ಲೇಖಕ: admin

ವಿರಾಜಪೇಟೆ ಜ.19 : ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವುದರ ಜೊತೆಗೆ ಅವರಲ್ಲಿನ ವೈಜ್ಞಾನಿಕ ಮತ್ತು ಕೌಶಲ್ಯ ಆಧಾರಿತ ಕಲೆಗಳನ್ನು ಗುರುತಿಸಲು ಮಕ್ಕಳ ಕಲಿಕಾ ಹಬ್ಬ ಸಹಕಾರಿಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೀಳಗಿ ಹೇಳಿದರು. ವಿರಾಜಪೇಟೆಯ ಹೆಗ್ಗಳ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ಕಲ್ತೋಡು ಕ್ಲಸ್ಟರ್ ಮಟ್ಟದ ಮಕ್ಕಳ ಕಲಿಕಾ ಹಬ್ಬವನ್ನು ಬಣ್ಣ ತುಂಬಿದ ಬಲೂನು ಒಡೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಸರ್ಕಾರ ಮಕ್ಕಳಿಗೆ ಸಮಗ್ರ ಶಿಕ್ಷಣ ದೊರಕಬೇಕು ಎಂಬ ಉದ್ದೇಶದಿಂದ ಈ ಕಲಿಕಾ ಹಬ್ಬವನ್ನು ಪ್ರತಿಯೊಂದು ಸರ್ಕಾರಿ ಶಾಲೆಗಳಲ್ಲಿ ಆಚರಿಸಲಾಗುತ್ತಿದೆ. ಈ ಹಬ್ಬದಲ್ಲಿ ವಿದ್ಯಾರ್ಥಿಗಳು ತಾವೇ ಚರ್ಚಿಸಿ, ತಾರ್ಕಿಕವಾಗಿ ಆಲೋಚಿಸಿ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗಗಳನ್ನು ತಾವೇ ಕಂಡುಕೊಳ್ಳುತ್ತಾರೆ. ಶಿಕ್ಷಕರ ಸಹಾಯದ ಮೂಲಕ ಅನೇಕ ವೈಜ್ಞಾನಿಕ ಮತ್ತು ಕೌಶಲ್ಯ ಕಲೆಗಳನ್ನು ಸೃಷ್ಟಿಸುವ ಮೂಲಕ ತಮ್ಮಲ್ಲಿರುವ ಸೂಕ್ತ ಪ್ರತಿಭೆಯನ್ನು ಹೊರ ಹಾಕುತ್ತಾರೆ. ಮಕ್ಕಳ ಸರ್ವಾಂಗೀಣ ಪ್ರಗತಿ ಮತ್ತು ಸ್ವಕಲಿಕೆಯ ಮಾದರಿಯ ಕಲೆಗಳ ವಿಧಾನವನ್ನು ಕಲಿಸಿಕೊಡುವುದೇ ಈ ಕಲಿಕಾ…

Read More

ಸುಂಟಿಕೊಪ್ಪ, ಜ.20: ಕಲಿಕೆ ಪ್ರತಿಯೊಬ್ಬರ ಮೂಲಭೂತ ಹಕ್ಕಾಗಿದೆ. ಶಿಕ್ಷಣದಿಂದ ಯಾವ ಮಕ್ಕಳು ವಂಚಿತರಾಗಬಾರದು. ಕಲಿಕಾಹಬ್ಬ ಮಕ್ಕಳ ವಿವಿಧ ಪ್ರತಿಭೆಗಳ ಅನಾವರಣಕ್ಕೆ ವೇದಿಕೆಯಾಗಲಿದೆ ಎಂದು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಹೇಳಿದರು. ಸುಂಟಿಕೊಪ್ಪ ಸರಕಾರಿ ಪ್ರೌಢಶಾಲೆ ಹಾಗೂ ಹಿರಿಯ ಮಾದರಿ ಪ್ರಾಥಮಿಕ ಶಾಲೆ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಾಲೆಗೆ ಹೋಗದೆ ಅವಿತು ಕುಳಿತುಕೊಳ್ಳುವ ಮಕ್ಕಳನ್ನು ಹುರಿದುಂಬಿಸಿ ಶಾಲೆಗೆ ಕರೆ ತರಲು ವಿದ್ಯಾರ್ಥಿಗಳು ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಶಿಕ್ಷಕರು ಮುಂದಾಗಬೇಕು. ಶಾಲೆಗಳು ದೇವಾಲಯವಿದ್ದಂತೆ ಜ್ಞಾನದೇಗುಲವಾಗಿದೆ. ನಿರ್ಮಲ ಮನಸ್ಸಿನಿಂದ ಶಾಲೆಗೆ ಬಂದು ಪಾಠಪ್ರವಚನ ಪಠ್ಯೇತರ ಚಟುವಟಿಕೆಗಳು ಮಕ್ಕಳು ತೊಡಗಿಸಿಕೊಳ್ಳಬೇಕೆಂದು ಶಾಸಕರು ಕರೆ ನೀಡಿದರು. ಕೊಡಗು ಜಿಲ್ಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆಯ ಉಪನಿರ್ದೇಶಕ ವಿ.ರಂಗದಾಮಯ್ಯ ಮಾತನಾಡಿ ಕಲಿಕಾ ಹಬ್ಬ ಮಕ್ಕಳಿಗೆ ನಾಡಹಬ್ಬವಿದ್ದಂತೆ ಸಾಹಿತ್ಯ, ಚಿತ್ರಕಲೆ, ನೃತ್ಯ ಹಾಗೂ ಹಾಡು ಮೊದಲಾದ ವಿಭಾಗದಲ್ಲಿ ವಿದ್ಯಾರ್ಥಿಗಳು ಪ್ರತಿಭೆ ಪ್ರದರ್ಶಿಸಲು ಸರ್ಕಾರ ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳಿದರು. ಸೋಮವಾರಪೇಟೆ ತಾಲೂಕು ಕ್ಷೇತ್ರ…

Read More

ಮಡಿಕೇರಿ ಜ.20 :  ಕೊಡಗಿನ ಹೆಸರಾಂತ ಹಾಡುಗಾರ, ಕವಿ, ಸಮಾಜ ಸೇವಕರಾಗಿದ್ದ ದಿವಂಗತ ಮುಲ್ಲೇರ ಜಿಮ್ಮಿ ಐಯ್ಯಪ್ಪ ಅವರ ಹುಟ್ಟು ಹಬ್ಬದ ಅಂಗವಾಗಿ ಕೊಡವಾಮೆರ ಕೊಂಡಾಟ ಸಂಘಟನೆ ಆನ್ಲೈನ್ ಕವಿಗೋಷ್ಠಿಯನ್ನು ಏರ್ಪಡಿಸಿದೆ. ಜ.31 ರಂದು  ಸಂಜೆ 7 ಗೆ ಗೂಗಲ್ ಮೀಟ್ ವೆಬಿನಾರ್ನಲ್ಲಿ ನಡೆಯುವ ಕವಿಗೋಷ್ಠಿಗೆ, ಕವಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಕವನವು ಐಚ್ಛಿಕ ವಿಷಯಾಧಾರಿತ ಕೊಡವ ಭಾಷೆಯಲ್ಲಿರಬೇಕು, 24 ಗೆರೆಗಳು ಮೀರಬಾರದು, ಜಾತಿ, ಧರ್ಮ, ಲಿಂಗ, ವಯಸ್ಸಿನ ನಿರ್ಬಂಧ ವಿಲ್ಲದೆ ಆಸಕ್ತರು ತಮ್ಮ ಇತ್ತೀಚಿನ ಭಾವಚಿತ್ರದೊಂದಿಗೆ ದಿನಾಂಕ 25/1/23ನೇ ಸಂಜೆಯ ಒಳಗಾಗಿ, ಕವಿಗೋಷ್ಠಿ ಸಂಚಾಲಕ  ಶಿವಾಚಾಳಿಯಂಡ ಕಿಶೋರ್ ಬೋಪಣ್ಣ ಅವರ ಮೊಬೈಲ್ ಸಂಖ್ಯೆ 9449254349ಗೆ ವಾಟ್ಸಪ್ ಮಾಡುವುದರ ಮೂಲಕ ನೋಂದಾಯಿಸಿಕೊಳ್ಳಬಹುದು.  ಕಾರ್ಯಕ್ರಮದಲ್ಲಿ ಕವನ ವಾಚಿಸುವ ಪ್ರತಿಯೊಬ್ಬರಿಗೂ ಆನ್ಲೈನ್ ಪ್ರಶಂಸಾ ಪತ್ರ ವಿತರಿಸಲಾಗುವುದು ಎಂದು ಸಂಘಟನೆಯ ಪ್ರಕಟಣೆ ಕೋರಿದೆ.

Read More

ಮಡಿಕೇರಿ ಜ.20 : ಗ್ರಾಮೀಣ ಪ್ರದೇಶದ ಹಾಕಿ ಕ್ರೀಡೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ವಿ.ಬಾಡಗ ಹೈ ಫ್ಲೈಯರ್ಸ್ ತಂಡದ ವತಿಯಿಂದ ಫೆ.22 ರಿಂದ 26ರ ವರೆಗೆ ಪ್ರಥಮ ವರ್ಷದ ಕೊಡವ ಕೌಟುಂಬಿಕ ಹಾಕಿ ಉತ್ಸವ ನಡೆಯಲಿದೆ ಎಂದು ಕ್ರೀಡಾ ಸಮಿತಿ ಕಾರ್ಯದರ್ಶಿ ಮಚ್ಚಾರಂಡ ಪ್ರವೀಣ್ ತಿಮ್ಮಯ್ಯ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿ.ಬಾಡಗ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಪಂದ್ಯಾವಳಿ ನಡೆಯಲಿದ್ದು, ವಿರಾಜಪೇಟೆ ತಾಲೂಕಿನ ಬೇರಳಿನಾಡು, ಕುತ್ತುನಾಡು ಮತ್ತು ಬೊಟ್ಟಿಯತ್‍ನಾಡು ವ್ಯಾಪ್ತಿಯಲ್ಲಿ ಐನ್‍ಮನೆ ಹೊಂದಿರುವ ಕೊಡವ ಕುಟುಂಬಗಳಿಗೆ ಮಾತ್ರ ಪಂದ್ಯಾವಳಿ ಸೀಮಿತವಾಗಿದೆ ಎಂದು ಮಾಹಿತಿ ನೀಡಿದರು. ಪಾಲ್ಗೊಳ್ಳುವ ತಂಡದಲ್ಲಿ ತಲಾ 4 ಜನ ಕೊಡವ ಅತಿಥಿ ಆಟಗಾರರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ವಿಜೇತ ತಂಡಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನದ ಆಕರ್ಷಕ ನಗದು ಹಾಗೂ ಪಾರಿತೋಷಕ ವಿತರಿಸಲಾಗುವುದು. ಪಂದ್ಯಾವಳಿಗೆ ಪಾಲ್ಗೊಳ್ಳುವ ತಂಡಗಳು ಫೆ.10ರ ಒಳಗಾಗಿ ಪ್ರವೇಶ ಶುಲ್ಕ ರೂ.1500 ಪಾವತಿಸಿ ತಂಡದ ಹೆಸರನ್ನು ನೋಂದಯಿಸಿಕೊಳ್ಳುವಂತೆ ಮನವಿ ಮಾಡಿದರು. ಪಂದ್ಯಾವಳಿಯು ಹಾಕಿ…

Read More

ಮಡಿಕೇರಿ ಜ.20 : ಕೊಡಗಿನಲ್ಲಿ ಈ ವರ್ಷ ಸುರಿದ ಭಾರಿ ಗಾಳಿ-ಮಳೆಯಿಂದಾಗಿ ನಾಪೋಕ್ಲು ನಾಲ್ಕುನಾಡು ವ್ಯಾಪ್ತಿಯಲ್ಲಿ ಕಾಫಿ, ಕಾಳು ಮೆಣಸು, ಅಡಿಕೆ ಸೇರಿದಂತೆ ಇನ್ನಿತರ ಫಸಲುಗಳು ಸಂಪೂರ್ಣ ನಾಶವಾಗಿದ್ದು, ಕೃಷಿ ಉತ್ಪನ್ನಗಳ ಬೆಲೆ ಏರಿಕೆ ಮತ್ತು ಕೂಲಿ ಕಾರ್ಮಿಕರ ದುಬಾರಿ ವೇತನದಿಂದ ಬೆಳೆಗರಾರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಬೆಳೆಗಾರರ ಸಾಲ ಮನ್ನಾ ಮಾಡಲು ಕ್ರಮ ಕೈಗೊಳ್ಳಬೇಕೆಂದು ನಾಲ್ಕುನಾಡು ಬೆಳೆಗಾರರ ಹೋರಾಟ ಸಮಿತಿಯ ಪದಾಧಿಕಾರಿಗಳು ಒತ್ತಾಯಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಲ್ಕುನಾಡು ಬೆಳೆಗಾರರ ಹೋರಾಟ ಸಮಿತಿ ಅಧ್ಯಕ್ಷ ಕುಂಡ್ಯೋಳಂಡ ರಮೇಶ್ ಮುದ್ದಯ್ಯ ಈ ವರ್ಷ ಸುರಿದ ಭಾರಿ ಗಾಳಿ ಮಳೆಯಿಂದ ನಾಲ್ಕುನಾಡು ವ್ಯಾಪ್ತಿಯಲ್ಲಿ ಅಪಾರ ಪ್ರಮಾಣದಲ್ಲಿ ಬೆಳೆ ನಾಶವಾಗಿದ್ದು, ಬೆಳೆಗಾರರು ನಷ್ಟ ಅನುಭವಿಸುವಂತಾಗಿದೆ. ಅಲ್ಲದೆ ಜೀವನಾಂಶಕ ವಸ್ತುಗಳ ಬೆಲೆ ಏರಿಕೆ, ಕೂಲಿ ಕಾರ್ಮಿಕರ ದುಬಾರಿ ವೇತನ, ಬೆಳೆಗಳಿಗೆ ಬಳಸುವ ಕೀಟನಾಶಕ ಹಾಗೂ ರಸಗೊಬ್ಬರಗಳ ಬೆಲೆಯ ಸಬ್ಸಿಡಿ ಹೊರತಾಗಿಯೂ ಗಗನಕ್ಕೇರಿದೆ. ಪ್ರಸ್ತುತ ಫಸಲನ್ನು ತೆಗೆಯಲು ಕೂಲಿ ಕಾರ್ಮಿಕರು ಹೆಚ್ಚಿನ…

Read More

ಮಡಿಕೇರಿ ಜ.20 : ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕೊಡಗು ಜಿಲ್ಲಾ ಸಮಿತಿ ಹಾಗೂ ವಿರಾಜಪೇಟೆ ತಾಲ್ಲೂಕು ಸಮಿತಿ ವತಿಯಿಂದ ಕೆದಮುಳ್ಳೂರು ಗ್ರಾಮದ ಬಾರಿಕಾಡು ಪೈಸಾರಿಯಲ್ಲಿ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳ ಕುರಿತು ಅರಿವು ಕಾರ್ಯಕ್ರಮ ನಡೆಯಿತು. ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನಗಾಥೆ ಹಾಗೂ ತತ್ವ ಸಿದ್ಧಾಂತಗಳ ಬಗ್ಗೆ ಸಮಿತಿಯ ಜಿಲ್ಲಾಧ್ಯಕ್ಷರಾದ ಗಾಯತ್ರಿ ನರಸಿಂಹ ವಿವರಿಸಿದರು. ಸಂವಿಧಾನ ಶಿಲ್ಪಿಯ ಆದರ್ಶವನ್ನು ಮೈಗೂಡಿಸಿಕೊಳ್ಳುವ ಮೂಲಕ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಸಬಲರಾಗುವಂತೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ನೆರೆದಿದ್ದ ಸ್ಥಳೀಯ ಸುಮಾರು 45 ಕುಟುಂಬಗಳಿಗೆ ಅಂಬೇಡ್ಕರ್ ಅವರ ಭಾವಚಿತ್ರವನ್ನು ವಿತರಿಸಲಾಯಿತು. ಇದೇ ಸಂದರ್ಭ ದಲಿತ ಸಂಘರ್ಷ ಸಮಿತಿಗೆ ಪ್ರಾಥಮಿಕ ಸದಸ್ಯತ್ವ ನೋಂದಣಿ ಮಾಡಲಾಯಿತು. ತಾಲ್ಲೂಕು ಅಧ್ಯಕ್ಷ ಮನು, ದಲಿತ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ರೇಖಾ ಮಹೇಶ್, ಪ್ರಮುಖರಾದ ರಘು, ಬೋಜ, ಕುಳಿಯ, ಮಂಜುಳಾ, ದಿವ್ಯ ಮತ್ತಿತರರು ಉಪಸ್ಥಿತರಿದ್ದರು.

Read More

ವಿರಾಜಪೇಟೆ ಜ.21 : ಗಡಿನಾಡು ವಿರಾಜಪೇಟೆ ತಾಲೂಕಿನ ಆರ್ಜಿ ಗ್ರಾಮ ಅಕ್ಷರ ಜಾತ್ರೆಗೆ ಅಣಿಯಾಗಿದೆ. ಒಂಬತ್ತನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ. ಆರ್ಜಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಆವರಣ ಹಾಗೂ ಗ್ರಾಮದ ಮುಖ್ಯರಸ್ತೆಗಳು ನವ ವಧುವಿನಂತೆ ಸಿಂಗಾರಗೊಂಡಿದೆ. ಸಮ್ಮೇಳನದ ಸರ್ವಾಧ್ಯಕ್ಷ ಡಾ. ಎಸ್.ವಿ ನರಸಿಂಹನ್ ಸಾರಥ್ಯದ ನುಡಿ ಜಾತ್ರೆಗೆ ಕಸಾಪ, ತಾಲೂಕು ಆಡಳಿತ ಸಿದ್ಧತೆ ಮಾಡಿಕೊಂಡಿದೆ. ಅದ್ದೂರಿ ಮೆರವಣಿಗೆ ನಡೆಯಲಿದೆ. ಇದಕ್ಕೆ ಕಲಾತಂಡಗಳ ಸಾಥ್ ನೀಡಲಿದೆ. ಈ ವರ್ಣರಂಜಿತ ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ವೀರಗಾಸೆ, ಕೋಲಾಟ, ಮಂಗಳವಾದ್ಯ, ಚಂಡೆ, ಕಳಸಗಳು, ಕಂಸಾಳೆ, ಪೂಜಾ ಕುಣಿತ, ನಂದಿ ಧ್ವಜ, ದಫ್, ಕೊಡಗಿನ ವಾ¯ಗ, ಬ್ಯಾಂಡ್ ಸೆಟ್, ಕಲಾ ತಂಡಗಳು ಮೆರವಣಿಗೆಗೆ ಮೆರಗು ನೀಡಲಿವೆ. ಗ್ರಾಮದಲ್ಲಿ ಹಬ್ಬದ ವಾತಾವರಣ ತುಂಬಿದ್ದು ಗ್ರಾಮದ ರಸ್ತೆಗಳು ಕಳೆದುಂಬಿ, ಕನ್ನಡದ ಧ್ವಜಗಳು ಹಾರಾಡುತ್ತಿವೆ. ರಸ್ತೆಗಳ ಅಕ್ಕಪಕ್ಕ ಹಾಗೂ ವೇದಿಕೆ ಬಳಿ ಬ್ಯಾನರ್, ಬಂಟಿಗ್ಸ್ ರಾರಾಜಿಸಿ ಗ್ರಾಮ ಕನ್ನಡಮಯವಾಗಿ ಕಂಗೊಳಿಸಿವೆ. ಸಾವಿರ ಆಸನ: ಸಮ್ಮೇಳನಕ್ಕಾಗಿ…

Read More

ಮಡಿಕೇರಿ ಜ.20 : ಕೇಂದ್ರ ಸರ್ಕಾರದ ಅಧೀನದ ಕೇಂದ್ರ ಬುಡಕಟ್ಟು ಸಚಿವಾಲಯವು 2017 ರಲ್ಲಿ ರೂಪಿಸಿದ “ಹೊಸ ಮರು ವ್ಯಾಖ್ಯಾನಿಸಿದ ಮಾನದಂಡ” ದಡಿಯಲ್ಲಿ ಕೊಡವ ಜನಾಂಗವನ್ನು ಎಸ್ಟಿ ಪಟ್ಟಿಗೆ ಸೇರಿಸುವ ಮೂಲಕ ಸಂವಿಧಾನದ ಭದ್ರತೆಯನ್ನು ನೀಡಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಈ ಕುರಿತು ಕೇಂದ್ರ ಬುಡಕಟ್ಟು ಮಂತ್ರಾಲಯ, ರಾಷ್ಟ್ರೀಯ ಬುಡಕಟ್ಟು ಆಯೋಗ, ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಪ್ರಧಾನ ಕಾರ್ಯದರ್ಶಿ, ಬುಡಕಟ್ಟು ಕಲ್ಯಾಣ ಮಂತ್ರಾಲಯದ ಕಾರ್ಯದರ್ಶಿ, ನಿರ್ದೇಶಕರು ಹಾಗೂ ಬುಡಕಟ್ಟು ಶಂಶೋಧನ ನಿರ್ದೇಶನಾಲಯದ ನಿರ್ದೇಶಕರಿಗೆ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ. ಕೊಡಗಿನ ಮೂಲ ಬುಡಕಟ್ಟು ಜನಾಂಗವಾಗಿರುವ ಕೊಡವರನ್ನು ಎಸ್ಟಿ ಪಟ್ಟಿಗೆ ಸೇರಿಸುವ ಪ್ರಕ್ರಿಯೆ ವಿಳಂಬವಾಗುತ್ತಿದೆ. ಇದು ತ್ವರಿತವಾಗಿ ಆಗದಿದ್ದರೆ ಕೊಡವ ಬುಡಕಟ್ಟು ಜನಾಂಗದ ಭವಿಷ್ಯವು ಕತ್ತಲೆಯಲ್ಲಿ ಮುಳುಗುತ್ತದೆ. ಕೊಡವರ ಜಾನಪದ ಗುರುತು ಮತ್ತು ಭೌಗೋಳಿಕ-ರಾಜಕೀಯ ಅಸ್ತಿತ್ವಕ್ಕೆ ಹಾನಿಯಾಗಲಿದೆ. ಭಾರತ ದೇಶವು ಬಹು ಜನಾಂಗೀಯ ಹೂದೋಟದಂತ್ತಿದ್ದು, ಇತರ ಜನಾಂಗೀಯ ಗುಂಪುಗಳಿಗೆ ನೀಡಲಾಗುವ ಅದೇ…

Read More

ಮಡಿಕೇರಿ ಜ.20 : ಬೆಟ್ಟದಪುರದಿಂದ ಮಡಿಕೇರಿಗೆ ಕಾರೊಂದರಲ್ಲಿ ಸಾಗಾಟವಾಗುತ್ತಿದ್ದ 80 ಕೆಜಿ ಗೋಮಾಂಸವನ್ನು ಸುಂಟಿಕೊಪ್ಪ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಾರಿನಲ್ಲಿ ಗೋಮಾಂಸ ಸಾಗಾಟವಾಗುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಹಿನ್ನೆಲೆ ಪೊಲೀಸರು ಕಾರ್ಯಾಚರಣೆ ನಡೆಸಿದರು. ಕಾರು ಚಾಲಕನನ್ನು ವಿಚಾರಣೆಗೆ ಒಳಪಡಿಸಲಾಗಿದೆ. ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಅಕ್ರಮ ಗೋಮಾಂಸ ಮಾರಾಟವಾಗುತ್ತಿರುವ ಬಗ್ಗೆ ಹಿಂದೂ ಪರ ಸಂಘಟನೆಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ.

Read More

ಮಡಿಕೇರಿ ಜ.19 : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮುಕ್ತಗಂಗೋತ್ರಿ, ಮೈಸೂರು ಇವರ ವತಿಯಿಂದ 2023 ರ ಜನವರಿ ಆವೃತ್ತಿಗೆ ಶೈಕ್ಷಣಿಕ ಕಾರ್ಯಕ್ರಮಗಳ ಪ್ರವೇಶಾತಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಸ್ನಾತಕ ಶಿಕ್ಷಣ ಕಾರ್ಯಕ್ರಮಗಳು ಬಿ.ಎ., ಬಿ.ಕಾಂ, ಬಿ.ಲಿಬ್.ಐಎಸ್‍ಸಿ, ಬಿ.ಬಿ.ಎ(ಮಾರ್ಕೆಟಿಂಗ್ ಮ್ಯಾನೇಜ್‍ಮೆಂಟ್), ಬಿ.ಎಸ್‍ಸಿ(ಸಂಯೋಜನೆಗಳು), ಸ್ನಾತಕೋತ್ತರ(ಪಿಜಿ) ಶಿಕ್ಷಣ ಕಾರ್ಯಕ್ರಮಗಳು ಎಂ.ಎ., ಎಂಬಿಎ, ಎಂಕಾಂ, ಎಂ.ಲಿಬ್, ಐಎಸ್‍ಸಿ, ಎಂಎಸ್‍ಸಿ, ಪ್ರವೇಶಾತಿ ಹಾಗೂ ಇನ್ನಿತರ ಮಾಹಿತಿಗೆ ಅರ್ಜಿದಾರರು ಕರಾಮುವಿಯ ಅಧಿಕೃತ ವೆಬ್‍ಸೈಟ್ www.ksoumysuru.ac.in ನ್ನು ವೀಕ್ಷಿಸುವುದು. ಹೆಚ್ಚಿನ ಮಾಹಿತಿಗೆ ನಗರದ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯ ಪ್ರಾದೇಶಿಕ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ. ದೂ. 08272-201147 ಸಂಪರ್ಕಿಸಬಹುದು ಎಂದು ಪ್ರಾದೇಶಿಕ ನಿರ್ದೇಶಕಿ ಸ್ಮಿತಾ ಸುಬ್ಬಯ್ಯ ಅವರು ತಿಳಿಸಿದ್ದಾರೆ.

Read More