ಮಡಿಕೇರಿ ಫೆ.26 NEWS DESK : ಕಡಗದಾಳು ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ಮಾ.1 ರಂದು ಹಿಂದೂ ಸಂಗಮ ಕಾರ್ಯಕ್ರಮ ಮತ್ತು ಬೃಹತ್ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಹಿಂದೂ ಸಂಗಮ ಆಯೋಜನಾ ಸಮಿತಿಯ ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಮಾತೃಭೂಮಿ, ಹಿಂದೂ ಸಂಸ್ಕೃತಿ, ಆಚಾರ, ವಿಚಾರ, ಪರಂಪರೆ, ಸಂಪ್ರದಾಯವನ್ನು ರಕ್ಷಣೆ ಮಾಡುವುದರ ಜೊತೆಗೆ ಉಳಿಸಿ ಬೆಳೆಸುವ ಮೂಲಕ ಸುಭದ್ರವಾದ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ನಮ್ಮೆಲ್ಲರ ಜವಾಬ್ದಾರಿ ಮತ್ತು ಕರ್ತವ್ಯವಾಗಿದೆ. ಪ್ರತಿಯೊಬ್ಬ ಹಿಂದೂ ಕೂಡ ಸಂಘಟಿತವಾಗುವ ಮೂಲಕ ಹಿಂದುತ್ವದ ವಿಚಾರದಲ್ಲಿ ಮುಂದಾಲೋಚನೆಯೊಂದಿಗೆ ಬದುಕಿದರೆ ಮಾತ್ರ ಹಿಂದೂ ಧರ್ಮ ಮತ್ತು ಸಂಸ್ಕೃತಿಯಲ್ಲಿ ಉಳಿಸಲು ಸಾಧ್ಯ. ಮಾತೃ ಭೂಮಿಯ ರಕ್ಷಣೆ ಜೊತೆಗೆ ಧರ್ಮವನ್ನು ಉಳಿಸುವ ಉದ್ದೇಶವಾಗಿ ಹಿಂದೂ ಸಂಗಮ ಕಾರ್ಯಕ್ರಮ ಆಯೋಜನೆಗೊಂಡಿದೆ. ಹಿಂದೂ ಸಂಗಮ ಕಾರ್ಯಕ್ರಮದ ಪ್ರಯುಕ್ತ ಭವ್ಯ ಶೋಭಾಯಾತ್ರೆ ಕಡಗದಾಳು ಸರಕಾರಿ ಪ್ರೌಢ ಶಾಲಾ ಮೈದಾನದಿಂದ ಬೆಳಗ್ಗೆ 10.30 ಗಂಟೆಗೆ ಆರಂಭವಾಗಲಿದೆ. ಕಳಶ ಹೊತ್ತ ಮಹಿಳೆಯರು, ಸ್ತಬ್ಧಚಿತ್ರ,…
ಲೇಖಕ: admin
ಮಡಿಕೇರಿ ಫೆ.26 NEWS DESK : ನಿಯಮ ಪ್ರಕಾರ ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆ, ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಇರಬೇಕಾದಷ್ಟು ಔಷಧಿಗಳು ಲಭ್ಯವಿಲ್ಲ ಮತ್ತು ವೈದ್ಯರಗಳ ಕೊರತೆಯೂ ಇರುವುದಾಗಿ ಸರ್ಕಾರಿ ವೈದ್ಯಾದಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಡಾ.ಆನಂದ ಎಂ. ತಿಳಿಸಿದರು. ಪ್ರಸ್ತುತ ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ 478 ವಿವಿಧ ಔಷಧಿ(ಡ್ರಗ್ಸ್) ಇರಬೇಕಾಗಿದ್ದರು, ಲಭ್ಯವಿರುವುದು 150 ಔಷಧಿಗಳಷ್ಟೆ. ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 393 ಔಷಧಿಗಳು ಇರಬೇಕಾಗಿದ್ದರು, ಇರುವುದು 113 ಔಷಧಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕನಿಷ್ಟ 239 ಔಷಧಿಗಳು ಲಭ್ಯವಿರಬೇಕಾಗಿದ್ದರೂ ಇರುವುದು 108 ಔಷಧಿಗಳು ಮಾತ್ರ. ಸರ್ಕಾರದ ವೈದ್ಯಕೀಯ ಸರಬರಾಜು ನಿಗಮ ಅಗತ್ಯ ಔಷಧಿಗಳನ್ನು ಪೂರೈಸುವಲ್ಲಿ ವಿಫಲವಾಗಿರುವುದರಿಂದ ಸಾರ್ವಜನಿಕರಿಗೆ ಅಗತ್ಯ ಚಿಕಿತ್ಸೆ ನೀಡುವುದು ಕಷ್ಟಕರವಾಗಿದೆಯೆಂದು ತಿಳಿಸಿದರು. ಜಿಲ್ಲೆಯಲ್ಲಿ ವೈದ್ಯರುಗಳ ಹದ್ದೆಯು ಖಾಲಿ ಇರುವುದಾಗಿ ತಿಳಿಸಿದ ಅವರು, ತಾಲ್ಲೂಕು ಆಸ್ಪತ್ರೆಗಳಲ್ಲಿ ಇರುವ 30 ವೈದ್ಯರ ಹುದ್ದೆಗಳಲ್ಲಿ ಇರುವುದು 16 ವೈದ್ಯರು, ಜಿಲ್ಲೆಯ 7 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಇರುವ 31 ವೈದ್ಯರ…
ಮಡಿಕೇರಿ ಫೆ.26 NEWS DESK : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳ ಮೂಲಭೂತ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಸೂಕ್ತ ಸ್ಪಂದನೆ ನೀಡಿಲ್ಲವೆಂದು ಆರೋಪಿಸಿ ಮಾ.11 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದಾರೆ. ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ, ಕರ್ನಾಟಕ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖಾ ನೌಕರರ ಕೇಂದ್ರ ಸಂಘ ಹಾಗೂ ಇಲಾಖೆಯ ಎಲ್ಲಾ ವೃಂದ ಸಂಘಗಳು ಜಂಟಿಯಾಗಿ ಕರೆದಿದ್ದ ಸುದ್ದಿ ಗೋಷ್ಠಿಯಲ್ಲಿ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷರಾದ ಡಾ.ಆನಂದ್ ಎಂ. ಅವರು ಈ ಬಗ್ಗೆ ವಿವರಗಳನ್ನಿತ್ತರು. ಸರ್ಕಾರ ಬೇಡಿಕೆಗಳ ಈಡೇರಿಕೆಗೆ ಅಗತ್ಯ ಕ್ರಮ ಕೈಗೊಳ್ಳದಿದ್ದಲ್ಲಿ ಮಾ.11ರಿಂದ ಮಾ.15ರವರೆಗೆ ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಡಿಸ್ಪೆನ್ಸರಿಗಳಲ್ಲಿನ ಎಲ್ಲಾ ವೃಂದದ ವೈದ್ಯರು, ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಪ್ಪು ಪಟ್ಟಿ ಧರಿಸಿ, ಹೊರ ರೋಗಿಗಳ ಚಿಕಿತ್ಸೆಯನ್ನು ಸ್ಥಗಿತಗೊಳಿಸಿ, ತುರ್ತು ಸೇವೆಗಳನ್ನು ಮಾತ್ರ ನಿರ್ವಹಿಸುವ ಮೂಲಕ ಮುಷ್ಕರದಲ್ಲಿ ಪಾಲ್ಗೊಳ್ಳಲಿರುವುದಾಗಿ ಸ್ಪಷ್ಟಪಡಿಸಿದರು.…
ಮಡಿಕೇರಿ ಫೆ.26 NEWS DESK : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿ ಹಿನ್ನೆಲೆಯಲ್ಲಿ ಹಿಂದೂ ಸಂಸ್ಕೃತಿಯ ಸಂರಕ್ಷಣೆಯ ಧ್ಯೇಯದೊಂದಿಗೆ ಫೆ.28 ರಂದು ಚೆಟ್ಟಿಮಾನಿಯಲ್ಲಿ ಹಿಂದೂ ಸಂಗಮ ಕಾರ್ಯಕ್ರಮ ನಡೆಯಲಿದೆ. ಚೆಟ್ಟಿಮಾನಿ ಹಿಂದೂ ಸಂಗಮ ಆಯೋಜನಾ ಸಮಿತಿಯ ಸಂಚಾಲಕರಾದ ವಿವೇಕ್ ಕೆದಂಬಾಡಿ ಅವರು ಈ ಕುರಿತು ಮಾತನಾಡಿ, ಹಿಂದೂ ಸಂಗಮದ ಅಂಗವಾಗಿ ಅಂದು ಬೆಳಗ್ಗೆ ಶೋಭಾಯಾತ್ರೆ ಮತ್ತು ಚೆಟ್ಟಿಮಾನಿ ಆಟದ ಮೈದಾನದಲ್ಲಿ ಸಮಾವೇಶ ನಡೆಯಲಿದೆಯೆಂದು ತಿಳಿಸಿದರು. ಸಮಿತಿಯ ಪ್ರಮುಖರಾದ ಶರತ್ ಪದಕಲ್ಲು ಮಾತನಾಡಿ, ಅಂದು ಬೆಳಗ್ಗೆ 9.30 ಗಂಟೆಗೆ ಪದಕಲ್ಲು ಗ್ರಾಮದ ಶ್ರೀ ಭಗವತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.ಬಳಿಕ ಕುಂದಚೇರಿ ಗ್ರಾಮ ಪಂಚಾಯ್ತಿಗೆ ಒಳಪಟ್ಟ ಪದಕಲ್ಲು, ಕುಂದಚೇರಿ, ಕೋಪಟ್ಟಿ, ಚರಂಡೇಟಿ ಮತ್ತು ಸಿಂಗತ್ತೂರು ಗ್ರಾಮ ವ್ಯಾಪ್ತಿಯ ಹಿಂದೂ ಬಾಂಧವರು ಸಮಾವೇಶಗೊಳ್ಳುವ ಮೂಲಕ ಬೃಹತ್ ಶೋಭಾಯಾತ್ರೆ ನಡೆಯಲಿದೆ. ಇದರಲ್ಲಿ ಕೇರಳದ ಚಂಡೆ ವಾದ್ಯ, ಮಕ್ಕಳ ನೃತ್ಯ ತಂಡ, ಕಲಶ ಹೊತ್ತ ಮಹಿಳೆಯರು, ವಿವಿಧ ಸ್ತಬ್ಧ ಚಿತ್ರಗಳು ಪಾಲ್ಗೊಳ್ಳಲಿರುವುದಾಗಿ ತಿಳಿಸಿದರು. ಪದಕಲ್ಲುವಿನಿಂದ ಚೆಟ್ಟಿಮಾನಿಯ…
ಮಡಿಕೇರಿ ಫೆ.26 NEWS DESK : ದಕ್ಷಿಣ ಕೊಡಗಿನ ಬಾಡಗರಕೇರಿ ಗ್ರಾಮದಲ್ಲಿರುವ ಐತಿಹಾಸಿಕ ಶ್ರೀ ಮೃತ್ಯುಂಜಯ ದೇವಾಲಯದ ವಾರ್ಷಿಕ ಉತ್ಸವವು ಇಂದಿನಿಂದ (ಫೆ.26) ಮಾ.8 ರವರೆಗೆ ಜರುಗಲಿದೆ. ಕೊಡಿಮರ ನಿಲ್ಲಿಸುವ ಮೂಲಕ 11 ದಿನಗಳ ವಾರ್ಷಿಕ ಪೂಜೋತ್ಸವಗಳಿಗೆ ಬೆಳಗ್ಗಿನ ಜಾವ ತಕ್ಕಮುಖ್ಯಸ್ಥರು, ಆಡಳಿತ ಮಂಡಳಿ, ಊರಿನವರು ಮತ್ತು ಊರಿನ ಮಹಿಳೆಯರಿಂದ 12 ತಳಿಯ ತಕ್ಕಿಬೊಳ್‌ಚ ದುಡಿಕೊಟ್ಟ್ ಪಾಟ್‌ನೊಂದಿಗೆ ಹಬ್ಬಕ್ಕೆ ಚಾಲನೆ ಸಿಗಲಿದ್ದು, ನಂತರ ಊರಿನ ಪರವಾಗಿ ಶತರುದ್ರಾಭಿಷೇಕ, ಪ್ರಸಾದ ವಿತರಣೆ, ರಾತ್ರಿ 8 ಗಂಟೆಗೆ ಕೊಡಿಮರ ನಿಲ್ಲಿಸುವದು, ಶುದ್ಧ ಕಲಶ, ಉತ್ಸವ ಮೂರ್ತಿಗಳ ದರ್ಶನ, ಪ್ರಸಾದ ವಿತರಣೆ ನಂತರ ಅನ್ನದಾನ ನಡೆಯಲಿದೆ. ಫೆ.27 ರಿಂದ ಬೆಳಿಗ್ಗೆ 11 ರಿಂದ ನಿತ್ಯಪೂಜೆ, ಸಂಜೆ ತೂಚಂಬಲಿ, ಬೆಳಿಗ್ಗೆ 5ಕ್ಕೆ ಉತ್ಸವ ಮೂರ್ತಿಯ ದರ್ಶನ ಜರುಗಲಿವೆ. ಮಾ.2 ರ ಬೆಳಿಗ್ಗೆ 5 ರಿಂದ ಇರುಬಳಕು, ತುಲಾಭಾರ ಸೇವೆಗಳು ಮಾ.5 ರಿಂದ ಹರಕೆ ಬಳಕು ಆರಂಭಗೊಳ್ಳಲಿವೆ. ಮಾ. 7 ರಂದು ನಿತ್ಯಪೂಜೆಯೊಂದಿಗೆ ಸಂಜೆ 5 ಗಂಟೆಗೆ ನೆರಪು,…
ಬೆಂಗಳೂರು, ಫೆಬ್ರವರಿ 26, 2026: ಐಟಿ ಹಬ್ ಬೆಂಗಳೂರಿನಲ್ಲಿ ಅಮೆರಿಕದ ಇ-ಕಾಮರ್ಸ್ ದೈತ್ಯ ಅಮೆಜಾನ್ ತನ್ನ ಬೃಹತ್ ಹೆಜ್ಜೆಯನ್ನಿಟ್ಟಿದೆ. ಉತ್ತರ ಬೆಂಗಳೂರಿನ ಯಲಹಂಕದ ಕಟ್ಟಿಗೇನಹಳ್ಳಿ ಸಮೀಪ ಅಮೆಜಾನ್ ತನ್ನ ಹೊಸ ಕಚೇರಿ ಕ್ಯಾಂಪಸ್‌ನ್ನು ಸೋಮವಾರ ಅಧಿಕೃತವಾಗಿ ಉದ್ಘಾಟಿಸಿತು. ಇದು ಏಷ್ಯಾದಲ್ಲೇ ಅಮೆಜಾನ್‌ನ ಎರಡನೇ ಅತಿದೊಡ್ಡ ಕಚೇರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕ್ಯಾಂಪಸ್‌ನ ಪ್ರಮುಖ ವೈಶಿಷ್ಟ್ಯಗಳು ಬೃಹತ್ ವಿಸ್ತೀರ್ಣ: ಈ ಹೊಸ ಕ್ಯಾಂಪಸ್ 5 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿದ್ದು, 11 ಲಕ್ಷ ಚದರ ಅಡಿ ವಿಸ್ತೀರ್ಣದ 12 ಅಂತಸ್ತಿನ ಬೃಹತ್ ಕಟ್ಟಡವನ್ನು ಹೊಂದಿದೆ. ಸ್ಥಳ: ಈ ಕೇಂದ್ರವು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿದ್ದು, ಉತ್ತರ ಬೆಂಗಳೂರಿನ ವೇಗವಾಗಿ ಬೆಳೆಯುತ್ತಿರುವ ವ್ಯಾಪಾರ ವಲಯದಲ್ಲಿದೆ. ಉದ್ಯೋಗ ಸೃಷ್ಟಿ: ಈ ಸೌಲಭ್ಯವು ಇ-ಕಾಮರ್ಸ್, ಪಾವತಿಗಳು (Payments), ತಂತ್ರಜ್ಞಾನ ಮತ್ತು ಮಾರಾಟಗಾರರ ಸೇವೆಗಳ ವಿಭಾಗಗಳಲ್ಲಿ ಸುಮಾರು 7,000 ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಅವಕಾಶ ಒದಗಿಸಲಿದೆ. Amazon Inaugurates New Office In Bengaluru, It Is Asia’s…
ಬೆಂಗಳೂರು: ರಿಷಬ್ ಶೆಟ್ಟಿ ಅಭಿನಯದ ಜಾಗತಿಕ ಖ್ಯಾತಿಯ ‘ಕಾಂತಾರಾ’ ಚಿತ್ರದ ದೈವಾರಾಧನೆಯ ದೃಶ್ಯಗಳನ್ನು ಅಪಹಾಸ್ಯ ಮಾಡಿದ ಆರೋಪ ಎದುರಿಸುತ್ತಿರುವ ಬಾಲಿವುಡ್ ನಟ ರಣವೀರ್ ಸಿಂಗ್ ವಿರುದ್ಧ ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. “ನೀವು ಸೂಪರ್ ಸ್ಟಾರ್ ಇರಬಹುದು ಅಥವಾ ಯಾರೇ ಇರಬಹುದು, ಜನರ ಧಾರ್ಮಿಕ ಭಾವನೆಗಳ ವಿಚಾರದಲ್ಲಿ ಹಗುರವಾಗಿ ಮಾತನಾಡುವುದು ಸಲ್ಲದು” ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಮಂಗಳವಾರ ಖಡಕ್ ಎಚ್ಚರಿಕೆ ನೀಡಿದೆ. ಪ್ರಕರಣದ ಹಿನ್ನೆಲೆ ಏನು? ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ (IFFI) ವೇದಿಕೆಯೊಂದರಲ್ಲಿ ರಣವೀರ್ ಸಿಂಗ್ ಅವರು ಕಾಂತಾರಾ ಚಿತ್ರದ ದೈವದ ಪಾತ್ರವನ್ನು ‘ಫೀಮೇಲ್ ಗೋಸ್ಟ್’ (ಮಹಿಳಾ ದೆವ್ವ) ಎಂದು ಕರೆದು ಮಿಮಿಕ್ರಿ ಮಾಡಿದ್ದರು ಎಂಬ ಆರೋಪವಿದೆ. ಈ ಹೇಳಿಕೆಯು ಕರಾವಳಿಯ ದೈವಾರಾಧನೆ ಮತ್ತು ಭಕ್ತರ ಭಾವನೆಗೆ ಧಕ್ಕೆ ತಂದಿದೆ ಎಂದು ಬೆಂಗಳೂರಿನ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಹೈಕೋರ್ಟ್ ಪೀಠದ ಕಟು ಮಾತುಗಳು ವಿಚಾರಣೆ ವೇಳೆ ರಣವೀರ್ ಸಿಂಗ್ ಅವರ…
ಬೆಂಗಳೂರು/ಉದಯಪುರ: ದಕ್ಷಿಣ ಭಾರತದ ಖ್ಯಾತ ತಾರಾ ಜೋಡಿಗಳಾದ ‘ನ್ಯಾಷನಲ್ ಕ್ರಶ್’ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಇಂದು ವೈವಾಹಿಕ ಜೀವನಕ್ಕೆ ಕಾಲಿರಿಸುವ ಮೂಲಕ ತಮ್ಮ ಅಭಿಮಾನಿಗಳ ದಶಕದ ಕನಸನ್ನು ನನಸು ಮಾಡಿದ್ದಾರೆ. ರಾಜಸ್ಥಾನದ ಉದಯಪುರದ ಐಷಾರಾಮಿ ಹೋಟೆಲೊಂದರಲ್ಲಿ ಕುಟುಂಬ ಸದಸ್ಯರು ಹಾಗೂ ಅತ್ಯಂತ ಆಪ್ತರ ಸಮ್ಮುಖದಲ್ಲಿ ಈ ಜೋಡಿ ಸಪ್ತಪದಿ ತುಳಿದಿದ್ದಾರೆ. ಬೆಳಿಗ್ಗೆ ತೆಲುಗು ಸಂಪ್ರದಾಯ, ಸಂಜೆ ಕೊಡವ ವೈಭವ ವಿಭಿನ್ನ ಸಂಸ್ಕೃತಿಯ ಹಿನ್ನೆಲೆ ಹೊಂದಿರುವ ಈ ಜೋಡಿ, ಪರಸ್ಪರರ ಸಂಪ್ರದಾಯಗಳಿಗೆ ಸಮಾನ ಆದ್ಯತೆ ನೀಡುವ ಮೂಲಕ ಮಾದರಿಯಾಗಿದ್ದಾರೆ: ಮಂಗಳ ಮುಹೂರ್ತ: ಇಂದು ಬೆಳಿಗ್ಗೆ ವಿಜಯ್ ದೇವರಕೊಂಡ ಅವರ ತೆಲುಗು ಕುಟುಂಬದ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ವಿವಾಹ ಕಾರ್ಯಕ್ರಮಗಳು ನೆರವೇರಿವೆ. ಕೊಡವ ಸಂಪ್ರದಾಯ: ನಟಿ ರಶ್ಮಿಕಾ ಕೊಡವ ಸಮುದಾಯಕ್ಕೆ ಸೇರಿದವರಾದ್ದರಿಂದ, ಇಂದು ಸಂಜೆ ರಶ್ಮಿಕಾ ಕುಟುಂಬಸ್ಥರ ನೇತೃತ್ವದಲ್ಲಿ ಕೊಡಗಿನ ವಿಶಿಷ್ಟ ಸಂಪ್ರದಾಯದಂತೆ ಮತ್ತೊಂದು ಸುತ್ತಿನ ವಿವಾಹದ ಆಚರಣೆಗಳು ನಡೆಯಲಿವೆ ಎಂದು ವರದಿಯಾಗಿದೆ. ಚಿತ್ರರಂಗದ ಯಶಸ್ವಿ ಜೋಡಿ ಪರದೆ ಮೇಲೆ ಅದ್ಭುತ ಕೆಮಿಸ್ಟ್ರಿ…
ಮಡಿಕೇರಿ, NEWS DESK ಫೆ.26:-ಇದೇ ಮಾರ್ಚ್ 3 ರಂದು ಸಂಭವಿಸುವ ಫಾಲ್ಗುನ ಶುಕ್ಲ ಪೌರ್ಣಮಿ ಖಗ್ರಾಸ ಗ್ರಸ್ತೋದಯ ಚಂದ್ರಗ್ರಹಣ ಪ್ರಯುಕ್ತ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ಬೆಳಗ್ಗೆ 9 ರಿಂದ ರಾತ್ರಿ 7.15 ರವರೆಗೆ ಸಾರ್ವಜನಿಕ ಭಕ್ತಾದಿಗಳಿಗೆ ದೇವರ ದರ್ಶನ ಇರುವುದಿಲ್ಲ. ಈ ದಿನದಂದು ಯಾವುದೇ ಪಿಂಡಪ್ರಧಾನ, ಪಿತೃ ಕಾರ್ಯಗಳು, ಹುಣ್ಣಿಮೆಯ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಭಕ್ತಾದಿಗಳಿಗೆ ಅನ್ನದಾಸೋಹ ಇರುವುದಿಲ್ಲ. ಅಂತೆಯೇ ಶ್ರೀ ತಲಕಾವೇರಿ ದೇವಾಲಯದಲ್ಲಿ ಬೆಳಗ್ಗೆ 9 ರಿಂದ ಸಾರ್ವಜನಿಕ ಭಕ್ತಾದಿಗಳಿಗೆ ದೇವರ ದರ್ಶನ ಇರುವುದಿಲ್ಲ ಎಂಬುದನ್ನು ಸ್ವಷ್ಟಪಡಿಸಲಾಗಿದೆ. ಆದ್ದರಿಂದ ಭಕ್ತಾದಿಗಳು ಸಹಕರಿಸುವಂತೆ ದೇವಾಲಯದ ಆಡಳಿತಾಧಿಕಾರಿಗಳ ಪರವಾಗಿ ಕಾರ್ಯನಿರ್ವಾಹಕ ಅಧಿಕಾರಿಯಾದ ಚಂದ್ರಶೇಖರ್ ಎನ್.ಜಿ ಅವರು ಕೋರಿದ್ದಾರೆ.
ಹಿಂದೂ ಸಂಗಮ ಆಯೋಜನಾ ಸಮಿತಿ ಕಡಗದಾಳು ವತಿಯಿಂದ ಮಾರ್ಚ್ 1 ರಂದು ಭಾನುವಾರ ಹಿಂದೂ ಸಂಗಮ ಕಾರ್ಯಕ್ರಮ ಮತ್ತು ಬೃಹತ್ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಹಿಂದೂ ಸಂಗಮ ಆಯೋಜನಾ ಸಮಿತಿಯ ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಮಾತೃಭೂಮಿ, ಹಿಂದೂ ಸಂಸ್ಕೃತಿ, ಆಚಾರ, ವಿಚಾರ, ಪರಂಪರೆ, ಸಂಪ್ರದಾಯವನ್ನು ರಕ್ಷಣೆ ಮಾಡುವುದರ ಜೊತೆಗೆ ಉಳಿಸಿ ಬೆಳೆಸುವ ಮೂಲಕ ಸುಭದ್ರವಾದ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ನಮ್ಮೆಲ್ಲರ ಜವಾಬ್ದಾರಿ ಮತ್ತು ಕರ್ತವ್ಯವಾಗಿದೆ. ಪ್ರತಿಯೊಬ್ಬ ಹಿಂದೂ ಕೂಡ ಸಂಘಟಿತವಾಗುವ ಮೂಲಕ ಹಿಂದುತ್ವದ ವಿಚಾರದಲ್ಲಿ ಮುಂದಾಲೋಚನೆಯೊಂದಿಗೆ ಬದುಕಿದರೆ ಮಾತ್ರ ಹಿಂದೂ ಧರ್ಮ ಮತ್ತು ಸಂಸ್ಕೃತಿಯಲ್ಲಿ ಉಳಿಸಲು ಸಾಧ್ಯ. ಮಾತೃ ಭೂಮಿಯ ರಕ್ಷಣೆ ಜೊತೆಗೆ ಧರ್ಮವನ್ನು ಉಳಿಸುವ ಉದ್ದೇಶವಾಗಿ ಹಿಂದೂ ಸಂಗಮ ಕಾರ್ಯಕ್ರಮ ಆಯೋಜನೆಗೊಂಡಿದೆ. ಹಿಂದೂ ಸಂಗಮ ಕಾರ್ಯಕ್ರಮದ ಪ್ರಯುಕ್ತ ಭವ್ಯ ಶೋಭಾಯಾತ್ರೆ ಕಡಗದಾಳು ಸರಕಾರಿ ಪ್ರೌಢ ಶಾಲಾ ಮೈದಾನದಿಂದ ಬೆಳಗ್ಗೆ 10.30 ಗಂಟೆಗೆ ಆರಂಭವಾಗಲಿದೆ. ಕಳಶ ಹೊತ್ತ ಮಹಿಳೆಯರು, ಸ್ತಬ್ಧಚಿತ್ರ, ಭಜನೆ, ವಿವಿಧ ಕಲಾತಂಡಗಳು…






