ಮಡಿಕೇರಿ NEWS DESK ಮೇ 15 : ಕೊಡಗಿನ ಖ್ಯಾತ ಸಂಗೀತ ಕಲಾವಿದ ಹಾಗೂ ಸಾಹಿತಿ ಚೆಕ್ಕೆರ ತ್ಯಾಗರಾಜ ಅಪ್ಪಯ್ಯ ಅವರನ್ನು ಕೊಡಗು ಕಲಾವಿದರ ಸಂಘದ ವತಿಯಿಂದ ಮೇ 20 ರಂದು ಸನ್ಮಾನಿಸಿ ಗೌರವಿಸಲಾಗುವುದು ಎಂದು ಸಂಘದ ಅಧ್ಯಕ್ಷ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೊಡಗು ಕಲಾವಿದರ ಸಂಘ ಹಿರಿಯ ಕಲಾವಿದರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ಕೆ ಮುಂದಾಗಿದೆ. ಜಿಲ್ಲೆಯಲ್ಲಿ 200ಕ್ಕೂ ಅಧಿಕ ಕಲಾವಿದರಿದ್ದು, ಪ್ರಸ್ತುತ ಚೆಕ್ಕೆರ ತ್ಯಾಗರಾಜ ಅವರನ್ನು ಸನ್ಮಾನಕ್ಕಾಗಿ ಆಯ್ಕೆ ಮಾಡಲಾಗಿದೆ. ಮೇ 20 ರಂದು ಮಧ್ಯಾಹ್ನ 12 ಗಂಟೆಗೆ ಮೈಸೂರು ಕೊಡವ ಸಮಾಜದಲ್ಲಿ ಸನ್ಮಾನ ಸಮಾರಂಭ ನಡೆಯಲಿದೆ ಎಂದರು. ಚೆಕ್ಕೆರ ತ್ಯಾಗರಾಜ ಅವರು ಖ್ಯಾತ ಸಂಗೀತ ಕಲಾವಿದರಾಗಿದ್ದಾರೆ, ಹಾರ್ಮೋನಿಯಂ ವಾದಕರಾಗಿದ್ದಾರೆ. ನಾಟಕಗಳಿಗೆ ಹಿನ್ನೆಲೆ ಸಂಗೀತ ನೀಡಿದ್ದಾರೆ, ವಿದ್ಯಾರ್ಥಿಗಳಿಗೆ ಸಂಗೀತ ಹೇಳಿಕೊಟ್ಟಿದ್ದಾರೆ. ಮಾತ್ರವಲ್ಲದೆ ಸಾಹಿತಿಯೂ ಆಗಿದ್ದು, 22 ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಇವರ ಕಲಾಸೇವೆಯನ್ನು ಗುರುತಿಸಿ ಕಲಾವಿದರ ಸಂಘ ಸನ್ಮಾನಿಸುತ್ತಿದೆ ಎಂದು ತಿಳಿಸಿದರು.…
ಲೇಖಕ: admin
ಮಡಿಕೇರಿ NEWS DESK ಮೇ 15 : ಕಾರ್ಪೋರೇಟ್ ಸಂಸ್ಥೆಗಳ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ರೂಪಿಸಿರುವ ಕಾರ್ಮಿಕ ವಿರೋಧಿ 4 ಸಂಹಿತೆಗಳನ್ನು ರದ್ದು ಪಡಿಸಬೇಕೆಂದು ಒತ್ತಾಯಿಸಿ ಮತ್ತು ಕೆಲಸದ ಅವಧಿಯನ್ನು 12 ಗಂಟೆಗೆೆ ವಿಸ್ತರಣೆ ಮಾಡಿರುವ ಕ್ರಮವನ್ನು ವಿರೋಧಿಸಿ ಮೇ 20 ರಂದು ನಡೆಯುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಬೆಂಬಲವಾಗಿ ಕೊಡಗು ಜಿಲ್ಲೆಯಲ್ಲೂ ಪ್ರತಿಭಟನೆ ನಡೆಯಲಿದೆ ಎಂದು ಸಿಐಟಿಯು ಸಂಘಟನೆಯ ಜಿಲ್ಲಾಧ್ಯಕ್ಷ ಪಿ.ಆರ್.ಭರತ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯ ಕುಶಾಲನಗರ ಮತ್ತು ವಿರಾಜಪೇಟೆಯಲ್ಲಿ ಪ್ರತಿಭಟನೆ ನಡೆಯಲಿದ್ದು, ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಕಾರ್ಮಿಕ ಸಂಘಟನೆಯಲ್ಲಿ ಸಂಯೋಜನೆಗೊAಡಿರುವ ಎಲ್ಲಾ ಸಂಘಟನೆಗಳು ಪಾಲ್ಲೊಳ್ಳಲಿವೆ ಎಂದರು. ಬ್ಯಾAಕ್, ಜೀವವಿಮಾ ನಿಗಮ, ಗ್ರಾ.ಪಂ, ಅಂಗನವಾಡಿ ನೌಕರರು, ಆಸ್ಪತ್ರೆಯ ಶುಚಿತ್ವ ವಿಭಾಗದ ಸಿಬ್ಬಂದಿಗಳು ಸೇರಿದಂತೆ ಕೇಂದ್ರದ ನೂತನ ಕಾರ್ಮಿಕ ನೀತಿಯಿಂದ ಅನ್ಯಾಯಕ್ಕೊಳಗಾದ ವಿವಿಧ ಕ್ಷೇತ್ರಗಳ ಎಲ್ಲಾ ಕಾರ್ಮಿಕ ವರ್ಗ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ತಿಳಿಸಿದರು. ದೇಶದಲ್ಲಿ ಸುಮಾರು 50 ಕೋಟಿಯಷ್ಟು…
ಮಡಿಕೇರಿ NEWS DESK ಮೇ 15 : ಯಾವುದೇ ರೀತಿಯ ವಿಕೋಪಗಳು ಸಂಭವಿಸಿದ್ದಲ್ಲಿ, ಜನ, ಜಾನುವಾರು, ಹಾಗೂ ಆಸ್ತಿ-ಪಾಸ್ತಿ ರಕ್ಷಣೆ ಸಂಬಂಧ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳುವ ಬಗ್ಗೆ ಹಾರಂಗಿ ಜಲಾಶಯದಲ್ಲಿ ಗುರುವಾರ ಅಣಕು ಪ್ರದರ್ಶನ ನಡೆಯಿತು. ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿರ್ದೇಶನದಂತೆ ನಡೆದ ಅಣಕು ಕಾರ್ಯಾಚರಣೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಕಾರದಲ್ಲಿ ನಡೆದ ಅಣಕು ಪ್ರದರ್ಶನ ಸಂದರ್ಭದಲ್ಲಿ ಕಂದಾಯ, ಪೊಲೀಸ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಅಗ್ನಿ ಶಾಮಕ, ಗೃಹರಕ್ಷಕ ದಳ, ಬೃಹತ್ ನೀರಾವರಿ ಹೀಗೆ ವಿವಿಧ ಇಲಾಖೆಗಳ 200 ಕ್ಕೂ ಹೆಚ್ಚು ಸಿಬ್ಬಂದಿಗಳು ಅಣಕು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು. ವಿಕೋಪ ಸಂದರ್ಭದಲ್ಲಿ ರಕ್ಷಿಸುವುದು, ರಕ್ಷಿಸಿ ಪ್ರಥಮ ಚಿಕಿತ್ಸೆ ನೀಡುವುದು, ಕಾರ್ಯಾಚರಣೆ ಸಂದರ್ಭದಲ್ಲಿ ತಮ್ಮ ರಕ್ಷಣೆ ಜೊತೆಗೆ ವಿಕೋಪಕ್ಕೆ ತುತ್ತಾದವರನ್ನು ರಕ್ಚಿಸುವುದು ಅಣಕು ಪ್ರದರ್ಶನದಲ್ಲಿ ಗಮನ ಸೆಳೆಯಿತು. ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಮಾತನಾಡಿ ವಿಕೋಪ ಸಂಭವಿಸಿದ ಸಂದರ್ಭದಲ್ಲಿ…
ಮಡಿಕೇರಿ NEWS DESK ಮೇ 15 : ಮಾದಕ ವಸ್ತು ಎಂಡಿಎಂಎಯನ್ನು ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಮಡಿಕೇರಿ ನಗರ ಪೊಲೀಸರು ಬಂಧಿಸಿದ್ದಾರೆ. ಮಡಿಕೇರಿ ನಗರದ ಅಬ್ದುಲ್ ಕಲಾಂ ಬಡಾವಣೆಯ ನಿವಾಸಿ ಮೊಹಮ್ಮದ್ ಶರ್ಜಿಲ್ (41) ಬಂಧಿತ ಆರೋಪಿಯಾಗಿದ್ದು, ಈತನ ಬಳಿಯಿಂದ 3.66 ಗ್ರಾಂ ಎಂಡಿಎಂಎಯನ್ನು ವಶಪಡಿಸಿಕೊಳ್ಳಲಾಗಿದೆ. ನಗರದ ಮಹದೇವಪೇಟೆಯಲ್ಲಿರುವ ಎ.ವಿ ಶಾಲೆ ಕಡೆಯಿಂದ ಅಬ್ಬಿಫಾಲ್ಸ್ ಕಡೆಗೆ ಹೋಗುವ ಜಂಕ್ಷನ್ ನಲ್ಲಿ ಪೊಲೀಸರು ದಾಳಿ ಮಾಡಿ ಆರೋಪಿಯನ್ನು ಬಂಧಿಸಿದರು. ಮಡಿಕೇರಿ ಉಪವಿಭಾಗದ ಡಿವೈಎಸ್‌ಪಿ ಸೂರಜ್ ಪಿ.ಎ, ನಗರ ಸಿಪಿಐ ರಾಜು.ಪಿ.ಕೆ, ಪಿಎಸ್‌ಐ ಅನ್ನಪೂರ್ಣ ಎಸ್.ಶಂಕರಗುಳ್ಳಿ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು.
ಸೋಮವಾರಪೇಟೆ NEWS DESK ಮೇ 14 : ಸುಮಾರು 5 ದಿನಗಳ ಹಿಂದೆ ನಾಪತ್ತೆಯಾಗಿದ್ದ ಸೋಮವಾರಪೇಟೆ ಕಕ್ಕೆಹೊಳೆ ಜಂಕ್ಷನ್ ನಿವಾಸಿ ಸಂಪತ್ ಶವ ಕೊಡಗು- ಹಾಸನ ಗಡಿಭಾಗದ ಸಕಲೇಶಪುರ ತಾಲ್ಲೂಕಿನ ಹೊಸಳ್ಳಿ ನಿರ್ಜನ ಪ್ರದೇಶದಲ್ಲಿ ಬುಧವಾರ ಬೆಳಿಗ್ಗೆ ಪತ್ತೆಯಾಗಿದೆ. ಸೋಮವಾರಪೇಟೆ ಕಕ್ಕೆಹೊಳೆ ಜಂಕ್ಷನ್ ನಿವಾಸಿ ದಾಮೋಧರ್ ನಾಯರ್ ಅವರ ಪುತ್ರ ಸಂಪತ್ ಅಲಿಯಾಸ್ ಶಂಭು (45) ಮೃತರಾದವರು. ಬುಧವಾರ ಬೆಳಿಗ್ಗೆ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಸ್ಥಳಕ್ಕೆ ಕೊಡಗು ಎಸ್ಪಿ ರಾಮರಾಜನ್ ಹಾಗೂ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಮಹಜರು ನಡೆಸಿದರು. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ದಾಖಲೆಯನ್ನು ಸಂಗ್ರಹಿಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತ ದೇಹವನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಸಾವಿನ ಬಗ್ಗೆ ಸಂಶಯ ವ್ಯಕ್ತವಾಗಿದ್ದು, ಆರೋಪಿಗಳನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ.
ಮಡಿಕೇರಿ NEWS DESK ಮೇ 14 : ಕೊಡಗು ಜಿಲ್ಲಾ ವಿಶೇಷ ಚೇತನರ ಸಂಘದ ಮಹಾಸಭೆ ಸಂಘದ ಅಧ್ಯಕ್ಷ ಮಹೇಶ್ವರ ಜೆ.ಎ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮಡಿಕೇರಿ ನಗರಸಭೆಯ ಆವರಣದಲ್ಲಿರುವ ವಿಶೇಷ ಚೇತನರ ಸಂಘದ ಕಚೇರಿಯಲ್ಲಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ನಗರಸಭಾ ಅಧ್ಯಕ್ಷರಾದ ಕಲಾವತಿ ಅವರು ವಿಕಲಚೇತನರಿಗೆ ನಗರಸಭೆಯಿಂದ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಉಪಾಧ್ಯಕ್ಷ ಮಹೇಶ್ ಜೈನಿ ಅವರು ಮಾತನಾಡಿ ವಿಶೇಷ ಚೇತನರ ಸಂಘಕ್ಕೆ ಕಟ್ಟಡ ಮತ್ತು ಕಚೇರಿಯ ಅಗತ್ಯವಿದ್ದು, ನಗರಸಭೆ ಮೂಲಕ ಸಹಾಯ ಮಾಡುವುದಾಗಿ ತಿಳಿಸಿದರು. ವಿಕಲಚೇತನರ ಸಬಲೀಕರಣ ಇಲಾಖೆಯ ಅಧಿಕಾರಿ ವಿಮಲಾ ದಿನೇಶ್ ಮಾತನಾಡಿ ಸಂಘವು ಅತ್ಯುತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪದಾಧಿಕಾರಿಗಳ ಕಾರ್ಯವೈಖರಿ ಶ್ಲಾಘನೀಯವೆಂದರು. ವಿಕಲಚೇತನರ ಸಂಘದ ಕಾರ್ಯದರ್ಶಿ ಬಿ.ಎಂ.ತಿರುಮಲೇಶ್ವರ ಸ್ವಾಗತಿಸಿ, ಉಪಾಧ್ಯಕ್ಷ ರೇವಣ್ಣ ಕೆ.ಪಿ ವಂದಿಸಿದರು. ನಂತರ ನಡೆದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಮಹೇಶ್ವರ ಜೆ.ಎ ಕಾರ್ಯದರ್ಶಿಯಾಗಿ ಬಿ.ಎಂ.ತಿರುಮಲೇಶ್ವರ, ಉಪಾಧ್ಯಕ್ಷರಾಗಿ ರೇವಣ್ಣ ಕೆ.ಪಿ, ಸಹ ಕಾರ್ಯದರ್ಶಿಯಾಗಿ ಶಿಲ್ಪ, ಖಜಾಂಚಿಯಾಗಿ ಹರೀಶ, ನಿರ್ದೇಶಕರುಗಳಾಗಿ…
ಸೋಮವಾರಪೇಟೆ NEWS DESK ಮೇ 14 : ಗೌಡ ಫುಟ್ಬಾಲ್ ಅಕಾಡೆಮಿ ವತಿಯಿಂದ ಆಯೋಜಿಸಲಾಗಿರುವ ಕೊಡಗು ಗೌಡ ಕುಟುಂಬಗಳ ನಡುವಣ ಫುಟ್ಬಾಲ್ ಪಂದ್ಯಾವಳಿಯ ಆಕರ್ಷಕ ಟ್ರೋಫಿಗಳನ್ನು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ಡಾ. ನಿರ್ಮಲಾನಂದ ಸ್ವಾಮೀಜಿ ಬಿಡುಗಡೆಗೊಳಿಸಿದರು. ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿ ಎರಡು ವರ್ಷಗಳಾದ ಹಿನ್ನೆಲೆಯಲ್ಲಿ ಡಾ. ಮಂಥರ್ ಗೌಡ ಅವರನ್ನು ಸನ್ಮಾನಿಸಲು ಅವರು ಸೋಮವಾರಪೇಟೆಯ ಶಾಸಕರ ನಿವಾಸಕ್ಕೆ ಆಗಮಿಸಿದ್ದರು. ಈ ಸಂದರ್ಭ ಗೌಡ ಪುಟ್ಬಾಲ್ ಅಕಾಡೆಮಿ ಸದಸ್ಯರು ತಂದಿದ್ದ ಟ್ರೋಫಿಗಳನ್ನು ಶ್ರೀಗಳು ಬಿಡುಗಡೆ ಮಾಡಿ ಶುಭ ಹಾರೈಸಿದರು. ಈ ಸಂದರ್ಭ ಶಾಸಕ ಮಂತರ್ ಗೌಡ ಗೌಡ ಪುಟ್ಬಾಲ್ ಅಕಾಡೆಮಿ ಪದಾಧಿಕಾರಿಗಳಾದ ಬೊಳ್ಳೂರು ರೋಷನ್, ದೇವಜನ ಪುನೀತ್, ಅಯ್ಯಂಡ್ರ ರಾಕೇಶ್, ಪಾರೇರ ಚೇತನ್, ಗಗನ್ ಬೊಳ್ಳೂರು, ಪರಿಚನ ವಿಘ್ನೇಶ್, ಕೋಲನ ಸುತನ್ ಹಾಜರಿದ್ದರು.
ಸೋಮವಾರಪೇಟೆ NEWS DESK ಮೇ 14 : ರಂಗಭೂಮಿ ಅತ್ಯಂತ ಪ್ರಭಾವಶಾಲಿ ಕ್ಷೇತ್ರವಾಗಿದೆ, ಆದರೆ ಪ್ರಸ್ತುತ ಸಾಂಪ್ರದಾಯಿಕ ಕಲೆಗಳು ಮರೆಯಾಗುತ್ತಿದೆ ಎಂದು ಹಿರಿಯ ಪತ್ರಕರ್ತ ಎಸ್.ಮಹೇಶ್ ವಿಷಾದಿಸಿದ್ದಾರೆ. ಸೋಮವಾರಪೇಟೆ ನಾರಾಯಣಗುರು ಸೇವಾ ಸಮಿತಿ ವತಿಯಿಂದ ಪಟ್ಟಣದ ಚನ್ನಬಸಪ್ಪ ಸಭಾಂಗಣದಲ್ಲಿ ನಡೆದ ಗೆಜ್ಜೆಗಿರಿ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪ್ರಭಾವಶಾಲಿಯಾಗಿರುವ ರಂಗಭೂಮಿಯಿಂದ ಬಂದಂತಹ ಹಲವು ಹಿರಿಯ ಕಲಾವಿದರು ಚಿತ್ರರಂಗದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಆಧುನಿಕತೆ ಬೆಳೆದಂತೆ ನಾಟಕ, ಯಕ್ಷಗಾನ ಮುಂತಾದ ಸಾಂಪ್ರದಾಯಿಕ ಕಲೆಗಳು ಮರೆಯಾಗುತ್ತಿರುವುದು ವಿಷಾದಕರವೆಂದರು. ಸೋಮವಾರಪೇಟೆಯಲ್ಲಿ ಹಲವು ವರ್ಷಗಳ ನಂತರ ಯಕ್ಷಗಾನ ಪ್ರದರ್ಶನ ಏರ್ಪಡಿಸಿರುವುದು ಕಲಾಪ್ರೇಮಿಗಳಿಗೆ ಸಂತಸ ತಂದಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ದೀಪಕ್ ಮಾತನಾಡಿ ಕಲೆಗಳು ಸಂಸ್ಕೃತಿಯ ಪ್ರತೀಕವಾಗಿದೆ, ನಮ್ಮ ಭಾಷೆಯ ಉಳಿವು ಇಂತಹ ಕಲಾಪ್ರದರ್ಶನದಿಂದ ಸಾಧ್ಯವೆಂದರು. ಕಾರ್ಯಕ್ರಮದಲ್ಲಿ ಯಕ್ಷಗಾನ ಪ್ರಾಯೋಜಕರಾದ ಪದ್ಮನಾಭ ಹಾಗೂ ಅವರ ತಾಯಿಯನ್ನು ಸನ್ಮಾನಿಸಿ, ಗೌರವಿಸಲಾಯಿತು. ನಾರಾಯಣಗುರು ಸೇವಾ ಸಮಿತಿ ಅಧ್ಯಕ್ಷ ಚಂದ್ರಹಾಸ ಅಧ್ಯಕ್ಷತೆ…
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಸಹಾಯಕ ವ್ಯವಸ್ಥಾಪಕ (ಕ್ರೆಡಿಟ್). ಸಹಾಯಕ ವ್ಯವಸ್ಥಾಪಕ (ಐಟಿ) ಹುದ್ದೆಗಳ ಭರ್ತಿಗೆ ಅಧಿಸೂಚನೆ >>> ಭಾರತದಲ್ಲಿ, ಬ್ಯಾಂಕಿಂಗ್ ವೃತ್ತಿಯನ್ನು ಆರಿಸಿಕೊಳ್ಳುವ ಹೊಸಬರಿಗೆ ಮತ್ತು ಅನುಭವಿ ವೃತ್ತಿಪರರಿಗೆ ಅತ್ಯಂತ ಪ್ರತಿಷ್ಠಿತ ಉದ್ಯೋಗಗಳಲ್ಲಿ ಒಂದಾಗಿದೆ. ಬ್ಯಾಂಕ್‌ಗಳು ತನ್ನ ಉದ್ಯೋಗಿಗಳಿಗೆ ಸುಂದರವಾದ ಪ್ಯಾಕೇಜ್‌ಗಳು, ಆಕರ್ಷಕ ಸಂಬಳ, ಉದ್ಯೋಗ ಭದ್ರತೆಯ ಜೊತೆಗೆ ಇತರ ಸವಲತ್ತುಗಳನ್ನು ನೀಡುತ್ತವೆ ಎಂಬುದು ಬಹಿರಂಗ ಸತ್ಯವಾಗಿದೆ. ಪ್ರತಿ ವರ್ಷ ದೇಶದಾದ್ಯಂತ ವಿವಿಧ ಬ್ಯಾಂಕ್‌ಗಳು ಮತ್ತು ಪರೀಕ್ಷಾ ಏಜೆನ್ಸಿಗಳು ನಡೆಸುವ ಬಹು ಬ್ಯಾಂಕ್ ಪರೀಕ್ಷೆಗಳಿವೆ.ಇಂತಹ ಕಾರಣಗಳಿಂದಾಗಿ ಬ್ಯಾಂಕ್ ಉದ್ಯೋಗಗಳನ್ನ ಪಡೆದುಕೊಳ್ಳಲು ಪೈಪೋಟಿ ಅತ್ಯಂತ ವೇಗದಲ್ಲಿ ಹೆಚ್ಚುತ್ತಿದೆ. ಆಕಾಂಕ್ಷಿಗಳು ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ಮತ್ತು ಬ್ಯಾಂಕ್ ಉದ್ಯೋಗಿಯಾಗಿ ಆಯ್ಕೆಯಾಗಲು ಸರಿಯಾದ ತಯಾರಿಯನ್ನು ಹೊಂದಿರಬೇಕು ಎಂಬುದನ್ನು ಸ್ಪರ್ಧೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳ ಸಂಖ್ಯೆ ಸೂಚಿಸುತ್ತದೆ. ಒಂದು ಕಾಲದಲ್ಲಿ ಕಾಮರ್ಸ್ ಪದವಿ ಓದಿದವರಿಗೆ, ಕೃಷಿ ಪದವಿ ಅಧ್ಯಯನ ಮಾಡಿದವರಿಗಷ್ಟೇ ಬ್ಯಾಂಕಗಳಲ್ಲಿ ಉದ್ಯೋಗ ಎನ್ನುವಂತಿತ್ತು.ಆದರೆ ಇಂಸು ಹಾಗಿಲ್ಲ. ಮುಂಬೈನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಾರ್ವಜನಿಕ ವಲಯದ…
ವಿರಾಜಪೇಟೆ ಮೇ 13 NEWS DESK : ಜಿಲ್ಲೆಯಲ್ಲಿ ನೆಲೆಸಿರುವ ವಿವಿಧ ಕುಟುಂಬಗಳು ವಿವಿಧ ಕ್ರೀಡೆಗಳನ್ನು ಅಯೋಜಿಸುವ ಮೂಲಕ ಸಮುದಾಯದ ಸಮಘಟನೆಗೆ ಮುಂದಾಗುತ್ತಿವೆ. ಅದರಂತೆ ಬಲಿಜ ನಾಯ್ಡು ಸಮಾಜವು ಕ್ರಿಕೆಟ್ ಪಂದ್ಯಾಟ ಆಯೋಜಿಸಿದ್ದು, ಕ್ರೀಡಾಕೂಟಗಳು ಸಮುದಾಯದ ಸಮ್ಮಿಲನಕ್ಕೆ ವೇದಿಕೆಯಾಗಿದೆಯೆಂದು ಸಮಾಜದ ಪ್ರಮುಖರಾದ ಟಿ.ಪಿ. ರಮೇಶ್ ಅಭಿಪ್ರಾಯ ವ್ಯಕ್ತಪಡಿಸಿದರು. ಬಲಿಜ ನಾಯ್ಡು ಸಮಾಜದ ಅಂಗ ಸಂಸ್ಥೆಯಾದ ನಾಯ್ಡುಸ್ ಸ್ಪೋರ್ಟ್ಸ್ ಕ್ಲಬ್ ಕೊಡಗು ವತಿಯಿಂದ ಮೂರ್ನಾಡು ಕಾಲೇಜು ಮೈದಾನದಲ್ಲಿ ಆಯೋಜಿತ ದ್ವಿತೀಯ ವರ್ಷದ ಬಲಿಜ ಸಮಾಜದ ಕೌಟುಂಬಿ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಮಡು ಅವರು ಮಾತನಾಡಿದರು. ಸೋಲು ಗೆಲುವು ಎಂದಬುದು ನಾಣ್ಯದ ಎರಡು ಮುಖಗಳಿದ್ದಂತೆ ಮತ್ತು ಜೀವ ಪಾಠವೂ ಹೌದು. ಸೋತವರು ಗೆಲ್ಲಬೇಕು. ಗೆದ್ದವರು ಸೋಲಬೇಕು. ಇನ್ನು ಮಂದೆಯು ಕ್ರಿಡಾಕೂಟಗಳು ನಡೆಯಬೇಕು ಮತ್ತು ಸಮಾಜದ ಎಲ್ಲಾ ಕುಟುಂಭಗಳು ಸಕ್ರಿಯವಾಗಿ ಭಾಗವಹಿಸುವಂತಾಗಬೇಕೆಂದರು. ನಾಯ್ಡುಸ್ ಸ್ಪೋರ್ಟ್ಸ್ ಕ್ಲಬ್ ಕೊಡಗು ಅಧ್ಯಕ್ಷರಾದ ಶ್ರೀನಿವಾಸ್ ಲೋಕನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನಾಂಗ ಬಾಂಧವರ ಮಧ್ಯೆ ಸಾಮರಸ್ಯ ಬೆಳೆಯಬೇಕು ಎನ್ನುವ…






