ಲೇಖಕ: admin

ಮಡಿಕೇರಿ ಡಿ.2 NEWS DESK : ನಗರದ ಶ್ರೀ ಓಂಕಾರೇಶ್ವರ ದೇವಾಲಯದ ವತಿಯಿಂದ ಪ್ರತಿ ವರ್ಷವೂ ರೂಢಿ ಸಂಪ್ರದಾಯದಂತೆ ‘ಹುತ್ತರಿ ಹಬ್ಬ’ ಡಿ.4  ರಂದು ರೋಹಿಣಿ ನಕ್ಷತ್ರ ಕರ್ಕಾಟಕ ಲಗ್ನದಲ್ಲಿ ನಡೆಯಲ್ಲಿದ್ದು, ಅಂದು ರಾತ್ರಿ 8.40 ಗಂಟೆಗೆ ನೆರೆ ಕಟ್ಟುವುದು, ರಾತ್ರಿ 9.40 ಗಂಟೆಗೆ ಕದಿರು ಕುಯ್ಯುವುದು ನಂತರ ಪ್ರಸಾದ ವಿತರಣೆ ನಡೆಯಲಿದೆ. ಡಿ.5 ರಂದು ನಗರದ  ಕೋಟೆ ಆವರಣದಲ್ಲಿ ಮಧ್ಯಾಹ್ನ 3 ಗಂಟೆಗೆ ‘ಹುತ್ತರಿ ಕೋಲಾಟ’  ನಡೆಯಲಿದೆ. ಸಾರ್ವಜನಿಕ ಭಕ್ತಾಧಿಗಳು ದೇವಾಲಯದಲ್ಲಿ ಜರುಗುವ ಪೂಜೆಯಲ್ಲಿ ಪಾಲ್ಗೊಳ್ಳುವಂತೆ ದೇವಾಲಯದ ವತಿಯಿಂದ ಕೋರಿದೆ.

Read More

ಮಡಿಕೇರಿ ಡಿ.2 NEWS DESK : ಕೊಂಡಗೇರಿಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ಕಾವೇರಿ ಶಾಲೆಯ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಕ್ಲಸ್ಟರ್ ಮಟ್ಟದಿಂದ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 1 ರಿಂದ 4ನೇ ತರಗತಿಯ ವಿಭಾಗದಲ್ಲಿ ನಾಲ್ಕನೇ ತರಗತಿಯ ವಿದ್ಯಾರ್ಥಿಗಳಾದ ಪಿ.ಎಸ್.ಸಾದ್ವಿಕ, ಸಂಸ್ಕೃತ ಧಾರ್ಮಿಕ ಪಠಣ ಪ್ರಥಮ, ಆಶು ಭಾಷಣ ಕೆ.ಎಸ್.ಯಶ್ವಿತ್ ಪ್ರಥಮ, ಕ್ಲೇ ಮಾಡಲಿಂಗ್ ಸಾತ್ವಿಕ್ ವಿ ದ್ವಿತೀಯ, ಚಿತ್ರಕಲೆ ಕೆ.ಎಸ್.ಶಾರ್ವಿ ದ್ವಿತೀಯ, ಇಂಗ್ಲೀಷ್ ಕಂಠ ಪಾಠ ಮೇವಂಡ ಅಧಿತ್ರಿ ಬೆಳ್ಳಿಯಪ್ಪ ದ್ವಿತೀಯ, ಕನ್ನಡ ಕಂಠಪಾಠ ಜೋಯಾ ಫಾತಿಮಾ ಎಂ.ಹೆಚ್.ದ್ವಿತೀಯ, 3ನೇ ತರಗತಿಯ ವಿದ್ಯಾರ್ಥಿಗಳಾದ ಭವಿತ್ ವಿ.ಎಸ್ ಛದ್ಮ ವೇಷ ದ್ವಿತೀಯ, ಬೇಪಡಿಯಂಡ ವಿಹಾಂಕ ಪೆÇನ್ನಮ್ಮ ತೃತೀಯ, ಅಭಿನಯ ಗೀತೆ ಧಾನ್ವಿ ಪಿ. ಎಸ್ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. 5 ರಿಂದ 7ನೇ ತರಗತಿ ವಿಭಾಗದಲ್ಲಿ 7ನೇ ತರಗತಿಯ ವಿದ್ಯಾರ್ಥಿಗಳಾದ ಮೇವಂಡ ಯಾನಿ ಬೆಳ್ಳಿಯಪ್ಪ ಇಂಗ್ಲೀಷ್ ಕಂಠಪಾಠ ಪ್ರಥಮ, ಕನ್ನಡ ಕಂಠಪಾಠ ಹೇಮಂತ್ ಆರ್…

Read More

ಮಡಿಕೇರಿ ಡಿ.2 NEWS DESK : ಕರ್ನಾಟಕ ಬರಪೀಡಿತ  ಜಿಲ್ಲೆಗಳಲ್ಲಿ, ಪರ ಮತ್ತು ಉಷ್ಣತಾಳುವ ಮೆಕ್ಕೆಜೋಳ ಮತ್ತು ಸುಧಾರಿತ ಕೃಷಿ ಪದ್ಧತಿಗಳ ವಿಸ್ತರಣೆ ಕುರಿತು ಕೃಷಿ ಸಚಿವರಾದ ಚೆಲುವರಾಯಸ್ವಾಮಿ ಅವರನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಹಾಗೂ ತಜ್ಞರ ತಂಡ ಸಚಿವರ ಕಚೇರಿಯಲ್ಲಿ ಭೇಟಿ ಮಾಡಿ ಚರ್ಚಿಸಿದರು. ಇದೆ ಸಂದರ್ಭದಲ್ಲಿ ಸಚಿವರೊಂದಿಗೆ ಕ್ಷೇತ್ರಕ್ಕೆ ಸಂಬಂಧಿಸಿದ ಇತರ ವಿಷಯಗಳ ಬಗ್ಗೆ ಚರ್ಚಿಸಲಾಯಿತು.

Read More

ಮಡಿಕೇರಿ ಡಿ.2 NEWS DESK : ಕರ್ನಾಟಕ ರಾಜ್ಯ ಸರ್ಕಾರದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 2023-24ನೇ ಸಾಲಿನ ಅತ್ಯುತ್ತಮ ಗ್ರಾಮ ಪಂಚಾಯಿತಿಗೆ ನೀಡಲಾಗುವ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿಯನ್ನು ಈ ಬಾರಿ ವಿರಾಜಪೇಟೆ ಕ್ಷೇತ್ರದ ಮಾಯಮುಡಿ ಪಂಚಾಯತ್ ಹಾಗೂ ಮಡಿಕೇರಿ ಕ್ಷೇತ್ರದ ಹೊದ್ದೂರು ಪಂಚಾಯತ್ ಪಡೆದುಕೊಂಡಿದೆ.  ವಿಧಾನಸೌಧದ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ  ಮುಖ್ಯಮಂತ್ರಿ  ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ಅವರು ಪ್ರಶಸ್ತಿ ವಿತರಿಸಿದರು.     ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾಯಮುಡಿ ಪಂಚಾಯತ್ ಅಧ್ಯಕ್ಷರಾದ ಟಾಟು ಮೊಣ್ಣಪ್ಪ ಹಾಗೂ ಹೊದ್ದೂರು ಪಂಚಾಯತ್ ಅಧ್ಯಕ್ಷರಾದ ಹಂಸ  ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರನ್ನು ಭೇಟಿಯಾದರು. ಪ್ರಶಸ್ತಿ ವಿಜೇತರನ್ನು ಅಭಿನಂದಿಸಿದ ಶಾಸಕರು, ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿ, ಜಗಮನ್ನಣೆಗಳಿಸುವಂತೆ…

Read More

ಸೋಮವಾರಪೇಟೆ ಡಿ.2 NEWS DESK : ತಾಲ್ಲೂಕು ಒಕ್ಕಲಿಗರ ಸಂಘದ ವಿಶ್ವ ಮಾನವ ಕುವೆಂಪು ವಿದ್ಯಾ ಸಂಸ್ಥೆಯ ಕಾಲೇಜು ವಿಭಾಗದ ವಿದ್ಯಾರ್ಥಿಗಳು  ಜೂನಿಯರ್ ಕಾಲೇಜಿನ ಗೇಟ್ ತನಕ ರಾಜ್ಯ ಹೆದ್ದಾರಿಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡು ಪರಿಸರ ಸಂರಕ್ಷಣೆಯ ಸಂದೇಶ ನೀಡಿದರು.  ರಸ್ತೆ ಬದಿಗಳಲ್ಲಿ ಹರಡಿದ್ದ ಪ್ಲಾಸ್ಟಿಕ್, ಕಾಗದ ಹಾಗೂ ತ್ಯಾಜ್ಯ ವಸ್ತುಗಳನ್ನು ತೆಗೆದು ಸ್ವಚ್ಚಗೊಳಿಸಿದರು. ಇದೇ ಸಂದರ್ಭ ಇನ್ನರ್ ವ್ಹೀಲ್ ಕ್ಲಬ್ ಸೋಮವಾರಪೇಟೆ ಗೋಲ್ಡ್ ವತಿಯಿಂದ ಕಾಲೇಜಿಗೆ ಕಸ ಸಂಗ್ರಹದ ಕಬ್ಬಿಣದ ತೊಟ್ಟಿಯನ್ನು ವಿದ್ಯಾಸಂಸ್ಥೆಗೆ ನೀಡಲಾಯಿತು. ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ ಮಾತನಾಡಿ, ಯುವ ಸಮೂದಾಯ ಸ್ವಯಂಪ್ರೇರಿತವಾಗಿ ಪರಿಸರ ರಕ್ಷಣೆಯ ಹೊಣೆ ಹೊತ್ತರೆ ನಮ್ಮ ಕೊಡಗು ನಿಜವಾದ ಅರ್ಥದಲ್ಲಿ ಸ್ವಚ್ಛ ಕೊಡಗು–ಸುಂದರ ಕೊಡಗು ಆಗಲಿದೆ ಎಂದು ಹೇಳಿದರು.  ಒಕ್ಕಲಿಗರ ಯುವ ವೇದಿಕೆಯ ಅಧ್ಯಕ್ಷ ಚಕ್ರವರ್ತಿ ಸುರೇಶ್ ಮಾತನಾಡಿ, ಜೂನಿಯರ್ ಕಾಲೇಜಿನ ಮುಂದಿನ ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆಯುವವರಿಗೆ ತಕ್ಕ ಶಿಕ್ಷೆಯಾಗಬೇಕು. ವಿದ್ಯಾರ್ಥಿಗಳು ನಡೆದಾಡುವ ರಸ್ತೆಯಲ್ಲೇ ಕೋಳಿ ತ್ಯಾಜ್ಯಗಳನ್ನು ಎಸೆದು ಹೋಗುತ್ತಿದ್ದಾರೆ.…

Read More

ಗೋಣಿಕೊಪ್ಪ ಡಿ.2 NEWS DESK : ತಿತಿಮತಿ ಹನುಮೋತ್ಸವ ಸಮಿತಿ, ಶ್ರೀ ರಾಮ ಮಂದಿರ ವತಿಯಿಂದ ಎರಡನೇ ವರ್ಷದ ಹನುಮೋತ್ಸವ ತಿತಿಮತಿ ಗ್ರಾಮದಲ್ಲಿ ಆರು ದಿನಗಳ ಕಾಲ ನಡೆಯಲಿದೆ. ಹನುಮನ ಆರಾಧನೆ, ಪಠಣ, ಸಾಹಸ, ವಿಶ್ವಾಸ, ಭಕ್ತಿಗಳ ಬಗ್ಗೆ ಹನುಮ ಭಕ್ತರೆಡೆಗೆ ಪಸರಿಸುವ ಆಧ್ಯಾತ್ಮಿಕ ಕಾರ್ಯ ನಡೆಯಲಿದೆ. ಆರು ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮಗಳ ವಿವರಗಳನ್ನು ಸಮಿತಿ ಅಧ್ಯಕ್ಷ ಚಕ್ಕೇರ ಮನು ಕಾವೇರಪ್ಪ್ಪ ತಿತಿಮತಿ ಚಿಮ್ಮಿ ಸಂಕೀರ್ಣದಲ್ಲಿ ಹನುಮೋತ್ಸವ ಸಮಿತಿಯ ಪೂರ್ವ ತಯಾರಿ ಸಭೆಯಲ್ಲಿ ಮಾಹಿತಿ ನೀಡಿದರು. ದಿನಾಂಕ ಎರಡರಂದು ಹನುಮ ಮಾಲಧಾರಣೆ, ಆಂಜನೇಯ ಹೋಮ, ಮೂರರಂದು ನಿತ್ಯ ಪೂಜೆ ಹಾಗೂ ಹನುಮಂತನ ಭಜನೆ, ನಂತರ ದಿನಾಂಕ 6 ರಂದು ಬೆಳಗ್ಗೆ ಬಾರದ ಗುಂಡು ಎಸೆತ, ಹಗ್ಗ ಜಗ್ಗಾಟ ಸೇರಿದಂತೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಲಿದೆ. ಮಧ್ಯಾಹ್ನ ಊಟದ ವ್ಯವಸ್ಥೆ ಏರ್ಪಡಿಸಲಾಗಿದ್ದು, ಸಂಜೆ 6 ಗಂಟೆಗೆ ದಿಪೋತ್ಸವ ಮತ್ತು ವಿವಿಧ ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ. ಡಿ.7…

Read More

ಮಡಿಕೇರಿ ಡಿ.1 NEWS DESK : ಏಡ್ಸ್ ಹರಡುವುದು ಮತ್ತು ಅದರ ನಿಯಂತ್ರಣಕ್ಕೆ ಇರುವ ಕ್ರಮಗಳ ಕುರಿತು ಪ್ರತಿಯೊಬ್ಬರು ತಿಳಿದಿರಬೇಕು. ಹೆಚ್ಐವಿ ಏಡ್ಸ್ ನಿಯಂತ್ರಣ ಎಲ್ಲರ ಜವಾಬ್ದಾರಿ ಎಂದು ಒಂದನೇ ಅಪರ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರಾದ ಜಿ.ಸುರೇಂದ್ರ ಅವರು ತಿಳಿಸಿದ್ದಾರೆ. ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‍ಷನ್ ಸಂಸ್ಥೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಭಾರತೀಯ ರೆಡ್‍ಕ್ರಾಸ್ ಸಂಸ್ಥೆ, ಲಯನ್ಸ್ ಸಂಸ್ಥೆ, ರೋಟರಿ ಮಿಸ್ಟಿ ಹಿಲ್ಸ್, ಮಡಿಕೇರಿ, ಎಫ್‍ಎಂಕೆಎಂಸಿ ಕಾಲೇಜು, ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಮಹಿಳಾ ಕಾಲೇಜು ಮಡಿಕೇರಿ, ಓಡಿಪಿ-ಸ್ನೇಹಾಶ್ರಯ ಸಮಿತಿ, ಚೈತನ್ಯ ನೆಟ್‍ವರ್ಕ್ ಕೊಡಗು ಹಾಗೂ ಆಶೋದಯ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಮಡಿಕೇರಿಯಲ್ಲಿ ನಡೆದ ‘ವಿಶ್ವ ಏಡ್ಸ್ ದಿನ’ ಕಾರ್ಯಕ್ರಮ ಸೋಮವಾರ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ನಗರದ ಜಿಲ್ಲಾ…

Read More

ಮಡಿಕೇರಿ ಡಿ.1 NEWS DESK : ವಿಶ್ವರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮದಿನಾಚರಣೆಯ ಪ್ರಯುಕ್ತ ಜನವರಿಯಲ್ಲಿ ‘ದಲಿತರ ಸ್ವಾಭಿಮಾನಿ ಸಮಾವೇಶ’ ವನ್ನು ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಂಘರ್ಷ ಸಮಿತಿಯ ಕೊಡಗು ಜಿಲ್ಲಾ ಘಟಕದ ಸಂಚಾಲಕ ಹೆಚ್.ಎಲ್.ದಿವಾಕರ್ ಅವರು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನವರಿ ತಿಂಗಳ ಮೊದಲ ಅಥವಾ ಎರಡನೇ ಭಾನುವಾರ ನಗರದ ಗಾಂಧಿ ಮೈದಾನದಲ್ಲಿ ಮಧ್ಯಾಹ್ನ 2 ಗಂಟೆಗೆ ಸಮಾವೇಶ ನಡೆಯಲಿದ್ದು, ಸಚಿವರಿಗೆ ಹಾಗೂ ಶಾಸಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು. ಅಂದು ಬೆಳಿಗ್ಗೆ 10 ಗಂಟೆಗೆ ಅಶೋಕಪುರದಿಂದ ಬುದ್ಧ ಹಾಗೂ ಡಾ.ಅಂಬೇಡ್ಕರ್ ಭಾವಚಿತ್ರವಿರುವ ರಥದ ಮೆರವಣಿಗೆ ನಡೆಯಲಿದೆ. 100 ಬೈಕ್‍ಗಳು, ಕಳಸ ಹಿಡಿದ ಮಹಿಳೆಯರು, ಪೂರ್ವಿಕರ ಸ್ತಬ್ಧ ಚಿತ್ರ, ಡೊಳ್ಳು ಕುಣಿತ ಮತ್ತು ವೀರಗಾಸೆ ಕುಣಿತ ಗಮನ ಸೆಳೆಯಲಿದೆ ಎಂದು ತಿಳಿಸಿದರು. *ದಲಿತ ರತ್ನ ಪ್ರಶಸ್ತಿ ಪ್ರದಾನ* ದಲಿತ ಸಂಘರ್ಷ ಸಮಿತಿಯ ಮಡಿಕೇರಿ ತಾಲ್ಲೂಕು ಸಂಚಾಲಕ ಎ.ಪಿ.ದೀಪಕ್ ಅವರು ಮಾತನಾಡಿ, ಕಾರ್ಯಕ್ರಮದಲ್ಲಿ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಸಚಿವರಾದ…

Read More

ಮಡಿಕೇರಿ ಡಿ.1 NEWS DESK : ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ಇದೇ ಡಿ.5 ರಿಂದ 7 ರವರೆಗೆ ಮಂಡ್ಯದ ಕೃಷಿ ವಿಜ್ಞಾನಗಳ ವಿವಿಯ ವಿ.ಸಿ. ಫಾರಂನಲ್ಲಿ ‘ಸಮಗ್ರ ಕೃಷಿಯಿಂದ ಸುಸ್ಥಿರತೆ’ ಘೋಷವಾಕ್ಯದಡಿ ‘ಕೃಷಿ ಮೇಳ-2025’ ನಡೆಯಲಿದೆ. ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕೊಡಗು ಅರಣ್ಯ ಮಹಾವಿದ್ಯಾಲಯದ ಡೀನ್ ಹಾಗೂ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗದ ನಿರ್ದೇಶಕÀ ಡಾ.ಜಿ.ಎಂ.ದೇವಗಿರಿ ಅವರು ಕೃಷಿ ವಿಶ್ವ ವಿಶ್ವವಿದ್ಯಾಲಯ ವ್ಯಾಪ್ತಿಯ ಕೊಡಗನ್ನು ಒಳಗೊಂಡಂತೆ ಮಂಡ್ಯ, ಮೈಸೂರು, ಹಾಸನ ಹಾಗೂ ಚಾಮರಾಜನಗರ ಜಿಲ್ಲೆಗಳ ರೈತರ ಅಭಿವೃದ್ಧಿಯ ಚಿಂತನೆಯಡಿ ಕೃಷಿ ಮೇಳವನ್ನು ರೂಪಿಸಲಾಗಿದೆ ಎಂದು ತಿಳಿಸಿದರು. ಕೃಷಿ ಮೇಳವನ್ನು ಆರಂಭಿಕ ದಿನವಾದ ಡಿ.5ರಂದು ಬೆಳಗ್ಗೆ 10.30 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ. ಅಂದು ಮಧ್ಯಾಹ್ನ 2 ಗಂಟೆಗೆ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೊಡಗಿನ 10 ಮಂದಿ ಪ್ರಗತಿಪರ ರೈತರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಡಾ.ಜಿ.ಎಂ.ದೇವಗಿರಿ ತಿಳಿಸಿದರು. ಕೊಡಗನ್ನು ಒಳಗೊಂಡಂತೆ ಕೃಷಿ ವಿವಿಯ…

Read More

ಮಡಿಕೇರಿ ಡಿ.1 NEWS DESK : ಮುಕ್ಕಾಟಿರ(ಬೇತ್ರಿ) ಕುಟುಂಬದ ವತಿಯಿಂದ ಕೊಡವ ಕುಟುಂಬಗಳ ನಡುವಣ 24ನೇ ವರ್ಷದ ಕೊಡವ ಕೌಟುಂಬಿಕ ಕ್ರಿಕೆಟ್ ಉತ್ಸವ ‘ಮುಕ್ಕಾಟಿರ ಕಪ್ ಕ್ರಿಕೆಟ್-2026′ ಮುಂದಿನ ಏಪ್ರಿಲ್ 2 ರಿಂದ ಮೂರ್ನಾಡಿನಲ್ಲಿ ನಡೆಯಲಿದೆ ಎಂದು ಕ್ರಿಕೆಟ್ ಆಯೋಜನಾ ಸಮಿತಿಯ ಅಧ್ಯಕ್ಷ ಮುಕ್ಕಾಟಿರ ಸುರೇಶ್ ಪೆಮ್ಮಯ್ಯ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಪಂದ್ಯಾವಳಿಯ ಕುರಿತು ಮಾಹಿತಿ ನೀಡಿದ ಅವರು, ಮುಕ್ಕಾಟಿರ ಕಪ್ ಕ್ರಿಕೆಟ್ ಉತ್ಸವ ಮೂರ್ನಾಡಿನ ಲಾಲೂ ಮುದ್ದಯ್ಯ ಕ್ರೀಡಾಂಗಣ, ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮೈದಾನ ಹಾಗೂ ಅರಮೇರಿ ಕಳಂಚೇರಿಯ ಎಸ್‍ಎಂಎಸ್ ವಿದ್ಯಾಪೀಠದ ಮೈದಾನಗಳಲ್ಲಿ ಏ.2 ರಿಂದ 28 ದಿನಗಳ ಕಾಲ ನಡೆಯಲಿದೆ ಎಂದರು. *400 ತಂಡಗಳ ನಿರೀಕ್ಷೆ* ಕಳೆದ ಸಾಲಿನ ಕೊಡವ ಕೌಟುಂಬಿಕ ಕ್ರಿಕೆಟ್ ಉತ್ಸವದ ಪುರುಷರ ವಿಭಾಗದಲ್ಲಿ 280 ತಂಡಗಳು ಪಾಲ್ಗೊಂಡಿದ್ದುವಾದರೆ, ಈ ಬಾರಿ 300 ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಕಳೆದ ಬಾರಿ ಮಹಿಳೆಯರ ವಿಭಾಗದಲ್ಲಿ 58 ತಂಡಗಳು ಪಾಲ್ಗೊಂಡಿದ್ದರೆ, ಈ ಬಾರಿ 100 ತಂಡಗಳು ಪಾಲ್ಗೊಳ್ಳಬಹುದಾಗಿದ್ದು,…

Read More