ಲೇಖಕ: admin

ಮಡಿಕೇರಿ ಡಿ.1 NEWS DESK : ಐಗೂರು ಗ್ರಾಮದ ದಿವಂಗತ ಸಿ.ಕುಂಞರಾಮನ್ ಅವರ ಪತ್ನಿ ಭಾರ್ಗವಿ (84) ಅವರು ನಿಧನರಾಗಿದ್ದಾರೆ. ಮೃತರು ಓರ್ವ ಪುತ್ರ ಹಾಗೂ ಮೂವರು ಪುತ್ರಿಯರನ್ನು ಆಗಲಿದ್ದಾರೆ.

Read More

ಸುಂಟಿಕೊಪ್ಪ ಡಿ.1 NEWS DESK : ಆಧುನೀಕರಣದ ಭರಾಟೆಯಲ್ಲಿ ಜಾನಪದ ಸಂಸ್ಕೃತಿ, ಹಳ್ಳಿ ಜೀವನ ನಶಿಸುತ್ತಿದೆ ಎಂದು ಸಾಹಿತಿ ಹೆಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಆತಂಕ ವ್ಯಕ್ತಪಡಿಸಿದ್ದಾರೆ. ಚೆಟ್ಟಳ್ಳಿ ಪ್ರೌಢಶಾಲೆಯಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕುಶಾಲನಗರ ಘಟಕ ಸಂಯುಕ್ತಾಶ್ರಯದಲ್ಲಿ ನಡೆದ ಜಾನಪದ ಉತ್ಸವದಲ್ಲಿ ಮುಖ್ಯ ಭಾಷಣಕರರಾಗಿ ಆಗಮಿಸಿ ಅವರು ಮಾತನಾಡಿದರು. ನಾವು ಮತ್ತು ನಮ್ಮ ಹಿರಿಯರ ಬದುಕು, ಜನಪದ ಸಂಸ್ಕøತಿ, ಪದ್ಧತಿ, ಪರಂಪರೆಯಿಂದ ಕೂಡಿದ್ದು, ನಮ್ಮ ಮಕ್ಕಳ ಮತ್ತು ಮೊಮ್ಮಕ್ಕಳ ತಲೆಮಾರು ಆಧುನಿಕತೆಯ ಭರಾಟೆಯಲ್ಲಿ ಕಳೆದು ಹೋಗುತ್ತಿದೆ. ಆಳುವ ಮಕ್ಕಳನ್ನು ಜೋಗುಳ ಹಾಡಿ ಮಲಗಿಸುವ ಅಥವಾ ಪ್ರೀತಿಯ ಮಾತುಗಳಿಂದ ಒಲಿಸಿಕೊಳ್ಳುವ ಜಾಗದಲ್ಲಿ ಮೊಬೈಲ್ ರಿಲ್ಸ್ ಆಕ್ರಮಿಸಿಕೊಂಡಿದೆ ಎಂದು ವಿಷಾಧಿಸಿದರು. ಹಿಂದೆ ಕೂಡುಕುಟುಂಬ, ಅಜ್ಜ ಅಜ್ಜಿಯ ಪ್ರೀತಿ, ಕುಂಟಬಿಲ್ಲೆ, ಲಗೋರಿ, ಕಣ್ಣಾಮುಚ್ಚಾಲೆ ಆಟ, ಹಸಿರ ಪಕೃತಿಯ ನಡುವೆ ನಾವು ಬೆಳೆದ ದಿನಗಳು ಇಂದು ನಮ್ಮ ಮತ್ತು ಮೊಮ್ಮಕ್ಕಳಿಗೆ ಮರಿಚಿಕೆಯಾಗಿದೆ ಎಂದು ಹೇಳಿದರು. ವಿವಿಧ ಭಾಷೆ ಜನಾಂಗಗಳಿಗೆ ಸೇರಿದ ನಾವು ಕನ್ನಡವನ್ನು ಹೆಚ್ಚಾಗಿ…

Read More

ಸುಂಟಿಕೊಪ್ಪ ಡಿ.1 NEWS DESK : ಸರಕಾರ ಸೇವೆಯಲ್ಲಿ ವಯೋನಿವೃತ್ತಿ ಸಹಜ. ಆದರೆ ನಿಮ್ಮ ಶಿಕ್ಷಣ, ವೃತ್ತಿ ಜೀವನವನ್ನು ಕೊನೆಗೊಳಿಸದೆ ಸಮಾಜ ಸೇವೆಯಲ್ಲಿ ತೊಡಗಿಕೊಳ್ಳಬೇಕೆಂದು ಗ್ರಾ.ಪಂ.ಅಧ್ಯಕ್ಷ ಪಿ.ಆರ್.ಸುನಿಲ್‍ಕುಮಾರ್ ಹೇಳೀದರು. ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ  ಮುಖ್ಯ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿ ವಯೋನಿವೃತ್ತಿ ಹೊಂದಿರುವ ಸಿ.ಎ.ಗೀತಾ ಪಾರ್ಥ,  ಅವರಿಗೆ ಬೋಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು. ಶಾಲೆಗೆ ಆಗಮಿಸುವ ಮಕ್ಕಳು ಹಾಗೂ ಪೋಷಕರೊಂದಿಗೆ ಸದಾಗೌರವ, ಹಸನ್ಮುಖಿಯಾಗಿರುವ ಗೀತಾ ಅವರು ಶಾಲೆಯನ್ನು ಮಾದರಿ ಶಾಲೆಯನ್ನಾಗಿ ರೂಪುಗೊಳಿಸಿದ್ದಾರೆ. ಶಾಲೆಯಲ್ಲಿ ಮಕ್ಕಳ ಸಂಖ್ಯೆಯನ್ನು ಏರಿಕೆಗೊಳಿಸುವಲ್ಲಿಯೂ ಅವರ ಪರಿಶ್ರಮ ಅಪರಿಮಿತವಾಗಿದೆ. ಅಲ್ಲದೆ ಶಾಲೆಯ ಅಭಿವೃದ್ಧಿಗೆ ತನ್ನದೆಯಾದ ರೀತಿಯಲ್ಲಿ ಕೊಡುಗೆಯನ್ನು ನೀಡಿರುವುದು ಆಶಾದಾಯಕ ಎಂದರು.  ಸಹಶಿಕ್ಷಕರಿಗೆ ಪಠ್ಯದಷ್ಟೇ ಮಹತ್ವವನ್ನು ಪಠ್ಯೇತರ ಚಟುವಟಿಕೆಗಳಿಗೆ ತೊಡಗಿಸಿಕೊಳ್ಳಲು ಶಿಕ್ಷಕರಿಗೆ ಪ್ರೇರೆಪಿಸುವ ಮೂಲಕ ಪ್ರತಿಭೆಗಳನ್ನು ಅನಾವರಣಗೊಳಿಸುವಲ್ಲಿ ಮುಖ್ಯ ಶಿಕ್ಷಕಿ ಗೀತಾ ಅವರ ಪಾತ್ರ ಮಹತ್ವದಾಗಿದೆ ಎಂದು ಹೇಳಿದರು.  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಹಾಗೂ ಗ್ರಾ.ಪಂ.ಸದಸ್ಯ ರಫೀಕ್‍ಖಾನ್,…

Read More

ಸುಂಟಿಕೊಪ್ಪ ಡಿ.1 NEWS DESK : 7ನೇ ಹೋಸಕೋಟೆ ನಿವಾಸಿ, ನಿವೃತ್ತ ಯೋಧ ವಚನ್ ಅವರನ್ನು ಗ್ರಾಮ ಪಂಚಾಯಿತಿ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು. 7ನೇ ಹೋಸಕೋಟೆ ಗ್ರಾಮ ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಇ.ಬಿ.ಜೋಸೆಫ್ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಂದೀಶ್, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು, 17 ವರ್ಷಗಳ ದೇಶಕ್ಕೆ ಯೋಧರಾಗಿ ಸೇವೆ ಸಲ್ಲಿಸಿ ನಿವೃತ್ತಗೊಂಡು ಸ್ವ ಗ್ರಾಮಕ್ಕೆ ಆಗಮಿಸಿದ ಗ್ರಾಮದ ನಿವಾಸಿ ಕೊರಗಪ್ಪ ಹಾಗೂ ಗಿರಿಜ ದಂಪತಿಗಳ ಪುತ್ರ ವಚನ್ ಅವರನ್ನು 7ನೇ ಹೊಸಕೋಟೆ ಗ್ರಾಮ ಪಂಚಾಯಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭ ಉಪಾಧ್ಯಕ್ಷೆ ಸೌಮ್ಯಶ್ರೀ, ಕೆ.ಎಂ.ಮುಸ್ತಾಫ, ಮಧುಸೂದನ್, ಸಿದ್ಧೀಕ್, ವೇದಾವತಿ, ಕಮಲ ಚಂದ್ರಾವತಿ, ಪಂಚಾಯಿತಿ ಕಾರ್ಯದರ್ಶಿ ಸ್ವಾಮಿ ನಾಯಕ್, ಸಿಬ್ಬಂದಿಗಳಾದ ಪೂರ್ಣಿಮ, ಬೀನಾ, ಸರಿತಾ, ಹೇಮಾವತಿ ಮತ್ತಿತರರು ಇದ್ದರು.

Read More

ಕುಶಾಲನಗರ ಡಿ.1 NEWS DESK :  ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವ ಮೂಲಕ ವಿಜ್ಞಾನದ‌ ಕೌತುಕ  ವಿನೂತನ ಪ್ರಯೋಗಗಳ ಮೂಲಕ ಸ್ಥಳೀಯ ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರ ಕಂಡುಕೊಳ್ಳುವ ಮೂಲಕ ವಿಜ್ಞಾನ ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದು  ಸೋಮವಾರಪೇಟೆ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಕೃಷ್ಣಪ್ಪ ಕರೆ ನೀಡಿದರು. ಕೊಡಗು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ 2025-26 ನೇ ಸಾಲಿನ ರಾಷ್ಟ್ರೀಯ‌ ಆವಿಷ್ಕಾರ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ಕುಶಾಲನಗರ ತಾಲ್ಲೂಕಿನ ತೊರೆನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಸಂಘದ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡಿದರು.  ವಿದ್ಯಾರ್ಥಿಗಳು ವಿಜ್ಞಾನ ವಿಷಯದಲ್ಲಿ  ಹೆಚ್ಚು ಆಸಕ್ತಿ ಹಾಗೂ ಕುತೂಹಲ ಹೊಂದಬೇಕು. ಇದರಿಂದ‌ ತಮ್ಮಲ್ಲಿರುವ ಸುಪ್ತ‌ ಪ್ರತಿಭೆಯನ್ನು ಹೊರಹಾಕಿ ಉತ್ತಮ ಭವಿಷ್ಯ ರೂಪಿಸಿ ಕೊಳ್ಳಲು ಸಾಧ್ಯ ಎಂದರು. ವಿದ್ಯಾರ್ಥಿಗಳು ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಹೆಚ್ಚಿನ ಜ್ಞಾನ ಬೆಳೆಸಿಕೊಂಡರೆ ವಿಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಜ್ಞಾನ ಬೆಳೆಸಿಕೊಳ್ಳಬಹುದು ಎಂದರು.…

Read More

ನಾಪೋಕ್ಲು ಡಿ.1 NEWS DESK : ಹದಗೆಟ್ಟ ರಸ್ತೆಯ ಗುಂಡಿಗಳನ್ನು ಮುಚ್ಚುವ ಮೂಲಕ ಕೊಟ್ಟಮುಡಿಯ ಜೀನತ್ ಯುವಕ ಸಂಘದ ಪದಾಧಿಕಾರಿಗಳು, ಸದಸ್ಯರು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕೊಟ್ಟಮುಡಿ ಇಂದ ಕಾವೇರಿ ನದಿ ಸೇತುವೆಯವರೆಗೆ ಹದಗೆಟ್ಟ ರಸ್ತೆಯಲ್ಲಿ ಶ್ರಮದಾನ ನಡೆಸಿ, ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಇದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು. ಮಡಿಕೇರಿ – ನಾಪೋಕ್ಲು ಮುಖ್ಯ ರಸ್ತೆಯಲ್ಲಿ ಕೊಟ್ಟಮುಡಿ ಇಂದ ಕಾವೇರಿ ನದಿ ಸೇತುವೆಯವರೆಗೆ ರಸ್ತೆಗಳು ಗುಂಡಿ ಬಿದ್ದು ಸಂಚಾರಕ್ಕೆ ತೊಡಕು ಉಂಟಾಗಿತ್ತು. ಅಪಘಾತಗಳು ಹೆಚ್ಚಾಗುತ್ತಿತ್ತು. ಈ ನಿಟ್ಟಿನಲ್ಲಿ ರಸ್ತೆ ದುರಸ್ತಿಗೆ ಒತ್ತಾಯಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿರಲಿಲ್ಲ. ರಸ್ತೆ ದುರಸ್ತಿಗೆ ಅಧಿಕಾರಿಗಳ ಸ್ಪಂದನೆ ಸಿಗದಿದ್ದರಿಂದ ಕೊಟ್ಟ ಮುಡಿಯ ಜೀನತ್ ಯುವಕ ಸಂಘದ ಪದಾಧಿಕಾರಿಗಳು ತಮ್ಮ ವಾಹನದಲ್ಲೇ ಮಣ್ಣು ತಂದು ರಸ್ತೆ ಹುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ಮುಂದಾದರು. ಗುಂಡಿಗಳಿಗೆ ಮಣ್ಣು ಕಲ್ಲು ತುಂಬಿ ದುರಸ್ತಿ ಕಾರ್ಯ ನಡೆಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಶ್ರಮದಾನದಲ್ಲಿ…

Read More

ಮಡಿಕೇರಿ ಡಿ.1 NEWS DESK : ಬೆಂಗಳೂರಿನಲ್ಲಿ ಬೆಂಗ್ ನಾಡ್ ಕೊಡವ ಒತ್ತೋರ್ಮೆ ಕೂಟ ಆಯೋಜಿಸಿದ ಇಂಟರ್ ನಾಡು ಹಾಕಿ ಪಂದ್ಯಾವಳಿಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ  ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.  ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಹಾಕಿ ಮೈದಾನದಲ್ಲಿ ನಡೆದ ಫೈನಲ್ ಪಂದ್ಯಾಟದ ವೀಕ್ಷಣೆಯನ್ನು ನೆರವೇರಿಸಿ, ಪ್ರಶಸ್ತಿ ವಿತರಿಸಿ ಮಾತನಾಡಿದ ಶಾಸಕರು, ಕೊಡಗಿನ ಜನತೆಯ ಉಸಿರಿನಲ್ಲಿ ಹಾಕಿ ಪಂದ್ಯಾವಳಿ ಹಾಸುಹೊಕ್ಕಿದೆ. ಪ್ರತಿಷ್ಠಿತವಾದ ಈ ಪಂದ್ಯಾವಳಿಯ ವೀಕ್ಷಣೆಯನ್ನು ಮಾಡಿ ಈ ಪಂದ್ಯಾಟದ ರೋಚಕತೆಯನ್ನು ಆಸ್ವಾದಿಸುವ ಸೌಭಾಗ್ಯ ಒದಗಿದ್ದು, ತನಗೆ ಸಂತೋಷ ತಂದಿದೆ. ಯುವ ಪ್ರತಿಭೆಗಳನ್ನು ಲೋಕಕ್ಕೆ ಪರಿಚಯಿಸುವಂತಹ ಇಂಥ ಕ್ರೀಡಾಕೂಟಗಳು ಮತ್ತಷ್ಟು ನಡೆಯಲಿ ಎಂದು ಹಾರೈಸುತ್ತಾ ಪ್ರಶಸ್ತಿ ವಿಜೇತರಿಗೆ ಅಭಿನಂದನೆ ಸಲ್ಲಿಸಿ ಶುಭ ಕೋರಿದರು. ಈ ಸಂದರ್ಭದಲ್ಲಿ ಬೆಂಗ್ ನಾಡ್ ಕೊಡವ ಒತ್ತೋರ್ಮೆ ಕೂಟ್ಟದ ಅಧ್ಯಕ್ಷರಾದ ಕೇಕಡ ಎ ದೇವಯ್ಯ, ಭಾರತಿಯ ಹಾಕಿ ತಂಡದ ಮಾಜಿ ನಾಯಕ ಮೋಳೆರ ಪಿ…

Read More

ಗೋಣಿಕೊಪ್ಪ ಡಿ.1 NEWS DESK : ವಿರಾಜಪೇಟೆ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಹಿರಿಯ ಮುಖ್ಯ ಶುಶ್ರೂಷಾಧಿಕಾರಿಯಾಗಿರುವ ಇಂದಿರಾವತಿ ಎಂ.ಬಿ ಅವರು ಫ್ಲಾರೆನ್ಸ್ ನೈಟಿಂಗೇಲ್ ನರ್ಸ್ ಪ್ರಶಸ್ತಿ -2025 ಪಡೆದುಕೊಂಡಿದ್ದಾರೆ. ಬೆಂಗಳೂರಿನ ಕರ್ನಾಟಕ ಸುದ್ದಿ ಸಂಘ” ಮತ್ತು “ಭಾರತದ ರಾಷ್ಟ್ರೀಯ ಪತ್ರಿಕಾ ಮಂಡಳಿ” ಕನ್ನಡ ರಾಜ್ಯೋತ್ಸವ ಆಚರಣೆ ಹಿನ್ನೆಲೆ ನೀಡುವ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿಯನ್ನು ಬೆಂಗಳೂರಿನ ಪುಟ್ಟಣ್ಣ ಚೆಟ್ಟಿ ಟೌನ್‌ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಮೂರ್ನಾಡಿನ ಅವಂದೂರು ಗ್ರಾಮದ ಶಾಸ್ತ್ರಿ ನಗರದ ನಿವಾಸಿ, ಮೊಟೇರ ಜಯರಾಮ್ ಅವರ ಧರ್ಮ ಪತ್ನಿಯಾಗಿದ್ದಾರೆ.

Read More

ಮಡಿಕೇರಿ ಡಿ.1 NEWS DESK : ಮಡಿಕೇರಿ ಕೊಡವ ಸಮಾಜದ ವತಿಯಿಂದ ವರ್ಷಂಪ್ರತಿಯಂತೆ ಮೂರು ದಿನಗಳ ಪುತ್ತರಿ ಈಡ್ ಕಾರ್ಯಕ್ರಮಕ್ಕೆ  ಪುತ್ತರಿ ಕೋಲ್ ಮಂದ್ ನಲ್ಲಿ ಚಾಲನೆ ನೀಡಲಾಯಿತು. ಮಡಿಕೇರಿ ಕೊಡವ ಸಮಾಜದ ಅಧೀನದಲ್ಲಿ‌ ಜಿಲ್ಲಾ ಕ್ರೀಡಾಂಗಣದ ಸನೀಹದಲ್ಲಿರುವ ಮಂದ್ ಈ ಬಾರಿ ನವೀಕರಣಗೊಂಡಿದ್ದು‌, ಹೊಸದಾಗಿ ಆಲ್ ಮರ ನೆಡುವ ಕಾರ್ಯವನ್ನು ನಡೆಸಲಾಗಿತ್ತು. ಪುತ್ತರಿ ಹಬ್ಬಕ್ಕೂ ಮುನ್ನ ಕೊಡವ ಜನಪದ ಕಲೆಗಳನ್ನು ಯುವಕ ಪೀಳಿಗೆಗೂ ಕಲಿಸುವ ಮೂಲಕ ಈಡ್ ಹೆಸರಿನಲ್ಲಿ ತಾಲೀಮು ನಡೆಸುವುದು ಸಂಪ್ರದಾಯಬದ್ದವಾದ ವಾಡಿಕೆಯಾಗಿದೆ. ಆರಂಭಿಕ ದಿನದಂದು ನಗರ ವ್ಯಾಪ್ತಿಯ ಹಲವಷ್ಟು ಕೊಡವ ಬಾಂಧವರು ಪಾಲ್ಗೊಂಡಿದರು.‌ ಕೊಡವ ಸಮಾಜದ ಅಧ್ಯಕ್ಷರಾದ ಮಂಡುವಂಡ ಮುತ್ತಪ್ಪ, ಕೊಡವ ಸಾಂಪ್ರದಾಯಿಕ ಉಡುಪಿನೊಂದಿಗೆ ನವೀಕೃತಗೊಂಡಿರುವ ಮಂದ್ ತೆರೆಯುವ ಕಾರ್ಯಕ್ರಮದೊಂದಿಗೆ ಪುತ್ತರಿ ಈಡಿಗೆ ಚಾಲನೆ ನೀಡಿ ಮಾತನಾಡಿದರು. ಮಂದ್ ನೆಲೆಯ ಬೃಹತ್ ಮರ ಮುರಿದು ಬಿದ್ದು ಅದೇ ನೆಲೆಯಲ್ಲಿ ಅರಳಿ ಗಿಡವನ್ನು ಸಂಪ್ರದಾಯವಾಗಿ ನೆಡಲಾಯಿತು. ಹಿಂದಿನ ಸಂಪ್ರದಾಯದಂತೆ ಪುತ್ತರಿ ನಮ್ಮೆಯ ಮೂರು ದಿನ ಮುಂಚಿತವಾಗಿ ಈ ಮಂದ್‌ನಲ್ಲಿ…

Read More

ಬೆಂಗಳೂರು NEWS DESK ನವೆಂಬರ್ 30 : ಕನ್ನಡ ಭಾಷೆ ರಾಜ್ಯದ  ಅಸ್ಮಿತೆಯ ತಳಹದಿಯಾಗಿದ್ದರೆ, ಅರೆಭಾಷೆಯಂತಹ ಪ್ರಾದೇಶಿಕ ಭಾಷೆಗಳು  ಕನ್ನಡವನ್ನು ಶ್ರೀಮಂತಗೊಳಿಸಿದೆ ಎಂದು ಮುಖ್ಯಮಂತ್ರಿ  ಸಿದ್ದರಾಮಯ್ಯ ತಿಳಿಸಿದರು. ಅವರು   ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮಡಿಕೇರಿ ಇವರ ವತಿಯಿಂದ  ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ 2024ನೇ ಸಾಲಿನ ಅರೆ ಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರದಾನ ಜಂಬರ  ಕಾರ್ಯಕ್ರಮವನ್ನು ಉದ್ಘಾಟಿಸಿ,  ಮಾತನಾಡಿದರು. *ಅರೆಭಾಷಿಕರದ್ದು ವಿಭಿನ್ನ ಸಂಸ್ಕೃತಿ* ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ಅರೆಭಾಷೆ ಗೌಡರು ಹೆಚ್ಚಾಗಿ ವಾಸಿಸುತ್ತಿದ್ದು, ಇವರ ಜನಸಂಖ್ಯೆ ಮೂರು ಲಕ್ಷಕ್ಕೂ ಹೆಚ್ಚಿದೆ. 1882 ನೇ ಗೆಜೆಟ್ ಬಂದಾಗ ಸಕಲೇಶಪುರದಲ್ಲಿದ್ದು,  ಬರಗಾಲದ ಸಂದರ್ಭದಲ್ಲಿ ಹೇಮಾವತಿ ನದಿ ಬತ್ತಿದಾಗ ಪಕ್ಕದ ಜಿಲ್ಲೆ ಸುಳ್ಯಕ್ಕೆ ಬಂದು ನೆಲೆಯೂರುತ್ತಾರೆ, ತುಳು,  ಕೊಂಕಣಿ ಜೊತೆಗೆ ಕನ್ನಡ ಸೇರಿ ಅರೆಭಾಷೆಯಾಗಿದೆ. ಹೋಗುತ್ತೇನೆ ಎನ್ನುವುದು ವೋನೆ , ಬರುತ್ತೇನೆ ಎನ್ನುವುದು ಬನೇ ಎಂದು ಹೇಳುತ್ತಾರೆ. ಹೀಗೆ ಕೆಲವು ಅಕ್ಷರಗಳು ಬಿಟ್ಟುಹೋಗಿ  ಅರೆಭಾಷೆಯಾಗಿದೆ ಎಂದರು.…

Read More