವತಿ ಕಾಂತರಾಜ್, ಕಾವ್ಯಶ್ರೀ ನೃತ್ಯಾಭ್ಯಾಸ ಕಲಿಸುತ್ತಿದ್ದಾರೆ. ಶಾಲೆಗೆ ಕೀರ್ತಿ ತಂದಿರುವ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ ಅಭಿನಂದಿಸಿದೆ.
ಮಡಿಕೇರಿ ಜ.30 : ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿರುವ ಕೊಡಗಿನ ಜಾನಪದ ಕಲಾವಿದೆ ಐಮುಡಿಯಂಡ ರಾಣಿ ಮಾಚಯ್ಯ ಅವರನ್ನು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು. ಕಾಲೇಜಿನ ನ್ಯಾಕ್ ಕೊಠಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷೆ ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಹಾಗೂ ಪದಾಧಿಕಾರಿಗಳು, ನಿರ್ದೇಶಕರು, ಕಾಲೇಜು ಉಪನ್ಯಾಸಕರು ಸನ್ಮಾನಿಸಿ ಗೌರವಿಸಿದರು. ಹಳೆ ವಿದ್ಯಾರ್ಥಿ ಸಂಘದ ನಿರ್ದೇಶಕಿಯಾಗಿರುವ ರಾಣಿ ಮಾಚಯ್ಯ ಅವರಿಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ಎಲ್ಲರು ಸಂತಸ ವ್ಯಕ್ತಪಡಿಸಿ, ಅನಿಸಿಕೆ ಹಂಚಿಕೊಂಡರು. ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಣಿ ಮಾಚಯ್ಯ, ಫೀ.ಮಾ. ಕಾರ್ಯಪ್ಪ ಕಾಲೇಜಿನ ವಿದ್ಯಾರ್ಥಿಗಳು ನನ್ನ ತಂಡವನ್ನು ಪ್ರತಿನಿಧಿಸಿ ರಾಜ್ಯ ಹನ್ನೆರಡು ಜಿಲ್ಲೆ, ದೇಶದ 13 ರಾಜ್ಯದಲ್ಲಿ ಪ್ರದರ್ಶನ ನೀಡಿದ್ದಾರೆ. ನನಗೆ ಸಂದಿರುವ ಪ್ರಶಸ್ತಿಗೆ ನನ್ನ ಎಲ್ಲಾ ವಿದ್ಯಾರ್ಥಿಗಳು ಕಾರಣ ಎಂದರು. ಜಾತಿ, ಧರ್ಮ ಭೇದವಿಲ್ಲದೆ ಎಲ್ಲಾ ವರ್ಗದ ಮಂದಿ ನನಗೆ ಸಹಕಾರ ನೀಡಿದ್ದಾರೆ. ಕೊಡವ ವಿದ್ಯಾರ್ಥಿಗಳು ಮಾತ್ರವಲ್ಲದೆ ಇತರೆ ಜನಾಂಗ,…
ಮಡಿಕೇರಿ ಜ.30 : ಮಡಿಕೇರಿ ಸಂಚಾರಿ ಪೊಲೀಸರು ಹಾಗೂ ಕ್ಲಬ್ ಮಹೇಂದ್ರ ಸಹಯೋಗದಲ್ಲಿ ನಗರದಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ನಡೆಯಿತು. ನಗರದ ಸುದರ್ಶನ ವೃತದಿಂದ ಖಾಸಗಿ ಬಸ್ ನಿಲ್ದಾಣದವರೆಗೆ 20ಕ್ಕೂ ಹೆಚ್ಚು ಪೊಲೀಸರಿಂದ ಬೈಕ್ ಜಾಥ ನಡೆಯಿತು. ಜಾಥದಲ್ಲಿ ಅಪಘಾತದ ಬಗ್ಗೆ ಹಾಗೂ ಟ್ರಾಫೀಕ್ ನಿಯಮ ಸರಿಯಾಗಿ ಪಾಲಿಸುವಂತೆ ವಾಹನ ಸವಾರರಿಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು. ಈ ಸಂದರ್ಭ ಪೊಲೀಸ್ ಅಧಿಕಾರಿಗಳು ಹಾಗೂ ಕ್ಲಬ್ ಮಹೀಂದ್ರದ ಸಿಬ್ಬಂದಿಗಳು ಭಾಗಿಯಾಗಿದ್ದರು.
ವಿರಾಜಪೇಟೆ ಜ.30 : ವಿದ್ಯಾರ್ಥಿಗಳು ತಮ್ಮ ಜೀವನದ ಭವಿಷ್ಯವನ್ನು ಕ್ರೀಡೆಯಲ್ಲಿಯೇ ರೂಪಿಸಿ ಕೊಳ್ಳುವಂತಾಗಬೇಕು ಎಂದು ಭಾರತದ ಪ್ರತಿಷ್ಟಿತ ಫುಟ್ಬಾಲ್ ಲೀಗ್‍ನಲ್ಲಿ ಅನುಭವದ ಐಎಸ್‍ಎಲ್ ಆಟಗಾರ ತಮಿಳುನಾಡಿನ ಧನ್‍ಪಾಲ್ ಗಣೇಶ್ ಹೇಳಿದರು. ವಿರಾಜಪೇಟೆ ನಗರದ ಪ್ರಗತಿ ವಿದ್ಯಾಸಂಸ್ಥೆಯ ಮೈದಾನದಲ್ಲಿ 8 ರಿಂದ 13 ವರ್ಷದ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಫುಟ್ಬಾಲ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಮಕ್ಕಳ ಮುಂದಿನ ಭವಿಷ್ಯಕ್ಕೆ ಫುಟ್ಬಾಲ್ ಕ್ರೀಡೆಯು ಸಹಕಾರಿಯಾಗಲಿದ್ದು ಉತ್ತಮ ಕ್ರೀಡಾಪಟುಗಳಾಗಿ ಜಿಲ್ಲೆ, ರಾಜ್ಯ , ನಂತರ ರಾಷ್ರಮಟ್ಟದಲ್ಲಿಯು ಭಾಗವಹಿಸುವಂತೆ ಧನ್‍ಪಾಲ್ ಹಾರೈಸಿದರು. ಪ್ರಗತಿ ಶಾಲಾ ಮುಖ್ಯಸ್ಥರು ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ 8 ರಿಂದ 13 ವರ್ಷದ ಮಕ್ಕಳಿಗೆ ಫುಟ್ಬಾಲ್ ಪಂದ್ಯಾವಳಿ ಬಗ್ಗೆ ಮಾಹಿತಿ ನೀಡುವ ಮೂಲಕ ಕಳೆದ ನಾಲ್ಕು ವಾರಗಳಿಂದಲು ಈ ಮೈದಾನದಲ್ಲಿ ವಿದ್ಯಾರ್ಥಿಗಳ 18 ತಂಡಗಳ ಪಂದ್ಯಾವಳಿ ನಡೆಯುತ್ತಿದ್ದು ನಂತರ ಅಮ್ಮತ್ತಿಯ ಮೈದಾನದಲ್ಲಿ ಅಂತಿಮ ಫುಟ್ಬಾಲ್ ಪಂದ್ಯಾವಳಿ ನಡೆಯಲಿದೆ. ಕೊಡಗು ಫುಟ್ಬಾಲ್ ಅಷೋಸಿಯೇಶನ್…
ಮಡಿಕೇರಿ ಜ.30 : ಕನ್ನಡಕ್ಕೆ ಬೇರೆ ಭಾಷೆಯವರಿಂದ ಯಾವುದೇ ತೊಂದರೆ ಇಲ್ಲ. ಕನ್ನಡಿಗರಿಂದಲೇ ತೊಂದರೆ ಇರುವುದು. ಕನ್ನಡಿಗರು ಕನ್ನಡ ಮಾತನಾಡಿದರೆ ಸಾಕು ಕನ್ನಡ ಉಳಿದು ಬೆಳೆಯುತ್ತದೆ ಎಂದು ಗೋಣಿಕೊಪ್ಪಲಿನ ಉದ್ಯಮಿ ಕೊಳ್ಳಿಮಾಡ ಅಜಿತ್ ಅಯ್ಯಪ್ಪ ನುಡಿದರು. ಗೋಣಿಕೊಪ್ಪಲಿನ ನವಮಿ ಸಭಾಂಗಣದಲ್ಲಿ ನಡೆದ ಪೊನ್ನಂಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಉದ್ಘಾಟನಾ ಸಮಾರಂಭದಲ್ಲಿ ಹೋಬಳಿ ಘಟಕವನ್ನು ಉದ್ಘಾಟಿಸಿ ಮಾತನಾಡಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇತ್ತೀಚಿನ ದಿನಗಳಲ್ಲಿ ಕನ್ನಡದ ಬೆಳವಣಿಗೆಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹೋಬಳಿ ಮಟ್ಟದಲ್ಲೂ ಘಟಕಗಳನ್ನು ರಚಿಸಿಕೊಂಡು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು. ಪೊನ್ನಂಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಅವರಿಗೆ ಧ್ವಜ ಹಸ್ತಾಂತರಿಸುವ ಮೂಲಕ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಜವಾಬ್ದಾರಿ ನೀಡಿದರು. ನಂತರ ಘಟಕದ ಎಲ್ಲಾ ನೂತನ ಪದಾಧಿಕಾರಿಗಳಿಗೆ ಜವಾಬ್ದಾರಿ ಸ್ವೀಕರಿಸುವ ಪ್ರತಿಜ್ಞಾವಿಧಿ ಬೋಧನೆ ಮಾಡಿದರು. ಘಟಕದ ನೂತನ ಗೌರವ ಕಾರ್ಯದರ್ಶಿಯಾಗಿ ತಿರುನೆಲ್ಲಿಮಾಡ…
ವಿರಾಜಪೇಟೆ ಜ.30 : ಕ್ರೀಡಾ ಚಟುವಟಿಕೆಗಳು ಕ್ರೀಡಾಪಟುಗಳಲ್ಲಿ ಶಿಸ್ತು, ಸಮಯ ಪ್ರಜ್ಞೆ, ಗೆಳೆತನ ಹಾಗೂ ಸವಾಲನ್ನು ಸ್ವೀಕರಿಸುವ ಮನೋಭಾವವನ್ನು ಬೆಳೆಸಿ ವ್ಯಕ್ತಿತ್ವವನ್ನು ವಿಕಸನಗೊಳಿಸುತ್ತದೆ ಎಂದು ಚಾಣಕ್ಯ ಎಜುಕೇಷನ್ ಟ್ರಸ್ಟ್‌ನ ಕಾರ್ಯದರ್ಶಿ ಎಂ.ಬಿ. ಮಾಚಮ್ಮ ಅಭಿಪ್ರಾಯಪಟ್ಟರು. ಪಟ್ಟಣದ ಚಾಣಕ್ಯ ಎಜುಕೇಷನ್ ಟ್ರಸ್ಟ್ ವತಿಯಿಂದ ಐಮಂಗಲದಲ್ಲಿ ನಡೆದ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಿಗೆ ವಿದ್ಯಾಸಂಸ್ಥೆಗಳು ಅವಕಾಶ ನೀಡಿದಾಗ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗುತ್ತದೆ. ಪಠ್ಯೇತರ ಚಟುವಟಿಕೆಗಳು ಪಠ್ಯಕ್ಕೆ ಪೂರಕವಾಗಿ ಆಯೋಜನೆಗೊಂಡರೆ ಇನ್ನಷ್ಟು ಉತ್ತಮ ಫಲಿತಾಂಶವನ್ನು ಕಾಣಲು ಸಾಧ್ಯ ಎಂದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಚಾಣಕ್ಯ ಎಜುಕೇಷನ್ ಟ್ರಸ್ಟ್ ಅಧ್ಯಕ್ಷೆ ಸಿ.ಎನ್.ಕವಿತಾ ಫಲಿತಾಂಶವನ್ನು ಸಕಾರಾತ್ಮಕವಾಗಿ ಸ್ವೀಕರಿಸುವ ಮನೋಭಾವವನ್ನು ಕ್ರೀಡೆ ಅಥವಾ ಕ್ರೀಡಾಕೂಟಗಳು ಬೆಳೆಸುತ್ತವೆ. ಕ್ರೀಡೆಗಳು ದೈಹಿಕ ಆರೋಗ್ಯದೊಂದಿಗೆ ಮಾನಸಿಕ ಆರೋಗ್ಯವನ್ನು ಗಟ್ಟಿಗೊಳಿಸಲು ಸಹಕಾರ ನೀಡುತ್ತವೆ ಎಂದರು. ಸಂಸ್ಥೆಯ ಹಿರಿಯ ಉಪನ್ಯಾಸಕ ಎಂ.ಎಸ್.ಸುಬ್ಬಯ್ಯ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್ ಸೇರಿದಂತೆ ಸಾಮಾಜಿಕ ಜಾಲತಾಣಗಳಿಂದ ದೂರವಿದ್ದಷ್ಟು ಒಳಿತು. ಇದು ಶಿಕ್ಷಣದೊಂದಿಗೆ ಏಳಿಗೆಯನ್ನು…






