ಮಡಿಕೇರಿ NEWS DESK ಆ.18 : ಕೊಡಗು ಜಿಲ್ಲೆಯಲ್ಲಿ ಚಳಿ, ಗಾಳಿ, ಮಳೆ ಮುಂದುವರೆದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದ್ದು, ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ, ಪ್ರೌಢ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ಆ.19 ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಆದೇಶಿಸಿದ್ದಾರೆ. ಮಡಿಕೇರಿ ತಾಲ್ಲೂಕು ಮತ್ತು ದಕ್ಷಿಣ ಕೊಡಗಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ಜಿಲ್ಲಾ ವ್ಯಾಪಿ ಮೈಕೊರೆಯುವ ಚಳಿ ಇದೆ. ಮಂಜು ಕವಿದ ವಾತಾವರಣದಿಂದ ತಿರುವಿನ ರಸ್ತೆಗಳಲ್ಲಿ ವಾಹನ ಚಾಲನೆ ಕಷ್ಟವಾಗುತ್ತಿದ್ದು, ಚಾಲಕನ ನಿಯಂತ್ರಣ ಕಳೆದುಕೊಂಡ ಕೆಎಸ್‌ಆರ್‌ಟಿಸಿ ಬಸ್ ವೊಂದು ಬರೆಗೆ ಗುದ್ದಿದ ಘಟನೆ ಮುಟ್ಲು ಗ್ರಾಮದಲ್ಲಿ ನಡೆದಿದೆ. ಮರಳು ತುಂಬಿದ ಲಾರಿಯೊಂದು ಮಗುಚಿದ ಘಟನೆ ಮಡಿಕೇರಿ ಸಮೀಪ ಕೂಟುಹೊಳೆ ರಸ್ತೆಯಲ್ಲಿ ನಡೆದಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ. ಕತ್ತಲೆಕಾಡು ಗ್ರಾಮದಲ್ಲಿ ಮತ್ತು ವಾಲ್ನೂರು ತ್ಯಾಗತ್ತೂರು ಗ್ರಾ.ಪಂ ವ್ಯಾಪ್ತಿಯ ತ್ಯಾಗತ್ತೂರು ಚೆಟ್ಟಳ್ಳಿ ರಸ್ತೆಯಲ್ಲಿ ಬೃಹತ್ ಮರಗಳು ಬಿದ್ದು, ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.…
ಲೇಖಕ: admin
ಮಡಿಕೇರಿ NEWS DESK ಆ.18 : ನಗರದ ತಾಳತ್ತಮನೆ ನಿವಾಸಿಯಾದ ರಾಬಿನ್ ಕೆ. ಜೆ ಅವರು ಸಂತ ಫಿಲೋಮಿನಾ ಕಾಲೇಜು (ಸ್ವಾಯುತ್ತ) ಮೈಸೂರಿನ ಸಹ ಪ್ರಾಧ್ಯಾಪಕರಾದ ಡಾ. ನೂರ್ ಮುಬಾಶಿರ್ ಅವರ ಮಾರ್ಗದರ್ಶನದಲ್ಲಿ “A Study on Suicide Ideation Among Adolescent Students of Kodagu District” (ಕೊಡಗು ಜಿಲ್ಲೆಯ ಹದಿಹರೆಯದ ವಿದ್ಯಾರ್ಥಿಗಳಲ್ಲಿ ಆತ್ಮಹತ್ಯೆಯ ಆಲೋಚನೆಗಳ ಕುರಿತು ಅಧ್ಯಯನ) ಎಂಬ ವಿಷಯದ ಕುರಿತು ಸಂಶೋಧನೆ ನಡೆಸಿ ಆಂಗ್ಲ ಭಾಷೆಯಲ್ಲಿ ಮಹಾಪ್ರಬಂಧವನ್ನು ಸಮಾಜ ಕಾರ್ಯ ವಿಷಯದಲ್ಲಿ ಪಿಹೆಚ್.ಡಿ ಪದವಿಗಾಗಿ ಮೈಸೂರು ವಿಶ್ವವಿದ್ಯಾನಿಲಯದ ಪಿಹೆಚ್.ಡಿ ನಿಯಮಾವಳಿಯಡಿಯಲ್ಲಿ ಅಂಗಿಕರಿಸಲಾಗಿದೆ. ಇವರು ಸಂತ ಫಿಲೋಮಿನಾ ಕಾಲೇಜು (ಸ್ವಾಯುತ್ತ), ಮೈಸೂರು ಇಲ್ಲಿ ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದಲ್ಲಿ, ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ದಿವಂಗತ. ಕೆ. ಎಂ. ಜೇಮ್ಸ್ (ನಿವೃತ್ತ ಬಿ.ಎಸ್.ಎನ್.ಎಲ್ ಉದ್ಯೋಗಿ) ಮತ್ತು ದಿವಂಗತ ಫಿಲೋಮಿನಾ ಜೇಮ್ಸ್ ಅವರ ಪುತ್ರ. ಇವರ ಅಣ್ಣ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಪತ್ನಿ…
ಬೆಂಗಳೂರು NEWS DESK ಆ.18 : ಪರಿವರ್ತನೆಯ ಹರಿಕಾರ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ್ ಅರಸ್ ಪ್ರಶಸ್ತಿಗೆ ಪಾತ್ರರಾದ ಹಿರಿಯ ಪತ್ರಕರ್ತರು ಮತ್ತು ಪ್ರಗತಿಪರ ಚಿಂತಕರಾದ ಕಲ್ಲೆ ಶಿವೋತ್ತಮ ರಾವ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಮುಖ್ಯಮಂತ್ರಿಗಳಾಗಿದ್ದ ದೇವರಾಜ್ ಅರಸ್ ಅವರ ಚಿಂತಕರ ಚಾವಡಿಯಲ್ಲಿದ್ದ ಕಲ್ಲೆ ಅವರು ಅರಸು ಅವರ ಅನೇಕ ಕ್ರಾಂತಿಕಾರಿ ಕಾರ್ಯಕ್ರಮಗಳ ಹಿಂದಿನ ಪ್ರೇರಕಶಕ್ತಿಯಾಗಿದ್ದರು. ಕಲ್ಲೆ ಅವರು ಸಂಪಾದಕರಾಗಿದ್ದ ಆಗಿನ ಜನಪ್ರಿಯ ವಾರಪತ್ರಿಕೆ ‘ಜನಪ್ರಗತಿ’ ನಾಡಿನ ರಾಜಕೀಯ, ಸಾಹಿತ್ಯ ಮತ್ತು ಸಾಂಸ್ಕೃತಿಕ ವಿದ್ಯಮಾನಗಳ ಮುಖವಾಣಿಯಾಗಿತ್ತು. ನಾಡಿನ ಅನೇಕ ಪ್ರಮುಖ ಸಾಹಿತಿಗಳ ಪ್ರಾರಂಭದ ದಿನಗಳ ಕತೆ-ಕವನ-ಲೇಖನಗಳು ಈ ಪತ್ರಿಕೆಯಲ್ಲಿಯೇ ಪ್ರಕಟವಾಗಿತ್ತಿತ್ತು. ಪ್ರಜಾವಾಣಿ ಪತ್ರಿಕೆಯಲ್ಲಿಯೂ ಕಲ್ಲೆ ಅವರು ಸ್ವಲ್ಪಕಾಲ ಕೆಲಸ ಮಾಡಿದ್ದರು. ಹಿಂದುಳಿದ ಸಮುದಾಯಕ್ಕೆ ಸೇರಿರುವ ಕಲ್ಲೆ ಶಿವೋತ್ತಮ್ ರಾವ್ ಅವರು ನನ್ನ ರಾಜಕೀಯ ಜೀವನದ ಪ್ರಾರಂಭದ ದಿನಗಳಲ್ಲಿ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸಿದ್ದರು. ಪ್ರಶಸ್ತಿ ಪುರಸ್ಕೃತರಾದ ಕಲ್ಲೆ ಅವರಿಗೆ ಆರೋಗ್ಯ ಮತ್ತು ಆಯುಷ್ಯ ಸದಾ ಒದಗಿ ಬರಲಿ ಎಂದು ಹಾರೈಸುತ್ತೇನೆ. (ಮುಖ್ಯಮಂತ್ರಿ ಸಿದ್ದರಾಮಯ್ಯ)
ಬೆಂಗಳೂರು NEWS DESK ಆ.18 : ಇಡೀ ನಾಡು ಹೆಮ್ಮೆ ಪಡುವ ಕ್ಷಣವಿದು. ನಮ್ಮ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಯು ಪ್ರತಿಷ್ಠಿತ “Golden Book of World Records” ನಲ್ಲಿ ದಾಖಲಾಗಿ ಇತಿಹಾಸ ನಿರ್ಮಿಸಿದೆ. ಮಹಿಳಾ ಸಬಲೀಕರಣದೆಡೆಗಿನ ದಿಟ್ಟ ಹೆಜ್ಜೆಯಾದ ಶಕ್ತಿ ಯೋಜನೆಯು ಚಾಲನೆಗೊಂಡ ದಿನದಿಂದ ಅಂದರೆ ಜೂನ್ 11, 2023 ರಿಂದ ಜುಲೈ 25, 2025 ರ ಅವಧಿಯಲ್ಲಿ 504 ಕೋಟಿ 90 ಲಕ್ಷಕ್ಕೂ ಹೆಚ್ಚು ಬಾರಿ ಮಹಿಳಾ ಪ್ರಯಾಣಿಕರು ಉಚಿತವಾಗಿ ಸ್ವಾವಲಂಬಿ ಬದುಕಿನೆಡೆಗೆ ಪ್ರಯಾಣಿಸುವ ಮೂಲಕ ಈ ಇತಿಹಾಸ ಸೃಷ್ಟಿಸಿದ್ದಾರೆ. ಈ ಸಾಧನೆಯ ಶ್ರೇಯ ಉದ್ಯೋಗ, ಶಿಕ್ಷಣ, ವೈದ್ಯಕೀಯ ಚಿಕಿತ್ಸೆ ಮುಂತಾದ ಉದ್ದೇಶಗಳಿಗಾಗಿ ನಿತ್ಯ ಸಂಚರಿಸುವ ನಾಡಿನ ನನ್ನ ತಾಯಂದಿರಿಗೆ, ಅಕ್ಕ – ತಂಗಿಯರಿಗೆ ಸಲ್ಲಬೇಕು. ಔದ್ಯೋಗಿಕ ವಲಯದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ, ಜೊತೆಗೆ ರಾಜ್ಯದ ತಲಾದಾಯವು ದೇಶದಲ್ಲೇ ನಂಬರ್ 1 ಸ್ಥಾನಕ್ಕೆ ತಲುಪಿದೆ. ಶಕ್ತಿ ಯೋಜನೆಯು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ಔದ್ಯೋಗಿಕವಾಗಿ ಮಹಿಳೆಯರನ್ನು ಸಬಲರನ್ನಾಗಿಸುತ್ತದೆ ಎಂಬ…
ಮೈಸೂರು ಆ.18 NEWS DESK : ಜಾಗತಿಕ ಮಟ್ಟದಲ್ಲಿ ಭಾರತ ವೈದ್ಯಕೀಯ ಸೇವೆ ನೀಡುವುದರಲ್ಲಿ ಮುಂಚೂಣಿಯಲ್ಲಿದೆ. “ಹೀಲ್ ಇನ್ ಇಂಡಿಯಾ” ಎಂಬ ಯೋಜನೆಯಡಿ ಇದುವರೆಗೆ ಭಾರತಕ್ಕೆ ಬಂದಿರುವ ವಿದೇಶಿ ಪ್ರವಾಸಿಗರ ಸಂಖ್ಯೆ ಕುರಿತು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದು, ಅದಕ್ಕೆ ಕೇಂದ್ರ ಸಚಿವರು ವಿವರ ನೀಡಿದ್ದಾರೆ. ಸಂಸತ್ತಿನ ಅಧಿವೇಶನದ ಲೋಕಸಭಾ ಕಲಾಪದಲ್ಲಿ ಸಂಸದ ಯದುವೀರ್ ಅವರ ಚುಕ್ಕಿ ರಹಿತ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ಶೇಖಾವತ್, ಜಾಗತಿಕ ಸ್ವಾಸ್ಥ್ಯ ಪ್ರವಾಸೋದ್ಯಮಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದು ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಯದುವೀರ್, ಕಳೆದ ಐದು ವರ್ಷದಲ್ಲಿ ಭಾರತಕ್ಕೆ ಹಲವಾರು ದೇಶಗಳ ಪ್ರವಾಸಿಗರು ಬಂದು ಚಿಕಿತ್ಸೆ ಪಡೆದು ಕೊಂಡಿದ್ದಾರೆ. ವೈದ್ಯಕೀಯ ಪ್ರವಾಸೋದ್ಯಮಕ್ಕೆ ಹೆಚ್ಚು ಸ್ಪಂದನೆ ದೊರಕಿದೆ ಎಂದಿದ್ದಾರೆ. ನಮ್ಮ ಕೇಂದ್ರ ಸರ್ಕಾರ ಆರಂಭಿಸಿರುವ “ಹೀಲ್‍ಇನ್‍ಇಂಡಿಯಾ”ಯೋಜನೆಯಡಿ ಚಿಕಿತ್ಸೆಗೆ ಬರುವ ವಿದೇಶಿಗರು ಹಾಗೂ ಅವರ ಜೊತೆಗಿರುವ ವೀಸಾ ಸೌಲಭ್ಯವನ್ನು ಸರಳೀಕರಣಗೊಳಿಸಿ…
ಮಡಿಕೇರಿ ಆ.18 NEWS DESK : 220/66/11 ಕೆ.ವಿ ಕುಶಾಲನಗರ, 66/11 ಕೆ.ವಿ ಸುಂಟಿಕೊಪ್ಪ, 33/11 ಕೆವಿ ಸೋಮವಾರಪೇಟೆ ಹಾಗೂ 66/11 ಕೆವಿ ಮಾದಾಪುರ ವಿದ್ಯುತ್ ವಿತರಣಾ ಉಪ ಕೇಂದ್ರದಲ್ಲಿ ಎರಡನೇ ತ್ರೈಮಾಸಿಕ ನಿರ್ವಹಣೆ ಕೈಗೆತ್ತಿಕೊಳ್ಳಲಾಗಿದೆ. ಈ ವಿದ್ಯುತ್ ವಿತರಣಾ ಉಪ ಕೇಂದ್ರದಿಂದ ಹೊರಹೊಮ್ಮುವ ಎಲ್ಲಾ 11 ಕೆವಿ ಮಾರ್ಗಗಳಲ್ಲಿ ಆಗಸ್ಟ್, 20 ರಂದು ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಈ ಮಾರ್ಗದಿಂದ ಸರಬರಾಜಾಗುವ ಕುಶಾಲನಗರ ಟೌನ್, ನಂಜರಾಯಪಟ್ಟಣ, ಗುಡ್ಡೆಹೊಸೂರು, ಹೆಬ್ಬಾಲೆ, ಭುವನಗಿರಿ, ಇಂಡಸ್ಟ್ರಿಯಲ್ ಏರಿಯಾ, ಕೂಡಿಗೆ, ಕಾನ್‍ಬೈಲು, ಅಂದಗೋವೆ, ನಾಕೂರು, ಹಾದ್ರೆ ಹೊರೂರು, ಹಟ್ಟಿಹೊಳೆ, ಗರ್ವಾಲೆ, ಗರಗಂದೂರು, ಕಾಂಡನಕೊಲ್ಲಿ, ಕುಂಬೂರು, ಸುಂಟಿಕೊಪ್ಪ, ಮಾದಾಪುರ, ಚೆಟ್ಟಳ್ಳಿ, ಅಭ್ಯತ್‍ಮಂಗಲ, ನಾಕೂರು ಶಿರಂಗಾಲ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಹಾಗೆಯೇ 66/11 ಕೆ.ವಿ ಆಲೂರು ಸಿದ್ದಾಪುರ ವಿದ್ಯುತ್ ವಿತರಣಾ ಉಪ ಕೇಂದ್ರ ಹಾಗೂ 66/33/11 ಕೆವಿ ಸೋಮವಾರಪೇಟೆ ವಿದ್ಯುತ್ ವಿತರಣಾ ಉಪ ಕೇಂದ್ರದಿಂದ ಹೊರಹೊಮ್ಮುವ ಮಾರ್ಗದಿಂದ ವಿದ್ಯುತ್…
ಮಡಿಕೇರಿ ಆ.18 NEWS DESK : ಕೊಡಗು ಜಿಲ್ಲಾ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಬೆರಳಚ್ಚುಗಾರರು(ಕಂಪ್ಯೂಟರ್ ಆಪರೇಟರ್), ವಾಹನ ಚಾಲಕರು ಮತ್ತು ಡಿ ಗ್ರೂಪ್ ಹುದ್ದೆಗೆ ಸೇವೆಯನ್ನು ಬಾಹ್ಯ ಮೂಲಕ ಪಡೆಯಲು ಇ-ಪ್ರೊಕ್ಯೂರ್ ಮೆಂಟ್ ಮುಖಾಂತರ ಟೆಂಡರ್ ಆಹ್ವಾನಿಸಲಾಗಿದೆ. ಸಾರ್ವಜನಿಕ ಹಾಗೂ ಆಡಳಿತ ಹಿತದೃಷ್ಟಿಯಿಂದ ಕೊಡಗು ಜಿಲ್ಲಾ ಕಂದಾಯ ಘಟಕದಲ್ಲಿ ಖಾಲಿ ಇರುವ ಬೆರಳಚ್ಚುಗಾರರು, ವಾಹನ ಚಾಲಕರು, ಗ್ರೂಪ್ ‘ಡಿ’ ಮತ್ತು ಸ್ವೀಪರ್ ಹುದ್ದೆಗಳ ಪೈಕಿ ಕೆಲವು ಹುದ್ದೆಗಳಿಗೆ ನೌಕರರನ್ನು ಹೊರಗುತ್ತಿಗೆ ಆಧಾರದಲ್ಲಿ ಒಂದು ವರ್ಷದ ವರೆಗೆ ಅಥವಾ ಸರ್ಕಾರದಿಂದ ಹುದ್ದೆಗಳು ನೇರ ನೇಮಕಾತಿ ಮುಖಾಂತರ ಭರ್ತಿ ಮಾಡುವ ತನಕ ಮಾತ್ರ ಸೇವೆಯನ್ನು ಮಾನವ ಸಂಪನ್ಮೂಲ ಗುತ್ತಿಗೆದಾರರಿಂದ ಪಡೆಯಲು ಇ-ಪ್ರೊಕ್ಯೂರ್‍ಮೆಂಟ್ ಮುಖಾಂತರ ಅಲ್ಪಾವಧಿ ಟೆಂಡರ್ ಆಹ್ವಾನಿಸಲಾಗಿದೆ. ಆಸಕ್ತ ಟೆಂಡರ್‍ದಾರರು ಟೆಂಡರ್‍ನ ಪೂರ್ಣ ವಿವರಗಳನ್ನು ಕರ್ನಾಟಕ ಸರ್ಕಾರದ ಇ-ಪ್ರೊಕ್ಯೂರ್‍ಮೆಂಟ್ ಪೋರ್ಟಲ್ ವೆಬ್‍ಸೈಟ್‍ನಲ್ಲಿ (http://www.eproc.karnataka.gov.in) ಮಾತ್ರ ಪಡೆಯಬಹುದು. ಹೆಚ್ಚಿನ ವಿವರಗಳಿಗೆ ಈ ಕಚೇರಿಯ ದೂ.ಸಂ.08272-225811 ನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ವೆಂಕಟ್…
ಮಡಿಕೇರಿ ಆ.18 NEWS DESK : ಮಡಿಕೇರಿಯ ಕೊಡಗು ವಿದ್ಯಾಲಯದಲ್ಲಿ ವಿಶಿಷ್ಟ ರೀತಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು. ಶ್ರೀ ಕೃಷ್ಣನ ಬಾಲ ಲೀಲೆಗಳು, ರಾಧಾ ಮೋಹನ ಪಾತ್ರಗಳು, ಗೋಪ ಗೋಪಿಯರೊಂದಿಗಿನ ನೃತ್ಯಗಳು, ಕೋಲಾಟ, ಬೆಣ್ಣೆ ಮೊಸರು ಸವಿಯುವ ಪ್ರಹಸನಗಳು, ಮೊಸರು ಕುಡಿಕೆ ಒಡೆಯುವಿಕೆ ಇತ್ಯಾದಿ ಪ್ರದರ್ಶನಗಳು ಶ್ರೀ ಬಿ.ಕೆ. ಸುಬ್ಬಯ್ಯ ಸಭಾಂಗಣ ದಲ್ಲಿ ಆಕರ್ಷಕವಾಗಿ ಮೂಡಿಬಂದವು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ “ಶಕ್ತಿ” ಪತ್ರಿಕೆಯ ಪ್ರಧಾನ ಸಂಪಾದಕ ಜಿ.ರಾಜೇಂದ್ರ , ಶ್ರೀ ಕೃಷ್ಣನ ಅವತಾರವು ಒಂದು ಅಮೋಘ ಚೈತನ್ಯ ಮತ್ತು ಶಕ್ತಿಯ ಪ್ರತೀಕವಾಗಿದೆ ಎಂದು ಬಣ್ಣಿಸಿದರು. ಶ್ರೀ ಕೃಷ್ಣನ ಬಾಹ್ಯ ರೂಪ ಈಗ ಇರದಿದ್ದರೂ ಆತನ ಆದರ್ಶ, ಅನುಕರಣೆ 5 ಸಾವಿರ ವರ್ಷಗಳ ಬಳಿಕವೂ ಜೀವಂತವಾಗಿದ್ದು ಸರ್ವಕಾಲಿಕ ಶಾಶ್ವತ ಪ್ರಜ್ಞೆಯಾಗಿ ಉಳಿದಿದೆ. ಇಂದಿನ ಆಧುನಿಕ ಯುಗದಲ್ಲಿ ಕೃಷ್ಣನ ಗೀತಾ ಬೋಧನೆ, ಆ ಮಾರ್ಗದ ಪಾಲನೆ ಮಕ್ಕಳ ಜೀವನವನ್ನು ಉತ್ತಮಗೊಳಿಸಲು ಸಹಕಾರಿ ಎಂದು ರಾಜೇಂದ್ರ ಅಭಿಪ್ರಾಯಪಟ್ಟರು. ಶಿಕ್ಷಕ ವೃಂದ ತರಬೇತಿ ನೀಡಿ ಬಾಲಕ-ಬಾಲಕಿಯರಿಂದಲೇ…
ಮಡಿಕೇರಿ ಆ.18 NEWS DESK : ಕೊಡವಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ ಮತ್ತು ಎಸ್‍ಟಿ ವರ್ಗೀಕರಣವು ಸೇರಿದಂತೆ 2026ರ ರಾಷ್ಟ್ರೀಯ ಜನಗಣತಿಯೊಂದಿಗೆ ಜನಾಂಗವಾರು ಮಾಹಿತಿ ಕಲೆಹಾಕುವ ಸಂದರ್ಭ ಆದಿಮ ಸಂಜಾತ ಏಕ-ಜನಾಂಗೀಯ (ಆ್ಯನಿಮಿಸ್ಟಿಕ್) ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಮ್ ನ್ನು ಸೇರಿಸಬೇಕು, ಸಂಸತ್ ಹಾಗೂ ವಿಧಾನಸಭೆಯಲ್ಲಿ ಕೊಡವರಿಗೆ ವಿಶೇಷ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಆ.21 ರಂದು ಸಿದ್ದಾಪುರದಲ್ಲಿ 10ನೇ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮ ನಡೆಯಲಿದೆ ಎಂದು ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಭಾನುವಾರ ಬೆಳಿಗ್ಗೆ 10.30 ಗಂಟೆಗೆ ಸಿದ್ದಾಪುರದಲ್ಲಿ ಮಾನವ ಸರಪಳಿ ನಿರ್ಮಿಸಿ ವಿವಿಧ ಸಂವಿಧಾನಿಕ ಹಕ್ಕೊತ್ತಾಯಗಳ ಕುರಿತು ಹಕ್ಕೊತ್ತಾಯ ಮಂಡಿಸಲಾಗುವುದು. ಜನಗಣತಿಯ ಸಂದರ್ಭ ಪ್ರತ್ಯೇಕ ಕಾಲಮ್ ಮತ್ತು ಕೋಡ್ ಸೇರಿಸುವುದರಿಂದ ಕೊಡವ ಸಮುದಾಯಕ್ಕೆ ಆಗಬಹುದಾದ ಲಾಭಗಳನ್ನು ವಿವರಿಸಲಾಗುವುದು ಎಂದು ಹೇಳಿದ್ದಾರೆ. 2025-26ರ ರಾಷ್ಟ್ರೀಯ ಜನಗಣತಿ ಮತ್ತು ಜಾತಿ ಗಣತಿಯಲ್ಲಿ ಕೊಡವರಿಗೆ ಪ್ರತ್ಯೇಕ…
ಮಡಿಕೇರಿ ಆ.18 NEWS DESK : ವಿಶ್ವ ಹಿಂದೂ ಪರಿಷತ್, ಭಜರಂಗದಳ, ಮಾತೃಶಕ್ತಿ ಮತ್ತು ದುರ್ಗಾವಾಹಿನಿ ವತಿಯಿಂದ ಮೂರ್ನಾಡಿನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಮೈಕೊರೆಯುವ ಚಳಿ, ಮಳೆಯ ನಡುವೆ ನೂರಾರು ಪುಟಾಣಿಗಳು ಬಾಲಕೃಷ್ಣರಾಗಿ ಮಿಂಚಿದರು. ಮೂರ್ನಾಡಿನ ಪ್ರಕೃತಿ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ನಡೆದ ಶ್ರೀಕೃಷ್ಣ ಛದ್ಮವೇಷ ಸ್ಪರ್ಧೆಯಲ್ಲಿ 3 ತಿಂಗಳಿನಿಂದ 6 ವರ್ಷದವರೆಗಿನ 93 ಮಕ್ಕಳು ಶ್ರೀಕೃಷ್ಣ ವೇಷಧಾರಿಗಳಾಗಿ ಗಮನ ಸೆಳೆದರು. ಕುಶಾಲನಗರ, ಪೊನ್ನಂಪೇಟೆ, ನಾಪೋಕ್ಲು ಮತ್ತಿತರ ಭಾಗಗಳಿಂದ ಹೆಚ್ಚಿನ ಸಂಖ್ಯೆಯ ಪುಟಾಣಿ ಸ್ಪರ್ಧಿಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸಿದರು. ವಿಶ್ವ ಹಿಂದೂ ಪರಿಷತ್ ನ ಮೂರ್ನಾಡು ಘಟಕದ ಅಧ್ಯಕ್ಷ ಚಾರಿಮಂಡ ಚಂಗಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಲವಾಗ್ಮಿ ಸುಂಟಿಕೊಪ್ಪದ ಶ್ರೀಷ ದಿಕ್ಸೂಚಿ ಭಾಷಣ ಮಾಡಿದರು. ಮಡಿಕೇರಿ ಸಂತ ಜೋಸೆಫರ ಶಾಲೆಯ ಉಪನ್ಯಾಸಕರಾದ ಜಯಲಕ್ಷ್ಮಿ ಕೆ. ಮುಖ್ಯ ಭಾಷಣ ಮಾಡಿದರು. ಮೂರ್ನಾಡು ಪದವಿ ಕಾಲೇಜ್ ನ ಕಲ್ಪನಾ ಸಾಮ್ರಾಟ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ನ ಜಿಲ್ಲಾ ಕಾರ್ಯಾಧ್ಯಕ್ಷ…






