ಮಡಿಕೇರಿ ಜ.10 : ಇದೇ ಜ. 19 ರಂದು ಶಿವಯೋಗಿ ಸಿದ್ದರಾಮ ಮತ್ತು ಮಹಾಯೋಗಿ ವೇಮನ ಜಯಂತಿಯನ್ನು ನಗರದ ಭಾರತೀಯ ವಿದ್ಯಾಭವನದಲ್ಲಿ ಆಚರಿಸಲು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದೆ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು. ಹಾಗೆಯೇ ಅಂಬಿಗರ ಚೌಡಯ್ಯ ಜಯಂತ್ಯೋತ್ಸವವನ್ನು ಇದೇ ಜನವರಿ 21 ರಂದು ಹಾರಂಗಿ ಅಥವಾ ಶಿರಂಗಾಲ ಗ್ರಾಮದಲ್ಲಿ ಆಯೋಜಿಸಲು ನಿರ್ಧರಿಸಲಾಯಿತು. ಫೆಬ್ರುವರಿ 1 ರಂದು ಆಯೋಜಿಸಬೇಕಿದ್ದ ಮಡಿವಾಳ ಮಾಚಿದೇವ ಜಯಂತಿಯನ್ನು ಫೆಬ್ರುವರಿ 11 ರಂದು ನಗರದ ದಾಸವಾಳ ರಸ್ತೆ ಬಳಿ ಇರುವ ವೀರಭದ್ರೇಶ್ವರ ದೇವಾಲಯದಲ್ಲಿ ಆಚರಿಸಲು ತೀರ್ಮಾನಿಸಲಾಯಿತು. ಹಾಗೆಯೇ ಸವಿತಾ ಮಹರ್ಷಿ ಜಯಂತಿಯನ್ನು ಫೆಬ್ರುವರಿ 27 ರಂದು ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಬಳಿಕ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ಅವರು ಸರ್ಕಾರದ ನಿಯಮದಂತೆ ಜಯಂತ್ಯೋತ್ಸವವನ್ನು ಆಯೋಜಿಸಬೇಕು. ಶಿಷ್ಟಚಾರವನ್ನು ಪಾಲಿಸಬೇಕು. ಜಯಂತ್ಯೋತ್ಸವ ಸಂಬಂಧ ಜಿಲ್ಲಾಡಳಿತದ ಜೊತೆ ಸಮಾಜದ ಎಲ್ಲರೂ ಕೈಜೋಡಿಸಬೇಕು ಎಂದು ಕೋರಿದರು. ಮಡಿವಾಳ ಸಮಾಜದ ಪ್ರಮುಖರಾದ ಸುಕುಮಾರ್ ಅವರು…
ಲೇಖಕ: admin
ಮಡಿಕೇರಿ ಜ.10 : ಮಡಿಕೇರಿಯ ಮೆಡಿಕಲ್ ಕಾಲೇಜಿನ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕುಶಾಲನಗರದ ನೇತಾಜಿ ಬಡಾವಣೆಯಲ್ಲಿ ನಡೆದಿದೆ. ಬಡಾವಣೆಯ ನಿವಾಸಿ ಸಂತೋಷ್ ಎಂಬುವವರ ಪುತ್ರಿ ಜಸ್ಮಿತ (19) ಎಂಬಾಕೆಯೇ ಆತ್ಮಹತ್ಯೆ ಮಾಡಿಕೊಂಡ ಯುವತಿ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕುಶಾಲನಗರ ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.
ಮಡಿಕೇರಿ ಜ.10 : ಕರ್ನಾಟಕ ರಾಜ್ಯ ಯುವ ಸಂಘಗಳ ವತಿಯಿಂದ ನೀಡಲಾಗುವ ರಾಜ್ಯ ಯುವ ಪ್ರಶಸ್ತಿಗೆ ಕಗೋಡ್ಲು ಗ್ರಾಮದ ಕೆ.ಎಂ. ಮೋಹನ್ ಆಯ್ಕೆಯಾಗಿದ್ದಾರೆ. ಇವರು ಕಗೋಡ್ಲು ಕಾವೇರಿ ಯುವಕ ಸಂಘದ ಸದಸ್ಯರಾಗಿ, ಮಡಿಕೇರಿ ತಾಲೂಕು ಯುವ ಒಕ್ಕೂಟದ ಉಪಾಧ್ಯಕ್ಷರಾಗಿ, ಕೊಡಗು ಜಿಲ್ಲಾ ಯುವ ಒಕ್ಕೂಟದ ಖಜಾಂಚಿತಾಗಿ, ಭಗವತಿ ದೇವಾಲಯ ಸಮಿತಿ ಸದಸ್ಯರಾಗಿ, ಕಗೋಡ್ಲು ಗಣೇಶ್ ಸೇವಾ ಸಮಿತಿ ಕಗೋಡ್ಲು ಸದಸ್ಯರಾಗಿ ಅನೇಕ ವರ್ಷಗಳಿಂದ ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವುದನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಸುಬ್ರಮಣ್ಯದಲ್ಲಿ ಜ.18 ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದೆಂದು ಎಂದು ಕೊಡಗು ಜಿಲ್ಲಾ ಯುವ ಒಕ್ಕೂಟ ಅಧ್ಯಕ್ಷ ಪಿ.ಪಿ ಸುಕುಮಾರ್ ಪತ್ರಿಕಾ ಪ್ರಟಕಣೆಯಲ್ಲಿ ತಿಳಿಸಿದ್ದಾರೆ.
ಮಡಿಕೇರಿ ಜ.10 : ಪ್ರತಿಯೊಬ್ಬರು ಸೇವಾ ಮನೋಭಾವ, ಪ್ರಕೃತಿ ಪ್ರೇಮ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕೆಂದು ರೋಟರಿಯ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ಕರೆ ನೀಡಿದ್ದಾರೆ. ಮಡಿಕೇರಿಯ ರೋಟರಿ ಹಾಲ್‍ನಲ್ಲಿ ಸಂಜೆ ನಡೆದ ರೋಟರಿಯ ವಿವಿಧ ಕಾರ್ಯಕ್ರಮಗಳ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸೇವಾ ಮನೋಭಾವ ಮತ್ತು ಸಾಮಾಜಿಕ ಕಳಕಳಿಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ರೋಟರಿ ಸಂಸ್ಥೆಗೆ ಹೊಸ ಸದಸ್ಯರ ಅವಶ್ಯಕತೆ ಇದೆ. ಯುವ ಸಮೂಹವನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆ ಮಾಡಿಕೊಂಡು ಸದಸ್ಯತ್ವವನ್ನು ನೀಡಬೇಕು. ಮಹಿಳಾ ಸದಸ್ಯತ್ವವನ್ನು ಕೂಡ ಹೆಚ್ಚಿಸಬೇಕೆಂದು ತಿಳಿಸಿದರು. ಮಡಿಕೇರಿ ರೋಟರಿ ಸಂಸ್ಥೆಯ ಅಧ್ಯಕ್ಷ ಕೆ.ಸಿ.ಕಾರ್ಯಪ್ಪ ಸ್ವಾಗತಿಸಿದರು. ಜಿಲ್ಲಾ ರೋಟರಿ ಅಸಿಸ್ಟೆಂಟ್ ಗವರ್ನರ್ ಕೆ.ಎಸ್.ರತನ್ ತಮ್ಮಯ್ಯ, ಜೋನಲ್ ಲೆಫ್ಟಿನೆಂಟ್ ಎನ್.ಡಿ.ಅಚ್ಚಯ್ಯ, ಕಾರ್ಯದರ್ಶಿ ಸುದೈ ನಾಣಯ್ಯ ಹಾಗೂ ಗೀತಾ ಗಿರೀಶ್ ಉಪಸ್ಥಿತರಿದ್ದರು. ಫೆನ್ಸಿಂಗ್ ಕ್ರೀಡೆಯಲ್ಲಿ ಸಾಧನೆ ಮಾಡಿದ ವಿಜಯ್ ದೇವಯ್ಯ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ::: ರಕ್ತದಾನ ಶಿಬಿರ ::: ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬೆಳಗ್ಗೆ ನಡೆದ ರಕ್ತದಾನ…
ಮಡಿಕೇರಿ ಜ.10 : ಕೊಡಗು ಜಿಲ್ಲಾ ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್(ನಿಮಾ)ನ ಸರ್ವ ಸದಸ್ಯರ ಸಭೆಯಲ್ಲಿ ಅಧ್ಯಕ್ಷರಾಗಿ ಡಾ. ಎ.ಆರ್.ರಾಜಾರಾಮ್, ಕಾರ್ಯದರ್ಶಿಯಾಗಿ ಡಾ.ಶ್ಯಾಮ ಪ್ರಸಾದ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಗರದಲ್ಲಿ ನಡೆದ ಈ ಆಯ್ಕೆ ನಡೆದಿದ್ದು, ಕೋಶಾಧಿಕಾರಿಯಾಗಿ ಡಾ. ಪದ್ಮನಾಭ, ನೂತನ ಕಾರ್ಯಕಾರಿ ಮಂಡಳಿಯ ಪೋಷಕರಾಗಿ ಡಾ. ಸಿ. ಆರ್. ಉದಯಕುಮಾರ್ ಮತ್ತು ಡಾ. ಬಿ.ವಿ. ಶೆಣೈ, ಉಪಾಧ್ಯಕ್ಷರಾಗಿ ಡಾ.ಉದಯ ಕುಮಾರ್, ಡಾ.ಅರುಣಾ ಭಟ್ ಮತ್ತು ಡಾ.ವಿವೇಕ್ ರಾವ್, ಜತೆ ಕಾರ್ಯದರ್ಶಿಗಳಾಗಿ ಡಾ.ಮುರಳಿ ಮತ್ತು ಡಾ.ಸುದೇಶ್ ಹೆಗ್ಡೆ ಆಯ್ಕೆಯಾಗಿದ್ದಾರೆ. ತಾಲ್ಲೂಕು ಪ್ರತಿನಿಧಿಗಳಾಗಿ ಡಾ.ರೋಷನ್ (ವಿರಾಜಪೇಟೆ), ಡಾ. ಪುರುಷೋತ್ತಮ್ (ಮಡಿಕೇರಿ), ಡಾ.ಮಹೇಶ್ (ಸೋಮವಾರಪೇಟೆ), ಡಾ.ರಾಜಾರಾಮ್ ಶೆಟ್ಟಿ (ಕುಶಾಲನಗರ) ಮತ್ತು ಡಾ.ಸುಬ್ರಹ್ಮಣ್ಯ ರಾವ್ (ಪೊನ್ನಂಪೇಟೆ), ಮಹಿಳಾ ಪ್ರತಿನಿಧಿಯಾಗಿ ಡಾ.ಶೈಲಜಾ ರಾಜೇಂದ್ರ ಆಯ್ಕೆಯಾದರು. ರಾಜ್ಯ ಕಾರ್ಯಕಾರಿ ಮಂಡಳಿಗೆ ಜಿಲ್ಲಾ ಪ್ರತಿನಿಧಿಗಳನ್ನಾಗಿ ಡಾ.ಪಿ.ಎನ್.ಕುಲಕರ್ಣಿ ಮತ್ತು ಡಾ.ಎನ್.ಕೆ.ರಾಜೇಂದ್ರ ಅವರನ್ನು ಆಯ್ಕೆಮಾಡಲಾಯಿತು. ಸಂಘಟನೆಯ ವಿವಿಧ ಯೋಜನೆಗಳ ಸಂಚಾಲಕರನ್ನು ನೇಮಕ ಮಾಡಲಾಗಿದ್ದು, ಆರೋಗ್ಯ ತಪಾಸಣಾ ಕಾರ್ಯಕ್ರಮಗಳಿಗೆ ಡಾ.ಸಂತೋಷ್ ಮತ್ತು ಡಾ.ಧನ್ಯಾ, ರಕ್ತದಾನ ಶಿಬಿರಗಳಿಗೆ…
ಮಡಿಕೇರಿ ಜ.10 : ಕೊಡಗು ಜಿಲ್ಲಾ ಬಂಟರ ಸಂಘದ ಅಧ್ಯಕ್ಷರ ಆಯ್ಕೆ ಅಸಿಂಧುವೆಂದು ಆರೋಪಿಸುವುದು ಸರಿಯಲ್ಲ, ನಿಯಮ ಬದ್ಧವಾಗಿಯೇ ನಾನು ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ ಎಂದು ಸಂಘದ ನೂತನ ಅಧ್ಯಕ್ಷ ರತ್ನಾಕರ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದ ಮಾಜಿ ಅಧ್ಯಕ್ಷ ಬಿ.ಡಿ.ನಾರಾಯಣ ಅವರ ಉಪಸ್ಥಿತಿಯಲ್ಲಿ ಸಂಘದ ಸದಸ್ಯರುಗಳ ಹಾಜರಾತಿಯಲ್ಲಿ ಸಂಘದ ಮಹಾಸಭೆಯನ್ನು ನಡೆಸಲಾಗಿದೆ. ಈ ಸಭೆ ಅಸಿಂಧುವೆಂದು ಆರೋಪಿಸುವವರು ಸಂಘದ ಬೈಲ ಓದಿ ನೋಡಿಲ್ಲ, ಇಂತಹವರಿಂದ ಕಾನೂನಿನ ಪಾಠದ ಅಗತ್ಯತೆ ತಮಗಿಲ್ಲವೆಂದು ಹೇಳಿದರು. ಕೊಡಗು ಜಿಲ್ಲಾ ಬಂಟರ ಸಂಘದ ಮಹಾಸಭೆಗೂ ಮುಂಚಿತವಾಗಿ, ಮತದಾನದ ಹಕ್ಕುಳ್ಳ ಸದಸ್ಯರಿಗೆ ಸಭೆಯ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ. ಸಭೆಯಲ್ಲಿ ಹಾಜರಿದ್ದ ಸದಸ್ಯರುಗಳ ಸಮ್ಮುಖದಲ್ಲೆ ನೂತನ ಆಡಳಿತ ಮಂಡಳಿಯನ್ನು ರಚಿಸಲಾಗಿದೆ ಮತ್ತು ಇದನ್ನು ಸಭಾ ನಡಾವಳಿಯಲ್ಲೂ ದಾಖಲಿಸಲಾಗಿದೆ ಎಂದರು. ನೂತನ ಆಡಳಿತ ಮಂಡಳಿಯಲ್ಲಿ ಅಧ್ಯಕ್ಷನಾಗಿ ರತ್ನಾಕರ ಶೆಟ್ಟಿಯಾದ ನಾನು, ಪ್ರಧಾನ ಕಾರ್ಯದರ್ಶಿಯಾಗಿ ಶಬರೀಶ್ ಶೆಟ್ಟಿ, ಉಪಾಧ್ಯಕ್ಷರಾಗಿ ಪ್ರದೀಪ್ ಶೆಟ್ಟಿ, ಜಂಟಿ ಕಾರ್ಯದರ್ಶಿಯಾಗಿ ಮದನ್ ಶೆಟ್ಟಿ ಮತ್ತು…
ವಿರಾಜಪೇಟೆ ಜ.10 : ಬಿಟ್ಟಂಗಾಲ ಸಮೀಪದ ವಿ. ಬಾಡಗದ ಹೈ ಪ್ಲೈಯರ್ಸ್ ತಂಡದ ವತಿಯಿಂದ ಫೆ.23 ರಿಂದ ದ. ಕೊಡಗಿನ 3 ನಾಡು ವ್ಯಾಪ್ತಿಯ ತಂಡಗಳಿಗಾಗಿ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಹೈಪ್ಲೈಯರ್ಸ್ ತಂಡದ ಅಧ್ಯಕ್ಷ ಅಮ್ಮಣಿಚಂಡ ರಂಜಿ ಪೂಣಚ್ಚ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇರಳಿನಾಡು, ಕುತ್ತುನಾಡು ಮತ್ತು ಬೊಟ್ಟಿಯತ್ ನಾಡು ವ್ಯಾಪ್ತಿಯ ಕೊಡವ ಕುಟುಂಬ ತಂಡಗಳಿಗಾಗಿ ಆಯೋಜಿಸಲಾಗಿರುವ ಈ ಹಾಕಿ ಪಂದ್ಯಾವಳಿಯು ವಿ. ಬಾಡಗ ಗ್ರಾಮದಲ್ಲಿ ಮೊದಲ ಬಾರಿಗೆ ಜರುಗುತ್ತಿದೆ. ವಿ.ಬಾಡಗದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಒಟ್ಟು 4 ದಿನಗಳ ಕಾಲ ನಡೆಯುವ ಈ ಕೌಟುಂಬಿಕ ಹಾಕಿ ಪಂದ್ಯಾವಳಿಗಾಗಿ ಈಗಾಗಲೇ ಸಿದ್ಧತೆಗಳು ಆರಂಭಗೊಂಡಿದ್ದು, ಹೆಚ್ಚಿನ ತಂಡಗಳ ನೋಂದಣಿಯನ್ನು ನಿರೀಕ್ಷಿಸಲಾಗಿದೆ ಎಂದು ರಂಜಿ ಪೂಣಚ್ಚ ಮಾಹಿತಿ ನೀಡಿದರು. ಹಾಕಿ ಕೂರ್ಗ್ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಲು ಉದ್ದೇಶಿಸಿರುವ ಈ ಹಾಕಿ ಪಂದ್ಯಾವಳಿಯು ಹಾಕಿ ಕರ್ನಾಟಕ ಸಂಸ್ಥೆಯ ನಿಯಮಾವಳಿಗೆ ಬದ್ಧವಾಗಿ ನಡೆಯಲಿದೆ. ನಾಕ್‍ಔಟ್ ಮಾದರಿಯಲ್ಲಿ…
ವಿರಾಜಪೇಟೆ ಜ.10 : ಅರಮೇರಿ ಶ್ರೀ ಕಳಂಚೇರಿ ಮಠದಲ್ಲಿ ಹೊಂಬೆಳಕು ಮಾಸಿಕ ತತ್ವಚಿಂತನ ಗೋಷ್ಠಿಯ 206ನೇ ಕಿರಣ ಕಾರ್ಯಕ್ರಮ ನಡೆಯಿತು. ನಾಪೋಕ್ಲುವಿನ ಕಾಫಿ ಬೆಳೆಗಾರ ನೂರಾಂಬಾಡ್ ಎಸ್.ಉದಯಶಂಕರ್ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ರಾಷ್ಟ್ರದ ಪ್ರಗತಿಯಲ್ಲಿ ಕೃಷಿಕರ ಪಾತ್ರ ಅತ್ಯಮೂಲ್ಯವಾದದ್ದು. ಆದರೂ ಸರಕಾರಗಳ ನೀತಿಗಳು ಕೃಷಿಕರ ಪರವಾಗಿಲ್ಲ. ಕೃಷಿಕರು ತಮ್ಮ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಸಿಗದೆ ಕಾರ್ಪೋರೇಟ್ ದೊರೆಗಳನ್ನು ಅವಲಂಭಿಸಬೇಕಾಗಿ ಬಂದಿರುವುದು ಪ್ರಸಕ್ತ ಸ್ಥಿತಿ. ಆರ್ಥಿಕವಾಗಿ ದುಸ್ಥಿತಿ ಅನುಭವಿಸುತ್ತಿರುವ ಕೃಷಿಕರ ನೆರವಿಗೆ ಕಟ್ಟಕಡೆಯ ಆಶ್ರಯವಾದ ಬ್ಯಾಂಕ್‍ಗಳೂ ಬರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಮಡಿಕೇರಿಯ ಉದ್ಯಮಿ, ಕೃಷಿ ತಜ್ಞ “ಕಾಫಿ ಕೃಷಿ, ಅಂದು-ಇಂದು” ಎಂಬ ವಿಷಯದಲ್ಲಿ ಉಪನ್ಯಾಸ ನೀಡಿ ಜಿಲ್ಲೆಯ ಬೆಳೆಗಾರರು ಅಸಂಪ್ರದಾಯಿಕ ಬೆಳೆಯಿಂದಾಗಿ ನಿರಂತರ ಸೋಲನ್ನು ಅನುಭವಿಸುತ್ತಿದ್ದಾರೆ. ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆ ಕಂಡು ಹಿಡಿಯುವಲ್ಲಿ ವಿಫಲರಾಗುತ್ತಿದ್ದಾರೆ. ವನ್ಯಜೀವಿಗಳ ಉಪಟಳದಿಂದಾಗಿ ಕಾಫೀ ಬೆಳೆಗಾರರು ಆತಂಕದ ಬದುಕನ್ನು ಸಾಗಿಸುತ್ತಿದ್ದಾರೆ. ಇದು ಉತ್ಪನ್ನಗಳ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತಿದೆ. ವಿದೇಶ…
ಮಡಿಕೇರಿ ಜ.10 : ವರ್ಷಕ್ಕೆ 2 ಬಾರಿಯಾದರೂ ದಂತ ವೈದ್ಯಕೀಯ ತಪಾಸಣೆ ಮಾಡಿದರೆ ಹಲ್ಲುಗಳ ಆರೋಗ್ಯ ಕಾಪಾಡಿಕೊಳ್ಳಬಹುದೆಂದು ದಂತ ವೈದ್ಯೆ ಡಾ.ಅನುಶ್ರೀ ಸಲಹೆ ನೀಡಿದರು. ನಿಟ್ಟೆ ವಿಶ್ವವಿದ್ಯಾಲಯಕ್ಕೆ ಒಳಪಡುವ ಎ.ಬಿ ಶೆಟ್ಟಿ ಜ್ಞಾಪಕಾರ್ಥ ದಂತ ವಿಜ್ಞಾನ ಸಂಸ್ಥೆ ಹಾಗೂ ಮಡಿಕೇರಿ ಅಶ್ವಿನಿ ಆಸ್ಪತ್ರೆ ಸಹಭಾಗಿತ್ವದಲ್ಲಿ ಮಡಿಕೇರಿ ಕೊಡಗು ವಿದ್ಯಾಲಯದ ಅಪೊರ್ಚ್ಯುನಿಟಿ ಶಾಲೆಯ ವಿಶೇಷಚೇತನ ಮಕ್ಕಳಿಗೆ ಉಚಿತ ದಂತ ಆರೋಗ್ಯ ತಪಾಸಣೆ ನೆರವೇರಿಸಿ ಮಾತನಾಡಿದ ಅವರು, ದಂತ ಆರೋಗ್ಯ ಕಾಪಾಡಿಕೊಳ್ಳಲು ೬ ತಿಂಗಳಿಗೆ ಒಂದು ಬಾರಿ ದಂತ ತಪಾಸಣೆ ನಡೆಸುವುದು ಅಗತ್ಯ. ಹಲ್ಲುಗಳಲ್ಲಿ ಸಣ್ಣ-ಪುಟ್ಟ ಕಲೆಗಳಿದ್ದರೂ ಯಾವುದೇ ಹಿಂಜರಿಕೆ ಇಲ್ಲದೆ ದಂತ ವೈದ್ಯರಲ್ಲಿ ತಪಾಸಣೆ ಮಾಡಿಸಬೇಕೆಂದು ಹೇಳಿದರು. ಸಾಮಾನ್ಯವಾಗಿ ದೈಹಿಕವಾಗಿ ಬಲಹೀನವಿರುವ ವಿಶೇಷಚೇತನ ಮಕ್ಕಳು ತಮ್ಮ ಹಲ್ಲುಗಳನ್ನು ಉಜ್ಜಲು ಹಿಂದೇಟು ಹಾಕುತ್ತಾರೆ. ಸರಿಯಾಗಿ ಹಲ್ಲನ್ನು ಸ್ವಚ್ಛಗೊಳಿಸದ ಕಾರಣ ಹಲ್ಲಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದುದರಿಂದ ಇಂತಹ ಮಕ್ಕಳಿಗೆ ವಿದ್ಯುತ್ ಚಾಲಿತ ’ಟೂತ್‌ಬ್ರಷ್’ಗಳನ್ನು ನೀಡಬೇಕು. ಇದರ ಮೂಲಕ ಸುಲಭವಾಗಿ ಹಲ್ಲುಗಳನ್ನು ಸ್ವಚ್ಛಗೊಳಿಸಬಹುದಾಗಿದೆ ಎಂದರು.…
: ಕರ್ನಾಟಕ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ 2023ರ ವೇಳಾಪಟ್ಟಿ : 09-03-2023 – ಕನ್ನಡ, ಅರೇಬಿಕ್, 11-03-2023 -ಗಣಿತ ಶಾಸ್ತ್ರ, ಶಿಕ್ಷಣ ಶಾಸ್ತ್ರ. 13-03-2023- ಅರ್ಥಶಾಸ್ತ್ರ. 14-03-2023- ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಮನಃಶಾಸ್ತ್ರ, ರಸಾಯನಶಾಸ್ತ್ರ, ಮೂಲ ಗಣಿತ. 15-03-2023- ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್. 16-03-2023 – ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ. 17-03-2023 – ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋಮೊಬೈಲ್, ಹೆಲ್ತ್ಕೇರ್, ಬ್ಯೂಟಿ ಅಂಡ್ 18-03-2023- ಭೂಗೋಳಶಾಸ್ತ್ರ, ಜೀವಶಾಸ್ತ್ರ. 20-03-2023- ಇತಿಹಾಸ, ಭೌತಶಾಸ್ತ್ರ. 21-03-2023 80. 23-03-2023-20 vs. 25-03-2023 -ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ. 27-03-2023 – ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, – ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ. 29-03-2023 -ಸಮಾಜಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ. ******* 2022-23ನೇ ಸಾಲಿನ ದ್ವಿತೀಯ ಪಿಯುಸಿ ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ಜನವರಿ 23, 2023 ರಿಂದ ಫೆಬ್ರವರಿ 4.2023ರ ವರೆಗೆ ನಡೆಯಲಿದೆ. ದ್ವಿತೀಯ ಪಿಯು ಪೂವ ಸಿದ್ಧತಾ ಪರೀಕ್ಷೆಗಳನ್ನು ಆಯಾ…






