ಮಡಿಕೇರಿ ಫೆ.24 : ಕಾನೂನು ಮಾಪನಶಾಸ್ತ್ರ ಇಲಾಖೆ ವತಿಯಿಂದ ತಾತ್ಕಾಲಿಕ ಸತ್ಯಾಪನೆ ಮುದ್ರೆ ಶಿಬಿರವು ಫೆಬ್ರವರಿ, 24 ರಿಂದ ಮಾರ್ಚ್, 4 ರವರೆಗೆ ಸಿದ್ದಾಪುರದ ಗುಡ್ ಲಕ್ ಸೂಪರ್ ಮಾರ್ಕೆಟ್ ಬಸ್ ಸ್ಟ್ಯಾಂಡ್ ಹತ್ತಿರ ನಡೆಯಲಿದೆ. ತಮ್ಮಲ್ಲಿ ಉಪಯೋಗಿಸುವ ಅಳತೆ, ತೂಕ ಮತ್ತು ತೂಕದ ಸಾಧನಗಳನ್ನು ಹಾಜರುಪಡಿಸಿ ಸತ್ಯಾಪನೆ ಮುದ್ರೆ ಮಾಡಿಸಿಕೊಳ್ಳುವಂತೆ ಕಾನೂನು ಮಾಪನಶಾಸ್ತ್ರ ನಿರೀಕ್ಷಕರು ತಿಳಿಸಿದ್ದಾರೆ.
ಲೇಖಕ: admin
ಮಡಿಕೇರಿ ಫೆ.24 : ಕೊಡಗು ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಾದ ಮಡಿಕೇರಿ ನಗರಸಭೆ, ಕುಶಾಲನಗರ ಹಾಗೂ ವಿರಾಜಪೇಟೆ ಪುರಸಭೆ ಮತ್ತು ಸೋಮವಾರಪೇಟೆ ಪಟ್ಟಣ ಪಂಚಾಯಿತಿಯಲ್ಲಿ ಖಾಲಿ ಇರುವ ಪೌರ ಕಾರ್ಮಿಕರು, ಲೋಡರ್ಸ್ ಹಾಗೂ ಕ್ಲೀನರ್ಸ್ ಹುದ್ದೆಗಳನ್ನು ವಿಶೇಷ ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಸಲುವಾಗಿ ಈಗಾಗಲೇ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳ ಹಾಗೂ ಯೋಜನಾ ನಿರ್ದೇಶಕರ ಕಚೇರಿಯ ಸೂಚನಾ ಫಲಕದಲ್ಲಿ ಹಾಗೂ ಕಚೇರಿ ವೆಬ್‍ಸೈಟ್‍ಗಳಲ್ಲಿ ಪ್ರಕಟಿಸಲಾಗಿದೆ. ಈ ಆಯ್ಕೆಪಟ್ಟಿಗೆ ಸಂಬಂಧಿಸಿದಂತೆ ಏನಾದರೂ ಆಕ್ಷೇಪಣೆ ಇದ್ದಲ್ಲಿ ಫೆಬ್ರವರಿ, 22 ರಿಂದ 07 ದಿನದೊಳಗೆ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಯ ಪೌರಾಯುಕ್ತರು/ ಮುಖ್ಯಾಧಿಕಾರಿ ಅಥವಾ ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ದಿ ಕೋಶ, ಜಿಲ್ಲಾಧಿಕಾರಿ ಅವರ ಕಚೇರಿಗೆ ದಾಖಲಾತಿಗಳೊಂದಿಗೆ ಸಲ್ಲಿಸಬಹುದು ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಬಿ.ಬಸಪ್ಪ ಅವರು ತಿಳಿಸಿದ್ದಾರೆ.
ವಿರಾಜಪೇಟೆ ಫೆ.24 : ವಿರಾಜಪೇಟೆಯ ಸಂತ ಅನ್ನಮ್ಮ ಪ್ರೌಢಶಾಲೆಯ ಎನ್.ಸಿ.ಸಿ ಘಟಕ, ಇಕೋ ಕ್ಲಬ್ ಹಾಗೂ ಸ್ಕೌಟ್ ಗೈಡ್ಸ್ ಘಟಕಗಳ ಸಹಯೋಗದಲ್ಲಿ ಸೈಕಲ್ ಜಾಥಾ ಹಾಗೂ ಸ್ವಚ್ಛತಾ ಅಭಿಯಾನ ನಡೆಯಿತು. ಜಾಥಾಕ್ಕೆ ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ರೆ.ಫಾ. ಐಸಾಕ್ ರತ್ನಕರ್ ನಗರದ ಗಡಿಯಾರ ಕಂಬದ ಬಳಿ ಚಾಲನೆ ನೀಡಿದರು. ಸೈಕಲ್ ಜಾಥವು ಹೆಗ್ಗಳ ಗ್ರಾಮದ ಸ್ನೇಹಭವನ ಅನಾಥಾಶ್ರಮದ ತನಕ ನಡೆಯಿತು. ಮಾರ್ಗ ಮದ್ಯೆ ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯವನ್ನು ನಡೆಸಿದರು. ಸ್ನೇಹ ಭವನ ಅನಾಥಾಶ್ರಮದಲ್ಲೂ ಸ್ವಚ್ಛತೆಯನ್ನು ನೆರವೇರಿಸಿದರು. ಅಲ್ಲಿಯೇ ಆಹಾರ ತಯಾರಿಸಿ ವೃದ್ಧರಿಗೆ ಬಡಿಸಿದರು. ಮತ್ತು ಮನೋರಂಜನ ಕಾರ್ಯಕ್ರಮ ನೀಡಿದರು. ಈ ಸಂದರ್ಭದಲ್ಲಿ ವಿರಾಜಪೇಟೆ ನರ್ಸಿಂಗ್ ಹೋಮ್‍ನ ವೈದ್ಯೆ ಡಾ. ಫಾತಿಮಾ ಕಾರ್ಯಪ್ಪ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಒಟ್ಟು 60 ವಿದ್ಯಾರ್ಥಿಗಳಿದ್ದ ಈ ತಂಡದಲ್ಲಿ ವಿದ್ಯಾರ್ಥಿಗಳು ಸ್ವಚ್ಛತೆ, ನೈರ್ಮಲ್ಯ ಹಾಗೂ ಇಂಧನ ಉಳಿತಾಯದ ಪ್ರಾಮುಖ್ಯತೆಯನ್ನು ಅರಿತರು. ಈ ಸಂದರ್ಭ ಎನ್.ಸಿ.ಸಿ ಅಧಿಕಾರಿ ಅಬ್ದುಲ್ ಮುನೀರ್, ಸ್ಕೌಟ್ ಗೈಡ್ ಸಂಚಾಲಕಿ ಸಹನ ಹಾಗೂ…
ನಾಪೋಕ್ಲು ಫೆ.24 : ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಉರೂಸ್ ಇಂದಿನಿಂದ ಒಂದು ವಾರಗಳ ಕಾಲ ನಡೆಯಲಿದ್ದು ಎಮ್ಮೆಮಾಡು ಗ್ರಾಮದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಾಗೂ ವಾಹನ ಮತ್ತು ಜನದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ ಸಭೆಯನ್ನು ಏರ್ಪಡಿಸಲಾಗಿತ್ತು. ಎಮ್ಮೆಮಾಡು ಜಮಾಯತ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಡಿವೈಎಸ್ಪಿ ಜಗದೀಶ್ ,ವೃತ್ತ ನಿರೀಕ್ಷಕ ಶೇಖರ್,ನಾಪೋಕ್ಲು ಠಾಣೆಯ ಪ್ರಭಾರ ಠಾಣಾಧಿಕಾರಿ ಗೋಪಾಲಕೃಷ್ಣ, ಎಮ್ಮೆಮಾಡು ಜಮಾಯತ್ ಅಧ್ಯಕ್ಷ ಅಬೂಬಕರ್ ಸಖಾಫಿ ಸೇರಿದಂತೆ ಹಲವರು ಪಾಲ್ಗೊಂಡಿದ್ದು, ಉರೂಸ್ ಅನ್ನು ಸುವ್ಯವಸಿತವಾಗಿ ನಡೆಸುವ ಬಗ್ಗೆ ಕುಲಂಕುಶವಾಗಿ ಚರ್ಚಿಸಿ ಮಾರ್ಗದರ್ಶನ ನೀಡಲಾಯಿತು. ಈ ಸಂದರ್ಭ ಜಮಾಯತ್ ಕಾರ್ಯದರ್ಶಿ ಪಿ.ಕೆ. ಹ್ಯಾರೀಸ್, ಖಜಾಂಚಿ ಆಲಿಕುಟ್ಟಿ ನೆರೋಟ್, ಬಿ.ಎಂ.ಉಸ್ಮಾನ್ ಹಾಜಿ, ಬಿ.ಎಂ.ಉಮರ್ ಮುಸ್ಲಿಯರ್, ಅಬ್ದುಲ್ ಹಮೀದ್ ನೆರೋಟ್, ಕಾಳೆರ ಖಾದರ್ ಇನ್ನಿತರ ಉಪಸ್ಥಿತರಿದ್ದರು. ವರದಿ —- ದುಗ್ಗಳ ಸದಾನಂದ
ವಿರಾಜಪೇಟೆ ಫೆ.24 : ದಕ್ಷಿಣ ವಲಯದ ಗಾಲ್ಫ್ ಚಾಂಪಿಯನ್‍ಶಿಪ್ ಪಂದ್ಯಾವಳಿಯಲ್ಲಿ ವಿದ್ಯಾರ್ಥಿ ಎಂ.ಟಿ.ಮೊಹಮ್ಮದ್ ಅಯಾನ್ ಸಾಧನೆ ಮಾಡಿದ್ದಾರೆ. ಕೂರ್ಗ್ ಗಾಲ್ಫ್ ಲಿಂಕ್ಸ್ ಬಿಟ್ಟಂಗಾಲ ಹಾಗೂ ಐ.ಜಿ.ಯು, ಎಂ.ಡಿ.ಜಿ.ಸಿ ಫೀಡರ್ ಗಾಲ್ಫ್ ಮಡಿಕೇರಿಯಲ್ಲಿ ನಡೆದ ‘ಡಿ’ ಬಾಲಕರ ವಿಭಾಗದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ಮೊಹಮ್ಮದ್ ಅಯಾನ್ 5ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಶಾಲಾ ಮುಖ್ಯೋಪಾಧ್ಯಾಯಿನಿ ಎಂ.ಬಿ.ಪ್ರಮೀಳಾ, ಸಹ ಮುಖ್ಯ ಶಿಕ್ಷಕಿ ನಿವ್ಯ ಅಭಿನಂದನೆ ಸಲ್ಲಿಸಿದರು.
ಮಡಿಕೇರಿ ಫೆ.24 : ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯಾಗಿ ಡಾ.ಕೆ.ಎಂ.ಸತೀಶ್ ಕುಮಾರ್ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಹಿಂದೆ ಹಾಸನ ಜಿಲ್ಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅಧಿಕಾರ ಸ್ವೀಕಾರ ಸಂದರ್ಭದಲ್ಲಿ ಸರ್ಕಾರಿ ನೌಕರರ ಜಿಲ್ಲಾ ಸಂಘದ ಅಧ್ಯಕ್ಷರಾದ ಪೊನ್ನಚ್ಚನ ಶ್ರೀನಿವಾಸ್ ಅವರು ಅಭಿನಂದಿಸಿದರು.
ಸೋಮವಾರಪೇಟೆ ಫೆ.23 : ರಾಜ್ಯ ಸರ್ಕಾರಿ ನೌಕರರ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಮಾ.1ರಿಂದ ಕರೆದಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಸೋಮವಾರಪೇಟೆ ತಾಲೂಕು ಘಟಕ ಸಂಪೂರ್ಣ ಬೆಂಬಲ ನೀಡಲು ನಿರ್ಣಯ ಕೈಗೊಂಡಿದೆ ಎಂದು ತಾಲೂಕು ಘಟಕದ ಅಧ್ಯಕ್ಷ ಪ್ರದೀಪ್ ಹೇಳಿದರು. ರಾಜ್ಯ ಸರಕಾರಿ ನೌಕರರ ವೇತನ ಭತ್ಯೆ ಇದೂವರೆಗೆ ಪರಿಷ್ಕರಣೆ ಆಗಿಲ್ಲ. 6ನೇ ವೇತನ ಆಯೋಗದ ಅವಧಿ 2022ರ ಜುಲೈ 1ಕ್ಕೆ ಮುಗಿದಿದೆ. ಆದರೆ ರಾಜ್ಯದಲ್ಲಿ ಇನ್ನೂ 7ನೇ ವೇತನ ಆಯೋಗ ಜಾರಿ ಆಗಿಲ್ಲ. ಸುಮಾರು 22 ರಾಜ್ಯಗಳಲ್ಲಿ ಕಾಲಕಾಲಕ್ಕೆ ವೇತನ ಪರಿಷ್ಕರಣೆ ಆಗಿದೆ. ರಾಜ್ಯ ಅಭಿವೃದ್ಧಿಯಲ್ಲಿ ದೇಶಕ್ಕೆ 5ನೆ ಸ್ಥಾನದಲ್ಲಿದ್ದರೂ ಸರಕಾರಿ ನೌಕರರ ಹಿತ ಕಾಪಾಡಲು ಮುಂದಾಗಿಲ್ಲ. ಈ ಬಾರಿಯ ಆಯವ್ಯಯದಲ್ಲೂ ವೇತನ ಪರಿಷ್ಕರಣೆಗೆ ಹಣವನ್ನು ಮೀಸಲಿಟ್ಟಿಲ್ಲ. ಸರ್ಕಾರಿ ನೌಕರರ ಬೇಡಿಕೆಗಳನ್ನು ಪರಿಗಣಿಸಿಲ್ಲ. ಚುನಾವಣೆ ನೀತಿ ಸಂಹಿತೆ ಜಾರಿಗೆ ಮೊದಲು ಶೇ.40 ಫಿಟ್‌ಮೆಂಟ್ ಸೌಲಭ್ಯವನ್ನು ನೀಡಬೇಕು ಎಂದರು. ನೆರೆಯ ಕೇರಳ ರಾಜ್ಯದಲ್ಲಿ 11ನೇ ವೇತನ…
ಸೋಮವಾರಪೇಟೆ ಫೆ.23 : ಯಡೂರು ವೈಸಿಸಿ ಕ್ರಿಕೆಟ್ ಕ್ಲಬ್ ವತಿಯಿಂದ ಬಿಟಿಸಿಜಿ ಸರ್ಕಾರಿ ಪದವಿ ಕಾಲೇಜು ಮೈದಾನದಲ್ಲಿ ನಡೆದ 23ನೇ ವರ್ಷದ ಕ್ರಿಕೆಟ್ ಪಂದ್ಯಾಟದಲ್ಲಿ ಟೀಂ ಎಚ್.ಡಿ.ಕೆ. ತಂಡವು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಫೈನಲ್ ಪಂದ್ಯದಲ್ಲಿ ಟೀಂ ಆರ್.ಆರ್. ತಂಡವನ್ನು ಮಣಿಸಿ, ಪ್ರಶಸ್ತಿ ಮುಡಿಗೇರಿಸಿಕೊಮಡಿತು. ಆರ್.ಆರ್. ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ವಿಜೇತ ತಂಡಗಳಿಗೆ ಪ್ರಥಮ ಬಹುಮಾನವಾಗಿ 22,222ನಗದು ಸೇರಿದಂತೆ ಟ್ರೋಫಿ, ದ್ವಿತೀಯ ಬಹುಮಾನ 11,111 ನಗದು ಸೇರಿದಂತೆ ಟ್ರೋಫಿ ವಿತರಿಸಲಾಯಿತು. ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಶಾಸಕ ಅಪ್ಪಚ್ಚುರಂಜನ್, ಕಾಂಗ್ರೆಸ್ ಮುಖಂಡ ಹರಪಳ್ಳಿ ರವೀಂದ್ರ, ಗ್ರಾ.ಪಂ. ಸದಸ್ಯ ಡಿ.ಎಸ್. ಸುರೇಶ್, ಚೌಡ್ಲು ವಿಎಸ್‌ಎಸ್‌ಎನ್ ನಿರ್ದೇಶಕ ವೈ.ಎಂ. ನಾಗರಾಜು, ಪ್ರಮುಖರಾದ ಸಿ.ಡಿ. ಪ್ರವೀಣ್, ಡಿ.ಜಿ. ಮಹೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ವೈಸಿಸಿ ಕ್ರಿಕೆಟ್ ಕ್ಲಬ್ ಅಧ್ಯಕ್ಷ ಸಿ.ಎಂ. ಸುರೇಶ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾಜೀ ಸೈನಿಕ ಸಿ.ಎಂ. ಪ್ರದೀಪ್ ಮತ್ತು ಯಡೂರು ಬಿಟಿಸಿಜಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಹೆಚ್.ಎನ್. ರಾಜು ಅವರುಗಳನ್ನು ಸನ್ಮಾನಿಸಲಾಯಿತು.
ಮಡಿಕೇರಿ ಫೆ.23 : ಜಾತ್ಯತೀತ ಜನತಾದಳದಲ್ಲಿ ಉನ್ನತ ಸ್ಥಾನಗಳನ್ನು ಪಡೆದು ರಾಜಕೀಯವಾಗಿ ಬೆಳೆದ ಸಂಕೇತ್ ಪೂವಯ್ಯ ಅವರು ಇದೀಗ ಪಕ್ಷ ತೊರೆದು ಕಾಂಗ್ರೆಸ್ ಗೆ ಸೇರ್ಪಡೆಯಾಗಿರುವುದು ಸರಿಯಾದ ಕ್ರಮವಲ್ಲ. ಪಕ್ಷಾಂತರಿಗಳನ್ನು ಜನ ಎಂದಿಗೂ ನಂಬುವುದಿಲ್ಲ ಎಂದು ಜೆಡಿಎಸ್ ಪರಿಶಿಷ್ಟ ಘಟಕದ ಪ್ರಮುಖ ಹೆಚ್.ಎನ್.ಯೋಗೇಶ್ ಕುಮಾರ್ ಟೀಕಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಜೆಡಿಎಸ್ ಪಕ್ಷ ಸಂಕೇತ್ ಪೂವಯ್ಯ ಅವರಿಗೆ ಎಲ್ಲವನ್ನೂ ನೀಡಿದೆ, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸುವ ಅವಕಾಶಗಳಿತ್ತು. ಆದರೆ ದುಡುಕಿನ ನಿರ್ಧಾರದ ಮೂಲಕ ಸೋಲಿನ ಸರಮಾಲೆಯ ಕಾಂಗ್ರೆಸ್ ಪಕ್ಷವನ್ನು ಸೇರಿಕೊಂಡಿದ್ದಾರೆ. ಇದರಿಂದ ಅವರಿಗೆ ನಷ್ಟವಾಗುತ್ತದೆಯೇ ಹೊರತು ಜೆಡಿಎಸ್ ಗೆ ಯಾವುದೇ ರೀತಿಯಲ್ಲಿ ಹಿನ್ನಡೆಯಾಗುವುದಿಲ್ಲವೆಂದು ಅಭಿಪ್ರಾಯಪಟ್ಟಿದ್ದಾರೆ. ಪಕ್ಷನಿಷ್ಠೆ ಇರುವ ಕಾರ್ಯಕರ್ತರು ಇಂದಿಗೂ ಜೆಡಿಎಸ್ ಜೊತೆಯಲ್ಲಿದ್ದಾರೆ. ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿದ್ದಾಗ ಕೊಡಗು ಜಿಲ್ಲೆಯ ಸಂಕಷ್ಟಕ್ಕೆ ಪ್ರಾಮಾಣಿಕವಾಗಿ ಸ್ಪಂದಿಸಿದ್ದಾರೆ. ಮಳೆಹಾನಿ ಸಂತ್ರಸ್ತರಿಗೆ 800 ಕ್ಕೂ ಅಧಿಕ ಮನೆಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ರೈತರ ಸಾಲಮನ್ನಾ ಮಾಡಿದ್ದಾರೆ. ಇದು ಯಾವುದನ್ನೂ ಜಿಲ್ಲೆಯ ಜನ ಮರೆತಿಲ್ಲ, ಈ…
ಮಡಿಕೇರಿ ಫೆ.23 : ಚುನಾವಣಾ ಆಯೋಗದ ನಿರ್ದೇಶನದಂತೆ ವಿದ್ಯುನ್ಮಾನ ಮತಯಂತ್ರಗಳ ಪ್ರಾತ್ಯಕ್ಷಿಕೆಯನ್ನು ತಮ್ಮ ವ್ಯಾಪ್ತಿಯ ಎಲ್ಲಾ ಮತಗಟ್ಟೆಗಳಲ್ಲಿ ನಡೆಸುವಂತೆ ಸೆಕ್ಟರ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಸೂಚಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೆಕ್ಟರ್ ಅಧಿಕಾರಿಗಳ ಜೊತೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ತಮ್ಮ ಮತಗಟ್ಟೆ ವ್ಯಾಪ್ತಿಯ ಶಾಲಾ, ಕಾಲೇಜು, ಸಮುದಾಯ ಭವನಗಳಲ್ಲಿ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಿ ವಿದ್ಯುನ್ಮಾನ ಮತಯಂತ್ರ ಬಗ್ಗೆ ಮಾಹಿತಿ ನೀಡುವಂತಾಗಬೇಕು. ಸ್ಥಳೀಯ ಪ್ರತಿನಿಧಿಗಳು ಸೇರಿದಂತೆ ಸಾರ್ವಜನಿಕರಿಗೆ ಅಣಕು ಮತದಾನಕ್ಕೆ ಅವಕಾಶ ಮಾಡುವಂತೆ ಜಿಲ್ಲಾಧಿಕಾರಿ ಅವರು ತಿಳಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಮಾತನಾಡಿ ಚುನಾವಣಾ ಆಯೋಗದ ನಿರ್ದೇಶನದಂತೆ ತರಬೇತಿ ಮತ್ತು ಜಾಗೃತಿಗೆ ಬಳಸುವ ವಿದ್ಯುನ್ಮಾನ ಮತಯಂತ್ರ ಮತ್ತು ವಿವಿಪ್ಯಾಟ್‍ನ್ನು ತೆಗೆದುಕೊಂಡು ಹೋಗುವಾಗ ಮತ್ತು ಬರುವಾರ ಪೊಲೀಸ್ ಸೆಕ್ಟರ್ ಅಧಿಕಾರಿಗಳ ಭದ್ರತೆ ಪಡೆಯುವಂತೆ ಸಲಹೆ ಮಾಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್, ಚುನಾವಣಾಧಿಕಾರಿಗಳಾದ ಯತೀಶ್ ಉಳ್ಳಾಲ್, ಶಬಾನಾ ಎಂ.ಶೇಖ್, ತಹಶೀಲ್ದಾರರು, ಸೆಕ್ಟರ್ ಅಧಿಕಾರಿಗಳು ಇತರರು…






