ಸುಂಟಿಕೊಪ್ಪ ಜ.22 : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ನಾಕೂರು ಶಿರಂಗಾಲ ಕಾನ್‌ಬೈಲ್ ಶ್ರೀ ರಾಮಂದಿರ ದೇವಸ್ಥಾನ ಅಭಿವೃದ್ಧಿಗೆ ಅನುದಾನದ ಡಿ.ಡಿ ವಿತರಿಸಲಾಯಿತು. ಶನಿವಾರಸಂತೆಯಲ್ಲಿ ನಡೆದ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಸಾಧನಾ ಸಮಾವೇಶ ಸಮಾರಂಭದಲ್ಲಿ ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶ ಶ್ರೀ.ಶ್ರೀ. ಸದಾಶಿವ ಸ್ವಾಮಿಜಿ, ಮಡಿಕೇರಿ ಕ್ಷೇತ್ರ ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿಇಓ ಎಸ್.ಎಸ್. ಅನಿಲ್‌ಕುಮಾರ್, ಜಿಲ್ಲಾ ನಿರ್ದೇಶಕಿ ಲೀಲಾವತಿ ಮತ್ತು ತಾಲ್ಲೂಕು ಯೋಜನಾಧಿಕಾರಿ ರೋಹಿತ್ ಅವರುಗಳು ಕಾನ್‌ಬೈಲ್ ಶ್ರೀ ರಾಮಂದಿರ ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗೆ ಧರ್ಮಸ್ಥಳ ಕ್ಷೇತ್ರದ ವತಿಯಿಂದ ನೀಡಲಾದ ರೂ. 1 ಲಕ್ಷ ಡಿ.ಡಿಯನ್ನು ದೇವಸ್ಥಾನ ಆಡಳಿತ ಮಂಡಳಿಯವರಿಗೆ ಹಸ್ತಾಂತರಿಸಿದರು.
ಲೇಖಕ: admin
ಮಡಿಕೇರಿ ಜ.21 : ಗಡಿ ಜಿಲ್ಲೆ ಕೊಡಗಿನ ವಿರಾಜಪೇಟೆ ತಾಲ್ಲೂಕಿನ ಆರ್ಜಿ ಗ್ರಾಮದಲ್ಲಿ ಪ್ರಸಕ್ತ ಸಾಲಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ವೈಭವದ ಸಾಂಸ್ಕೃತಿಕ ಮೆರವಣಿಗೆ, ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯುವ ಮೂಲಕ ಗಮನ ಸೆಳೆೆಯಿತು. ವಿರಾಜಪೇಟೆ ತಾಲ್ಲೂಕಿನ ಬೇಟೋಳಿ ಪಂಚಾಯ್ತಿಯ ಪುಟ್ಟ ಗ್ರಾಮ ಆರ್ಜಿಯಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರನ್ನು ಒಳಗೊಂಡಂತೆ ಶನಿವಾರ ಬೆಳಗ್ಗೆ ನಡೆದ ಭವ್ಯ ಸಾಂಸ್ಕೃತಿಕ ಮೆರವಣಿಗೆ, ಕನ್ನಡ ನಾಡಿನ ಶ್ರೀಮಂತ ಸಂಸ್ಕೃತಿಯನ್ನು ಪ್ರತಿಬಿಂಬಿಸಿತಾದರೆ, ಗ್ರಾಮದುದ್ದಕ್ಕೂ ಕನ್ನಡ ಧ್ವಜ ರಾರಾಜಿಸುವ ಮೂಲಕ ಕನ್ನಡದ ಅಂತಃಸತ್ವ, ಅದರೆಡೆಗಿನ ಅಭಿಮಾನಕ್ಕೆ ಸಾಕ್ಷಿಯಾಯಿತು. ಬೇಟೋಳಿ ಪಂಚಾಯ್ತಿಯಿಂದ ಆರ್ಜಿ ಗ್ರಾಮದ ಮೊರಾರ್ಜಿ ವಸತಿ ಶಾಲೆಯ ಸಮ್ಮೇಳನದ ಸಭಾಂಗಣದ ವರೆಗೆ ನಡೆದ ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾತಂಡಗಳು, ಸಮ್ಮೇಳನಾಧ್ಯಕ್ಷ ಡಾ.ಎಸ್.ವಿ. ನರಸಿಂಹನ್, ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್, ತಾಲ್ಲೂಕು ಕಸಾಪ ಅಧ್ಯಕ್ಷ ರಾಜೇಶ್ ಪದ್ಮನಾಭ ಅವರನ್ನು ಒಳಗೊಂಡ ಅಲಂಕೃತ ವಾಹನ ಮೆರವಣಿಗೆಯ ಕೇಂದ್ರಬಿಓದುವಾಗಿದ್ದುದು ವಿಶೇಷ. ಸಮ್ಮೇಳನಾಧ್ಯಕ್ಷರು ಮತ್ತು ಕಲಾತಂಡಗಳ ಮೆರವಣಿಗೆÉಗೆ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಉಪೇಂದ್ರ ಅವರು…
ವಿರಾಜಪೇಟೆ ಜ.21 : ವಿರಾಜಪೇಟೆ ನಗರದ ಮೀನುಪೇಟೆ ಮಲಬಾರ್ ರಸ್ತೆಯ ಶ್ರೀ ಚೈತನ್ಯ ಮಠಪುರ ಮುತ್ತಪ್ಪ ದೇವಾಲಯದ 7ನೇ ವರ್ಷದ ಪ್ರತಿಷ್ಠಾಪನಾ ಮಹೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು. ಕೇರಳ ರಾಜ್ಯದ ಕಾಳೆ ಘಾಟ್ ನ ಶ್ರೀ ನಾರಾಯಣ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು. ಗಣಪತಿ ಹೋಮ, ದೀಪಾರಾಧನೆ, ಮುತ್ತಪ್ಪನ್ ವೆಳ್ಳಾಟಂ ನಡೆಯಿತು. ಮಹಾಪೂಜೆಯ ನಂತರ ಭಕ್ತರಿಗೆ ಅನ್ನಸಂತರ್ಪಣೆಯಾಯಿತು. ಆಡಳಿತ ಮಂಡಳಿಯ ಅಧ್ಯಕ್ಷರು, ಸದಸ್ಯರು ಹಾಗೂ ಹೆಚ್ಚಿನ ಸಂಖ್ಯೆಯ ಭಕ್ತರು ಪೂಜೆಯಲ್ಲಿ ಪಾಲ್ಗೊಂಡಿದ್ದರು.
ಮಡಿಕೇರಿ ಜ.21 : ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಜಿಲ್ಲೆಯ ನಾಲ್ವರು ಮಾಜಿ ಸೈನಿಕರಿಗೆ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ವತಿಯಿಂದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಪ್ರಶಸ್ತಿ ಪ್ರದಾನ ಮಾಡಲಾಯಿತು. ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ನಡೆದ “ಆರ್ಮಿ ಡೇ” ಕಾರ್ಯಕ್ರಮದಲ್ಲಿ ಮಾಜಿ ಸೈನಿಕರಾದ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ, ಹೊಸೊಕ್ಲು ಚಿಣ್ಣಪ್ಪ, ತಂಬಂಡ ನಾಣಯ್ಯ ಹಾಗೂ ಗಣೇಶ್ ತಿಮ್ಮಯ್ಯ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಚಲನಚಿತ್ರ ಕ್ಷೇತ್ರದ ಸೇವೆಗಾಗಿ ಪ್ರಶಸ್ತಿ ಪಡೆದ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಅವರು ಚಿತ್ರ ನಿರ್ಮಾಣ ಮತ್ತು ನಿರ್ದೇಶನದ ಮೂಲಕ ಭಾಷೆ ಹಾಗೂ ಸಾಹಿತ್ಯದ ಬೆಳವಣಿಗೆಗೆ ಉತ್ತೇಜನ ನೀಡುತ್ತಿದ್ದಾರೆ. ಇವರ ನಿರ್ದೇಶನದ “ನಾಡ ಪೆದ ಆಶಾ” ಕೊಡವ ಭಾಷಾ ಚಲನಚಿತ್ರ ದೆಹ್ರಡೂನ್, ಚಂಡೀಗಡ್, ಕೊಲ್ಕತ್ತಾ, ಅಸ್ಸಾಂ ಅಂತರರಾಷ್ಟ್ರೀಯ ಚಲಚಿತ್ರೋತ್ಸವಗಳಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಇವರದ್ದೇ ನಿರ್ದೇಶನದ “ಪೊಮ್ಮಾಲೆ ಕೊಡಗ್” ಕೊಡವ ಚಿತ್ರದಲ್ಲಿ ಕೊಡಗಿನ ಶ್ರೀಮಂತ ಪರಿಸರ, ಕಲೆ, ಪದ್ಧತಿ, ಪರಂಪರೆ, ಕೊಡವ ಭಾಷೆ, ಆಚಾರ, ವಿಚಾರ ಮತ್ತು…
ಮಡಿಕೇರಿ ಜ.21 : ಮೈಸೂರು ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತು ಹಾಗೂ ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಶಿಕ್ಷಕರ ಸಂಘಟನೆ ವತಿಯಿಂದ ಕೊಡಮಾಡುವ ರಾಜ್ಯ ಮಟ್ಟದ 2022-2023ನೇ ರಾಜ್ಯ ಮಟ್ಟದ ಶಿಕ್ಷಕ ಸೇವಾ ರತ್ನ ಪ್ರಶಸ್ತಿಗೆ ಕೊಡಗಿನ ಐವರು ನಿಕಟಪೂರ್ವ ಸಮೂಹ ಸಂಪನ್ಮೂಲ ವ್ಯಕ್ತಿಗಳು ಆಯ್ಕೆಯಾಗಿದ್ದಾರೆ. ಪೊನ್ನಂಪೇಟೆ ತಾಲೂಕಿನಿಂದ ತಿರುನ್ನೆಲ್ಲಿಮಡ ಜೀವನ್, ವಿರಾಜಪೇಟೆ ತಾಲೂಕಿನಿಂದ ವಿ.ಟಿ.ವೆಂಕಟೇಶ್, ಮಡಿಕೇರಿ ತಾಲೂಕಿನಿಂದ ಯು.ಎಸ್.ರೇಖಾ, ಕುಶಾಲನಗರ ತಾಲೂಕಿನಿಂದ ಬಿ.ಎನ್.ಸತ್ಯನಾರಾಯಣ, ಸೋಮವಾರಪೇಟೆ ತಾಲೂಕಿನಿಂದ ಎಸ್.ಎಂ.ಸುರೇಶ್ ಆಯ್ಕೆಯಾಗಿದ್ದು, ಫೆ.5ರಂದು ಬೆಂಗಳೂರಿನಲ್ಲಿ ನಡೆಯುವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಶಿಕ್ಷಕ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಸುಂಟಿಕೊಪ್ಪ,,ಜ.21: ಗುಡ್ಡೆಹೊಸೂರು ವೀರಶೈವ ಸಂಘದ ವತಿಯಿಂದ ಡಾ. ಶ್ರೀ ಸಿದ್ಧಗಂಗಾ ಶಿವಕುಮಾರ ಸ್ವಾಮೀಜಿ ಅವರ 4ನೇ ವರ್ಷದ ಪುಣ್ಯಸ್ಮರಣೆಯ ಆಚರಿಸಲಾಯಿತು. ಗುಡ್ಡೆಹೊಸೂರು ವೃತ್ತದಲ್ಲಿ ಸ್ವಾಮಿಜೀ ಭಾವಚಿತ್ರ ಇರಿಸಿ ವಿಶೇಷ ಪೂಜೆ ಸಲ್ಲಿಸಿ ನಂತರ ಅನ್ನ ಸಂತರ್ಪಣೆ ನಡೆಯಿತು. ಈ ಸಂದರ್ಭ ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಶಿವಪ್ಪ, ಕಾರ್ಯದರ್ಶಿ ಸಾಂಭಶಿವಮೂರ್ತಿ, ಬೊಳ್ಳೂರು ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಬಿ.ಸಿ.ಮಲಿಕಾರ್ಜುನ, ನಿರ್ದೇಶಕ ಡಿ.ಎಂ.ಪ್ರದೀಪ್, ಪ್ರಸನ್ನ, ಪಾಪಣ್ಣ, ಸುರೇಶ್, ಸಮಾಜದ ಪದಾಧಿಕಾರಿಗಳು ಹಾಜರಿದ್ದು, ಡಾ. ಶ್ರೀ ಸಿದ್ಧಗಂಗಾ ಶಿವಕುಮಾರ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಸುಂಟಿಕೊಪ್ಪ,ಜ.21: ಪರಿಶಿಷ್ಟ, ಪಂಗಡ, ಪರಿಶಿಷ್ಟ ಜಾತಿಯ ಕುಟುಂಬಸ್ಥರಿಗೆ ಪಡಿತರ ಚೀಟಿ, ಆಧಾರ್ ಕಾರ್ಡ್, ವೋಟರ್ ಐಡಿ ದೊರೆತ್ತಿಲ್ಲ. ದೇವರಕಾಡು ಜಾಗ ಒತ್ತುವರಿಯಾಗುತ್ತಿದೆ. ಕಾಡಾನೆಗಳಿಂದ ಬೆಳೆಗಾರರು ಹೈರಾಣಾಗಿದ್ದಾರೆ. ಕಸವಿಲೇವಾರಿಗೆ ಜಾಗವಿಲ್ಲ ಎಂದು ಗ್ರಾಮಸ್ಥರು ಸಮಸ್ಯೆಗಳನ್ನು ಬಿಚ್ಚಿಟ್ಟರು. ಕೆದಕಲ್ ಗ್ರಾ.ಪಂ ಅಧ್ಯಕ್ಷೆ ವಿಸ್ಮಿತ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ ಸಮುದಾಯ ಭವನದಲ್ಲಿ ನಡೆದ “ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ” ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಸಮಸ್ಯೆಗಳ ಕುರಿತು ಅಧಿಕಾರಿಗಳ ಗಮನ ಸೆಳೆದರು. ಈ ಸಂದರ್ಭ ಕುಶಾಲನಗರ ತಾಲೂಕು ತಹಶೀಲ್ದಾರ್ ಪ್ರಕಾಶ್ ಮಾತನಾಡಿ ಸರಕಾರದ ಪ್ರತಿಯೊಂದು ಯೋಜನೆಗಳು ಜನರ ಮನೆ ಮನೆಗೆ ತಲುಪಬೇಕು ಎಂಬ ಮಹಾತ್ವಾಕಾಂಕ್ಷೆಯಿಂದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆಗೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಎಲ್ಲಾ ಇಲಾಖೆ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ಇಲಿಯೇ ಸಮಸ್ಯೆಗಳನ್ನು ಬಗೆಹರಿಸುವುದು ಕೆಲವೊಂದು ಕ್ಲೀಷ್ಟ ಸಮಸ್ಯೆಗಳನ್ನು ನಿಗದಿತ ಕಾಲಾವಕಾಶದಲ್ಲಿ ಪರಿಹರಿಸಿಕೊಡಲಾಗುವುದು ಎಂದು ಹೇಳಿದರು. ಕೆದಕಲ್ ವಿಭಾಗದಲ್ಲಿ ಬಹಳಷ್ಟು ಪರಿಶೀಷ್ಟ ಪಂಗಡ, ಪರಿಶಿಷ್ಟ ಜಾತಿಯ ಫಲಾನುಭವಿಗಳು ತೋಟದ ಲೈನ್ ಮನೆಯಲ್ಲಿ ವಾಸವಾಗಿದ್ದಾರೆ. ಅವರುಗಳಿಗೆ ಇದುವರೆಗೆ ಮತದಾರರ…
ಮಡಿಕೇರಿ ಜ.21 : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ಫೆ.3 ರಿಂದ 6 ರವರೆಗೆ ಏರ್ಪಡಿಸಲಾಗುವ ಫಲಪುಷ್ಪ ಪ್ರದರ್ಶನದ ಅಂಗವಾಗಿ ರಾಜಾಸೀಟು ಉದ್ಯಾನವನ ಹಾಗೂ ಗಾಂಧಿ ಮೈದಾನದಲ್ಲಿ ಹಲವು ಕಾರ್ಯಕ್ರಮ ಹಾಗೂ ಸ್ಪರ್ಧೆ ಏರ್ಪಡಿಸಲಾಗಿದೆ, ಆಸಕ್ತರು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರ ಕಚೇರಿ ಸಂಪರ್ಕಿಸಬಹುದು ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಪ್ರಮೋದ್ ಅವರು ತಿಳಿಸಿದ್ದಾರೆ. ರೈತರು ಸ್ವತ: ಬೆಳೆದ ವಿವಿಧ ತಳಿಯ ಹಣ್ಣು, ತರಕಾರಿ ಬೆಳೆಗಳು, ಸಾಂಬಾರು ಪದಾರ್ಥಗಳು, ತೋಟದ ಬೆಳೆಗಳನ್ನು ಪ್ರದರ್ಶನದಲ್ಲಿ ಇಡಬಹುದಾಗಿದೆ. ಪ್ರತಿ ವಿಭಾಗದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಗುವುದು. ಆದ್ದರಿಂದ ರೈತರು ತಾವು ಬೆಳೆದಂತಹ ಪದಾರ್ಥಗಳನ್ನು ಫೆಬ್ರವರಿ, 03 ರಂದು ಬೆಳಗ್ಗೆ 9 ಗಂಟೆಗೆ ಗಾಂಧಿ ಮೈದಾನದಲ್ಲಿರುವ ತೋಟಗಾರಿಕೆ ಇಲಾಖೆಯ ಮಳಿಗೆಗೆ ನೇರವಾಗಿ ತಂದು ಪ್ರದರ್ಶನದಲ್ಲಿ ಇಡಲು ಕೋರಿದೆ. ರಾಜಾಸೀಟು ಉದ್ಯಾನವನದಲ್ಲಿ ಅಲಂಕಾರಿಕೆ ಹೂವಿನ ಜೋಡಣೆ, ಒಣಹೂವು ವಿನ ಜೋಡಣೆ, ಇಕೇಬಾನಾ, ಮೋರಿಬಾನ, ಪುಷ್ಪ ರಂಗೋಲಿ, ಬೋನಸಾಯ್ ಗಿಡಗಳ…
ಮಡಿಕೇರಿ ಜ.21 : ನಿವೃತ್ತ ರಾಜ್ಯ ಸರ್ಕಾರಿ ನೌಕರರ ‘ಪಿಂಚಣಿ ಅದಾಲತ್’ ಜ.24 ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ.
ಕುಶಾಲನಗರ ಜ.21 : 12ನೇ ಶತಮಾನದ ವಚನಕಾರರಲ್ಲಿ ಶಿವಶರಣ ಅಂಬಿಗರ ಚೌಡಯ್ಯ ವಿಭಿನ್ನರೀತಿಯ ವಚನ ಸಾಹಿತ್ಯಕ್ಕೆ ಹೆಗ್ಗಳಿಕೆ ಪಡೆದ ಮಹಾನ್ ಸಂತ. ಇತರೆ ವಚನಕಾರರಿಗಿಂತ ಭಿನ್ನ ಹಾಗೂ ವಿಶಿಷ್ಟ ವ್ಯಕ್ತಿತ್ವ ಇವರದು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಮಿತಿ ನಿರ್ದೇಶಕ ಎಂ.ಎನ್ ವೆಂಕಟನಾಯಕ್ ಹೇಳಿದರು. ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕುಶಾಲನಗರ ತಾಲೂಕಿನ ಕೂಡಿಗೆ ಕ್ಲಸ್ಟರ್ ವ್ಯಾಪ್ತಿಯ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಶಿವಶರಣ ಅಂಬಿಗರ ಚೌಡಯ್ಯರ ಜನ್ಮ ದಿನಾಚರಣೆಯಲ್ಲಿ ಸಂಕ್ಷಿಪ್ತ ಜೀವನ ಚರಿತ್ರೆಯನ್ನು ಸಭೆಗೆ ತಿಳಿಸಿದರು. ಬಸವಣ್ಣನವರ ಅನುಭವ ಮಂಟಪದಲ್ಲಿ ಸಮಾನ ಭೂಮಿಕೆಯಲ್ಲಿ ಸ್ಥಾನ ಪಡೆದು ಕಾಯಕವೇ ಕೈಲಾಸ ಎಂಬ ತತ್ತ್ವದಡಿ ನಡೆದು ಬಂದ ವ್ಯಕ್ತಿ ಹಾಗೂ ಆಚಾರ-ವಿಚಾರಗಳಲ್ಲಿ ದ್ವಂದ್ವ ಬದುಕನ್ನು ಸಾಗಿಸುವವರ ವಿರುದ್ಧ ಧ್ವನಿ ಎತ್ತಿದ ಮಹಾನ್ ಚೇತನ ಎಂದರು. ಅಂಬಿಗರ ಚೌಡಯ್ಯ ಭಾವಸಾಗರವನ್ನು ದಾಟಿಸುವ ಅಂಬಿಗ ಎಂಬ ಹೆಗ್ಗಳಿಕೆ ಪಡೆದ ಮಹಾನ್ ವ್ಯಕ್ತಿ. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಢಿಸಿಕೊಂಡು ಬದುಕು ಹಸನಾಗಿಸಿಕೊಳ್ಳಬೇಕಿದೆ…






