ಲೇಖಕ: admin

ಮಡಿಕೇರಿ ಮೇ 12 NEWS DESK  : ಪೊನ್ನಂಪೇಟೆ ತಾಲೂಕಿನ ಕೆ.ಬಾಡಗ ಗ್ರಾಮ ಪಂಚಾಯಿತಿ ನಾಗರಹೊಳೆ ಅರಣ್ಯ ಪ್ರದೇಶದಲ್ಲಿರುವ ಅತ್ತೂರು ಕೊಲ್ಲಿ ಹಾಡಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಭೇಟಿ ನೀಡಿ ಧರಣಿ ನಿರತರು-ಅಧಿಕಾರಿಗಳ ಜೊತೆ ಸಮಾಲೋಚನೆ  ನಡೆಸಿದರು. ಅರಣ್ಯ ವ್ಯಾಪ್ತಿ ನಿವಾಸಿಗಳು, ತಾವುಗಳು ಶತಮಾನಗಳಿಂದ ಇಲ್ಲಿ ವಾಸವಾಗಿದ್ದು ತಮಗೆ ಅರಣ್ಯ ರಕ್ಷಣೆ ಹಕ್ಕಿನಡಿ ಹಕ್ಕುಪತ್ರ ನೀಡಬೇಕೆಂದು ಬೇಡಿಕೆ ಇಟ್ಟರೆ, ಅರಣ್ಯಾಧಿಕಾರಿಗಳು ಸೂಕ್ತ ಕಾನೂನು ರೀತಿಯ ಪ್ರಕ್ರಿಯೆ ಆಗಬೇಕೆಂದು ವಾದ ಮಂಡಿಸಿದರು. ಎರಡೂ ಕಡೆಯವರ ವಾದವನ್ನು ಆಲಿಸಿದ ಶಾಸಕರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಮ್ಮ ಪ್ರಕ್ರಿಯೆ ಪೂರ್ಣಗೊಳಿಸುವುದರೊಂದಿಗೆ ಅರಣ್ಯ ನಿವಾಸಿಗಳಿಗೆ ತೊಂದರೆ ಮಾಡಬಾರದು ಹಾಗೂ ಅವರ ದಿನನಿತ್ಯದ ಕೆಲಸಗಳಿಗೆ ಯಾವುದೇ ರೀತಿಯ ಅಡತಡೆಗಳ ಆಗಬಾರದು ಎಂದು ಸೂಚಿಸಿದರು. ಅದೇ ರೀತಿ ಅರಣ್ಯ ನಿವಾಸಿಗಳು ತಮ್ಮ ಹಕ್ಕಿಗಾಗಿ ಹೋರಾಟ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಆದರೆ ಎಲ್ಲರೂ ಕಾನೂನಾತ್ಮಕವಾಗಿ ಮಾಡಬೇಕು ಮತ್ತು ಹೊರಗಿನವರು ಬಂದು ಇವರ ಹೋರಾಟದ ಹಾದಿ…

Read More

ಮಡಿಕೇರಿ ಮೇ 12 NEWS DESK : ವಿರಾಜಪೇಟೆ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯು ತಾಲ್ಲೂಕು ಪಂಚಾಯಿತಿ ಸಾಮಥ್ರ್ಯ ಸೌಧದಲ್ಲಿ ನಡೆಯಿತು.  ವಿರಾಜಪೇಟೆ ತಾಲ್ಲೂಕು ಆಡಳಿತಾಧಿಕಾರಿ ಹಾಗೂ ಜಿಂ.ಪಂ.ಉಪ ಕಾರ್ಯದರ್ಶಿ ಅಬ್ದುಲ್ ನಬೀ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು. ಮುಂದಿನ ದಿನಗಳಲ್ಲಿ ಮಳೆಗಾಲ ಪ್ರಾರಂಭವಾಗುತ್ತಿದ್ದು, ಮುಂಜಾಗ್ರತೆಯಾಗಿ ಸಾಂಕ್ರಮಿಕ ರೋಗಗಳನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು. ಕುಡಿಯುವ ನೀರಿಗೆ ಸಂಬಂಧಿಸಿದಂತೆ ಜಲಜೀವನ್ ಮಿಷನ್ ಬ್ಯಾಚ್ 1, ಬ್ಯಾಚ್ 2 ಹಾಗೂ ಬ್ಯಾಚ್ 3 ಕಾಮಗಾರಿಗಳನ್ನು ತುರ್ತಾಗಿ ಪೂರ್ಣಗೊಳಿಸಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಪಶು ಪಾಲನೆ ಇಲಾಖೆಯಿಂದ ರಾಸುಗಳಿಗೆ ಕಾಲು-ಬಾಯಿ ಜ್ವರ ಹಾಗೂ ಚರ್ಮಗಂಟು ರೋಗದ ಲಸಿಕೆ ನೀಡಲಾಗುತ್ತಿದೆ ಎಂದು ಪಶುಪಾಲನೆ ಇಲಾಖೆಯ ಸಹಾಯಕ ನಿರ್ದೇಶರಾದ ಗಿರೀಶ್ ಮಾಹಿತಿ ನೀಡಿದರು ಸಣ್ಣ ಅಥವಾ ಅತೀ ಸಣ್ಣ ರೈತರಿಗೆ ಉಪ ಕಸುಬಾಗಿ ಹಸು ಸಾಕಾಣಿಕೆಗೆ ಹೆಚ್ಚು ಒತ್ತು…

Read More

ಮಡಿಕೇರಿ ಮೇ 12 NEWS DESK : ಗೌತಮ ಬುದ್ಧನ ಸಂದೇಶಗಳು ಇಡೀ ಮಾನವಕುಲಕ್ಕೆ ಮಾನವೀಯತೆಯ ಮಾರ್ಗದರ್ಶಿಯಾಗಿದೆ ಎಂದು ಉಪ ವಿಭಾಗಾಧಿಕಾರಿ ವಿನಾಯಕ ನರ್ವಡೆ ತಿಳಿಸಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದೊಂದಿಗೆ ನಗರದ ಗಾಂಧಿ ಭವನದಲ್ಲಿ ಸೋಮವಾರ ನಡೆದ ಭಗವಾನ್ ಬುದ್ಧರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಗೌತಮ ಬುದ್ಧ ಇಡೀ ವಿಶ್ವಕ್ಕೆ ಶಾಂತಿ, ಸಹನೆ, ಸಹಭಾಳ್ವೆ, ಸಹೋದರತೆಯನ್ನು ಬಿತ್ತಿದರು. ಭಾರತದಲ್ಲಿ ಹುಟ್ಟಿ ಬೆಳೆದ ಗೌತಮ ಬುದ್ಧರು ಇಡೀ ವಿಶ್ವಕ್ಕೆ ಶಾಂತಿಯ ಸಂದೇಶ ಪಸರಿಸಿದ್ದಾರೆ ಎಂದು ವಿನಾಯಕ ನರ್ವಡೆ ತಿಳಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಮೇರಿಕ ಭೇಟಿ ಸಂದರ್ಭದಲ್ಲಿ ‘ಯುದ್ಧದ ನಾಡಿನಿಂದ ಬಂದಿಲ್ಲ, ಬುದ್ಧನ ನಾಡಿನಿಂದ ಬಂದಿದ್ದೇನೆ’ ಎಂಬ ಸಂದೇಶ ಸಾರಿದ್ದರೂ ಎಂಬುದನ್ನು ಯಾರೂ ಮರೆಯುವಂತಿಲ್ಲ. ಆ ನಿಟ್ಟಿನಲ್ಲಿ ಇಡೀ ಭಾರತ ದೇಶ ಶಾಂತಿ ಸಹಭಾಳ್ವೆ, ಸಹೋದರತ್ವಕ್ಕೆ ಹೆಸರಾಗಿದೆ ಎಂದು ಉಪ ವಿಭಾಗಾಧಿಕಾರಿ ನುಡಿದರು. ಭಗವಾನ್ ಬುದ್ಧರ 2587 ನೇ…

Read More

ಪುತ್ತೂರು ಮೇ 12 NEWS DESK : ಭಾರತೀಯ ಜ್ಞಾನ ಪರಂಪರೆಯು ಅತ್ಯಂತ ಹೆಚ್ಚು ಅವಜ್ಞೆಗೊಳಗಾಗಿದೆ ಮತ್ತು ನಮ್ಮವರಿಂದಲೇ ನಿರಾಕರಿಸಲ್ಪಟ್ಟಿದೆ. ಅಧರ್ಮವನ್ನು ಧರ್ಮ ಎಂದು ಬಿಂಬಿಸುವ ಕೆಲಸಗಳು ನಡೆಯುತ್ತಿವೆ. ಇದರಿಂದಾಗಿ ನಾವು ಕಳೆದುಕೊಂಡದ್ದು ಅಪಾರ ಎಂದು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಕಾರ್ಯನಿರ್ವಹಣಾಧಿಕಾರಿ ಹಾಗೂ ಶ್ರೀರಾಮ ಪದವಿ ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ್.ಕೆ.ಎನ್ ಹೇಳಿದರು. ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘ ಮತ್ತು ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿ ಸಂಯುಕ್ತ ಆಶ್ರಯದಲ್ಲಿ ನಡೆದ ಭಾರತೀಯ ಜ್ಞಾನ ಪರಂಪರೆ ಪರಿಚಯ ಮತ್ತು ಅವಲೋಕನ ಎನ್ನುವ ಎರಡು ದಿನಗಳ ಶೈಕ್ಷಣಿಕ ಕಾರ್ಯಾಗಾರದ ಮುಖ್ಯ ಅತಿಥಿಗಳಾಗಿ ಅವರು ಮಾತಾಡಿದರು. ಕಳೆದುಕೊಂಡಿರುವುದನ್ನು ಅಲ್ಲಿಯೇ ಹುಡುಕಬೇಕು, ಆಗ ನಮಗೆ ಪ್ರೇರಣೆ ಸಿಗಬಹುದು. ಆ ಬಳಿಕ ಏನು ಮಾಡಬೇಕೆಂಬುದನ್ನು ವಿಮರ್ಶಿಸಬೇಕು ಹಾಗಾಗಿ ಆ ಪ್ರೇರಣೆ ತುಂಬುವ ಕೆ¯ಸವನ್ನು ಇಲ್ಲಿ ಮಾಡಲಾಗುತ್ತಿದೆ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕಿ ಡಾ.ಸುಧಾ.ಎಸ್.ರಾವ್ ಮಾತನಾಡಿ ನಮ್ಮತನದ ಬಗ್ಗೆ ಹೆಮ್ಮೆ ಮೂಡುವಂತಹ ಶೈಕ್ಷಣಿಕ…

Read More

ಮಡಿಕೇರಿ ಮೇ 12 NEWS DESK : ರಾಜ್ಯ ಸರ್ಕಾರ ಹಳೇ ಮೈಸೂರು ಭಾಗಕ್ಕೆ ಘೋಷಣೆ ಮಾಡಿದಂತೆ ಕೊಡಗು ಜಿಲ್ಲೆಗೂ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಕಾರ್ಯದರ್ಶಿ ಭೋಜಣ್ಣ ಸೋಮಯ್ಯ ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ರಾಜ್ಯಕ್ಕೆ ಕುಡಿಯುವ ನೀರನ್ನು ಒದಗಿಸುತ್ತಿರುವ ಕಾವೇರಿ ನಾಡು ಕೊಡಗಿನ ಬಗ್ಗೆ ರಾಜ್ಯ ಸರ್ಕಾರ ಮಲತಾಯಿ ಧೋರಣೆ ತೋರುವುದು ಸರಿಯಲ್ಲ. ಹಳೇ ಮೈಸೂರು ಭಾಗದ ಗಡಿಯಲ್ಲಿರುವ ಕೊಡಗು ಜಿಲ್ಲೆಗೂ ಅಗತ್ಯ ಅನುದಾನ ನೀಡಲಿ ಎಂದು ಆಗ್ರಹಿಸಿದ್ದಾರೆ ಇತ್ತೀಚೆಗೆ ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದ ರಾಜ್ಯ ಸರ್ಕಾರದ ಸಂಪುಟ ಸಭೆಯಲ್ಲಿ ಹಳೇ ಮೈಸೂರು ಭಾಗದ ಹೆಚ್.ಡಿ.ಕೋಟೆ, ಮೈಸೂರು ಹಾಗೂ ಚಾಮರಾಜನಗರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುಮಾರು 3600ಕೋಟಿ ರೂ.ಗಳಷ್ಟು ವಿಶೇಷ ಪ್ಯಾಕೇಜ್ ನ್ನು ಘೋಷಣೆ ಮಾಡಿದ್ದಾರೆ. ಇದರ ಪಕ್ಕದಲ್ಲೇ ಇರುವ ಕೊಡಗು ಜಿಲ್ಲೆ ಕೂಡ ಅಭಿವೃದ್ಧಿ ಕಾರ್ಯಗಳಲ್ಲಿ ಹಿನ್ನಡೆ ಅನುಭವಿಸುತ್ತಿದ್ದು, ಸ್ಥಳೀಯ ಸಮಸ್ಯೆಗಳ ಕುರಿತು ರಾಜ್ಯ ಸರ್ಕಾರ ಗಂಭೀರ…

Read More

ಮಡಿಕೇರಿ NEWS DESK ಮೇ 12 : ಹಿರಿಯ ಪತ್ರಕರ್ತ, ಶಕ್ತಿ ದಿನಪತ್ರಿಕೆಯ ಸಲಹಾ ಸಂಪಾದಕ ಬಿ.ಜಿ.ಅನಂತಶಯನ ಅವರು ‘ಕರ್ನಾಟಕ ಶಕ್ತಿ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮೈಸೂರು ಪ್ರೆಸ್ ಕ್ಲಬ್ ವತಿಯಿಂದ ನಡೆದ 19ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ‘ಕರ್ನಾಟಕ ಶಕ್ತಿ’ ಪ್ರಶಸ್ತಿಯನ್ನು ಬಿ.ಜಿ.ಅನಂತಶಯನ ಅವರಿಗೆ ಗಣ್ಯರು ಪ್ರದಾನ ಮಾಡಿದರು.

Read More

ಮಡಿಕೇರಿ NEWS DESK ಮೇ 12 : ಮಡಿಕೇರಿ ನಗರದಲ್ಲಿ ಕೆಲವು ಬಿಜೆಪಿ ಪ್ರತಿನಿಧಿಗಳ ಗೂಂಡಾ ವರ್ತನೆ ಮುಂದುವರೆದಿದ್ದು, ಪಾರ್ಕಿಂಗ್ ವಿಚಾರದಲ್ಲಿ ಶುಲ್ಕ ವಸೂಲಾತಿ ಮಾಡುವವರ ಮೇಲೆ ಹಲ್ಲೆ ನಡೆದಿದೆ. ಅಕ್ರಮ ಮಳಿಗೆಗಳ ನಿರ್ಮಾಣದ ಆರೋಪ ಕೂಡ ಹಲ್ಲೆ ಮಾಡಿದವರ ಮೇಲೆ ಇದ್ದು ಸರ್ಕಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಧರ್ಮಜ ಉತ್ತಪ್ಪ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೂಂಡಾ ವರ್ತನೆಯಲ್ಲಿ ತೊಡಗಿರುವವರು ಅಕ್ರಮ ಮಳಿಗೆಗಳನ್ನು ನಿರ್ಮಿಸಿ ಬಾಡಿಗೆಗೆ ನೀಡಿರುವ ಕುರಿತು ದೂರುಗಳಿದೆ. ಬಿಜೆಪಿ ಅಧಿಕಾರ ಕಳೆದುಕೊಂಡು ಎರಡು ವರ್ಷಗಳಾಗಿದೆ. ಆದರೆ ಕಳೆದ ಎರಡು ದಶಕಗಳಿಂದ ಮೈಗೂಡಿಸಿಕೊಂಡಿದ್ದ ರೌಡಿಸಂ, ಭ್ರಷ್ಟಾಚಾರ ಮತ್ತು ಅಕ್ರಮ ವ್ಯವಹಾರ ಕೆಲವರಿಂದ ಮುಂದುವರೆದಿದೆ. ಇದರ ಪರಿಣಾಮವಾಗಿ ರಾಜಾಸೀಟು ರಸ್ತೆಯಲ್ಲಿ ಪಾರ್ಕಿಂಗ್ ವಸೂಲಾತಿ ಮಾಡುತ್ತಿದ್ದವರ ಮೇಲೆ ಹಲ್ಲೆ ನಡೆದಿದ್ದು, ಹಲ್ಲೆ ಮಾಡಿದವರು ಪೊಲೀಸ್ ಅತಿಥಿಗಳಾಗಿದ್ದಾರೆ. ಇವರುಗಳು ನಗರದಲ್ಲಿ ಅಕ್ರಮ ಮಳಿಗೆಗಳನ್ನು ನಿರ್ಮಿಸಿಕೊಂಡಿದ್ದು, ಇದನ್ನು ಪ್ರಶ್ನಿಸಲು ಹೋದವರ ಮೇಲೆ ದಬ್ಬಾಳಿಕೆ…

Read More

ಮಡಿಕೇರಿ ಮೇ 12 NEWS DESK : ನಗರದ ಶ್ರೀ ಮುತ್ತಪ್ಪ ದೇವಾಲಯದಲ್ಲಿರುವ ಶ್ರೀ ಭಗವತಿ ದೇವಿಯ ವಾರ್ಷಿಕ ಪೊಂಗಾಲ ಉತ್ಸವವು ಮೇ 18 ರಂದು ನಡೆಯಲಿದೆ ಎಂದು ಶ್ರೀ ಮುತ್ತಪ್ಪ ಮಹಿಳಾ ವೇದಿಕೆಯ ಅಧ್ಯಕ್ಷೆ ಶಾರದ ರಾಮನ್ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗಿನ ಪುರಾತನ ದೇವಾಲಯಗಳಲ್ಲೊಂದಾದ ಮಡಿಕೇರಿಯ ಶ್ರೀ ಮುತ್ತಪ್ಪ ದೇವಾಲಯದ ಆವರಣದಲ್ಲಿರುವ ಪಾರ್ವತಿ, ಸರಸ್ವತಿ, ಮಹಾಲಕ್ಷ್ಮಿ, ದುರ್ಗಿ ಸಂಕಲ್ಪದಲ್ಲಿರುವ ಶ್ರೀ ಭಗವತಿ ದೇವಿಗೆ ಪೊಂಗಾಲ ಸೇವೆಯನ್ನು ಬೆಳಿಗ್ಗೆ 8.30ಕ್ಕೆ ನಡೆಸಲು ಉದ್ದೇಶಿಸಲಾಗಿದ್ದು, ಈ ಬಾರಿ ವಿಜೃಂಭಣೆಯಿಂದ ಉತ್ಸವ ನಡೆಸಲಾಗುವುದು. ಇದು ಕೇವಲ ಮಹಿಳೆಯರು ಮಾತ್ರ ನಡೆಸುವ ಪುಣ್ಯ ಕಾರ್ಯವಾಗಿದ್ದು, ಪೊಂಗಾಲ ಸಮರ್ಪಣೆಯಿಂದ ಮನೆಯಲ್ಲಿ ಆರೋಗ್ಯ ಶಾಂತಿ, ನೆಮ್ಮದಿ ನೆಲೆಸುವ ನಂಬಿಕೆ ಇದೆ ಎಂದರು. ಇಟ್ಟಿಗೆ ಅಥವಾ ಕಲ್ಲುಗಳನ್ನು ಜೋಡಿಸಿ ಒಲೆಯನ್ನು ಹಾಕಿ ಸೌದೆಗಳನ್ನು ಜೋಡಿಸಿ ಸಿದ್ಧಪಡಿಸಿದ ನಂತರ ಅರ್ಚಕರು ನೀಡಿದ ಕರ್ಪೂರದಾರತಿಯಿಂದ ಒಲೆ ಉರಿಸಿ, ಹೊಸ ಮಡಿಕೆಯಲ್ಲಿ ನೀರು ತುಂಬಿಸಿ, ಪೊಂಗಾಲ ತಯಾರಿಕೆ ಮಾಡಲಾಗುತ್ತದೆ ಎಂದು…

Read More

ಮುಂಬೈ ಮೇ 12 NEWS DESK : ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದು ಕೊಹ್ಲಿ ಅಧಿಕೃತವಾಗ ನಿವೃತ್ತಿ ಘೋಷಿಸಿದ್ದಾರೆ. 14 ವರ್ಷಗಳ ತಮ್ಮ ಟೆಸ್ಟ್ ಕೆರಿಯರ್​ಗೆ ವಿರಾಮ ಇಟ್ಟಿರುವ ಕಿಂಗ್ ಕೊಹ್ಲಿ ಏಕದಿನ ಕ್ರಿಕೆಟ್​ನಲ್ಲಿ ಮಾತ್ರ ಮುಂದುವರೆಯುವುದಾಗಿ ತಿಳಿಸಿದ್ದಾರೆ. ಇದಕ್ಕೂ ಮುನ್ನ 2024 ರಲ್ಲಿ ನಡೆದ ಟಿ20 ವಿಶ್ವಕಪ್​ನ ಫೈನಲ್ ಪಂದ್ಯದ ಬೆನ್ನಲ್ಲೇ ಕೊಹ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದರು. ಟೀಮ್ ಇಂಡಿಯಾ ಪರ 123 ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಅವರು 210 ಇನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಈ ವೇಳೆ 16608 ಎಸೆತಗಳನ್ನು ಎದುರಿಸಿರುವ ಕೊಹ್ಲಿ ಒಟ್ಟು 9230 ರನ್ ಕಲೆಹಾಕಿದ್ದಾರೆ. ಇದರ ನಡುವೆ 30 ಶತಕ ಹಾಗೂ 31 ಅರ್ಧಶತಕಗಳನ್ನು ಬಾರಿಸಿದ್ದಾರೆ. ಹಾಗೆಯೇ ಭಾರತ ಟೆಸ್ಟ್ ತಂಡವನ್ನು 68 ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ. ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ 40 ಪಂದ್ಯಗಳಲ್ಲಿ ಜಯ…

Read More

ನಾಪೋಕ್ಲು ಮೇ 12 NEWS DESK : ಮಲ್ಮ ಹಾಕಿ ಕ್ಲಬ್ ಹಾಗೂ ಕುಂಜಿಲ ಕಕ್ಕಬ್ಬೆ ಪಂಚಾಯತಿ ವತಿಯಿಂದ ಕಕ್ಕಬ್ಬೆ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಗ್ರಾಮೀಣ ಕೀಡಾಕೂಟದ ಹಾಕಿ ಪಂದ್ಯದಲ್ಲಿ ಪ್ರಥಮ ಸ್ಥಾನ ಮರಂದೋಡ ತಂಡ ಗಳಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ದ್ವಿತೀಯ ಸ್ಥಾನವನ್ನು ಕುಂಜಿಲ ತಂಡ ಗಳಿಸಿತು. ಥ್ರೋಬಾಲ್ ಪಂದ್ಯದಲ್ಲಿ ಪ್ರಥಮ ಸ್ಥಾನವನ್ನೂ ನಾಲಡಿ ತಂಡ ಗಳಿಸಿದರೆ ದ್ವಿತೀಯ ಸ್ಥಾನವನ್ನು ಕುಂಜಿಲ ತಂಡ ಗಳಿಸಿತು.ವಾಲಿಬಾಲ್ ಪಂದ್ಯದಲ್ಲಿ ಪ್ರಥಮ ಸ್ಥಾನವನ್ನು ಕುಂಜಿಲ ತಂಡ ಹಾಗೂ ದ್ವಿತೀಯ ಸ್ಥಾನವನ್ನು ಯವಕಪಾಡಿ ತಂಡಗಳು ಪಡೆದುಕೊಂಡವು. ಕ್ರೀಡಾಕೂಟದಲ್ಲಿ ಮಲ್ಮ ಸಂಘದ ಅಧ್ಯಕ್ಷ ಮಾದಂಡ ಸಂದೇಶ ವಹಿಸಿದ್ದರು. ಅತಿಥಿಗಳಾಗಿ ಅಂಜಪರವಂಡ ಕುಶಾಲಪ್ಪ, ಬಡಕದ ಸುರೇಶ್, ಚಂಡಿರ ರಾಲಿ ಗಣಪತಿ, ಬೋಳಿಯಾಡಿರ ಸಂತು ಸುಬ್ರಮಣಿ, ಕಲಿಯಂಡ ಸಂಪನ್ ಅಯ್ಯಪ್ಪ, ಪಂಚಾಯತಿ ಪಿ.ಡಿ.ಓ.ಅಶೋಕ್, ಚೊಯಮಂಡ ಹರೀಶ್ ಮೊನ್ನಪ್ಪ, ಸೌಕ ವೈಕೂಲ್, ಮಾಮು ಕುಂಜಿಲ, ಪರದಂಡ ಸದಾನಾಣಯ್ಯ, ಕುಡಿಯರ ದಿಲೀಪ್, ಮಾದಂಡ ಜಗ ಸೇರಿದಂತೆ ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದು ವೇದಿಕೆಯಲ್ಲಿದ್ದ ಗಣ್ಯರು ವಿಜೇತ ತಂಡಗಳಿಗೆ…

Read More