ಮಡಿಕೇರಿ, NEWS DESK ಫೆ. 26 – ಮಾದಾಪುರದ ಶ್ರೀಮತಿ ಡಿ ಚೆನ್ನಮ್ಮ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಹಾಗೂ ಮಡಿಕೇರಿಯ ರೋಟರಿ ಸಂಸ್ಥೆಯ ಸಹಯೋಗದೊಂದಿಗೆ ವೃತ್ತಿ ಮಾರ್ಗದರ್ಶನ ವ್ಯಕ್ತಿತ್ವ ವಿಕಸನ ಮತ್ತು ಪರೀಕ್ಷಾ ಸಿದ್ಧತೆ ಕುರಿತು ಕಾರ್ಯಗಾರ ಜರುಗಿತು. ಪಿಯುಸಿ ನಂತರದ ಶಿಕ್ಷಣದ ಕುರಿತಾಗಿ ವೃತ್ತಿ ಮಾರ್ಗದರ್ಶನ ಹಾಗೂ ವ್ಯಕ್ತಿತ್ವ ವಿಕಸನದ ಬಗ್ಗೆ ಸಂಪನ್ಮೂಲ ವ್ಯಕ್ತಿ ಪುತ್ತೂರಿನ ಅಕ್ಷರ ಚಾರಿಟೇಬಲ್ ಟ್ರಸ್ಟ್ ನ ಪ್ರೊಜೆಕ್ಟ್ ಮ್ಯಾನೇಜರ್ ಹೇಮಂತ್ ಕುಮಾರ್ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ವಿಶ್ವೇಶ್ವರ ಭಟ್ ಪರೀಕ್ಷಾ ಸಿದ್ಧತೆಯನ್ನು ಕುರಿತು ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು. ಸಮಾರಂಭದಲ್ಲಿ ರೋಟರಿ ಸಂಸ್ಥೆಯ ಜಿಲ್ಲಾ ಪ್ರಾಜೆಕ್ಟ್ ಸೆಕ್ರೆಟರಿ ರತನ್ ತಮ್ಮಯ್ಯ ಮಾತನಾಡಿ, ಗ್ರಾಮೀಣ ಶಾಲಾ ವಿದ್ಯಾಥಿ೯ಗಳು ಸಮಾಜದಲ್ಲಿ ಉನ್ನತ ಸ್ಥಾನಕ್ಕೇರುವ ಗುರಿ ಹೊಂದುವಂೆ ಸ್ಪೂತಿ೯ದಾಯಕ ಉದಾಹರಣೆಗಳೊಂದಿಗೆ ಕರೆ ನೀಡಿದರು. ಮಡಿಕೇರಿ , ರೋಟರಿ…
ಲೇಖಕ: admin
ಮಡಿಕೇರಿ NEWS DESK ಫೆ.26 : ಸಹಕಾರ ಸಂಘಗಳು ಪ್ರತಿವರ್ಷ ಕಡ್ಡಾಯವಾಗಿ ಆಡಿಟಿಂಗ್ ಮಾಡಿಸುವ ಮೂಲಕ ಪಾರದರ್ಶಕ ಆಡಳಿತವನ್ನು ನೀಡಬೇಕು ಎಂದು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನ ಅಧ್ಯಕ್ಷ ಕೆ.ಪಿ.ಗಣಪತಿ ಕರೆ ನೀಡಿದ್ದಾರೆ. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ಮತ್ತು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನ ಸಂಯುಕ್ತಾಶ್ರಯದಲ್ಲಿ ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಸಹಕಾರ ಸಂಘಗಳ ಅಧ್ಯಕ್ಷರುಗಳಿಗೆ ಆದಾಯ ತೆರಿಗೆ, ಜಿಎಸ್‌ಟಿ ಮಾಹಿತಿ ಹಾಗೂ ಪದಾಧಿಕಾರಿಗಳ ಕರ್ತವ್ಯ, ಜವಾಬ್ದಾರಿ ಕುರಿತು ರಾಜ್ಯ ಮಟ್ಟದ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹಿರಿಯರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನಡೆದುಕೊಂಡು ಬಂದಿರುವ ಕೊಡಗು ಜಿಲ್ಲೆಯ ಸಹಕಾರಿ ಕ್ಷೇತ್ರಕ್ಕೆ 115 ವರ್ಷಗಳ ಇತಿಹಾಸವಿದೆ. ಉತ್ತಮ ಸಹಕಾರಿ ಸಂಘಗಳಿರುವ ಹೆಗ್ಗಳಿಕೆಯನ್ನು ಹೊಂದಿರುವ ಜಿಲ್ಲೆ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದೆ ಮತ್ತು ಮಾದರಿ ಎನಿಸಿದೆ. ಈ ಖ್ಯಾತಿ ಹೀಗೆ ಮುಂದುವರಿಯಬೇಕಾದರೆ ಪಾರದರ್ಶಕ ಆಡಳಿತ ನಡೆಸುವುದು ಮುಖ್ಯ ಎಂದರು. ಜಿಲ್ಲೆಯಲ್ಲಿರುವ ಒಟ್ಟು ಸಹಕಾರಿ ಸಂಘಗಳಲ್ಲಿ 103 ಮಾತ್ರ…
ಕುಶಾಲನಗರ ಫೆ.25 NEWS DESK : ಕುಶಾಲನಗರ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗಗಳಲ್ಲಿ ಅನಗತ್ಯ ವಿದ್ಯುತ್ ಕಡಿತ ಗೊಳಿಸಲಾಗುತ್ತಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ (KRS) ಪಕ್ಷದ ಕೊಡಗು ಜಿಲ್ಲಾ ಸಂಚಾಲಕರಾದ ಎಂ.ಕೆ.ಆಶಿಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, ವಿದ್ಯುತ್ ಕಡಿತದಿಂದ ಕಂಗೆಟ್ಟ ಸಾರ್ವಜನಿಕರು ಕಾರಣ ಕೇಳಲು ಸೆಸ್ಕ್ ಕಚೇರಿಗೆ ಅಥವಾ ಅಧಿಕಾರಿಗಳಿಗೆ ಕರೆ ಮಾಡಿದರೆ ಸರಿಯಾಗಿ ಪ್ರತಿಕ್ರಿಯಿದಿರುವುದು ಖಂಡನೀಯ ಎಂದರು. ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಗಳು ಹೊಸ್ತಿಲಲ್ಲಿವೆ. ಇಂತಹ ಸೂಕ್ಷ್ಮ ಸಮಯದಲ್ಲಿ ರಾತ್ರಿ ಮತ್ತು ಮುಂಜಾನೆ ವೇಳೆಯಲ್ಲಿ ದಿಢೀರ್ ವಿದ್ಯುತ್ ಕಡಿತ ಮಾಡುತ್ತಿರುವುದು ವಿದ್ಯಾರ್ಥಿಗಳ ಏಕಾಗ್ರತೆಯನ್ನು ಹಾಳುಗೆಡವುತ್ತಿದೆ. ಅಧಿಕಾರಿಗಳ ಈ ಅವೈಜ್ಞಾನಿಕ ನಡೆಯಿಂದ ವಿದ್ಯಾರ್ಥಿಗಳ ಭವಿಷ್ಯ ಕತ್ತಲಿಗೆ ತಳ್ಳಲ್ಪಡುತ್ತಿದೆ. ಪ್ರಸ್ತುತ ಪವಿತ್ರ ರಂಜಾನ್ ಮಾಸ ನಡೆಯುತ್ತಿದ್ದು, ಮುಸ್ಲಿಂ ಬಾಂಧವರ ಉಪವಾಸದ ಸಮಯ ಹಾಗೂ ಸಂಜೆ ಇಫ್ತಾರ್ ಪ್ರಾರ್ಥನಾ ವೇಳೆಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುತ್ತಿರುವುದು ಜನರ ಧಾರ್ಮಿಕ ಆಚರಣೆಗಳಿಗೆ ತೀವ್ರ ತೊಂದರೆ ಉಂಟುಮಾಡುತ್ತಿದೆ ಎಂದು ದೂರಿದರು. ನಿರಂತರ…
ಸಿದ್ದಾಪುರ ಫೆ.25 NEWS DESK : ಎಸ್.ಎನ್.ಡಿ.ಪಿ. ಕೊಡಗು ಯೂನಿಯನ್ ವತಿಯಿಂದ ವನಿತಾ ಸಮಾವೇಶ ನಡೆಯಿತು. ಸಿದ್ದಾಪುರದ ಎಸ್‌ಎನ್‌ಡಿಪಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೈಸೂರು-ಕೊಡಗು ಲೋಕಸಭಾ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸಿ ಮಾತನಾಡಿ, ಭಾರತೀಯ ಪಾರಂಪರಿಕ ಸಂಸ್ಕೃತಿ ಮತ್ತು ಸಮಾಜವನ್ನು ರಕ್ಷಿಸುವ ಮೂಲ ತತ್ವಗಳನ್ನು ಸಂಘಟನೆಗಳು ಉಳಿಸಿ ಬೆಳೆಸಬೇಕು ಎಂದು ಹೇಳಿದರು. ಇಂತಹ ಸಮಾವೇಶಗಳು ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಹಾಗೂ ಅವರ ಸಾಧನೆಗಳನ್ನು ಗುರುತಿಸಲು ಮಹತ್ವದ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತವೆ. ಶ್ರೀ ನಾರಾಯಣ ಗುರುಗಳ ಆದರ್ಶಗಳನ್ನು ಮೈಗೂಡಿಸಿಕೊಂಡು ಸಂಘಟನೆ ಮೂಲಕ ಶಕ್ತರಾಗಿ ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂದರು. ಪ್ರಸ್ತಾವಿಕವಾಗಿ ಮಾತನಾಡಿದ ಎಸ್.ಎನ್.ಡಿ.ಪಿ. ಕೊಡಗು ಯೂನಿಯನ್ ಜಿಲ್ಲಾಧ್ಯಕ್ಷ ವಿ.ಕೆ.ಲೋಕೇಶ್, ವನಿತಾರನ್ನು ಒಗ್ಗೂಡಿಸಿ ಅವರಿಗೆ ಬಲ ತುಂಬುವ ಉದ್ದೇಶದಿಂದ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು. ಸಂಘಟನೆಯಲ್ಲಿ ಒಟ್ಟು 18 ಸಾವಿರ ಸದಸ್ಯರಿದ್ದು, ಅದರಲ್ಲಿ 9 ಸಾವಿರ ಮಹಿಳೆಯರು ಸೇರಿದ್ದಾರೆ ಎಂದರು. ಸಂಘಟನೆಯು ಪ್ರತಿವರ್ಷ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಸದಸ್ಯತ್ವ ಪಡೆದ ಕೊಡಗಿನ…
ಮಡಿಕೇರಿ ಫೆ.25 NEWS DESK : ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಸ್ಥಾನದಲ್ಲಿ ಮಾ.2 ರಂದು ಕುಂಬ್ಯಾರು ಕಲ್ಲಡ್ಚ (ವಾರ್ಷಿಕ) ಹಬ್ಬ ನಡೆಯಲಿದೆ. ಹಬ್ಬದ ಪ್ರಯುಕ್ತ ಮಾರ್ಚ್, 02 ರಂದು ಬೆಳಗ್ಗೆ 5.30 ಗಂಟೆಗೆ ಅಭಿಷೇಕ ಪೂಜೆ, 6 ಗಂಟೆಗೆ ಪ್ರಾತಃಕಾಲದ ಪೂಜೆ, 10 ಗಂಟೆಗೆ ಎತ್ತು ಪೋರಾಟ, 10.30 ಗಂಟೆಗೆ ತುಲಾಭಾರ ಸೇವೆ, 11 ಗಂಟೆಗೆ ಭಕ್ತಾದಿಗಳ ಸೇವಾ ಪೂಜೆಗಳು ಜರುಗಲಿದೆ. ಮಧ್ಯಾಹ್ನ 12.30 ಗಂಟೆಗೆ ಮಹಾಮಂಗಳಾರತಿ ಹಾಗೂ ತೀರ್ಥಪ್ರಸಾದ ವಿತರಣೆ, 1 ಗಂಟೆಗೆ ಅನ್ನ ಸಂತರ್ಪಣೆ ನೆರವೇರಲಿದ್ದು, 2 ಗಂಟೆಗೆ ದೇವರು ಹೊರಗೆ ಬಂದು ಮಲ್ಮಕ್ಕೆ ತೆರಳವುದು, ಸಂಜೆ 4 ಗಂಟೆಗೆ ಕಾಫಿ ಫಲಹಾರ, 6 ಗಂಟೆಗೆ ದೇವರು ಮಲ್ಮದಿಂದ ಬಂದು ದೇವರ ಬಲಿ ನೃತ್ಯ, ರಾತ್ರಿ 8 ಗಂಟೆಗೆ ಭೋಜನ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ವ್ಯವಸ್ಥಾಪನಾ ಸಮಿತಿ ಕೋರಿದೆ.
ಮಡಿಕೇರಿ ಫೆ.25 NEWS DESK : ಚೊಕಂಡಳ್ಳಿ ನಲ್ವತೋಕ್ಲು ಮೊಹಿದ್ದೀನ್ ಜುಮಾ ಮಸೀದಿಗೆ ಅನುದಾನ ನೀಡಲು ವಿರಾಜಪೇಟೆ ತಾಲ್ಲೂಕು ಜೆಡಿಎಸ್ ಅಲ್ಪಸಂಖ್ಯಾತ ಘಟಕ ಸಂಸದ ಯದುವೀರ್ ಒಡೆಯರ್ ಅವರಿಗೆ ಮನವಿ ಸಲ್ಲಿಸಿದೆ. ಸಿದ್ದಾಪುರದ ಎಸ್.ಎನ್.ಡಿ.ಪಿ (ಶ್ರೀ ನಾರಾಯಣ ಗುರು ಪರಿಪಾಲನ ಯೋಗ) ಸಭಾಂಗಣದಲ್ಲಿ ನಡೆದ ಎಸ್.ಎನ್.ಡಿ.ಪಿ ವನಿತಾ ಮಹಿಳಾ ಸಮಾವೇಶದಲ್ಲಿ ವಿರಾಜಪೇಟೆ ತಾಲ್ಲೂಕು ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಮಜೀದ್ ಚೊಕಂಡಳ್ಳಿ ಅವರ ನೇತೃತ್ವದಲ್ಲಿ ನಲ್ವತೋಕ್ಲು ಮೋಹಿದೀನ್ ಜುಮಾ ಮಸೀದಿಯ ಕೆಲವು ಕಾಮಗಾರಿಗಳಿಗೆ ಸಂಸದರ ವಿಶೇಷ ನಿಧಿಯಿಂದ ಅನುದಾನವನ್ನು ನೀಡಲು ಮನವಿ ಪತ್ರವನ್ನು ಸಲ್ಲಿಸಲಾಯಿತು. ಈ ಸಂದರ್ಭ ಕೊಡಗು ಜಿಲ್ಲಾ ಜೆಡಿಎಸ್ ಎಸ್ಸಿ ಎಸ್ಟಿ ಘಟಕದ ಜಿಲ್ಲಾಧ್ಯಕ್ಷರಾದ ಜಯಮ್ಮ ಅಮ್ಮತಿ, ಮಡಿಕೇರಿ ತಾಲೂಕು ಕ್ಷೇತ್ರದ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಅಶ್ರಫ್ ಹಾಕತ್ತೂರು, ಕುಶಾಲನಗರ ತಾಲೂಕು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಿಯಾಬುದ್ದೀನ್ ವಿ.ಪಿ.ಎಸ್. ನೆಲ್ಯ ಹುದಿಕೇರಿ, ವಿರಾಜಪೇಟೆ ತಾಲೂಕು ಯುವ ಜನತಾದಳದ ಅಧ್ಯಕ್ಷರಾದ ಸೈಫುದ್ದೀನ್ ಜಾಮಿಯಾಲ, ಹಾಜರಿದ್ದರು.
ಮಡಿಕೇರಿ ಫೆ.25 NEWS DESK : ನಗರದ ಜೂನಿಯರ್ ಕಾಲೇಜು ಆವರಣದಲ್ಲಿ ನಡೆದ ಮಕ್ಕಳ ಸಂತೆಯು ಗಮನ ಸೆಳೆಯಿತು. ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಸಮಗ್ರ ಶಿಕ್ಷಣ, ಸರ್ಕಾರಿ ಪಿ.ಎಂ.ಶ್ರೀ ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ ನಡೆದ ಮಕ್ಕಳ ಸಂತೆಯಲ್ಲಿ ವಿವಿಧ ಬಗೆಯ ಸೊಪ್ಪು, ತರಕಾರಿ, ಆಹಾರ ಧಾನ್ಯಗಳು, ಹಣ್ಣು ಹಂಪಲುಗಳು, ಪಾನಿಪೂರಿ, ಮಸಾಲೆ ಪುರಿ, ಚುರುಮುರಿ ಹೀಗೆ ಜೊತೆಗೆ ಚಿಕನ್ ಬಿರಿಯಾನಿ ಸೇರಿದಂತೆ ಸುಮಾರು 70ಕ್ಕೂ ಹೆಚ್ಚು ಮಕ್ಕಳು ಸಂತೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು. ಗಣಿಕೆ ಸೊಪ್ಪು, ನೊಗ್ಗೆ, ಕೊತ್ತಂಬರಿ, ಕರಿಬೇವು, ಬಸಳೆ, ಪಾಲಕ್ ಸೊಪ್ಪು, ಟೊಮೆಟೋ, ಕೆಸ, ಹಲಸು, ಬಾಳೆಕಾಯಿ, ಬಾಳೆಹಣ್ಣು, ಸಪೋಟ, ಕಿತ್ತಳೆ, ಚಕೋತ, ಮೂಲಂಗಿ, ನಿಂಬೆಹಣ್ಣು, ಸಿಹಿಗೆಣಸು, ಕಲ್ಲಂಗಡಿ, ಬದನೆ, ಪರಂಗಿ ಹಣ್ಣು, ಆಲೂಗಡ್ಡೆ, ಈರುಳ್ಳಿ, ಸೌತೆಕಾಯಿ, ಜತೆಗೆ ಮಹಿಳೆಯರ ಸೀರೆ ಒಳಗೊಂಡಂತೆ ಪ್ಯಾನ್ಸಿ ವಸ್ತುಗಳು ಹಲವು ವಿಭಾಗದಲ್ಲಿ ಮಕ್ಕಳ ಸಂತೆ ಏರ್ಪಡಿಸಿದ್ದು, ವಿಶೇಷ ಆಕರ್ಷಣೀಯವಾಗಿತ್ತು. ವಿದ್ಯಾರ್ಥಿಗಳ ವ್ಯಾಪಾರಕ್ಕೆ ಪೋಷಕರು ಸಹ ಸಾಥ್ ನೀಡಿದ್ದು…
ಮಡಿಕೇರಿ ಫೆ.25 NEWS DESK : ತ್ರಿವೇಣಿ ಪೊಮ್ಮಕ್ಕಡ ಕೂಟದ ಪ್ರಮುಖರು ನಗರದ ಶಕ್ತಿ ವೃದ್ಧಾಶ್ರಮಕ್ಕೆ ಭೇಟಿ ನೀಡಿದರು. ಕೂಟದ ಅಧ್ಯಕ್ಷರಾದ ಕಿಕ್ಕೇರಿಯಂಡ ಲೀಲಾ ಅಯ್ಯಪ್ಪ, ಉಪಾಧ್ಯಕ್ಷರಾದ ಬೊಪ್ಪoಡ ಸರಳ ಕರುಂಬಯ್ಯ, ಕಾರ್ಯದರ್ಶಿ ಮಲ್ಚೀರ ಯಶೋಧ ದೇವಯ್ಯ ಸದಸ್ಯರುಗಳಾದ ಕೂಪದಿರ ಜೂನಾ ವಿಜಯ್, ಉಡುವೇರ ರೇಖಾ ರಘು, ಅಮ್ಮoಡಿರ ರಾಣಿ ಮುತ್ತಮ್ಮ, ಮುಕ್ಕಾಟಿರ ಸವಿತಾ, ಕರವ0ಡ ಸೀಮಾ, ಚಿಂಡಮಾಡ ಸರಿತಾ ಮೊಣ್ಣಪ್ಪ, ಕೊಡಂದೇರ ಸ್ವಾತಿ ಲವ ಅವರು ಭೇಟಿ ನೀಡಿ ವಯೋವೃದ್ಧರ ಸಮಸ್ಯೆಗಳನ್ನು ಆಲಿಸಿದರು. ನಂತರ ವಿವಿಧ ಅಗತ್ಯತೆಯ ವಸ್ತುಗಳನ್ನು ಕೊಡುಗೆಯಾಗಿ ನೀಡಿದರು. ವೃದ್ಧರಿಗೆ ರಾತ್ರಿಯ ಭೋಜನದ ವ್ಯವಸ್ಥೆ ಮಾಡಿದರು.
ಮಡಿಕೇರಿ ಫೆ.25 NEWS DESK : ನಗರದ ಅಭಿವೃದ್ಧಿಯ ನಿರ್ಲಕ್ಷ್ಯ ಮತ್ತು ರಸ್ತೆಗಳ ಅವ್ಯವಸ್ಥೆಯನ್ನು ಖಂಡಿಸಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷ ನಗರಸಭೆ ವಿರುದ್ಧ ಪ್ರತಿಭಟನೆ ನಡೆಸಿತು. ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಅಮೀನ್ ಮೊಹಿಸಿನ್ ಅವರ ನೇತೃತ್ವದಲ್ಲಿ ಬುಧವಾರ ನಗರಸಭಾ ಕಛೇರಿಯ ಎದುರು ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು “ಗುಂಡಿ ಮುಚ್ಚಿ ರಸ್ತೆಗೆ ಮುಕ್ತಿ ಕೊಡಿ” ಎಂದು ಆಗ್ರಹಿಸಿದರು. ನಗರಸಭೆಯ ಆಡಳಿತ ವೈಖರಿಯನ್ನು ತೀವ್ರವಾಗಿ ಖಂಡಿಸಿದ ಎಸ್‍ಡಿಪಿಐ ಸದಸ್ಯರು, ‘ನಗರಸಭೆ ಕೊಠಡಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ” ಎಂದು ಬರೆದಿರುವ ನಾಮ ಫಲಕವನ್ನು ನಗರಸಭೆಯ ಅಧ್ಯಕ್ಷರು ಹಾಗೂ ಅಧಿಕಾರಿಗಳ ಕಚೇರಿಗೆ ಅಂಟಿಸುವ ಪ್ರಯತ್ನ ಮಾಡಿದರು. ಆದರೆ ಪೊಲೀಸರು ಮಧ್ಯ ಪ್ರವೇಶಿಸಿ ಈ ಪ್ರಯತ್ನವನ್ನು ತಡೆದರು. ಜಿಲ್ಲಾಧ್ಯಕ್ಷ ಅಮೀನ್ ಮೊಹಿಸಿನ್ ಮಾತನಾಡಿ, ಪ್ರತಿನಿತ್ಯ ಪ್ರವಾಸಿ ಕೇಂದ್ರವಾದ ಮಡಿಕೇರಿಗೆ ಆಗಮಿಸುವ ಸಹಸ್ರಾರು ಪ್ರವಾಸಿಗರನ್ನು ಗುಂಡಿಬಿದ್ದು ಹದಗೆಟ್ಟ ರಸ್ತೆಗಳು, ಅಶುಚಿತ್ವ ಸ್ವಾಗತಿಸುತ್ತಿದೆ. ನಗರದ ಯಾವುದೇ ರಸ್ತೆಗಳು ಯೋಗ್ಯವಾಗಿಲ್ಲ. ಜನರ ಸಂಕಷ್ಟಗಳಿಗೆ ನಗರಸಭೆಯಿಂದ ಯಾವುದೇ ಸ್ಪಂದನ ದೊರಯುತ್ತಿಲ್ಲವೆಂದು ಟೀಕಿಸಿದರು. ಕೇಬಲ್…
ಮಡಿಕೇರಿ ಫೆ.25 : ಮಂಜಿನ ನಗರಿ ಮಡಿಕೇರಿಯಲ್ಲಿ ಇಂದು ಸಂಜೆ ಆಗಸ ಮಿಂಚಿದ್ದು ಹೀಗೆ…. (ಚಿತ್ರ : ತನು ಶ್ರೀ)






