ಲೇಖಕ: admin

ಮಡಿಕೇರಿ ನ.4 NEWS DESK :  ಕೊಡಗು ಗೌಡ ಹಿತರಕ್ಷಣ ಸಮಿತಿ ನಿಯೋಗವು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದರು. ಮುಂದಿನ ಸಚಿವ ಸಂಪುಟದಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್ ಪೊನ್ನಣ್ಣನವರಿಗೆ ಸಚಿವ ಸ್ಥಾನ ನೀಡುವಂತೆ ನಿಯೋಗದ ಪ್ರಮುಖರು ಮನವಿ ಮಾಡಿದರು.  ಈ ಸಂದರ್ಭ ಸಮಿತಿಯ ಪರ್ಮಲೆ ಗಣೇಶ್, ಪಟ್ಟಡ ದೀಪಕ್ ಸುರೇಶ್ ಪಿಎಲ್, ಪೂಜಾರಿರ ಪ್ರದೀಪ್ ಕುಮಾರ್, ಕಾಲೇರಮ್ಮನ ಕುಮಾರ್, ವಿಜಯ್ ಕುಮಾರ್ ಕನ್ಯಾನ, ರಿತಿನ್ ಡೆಮ್ಮಲೆ ಮೊದಲಾದವರು ಉಪಸ್ಥಿತರಿದ್ದರು.

Read More

ಮಡಿಕೇರಿ ನ.4  NEWS DESK : ಪ್ರಸಕ್ತ(2025-26) ಸಾಲಿನಲ್ಲಿ ಕೊಡಗು ಜಿಲ್ಲಾ ಬಾಲಭವನ ಸಮಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಮಕ್ಕಳ ದಿನಾಚರಣೆ ಪ್ರಯುಕ್ತ 9 ರಿಂದ 16 ವರ್ಷದ ಮಕ್ಕಳಿಗೆ ನೃತ್ಯ, ಚಿತ್ರಕಲೆ, ವಿಜ್ಞಾನದಲ್ಲಿ ಸೃಜನಾತ್ಮಕ ಆವಿಷ್ಕಾರ ಹಾಗೂ ವಾದ್ಯ ಸಂಗೀತ ಸ್ಪರ್ಧೆಯನ್ನು ಹಾಗೂ ಕಥೆ, ಕವನ, ಪ್ರಬಂಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತಿ ಇರುವ ಮಕ್ಕಳು ನ.10 ರೊಳಗೆ ದೂ.ಸಂ. 6363285685, 8618861505 ನ್ನು ಬೆಳಗ್ಗೆ 10.30 ರಿಂದ 5 ಗಂಟೆಯೊಳಗೆ ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರು ಪ್ರಸನ್ನ ಕುಮಾರ್ ಡಿ.ಆರ್. ಅವರು ತಿಳಿಸಿದ್ದಾರೆ.

Read More

ಮಡಿಕೇರಿ ನ.4 NEWS DESK : ಸೋಮವಾರಪೇಟೆ ತಾಲ್ಲೂಕು ತ್ರೈಮಾಸಿಕ ಕೆಡಿಪಿ ಸಭೆಯು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರ ಅಧ್ಯಕ್ಷತೆಯಲ್ಲಿ ನವೆಂಬರ್, 05 ರಂದು ಬೆಳಗ್ಗೆ 10.30 ಗಂಟೆಗೆ ಸೋಮವಾರಪೇಟೆ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಸೋಮವಾರಪೇಟೆ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಅವರು ತಿಳಿಸಿದ್ದಾರೆ.

Read More

ಮಡಿಕೇರಿ ನ.4 NEWS DESK : ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯದಲ್ಲಿ ಪ್ರತಿ ವರ್ಷದ ರೂಢಿ ಸಂಪ್ರದಾಯದಂತೆ ನಡೆಸಿಕೊಂಡು ಬರುತ್ತಿರುವ ವಿಷ್ಣುಮೂರ್ತಿ ಕೋಲ (ಚಾಮುಂಡಿ ಉತ್ಸವ)ವು ನ.7 ರಂದು ಬೆಳಗ್ಗೆ 10 ಗಂಟೆಯಿಂದ ನಡೆಯಲಿದೆ. ಸಾರ್ವಜನಿಕ ಭಕ್ತಾದಿಗಳು ವಿಷ್ಣುಮೂರ್ತಿ ಕೋಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ದೇವರ ಕೃಪೆಗೆ ಪಾತ್ರರಾಗುವಂತೆ ದೇವಾಲಯದ ಆಡಳಿತಾಧಿಕಾರಿಗಳ ಪರವಾಗಿ ಕಾರ್ಯನಿರ್ವಾಹಣಾಧಿಕಾರಿ ಅವರು ಕೋರಿದ್ದಾರೆ.

Read More

ಮಡಿಕೇರಿ ನ.4 NEWS DESK : ತಲಕಾವೇರಿಯ ಶ್ರೀ ತಲಕಾವೇರಿ ದೇವಾಲಯಲ್ಲಿ ನವೆಂಬರ್, 06 ರಂದು ಸ್ವಚ್ಛತಾ ಕಾರ್ಯದ ಪ್ರಯುಕ್ತ ಮಧ್ಯಾಹ್ನ 2 ಗಂಟೆಯ ನಂತರ ಶ್ರೀ ತಲಕಾವೇರಿ ದೇವಾಲಯಕ್ಕೆ ಪ್ರವೇಶ ಇರುವುದಿಲ್ಲ. ಆದ್ದರಿಂದ ಸಾರ್ವಜನಿಕ ಭಕ್ತಾದಿಗಳು ಸಹಕರಿಸಬೇಕೆಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್ ಎನ್.ಜಿ. ಅವರು ಕೋರಿದ್ದಾರೆ.

Read More

ಮಡಿಕೇರಿ ನ.4 NEWS DESK : ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ನವೆಂಬರ್, 05 ರಂದು ಸಂಜೆ 4 ಗಂಟೆಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಲಿದೆ. ಸಾರ್ವಜನಿಕ ಭಕ್ತಾದಿಗಳು ದೇವಾಲಯಗಳಲ್ಲಿ ನಡೆಯಲಿರುವ ಸಾಮೂಹಿಕ ಸತ್ಯನಾರಾಯಣ ಪೂಜೆಯಲ್ಲಿ ಭಾಗವಹಿಸಿ, ಪೂಜೆಯನ್ನು ಯಶಸ್ವಿಗೊಳಿಸಬೇಕಾಗಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್ ಎನ್.ಜಿ ಅವರು ಕೋರಿದ್ದಾರೆ.

Read More

ಮಡಿಕೇರಿ ನ.3 NEWS DESK : ಮಡಿಕೇರಿ ನಗರದಿಂದ ವಿರಾಜಪೇಟೆಗೆ ತೆರಳುವ ರಸ್ತೆಯಲ್ಲಿ ಮೂರನೇ ಮೈಲು ಭಾಗದಲ್ಲಿ ಮರಳಿನ ತಡೆಗೋಡೆ ಅಪಾಯಕಾರಿ ಸ್ಥಿತಿಯಲ್ಲಿದ್ದು, ಬ್ಯಾರಿಕೇಡ್ ಅಳವಡಿಸಬೇಕೆಂದು ಆಮ್ ಆದ್ಮಿ ಪಾರ್ಟಿಯ ಜಿಲ್ಲಾಧ್ಯಕ್ಷ ಮುಕ್ಕಾಟಿರ ಅಪ್ಪಯ್ಯ ಅವರು ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ್ದ ಅವರು ರಸ್ತೆಯ ಸ್ಥಿತಿಗತಿಯ ಬಗ್ಗೆ ಆತಂಕ ವ್ಯಕ್ತಪಡಿಸಿದರು. ನಿರಂತರ ಮಳೆಯಿಂದ ರಸ್ತೆ ಕುಸಿದ ಪ್ರದೇಶದಲ್ಲಿ ತಾತ್ಕಾಲಿಕವಾಗಿ ಮರಳಿನ ತಡೆಗೋಡೆಯನ್ನು ನಿರ್ಮಿಸಲಾಗಿದೆ. ಆದರೆ ಈ ಅಪಾಯಕಾರಿ ತಿರುವಿನಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ. ಕಿರಿದಾದ ರಸ್ತೆಯಲ್ಲಿ ಸಾಗುವ ವಾಹನಗಳು ನಿಯಂತ್ರಣ ತಪ್ಪಿ ಉರುಳುವ ಸಾಧ್ಯತೆ ಇದೆ. ರಾತ್ರಿ ವೇಳೆ ಮತ್ತು ದಟ್ಟ ಮಂಜು ಕವಿದ ವಾತಾವರಣದಲ್ಲಿ ಅಪಾಯ ಎದುರಾಗಬಹುದು. ಅನಾಹುತ ಸಂಭವಿಸುವ ಮೊದಲು ಸಂಬಂಧಿಸಿದ ಇಲಾಖೆ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು. ತಾತ್ಕಾಲಿಕ ಕ್ರಮವಾಗಿ ತುರ್ತಾಗಿ ಬ್ಯಾರಿಕೇಡ್ ಅಳವಡಿಸಬೇಕು ಎಂದು ಆಗ್ರಹಿಸಿದರು. ಈಗಾಗಲೇ ಮಳೆ ಸಂಪೂರ್ಣವಾಗಿ ನಿಂತು ಹೋಗಿದ್ದು, ತಕ್ಷಣ ತಡೆಗೋಡೆ ನಿರ್ಮಾಣದ ಕಾಮಗಾರಿಯನ್ನು ಆರಂಭಿಸಬೇಕು. ತಡೆಗೋಡೆ ಶಾಶ್ವತ ಪರಿಹಾರವಾಗುವುದರಿಂದ…

Read More

ಮಡಿಕೇರಿ ನ.3 NEWS DESK : ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಅಕ್ಷಯ ಚಾರಿಟೇಬಲ್ ಟ್ರಸ್ಟ್ ರೋಟರಿ ರೆಡ್ ಕ್ರಾಸ್ ಹಾಗೂ ಇತರೆ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಪಾಲಿಬೆಟ್ಟ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಕ್ತದಾನ ಮತ್ತು ಅಂಗಾಂಗ ದಾನ ನೋಂದಣಿ ಶಿಬಿರ ನಡೆಯಿತು. ಶಿಬಿರದಲ್ಲಿ 21 ಯೂನಿಟ್ ರಕ್ತವನ್ನು ದಾನಿಗಳಿಂದ ಸಂಗ್ರಹಿಸಲಾಯಿತು. 14 ಫಲಾನುಭವಿಗಳಿಂದ ಅಂಗಾಂಗ ದಾನ ನೊಂದಣಿಗಳನ್ನು ಮಾಡಲಾಯಿತು. ರಕ್ತದಾನದ ಮಹತ್ವದ ಬಗ್ಗೆ ಡಾ.ವಿಶ್ವಾಸ್ ಅರಿವು ಮೂಡಿಸಿದರು. ಅಂಗಾಂಗದಾನ ನೋಂದಣಿಯ ಬಗ್ಗೆ DHEO ಶಾಂತಿ ಆರೋಗ್ಯ ಶಿಕ್ಷಣ ನೀಡಿ, ಪ್ರತಿಜ್ಞಾವಿಧಿ ಬೋಧಿಸಿದರು. ಇದೇ ಸಂದರ್ಭ ವಿದ್ಯಾರ್ಥಿಗಳಿಗೆ ಗಳಗಂಡ ರೋಗ ಮತ್ತು ರಕ್ತಹೀನತೆಯ ಬಗ್ಗೆ ಮಾಹಿತಿಯನ್ನು ನೀಡಲಾಯಿತು. ಹೆಚ್‍ಸಿ ಚೆನ್ನಯ್ಯನಕೋಟೆಎಎಂಒ ಡಾ. ಶಿವಪ್ಪ ಎಸಿಎಫ್  ಬಗ್ಗೆ ಮಾಹಿತಿ ನೀಡಿದರು. ವಿರಾಜಪೇಟೆ ತಾಲೂಕಿನ ಸುತ್ತಮುತ್ತಲಿನ ಹಾಡಿಗಳಲ್ಲಿ ಮಗುವಿಗೆ ಸೊಪ್ಪಿನ ರಸಗಳನ್ನು ಕುಡಿಸುತ್ತಿರುವುದರಿಂದ ಶಿಶುಮರಣವಾಗುತ್ತಿರುವ ಬಗ್ಗೆ ಎಲ್ಲಾ ಸಂಘ ಸಂಸ್ಥೆಯವರ ಸಮ್ಮುಖದಲ್ಲಿ ವಿಷಯ ಪ್ರಸ್ತಾಪಿಸಲಾಯಿತು ಮತ್ತು ಸಹಕಾರವನ್ನು ಕೋರಲಾಯಿತು.…

Read More

ಮಡಿಕೇರಿ ನ.3 NEWS DESK : ಮೂರ್ನಾಡು 33/11 ಕೆ.ವಿ ವಿದ್ಯುತ್ ವಿತರಣಾ ಉಪಕೇಂದ್ರದ ಕೇಂದ್ರದಿಂದ ಹೊರಹೊಮ್ಮುವ ಎಫ್5 ಹೊದ್ದೂರು ಹಾಗೂ ಎಫ್2 ನಾಪೋಕ್ಲು ಫೀಡರ್‍ನಲ್ಲಿ ನ.4 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಕೊಡಗು ವಿದ್ಯುತ್ ಜಾಲದ ಬಲವರ್ಧನೆ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವುದರಿಂದ ಈ ಮಾರ್ಗದಿಂದ ವಿದ್ಯುತ್ ಸರಬರಾಜಾಗುವ ಹೊದ್ದೂರು, ಕಬಡಗೇರಿ, ಕೊಳಕೇರಿ, ಕಕ್ಕಬೆ, ಕುಂಜಿಲ, ಎಮ್ಮೆಮಾಡು, ನೆಲಜಿ, ಬಲ್ಲಮಾವಟಿ, ಪೇರೂರು, ನಾಪೋಕ್ಲು ಟೌನ್, ಕೊಟ್ಟಮುಡಿ, ಪಾಲೂರು, ಚೆರಿಯಪರಂಬು, ಹಳೆತಾಲೂಕು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.

Read More

ಮಡಿಕೇರಿ ನ.3 NEWS DESK : 2024-25ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮುಖ್ಯ ಶಿಕ್ಷಕರನ್ನು ಒಳಗೊಂಡಂತೆ ಸಹ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು, ವಿಶೇಷ ಶಿಕ್ಷಕರು ಹಾಗೂ ಪ್ರೌಢ ಶಾಲಾ ಸಹ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು ಮತ್ತು ವಿಶೇಷ ಶಿಕ್ಷಕರುಗಳಿಗೆ ನವೆಂಬರ್, 04 ರಿಂದ 10 ರವರೆಗೆ ಕೊಡಗು ಜಿಲ್ಲಾ ಮಟ್ಟದ ‘ಜಿಲ್ಲಾ ಕೋರಿಕೆ/ಪರಸ್ಪರ ವರ್ಗಾವಣೆಯ ಗಣಕೀಕೃತ ಕೌನ್ಸಿಲಿಂಗ್ ಮುಖಾಂತರ ಸ್ಥಳ ನಿಯುಕ್ತಿಗೊಳಿಸಬೇಕಿರುತ್ತದೆ. ಅದರಂತೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವೃಂದದ ಜಿಲ್ಲಾ ಹಂತದ ಕೋರಿಕೆ / ಪರಸ್ಪರ ವರ್ಗಾವಣೆಯ ಗಣಕೀಕೃತ ಕೌನ್ಸಿಲಿಂಗ್ ಪ್ರಕ್ರಿಯೆಯು ಪ್ರಾಥಮಿಕ ಶಾಲಾ ವಿಭಾಗಕ್ಕೆ ನ.4 ರಿಂದ 6 ರವರೆಗೆ ಹಾಗೂ ಪ್ರೌಢ ಶಾಲಾ ವಿಭಾಗಕ್ಕೆ ನವೆಂಬರ್, 07 ರಿಂದ 10 ರವರೆಗೆ ಉಪನಿರ್ದೇಶಕರು(ಆಡಳಿತ) ಶಾಲಾ ಶಿಕ್ಷಣ ಇಲಾಖೆ, ಕೊಡಗು ಜಿಲ್ಲೆ, ಮಡಿಕೇರಿ ಇಲ್ಲಿ ನಡೆಯಲಿದೆ. ವೇಳಾಪಟ್ಟಿಯನುಸಾರ ಸಂಬಂಧಿಸಿದ ಶಿಕ್ಷಕರು ನಿಗಧಿತ ದಿನಾಂಕದಂದು ಕೌನ್ಸಿಲಿಂಗ್‍ಗೆ ಸಮಯಕ್ಕೆ ಸರಿಯಾಗಿ ಸೂಕ್ತ ದಾಖಲಾತಿಗಳೊಂದಿಗೆ ತಪ್ಪದೇ ಹಾಜರಾಗುವಂತೆ…

Read More