ಮಡಿಕೇರಿ ಫೆ.24 : ದೆಹಲಿಯಲ್ಲಿ ನಡೆಯಲಿರುವ ವ್ಯಾಪಾರ ಮತ್ತು ಕೈಗಾರಿಕೋದ್ಯಮ ಕುರಿತ ರಾಷ್ಟ್ರ ಮಟ್ಟದ ವಿಚಾರ ಸಂಕಿರಣಕ್ಕೆ ಮಡಿಕೇರಿಯ ಬ್ರಹ್ಮಕುಮಾರಿ ಶಾಖೆಯ 10 ಜನರ ತಂಡ ತೆರಳುತ್ತಿದ್ದಾರೆ. ಶಾಖೆಯ ಬ್ರಹ್ಮಕುಮಾರಿ ಸಹೋದರಿ ಧನಲಕ್ಷ್ಮಿ, ರೋಹಿಣಿ, ಸುರೇಶ್ ಕಾರಂತ್, ಬೇಬೆ ಮ್ಯಾಥ್ಯು, ದೇವರಾಜ್, ಕರುಂಬಯ್ಯ, ಪ್ರೇಮ ಕರುಂಬಯ್ಯ, ದೇಚಮ್ಮ, ಕಾವೇರಮ್ಮ, ತೆರೇಸಾ ಮ್ಯಾಥ್ಯು ಅವರಿಗೆ ಬೀಳ್ಕೊಡಲಾಯಿತು. ದೆಹಲಿಯ ಓಂ ಶಾಂತಿ ರಿಟಿಡ್ ಸೆಂಟರ್‍ನಲ್ಲಿ ಬ್ರಹ್ಮಕುಮಾರಿ ಮಡಿಕೇರಿ ಶಾಖೆಯ ಜಿಲ್ಲಾ ಸಂಚಾಲಕರಾದ ಬ್ರಹ್ಮಕುಮಾರಿ ಗಾಯತ್ರಿಜೀ ಅವರ ಪ್ರೇರಣೆಯಿಂದ 3 ದಿನಗಳ ಕಾಲ ವಿಚಾರ ಸಂಕಿರಣ ನಡೆಯಲಿದೆ.
ಲೇಖಕ: admin
ಮಡಿಕೇರಿ ಫೆ.24 : ಹಝ್ರತ್ ಸೂಫಿ ಶಹೀದ್(ರ) ಮತ್ತು ಸಯ್ಯುದ್ ಹಸನ್ ಸಖಾಫ್ ಹಳ್ರಮಿ(ರ) ಮತ್ತು ಇತರ ಮಹಾನುಭಾವರ ಹೆಸರಿನಲ್ಲಿ ವರ್ಷಂಪ್ರತಿ ನಡೆಯುವ ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಮಖಾಂ ಉರೂಸ್ ಗೆ ಎಮ್ಮೆಮಾಡು ಜಮಾಅತ್ ಅಧ್ಯಕ್ಷ ಪಿ.ಎ.ಅಬೂಬಕ್ಕರ್ ಸಖಾಫಿ ಧ್ವಜಾರೋಹಣದ ಮೂಲಕ ಚಾಲನೆ ನೀಡಿದರು. ಧ್ವಜಾರೋಹಣಕ್ಕೂ ಮೊದಲು ಸಾಮೂಹಿಕ ನಮಾಜಿನ ಬಳಿಕ ದರ್ಗಾದಲ್ಲಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಉರೂಸ್‍ನ್ನು ಕೋಝಿಕೋಡ್ ಖಾಝಿಗಳಾದ ಸಯ್ಯಿದ್ ಮುಹಮ್ಮದ್ ಕೋಯ ಜಮಲುಲ್ಲೈಲಿ ತಂಙಳ್ ಅವರು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಕೊಡಗಿನ ನಾಯಿಬ್ ಖಾಝಿ ಶಾದುಲಿ ಫೈಝಿ ವಹಿಸಿದ್ದು, ಸಂಜೆ 8 ಗಂಟೆಗೆ ಶಾಫಿ ಸಖಾಫಿ ಮುಂಡಂಬ್ರ ಅವರಿಂದ ಧಾರ್ಮಿಕ ಪ್ರವಚನ ನಡೆಯಲಿದೆ. ಫೆ.25 ರಂದು ಸಯ್ಯದ್ ಅಬ್ದುಲ್ ರಹ್ನಾನ್ ಇಂಜಿಚ್ಚಿಕೋಯ ಅಲ್ ಬುಖಾರಿ ನೇತೃತ್ವದಲ್ಲಿ ದ್ಸಿಕ್‍ರ್ ಹಲ್ಖಾ ಮತ್ತು ಮತ ಪ್ರವಚನ ನಡೆಯಲಿದೆ.
ಮಡಿಕೇರಿ ಫೆ.24 : ಕನ್ನಡ ಚಲನಚಿತ್ರರಂಗದಲ್ಲಿ ಕೊಡಗಿನ ಸಾಕಷ್ಟು ಪ್ರತಿಭೆಗಳು ಗುರುತಿಸಿಕೊಂಡಿವೆ. ಕನ್ನಡವಲ್ಲದೆ ಇತರ ಭಾಷೆಯ ಚಿತ್ರಗಳಲ್ಲೂ ಕೊಡಗಿನ ಕಲಾವಿದರು ತಮ್ಮ ಛಾಪು ಮೂಡಿಸಿದ್ದಾರೆ. ಇದೀಗ ಕೊಡಗಿನ ಯುವಕನೋರ್ವ ಸಿನಿಮಾ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದು, ಆತ ನಟಿಸಿ ನಿರ್ದೇಶಿಸಿರುವ ನಾಕುಮುಖ ಎಂಬ ಕನ್ನಡ ಚಲನಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಮೂರ್ನಾಡು ಐಕೋಳ ಗ್ರಾಮದ ಎಂ.ಎಂ. ಗೋಪಾಲ್, ಎಂ.ಜಿ. ಶೀಲಾವತಿ ದಂಪತಿಯ ಪುತ್ರನಾದ ಕುಶಾನ್ ಗೌಡ ಕಥೆ, ಸಾಹಿತ್ಯ ಬರೆದು ನಾಕುಮುಖ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಹಾರರ್ ಸಸ್ಪೆನ್ಸ್, ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿರುವ ಈ ಚಿತ್ರದ ನಿರ್ಮಾಪಕರೂ ಕೂಡ ಕೊಡಗಿನವರೇ ಆಗಿದ್ದಾರೆ. ಸಿದ್ದಾಪುರ ಕರಡಿಗೋಡಿನ ಎಂ.ಎಸ್. ರಾಘವಯ್ಯ, ಎಂ.ಆರ್. ಲಲಿತಾ ದಂಪತಿಯ ಪುತ್ರ ದರ್ಶನ್ ರಾಘವಯ್ಯ ಈ ಚಿತ್ರದ ನಿರ್ಮಾಪಕರಾಗಿದ್ದು, ಸುಮಾರು 80 ಲಕ್ಷ ವೆಚ್ಚದಲ್ಲಿ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ನಿಗೂಢವಾಗಿ ನಡೆಯುವ ಒಂದು ಕೊಲೆಯನ್ನು ಭೇದಿಸಲು ಓರ್ವ ಪತ್ರಕರ್ತ ಹಾಗೂ ಪೊಲೀಸ್ ಅಧಿಕಾರಿ ಪ್ರಯತ್ನಿಸುತ್ತಾರೆ. ಆಗ ಏನೆಲ್ಲಾ ಘಟನೆಗಳು ಎದುರಾಗಲಿದೆ ಎಂಬುದೇ ಚಿತ್ರದ…
ಮಡಿಕೇರಿ ಫೆ.24 : ಕಳೆದ ಮೂರೂವರೆ ವರ್ಷಗಳಿಂದ ಜೆಡಿಎಸ್ ಜಿಲ್ಲಾಧ್ಯಕ್ಷನಾಗಿ ಪಕ್ಷದ ಏಳಿಗೆಗಾಗಿ ಶ್ರಮಿಸುತ್ತಿದ್ದೇನೆ. ಪಕ್ಷ ಸಂಘಟನೆಯನ್ನು ಸಹಿಸದ ಕೆಲವರು ತಾನು ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್‍ಗೆ ಸೇರ್ಪಡೆಯಾಗುತ್ತೇನೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಹೆಚ್.ಡಿ.ಕುಮಾರಸ್ವಾಮಿ ಅವರ ಮಾರ್ಗದರ್ಶನದಲ್ಲಿ, ಪಕ್ಷದ ಸಿದ್ಧಾಂತಗಳಿಗೆ ಬದ್ಧನಾಗಿದ್ದೇನೆ. ಯಾವುದೇ ಕಾರಣಕ್ಕು ಪಕ್ಷ ಬಿಡುವುದಿಲ್ಲ, ಈ ಬಗ್ಗೆ ಕಾರ್ಯಕರ್ತರಲ್ಲಿ ಗೊಂದಲ ಬೇಡ ಹೆಚ್.ಡಿ.ಕುಮಾರಸ್ವಾಮಿ ಅವರು ಮತ್ತೆ ಮುಖ್ಯಮಂತ್ರಿಯಾಗಬೇಕೆನ್ನುವ ಚಿಂತನೆಯಡಿ ಎಲ್ಲರೂ ಕಾರ್ಯಕರ್ತರಂತೆ ಶ್ರಮವಹಿಸಿ ಜೆಡಿಎಸ್ ಗೆಲುವಿಗಾಗಿ ಶ್ರಮಿಸುತ್ತಿದ್ದೇವೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಸ್ಪಷ್ಟಪಡಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ತೊರೆದಿರುವ ಸಂಕೇತ್ ಪೂವಯ್ಯ ಅವರು ಬಿಜೆಪಿಯನ್ನು ಮಣಿಸಲು ಜಾತ್ಯತೀತರೆಲ್ಲ ಒಂದಾಗಿರಬೇಕೆನ್ನುವ ಕಾರಣದಿಂದ ಕಾಂಗ್ರೆಸ್‍ಗೆ ಸೇರ್ಪಡೆಯಾಗಿರುವುದಾಗಿ ಕಾರಣ ನೀಡಿದ್ದಾರೆ. ಕಾಂಗ್ರೆಸ್ ನಲ್ಲಿ ನಿಜವಾದ ಜಾತ್ಯತೀತತೆ ಇದ್ದರೆ ವಿರಾಜಪೇಟೆಯಲ್ಲಿ ಅಲ್ಪಸಂಖ್ಯಾತರು, ಪರಿಶಿಷ್ಟರು ಅಥವಾ ಹಿಂದುಳಿದ ವರ್ಗದವರಿಗೆ ಟಿಕೆಟ್ ನೀಡಿ ಅದನ್ನು ಸಾಬೀತುಪಡಿಸಲಿ. ಸಂಕೇತ್ ಅವರ ನಿರ್ಗಮನ ಬೇಸರ ತಂದಿದೆ, ಜೆಡಿಎಸ್ ಪಕ್ಷ ಅವರಿಗೆ ಎಲ್ಲಾ ಸ್ಥಾನಮಾನಗಳನ್ನು ನೀಡಿ…
ಮಡಿಕೇರಿ ಫೆ.24 : ಜಾತ್ಯತೀತ ಮುಖವಾಡದ ಕಾಂಗ್ರೆಸ್ ಪಕ್ಷ ವಿರಾಜಪೇಟೆ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಿಗೆ ಸ್ಪರ್ಧಿಸಲು ಟಿಕೆಟ್ ನೀಡಿದರೆ ಜಾತ್ಯತೀತ ಜನತಾದಳ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಬೆಂಬಲ ಸೂಚಿಸಲಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ಮಾಡುತ್ತಲೆ ಬರುತ್ತಿರುವ ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರಿಗೆ ಸ್ಪರ್ಧಿಸಲು ಅವಕಾಶ ನೀಡದೆ ವಂಚಿಸುತ್ತಲೇ ಬರುತ್ತಿದೆ. ಆದರು ನಮ್ಮದು ‘ಜಾತ್ಯತೀತ’ ಸಿದ್ಧಾಂತದ ಪಕ್ಷ ಎಂದು ಹೇಳಿಕೊಳ್ಳುತ್ತಿದೆ. ನಿಜವಾದ ಜಾತ್ಯತೀತ ಮನೋಭಾವ ಕಾಂಗ್ರೆಸ್ಸಿಗಿದ್ದರೆ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿರುವ ವಿರಾಜಪೇಟೆ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಿಗೆ ಸ್ಪರ್ಧಿಸಲು ಅವಕಾಶ ನೀಡಲಿ ಎಂದು ಸವಾಲೆಸೆದರು. ಒಂದು ವೇಳೆ ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಜೆಡಿಎಸ್ ಸ್ಪರ್ಧೆಯಿಂದ ಹಿಂದೆ ಸರಿದು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಲಿದೆ. ಪ್ರತಿ ಚುನಾವಣಾ ಹಂತದಲ್ಲಿ ಜೆಡಿಎಸ್ ಸ್ಪರ್ಧೆ ಬಿಜೆಪಿ ಗೆಲುವಿಗೆ ಸಹಕಾರಿಯಾಯಿತು ಎನ್ನುವ ಆರೋಪವನ್ನು ಕಾಂಗ್ರೆಸ್ ಮಾಡುತ್ತಿದೆ. ವಿರಾಜಪೇಟೆ ಕ್ಷೇತ್ರದಲ್ಲಿ 45 ಸಾವಿರಕ್ಕು ಹೆಚ್ಚಿನ ಮುಸ್ಲಿಂ ಬಾಂಧವರಿದ್ದು, ಈ ಬಾರಿ ಅಲ್ಪಸಂಖ್ಯಾತರಿಗೆ ಸ್ಪರ್ಧೆಗೆ…
ಶ್ರೀ ಗುರು ಮರುಳ ಸಿದ್ದೇಶ್ವರ ಸ್ವಾಮಿ ದೇವಾಲಯವು ಹಾಸನ ಜಿಲ್ಲೆಯ ಅರಸೀಕೆರೆ ತಾಲೋಕಿನ ಕಣಕಟ್ಟೆ ಹೋಬಳಿಯ ಕಲ್ಗುಂಡಿಯಲ್ಲಿ ಇದೆ. ಈ ದೇವಾಲಯದಲ್ಲಿ ನಾಲ್ಕು ಪ್ರಮುಖವಾದ ದೇವರುಗಳನ್ನು ಪೂಜಿಸಲಾಗುತ್ತದೆ. ಶ್ರೀ ಗುರು ಮರುಳ ಸಿದ್ದೇಶ್ವರ ಸ್ವಾಮಿ, ಶ್ರೀ ರಾಮ, ಶ್ರೀ ಜಟ್ಟಿಲಿಂಗೇಶ್ವರ ಸ್ವಾಮಿ, ಶ್ರೀ ಕೆಂಚಾಂಬ ದೇವಿ. ಈ ದೇವಸ್ಥಾನದಲ್ಲಿ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಸ್ವಾಮಿಯ ಪೂಜಾ ಕಾರ್ಯಕ್ರಮಗಳು ನಡೆಯುತ್ತವೆ. ಪ್ರತಿ ಸೋಮವಾರ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಇರುತ್ತವೆ. ಶ್ರೀ ಗುರು ಮರುಳ ಸಿದ್ದೇಶ್ವರ ಸ್ವಾಮಿಗೆ ಅಭಿಷೇಕ ಮತ್ತು ವಿಶೇಷಹೂವಿನ ಅಲಂಕಾರವನ್ನು ಮಾಡಲಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುತ್ತಾರೆ. ಪ್ರತಿ ವರ್ಷ ಯುಗಾದಿ ಹಬ್ಬದ ದಿನದಿಂದ ಶ್ರೀ ರಾಮದೇವರ ಜಾತ್ರಮಹೋತ್ಸವ ಪ್ರಾರಂಭವಾಗುತ್ತದೆ.ಯುಗಾದಿ ಹಬ್ಬದ ದಿನ ಗಂಗಾಪೂಜೆಯನ್ನು ಮಾಡಿ, ದೇವಾಸ್ಥಾನಕ್ಕೆ ಶ್ರೀ ರಾಮದೇವರ ಉತ್ಸವದೊಂದಿಗೆ ಗಂಗೆಯನ್ನು ತರಲಾಗುತ್ತದೆ . ಈ ಹಬ್ಬದ ದಿನದಿಂದ ಶ್ರೀ ಗುರು ಮರುಳ ಸಿದ್ದೇಶ್ವರ ಸ್ವಾಮಿ ಮತ್ತು ಶ್ರೀ ರಾಮದೇವರಿಗೆ ವಿಶೇಷ ಅಭಿಷೇಕ ಮತ್ತು ಪೂಜೆಗಳು ನಡೆಯುತ್ತವೆ.…
ಬಿಳಿಕಲ್ ರಂಗನಾಥ ಸ್ವಾಮಿ ಬೆಟ್ಟವು ಭಾರತದ ಕರ್ನಾಟಕ ಕನಕಪುರ ಪಟ್ಟಣದ ಸಮೀಪವಿರುವ ಬೆಟ್ಟವಾಗಿದೆ. ಇದು ಬೆಂಗಳೂರು ನಗರದ ದಕ್ಷಿಣಕ್ಕೆ 70ಕಿಲೋ ಮೀಟರ್ ಹಾಗೂ ಕನಕಪುರ ತಾಲೂಕಿನಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿದೆ. ಬೆಟ್ಟದ ಮೇಲೆ ರಂಗನಾಥ ಸ್ವಾಮಿಯ ದೇವಸ್ಥಾನವಿದೆ. ಪಕ್ಕದಲ್ಲಿ ಬೃಹತ್ ಗ್ರಾನೈಟ್ ಬಂಡೆಯ ಸಾಲುಗಳಿವೆ. ಈ ದೇವಾಲಯವು ದೊಡ್ಡದಾದ ಗ್ರಾನೈಟ್ ಬಂಡೆಯ ಕೆಳಗೆ ಇದೆ. ಈ ಬೆಟ್ಟವನ್ನು ಬಿಳಿಕಲ್ ಬೆಟ್ಟ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಏಕೆಂದರೆ ಬೆಟ್ಟದ ಸಮೀಪವಿರುವ ಬಿಳಿಕಲ್ಲುಗಳು ಬಹಳ ದೂರದಿಂದಲೇ ಕಾಣಿಸುತ್ತದೆ. ಈ ಶಿಖರವು 3780ಅಡಿ (1152 ಮೀ) ಎತ್ತರದಲ್ಲಿದೆ. ಜೀವವೈವಿಧ್ಯ :: ಬಿಳಿಕಲ್ ರಂಗಸ್ವಾಮಿ ಬೆಟ್ಟವು ಅರಣ್ಯ ಮೀಸಲು ಪ್ರದೇಶಕ್ಕೆ ಸೇರಿದ್ದು ಹಾಗೂ ಪೊದೆಸಸ್ಯ/ಕುರುಚಲು ಗಿಡಗಳಿಂದ ಕೂಡಿದೆ. ಈ ಕಾಡುಗಳಲ್ಲಿ ಆನೆಗಳು ಮತ್ತು ಇತರೆ ವನ್ಯಜೀವಿ ಪ್ರಾಣಿಗಳನ್ನು ಕಾಣಬಹುದು. ಸಮೃದ್ಧ ಸಸ್ಯವರ್ಗ ಎತ್ತರವಾದ ಬೆಟ್ಟಗಳ ವಿಶಿಷ್ಟವಾಗಿದೆ. ವಿಶೇಷವಾಗಿ ಮಳೆಗಾಲದ ನಂತರ ಇಲ್ಲಿನ ಸಸ್ಯವರ್ಗವು ಸಾಕಷ್ಟು ದಟ್ಟವಾಗಿರುತ್ತದೆ. ಈ ಕಾಡುಗಳು ಸ್ಥಳೀಯವಾಗಿರುವ ವನ್ಯಜೀವಿಗಳಿಗೆ ಮತ್ತು ಪಕ್ಕದ ಕಾಡುಗಳಿಂದ…
ಕೊತ್ತುಂಬರಿ (ಕೋರಿಯಾಂಡರ್ ಸ್ಯಾಟಿವಮ್ ) ಎನ್ನುವುದು ಏಪಿಯಾಸಿಯೇ ಕುಟುಂಬದ ವಾರ್ಷಿಕ ಬೆಳವಣಿಗೆಯ ಔಷಧೀಯ ಸಸ್ಯವಾಗಿದೆ. ಸಸ್ಯದ ಎಲ್ಲಾ ಭಾಗಗಳು ಸೇವಿಸುವಂತಹುದಾಗಿದೆ. ಆದರೆ ಅಡುಗೆಯಲ್ಲಿ ಬಹು ಸಾಮಾನ್ಯವಾಗಿ ಹಸಿ ಎಲೆಗಳು ಮತ್ತು ಒಣಗಿದ ಬೀಜಗಳ ಭಾಗಗಳನ್ನು ಬಳಸಲಾಗುತ್ತದೆ. ಕೊತ್ತುಂಬರಿಯನ್ನು ಮಧ್ಯ ಪ್ರಾಚ್ಯ, ಮಧ್ಯ ಏಷ್ಯಾ, ಮೆಡಿಟರೇನಿಯನ್, ಭಾರತ, ದಕ್ಷಿಣ ಏಷ್ಯಾ, ಮೆಕ್ಸಿಕನ್, ಟೆಕ್ಸಾನ್, ಲ್ಯಾಟಿನ್ ಅಮೇರಿಕನ್, ಚೈನೀಸ್, ಆಫ್ರಿಕನ್ ಮತ್ತು ಆಗ್ನೇಯ ಏಷ್ಯಾ ಪ್ರದೇಶದ ಖಾದ್ಯಗಳಲ್ಲಿ ಸಾಮಾನ್ಯವಾಗಿ ಬಳಸಲಾಗುತ್ತದೆ. ಆರೋಗ್ಯದ ಪರಿಣಾಮಗಳು ಮತ್ತು ವೈದ್ಯಕೀಯ ಬಳಕೆಗಳು ಇತರ ಅನೇಕ ಉಪಜಾತಿಯ ಸಸ್ಯಗಳಂತೆ ಕೊತ್ತುಂಬರಿಯು ಆಂಟಿಆಕ್ಸಿಡಾಂಟ್ಗಳನ್ನು ಒಳಗೊಂಡಿದ್ದು, ಇದನ್ನು ಈ ಸಾಂಬಾರು ಪದಾರ್ಥದೊಡನೆ ಮಿಶ್ರ ಮಾಡಿದಲ್ಲಿ ಆಹಾರ ವಸ್ತುಗಳ ಹಾಳಾಗುವಿಕೆಯನ್ನು ತಪ್ಪಿಸುತ್ತದೆ ಅಥವಾ ವಿಳಂಬಗೊಳಿಸುತ್ತದೆ. ಎಲೆಗಳು ಮತ್ತು ಬೀಜಗಳೆರಡೂ ಆಂಟಿಆಕ್ಸಿಡಾಂಟ್‌ಗಳನ್ನು ಒಳಗೊಂಡಿರುವುದಾಗಿ, ಆದರೆ ಎಲೆಗಳು ಹೆಚ್ಚು ಬಲವಾದ ಪರಿಣಾಮವನ್ನು ಹೊಂದಿರುವುದಾಗಿ ಅಧ್ಯಯನದಲ್ಲಿ ಕಂಡು ಬಂದಿದೆ. ಕೊತ್ತುಂಬರಿ ಎಲೆಗಳಿಂದ ಪಡೆದ ರಾಸಾಯನಿಕಗಳು ಸಾಲ್ಮೋನೆಲ್ಲಾ ಕೋಲೆರಾಸೂಸ್ ವಿರುದ್ಧ ಬ್ಯಾಕ್ಟ್ರೀರಿಯಾ ನಿರೋಧಕ ಚಟುವಟಿಕೆಯನ್ನು ಹೊಂದಿರುವುದಾಗಿ ಕಂಡು ಬಂದಿದ್ದು, ಮತ್ತು…
ಬೇಕಾಗುವ ಪದಾರ್ಥಗಳು : ಚಿಕನ್ ಕೈಮಾ – 250 ಗ್ರಾಂ, ಬೆಳ್ಳುಳ್ಳಿ ಪೇಸ್ಟ್ – 1 ಚಮಚ, ಶುಂಠಿ ಪೇಸ್ಟ್ – 1 ಚಮಚ, ಕಾಳು ಮೆಣಸಿನ ಪುಡಿ – ಕಾಲು ಚಮಚ, ಅಚ್ಚ ಖಾರದ ಪುಡಿ – ಕಾಲು ಚಮಚ, ಉಪ್ಪು – ಕಾಲು ಚಮಚ, ಗರಂ ಮಸಾಲೆ ಪುಡಿ – ಅರ್ಧ ಚಮಚ, ದನಿಯಾ ಪುಡಿ – 1 ಚಮಚ, ನಿಂಬೆ ರಸ – ಸ್ವಲ್ಪ, ಕಡಲೆ ಹಿಟ್ಟು – 2 ಚಮಚ, ಮೈದಾ ಹಿಟ್ಟು – 2 ಚಮಚ, ಉಪ್ಪು – ಕಾಲು ಚಮಚ, ಎಣ್ಣೆ – ಕರಿಯಲು ಅಗತ್ಯವಿದ್ದಷ್ಟು ಮಾಡುವ ವಿಧಾನ : ಮೊದಲಿಗೆ ಒಂದು ಪಾತ್ರೆಯಲ್ಲಿ ಚಿಕನ್ ಅನ್ನು ತೆಗೆದುಕೊಂಡು, ಅದಕ್ಕೆ ಶುಂಠಿ ಹಾಗೂ ಬೆಳ್ಳುಳ್ಳಿ ಪೇಸ್ಟ್ ಹಾಕಿ, ಚೆನ್ನಾಗಿ ಮಿಶ್ರಣ ಮಾಡಿ. ಈಗ ಕಾಳು ಮೆಣಸಿನ ಪುಡಿ, ಅಚ್ಚ ಖಾರದ ಪುಡಿ, ಉಪ್ಪು, ಗರಂ ಮಸಾಲೆ, ದನಿಯಾ ಪುಡಿ, ನಿಂಬೆ ರಸ ಹಾಕಿ…
ವಿರಾಜಪೇಟೆ ಫೆ.24 : ಗ್ರಾಮಾಭಿವೃದ್ಧಿ ಯೋಜನೆಯಿಂದ ಕೆರೆಗಳ ಪುನಶ್ಚೇತನಗೊಳಿಸುವ ಕಾರ್ಯ ಯಶಸ್ವಿಯಾಗಿರುವುದರಿಂದ ರಾಜ್ಯ ಸರಕಾರ ಮೆಚ್ಚುಗೆ ವ್ಯಕ್ತಪಡಿಸಿದ ಹಿನ್ನಲೆ ಜನರಿಗೆ ನೀರಿನ ಸಮಸ್ಯೆಯಾಗದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯು ಹಳೆಯ ಕೆರೆಗಳನ್ನು ಅಭಿವೃದ್ಧಿಗೊಳಿಸುವ ಕಾರ್ಯ ಕೈಗೊಳ್ಳಲಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಲೀಲಾವತಿ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಿರಾಜಪೇಟೆ ಪುರಸಭೆ ವ್ಯಾಪ್ತಿಯ ಶಿವಕೇರಿಯಲ್ಲಿರುವ ಅಕ್ಕಚ್ಚಮ್ಮನ ಕೆರೆಯ ಅಭಿವೃದ್ಧಿ ”454 ನೇ ನಮ್ಮೂರ ನಮ್ಮ ಕೆರೆ” ಪುನಶ್ಚೇತನಗೊಳಿಸುವ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ ಡಾ. ಡಿ.ವಿರೇಂದ್ರ ಹೆಗ್ಗಡೆಯವರು ಈ ಹಿಂದೆ ಕೆರೆ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಿದ್ದರು. ಅಂದಿನಿಂದಲು ರಾಜ್ಯದ ಎಲ್ಲೆಡೆ ಕೆರೆಗಳ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಸುಮಾರು 46 ವರ್ಷಗಳಿಂದ 150ಕ್ಕೂ ಹೆಚ್ಚು ಯೋಜನೆಗಳನ್ನು ಪ್ರಾರಂಭಿಸಿ ಭತ್ತ ಬೆಳೆಯುವ ಯಂತ್ರದ ಉಪಕರಣಗಳು, ಗ್ರಾಮೀಣ ಪ್ರದೇಶದ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ವಿದ್ಯಾರ್ಥಿವೇತನ, ಸರಕಾರಿ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದ್ದಲ್ಲಿ ಸಹಾಯ, ದೇವಸ್ಥಾನ ಜೀರ್ಣೋದ್ದಾರ, ಹಿಂದೂ ರುದ್ರಭೂಮಿ ಅಭಿವೃದ್ಧಿ…






