ಲೇಖಕ: admin

ಸುಂಟಿಕೊಪ್ಪ ನ.1 NEWS DESK : ಭಾರತಾಂಭೆಯ ಸೇವೆಯಲ್ಲಿ ನಮ್ಮನ್ನು ನಾವು ಸಮರ್ಪಿಸಿಕೊಳ್ಳಲು ಕನ್ನಡ ರಾಜ್ಯೋತ್ಸವ ನಮಗೆಲ್ಲರಿಗೂ ಪ್ರೇರಣೆ ನೀಡುವಂತ ಆಚರಣೆಯಾಗಬೇಕೆಂದು ಸುಂಟಿಕೊಪ್ಪ ಗ್ರೇಡ್ 1 ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್ ಕರೆ ನೀಡಿದ್ದಾರೆ. ಸುಂಟಿಕೊಪ್ಪದ ಕನ್ನಡ ವೃತ್ತದಲ್ಲಿ 70ನೇ ಕನ್ನಡ ರಾಜ್ಯೋತ್ಸವದ ಆಚರಣೆಯಲ್ಲ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು. ಭಾಷಾವರು ಪಾಂತ್ಯಗಳಾಗಿ ರಚನೆಯಾದ ಸಂದರ್ಭ ಮೈಸೂರು 1956 ರಲ್ಲಿ ಅಸಿತ್ವಕ್ಕೆ ಬಂದು ಮುಂದೆ 1973 ನವೆಂಬರ್ 1 ರಂದು ಕರ್ನಾಟಕವೆಂದು ಹೆಸರಾಯಿತು. ಅಂದಿನಿಂದ ಪ್ರತಿ ವರ್ಷವೂ ನ.1 ರಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಾ ಕನ್ನಡ ನಾಡು ನುಡಿ ಸಂಸ್ಕøತಿ ಆಚಾರ ವಿಚಾರಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾವೆಲ್ಲಾರೂ ಮತ್ತೆ ಮತ್ತೆ ಕಟ್ಟಿಬದ್ದರಾಗಬೇಕೆಂದು ಅವರು ಕರೆ ನೀಡಿದರು. ಸುಂಟಿಕೊಪ್ಪ ಗ್ರೇಡ್ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪಿ.ಆರ್.ಸುನಿಲ್‍ಕುಮಾರ್ ಮಾತನಾಡಿ, ಕನ್ನಡ ವೃತ್ತದ ಐತಿಹಾಸಿಕ ಹಿನ್ನಲೆಯನ್ನು ಗತೌರವಿಸಿ ಕನ್ನಡ ರಾಜ್ಯೋತ್ಸವ ತಿಂಗಳಾದ ನವೆಂಬರ್‍ನಲ್ಲಿ ವೈವಿದ್ಯಮಯ ಭಾಷ ಸಂಸ್ಕøತಿ ಮೈಳಾಯಿಸಿದ ಹಮ್ಮಿಕೊಳ್ಳುವಂತಾಗಬೇಕೆಂದು ಕರೆ ನೀಡಿ,…

Read More

ಮಡಿಕೇರಿ NEWS DESK ನ.1 : ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ  ರೋಟರಿ ಸದಸ್ಯರಿಗಾಗಿ ನ.2 ರಂದು ಭಾನುವಾರ ಕಲಾಕಲರವ ಸಾಂಸ್ಕೖತಿಕ ಸ್ಪದೆ೯ಗಳು ಆಯೋಜಿಸಲ್ಪಟ್ಟಿದೆ ಎಂದು ಸಮಿತಿ ಸಂಚಾಲಕ ಜಯಂತ್ ಪೂಜಾರಿ ತಿಳಿಸಿದ್ದಾರೆ. ನ.2 ರಂದು ಭಾನುವಾರ ಬೆಳಗ್ಗೆ 10 ಗಂಟೆಗೆ  ರೋಟರಿ ವಲಯ 6 ರ ಸದಸ್ಯರಿಗಾಗಿ ಆಯೋಜಿತ ಸ್ಪಧೆ೯ಗಳಿಗೆ ನಗರದ ಫೀಲ್ಡ್ ಮಾಷ೯ಲ್ ಕಾಯ೯ಪ್ಪ ಕಾಲೇಜಿನಲ್ಲಿ  ಪ್ರಾಂಶುಪಾಲ  ಮೇಜರ್ ಬಿ. ರಾಘವ ಚಾಲನೆ ನೀಡಲಿದ್ದಾರೆ.  ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷರತ್ನಾಕರ್ ರೈ, ಕಾಯ೯ದಶಿ೯ ಬಿ.ಕೆ. ಕಾಯ೯ಪ್ಪ, ವಲಯ 6 ರ ಸಹಾಯಕ ಗವನ೯ರ್ ಧಿಲನ್ ಚಂಗಪ್ಪ, ರಾಜುಗೌಡ,  ಉಲ್ಲಾಸ್ ಕೖಷ್ಣ. ಸಾಂಸ್ಕೖತಿಕ ಸಮಿತಿಯ ವಲಯಾಧ್ಯಕ್ಷೆ ತೋಟಂಬೈಲು ಶುಭಾಷಿಣಿ ಸೇರಿದಂತೆ ಗಣ್ಯರು ಹಾಜರಿರುತ್ತಾರೆ. ವಲಯ 6 ಕ್ಕೆ  ಸೇರಿರುವ ರೋಟರಿಯ 14 ಕ್ಲಬ್ ಗಳ ಸದಸ್ಯರು, ಕುಟುಂಬ ವಗ೯ದ 220 ಸದಸ್ಯರು ಸಾಂಸ್ಕೖತಿಕ ಸ್ಪಧೆ೯ಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದೂ ಜಯಂತ್ ಪೂಜಾರಿ ಮಾಹಿತಿ ನೀಡಿದ್ದಾರೆ.

Read More

ನಾಪೋಕ್ಲು ನ.1 NEWS DESK : ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮದಿನದ ಅಂಗವಾಗಿ ನಾಪೋಕ್ಲುವಿನಲ್ಲಿ ರಾಷ್ಟರೀಯ ಏಕತಾ ಓಟ ನಡೆಯಿತು. ನಾಪೋಕ್ಲು ಪೊಲೀಸ್ ಠಾಣೆಯ ಸಹಾಯಕ ಠಾಣಾಧಿಕಾರಿ ಫ್ರಾನ್ಸಿಸ್ ಅವರ ನೇತೃತ್ವದಲ್ಲಿ ಪೊಲೀಸರು ಹಾಗೂ ಗ್ರಾಮ ಪಂಚಾಯತಿ ಸದಸ್ಯರಾದ ಮಾಚೇಟಿರ ಕುಸು ಕುಶಾಲಪ್ಪ, ಅಶ್ರಫ್ ಕೆ.ವೈ., ನಾಪೋಕ್ಲು ಪಟ್ಟಣದ ಬಸ್ ನಿಲ್ದಾಣದಿಂದ ಮಾರುಕಟ್ಟೆ ವರೆಗೆ ಏಕತಾ ಓಟವನ್ನು ನಡೆಸಿ ಏಕತಾ ಸಂದೇಶವನ್ನು ಸಾರಿದರು. ಈ ಸಂದರ್ಭ ಸ್ಥಳೀಯ ಪೊಲೀಸ್ ಠಾಣೆ ಸಿಬ್ಬಂದಿಗಳು, ಸಾರ್ವಜನಿಕರು, ಆಟೋ ಚಾಲಕರು ಉಪಸ್ಥಿತರಿದ್ದರು. ವರದಿ : ದುಗ್ಗಳ ಸದಾನಂದ. 

Read More

ವಿರಾಜಪೇಟೆ ನ.1 NEWS DESK : ಮೈಸೂರಿನ ಟೆರೆಷಿಯನ್ ಕಾಲೇಜಿನಲ್ಲಿ ಮೈಸೂರಿನ ವಿ.ಎನ್. ಯೋಧ ಮಾರ್ಷಲ್ ಆರ್ಟ್ಸ್ ಅಕಾಡೆಮಿ ವತಿಯಿಂದ ನಡೆಸಲಾದ ಐದನೇ ರಾಷ್ಟ್ರೀಯ ಮುಕ್ತ ಕರಾಟೆ ಪಂದ್ಯಾಳಿಯಲ್ಲಿ ವಿರಾಜಪೇಟೆಯ ಆರ್ಜಿ ಗ್ರಾಮದ ಪೆರುಂಬಾಡಿಯ ಜೆನ್ ಸಿಟೋರಿಯೋ ಸ್ಕೂಲ್ ಆಫ್ ಇಂಡಿಯಾ ಕರಾಟೆ ಶಾಲೆಯ ವಿದ್ಯಾರ್ಥಿಗಳು ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಬಾಲಕರ ಕುಮಿತೆ ವಿಭಾಗದಲ್ಲಿ ಧೃತಿಕ್ ಡಿ., ಕಾರ್ತಿಕ್ ಕೆ.ಹೆಚ್. ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಪ್ರಜನ್ ಎಸ್.ಬಿ, ಗಗನ್ ಎಸ್., ಕೃಶಾಂಕ್ ಎಂ.ಎಸ್., ಪರಿಣಿತ್ ಎ.ಟಿ, ಕೃತಿಕ್ ಎಂ.ದ್ವಿತೀಯ ಸ್ಥಾನಗಳಿಸಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ. ಡೆನಿಸ್ ಪಿ.ಎಲ್., ಅನುರಾಗ ಟಿ.ಎಸ್ ತೃತೀಯ ಸ್ಥಾನ ಗಳಿಸಿ ಕಂಚಿನ ಪದಕ ಪಡೆದುಕೊಂಡಿದ್ದಾರೆ. ಬಾಲಕಿಯರ ಕುಮಿತ್ತೆ ವಿಭಾಗದಲ್ಲಿ ಧನುಶ್ರೀ ಆರ್. ನಿರಂಜನ ಎಂ.ಎಚ್. ದ್ವಿತೀಯ ಸ್ಥಾನ ಗಳಿಸಿ ಬೆಳ್ಳಿ ಪದಕ ಪಡೆದುಕೊಂಡರೆ, ಬಿಂದ್ಯಾ ತೃತೀಯ ಸ್ಥಾನ ಗಳಿಸಿ ಕಂಚಿನ ಪದಕ ಪಡೆದುಕೊಂಡಿದ್ದಾರೆ. ಸೋಹಾನ್,…

Read More

ವಿರಾಜಪೇಟೆ ನ.1 NEWS DESK : ವಿರಾಜಪೇಟೆಯ ಆರ್ಜಿ ಗ್ರಾಮದ ಕಲ್ಲುಬಾಣೆಯ ಕಲ್ಲುಬಾಯ್ಸ್ ತಂಡದ ವತಿಯಿಂದ ನವೆಂಬರ್‍ನಲ್ಲಿ ಆಯೋಜನೆಗೊಂಡಿರುವ, ಕಲ್ಲುಬಾಯ್ಸ್ ದಿವಂಗತ ಎ.ಕೆ ಸುಬ್ಬಯ್ಯ ಮೆಮೋರಿಯಲ್ ಕಪ್-ಹೊನಲು ಬೆಳಕಿನ ರಾಷ್ಟ್ರಮಟ್ಟದ ಫುಟ್ಬಾಲ್ ಪಂದ್ಯಾವಳಿಯ ಲೋಗೋವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ಶಾಸಕ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಬಿಡುಗಡೆಗೊಳಿಸಿದರು. ವಿರಾಜಪೇಟೆಯ ಶಾಸಕರ ಗೃಹ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಲಾಂಛನ ಬಿಡುಗಡೆಗೊಳಿಸಿ, ಪಂದ್ಯಾವಳಿಗೆ ಶುಭ ಕೋರಿದರು. ಈ ಸಂದರ್ಭ ಕ್ರೀಡಾಕೂಟದ ಬಗ್ಗೆ ಮಾಹಿತಿ ನೀಡಿದ ಸಂಘಟನೆಯ ಅಧ್ಯಕ್ಷ ರಹೀಮ್ ಅವರು, ನವೆಂಬರ್ 20, 21, 22 ಮತ್ತು 23ರಂದು 4 ದಿನಗಳ ಕಾಲ ವಿರಾಜಪೇಟೆ ತಾಲ್ಲೂಕು ಮೈದಾನದಲ್ಲಿ ಹೊನಲು ಬೆಳಕಿನ ರಾಷ್ಟ್ರಮಟ್ಟದ ಕಾಲ್ಚೆಂಡು ಪಂದ್ಯಾವಳಿ ಭವ್ಯವಾಗಿ ನಡೆಯಲಿದೆ. ಈ ಫುಟ್ಬಾಲ್ ಟೂರ್ನಮೆಂಟ್ ಕೇವಲ ಸ್ಪರ್ಧೆಯಲ್ಲ. ಸ್ನೇಹ, ಸಹಕಾರ ಮತ್ತು ಮಾನವೀಯತೆಯ ವೇದಿಕೆಯಾಗಿದೆ. ಟೂರ್ನಮೆಂಟ್‍ನಿಂದ ಲಭ್ಯವಾಗುವ ಮೊತ್ತವನ್ನು ಸಿದ್ದಾಪುರದ ಡಯಾಲಿಸಿಸ್ ಪಡೆಯುತ್ತಿರುವ ಬಡ ರೋಗಿಗಳ ನೆರವಿಗೆ ನೀಡಲಾಗುತ್ತದೆ. ಕ್ರೀಡೆಯ ಮೂಲಕ ಸಮಾಜ ಸೇವೆ ಎಂಬ ಈ ಶ್ರೇಷ್ಠ…

Read More

ನಾಪೋಕ್ಲು ನ.1 NEWS DESK : ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳು ಉತ್ತಮ ಗುಣಮಟ್ಟದಿಂದ ಕೂಡಿದ್ದು, ಸಾರ್ವಜನಿಕರು ಅದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು. ನಾಪೋಕ್ಲುವಿನ ಸಂತೆ ಮೈದಾನದ ಸಮೀಪದಲ್ಲಿ ನೂತನವಾಗಿ ಆರಂಭಗೊಂಡ ನಂದಿನಿ ಉತ್ಪನ್ನಗಳ ಮಾರಾಟ ಮಳಿಗೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಇದು 15ನೇ ಮಳಿಗೆಯಾಗಿದೆ. ದೇಶದಾದ್ಯಂತ ನಂದಿ ಉತ್ಪನ್ನಗಳು ಹೆಸರುವಾಸಿಯಾಗಿದೆ. ಗುಣಮಟ್ಟದ ವಸ್ತುಗಳು ಗ್ರಾಹಕರಿಗೆ ಲಭ್ಯವಾಗಲಿದೆ ಎಂದು ಶುಭ ಹಾರೈಸಿದರು. ಈ ಸಂದರ್ಭ ನಾಪೋಕ್ಲು ಗ್ರಾಮ ಪಂಚಾಯತಿ ಅಧ್ಯಕ್ಷ ವನಜಾಕ್ಷಿ ರೇಣುಕೇಶ್, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ, ಮಳಿಗೆಯ ಮಾಲಿಕ ನೆರವಂಡ ಉಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಕೆ.ಎ.ಇಸ್ಮಾಯಿಲ್, ಕಾಂಗ್ರೆಸ್ ವಲಯ ಅಧ್ಯಕ್ಷ ಮಾಚೇಟಿರ ಕುಸು ಕುಶಾಲಪ್ಪ, ಗ್ರಾಮ ಪಂಚಾಯತಿ ಸದಸ್ಯೆ ಕುಲ್ಲೇಟಿರ ಹೇಮಾ ಅರುಣ್, ಇತರ ಸದಸ್ಯರು. ಹಾಲು ಒಕ್ಕೂಟ ಹಾಸನ (ನಂದಿನಿ) ನಿರ್ದೇಶಕ ಹೇಮಂತ್ ಕುಮಾರ್, ಸಹಾಯಕ ನಿರ್ದೇಶಕ ಅನಿಲ್, ವ್ಯವಸ್ಥಾಪಕ…

Read More

ಮಡಿಕೇರಿ ನ.1 NEWS DESK : ವಿರಾಜಪೇಟೆ ಹಾಗೂ ಪೊನ್ನಂಪೇಟೆ ತಾಲ್ಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯು ವಿರಾಜಪೇಟೆಯ ಅಂಬೇಡ್ಕರ್ ಭವನದಲ್ಲಿ ನಡೆಯಿತು. ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ  ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ, ಜಿಲ್ಲಾಧಿಕಾರಿ ವೆಂಕಟ ರಾಜ್, ಜಿ.ಪಂ ಸಿಇಓ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು ಜಾನ್ಸನ್ ಹಾಗೂ ಎಲ್ಲಾ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಪ್ರತಿಯೊಂದು ಇಲಾಖೆಯ ವರದಿ ತರಿಸಿಕೊಂಡ ಸಚಿವರು ಹಾಗೂ ಶಾಸಕರು  ಕೂಲಂಕುಶವಾಗಿ ಪ್ರತಿ ವರದಿಯನ್ನು ಪರಿಶೀಲಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿದರು.

Read More

ಮಡಿಕೇರಿ ನ.1 NEWS DESK : ತಿತಿಮತಿಯಲ್ಲಿ ರೂ.2.5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ರಸ್ತೆ ಕಾಮಗಾರಿಗೆ ಉಸ್ತುವಾರಿ ಸಚಿವ ಎನ್.ಎಸ್ ಭೋಸರಾಜು  ಮತ್ತು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಭೂಮಿ ಪೂಜೆ ನೆರವೇರಿಸಿದರು. ತಿತಿಮತಿಯಿಂದ ಪಾಲಿಬೆಟ್ಟಕ್ಕೆ ತೆರಳುವ ಜಿಲ್ಲಾ ರಸ್ತೆಯು ಮಳೆಯಿಂದ ತೀವ್ರ ಹಾನಿಗೊಳಗಾಗಿದ್ದನ್ನು ಮನಗಂಡ ಶಾಸಕರು, ಮಳೆ ನಿಂತ ಕೂಡಲೇ ಕಾಮಗಾರಿ ಆರಂಭಿಸಲು ಅನುದಾನ ಒದಗಿಸಿದ್ದರು. ಈ ರಸ್ತೆಯಲ್ಲಿ ನೂರಾರು ಜನ ದಿನನಿತ್ಯ ಪ್ರಯಾಣಿಸುವುದರಿಂದ, ಕಾಮಗಾರಿ ಬಳಿಕ ಸಾರ್ವಜನಿಕರ ಅನುಕೂಲಕ್ಕೆ ಈ ರಸ್ತೆ ತೆರವುಗೊಳ್ಳಲಿದೆ. ಈ ಸಂದರ್ಭ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ  ಧರ್ಮಜ ಉತ್ತಪ್ಪ, ವಲಯ ಅಧ್ಯಕ್ಷರು ನವೀನ್, ಪಕ್ಷದ ಪ್ರಮುಖರು ಬೇನ್ನಿ, ಪಂಕಜ, ಭಸಂತ್, ಹಾಗೂ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.

Read More

ಮಡಿಕೇರಿ ನ.1 NEWS DESK : ವಿಶ್ವ ರೇಬೀಸ್ ದಿನಾಚರಣೆಯ ಅಂಗವಾಗಿ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಮುದಾಯ ವೈದ್ಯಶಾಸ್ತ್ರ ವಿಭಾಗದ ವತಿಯಿಂದ “ಒನ್ ಹೆಲ್ತ್ ಪರಿಕಲ್ಪನೆಯಡಿಯಲ್ಲಿ ರೇಬೀಸ್ ಮುಕ್ತ ಸಮಾಜ ಎಂಬ ವಿಷಯದ ಮೇಲೆ ಕಾರ್ಯಾಗಾರವು ನಗರದ ಹೊರ ವಲಯದಲ್ಲಿರುವ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ವಲ್ರ್ಡ್ ಆರ್ಗನೈಸೇಶನ್ ಫಾರ್ ಅನಿಮಲ್ ಹೆಲ್ತ್ ರೆಫರೆನ್ಸ್ ಲ್ಯಾಬೊರೇಟರಿ ಫಾರ್ ರೇಬೀಸ್, ಪಶುವೈದ್ಯಕೀಯ ಮಹಾವಿದ್ಯಾಲಯ, ಕೆ.ವಿ.ಎ.ಎಫ್.ಎಸ್.ಯು., ಬೆಂಗಳೂರು, ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆ, ಕೊಡಗು ಜಿಲ್ಲೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೊಡಗು, ಇಂಡಿಯನ್ ಮೆಡಿಕಲ್ ಅಸೋಸಿಯೇಶನ್, ಕೊಡಗು ಘಟಕ ಮತ್ತು ಇಂಡಿಯನ್ ರೆಡ್‍ಕ್ರಾಸ್ ಸೊಸೈಟಿ, ಕೊಡಗು ಇವರ ಸಹಯೋಗದಲ್ಲಿ ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಪಶುವೈದ್ಯಕೀಯ ಆರೋಗ್ಯ ಕ್ಷೇತ್ರದ ತಜ್ಞರಾದ ಡಾ.ಶ್ರೀಕೃಷ್ಣ ಇಶ್ಲೂರ್ ಉದ್ಘಾಟಿಸಿದರು. ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಮತ್ತು ನಿರ್ದೇಶಕರಾದ ಡಾ.ಲೋಕೇಶ್ ಎ.ಜೆ. ಮತ್ತು ಡಾ. ಸತೀಶ್ ಕುಮಾರ್ ಕೆ.ಎಂ. ಡಿ.ಹೆಚ್.ಒ.…

Read More

ಮಡಿಕೇರಿ ನ.1 NEWS DESK : ಕೊಡಗು ಜಿಲ್ಲೆಯಲ್ಲಿ ಇರುವ ಅರೆಸೇನಾಪಡೆ ನಿವೃತ್ತ ಯೋಧರ ಒಕ್ಕೂಟಕ್ಕೆ ಸೂಕ್ತ ಸ್ಥಳಾವಕಾಶ ನೀಡಬೇಕೆಂದು ಆಗ್ರಹಿಸಿ ಯೋಧರ ಒಕ್ಕೂಟದ ವತಿಯಿಂದ ಕುಶಾಲನಗರದ ಪುರಸಭೆಗೆ ಮನವಿ ಸಲ್ಲಿಸಿ ಸಂಬಂಧಿಸಿದ ಸರ್ಕಾರಿ ಜಾಗವನ್ನು ಪುರಸಭೆಯ ಅಧಿಕಾರಿಗಳ ಸಮ್ಮುಖದಲ್ಲಿ ಪರಿಶೀಲಿಸಲಾಯಿತು. ನಿವೃತ್ತ ಯೋಧರ ಒಕ್ಕೂಟದ ಅಧ್ಯಕ್ಷರಾದ ಎಂ.ಜಿ.ಯತೀಶ್, ಸಂಚಾಲಕರಾದ ನೂರೇರಾ ಭೀಮಯ್ಯ ನೇತೃತ್ವದಲ್ಲಿ 20 ಕ್ಕೂ ಹೆಚ್ಚಿನ ಯೋಧರು ಪುರಸಭೆ ಕಛೇರಿಗೆ ಧಾವಿಸಿ ಒಕ್ಕೂಟದಿಂದ ಈಗಾಗಲೇ ಗುರುತಿಸಿರುವ ಜಾಗವನ್ನು ಮಂಜೂರು ಮಾಡಲು ಜಿಲ್ಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಬೇಕೆಂದು ಪುರಸಭೆಯ ಅಧಿಕಾರಿಗಳಿಗೆ ಕೋರಲಾಯಿತು. ಮುಳ್ಳುಸೋಗೆಯ ಸರ್ವೆ ನಂಬರ್ 11/1 ರಲ್ಲಿ 60 ಸೆಂಟು ಸರ್ಕಾರಿ (ಪೈಸಾರಿ) ಜಾಗವಿದ್ದು ಇದನ್ನು ಅರೆಸೇನಾಪಡೆಯ ನಿವೃತ್ತ ಯೋಧರ ಒಕ್ಕೂಟಕ್ಕೆ ಹಸ್ತಾಂತರಿಸಬೇಕೆಂದು ಯೋಧರ ಒಕ್ಕೂಟ ಒತ್ತಾಯಿಸಿತು. ಕೊಡಗು ಜಿಲ್ಲೆಯಲ್ಲಿ ಸುಮಾರು 4 ಸಾವಿರಕ್ಕೂ ಹೆಚ್ಚು ಅರೆಸೇನಾಪಡೆಯ ಹಾಲೀ ಮತ್ತು ನಿವೃತ್ತ ಯೋಧರಿದ್ದಾರೆ. ಈವರೆಗೆ ನಮ್ಮ ಒಕ್ಕೂಟಕ್ಕೆ ಕೊಡಗು ಜಿಲ್ಲಾಡಳಿತ ಸೂಕ್ತ ಜಾಗವನ್ನು ನೀಡಿಲ್ಲ. ಅರೆಸೇನಾಪಡೆಯಲ್ಲಿ ಸೇವೆಗೆ ಸೇರಿದ ನಾವುಗಳು…

Read More