ಲೇಖಕ: admin

ಮಡಿಕೇರಿ ಫೆ.2 :  ರಾಫೆಲ್ಸ್ ಇಂಟರ್ನ್ಯಾಷನಲ್ ಸ್ಕೂಲ್ ಹಾಗೂ ಕಾಲೇಜು  ಪ್ರಾಯೋಜಕತ್ವದಲ್ಲಿ ಕೊಂಡಂಗೇರಿ ಶಾಲಾ ಮೈದಾನದಲ್ಲಿ ಫೆ.23 ರಿಂದ 26 ವರೆಗೆ ನಡೆಯಲಿರುವ 14 ನೇ ವರ್ಷದ ಕೊಂಡಂಗೇರಿ ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯ ಆಟಗಾರರ ಅರ್ಜಿಯನ್ನು 16 ತಂಡದ ನಾಯಕರಿಗೆ ಆಯೋಜಕರಾದ ಸಾಧಿಕ್ ಹಾಗೂ ಸಲೀಂ  ಕೊಂಡಂಗೇರಿಯಲ್ಲಿ ವಿತರಿಸಿದರು. ಕ್ರೀಡಾಕೂಟದಲ್ಲಿ ಕೊಂಡಂಗೇರಿ ಗ್ರಾಮದ 16 ತಂಡಗಳು ಭಾಗವಹಿಸುತ್ತಿದ್ದು, ಫೆ.23  ರಂದು  ಉದ್ಘಾಟನಾ ಸಮಾರಂಭದಲ್ಲಿ ಕೊಂಡಂಗೇರಿಯ ಲೆಜೆಂಡ್ಸ್ ಎರಡು ತಂಡಗಳ ನಡುವೆ ಪ್ರದರ್ಶನ ಪಂದ್ಯ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಫಾರಮ್ ವಿತರಣಾ ಕಾರ್ಯಕ್ರಮದಲ್ಲಿ ಕೊಂಡಂಗೇರಿ ಕ್ರಿಕೆಟ್ ಪ್ರೀಮಿಯರ್ ಲೀಗ್ ನ 16 ತಂಡಗಳ ನಾಯಕರು ಭಾಗವಹಿಸಿದ್ದರು.

Read More

ನಾಪೋಕ್ಲು ಫೆ.2 : ಸುನ್ನಿ ಯುವಜನ ಸಂಘ (ಎಸ್ ವೈ ಎಸ್ )ದ ನಾಪೋಕ್ಲು ಶಾಖೆಯ 2023-24ನೇ ಸಾಲಿನ ನೂತನ ಅಧ್ಯಕ್ಷರಾಗಿ ಅಬ್ದುಲ್ ಅಝೀಝ್ ಹಾಜಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಾಪೋಕ್ಲು ಪಟ್ಟಣದಲ್ಲಿರುವ ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಕಚೇರಿಯಲ್ಲಿ ನಡೆದ ಎಸ್ ವೈ ಎಸ್ ನಾಪೋಕ್ಲು ಶಾಖೆಯ ವಾರ್ಷಿಕ ಮಹಾಸಭೆಯಲ್ಲಿ  ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ಕಾರ್ಯದರ್ಶಿಯಾಗಿ ರಹೀಮ್ ಮಾಸ್ಟರ್, ಉಪಾಧ್ಯಕ್ಷರಾಗಿ ಬಿ.ಎ. ಅಬ್ಬಾಸ್, ಖಜಾಂಚಿಯಾಗಿ ಪಿ.ಎಂ. ಅರಫಾತ್, ದಹವಾ ಕಾರ್ಯದರ್ಶಿಯಾಗಿ ಶಾಹಿದ್ ಹಿಮಮಿ, ಸಾಂತ್ವನ ವಿಭಾಗದ ಕಾರ್ಯದರ್ಶಿಯಾಗಿ ಸಾದಿಕ್ ನಿಜಾಮಿ, ಅರ್ಷಾದ್, ಸದಸ್ಯರಾಗಿ ಪಿ.ಯು. ರಜಾಕ್, ಅಝೀಝ್ ಕಾರೆಕ್ಕಾಡ್, ಬಿ. ಯು.ಅಬ್ದುಲ್ ರಹ್ಮಾನ್,ಉಸೈನ್ ಲಿಮ್ರ, ಪಿ.ಎಂ.ಅನೀಫ್,ಅಹಮದ್ ಸಿ.ಎಚ್,ಆಯ್ಕೆಯಾದರು. ನೂತನ ಪದಾಧಿಕಾರಿಗಳಿಗೆ ಹಿಂದಿನ ಅಧ್ಯಕ್ಷ ಇಬ್ರಾಹಿಂ ಮುಸ್ಲಿಯಾರ್ ಹಾಗೂ ಆಡಳಿತ ಮಂಡಳಿಯವರು ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭ ಎಸ್ ವೈ ಎಸ್ ಜಿಲ್ಲಾ ಕಾರ್ಯದರ್ಶಿ ವಿ.ಪಿ.ಮೊಯಿದೀನ್ , ಮುಸ್ಲಿಂ ಜಮಾಅತ್ ಮುಖಂಡ  ಎಂ.ಎಂ.ಮನ್ಸೂರ್ ಆಲಿ, ಅಮೀನ್ ಮುಸ್ಲಿಯಾರ್, ಸಿ. ಎಚ್, ಅಹಮದ್, ಮುನೀರ್ ಮುಸ್ಲಿಯಾರ್…

Read More

ಮಡಿಕೇರಿ ಫೆ.2 : ಪೋಷಣ್ ಅಭಿಯಾನ ಯೋಜನೆಯಡಿ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಮಡಿಕೇರಿ ತಾಲ್ಲೂಕು ಸಂಯೋಜಕರ ಹುದ್ದೆಗೆ ಗುತ್ತಿಗೆ ಆಧಾರದಲ್ಲಿ ಮಾಸಿಕ ಗೌರವಧನ ರೂ.20 ಸಾವಿರ ನಿಗದಿಪಡಿಸಿ ಮಡಿಕೇರಿ ತಾಲ್ಲೂಕಿನ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಕಂಪ್ಯೂಟರ್ ಸೈನ್ಸ್ ವಿಷಯಾಧಾರಿತ ಪದವಿ ಹೊಂದಿದ್ದು, ಟೆಕ್ನಾಲಜಿ ಅಂಡ್ ಸಾಪ್ಟ್‌ವೇರ್ ಅಪ್ಲಿಕೇಷನ್ ಸಪೋರ್ಟ್‍ನಲ್ಲಿ 2 ವರ್ಷ ಕೆಲಸ ನಿರ್ವಹಿಸಿದ ಅನುಭವ ಹೊಂದಿರಬೇಕು. ಕನ್ನಡ ಭಾಷೆಯಲ್ಲಿ ಮಾತನಾಡುವ ಮತ್ತು ಬರೆಯುವ ಪ್ರಾವೀಣ್ಯತೆ ಹಾಗೂ ಕ್ಷೇತ್ರ ಕಾರ್ಯ ನಿರ್ವಹಣೆಗೆ ಸಿದ್ಧರಿರಬೇಕು. ಆಸಕ್ತ ಅಭ್ಯರ್ಥಿಗಳು ನಿಗದಿಪಡಿಸಿದ ವಿದ್ಯಾರ್ಹತೆಯ ಅಂಕಪಟ್ಟಿಗಳು ಮತ್ತು ಅನುಭವ ಪ್ರಮಾಣ ಪತ್ರಗಳೊಂದಿಗೆ ಫೆಬ್ರವರಿ, 13 ರ ಸಂಜೆ 5 ಗಂಟೆಯೊಳಗೆ ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಚೈನ್‍ಗೇಟ್ ಹತ್ತಿರ, ಮೈಸೂರು ರಸ್ತೆ, ಮಡಿಕೇರಿ(ದೂ.ಸಂ.08272-298379) ಈ ವಿಳಾಸಕ್ಕೆ ಸಲ್ಲಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಮಂಜುನಾಥ್ ತಿಳಿಸಿದ್ದಾರೆ.

Read More

ಮಡಿಕೇರಿ ಫೆ.2 :  ಕೇಂದ್ರ ಸರ್ಕಾರದ 2023 ರ ಬಜೆಟ್ ಪ್ರಗತಿಗೆ ಪೂರಕವಾಗಿದೆ. ಎಲ್ಲರನ್ನು ಒಳಗೊಂಡ ಅಭಿವೃದ್ಧಿ, ಕೊನೆಯ ಆರ್ಥಿಕ ಗುರಿ ತಲುಪುವುದು, ಮೂಲ ಸೌಕರ್ಯ ಹೂಡಿಕೆ, ಸಾಮರ್ಥ್ಯ ಬಲಪಡಿಸುವುದು, ಗ್ರೀನ್ ಡೆವಲಪ್ಮೆಂಟ್, ಯುವ ಶಕ್ತಿ ಹೀಗೆ ಸಪ್ತ ವಿಷಯಗಳ ಬಗ್ಗೆ ಗಮನ ಹರಿಸಿದೆ. ಉದ್ಯೋಗ ಸೃಷ್ಟಿ ಗೆ 10 ಲಕ್ಷ ಕೋಟಿಗಳನ್ನು ಮೀಸಲಿಟ್ಟಿರುವುದು ಗಮನಾರ್ಹ. ಹಾಗೂ ಏಳು ಲಕ್ಷ ರೂ ಆದಾಯಕ್ಕೆ ತೆರಿಗೆಯಿಲ್ಲದಿರುವುದು ಮಧ್ಯಮವರ್ಗದವರಿಗೆ ಪ್ರಯೋಜನವಾಗಿದೆ. ಅಂಚೆ ಕಚೇರಿಗಳಲ್ಲಿ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆ ತಂದಿರುವುದು ಮತ್ತು ರಫ್ತು ಉತ್ತೇಜನ ಕಾರ್ಯಕ್ರಮಗಳು ಮಹತ್ವದ್ದಾಗಿದೆ. ಭಾರತವು ವಿಶ್ವದಲ್ಲಿಯೇ ಆರ್ಥಿಕತೆಯಲ್ಲಿ 5 ನೇ ಸ್ಥಾನವನ್ನು ಹೊಂದಿದ್ದು, ಈ ಬಜೆಟ್ ಮತ್ತಷ್ಟು ಆರ್ಥಿಕ ಬೆಳವಣಿಗೆ ಸಾಧಿಸಲು ಪೂರಕವಾಗಿದೆ. (( ಬಿ. ಎನ್. ಶಾಂತಿಭೂಷಣ್, ಅರ್ಥಶಾಸ್ತ್ರ ಉಪನ್ಯಾಸಕರು. ಸೆಂಟ್ ಆನ್ಸ್ ಪದವಿ ಕಾಲೇಜು, ವಿರಾಜಪೇಟೆ ))   

Read More

ಸಿದ್ದಾಪುರ ಫೆ.2 :  ಸರ್ವಧರ್ಮ ಸಂಕೇತದ ಇತಿಹಾಸ ಪ್ರಸಿದ್ಧ ಆರ್ಕಾಡ್ ಪಟ್ಟಾಣ್ ಬಾಬಾ ಶಾವಲಿ ಉರೂಸ್ ನೇರ್ಚೆ ಫೆ. 3 ರಿಂದ 6ರ ವರೆಗೆ ಸರ್ವಧರ್ಮ ಸಮ್ಮೇಳನ ಹಾಗೂ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಪಾಲಿಬೆಟ್ಟ ಮುಸ್ಲಿಂ ಜಮಾಅತ್ ಅಧ್ಯಕ್ಷ ಪಿ.ಕೆ ಇಸ್ಮಾಯಿಲ್ ಹಾಜಿ ತಿಳಿಸಿದ್ದಾರೆ . ಫೆ .3 ರಂದು ಜುಮಾ ನಮಾಜ್ ಬಳಿಕ ಆರ್ಕಾಡ್ ಪಟ್ಟಾಣ್ ಬಾಬಾ ದರ್ಗಾಗೆ ತೆರಳಿ ವಿಶೇಷ ಪ್ರಾರ್ಥನೆಯೊಂದಿಗೆ ಮುಖಾಂ ಝಿಯಾರತ್ ಬಳಿಕ ಜುಮಾ ಮಸೀದಿ ಕಮಿಟಿ ಅಧ್ಯಕ್ಷ ಪಿ.ಕೆ ಇಸ್ಮಾಯಿಲ್ ಹಾಜಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಮಸೀದಿಯ ಖತಿಬ್ ಅಲಿ ಸಖಾಫಿ ಉದ್ಘಾಟನೆ ಮಾಡಲಿದ್ದು. ಧಾರ್ಮಿಕ ಪಂಡಿತ ಸಯ್ಯದ್‌ ಮೆಹರೂಫ್‌ ಅಲ್ ಜಫ್ರಿ ತಂಗಳ್ ದುಆ ದುವ ನೇತೃತ್ವ ವಹಿಸಲಿದ್ದಾರೆ. ರಾತ್ರಿ ಮತ ಪ್ರಭಾಷಣ ಮತ್ತು ದಿಕ್ರ್ ದುವಾ ಮಜ್ಲೀಸ್ ನೇತೃತ್ವವನ್ನ ಸಯ್ಯದ್ ಸರುಫುದ್ದೀನ್ ಐಲ್ ಹೈದ್ರೊಸಿ ತಂಗಳ್ ವಹಿಸಲಿದ್ದಾರೆ. ಫೆ.4 ರಂದು ರಾತ್ರಿ ಧಾರ್ಮಿಕ ಪಂಡಿತ ಆಫೀಜ್ ಜುನೈದು ಜೌಹರಿ ಅಲ್ ಅಝರಿ ಪ್ರಭಾಷಣ…

Read More

ಮಡಿಕೇರಿ ಫೆ.1 : ಮುಂದಿನ 25 ವರ್ಷಗಳಲ್ಲಿ ಆರ್ಥಿಕವಾಗಿ ಭಾರತವನ್ನು ವಿಶ್ವದ 3 ನೇ ಶಕ್ತಿಶಾಲಿ ರಾಷ್ಟ್ರವನ್ನಾಗಿ ಮಾಡುವ ಭವಿಷ್ಯದ ಬಜೆಟ್ ಇದಾಗಿದೆ. ದೇಶದ ಸಮಗ್ರ ಅಭಿವೃದ್ಧಿಗಾಗಿ ಮುಂದಾಲೋಚನೆಯಿಂದ ಬಜೆಟ್ ನ್ನು ರೂಪಿಸಲಾಗಿದೆ. ರೈತರು ಹಾಗೂ ಮಧ್ಯಮ ವರ್ಗದ ಏಳಿಗೆಗೆ ಆದ್ಯತೆ ನೀಡಲಾಗಿದೆ. ಮಾನವ ರಹಿತ ತಾಂತ್ರಿಕತೆ ಮತ್ತು ಕೃತಕ ಬುದ್ಧಿ ಮತ್ತೆಯ ಯೋಜನೆಗೆೆ ಬಜೆಟ್ ನಲ್ಲಿ ಪ್ರೋತ್ಸಾಹ ನೀಡಲಾಗಿದ್ದು, ದೇಶಾದ್ಯಂತ ಇದಕ್ಕೆ ಸಂಬಂಧಿಸಿದ ಕೇಂದ್ರಗಳನ್ನು ಸ್ಥಾಪಿಸಲು ಕ್ರಮ ಕೈಗೆತ್ತಿಕೊಳ್ಳುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಒಟ್ಟಿನಲ್ಲಿ ಕೇಂದ್ರದ ಬಜೆಟ್ ಭವ್ಯ ಭಾರತದ ನಿರ್ಮಾಣಕ್ಕೆ ಪೂರಕವಾಗಿದೆ. (( ತೇಲಪಂಡ ಶಿವಕುಮಾರ್ ನಾಣಯ್ಯ, ಸದಸ್ಯರು, ಕಾರ್ಯಕಾರಿ ಸಮಿತಿ, ಕೊಡಗು ಜಿಲ್ಲಾ ಬಿಜೆಪಿ ))

Read More

ಮಡಿಕೇರಿ ಫೆ.1   ಕೇಂದ್ರ ಸರ್ಕಾರ ದೇಶದ ಜನರನ್ನು ಮೂರ್ಖರನ್ನಾಗಿಸಲು ಚುನಾವಣಾ ಗಿಮಿಕ್ ನ ಬಜೆಟ್ ನ್ನು ಮಂಡಿಸಿದೆ. ತೆರಿಗೆದಾರರಿಗೆ ಅನುಕೂಲ ಕಲ್ಪಿಸುವ ಮೂಲಕ ಸರ್ಕಾರ ಉಳ್ಳವರ ಪರವಾಗಿದೆ ಎನ್ನುವುದನ್ನು ಸಾಬೀತು ಪಡಿಸಿದೆ. ಎಲ್ಲೂ ಕೃಷಿಕರು ಹಾಗೂ ಕಾರ್ಮಿಕರ ಪರವಾದ ಸ್ಪಷ್ಟ ನಿಲುವನ್ನು ಸರ್ಕಾರ ಘೋಷಿಸಿಲ್ಲ. ಚಿನ್ನ ಮತ್ತು ಬಟ್ಟೆ ಬೆಲೆಯನ್ನು ದುಬಾರಿಗೊಳಿಸಲಾಗಿದೆ, ಬಡವರು ಮದುವೆ ಮತ್ತಿತರ ಶುಭ ಕಾರ್ಯ ಮಾಡುವಾಗ ಚಿನ್ನಾಭರಣ, ಬಟ್ಟೆಯನ್ನು ಕೊಳ್ಳಬಾರದೆ ? ಬಜೆಟ್ ತುಂಬಾ ಸುಳ್ಳಿನ ಕಂತೆಯೇ ಇದ್ದು, ಜನರ ಕಣ್ಣಿಗೆ ಮಣ್ಣೆರಚುವ ಚುನಾವಣಾ ತಂತ್ರಗಾರಿಕೆ ಎದ್ದು ಕಾಣುತ್ತಿದೆ. ಹೆಚ್ಚು ತೆರಿಗೆ ಪಾವತಿಸುವ ಮೂಲಕ ದೇಶದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಪುಟ್ಟ ಜಿಲ್ಲೆ ಕೊಡಗಿನಂತಹ ಪ್ರದೇಶಗಳ ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ರೂಪಿಸಲು ಈ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಪ್ರವಾಸೋದ್ಯಮದ ಅಭಿವೃದ್ಧಿಗೆ ಯಾವುದೇ ನೆರವು ನೀಡಿಲ್ಲ. (( ಕೆ.ಎಂ.ಗಣೇಶ್, ಅಧ್ಯಕ್ಷರು, ಜಾತ್ಯತೀತ ಜನತಾದಳ, ಕೊಡಗು ಜಿಲ್ಲೆ. ))

Read More

ಮಡಿಕೇರಿ ಫೆ.1 ಇದೊಂದು ನಿಷ್ಪ್ರಯೋಜಕ ಬಜೆಟ್ ಆಗಿದೆ, ಹಳೆಯ ಯೋಜನೆಗಳನ್ನೇ ಮುಂದುವರೆಸಲಾಗಿದೆ. ಒಂದೆರಡು ಹೊಸ ಯೋಜನೆಗಳನ್ನು ಘೋಷಿಸಲಾಗಿದೆ, ಆದರೆ ಇದರ ಸಾಧಕ ಬಾಧಕಗಳನ್ನು ಬಹಿರಂಗ ಪಡಿಸಿಲ್ಲ. ಯೋಜನೆಗಳನ್ನು ಘೋಷಿಸಿದರೆ ಸಾಲದು ಜನಸಾಮಾನ್ಯರಿಗೆ ತಲುಪಬೇಕು. ಬಜೆಟ್ ನ್ನು ಅವಲೋಕಿಸಿದಾಗ ಕೇಂದ್ರ ಸರ್ಕಾರವೇ ಗೊಂದಲದಲ್ಲಿದ್ದಂತ್ತಿದೆ, ಬ್ಯಾಲೆನ್ಸ್ ಮಾಡುವ ಸರ್ಕಸ್ ಮಾಡಿದೆ. ಇದರಿಂದ ಬಡವರು, ಕಾರ್ಮಿಕರು, ಕೃಷಿಕರು ಹಾಗೂ ಮಧ್ಯಮ ವರ್ಗದವರಿಗೆ ಯಾವುದೇ ಲಾಭವಿಲ್ಲ. (( ಟಿ.ಪಿ.ರಮೇಶ್, ಅಧ್ಯಕ್ಷರು, ಕೊಡಗು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ )) 

Read More

ಮಡಿಕೇರಿ ಫೆ.1 : ಇದೊಂದು ಮಾತಿನಲ್ಲೆ ಅರಮನೆ ಕಟ್ಟುವ ಬಜೆಟ್ ಆಗಿದೆ, ದೂರದ ಬೆಟ್ಟ ತೋರಿಸಿ ನುಣ್ಣಗೆ ಇದೆ ಎಂದು ಜನರನ್ನು ಮೂರ್ಖರನ್ನಾಗಿ ಮಾಡಲಾಗಿದೆ. ದೇಶದ ಮಲೆನಾಡು ಪ್ರದೇಶಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಜನಸಾಮಾನ್ಯರು ಹಾಗೂ ಕೃಷಿಕರಿಗೆ ಯಾವುದೇ ಲಾಭವಿಲ್ಲ, ಯೋಜನೆಗಳ ಬಗ್ಗೆ ಸ್ಪಷ್ಟತೆ ಇಲ್ಲ. ಉದ್ಯೋಗ ಸೃಷ್ಟಿಯ ಬಗ್ಗೆ ಮಾತನಾಡಲಾಗಿದೆ, ಆದರೆ ಕಳೆದ 9 ವರ್ಷಗಳಲ್ಲಿ ಎಷ್ಟು ಮಂದಿಗೆ ಉದ್ಯೋಗ ನೀಡಿದ್ದಾರೆ ಮತ್ತು ಎಷ್ಟು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ ಎನ್ನುವ ಗುಟ್ಟನ್ನು ಸರ್ಕಾರ ಬಹಿರಂಗ ಪಡಿಸುತ್ತಿಲ್ಲ. ಕೃಷಿಕ ವರ್ಗ ಮತ್ತು ಕೃಷಿ ಕ್ಷೇತ್ರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವುದು ಸ್ಪಷ್ಟವಾಗಿದೆ. ಪ್ರವಾಸೋದ್ಯಮದ ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು ಘೋಷಿಸಿಲ್ಲ. ಪ್ರವಾಸೋದ್ಯಮದ ಯಾಪ್ ನ್ನು ಪರಿಚಯಿಸುವ ಕುರಿತು ಕೇಂದ್ರ ಬಜೆಟ್ ನಲ್ಲಿ ಪ್ರಸ್ತಾಪಿಸಿರುವುದು ಹಾಸ್ಯಾಸ್ಪದವಾಗಿದೆ. ಈ ಕಾರ್ಯವನ್ನು ಅಧಿಕಾರಿಗಳೇ ಮಾಡುತ್ತಾರೆ, ಘೋಷಣೆಗೊಂದು ಬಜೆಟ್ ವೇದಿಕೆ ಬೇಕಾಗಿರಲಿಲ್ಲ. (( ಕೆ.ಕೆ.ಮಂಜುನಾಥ್ ಕುಮಾರ್, ಅಧ್ಯಕ್ಷರು, ಕೊಡಗು ಜಿಲ್ಲಾ ಪ್ರವಾಸೋದ್ಯಮ ಅವಲಂಬಿತರ ಒಕ್ಕೂಟ ))

Read More

ಮಡಿಕೇರಿ ಫೆ.1 :       ಬಡವರು ಹಾಗೂ ಉದ್ಯೋಗದಾತರಿಗೆ ಅನುಕೂಲಕರ ಬಜೆಟ್ ಆಗಿದೆ. ಕರ ಕುಶಲ ವಸ್ತುಗಳನ್ನು ತಯಾರಿಸುವವರಿಗೆ ಉತ್ತೇಜನ ನೀಡಲಾಗಿದೆ. ಅಂಚೆ ಕಛೇರಿ ಯೋಜನೆಗಳಲ್ಲಿ ಹೆಚ್ಚು ಹೂಡಿಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಹಿರಿಯ ನಾಗರಿಕರಿಗೆ ಪ್ರಯೋಜನಕಾರಿಯಾಗಿದೆ. ಪ್ರವಾಸೋದ್ಯಮದ ಮೂಲಕ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗಿದೆ. ಮಹಿಳೆಯರು, ಹಿರಿಯರು, ದಿವ್ಯಾಂಗರು, ಬುಡಕಟ್ಟು ಜನರ ಹಾಗೂ ಯುವಕರ ಹಿತ ಕಾಯುವ ಯೋಜನೆಗಳನ್ನು ಘೋಷಿಸಲಾಗಿದೆ. ಹಸಿದವರಿಗೆ ಅನ್ನ ನೀಡುವ ಯೋಜನೆ ಮುಂದುವರೆದಿದೆ. ಸಿರಿಧಾನ್ಯಗಳ ಬಳಕೆಯಿಂದ ಆರೋಗ್ಯವೃದ್ಧಿಯಾಗುವುದಲ್ಲದೆ ಪರೋಕ್ಷವಾಗಿ ಸಣ್ಣ ರೈತರಿಗೆ ಪ್ರೋತ್ಸಾಹ ನೀಡಿದಂತ್ತಾಗಿದೆ. ಸಾವಯವ ಗೊಬ್ಬರ ಬಳಕೆಗೆ ಆದ್ಯತೆ ನೀಡಿರುವುದು, ಗ್ರಂಥಾಲಯಗಳ ಹೆಚ್ಚಳ ಮತ್ತು ವಸತಿ ಶಾಲೆಗಳ ಶಿಕ್ಷಕರ ನೇಮಕಾತಿ ಕುರಿತು ಮಹತ್ವದ ನಿರ್ಧಾರ ಕೈಗೊಂಡಿರುವುದು ಸ್ವಾಗತಾರ್ಹ ಕ್ರಮವಾಗಿದೆ. (ಗೀತಾ ಗಿರೀಶ್, ಆರ್ಥಿಕ ಸಲಹೆಗಾರರು, ಮಡಿಕೇರಿ )

Read More