ಮಡಿಕೇರಿ ಜ.21 : ನಿವೃತ್ತ ರಾಜ್ಯ ಸರ್ಕಾರಿ ನೌಕರರ ‘ಪಿಂಚಣಿ ಅದಾಲತ್’ ಜ.24 ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ.
ಲೇಖಕ: admin
ಕುಶಾಲನಗರ ಜ.21 : 12ನೇ ಶತಮಾನದ ವಚನಕಾರರಲ್ಲಿ ಶಿವಶರಣ ಅಂಬಿಗರ ಚೌಡಯ್ಯ ವಿಭಿನ್ನರೀತಿಯ ವಚನ ಸಾಹಿತ್ಯಕ್ಕೆ ಹೆಗ್ಗಳಿಕೆ ಪಡೆದ ಮಹಾನ್ ಸಂತ. ಇತರೆ ವಚನಕಾರರಿಗಿಂತ ಭಿನ್ನ ಹಾಗೂ ವಿಶಿಷ್ಟ ವ್ಯಕ್ತಿತ್ವ ಇವರದು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಮಿತಿ ನಿರ್ದೇಶಕ ಎಂ.ಎನ್ ವೆಂಕಟನಾಯಕ್ ಹೇಳಿದರು. ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕುಶಾಲನಗರ ತಾಲೂಕಿನ ಕೂಡಿಗೆ ಕ್ಲಸ್ಟರ್ ವ್ಯಾಪ್ತಿಯ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಶಿವಶರಣ ಅಂಬಿಗರ ಚೌಡಯ್ಯರ ಜನ್ಮ ದಿನಾಚರಣೆಯಲ್ಲಿ ಸಂಕ್ಷಿಪ್ತ ಜೀವನ ಚರಿತ್ರೆಯನ್ನು ಸಭೆಗೆ ತಿಳಿಸಿದರು. ಬಸವಣ್ಣನವರ ಅನುಭವ ಮಂಟಪದಲ್ಲಿ ಸಮಾನ ಭೂಮಿಕೆಯಲ್ಲಿ ಸ್ಥಾನ ಪಡೆದು ಕಾಯಕವೇ ಕೈಲಾಸ ಎಂಬ ತತ್ತ್ವದಡಿ ನಡೆದು ಬಂದ ವ್ಯಕ್ತಿ ಹಾಗೂ ಆಚಾರ-ವಿಚಾರಗಳಲ್ಲಿ ದ್ವಂದ್ವ ಬದುಕನ್ನು ಸಾಗಿಸುವವರ ವಿರುದ್ಧ ಧ್ವನಿ ಎತ್ತಿದ ಮಹಾನ್ ಚೇತನ ಎಂದರು. ಅಂಬಿಗರ ಚೌಡಯ್ಯ ಭಾವಸಾಗರವನ್ನು ದಾಟಿಸುವ ಅಂಬಿಗ ಎಂಬ ಹೆಗ್ಗಳಿಕೆ ಪಡೆದ ಮಹಾನ್ ವ್ಯಕ್ತಿ. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಢಿಸಿಕೊಂಡು ಬದುಕು ಹಸನಾಗಿಸಿಕೊಳ್ಳಬೇಕಿದೆ…
ಮಡಿಕೇರಿ ಜ.21 : ಗೌರವಾನ್ವಿತ ಉಪ ಲೋಕಾಯುಕ್ತ ನ್ಯಾಯಮೂರ್ತಿಗಳಾದ ಕೆ.ಎನ್.ಫಣೀಂದ್ರ ಅವರು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ, ಕುಂದುಕೊರತೆ ಆಲಿಸಿದರು. ಅಹವಾಲು ಸ್ವೀಕಾರಕ್ಕೂ ಮೊದಲು ಮಾತನಾಡಿದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರು ಭಾರತ ಸಂವಿಧಾನವು ಪ್ರಜೆಗಳಿಗೆ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳನ್ನು ನೀಡಿದ್ದು, ಸಂವಿಧಾನದ ಆಶೋತ್ತರ ಮತ್ತು ಆಶಯಗಳನ್ನು ಅರ್ಥಮಾಡಿಕೊಂಡು ಸಮಾಜದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು. ಭಾರತದ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಜೀವಿಸುವ ಹಕ್ಕು ಇದೆ. ರಾಷ್ಟ್ರಕವಿ ಕುವೆಂಪು ಹೇಳಿರುವಂತೆ ‘ಎಲ್ಲರಿಗೂ ಸಮಪಾಲು, ಎಲ್ಲರಿಗೂ ಸಮಬಾಳು’ ಇದೆ. ಆದ್ದರಿಂದ ಸರ್ಕಾರದ ಯೋಜನೆಗಳು ಕಟ್ಟಕಡೆಯ ಜನರಿಗೆ ತಲುಪಬೇಕು. ಎಲ್ಲರೂ ಸರಿಸಮಾನವಾಗಿ ಬದುಕು ನಡೆಸುವಂತಾಗಬೇಕು ಎಂದು ಕೆ.ಎನ್.ಫಣೀಂದ್ರ ನುಡಿದರು. ಪ್ರತಿಯೊಬ್ಬರೂ ಸಮೃದ್ಧಿಯ ಜೀವನ ನಡೆಸುವಂತಾಗಬೇಕು. ಮೂಲಭೂತ ಹಕ್ಕುಗಳನ್ನು ಪಡೆಯುವುದರ ಜೊತೆಗೆ ಕರ್ತವ್ಯ ಪಾಲಿಸುವುದನ್ನು ಮರೆಯಬಾರದು ಎಂದರು. ಸಂವಿಧಾನದಲ್ಲಿ ಶಾಸಕಾಂಗ ಕಾನೂನು ಜಾರಿ ಮಾಡಿದರೆ, ಕಾರ್ಯಾಂಗ ಅನುಷ್ಠಾನಗೊಳಿಸಲಿದೆ. ನ್ಯಾಯಾಂಗವು ಕಾನೂನನ್ನು ಸಂರಕ್ಷಣೆ ಮಾಡುತ್ತದೆ. ಜೊತೆಗೆ ಮಾಧ್ಯಮ ರಂಗವು ಸಮಾಜಕ್ಕೆ ಆಗಬೇಕಿರುವ…
ಕುಶಾಲನಗರ ಜ.21 : 12ನೇ ಶತಮಾನದ ವಚನಕಾರರಲ್ಲಿ ಶಿವಶರಣ ಅಂಬಿಗರ ಚೌಡಯ್ಯ ವಿಭಿನ್ನರೀತಿಯ ವಚನ ಸಾಹಿತ್ಯಕ್ಕೆ ಹೆಗ್ಗಳಿಕೆ ಪಡೆದ ಮಹಾನ್ ಸಂತ. ಇತರೆ ವಚನಕಾರರಿಗಿಂತ ಭಿನ್ನ ಹಾಗೂ ವಿಶಿಷ್ಟ ವ್ಯಕ್ತಿತ್ವ ಇವರದು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಮಿತಿ ನಿರ್ದೇಶಕ ಎಂ.ಎನ್ ವೆಂಕಟನಾಯಕ್ ಹೇಳಿದರು. ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕುಶಾಲನಗರ ತಾಲೂಕಿನ ಕೂಡಿಗೆ ಕ್ಲಸ್ಟರ್ ವ್ಯಾಪ್ತಿಯ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಶಿವಶರಣ ಅಂಬಿಗರ ಚೌಡಯ್ಯರ ಜನ್ಮ ದಿನಾಚರಣೆಯಲ್ಲಿ ಸಂಕ್ಷಿಪ್ತ ಜೀವನ ಚರಿತ್ರೆಯನ್ನು ಸಭೆಗೆ ತಿಳಿಸಿದರು. ಬಸವಣ್ಣನವರ ಅನುಭವ ಮಂಟಪದಲ್ಲಿ ಸಮಾನ ಭೂಮಿಕೆಯಲ್ಲಿ ಸ್ಥಾನ ಪಡೆದು ಕಾಯಕವೇ ಕೈಲಾಸ ಎಂಬ ತತ್ತ್ವದಡಿ ನಡೆದು ಬಂದ ವ್ಯಕ್ತಿ ಹಾಗೂ ಆಚಾರ-ವಿಚಾರಗಳಲ್ಲಿ ದ್ವಂದ್ವ ಬದುಕನ್ನು ಸಾಗಿಸುವವರ ವಿರುದ್ಧ ಧ್ವನಿ ಎತ್ತಿದ ಮಹಾನ್ ಚೇತನ ಎಂದರು. ಅಂಬಿಗರ ಚೌಡಯ್ಯ ಭಾವಸಾಗರವನ್ನು ದಾಟಿಸುವ ಅಂಬಿಗ ಎಂಬ ಹೆಗ್ಗಳಿಕೆ ಪಡೆದ ಮಹಾನ್ ವ್ಯಕ್ತಿ. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಢಿಸಿಕೊಂಡು ಬದುಕು ಹಸನಾಗಿಸಿಕೊಳ್ಳಬೇಕಿದೆ…
ಮಡಿಕೇರಿ ಜ.21 : ಮದೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಜ.26 ರಂದು ಗಣರಾಜ್ಯೋತ್ಸವ ದಿನಾಚರಣೆ ಹಾಗೂ ಯೋಧ ವಂದನಾ ಕಾರ್ಯಕ್ರಮ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಧನಂಜಯ ಅಗೋಳಿಕಜೆ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮದೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಅಂದು ಬೆಳಗ್ಗೆ 9 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ 150ಕ್ಕೂ ಹೆಚ್ಚು ಹಾಲಿ ಹಾಗೂ ಮಾಜಿ ಸೈನಿಕರನ್ನು ಸನ್ಮಾನಿಸಿ ಗೌರವಿಸಲಾಗುವುದು, ಹಾಲಿ ಸೈನಿಕರು ಸೇವೆಯಲ್ಲಿದ್ದರೆ ಅವರ ಕುಟುಂಬದ ಸದಸ್ಯರನ್ನು ಸನ್ಮಾನಿಸಲಾಗುವುದು ಎಂದು ಹೇಳಿದ್ದಾರೆ. ಭಾರತ ದೇಶ ಇಂದು ಬಲಿಷ್ಠ ಮತ್ತು ಸುರಕ್ಷಿತವಾಗಿರಲು ಗಡಿ ಕಾಯುವ ಯೋಧರೇ ಕಾರಣಕರ್ತರಾಗಿದ್ದಾರೆ, ಇವರನ್ನು ಗೌರವಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ಕಾರಣದಿಂದ ವಿನೂತನ ಪ್ರಯತ್ನವಾಗಿ ಮದೆ ಸಹಕಾರ ಸಂಘದ ವ್ಯಾಪ್ತಿಗೆ ಒಳಪಡುವ ನಾಲ್ಕು ಗ್ರಾಮಗಳಲ್ಲಿರುವ 150 ಕ್ಕೂ ಹೆಚ್ಚು ಸೈನಿಕರನ್ನು ಗುರುತಿಸಿ ಸನ್ಮಾನಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ತಮ್ಮ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ…
ನಾಪೋಕ್ಲು ಜ.21 : ಕೊಡಗಿನ ಆದಿ ಗ್ರಂಥ ಪಟ್ಟೋಳೆ ಪಳಮೆಯನ್ನು ಆಧರಿಸಿದ ಪೌರಾಣಿಕ ಕೊಡವ ಚಲನಚಿತ್ರ ”ಕಲ್ಲಕೆರೆ ಮಾದೇವಿ” ಜ.23 ರಂದು ಕೋಕೇರಿಯ ಮಹಿಳಾ ಸಮಾಜದಲ್ಲಿ ಬಿಡುಗಡೆ ಆಗಲಿದೆ ಎಂದು ಚಿತ್ರದ ನಿರ್ದೇಶಕರಾದ ಬಾಳೆಯಡ ಪ್ರತಿಷ್ ಪೂವಯ್ಯ ಹಾಗೂ ಆಚೆಯಡ ಗಗನ್ ಗಣಪತಿ ತಿಳಿಸಿದರು. ನಾಪೋಕ್ಲುವಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಲ್ಲಕೆರೆ ಮಾದೇವಿ ಪೌರಾಣಿಕ ಕೊಡವ ಚಲನಚಿತ್ರ ಜ.23 ರಂದು ಬಿಡುಗಡೆ ಆಗಲಿದ್ದು, ಸಾರ್ವಜನಿಕರಿಗೆ ಮೂರು ಪ್ರದರ್ಶನಗಳಿವೆ. ಮಧ್ಯಾಹ್ನ 2 ಗಂಟೆಗೆ 4:30ಕ್ಕೆ ಹಾಗೂ 6.30 ಕ್ಕೆ ಚಿತ್ರ ಪ್ರದರ್ಶನಗೊಳ್ಳಲಿದೆ. 600 ವರ್ಷದ ಹಳೆಯ ಕಥೆಯನ್ನು ಹೊಂದಿರುವ ಚಲನಚಿತ್ರವು ಜನರನ್ನು ಆಕರ್ಷಿಸಲಿದೆ ಎಂದರು. ಪಟ್ಟಡ ರೀನಾ ಪ್ರಕಾಶ್ ನಿರ್ಮಿಸಿರುವ ಈ ಚಲನಚಿತ್ರದಲ್ಲಿ ಆರ್. ಉಮೇಶ್ ಸಹ ನಿರ್ಮಾಪಕರಾಗಿದ್ದಾರೆ. ಮುಖ್ಯ ಪಾತ್ರಧಾರಿಗಳಾಗಿ ಕೋಪುಡ ದೇಚ್ನಾ ದೇಚಮ್ಮ, ಚೆರುವಾಳಂಡ ರಾಕೇಶ್, ಮುಂಡಚಾಡಿರಾ ರಿಮ್ಮಿ ಭರತ್, ಚೇನಂಡ ಗಿರೀಶ್, ಮಳ್ಳಮಡ ಶ್ಯಾಮಲ ಹಾಗೂ ವಿಶೇಷ ಪ್ರತಿಭಾವಂತ ಕಲಾವಿದರು ನಟಿಸಿದ್ದಾರೆ. ಸಾರ್ವಜನಿಕರು ಚಲನಚಿತ್ರವನ್ನು ವೀಕ್ಷಿಸಿ ಪ್ರೋತ್ಸಾಹಿಸಬೇಕೆಂದು ಅವರು…
ಸಿದ್ದಾಪುರ ಜ.21 : ಭಾರತ ಫುಟ್ಬಾಲ್ ತಂಡವು ಬಲಿಷ್ಠವಾಗಿದ್ದು, ಮುಂದಿನ ಅಥವಾ ಅದಾದನಂತರದಲ್ಲಿ ವಿಶ್ವಕಪ್ ಆಡಲಿದೆ ಎಂದು ಭಾರತ ಫುಟ್ಬಾಲ್ ತಂಡದ ಮಾಜಿ ನಾಯಕ ಹಾಗೂ ಹಾಲಿ ತಾಂತ್ರಿಕ ಸಮಿತಿ ಸದಸ್ಯ ಐ.ಎಂ ವಿಜಯನ್ ಅಭಿಪ್ರಾಯಪಟ್ಟರು. ವಿರಾಜಪೇಟೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಅಮ್ಮತ್ತಿಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತ ತಂಡ ಯುವ ಹಾಗೂ ಅನುಭವಿ ಆಟಗಾರರ ಮಿಶ್ರಿತ ತಂಡವಾಗಿದೆ. ಮುಂದಿನ ವಿಶ್ವಕಪ್ ಫುಟ್ಬಾಲ್ ಅರ್ಹತಾ ಪಂದ್ಯಾವಳಿಯಲ್ಲಿ ಭಾರತ ತಂಡ ಗೆದ್ದು ವಿಶ್ವಕಪ್ ಅರ್ಹತೆ ಪಡೆಯುವ ಅವಕಾಶ ಇದೆ ಎಂದರು. ಏಷ್ಯಾ ಈ ಹಿಂದೆ ಫುಟ್ಬಾಲ್ ನಲ್ಲಿ ಹಿಂದುಳಿದಿತ್ತು. ಪ್ರಸ್ತುತ ಏಷ್ಯಾದಿಂದ 8 ತಂಡಗಳು ವಿಶ್ವಕಪ್ ನಲ್ಲಿ ಭಾಗವಹಿಸಿದೆ. ದೊಡ್ಡ ದೊಡ್ಡ ರಾಷ್ಟ್ರಗಳನ್ನು ಮಣಿಸಿದೆ. ಹಾಗೇಯೆ ಭಾರತವೂ ಕೂಡ ಮುಂದೊಂದು ದಿನ ವಿಶ್ವಕಪ್ ಆಡಲಿದೆ ಎಂದರು. ಭಾರತದಲ್ಲಿ ಇಂಡಿಯನ್ ಸೂಪರ್ ಲೀಗ್ ಆರಂಭವಾದ ಬಳಿಕ ಭಾರತೀಯ ಫುಟ್ಬಾಲ್ ಗೆ ಪುನಶ್ಚೇತನ ದೊರಕಿದೆ. ಅಂತರರಾಷ್ಟ್ರೀಯ ಆಟಗಾರರು ಐ.ಎಸ್.ಎಲ್ ಆಡುತ್ತಿದ್ದಾರೆ.…
ಕುಶಾಲನಗರ ಜ.21 : ಪೊಲೀಸರ ಭಯದಿಂದ ಹೆಲ್ಮೆಟ್ ಧರಿಸುವುದನ್ನು ಬಿಟ್ಟು, ತಮ್ಮ ಸುರಕ್ಷತೆಗಾಗಿ ಹೆಲ್ಮೆಟ್ ಧರಿಸಿ ಎಂದು ಸೋಮವಾರಪೇಟೆ ಉಪವಿಭಾಗದ ಡಿವೈಎಸ್ಪಿ ಆರ್.ವಿ.ಗಂಗಾಧರಪ್ಪ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಕುಶಾಲನಗರ ಸಂಚಾರಿ ಪೊಲೀಸ್ ಠಾಣೆ ವತಿಯಿಂದ ಸುಂದರನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ “ರಸ್ತೆ ಸುರಕ್ಷಾ ಸಪ್ತಾಹ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಪೊಲೀಸರಿಗಾಗಿ ಹೆಲ್ಮೆಟ್ ಧರಿಸುವುದನ್ನು ಬಿಟ್ಟು, ತಮ್ಮ ಜೀವದ ಸುರಕ್ಷತೆಗಾಗಿ ಹೆಲ್ಮೆಟ್ ಧರಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ವಕೀಲ ಕೆ.ಬಿ.ಮೋಹನ್ ಕುಮಾರ್ ಮಾತನಾಡಿ, ವಾಹನ ಚಲಾವಣೆ ವೇಳೆ ಇರಬೇಕಾದ ದಾಖಲಾತಿಗಳ ಬಗ್ಗೆ ಹಾಗೂ ಮೋಟಾರು ವಾಹನ ಕಾಯ್ದೆಯ ಬಗ್ಗೆ ವಿವರಣೆ ನೀಡಿದರು. ಕುಶಾಲನಗರ ಸಂಚಾರಿ ಪೊಲೀಸ್ ಠಾಣಾಧಿಕಾರಿ ಹೆಚ್.ಟಿ.ಗೀತಾ ಮಾತನಾಡಿ, ವಿದ್ಯಾರ್ಥಿಗಳು ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಮನವಿ ಮಾಡಿದರು. ಸುಂದರನಗರ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಬಿ.ಎಂ.ಪ್ರವೀಣ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಂತರ ವಿದ್ಯಾರ್ಥಿಗಳಿಗೆ ಸಂಚಾರಿ ನಿಯಮಗಳನ್ನು ತಿಳಿಸುವ…
ಮಡಿಕೇರಿ ಜ.21 : ರೊಬೆಸ್ಟಾ ಎಡ್ವೆಂಚರಸ್ ಆಂಡ್ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ಫೆ.5 ರಂದು ಮಡಿಕೇರಿ ತಾಲ್ಲೂಕಿನ ಬೆಟ್ಟತ್ತೂರಿನಲ್ಲಿ ರಾಷ್ಟ್ರಮಟ್ಟದ 4X4 ಆಫ್ ರೋಡ್ ರ‍್ಯಾಲಿ ನಡೆಯಲಿದೆ ಎಂದು ಆಯೋಜಕರಾದ ಉದ್ದಪ್ಪಂಡ ತಿಮ್ಮಣ್ಣ ತಿಳಿಸಿದ್ದಾರೆ. ಕ್ಯಾಂಪ್ ಎಟ್ ಬೆಟ್ಟತ್ತೂರಿನಲ್ಲಿ (ಜಿಪಿಎಸ್ ಲೊಕೇಶನ್ : ತ್ರಿ ಹಿಲ್ಸ್ ರೆಸಾರ್ಟ್ ) ಅಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ರ‍್ಯಾಲಿ ನಡೆಯಲಿದ್ದು, ಹೊರ ರಾಜ್ಯಗಳ ಪ್ರತಿಭಾವಂತ ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ. ಸ್ಪರ್ಧೆಯಲ್ಲಿ ಸ್ಟಾಕ್ ಪೆಟ್ರೋಲ್, ಸ್ಟಾಕ್ ಡೀಸಲ್ ಮತ್ತು ಪ್ರೂವ್ ಮೊಡಿಫೈಡ್ ವಿಭಾಗಗಳಿದೆ. ರೊಬೆಸ್ಟಾ 4X4 ಆಫ್ ರೋಡ್ ರ‍್ಯಾಲಿಯಲ್ಲಿ ಭಾಗವಹಿಸಲು ಇಚ್ಛಿಸುವವರು 2023 ಜ.30 ರೊಳಗಾಗಿ www.robusta.co.in/events ಆನ್‌ಲೈನ್ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ 9901312776, 9448448399 ಸಂಪರ್ಕಿಸುವಂತೆ ಉದ್ದಪ್ಪಂಡ ತಿಮ್ಮಣ್ಣ ಕೋರಿದ್ದಾರೆ.
ಸೋಮವಾರಪೇಟೆ ಜ.21 : ರಾಷ್ಟ್ರೀಯ ಹಬ್ಬದ ಸಮಯದಲ್ಲಿ ರಾಷ್ಟ್ರಧ್ವಜದ ಪಾವಿತ್ರತೆ ಕಾಪಾಡಲು ಪ್ಲಾಸ್ಟಿಕ್ ಧ್ವಜ ಬಳಸುವವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ಸದಸ್ಯರು ಆಗ್ರಹಿಸಿದರು. ಸೋಮವಾರಪೇಟೆ ತಹಶೀಲ್ದಾರ್ ನರಗುಂದ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಸಮಿತಿ ಸದಸ್ಯರು, ರಾಷ್ಟ್ರೀಯ ಹಬ್ಬದ ಸಂದರ್ಭದಲ್ಲಿ ಪ್ಲಾಸ್ಟಿಕ್ ಬಾವುಟಗಳನ್ನು ಬಳಸಿ, ತ್ಯಾಜ್ಯದ ರಾಶಿ, ಚರಂಡಿ ಸೇರಿದಂತೆ ಎಲ್ಲೆಂದರಲ್ಲಿ ಎಸೆಯುವುದರಿಂದ ಧ್ವಜಕ್ಕೆ ಅಪಮಾನವಾಗುತ್ತಿದೆ. ಜಿಲ್ಲೆಯಲ್ಲಿ ಪ್ಲಾಸ್ಟಿಕ್ ರಾಷ್ಟ್ರಧ್ವಜ ತಯಾರಿಸಿ ಮಾರಾಟ ಮಾಡುವುದು ಮತ್ತು ಬಳಸುವವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಸಮಿತಿಯ ಸದಸ್ಯರಾದ ಕೆ.ಎನ್. ತೇಜಸ್ವಿ, ರಾಜೇಶ್, ಶಂಕರ್, ಬಿ.ಎಂ. ಪ್ರದೀಪ್, ತಾಕೇರಿ ವೆಂಕಟೇಶ್, ಜಯಪ್ರಕಾಶ್ ಹಾಜರಿದ್ದರು.






