ಲೇಖಕ: admin

ವಿರಾಜಪೇಟೆ ಜ.17 ಕೊಡಗಿನಾದ್ಯಂತ ಘಂಟೆ ಕಳ್ಳತನ ಮಾಡುವುದರ ಮೂಲಕ ದೇವಸ್ಥಾನಗಳಲ್ಲಿ ಘಂಟೆಯ ಸದ್ದು ಕೇಳದಂತೆ ಮಾಡಿದ ಘಂಟೆ ಕಳ್ಳರನ್ನು ಹಿಡಿದು ಎಡೆಮುರಿ ಕಟ್ಟಿದ ಪೊಲೀಸರು ಆರೋಪಿಗಳನ್ನು ಹಳ್ಳಿಗಟ್ಟು ಭದ್ರಕಾಳಿ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳಿಗೆ ಭದ್ರತೆಯೊಂದಿಗೆ ಕರೆದುಕೊಂಡು ಬಂದು ಸ್ಥಳ ಮಹಜರು ಮಾಡಲಾಯಿತು. ದೇವರ ಶಕ್ತಿ ಎಂಬಂತೆ ಹಳ್ಳಿಗಟ್ಟು ಭದ್ರಕಾಳಿ ದೇವಸ್ಥಾನದ ಘಂಟೆ ಕಳ್ಳತನವೇ ಜಿಲ್ಲೆಯ ಕೊನೆಯ ಕಳ್ಳತನವಾಗಿತ್ತು ಎನ್ನುವುದು ಗಮನಾರ್ಹ. ಇದಕ್ಕೂ ಮುಂಚೆ ಕೂಡ ಹಲವಾರು ಕಡೆ ಹುಂಡಿ ಕಳ್ಳತನ ಮಾಡಿದ ಕಳ್ಳರು ಇದೇ ದೇವಸ್ಥಾನದಲ್ಲಿ ಹುಂಡಿ ಕಳ್ಳತನ ಮಾಡಲು ಪ್ರಯತ್ನಿಸಿ ವಿಫಲರಾಗಿ 24 ಗಂಟೆಯೊಳಗೆ ತಾವಾಗಿಯೇ ಪೊಲೀಸ್ ಠಾಣೆಗೆ ಹೋಗಿ ಸಿಕ್ಕಿಹಾಕಿಕೊಂಡಿದ್ದು ವಿಶೇಷ.

Read More

ಮಡಿಕೇರಿ ಜ.19 :  ಭಾರತ ಸರ್ಕಾರ,  ನೆಹರು ಯುವ ಕೇಂದ್ರ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು, ಆದರ್ಶ ಮಹಿಳಾ ಸಮಾಜ  ಸಂಯುಕ್ತಾಶ್ರಯದಲ್ಲಿ ಯುವ ಮುಂದಾಳತ್ವದ ಮತ್ತು ಸಮುದಾಯ ಅಭಿವೃದ್ಧಿ ತರಬೇತಿ  ಕಾರ್ಯಕ್ರಮ  ಬಲ್ಲಮಾವಟಿಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ನೇತಾಜಿ ಕೇಂದ್ರ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎ.ಕೆ.ಮನು ಮುತ್ತಪ್ಪ ಉದ್ಘಾಟಿಸಿದರು.  ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಜಗತ್ ತಿಮ್ಮಯ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ  75 ಶಿಬಿರಾರ್ಥಿಗಳು ಮೂರು ದಿನದ ತರಬೇತಿಯ ಪ್ರಯೋಜನವನ್ನು ಯಶಸ್ವಿಗೊಳಿಸಿದರು.

Read More

ಮಡಿಕೇರಿ ಜ.17 :  ಜಲ ಮತ್ತು ಮಣ್ಣು ಸಂರಕ್ಷಣೆಯ ಸಂದೇಶದೊಂದಿಗೆ ರೈಡ್ ಪಾರ್ ರೋಟರಿ ಹೆಸರಿನ ರೋಟರಿ ಬೈಕ್ ಜಾಥಾ ಇದೇ 24 ರಂದು ಮಡಿಕೇರಿಗೆ ಬರುತ್ತಿದ್ದು, ವಿದೇಶಿಯರೂ ಸೇರಿದಂತೆ ಭಾರತೀಯ ಮೂಲದ 40 ಬೈಕ್ ಸವಾರರು ಜಾಥಾದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ರೋಟರಿ ಜಿಲ್ಲಾ ಗವನ೯ರ್ ಪ್ರಕಾಶ್ ಕಾರಂತ್ ಮಾಹಿತಿ ನೀಡಿದ್ದಾರೆ. ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಗೆ ಅಧಿಕೃತ ಭೇಟಿ ಸಂದಭ೯ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಪ್ರಕಾಶ್ ಕಾರಂತ್, ರೋಟರಿ ಜಿಲ್ಲೆ 3181 ರ ಮಹತ್ವದ ಯೋಜನೆಯಾದ ರೈಡ್ ಫಾರ್ ರೋಟರಿಯ 7 ನೇ ಆವೃತ್ತಿಯು ತಮಿಳುನಾಡಿನ ಮಹಾಬಲಿಪುರಂನಿಂದ ಇದೇ ಭಾನುವಾರ ಪ್ರಾರಂಭಗೊಂಡಿದ್ದು ವಿವಿಧ ನಗರಗಳನ್ನು ಹಾದು ಜಾಥಾದಲ್ಲಿನ ಸವಾರರು ಜ.24 ರಂದು ಮಂಗಳಪಾರ ಮಡಿಕೇರಿಗೆ ಬರುತ್ತಿದ್ದಾರೆ. ವಿದೇಶದ 36 ಬೈಕ್ ಸವಾರರೂ ಒಳಗೊಂಡಂತೆ 40 ಸವಾರರು ಈ ಜಾಥಾದಲ್ಲಿದ್ದಾರೆ. ಮಣ್ಣು ಮತ್ತು ನೀರಿನ ಸಂರಕ್ಷಣೆಯ ಸಂದೇಶ ಸಾರುವ ಈ ಜಾಥಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾಂದವ್ಯ ವೃದ್ಧಿಗೆ ರೋಟರಿಗೆ ಸಹಕಾರಿಯಾಗಿದೆ…

Read More

ಮಡಿಕೇರಿ ಜ.17 : ಮೇಕೇರಿಯ ಸಕಾ೯ರಿ ಮಾದರಿ ಪ್ರಾಥಮಿಕ ಶಾಲೆಗೆ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕವನ್ನು ಕೊಡುಗೆಯಾಗಿ ಜಿಲ್ಲಾ ರೋಟರಿ ಗವನ೯ರ್ ಪ್ರಕಾಶ್ ಕಾರಂತ್ ನೀಡಿದರು. ಮೇಕೇರಿ ಶಾಲೆಯಲ್ಲಿ ಆಯೋಜಿತ ಕಾಯ೯ಕ್ರಮದಲ್ಲಿ ದಾನಿಗಳಾದ ಮಡಿಕೇರಿಯ ಮಹೇಶ್ ಎಂಟರ್ ಪ್ರೈಸಸ್ ನ ಮಾಲೀಕ ಎಸ್.ಹರೀಶ್ ಕುಮಾರ್ ರೋಟರಿ ಮಿಸ್ಟಿ ಹಿಲ್ಸ್ ಮೂಲಕ ನೀಡಿದ ಬಿಸಿ ಮತ್ತು ತಣ್ಣಗಿನ ಶುದ್ಧ ನೀರಿನ ಘಟಕವನ್ನು ವಿತರಿಸಲಾಯಿತು. ಈ ಸಂದಭ೯ ಮಾತನಾಡಿದ ರೋಟರಿ ಜಿಲ್ಲೆ 3181 ನ ಗವನ೯ರ್ ಪ್ರಕಾಶ್ ಕಾರಂತ್, ಅಪೇಕ್ಷಿತರಿಗೆ ದಾನ ಮಾಡುವ ಸಂದಭ೯ ಸಿಗುವ ಆತ್ಮತೖಪ್ತಿಗಿಂತ ಬೇರೆ ಸಮಧಾನ ಯಾವುದರಿಂದಲೂ ದೊರಕುವುದಿಲ್ಲ. ರೋಟರಿ ಸಂಸ್ಥೆ ಕೂಡ ಅಗತ್ಯವುಳ್ಳವರಿಗೆ ವಿದ್ಯಾಸಿರಿ, ಜಲಸಿರಿ, ವನಸಿರಿ, ಆರೋಗ್ಯ ಸಿರಿ ಎಂಬ ಜಿಲ್ಲಾ ಯೋಜನೆಗಳ ಮೂಲಕ ನಾನಾ ರೀತಿಯ ಸಹಾಯ ನೀಡುತ್ತಾ ಬಂದಿದೆ. ಶುದ್ದ ನೀರಿನ ಘಟಕದ ಮೂಲಕ ದೊರಕುವ ಶುದ್ಧ ನೀರಿನಿಂದ ಮಕ್ಕಳಿಗೆ ಉತ್ತಮ ಗುಣಮಟ್ಟದ ನೀರು ಕುಡಿಯಲು ದೊರಕಿ, ಅನಾರೋಗ್ಯಪೀಡಿತರಾಗುವವರ…

Read More

ಮಡಿಕೇರಿ ಜ.16 :  ಭಾರತ ಸರ್ಕಾರ, ನೆಹರು ಯುವ ಕೇಂದ್ರ, ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯದ ಸಂಯುಕ್ತಶ್ರಯದಲ್ಲಿ ಸುಭಾಷ್ ಚಂದ್ರ ಬೋಸ್ ಜನ್ಮದಿನಾಚರಣೆಯ ಅಂಗವಾಗಿ ನಡೆಸಲಾದ  ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಎ.ಎ.ರಾಝಿಕ್  ಮೊದಲ ಸ್ಥಾನ  ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

Read More

ಚೆಯ್ಯಂಡಾಣೆ ಜ.17 :  ಕೊಡಗು ಜಿಲ್ಲಾ ಪಂಚಾಯತ್,  ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಚೆಯ್ಯಂಡಾಣೆ ಕ್ಲಸ್ಟರ್ ಗೆ ಒಳಪಟ್ಟ ಪ್ರಾಥಮಿಕ ಶಾಲೆಗಳ ಮಕ್ಕಳ ಕಲಿಕಾ ಹಬ್ಬಕ್ಕೆ ಕರಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾ.ಪಂ ಅಧ್ಯಕ್ಷ  ಬಿದ್ದಂಡ ರಾಜೇಶ್ ಅಚ್ಚಯ್ಯ ದೀಪ ಬೆಳೆಗಿಸುವುದರ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿ ಅವರು, ಪ್ರಸ್ತುತ ದಿನಗಳಲ್ಲಿ ಸರಕಾರಿ ಶಾಲೆಯ ವಿದ್ಯಾರ್ಥಿಗಳ ಕಲಿಕೆಗೆ ಸರ್ಕಾರ ವಿನೂತನ ಕಾರ್ಯಕ್ರಮಗಳ ಮೂಲಕ ಸಹಕಾರ ನೀಡುತ್ತಿದ್ದು, ವಿದ್ಯಾರ್ಥಿಗಳು ಅದನ್ನು ಸದುಪಯೋಗಪಡಿಸಿಕೊಳ್ಳುವಂತೆ  ಸಲಹೆ ನೀಡಿದರು. ಚೆಯ್ಯಂಡಾಣೆ ಕ್ಲಸ್ಟರ್ ಮಟ್ಟದ ಸಿ ಆರ್ ಪಿ ಉಷಾ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರತರಲು ಇದೊಂದು ಉತ್ತಮ ಕಾರ್ಯಕ್ರಮ, ಎರಡು ವರ್ಷ ಕೋವಿಡ್‍ನಿಂದಾಗಿ ವಿದ್ಯಾರ್ಥಿಗಳಿಗೆ ಸಾಕಷ್ಟು  ನಷ್ಟ ಉಂಟಾಗಿದ್ದು, ಅದನ್ನು ಈ ವರ್ಷ ಕಲಿಕಾ ವರ್ಷ ಎಂದು ಆಚರಿಸುತ್ತಿದ್ದೇವೆ, ಕಲಿಕಾ ಚೇತರಿಕೆ ಹಾಗೂ ಕಲಿಕಾ ಹಬ್ಬಕ್ಕೆ ಪೂರಕವಾದ ಸಂಬಂಧವಿದೆ ಎಂದು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ ಕಾರ್ಯಕ್ರಮಕ್ಕೆ ಶುಭ ಹಾರೈಸಿ…

Read More

ಮಡಿಕೇರಿ ಜ.17 : ಕುಶಾಲನಗರದ ಯುವ ವಕೀಲ ಅಬೂತಾಹಿರ್ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ. ಸಿವಿಲ್ ನ್ಯಾಯಾಧೀಶರ ಪರೀಕ್ಷೆಯಲ್ಲಿ ಅಬೂತಾಹಿರ್ ಅರ್ಹತೆ ಪಡೆದಿದ್ದು, ಈ ಬಾರಿ ಒಟ್ಟು 40 ಮಂದಿ ವಕೀಲರು ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

Read More

ಮಡಿಕೇರಿ ಜ.17 : ಸಿಮೆಂಟ್ ತುಂಬಿದ ಲಾರಿಯೊಂದು ಮಗುಚಿಕೊಂಡ ಘಟನೆ ಗೋಣಿಕೊಪ್ಪ ವಿರಾಜಪೇಟೆ ಮುಖ್ಯ ರಸ್ತೆಯ ಹಾತೂರು ಗ್ರಾಮದ ತಿರುವಿನಲ್ಲಿ ನಡೆದಿದೆ. ಸೋಮವಾರ ರಾತ್ರಿ ಸುಮಾರು 11.45 ಗಂಟೆಗೆ ಈ ಘಟನೆ ನಡೆದಿದ್ದು, ವಿಷಯ ತಿಳಿದ ಸ್ಥಳೀಯ ನಿವಾಸಿ ಕೊಕ್ಕಂಡ ರೂಪ ಭೀಮಯ್ಯ ಹಾಗೂ ಪುತ್ರ ಬಿದ್ದಪ್ಪ ಅವರುಗಳು ಸ್ಥಳಕ್ಕೆ ಆಗಮಿಸಿ ಚಾಲಕ ಹಾಗೂ ನಿರ್ವಾಹಕನನ್ನು ಲಾರಿಯಿಂದ ಹೊರ ತರುವಲ್ಲಿ ಯಶಸ್ವಿಯಾದರು. ನಂತರ ಪೊಲೀಸ್ ಹಾಗೂ ಆಂಬ್ಯುಲೆನ್ಸ್ ಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲಿಸಲು ನೆರವಾದರು. ಇದೀಗ ಇಬ್ಬರು ಅಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಗೋಣಿಕೊಪ್ಪಲು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ಮಡಿಕೇರಿ ಜ.17 : ಚೆಟ್ಟಳ್ಳಿ ಪ್ರೌಢಶಾಲೆಯ ಸಮೀಪದಲ್ಲಿರುವ ಶ್ರೀಗಣಪತಿ ದೇವಾಲಯಕ್ಕೆ ಕಳ್ಳರು ನುಗ್ಗಿದ್ದು, ಹುಂಡಿಯಲ್ಲಿದ್ದ ಹಣವನ್ನು ದೋಚಿದ್ದಾರೆ. ಇಂದು ಬೆಳಗ್ಗೆ ದೇವಾಲಯ ಸಮಿತಿಯ ಅಧ್ಯಕ್ಷ ಮುಳ್ಳಂಡ ರತ್ತುಚಂಗಪ್ಪ ಅವರು ಪೂಜೆ ಸಲ್ಲಿಸಲು ಆಗಮಿಸಿದಾಗ ದೇವಾಲಯದ ಬಾಗಿಲಿನ ಬೀಗ ಮುರಿದಿರುವುದು ಕಂಡು ಬಂದಿದೆ. ಚೆಟ್ಟಳ್ಳಿ ಪೊಲೀಸ್ ಉಪಠಾಣೆಗೆ ಮಾಹಿತಿ ನೀಡಿದ ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದರು. ಕಳ್ಳರು ಹುಂಡಿಯ ಬೀಗವನ್ನು ಮುರಿದು ಸುಮಾರು 5 ಸಾವಿರ ರೂ.ಗಳಷ್ಟು ಹಣವನ್ನು ದೋಚಿರುವುದು ಕಂಡು ಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Read More

ಮಡಿಕೇರಿ ಜ.17 : ಮಡಿಕೇರಿ ಪುರಸಭೆಯ ಮಾಜಿ ಅಧ್ಯಕ್ಷ, ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾಜಿ ಕಾರ್ಯದರ್ಶಿ ಹಾಗೂ ವಕೀಲ ಎಂ.ಸಿ.ವಾಸುದೇವ್ (80) ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ. ಮೃತರು ಮೂವರು ಪುತ್ರಿಯರನ್ನು ಅಗಲಿದ್ದಾರೆ. ಬೆಂಗಳೂರಿನ ಪುತ್ರಿಯ ಮನೆಯಲ್ಲೇ ವಾಸುದೇವ್ ಅವರು ನಿಧನ ಹೊಂದಿದರು. ಪುರಸಭೆಯ ಅಧ್ಯಕ್ಷರಾಗಿದ್ದಾಗ ಅವರು ಉತ್ತಮ ಆಡಳಿತ ನೀಡಿದ್ದರು. ::: ಸಂತಾಪ ::: ಹಿರಿಯ ಕಾಂಗ್ರೆಸ್ಸಿಗ ಎಂ.ಸಿ.ವಾಸುದೇವ್ ಅವರ ನಿಧನಕ್ಕೆ ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯಂಡ ವೀಣಾಅಚ್ಚಯ್ಯ, ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಧರ್ಮಜ ಉತ್ತಪ್ಪ, ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಎ.ಎಸ್.ಪೊನ್ನಣ್ಣ, ಯುವ ಮುಖಂಡ ಡಾ.ಮಂತರ್ ಗೌಡ, ಮಾಜಿ ಸಚಿವ ಬಿ.ಎ.ಜೀವಿಜಯ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಟಿ.ಪಿ.ರಮೇಶ್, ಜಿ.ಪಂ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ, ಕಾಂಗ್ರೆಸ್ ಸೇವಾದಳದ ಜಿಲ್ಲಾಧ್ಯಕ್ಷ ಕಾನೆಹಿತ್ಲು ಮೊಣ್ಣಪ್ಪ, ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಹೊಸೂರು ಸೂರಜ್, ಪ್ರಮುಖರಾದ ಕೆ.ಎ.ಯಾಕುಬ್, ಕೆ.ಯು.ಅಬ್ದುಲ್ ರಜಾಕ್, ಅಯ್ಯಪ್ಪ ಸೇರಿದಂತೆ ಎಲ್ಲಾ ಬ್ಲಾಕ್ ಮತ್ತು ವಿವಿಧ ಘಟಕಗಳ ಪದಾಧಿಕಾರಿಗಳು…

Read More