ಮಡಿಕೇರಿ ಫೆ.24 : ಬಟ್ಟೆ ಮಳಿಗೆ ನಡೆಸುತ್ತಿದ್ದ ವ್ಯಾಪಾರಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಾಪೋಕ್ಲು ಪಟ್ಟಣದಲ್ಲಿ ನಡೆದಿದೆ. ಸಕಲೇಶಪುರ ತಾಲ್ಲೂಕಿನ ಹೆತ್ತೂರು ಹೋಬಳಿ ಹಡ್ಲಹಳ್ಳಿ ಗ್ರಾಮದ ನಿವಾಸಿ ಎಚ್.ಕೆ.ಸಂದೀಪ್ (40) ಮೃತ ವ್ಯಾಪಾರಿ. ಕಳೆದ 20 ವರ್ಷಗಳಿಂದ ನಾಪೋಕ್ಲುವಿನಲ್ಲಿ ಬಟ್ಟೆ ಮಳಿಗೆ ನಡೆಸುತ್ತಿದ್ದ ಸಂದೀಪ್ ವ್ಯಾಪಾರದಲ್ಲಿ ನಷ್ಟ ಅನುಭವಿಸಿದ್ದರು ಎಂದು ಹೇಳಲಾಗಿದೆ. ನಾಪೋಕ್ಲು ಪಟ್ಟಣದ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಇವರು ಇಂದು ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಲೇಖಕ: admin
ಸುಂಟಿಕೊಪ್ಪ,ಫೆ.24 : 7ನೇ ಹೊಸಕೋಟೆ ಗ್ರಾ.ಪಂ ವ್ಯಾಪ್ತಿಯ ಅಂದಗೋವೆ ಮೆಟ್ನಳ್ಳ ಗ್ರಾಮದ ಅಮ್ಮನವರು, ಭೈರವೇಶ್ವರ, ಪಾಷಾಣಮೂರ್ತಿ ಮತ್ತು ಪರಿವಾರ ದೇವತೆಗಳ ಸನ್ನಿದಾನದ ಪ್ರಥಮ ವರ್ಷದ ನೇಮೋತ್ಸವವು ಮಾ.10 ಮತ್ತು 11 ರಂದು ನಡೆಯಲಿದೆ. ಮಾ. 10 ರಂದು ಸಂಜೆ 6 ಗಂಟೆಗೆ ಭಂಡಾರ ಇಳಿಸುವುದು, ರಾತ್ರಿ 8 ಗಂಟೆಗೆ ಪಂಜುರ್ಲಿ ದೈವದ ನೇಮ, 10 ಗಂಟೆಯಿಂದ ಕಲ್ಕುಡ ಮತ್ತು ಪಾಷಾಣಮೂರ್ತಿ ದೈವಗಳ ನೇಮ, ಮಂತ್ರ ದೇವತೆ, ಮೈಯಾಂತಿ, ರಾಹುಗುಳಿಗ ದೈವಗಳ ನೇಮೋತ್ಸವ ನಡೆಯಲಿದೆ. ರಾತ್ರಿ ಅನ್ನ ಸಂತರ್ಪಣೆ ಜರುಗಲಿದೆ. ಮಾ.11 ರಂದು ಬೆಳಿಗ್ಗೆ 8.30 ಕ್ಕೆ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ ನಡೆಯಲಿದೆ.
ಮಡಿಕೇರಿ ಫೆ.24 : ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಉದ್ಯೋಗ ವಿನಿಮಯ ಇಲಾಖೆ ವತಿಯಿಂದ ಸೋಮವಾರಪೇಟೆಯ ಸಂತ ಜೋಸೆಫರ ಪದವಿ ಕಾಲೇಜಿನಲ್ಲಿ ಫೆಬ್ರವರಿ 28 ರಂದು ‘ಜಿಲ್ಲಾ ಮಟ್ಟದ ಉದ್ಯೋಗ ಮೇಳ’ ನಡೆಯಲಿದ್ದು, ಇದರ ಸದುಪಯೋಗವನ್ನು ಅರ್ಹರು ಪಡೆದುಕೊಳ್ಳುವಂತೆ ಜಿಲ್ಲಾ ಉದ್ಯೋಗಾಧಿಕಾರಿ ಸಿ.ಎಂ.ಉಮಾ ಅವರು ತಿಳಿಸಿದ್ದಾರೆ. ನಗರದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಪಿಯುಸಿ, ಐಟಿಐ, ಪದವಿ, ಸ್ನಾತಕೋತ್ತರ ಪದವಿ ಮತ್ತು ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ.(18 ರಿಂದ 35 ವರ್ಷದೊಳಗಿನ ಪುರುಷ ಮತ್ತು ಮಹಿಳೆಯರು)/. ಫೆಬ್ರವರಿ, 28 ರಂದು ಬೆಳಗ್ಗೆ 9.30 ಗಂಟೆಗೆ ಹಾಜರಾಗಿ ನೋಂದಣಿ ಮಾಡಬೇಕು. ಆಧಾರ್ ಕಾರ್ಡ್, 20 ಪ್ರತಿಗಳ ಸ್ವವಿವರದೊಂದಿಗೆ ಹಾಜರಾಗಬೇಕು. ಅಭ್ಯರ್ಥಿಗಳ ಅಂಕಪಟ್ಟಿ ಮತ್ತು ಮೂಲ ದಾಖಲೆಗಳ ಪ್ರತಿಯನ್ನು ಹಾಜರುಪಡಿಸಬೇಕು ಎಂದು ಜಿಲ್ಲಾ ಉದ್ಯೋಗ ವಿನಿಮಯಾಧಿಕಾರಿ ಅವರು ತಿಳಿಸಿದರು. ಉದ್ಯೋಗ ಮೇಳದಲ್ಲಿ ರಾಣಿ ಮದ್ರಾಸ್, ಜಸ್ಟ್ ಡಯಲ್, ಕ್ಲಬ್ ಮಹೀಂದ್ರ, ವಕ್ಫ್…
ಮಡಿಕೇರಿ ಫೆ.24 : ಪ್ರಸಕ್ತ (2022-23) ಸಾಲಿನ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿಯಲ್ಲಿ ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಪದ್ಧತಿ ಅಳವಡಿಸಿದ ಸಾಮಾನ್ಯ ರೈತರಿಗೆ ಶೇ.75ರ ಸಹಾಯಧನ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ರೈತರಿಗೆ ಶೇ. 90 ರ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಆದ್ದರಿಂದ ರೈತರು ಆರ್‍ಟಿಸಿ, ಆಧಾರ್ ಕಾರ್ಡ್ ಪ್ರತಿಯೊಂದಿಗೆ ಅರ್ಜಿಯನ್ನು ಸಮೀಪದ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಮಡಿಕೇರಿ, ಸೋಮವಾರಪೇಟೆ, ಪೊನ್ನಂಪೇಟೆಗೆ ಮುದ್ದಾಂ ಅಥವಾ ಅಂಚೆ ಮೂಲಕ ಅರ್ಜಿ ಸಲ್ಲಿಸಿ ನೋಂದಾಣಿ ಮಾಡಿಕೊಳ್ಳಲು ಕೋರಿದೆ. ಹಾಗೂ ರೈತರ ವಂತಿಕೆಯನ್ನು ಇಲಾಖಾ ಅನುಮೋದಿತ ತಾವು ಆಯ್ಕೆ ಮಾಡಿ ಸಂಬಂಧಪಟ್ಟ ಹನಿ ನೀರಾವರಿ ಕಂಪನಿಗಳಿಗೆ ಸಂದಾಯ ಮಾಡಿ ಇಲಾಖೆಯಿಂದ ಕಾರ್ಯದೇಶ ಪಡೆದು ಈ ಯೋಜನೆಯನ್ನು ತಮ್ಮ ತಾಕುಗಳಲ್ಲಿ ಅಳವಡಿಸಿ ಸಹಾಯಧನ ಪಡೆಯಲು ಸಂಪೂರ್ಣ ಅರ್ಜಿಯನ್ನು ಸಂಬಂಧಪಟ್ಟ ತಾಲ್ಲೂಕು ತೋಟಗಾರಿಕೆ ಕಚೇರಿಗಳಿಗೆ ಮಾರ್ಚ್, 15 ರೊಳಗೆ ಸಲ್ಲಿಸಿ ಸಹಾಯಧನ ಪಡೆಯುವಂತೆ ತೋಟಗಾರಿಕೆ ಉಪ ನಿರ್ದೇಶಕರಾದ…
ಮಡಿಕೇರಿ ಫೆ.24 : ಮಡಿಕೇರಿ ತಾಲೂಕಿನ ಅಂಗನವಾಡಿ ಕಾರ್ಯಕರ್ತೆ 1 ಹಾಗೂ ಅಂಗನವಾಡಿ ಸಹಾಯಕಿಯರ 04 ಹುದ್ದೆಯನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಮುಕ್ಕೋಡ್ಲು-1 ರಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆ ಹಾಗೂ ಬಲ್ಲಮಾವಟಿ ಪಟ್ಟಣ, ವಣಚಲು, ಪೆನ್‍ಷನ್ ಲೈನ್, ಮಂಡೆಸ್ಥಾನ ಇಲ್ಲಿ ಅಂಗನವಾಡಿ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಮಾರ್ಚ್, 24 ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಸಲು ಕಾರ್ಯಕರ್ತೆ ಹುದ್ದೆಗೆ ದ್ವಿತೀಯ ಪಿಯುಸಿ ತೇರ್ಗಡೆ ಹಾಗೂ ಸಹಾಯಕಿ ಹುದ್ದೆಗೆ 10ನೇ ತರಗತಿ ತೇರ್ಗಡೆ ಹೊಂದಿರಬೇಕು. 18 ರಿಂದ 35 ವರ್ಷ ವಯೋಮಿತಿಯೊಳಗಿರುವ ಹಾಗೂ ಅಂಗನವಾಡಿ ಕೇಂದ್ರಕ್ಕೆ ಒಳಪಟ್ಟ ಗ್ರಾಮ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಹರಾಗಿದ್ದಾರೆ. ಅಂಗವಿಕಲ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ 10 ವರ್ಷಗಳ ಸಡಿಲಿಕೆ ಇರುತ್ತದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಶಿಶು ಅಭಿವೃದ್ಧಿ ಯೋಜನಾ ಕಚೇರಿ, ಮಡಿಕೇರಿ ಇಲ್ಲಿ ಕಚೇರಿ ವೇಳೆಯಲ್ಲಿ ಅರ್ಜಿ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ದೂ.ಸಂ. 08272-295087 ನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು…
ಮಡಿಕೇರಿ ಫೆ.24 : ಮಡಿಕೇರಿ 66/11 ಕೆವಿ ವಿದ್ಯುತ್ ಉಪ-ಕೇಂದ್ರದಿಂದ ಹೊರಹೋಗುವ ಎಫ್1 ಕೋಟೆ ಫೀಡರ್‍ನಲ್ಲಿ ತುರ್ತು ನಿರ್ವಹಣೆ ಕಾರ್ಯವನ್ನು ನಿರ್ವಹಿಸಬೇಕಿರುವುದರಿಂದ ಫೆಬ್ರವರಿ, 26 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಉಪ ಕೇಂದ್ರಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು. ಆದ್ದರಿಂದ, ರೇಸ್‍ಕೋರ್ಸ್ ಕಾಲೇಜು ರಸ್ತೆ ಹಾಗೂ ಸುತ್ತಮುತ್ತಲವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.
ಮಡಿಕೇರಿ ಫೆ.24 : ಪೊನ್ನಂಪೇಟೆ ಮತ್ತು ವಿರಾಜಪೇಟೆ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನೆಯಲ್ಲಿ 11 ಅಂಗನವಾಡಿ ಕಾರ್ಯಕರ್ತೆಯರು, 22 ಅಂಗನವಾಡಿ ಸಹಾಯಕಿಯರ ಹುದ್ದೆಯನ್ನು ಭರ್ತಿ ಮಾಡಲು ಭೌತಿಕವಾಗಿ (ಆಫ್ ಲೈನ್) ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ/ ಸಹಾಯಕಿಯರ ಹುದ್ದೆಯನ್ನು ಭರ್ತಿ ಮಾಡಲು ಅಂಗನವಾಡಿ ಕೇಂದ್ರಗಳಿಗೆ ಅರ್ಜಿಗಳನ್ನು ಭೌತಿಕವಾಗಿ (ಆಫ್-ಲೈನ್) ಮೂಲಕ ಆಹ್ವಾನಿಸಿ ಪ್ರಕಟಣೆ ಹೊರಡಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆ ಹುದ್ದೆ ಖಾಲಿ ಇರುವ ಕೇಂದ್ರದ ಹೆಸರು: ಬೀರುಗ 1, ಮಾಯಾಮುಡಿ 1, ಬೀರುಗ 2, ಮೀನುಪೇಟೆ, ಎಡೂರು, ಹೊಸೂರು, ಕರಡಿಕೊಪ್ಪ, ಕರಡಿಗೋಡು 2, ಬಾಳಾಜಿ 1, ಕಲ್ಲುಕೋರೆ, ಬೆಳ್ಳುಮಾಡು 1. ಅಂಗನವಾಡಿ ಸಹಾಯಕಿಯರ ಹುದ್ದೆ ಖಾಲಿ ಇರುವ ಕೇಂದ್ರದ ಹೆಸರು: ಕಾಟಿಗುಂಡಿ ಪೈಸಾರಿ, ಬಿ.ಶೆಟ್ಟಿಗೇರಿ, ದೇವನೂರು 2, ತೆರಾಲು 2, ಕುಂದ, ಹೊಸನಲ್ಲಿಕೋಟೆ, ಆಂಗೋಡು, ಹೈಸೋಡ್ಲೂರು, ಬೀರುಗ 1, ಕುಂದೂರು, ಬೆಸಗೂರು 2, ಕಲ್ತೋಡು, ಕಣ್ಣಂಗಾಲ, ಟಿ. ಎಸ್ಟೇಟ್ 2, ತೋತೇರಿ ರುದ್ರಗುಪ್ಪೆ, ಗೋಣಿಕೊಪ್ಪಲು ಮೈನ್,ನೆಹರುನಗರ 1, ಜಾಗಲೆ,…
ಮಡಿಕೇರಿ ಫೆ.24 : ಪ್ರಸಕ್ತ(2022-23) ಸಾಲಿನಲ್ಲಿ ಜಿಲ್ಲೆಯ ವೃತ್ತಿಪರ ಕುಶಲಕರ್ಮಿಗಳಿಗೆ ಸುಧಾರಿತ ಉಪಕರಣಗಳ ವಿತರಣೆ ಯೋಜನೆಯಡಿ ಗ್ರಾಮೀಣ ಪ್ರದೇಶದ ವೃತ್ತಿನಿರತ ಕುಶಲಕರ್ಮಿಗಳಿಂದ ಗಾರೆಕೆಲಸ ಹಾಗೂ ಮರಗೆಲಸ(ಬಡಗಿ) ಉಪಕರಣಗಳ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ನಿಗಧಿತ ಅರ್ಜಿ ನಮೂನೆಯನ್ನು ಕಚೇರಿಯಲ್ಲಿ ಪಡೆದು ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕು. ದಾಖಲೆಗಳ ವಿವರ; ಗ್ರಾಮ ಪಂಚಾಯತಿ ಪಿಡಿಒ ಅವರಿಂದ ಕಸುಬು ದೃಡೀಕರಣ ಪತ್ರ, ಕಾರ್ಮಿಕ ಇಲಾಖೆಯಿಂದ ಉಪಕರಣವನ್ನು ಪಡೆದಿಲ್ಲವೆಂದು ದೃಡೀಕರಣ ಪತ್ರ, ಜಾತಿ ಪ್ರಮಾಣ ಪತ್ರ, ಎರಡು ಪಾಸ್ ಪೋರ್ಟ್ ಅಳತೆಯ ಭಾವಚಿತ್ರ, ಆಧಾರ್ ಕಾರ್ಡ್ ಪ್ರತಿ, ಮತದಾರರ ಗುರುತಿನ ಚೀಟಿ, ರೇಷನ್ ಕಾರ್ಡ್ ಪ್ರತಿ ಸಲ್ಲಿಸಬೇಕು. ಭರ್ತಿ ಮಾಡಿದ ಅರ್ಜಿಯನ್ನು ಮಾರ್ಚ್, 09 ರೊಳಗೆ ಉಪ ನಿರ್ದೇಶಕರು(ಖಾಗ್ರಾ), ಗ್ರಾಮೀಣ ಕೈಗಾರಿಕಾ ವಿಭಾಗ, ಜಿಲ್ಲಾ ಕೈಗಾರಿಕಾ ಕೇಂದ್ರ ಕಟ್ಟಡ, ಕೊಹಿನೂರು ರಸ್ತೆ, ಮಡಿಕೇರಿ-571201 ಈ ವಿಳಾಸಕ್ಕೆ ಸಲ್ಲಿಸಬೇಕು. ನಿಗಧಿತ ಸಮಯದ ನಂತರ ಬಂದ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ ಎಂದು ರಘು ಸಿ.ಎನ್, ಉಪ ನಿರ್ದೇಶಕರು(ಖಾಗ್ರಾ), ಗ್ರಾಮೀಣ ಕೈಗಾರಿಕೆ ರವರು ತಿಳಿಸಿದ್ದಾರೆ.…
ಬೆಂಗಳೂರು ಫೆ.24 : ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಕನ್ನಡ ಚಲನಚಿತ್ರ ಕಪ್- 2023 ಕ್ರಿಕೆಟ್ ಪಂದ್ಯಾವಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಆರೋಗ್ಯ ಸಚಿವರಾದ ಡಾ. ಸುಧಾಕರ್ ಹಾಗೂ ಕನ್ನಡ ಚಲನಚಿತ್ರರಂಗದ ಖ್ಯಾತ ನಟರು ಹಾಜರಿದ್ದರು.
ನಾಪೋಕ್ಲು ಫೆ.24 : ಕೊಡಗು ಪ್ರಕೃತಿ ಸೌಂದರ್ಯದ ಜಿಲ್ಲೆ. ಅದರಲ್ಲೂ ಮಡಿಕೇರಿ ತಾಲೂಕು ನಾಲ್ಕು ನಾಡಿನ ಎಮ್ಮೆಮಾಡು ಗ್ರಾಮವು ಜೀವನದಿ ಕಾವೇರಿಯ ದಡದಲ್ಲಿದ್ದು, ದಕ್ಷಿಣ ಭಾರತ, ದಕ್ಷಿಣ ಕರ್ನಾಟಕದ ಮುಸ್ಲಿಂ ಪುಣ್ಯ ಕ್ಷೇತ್ರಗಳ ಪೈಕಿ ಎಮ್ಮೆಮಾಡು ಗ್ರಾಮಕ್ಕೆ ಅಗ್ರಸ್ಥಾನ ಇದೆ. ಇಲ್ಲಿ ಸತ್ಯಸಂಧ0ದೈವ ಭಕ್ತ ಪವಾಡ ಪುರುಷ ಸೂಫಿ ಸಯ್ಯದ್ ವಲಿಯುಲ್ಲಾರವರು ಈ ಸ್ಥಳದಲ್ಲಿ ಅಂತಿಮ ವಿಶ್ರಾಂತಿ ಪಡೆಯುತ್ತಿರುವುದೇ ಈ ಸ್ಥಳದ ಕೀರ್ತಿ, ಪ್ರಸಿದ್ಧಿಗೆ ಕಾರಣ. ಜಿಲ್ಲಾ ಕೇಂದ್ರ ಮಡಿಕೇರಿಯಿಂದ ನಾಪೋಕ್ಲುವಿಗಾಗಿ ಸುಮಾರು 32 ಕಿ.ಮೀ. ಚಲಿಸಿದರೆ, ಈ ಗ್ರಾಮಕ್ಕೆ ತಲುಪಬಹುದು. ವಾರ್ಷಿಕವಾಗಿ ಇಲ್ಲಿ ಮಾರ್ಚ್ ತಿಂಗಳಲ್ಲಿ ಊರೂಸ್ ಜರುಗಲಿದ್ದು, ಇಂದು ಧ್ವಜಾರೋಣದ ಮೂಲಕ ಚಾಲನೆ ದೊರೆಯಿತು. ಫೆ. 27 ರಂದು ಸರ್ವಧರ್ಮ ಸಮ್ಮೇಳನ ಮತ್ತು ಅನ್ನದಾನ ನಡೆಯಲಿದ್ದು, ಮಾ.3 ರಂದು ಹಬ್ಬಕ್ಕೆ ತೆರೆ ಬಿಳಲಿದೆ. ಇತಿಹಾಸ : ನೂರಾರು ವರ್ಷಗಳ ಹಿಂದೆ ಸೂಫಿ-ಸಯ್ಯದ್ ರವರು ಮರಣ ಸಯ್ಯೆಯಲ್ಲಿ ಬರಕೊಲ್ಲಿ ಎಂಬ ಜಾಗದಲ್ಲಿ ಬಂಡೆಯ ಮೇಲೆ ಜೀವನ್ ಮರಣ ಸ್ಥಿತಿಯಲ್ಲಿದ್ದ ಸಂದರ್ಭ…






