ಮಡಿಕೇರಿ ಜೂ.30 NEWS DESK : ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ (ಲಿಡ್ಕರ್) ವತಿಯಿಂದ 2025-26ನೇ ಸಾಲಿಗೆ ಪರಿಶಿಷ್ಟ ಜಾತಿಯ ಮಾದಿಗ, ಸಮಗಾರ, ಡೋರ, ಮೋಚಿ, ಮೋಚಿಗಾರ ಜಾತಿಗೆ ಸೇರಿದ ಚರ್ಮ ಕುಶಲಕರ್ಮಿಗಳ ಕುಟುಂಬದ ನಿರುದ್ಯೋಗಿ ವಿದ್ಯಾವಂತ ಯುವಕ-ಯುವತಿಯರಿಗೆ ಎಸ್‍ಎಸ್‍ಎಲ್‍ಸಿ, ಪಿಯುಸಿ, ಪದವಿ ಪಡೆದಿರುವವರಿಗೆ ಚರ್ಮೋದ್ಯೋಮದಲ್ಲಿ ಹೊಸ ತಂತ್ರಜ್ಞಾನ, ವಿನ್ಯಾಶ ಮತ್ತು ಮಾರುಕಟ್ಟೆ ಕುರಿತು ತರಬೇತಿಗೆ ದೆಹಲಿ, ತಮಿಳುನಾಡು, ಮಹಾರಾಷ್ಟ್ರ, ಉತ್ತರಪ್ರದೇಶ, ಪಶ್ಚಿಮ ಬಂಗಾಳಕ್ಕೆ ನಿಗಮದ ವತಿಯಿಂದಿ ತರಬೇತಿಗೆ ನಿಯೋಜನೆ ಮಾಡಲಾಗುತ್ತದೆ. ನಿಯೋಜನೆಗೊಂಡ ವಿದ್ಯಾರ್ಥಿಗಳಿಗೆ ಉಳಿದುಕೊಳ್ಳಲು ವಸತಿ ಹಾಗೂ ಶಿಷ್ಯವೇತನ ನೀಡಲಾಗುವುದು. ಆಸಕ್ತರು ಜುಲೈ 5 ರೊಳಗೆ ನಗರದ ಲಿಡ್ಕರ್ ಕಚೇರಿಗೆ ಭೇಟಿ ನೀಡಿ ಸೂಕ್ತ ದಾಖಲಾತಿಗಳನ್ನು ನೀಡಿ ಹೆಸರು ನೋಂದಾಯಿಸಿಕೊಳ್ಳಲು ಕೋರಿದೆ. ಹೆಚ್ಚಿನ ಮಾಹಿತಿಗೆ ಜಿಲ್ಲಾ ಸಂಯೋಜಕರು ಲಿಡ್ಕರ್ ಕೂಡಗು ಜಿಲ್ಲೆ ಮೊಬೈಲ್ ಸಂಖ್ಯೆ: 9741833307, 7795603247 ನ್ನು ಸಂಪರ್ಕಿಸಬಹುದು ಎಂದು ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಜಿಲ್ಲಾ ಸಂಯೋಜಕರು ತಿಳಿಸಿದ್ದಾರೆ.
ಲೇಖಕ: admin
ಮಡಿಕೇರಿ ಜೂ.30 NEWS DESK : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಕಟಣೆ ಯೋಜನೆಯಡಿ ಪುಸ್ತಕ ಪ್ರಕಟಿಸಲು ಉದ್ದೇಶಿಸಲಾಗಿದೆ. ಆದ್ದರಿಂದ ಲೇಖಕರು ಅರೆಭಾಷೆ ಕಥೆ, ಅರೆಭಾಷೆ ಅಜ್ಜಿ ಕಥೆ, ಅರೆಭಾಷೆ ಜನಪದ, ಅರೆಭಾಷೆ ಕವನ, ಅರೆಭಾಷೆ ಲೇಖನ, ಅರೆಭಾಷೆ ವಿಚಾರ ಸಾಹಿತ್ಯ, ಅರೆಭಾಷೆ ಲಲಿತ ಪ್ರಬಂಧ, ಅರೆಭಾಷೆ ಸಂಶೋಧನ ಕೃತಿಗಳು ಇನ್ನಿತರೆ ಬರಹಗಳಿದ್ದಲ್ಲಿ ಡಿಟಿಪಿ ಪ್ರತಿಗಳನ್ನು ಅಕಾಡೆಮಿಗೆ ಸಲ್ಲಿಸುವಂತೆ ಹಾಗೂ ಇ-ಮೇಲ್ ಮೂಲಕ arebaseacademy@gmail.com ಕಳುಹಿಸುವಂತೆ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಅವರು ಕೋರಿದ್ದಾರೆ. ಆದ್ದರಿಂದ ತಮ್ಮ ಡಿಟಿಪಿ ಪ್ರತಿಗಳನ್ನು ಸಲ್ಲಿಸಲು 2025 ಜುಲೈ 31 ಕೊನೆಯ ದಿನಾಂಕವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಅಧ್ಯಕ್ಷರು, ರಿಜಿಸ್ಟ್ರಾರ್, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಕಾಫಿ ಕೃಪಾ, ರಾಜಸೀಟ್ ರಸ್ತೆ, ಮಡಿಕೇರಿ, ಕೊಡಗು ಜಿಲ್ಲೆ. ಮೊ ನಂ 6362522677 ಸಂಪರ್ಕಿಸಬಹುದು. arebaseacademy@gmail.com ಪುಸ್ತಕಗಳ ಆಯ್ಕೆಯ ಹಕ್ಕು ಅಕಾಡೆಮಿಯದಾಗಿರುತ್ತದೆ ಹಾಗೂ ಬರಹ ಕನಿಷ್ಟ 70 ರಿಂದ…
ಮಡಿಕೇರಿ ಜೂ.30 NEWS DESK : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಅರೆಭಾಷೆ ಸಂಸ್ಕೃತಿ, ಸಾಹಿತ್ಯ, ಆಚಾರ ವಿಚಾರ, ಜಾನಪದ ಹಾಗೂ ಕಲೆಗೆ ಸಂಬಂಧಿಸಿದ ಸಂಶೋಧನಾ ಪ್ರಬಂಧಕ್ಕೆ ಫೆಲೋಶಿಫ್ ನೀಡಿ ರಚಿಸಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಪದವೀಧರರು ಫೆಲೋಶಿಫ್‍ಗಾಗಿ ಅರ್ಜಿ ಸಲ್ಲಿಸಲು ಜುಲೈ, 21 ಕೊನೆಯ ದಿನವಾಗಿದೆ. ಬಂದಿರುವ ಅರ್ಜಿಗಳನ್ನು ಆಯ್ಕೆ ಸಮಿತಿಯಲ್ಲಿ ಪರಿಶೀಲಿಸಿ ನಾಲ್ಕು ಸೂಕ್ತ ಸಂಶೋಧಕರನ್ನು ಆಯ್ಕೆ ಮಾಡಲಾಗುವುದು. ಆಯ್ಕೆಯಾದವರಿಗೆ ತಲಾ ರೂ 75,000 ದಂತೆ ಫೆಲೋಶಿಫ್ ನೀಡಲಾಗುವುದು. ಈ ಹಿಂದೆ ಸಂಶೋಧನಾ ಪ್ರಬಂಧಗಳನ್ನು ಸಲ್ಲಿಸಿದವರಿಗೆ ಅವಕಾಶ ಇರುವುದಿಲ್ಲ. ಫೆಲೋಶಿಫ್‍ಗೆ ಆಯ್ಕೆಯಾದವರು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ನೀತಿ ನಿಯಮಾವಳಿಗಳಿಗೆ ಬದ್ದರಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ. ಹೆಚ್ಚಿನ ಮಾಹಿತಿಯನ್ನು ರಿಜಿಸ್ಟ್ರಾರ್ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಕಾಫಿ ಕೃಪಾ ಕಟ್ಟಡ, ಮಡಿಕೇರಿ ದೂ.ಸಂ.08272- 223055, 6362522677 ಇಲ್ಲಿಂದ ಪಡೆದುಕೊಳ್ಳಬಹುದು ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ತಿಳಿಸಿದ್ದಾರೆ.…
ಹೈದರಾಬಾದ್ NEWS DESK ಜೂ.30 : ರಾಸಾಯನಿಕ ಕಾರ್ಖಾನೆಯಲ್ಲಿ ಭಾರೀ ಸ್ಫೋಟ ಸಂಭವಿಸಿ 8 ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹೈದರಾಬಾದ್ ನ ತೆಲಂಗಾಣದ ಸಂಗಾರೆಡ್ಡಿ ಜಲ್ಲೆಯ ಪಾಶಮೈಲರಾಮ್ ನಲ್ಲಿ ನಡೆದಿದೆ. ರಿಯಾಕ್ಟರ್ ನಲ್ಲಿನ ಸ್ಫೋಟದಿಂದ ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿ 25ಕ್ಕೂ ಹೆಚ್ಚು ಕಾರ್ಮಿಕರು ಗಾಯಗೊಂಡಿದ್ದಾರೆ. ಕಾರ್ಖಾನೆಯೊಳಗೆ ಮತ್ತಷ್ಟು ಕಾರ್ಮಿಕರು ಸಿಲುಕಿಕೊಂಡಿರುವ ಸಂಶಯ ವ್ಯಕ್ತವಾಗಿದೆ. ಘಟನೆ ಕುರಿತು ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಸಂತಾಪ ಸೂಚಿಸಿದ್ದಾರೆ. ಸೂಕ್ತ ರಕ್ಷಣಾ ಕಾರ್ಯಕ್ಕೆ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.
ಜಮ್ಮು NEWS DESK ಜೂ.30 : ಭಾರತದೊಳಗೆ ನುಸುಳಲು ಯತ್ನಿಸುತ್ತಿದ್ದ ಪಾಕಿಸ್ತಾನದ ಭಯೋತ್ಪಾದಕರ ಮಾರ್ಗದರ್ಶಿಯನ್ನು ಭಾರತೀಯ ಸೇನಾಪಡೆ ಗಡಿಯಲ್ಲಿ ಬಂಧಿಸಿದೆ. ಪೂಂಚ್ ಮತ್ತು ರಜೌರಿ ಬಳಿಯ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತದೊಳಗೆ ನುಸುಳಲು ಯತ್ನಿಸುತ್ತಿದ್ದ ಪಾಕಿಸ್ತಾನದ ಮೊಹಮ್ಮದ್ ಆರಿಫ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಭಾರೀ ಶಸಾಸ್ತ್ರಗಳೊಂದಿಗೆ ನಾಲ್ವರು ಜೈಶ್-ಎ- ಮೊಹಮ್ಮದ್ (ಎಇಒ)ಉಗ್ರರು ಭಾರತದೊಳಗೆ ನುಸುಳಲು ಪ್ರಯತ್ನಿಸುತ್ತಿದ್ದರು. ಇವರೊಂದಿಗೆ ಮೊಹಮ್ಮದ್ ಆರಿಫ್ ಕೂಡ ಇದ್ದ. ಉಳಿದ ಭಯೋತ್ಪಾದಕರು ಗಾಯಗೊಂಡು ಪಾಕಿಸ್ತಾನದ ಕಡೆಗೆ ಓಡಿ ಹೋಗಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿದೆ.
ಸೋಮವಾರಪೇಟೆ ಜೂ.30 NEWS DESK : ಪಟ್ಟಣದ ಮಳೆಹಾನಿ ಪ್ರದೇಶಗಳಿಗೆ ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿಶ್ವ ಮಾನವ ಕುವೆಂಪು ವಿದ್ಯಾಸಂಸ್ಥೆ ಆವರಣದಲ್ಲಿ ತಡೆಗೋಡೆ ಕುಸಿದಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅಪ್ಪಚ್ಚು ರಂಜನ್, ಸಂಸ್ಥೆಯ ಅಧ್ಯಕ್ಷರಾದ ಎ.ಆರ್.ಮುತ್ತಣ್ಣ ಅವರಿಂದ ವಿವರ ಪಡೆದು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲು ಸೂಚಿಸಿದರು. ನಂತರ ಕುಸಿಯುವ ಹಂತದಲ್ಲಿರುವ ಟರ್ಫ್ ಗ್ರೌಂಡ್ ನ ತಡೆಗೋಡೆಯನ್ನು ಪರಿಶೀಲಿಸಿ, ಅಧಿಕಾರಿಗಳೊಂದಿಗೆ ಚರ್ಚಿಸಿದರು. ಗುತ್ತಿಗೆದಾರರಿಗೆ ಪುನರನಿರ್ಮಾಣ ಮಾಡುವಂತೆ ಸೂಚಿಸಿದರು.
ಹೈದರಾಬಾದ್ NEWS DESK ಜೂ.30 : ರಾಸಾಯನಿಕ ಕಾರ್ಖಾನೆಯಲ್ಲಿ ಭಾರೀ ಸ್ಫೋಟ ಸಂಭವಿಸಿ 8 ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹೈದರಾಬಾದ್ ನ ತೆಲಂಗಾಣದ ಸಂಗಾರೆಡ್ಡಿ ಜಲ್ಲೆಯ ಪಾಶಮೈಲರಾಮ್ ನಲ್ಲಿ ನಡೆದಿದೆ. ರಿಯಾಕ್ಟರ್ ನಲ್ಲಿನ ಸ್ಫೋಟದಿಂದ ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿ 25ಕ್ಕೂ ಹೆಚ್ಚು ಕಾರ್ಮಿಕರು ಗಾಯಗೊಂಡಿದ್ದಾರೆ. ಕಾರ್ಖಾನೆಯೊಳಗೆ ಮತ್ತಷ್ಟು ಕಾರ್ಮಿಕರು ಸಿಲುಕಿಕೊಂಡಿರುವ ಸಂಶಯ ವ್ಯಕ್ತವಾಗಿದೆ. ಘಟನೆ ಕುರಿತು ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಸಂತಾಪ ಸೂಚಿಸಿದ್ದಾರೆ. ಸೂಕ್ತ ರಕ್ಷಣಾ ಕಾರ್ಯಕ್ಕೆ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.
ಮಡಿಕೇರಿ ಜೂ.30 NEWS DESK : ಜೀವನದಿ ಕಾವೇರಿಯ ಉಗಮಸ್ಥಾನ ಕೊಡಗು ಸೇರಿದಂತೆ ರಾಜ್ಯವ್ಯಾಪಿ ಉತ್ತಮ ಮಳೆಯಾದ ಬೆನ್ನಲ್ಲೇ ಇದೇ ಮೊದಲ ಬಾರಿಗೆ ಜೂನ್ ತಿಂಗಳಿನಲ್ಲೇ ಭರ್ತಿಯಾಗುವ ಮೂಲಕ ಕೆಆರ್‍ಎಸ್ ಜಲಾಶಯ ಹೊಸ ದಾಖಲೆ ಸೃಷ್ಟಿಸಿದೆ. ಭರ್ತಿಯಾದ ಕೃಷ್ಣರಾಜಸಾಗರ ಜಲಾಶಯಕ್ಕೆ 4ನೇ ಬಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾಗಿನ ಅರ್ಪಿಸಿದರು. ಈಗಾಗಲೇ 2013, 2014, 2024 ಈ ಮೂರು ವರ್ಷ ಕಾವೇರಿ ತಾಯಿಗೆ ಬಾಗಿನ ಅರ್ಪಿಸಿದ ಹೆಗ್ಗಳಿಕೆ ಸಿದ್ದರಾಮಯ್ಯ ಅವರದ್ದು.
ಮಡಿಕೇರಿ ಜೂ.30 NEWS DESK : ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕೊಡಗು ಘಟಕದ ಸಭಾಪತಿಯಾಗಿ ಬಿ.ಕೆ.ರವೀಂದ್ರ ರೈ ಮೂರನೇ ಅವಧಿಗೆ ಪುನರಾಯ್ಕೆಯಾಗಿದ್ದಾರೆ. ನಗರದ ರೆಡ್ ಕ್ರಾಸ್ ಭವನದಲ್ಲಿ ಜರುಗಿದ ವಾಷಿ೯ಕ ಮಹಾಸಭೆ ಸಂದಭ೯ ಮುಂದಿನ ಮೂರು ವಷ೯ಗಳ ಅವಧಿಗೆ ಆಡಳಿತ ಮಂಡಳಿಯ ಆಯ್ಕೆ ಜರುಗಿತು. ಈ ಸಂದಭ೯ ಸಭಾಪತಿಯಾಗಿ ಬಿ.ಕೆ.ರವೀಂದ್ರರೈ, ಉಪಸಭಾಪತಿಯಾಗಿ ಅನಿಲ್ ಹೆಚ್.ಟಿ., ಕಾಯ೯ದಶಿ೯ಯಾಗಿ ಎಂ.ಧನಂಜಯ, ಖಜಾಂಚಿಯಾಗಿ ಪ್ರಸಾದ್ ಗೌಡ, ಸಹಕಾಯ೯ದಶಿ೯ಯಾಗಿ ಕೆ.ಮಧುಕರ್ ಆಯ್ಕೆಯಾಗಿದ್ದಾರೆ. ರೆಡ್ ಕ್ರಾಸ್ ನಿದೇ೯ಶಕರಾಗಿ ಧೀಘ೯ಕೇಶಿ ಶಿವಣ್ಣ, ಡಾ.ಸಿ.ಆರ್.ಪ್ರಶಾಂತ್, ಹೆಚ್.ಆರ್.ಮುರಳೀಧರ್, ಪಿ.ಆರ್.ರಾಜೇಶ್, ಕೆ.ಎಂ.ವೆಂಕಟೇಶ್, ಬಿ.ಎನ್. ಪ್ರಕಾಶ್, ಎಸ್.ಸಿ.ಸತೀಶ್, ಜೊಸೇಫ್ ಸ್ಯಾಮ್, ಎ.ಕೆ.ಜೀವನ್, ಬಿ.ಕೆ.ಸತೀಶ್ ರೈ, ಬಿ.ಎನ್.ಧನಂಜಯ ಶೆಟ್ಟಿ, ವಿಜಯಕುಮಾರ್ ಶೆಟ್ಟಿ, ಶರತ್ ಕುಮಾರ್ ಶೆಟ್ಟಿ, ವಸಂತಕುಮಾರ್, ತೆನ್ನಿರಾ ಮೈನಾ, ಕೆ.ಸಿ.ವಸಂತ, ಕೆ.ಟಿ.ಉತ್ತಯ್ಯ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಧಾರವಾಡದಿಂದ ಆಗಮಿಸಿದ್ದ ಕನಾ೯ಟಕ ರಾಜ್ಯ ರೆಡ್ ಕ್ರಾಸ್ ನಿದೇ೯ಶಕ ಮಹಂತೇಶ್ ಕಾಯ೯ನಿವ೯ಹಿಸಿದ್ದರು.
ಮಡಿಕೇರಿ ಜೂ.30 NEWS DESK : ನಗರದ ಹೊಸ ಬಡಾವಣೆಯಲ್ಲಿ ಶಾಸಕರ ಅನುದಾನ ರೂ.50 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆಯನ್ನು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಉದ್ಘಾಟಿಸಿದರು. ನಂತರ ಹೊಸ ಬಡಾವಣೆಯ ನವ ಗ್ರಾಮದ ಅಧ್ಯಕ್ಷ ರವಿ ಹಾಗೂ ಉಪಾಧ್ಯಕ್ಷ ಸ್ಟೀವನ್ ಡಿಸೋಜ ಅವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ಸಂಘದ ಪದಾಧಿಕಾರಿಗಳಾದ ಉಮೇಶ್, ಸುಮಿತ್ರ, ಅಮ್ಮಿ, ಗುರುವಣ ಹಾಗೂ ಬಡಾವಣೆಯ ಎಲ್ಲಾ ಸದಸ್ಯರು ಹಾಜರಿದ್ದು, ಶಾಸಕರಿಗೆ ಅಭಿನಂದನೆ ಸಲ್ಲಿಸಿದರು.






