ಸುಂಟಿಕೊಪ್ಪ ಫೆ.8 NEWS DESK : ಹುಚ್ಚು ನಾಯಿಯೊಂದು ಹಸುವಿಗೆ ಕಚ್ಚಿದ ಪರಿಣಾಮ ಹಸು ಸಾವನ್ನಪ್ಪಿರುವ ಘಟನೆ ಸುಂಟಿಕೊಪ್ಪದ ವಿಕ್ರಂ ಬಡಾವಣೆಯಲ್ಲಿ ನಡೆದಿದೆ. ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ 7ನೇ ಮೈಲ್ ಗ್ರಾಮದ ವಿಕ್ರಂ ಬಡಾವಣೆಯಲ್ಲಿ ಹುಚ್ಚು ನಾಯಿಯೊಂದು ಸೇರಿಕೊಂಡಿದ್ದು, ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ. ಸಾಕು ನಾಯಿಗಳು ಸೇರಿದಂತೆ ಇತರೆ ಪ್ರಾಣಿಗಳನ್ನು ಕಚ್ಚಿರುವ ಸಂಶಯ ವ್ಯಕ್ತಪಡಿಸಿರುವ ನಿವಾಸಿಗಳು, ನಾಯಿಗಳ ನಿಯಂತ್ರಣಕ್ಕೆ ಗ್ರಾಮ ಪಂಚಾಯಿತಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಲೇಖಕ: admin
ಮಡಿಕೇರಿ ಫೆ.8 NEWS DESK : ಮಡಿಕೇರಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನ ಸಮಿತಿ ನಿಯಮಾನುಸಾರ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕೆಲವರು ಸಮಿತಿಯ ವಿರುದ್ಧ ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಪ್ರೊ.ಬಿ.ಕೃಷ್ಣಪ್ಪ ಅವರು ಸ್ಥಾಪಿಸಿದ ರಾಜ್ಯಾಧ್ಯಕ್ಷ ಎಂ.ಗುರುಮೂರ್ತಿ ಶಿವಮೊಗ್ಗ ನೇತೃತ್ವದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕಿ ಗಾಯತ್ರಿ ನರಸಿಂಹ ಹೇಳಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ದಲಿತ ಸಂಘರ್ಷ ಸಮಿತಿ ರಿ.47/1974-75 52ನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ಅಧಿಕೃತ ಸಂಘಟನೆಯಾಗಿದೆ. ಈ ಸಂಘಟನೆಯ ಕೊಡಗು ಜಿಲ್ಲಾ ಸಂಚಾಲಕಿಯಾಗಿ ನಾನು ಆಯ್ಕೆಯಾದಾಗಿನಿಂದ ಪ್ರತಿ ತಿಂಗಳು ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಉಚಿತವಾಗಿ ಸಭೆ ಹಾಗೂ ಕಾರ್ಯಕ್ರಮಗಳನ್ನು ನಡೆಸಲು ಡಾ.ಬಿ.ಆರ್.ಅಂಬೇಡ್ಕರ್ ಶತಮಾನೋತ್ಸವ ಭವನ ನಿರ್ಮಾಣ ಸಮಿತಿಯ ಆಡಳಿತ ಮಂಡಳಿ ಅವಕಾಶ ಕಲ್ಪಿಸಿದೆ ಎಂದರು. ಮಡಿಕೇರಿಯ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣ ಸಮಿತಿಯ ನೇತೃತ್ವ ವಹಿಸಿರುವ ಹೆಚ್.ಎಂ.ನಂದಕುಮಾರ್ ಹಾಗೂ ಸಮಿತಿ ಸದಸ್ಯರು ನಿಯಮಾನುಸಾರ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಹೆಚ್.ಎಲ್.ದಿವಾಕರ್ ಅವರು ವೈಯುಕ್ತಿಕ ವಿಚಾರಗಳನ್ನು ಮುಂದಿಟ್ಟುಕೊಂಡು…
ಬೆಂಗಳೂರು ಫೆ.8 NEWS DESK : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ನಿವಾಸದಲ್ಲಿ ಇಂದು 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಲಾಂಛನ ಬಿಡುಗಡೆಗೊಳಿಸಿ, ಶುಭ ಕೋರಿದರು.
ವಿರಾಜಪೇಟೆ ಫೆ.8 NEWS DESK : ನಗರದ ಮೂಲಸೌಲಭ್ಯಕ್ಕೆ ಒತ್ತು ನಿಡುವುದಕ್ಕೆ ಬದಲಾಗಿ ಕೆರೆಗಳ ಅಭಿವೃದ್ಧಿ ಹೆಸರಿನಲ್ಲಿ ಹಣವನ್ನು ವಿನಾಕಾರಣ ಪೋಲು ಮಾಡಲಾಗುತ್ತಿದೆಯೆಂದು ವಿರಾಜಪೇಟೆ ನಾಗರಿಕ ಸಮಿತಿ ಆರೋಪಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಗರಿಕ ಸಮಿತಿ ವಿರಾಜಪೇಟೆ ಸಂಚಾಲಕ ಡಾ.ಇ.ಆರ್.ದುರ್ಗಾಪ್ರಸಾದ್, ಸರ್ಕಾರಿ ಕೆರೆಗಳ ಸುತ್ತಮುತ್ತಲಿನ 30ಮೀ. ವ್ಯಾಪ್ತಿಯಲ್ಲಿ ಯಾವುದೇ ಕಟ್ಟಡ ಕಾಮಗಾರಿಗಳು ಮತ್ತು ಇನ್ನಿತರ ಚಟುವಟಿಕೆಗಳಿಗೆ ಅವಕಾಶ ಇಲ್ಲದಿರುವಾಗ, ಪುರಸಭಾ ವ್ಯಾಪ್ತಿಯ ಕೆರೆಗಳ ಅಭಿವೃದ್ಧಿಗೆ ಸರ್ಕಾರ ಮುಂದಾಗಿರುವುದಾಗಿ ಅವರು ತಿಳಿಸಿದರು. ಸರ್ಕಾರವು ಸಾರ್ವಜನಿಕರ ತೆರಿಗೆ ಹಣದಿಂದ ಜನೋಪಯೋಗಿ ಕಾರ್ಯಕ್ರಮಗಳನ್ನು ರೂಪಿಸುತ್ತದೆ, ಆದರೆ ಸ್ಥಳೀಯವಾಗಿ ನಾಗರಿಕರಿಗೆ ಅನುಕೂಲವಾದ ರಸ್ತೆ, ಕುಡಿಯುವ ನೀರು, ವಿದ್ಯುತ್ ಮತ್ತು ಇನ್ನಿತರ ಮೂಲಭೂತ ಸಮಸ್ಯೆಗಳಿದ್ದರು, ಕೆರೆಗಳ ಅಭಿವೃದ್ಧಿ ಹೆಸರಿನಲ್ಲಿ ಸಾರ್ವಜನಿಕರ ಹಣ ಬಳಸುವುದು ಎಷ್ಟು ಸರಿಯೆಂದು ಪ್ರಶ್ನಿಸಿದರು. ವಿರಾಜಪೇಟೆ ನಗರದಲ್ಲಿ ಸರ್ಕಾರದ ವ್ಯಾಪ್ತಿಗೆ ಒಳಪಡುವ ಗೌರಿ ಕೆರೆ ಮತ್ತು ಛತ್ರಕೆರೆಗಳಿವೆ. ಇವುಗಳನ್ನು ಸುಂದರಗೊಳಿಸಲು ಮತ್ತು ಜೈನರಬೀದಿಯಲ್ಲಿ ಉದ್ಯಾನವನ ನಿರ್ಮಾಣಕ್ಕೆ ಒಟ್ಟು 5.79 ಕೋಟಿ ಕ್ರಿಯಾಯೋಜನೆ ತಯಾರಿಸಿ ಇದೀಗ ಕಾಮಗಾರಿಗಳು ಪ್ರಗತಿಯಲ್ಲಿದೆ.…
ಮಡಿಕೇರಿ ಫೆ.8 NEWS DESK : ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಡಿಕೇರಿ ತಾಲ್ಲೂಕು ಕುಂದಚೇರಿ ಗ್ರಾಮದ ಅಲ್ಲಂಗಡ, ಪೊನ್ನೆಟ್ಟಿ ಹಾಗೂ ಬಾರಿಕೆ ಕುಟುಂಬಸ್ಥರ ಮನೆಗಳಿಗೆ ತೆರಳುವ ರಸ್ತೆಯನ್ನು ಪೂರ್ಣಗೊಳಿಸಲಾಯಿತು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರ ಅನುದಾನದಲ್ಲಿ ಅನುದಾನದಲ್ಲಿ ಮಂಜೂರಾದ ಕಾಮಗಾರಿಯನ್ನು ಕೆ.ಆರ್.ಡಿ.ಸಿ.ಎಲ್ ಮೂಲಕ ಪೂರ್ಣಗೊಳಿಸಲಾಯಿತು. ತಮ್ಮ ಬಹುಕಾಲದ ಬೇಡಿಕೆಯನ್ನು ಈಡೇರಿಸಿದ ಸಲುವಾಗಿ ಅಲ್ಲಂಗಡ, ಪೊನ್ನೆಟ್ಟಿ ಹಾಗೂ ಬಾರಿಕೆ ಕುಟುಂಬಸ್ಥರು ಶಾಸಕರಿಗೆ ಹಾಗೂ ಅನುದಾನಕೊಡಿಸುವಲ್ಲಿ ಸಹಕರಿಸಿದ ಪಂಚಾಯಿತಿಯ ಪ್ರಮುಖರಿಗೆ ಹಾಗೂ ಪಕ್ಷದ ಪ್ರಮುಖರಿಗೆ ಕೃತಜ್ಞತೆ ಸಲ್ಲಿಸಿದರು. ನಂತರ ಮಾತನಾಡಿದ ಕುಟುಂಬಸ್ಥರು ಮಳೆಗಾಲದಲ್ಲಿ ತಮ್ಮ ಭಾಗದ ಹಿರಿಯರಿಗೆ ಹಾಗೂ ಶಾಲಾ ಮಕ್ಕಳಿಗೆ ಓಡಾಡಲು ಈ ರಸ್ತೆ ಅತ್ಯಂತ ಕಠಿಣವಾಗಿತ್ತು. ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಪೊನ್ನಣ್ಣ ಅವರಲ್ಲಿ ತಾವು ಮಾಡಿದ ಮನವಿಯನ್ನೇ ಪರಿಗಣಿಸಿ ತಕ್ಷಣವೇ ಕಾಮಗಾರಿಗೆ ಅನುದಾನ ಮಂಜೂರು ಮಾಡಿರುವುದು ಶ್ಲಾಘನೀಯ ಎಂದರು.
ನವದೆಹಲಿ NEWS DESK ಫೆ.8 : ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಾರ್ಟಿಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಸೋಲು ಅನುಭವಿಸಿದ್ದಾರೆ. ಇವರ ವಿರುದ್ದ ಸ್ಪರ್ಧಿಸಿದ್ದ ಬಿಜೆಪಿಯ ಪರ್ವೇಶ್ ವರ್ಮಾ ಗೆಲುವು ಸಾಧಿಸಿದ್ದಾರೆ. ಮುಖ್ಯಮಂತ್ರಿ ಅಭ್ಯರ್ಥಿಯೂ ಆಗಿದ್ದ ಅರವಿಂದ್ ಕೇಜ್ರಿವಾಲ್ ಅವರಿಗೆ ಈ ಸೋಲು ದೊಡ್ಡ ಆಘಾತವನ್ನೇ ನೀಡಿದೆ. 2013 ರಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ ಮತ್ತು ಅಂದಿನ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರನ್ನೇ ಸೋಲಿಸಿದ್ದ ಕೇಜ್ರಿವಾಲ್ ಅವರು ಆದೇ ಕ್ಷೇತ್ರದಲ್ಲಿ 10 ವರ್ಷಗಳ ನಂತರ ಸೋಲಿನ ರುಚಿ ಕಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಪರ್ವೇಶ್ ಸಿಂಗ್ 28448 ಮತಗಳನ್ನು ಪಡೆದಿದ್ದು, ಅವರ ಪ್ರತಿಸ್ಪರ್ಧಿ ದೆಹಲಿ ಮಾಜಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರು 24583 ಮತಗಳನ್ನು ಪಡೆದಿದ್ದಾರೆ.
ಫೆ.10 ರಿಂದ 16ರ ವರೆಗೆ ವಾರ ಭವಿಷ್ಯ : ಡಾ.ಮಹಾಬಲೇಶ್ವರ ಭಟ್, ಮೂರ್ನಾಡು 8105634429 ಮೇಷ ರಾಶಿ :: ಈ ವಾರದಲ್ಲಿ ಅಲ್ಪ ಪ್ರಮಾಣದಲ್ಲಿ ಹಣ ಬರುವುದು, ದೂರದ ನೆಂಟರ ಆಗಮನ, ಸುತ್ತಾಟ, ಸ್ವಲ್ಪ ಮಟ್ಟಿಗಿನ ಅನಾರೋಗ್ಯ. ಶುಭ ಸಂಖ್ಯೆ :: 1, 2, 3, 9 :: ಶುಭ ಬಣ್ಣ :: ಕೆಂಪು, ಹಳದಿ ವೃಷಭ ರಾಶಿ :: ಮಕ್ಕಳ ಶೈಕ್ಷಣಿಕ ಚಿಂತೆ, ಧನಾಗಮನ, ದೂರ ಪ್ರಯಾಣ, ಕೆಲಸದ ಒತ್ತಡ, ಅಲ್ಪ ಪ್ರಮಾಣದ ಅನಾರೋಗ್ಯ :: ಶುಭ ಸಂಖ್ಯೆ :: 5, 6, 8 :: ಶುಭ ಬಣ್ಣ :: ಬಿಳಿ, ಹಸಿರು, ಮಿಥುನ ರಾಶಿ :: ಈ ವಾರ ಗೊಂದಲದ ವಾತಾವರಣ, ಅನಾರೋಗ್ಯ, ಮಿತ್ರರಿಂದ ಸಹಾಯ, ಬಂಧುಗಳ ವೈಷಮ್ಯ, ದೂರ ಪ್ರಯಾಣ. ಶುಭಸಂಖ್ಯೆ : 3, 5, 6 :: ಶುಭ ಬಣ್ಣ :: ಕೆಂಪು, ಹಸಿರು. ಕರ್ಕಾಟಕ ರಾಶಿ :: ತಾಯಿಯಿಂದ ಧನ ಸಹಾಯ, ಬಂಧುಗಳ ಆಗಮನ,…
ಬೆಂಗಳೂರು NEWS DESK ಫೆ.8 : ದೆಹಲಿಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಇಂದು ಬಿಜೆಪಿ ರಾಜ್ಯ ಕಾರ್ಯಾಲಯ ಬೆಂಗಳೂರಿನ ಜಗನ್ನಾಥ ಭವನದಲ್ಲಿ ಸಂಭ್ರಮಾಚರಣೆ ನಡೆಯಿತು. ಈ ಸಂದರ್ಭ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದರು, ಶಾಸಕರು, ಪರಿಷತ್ ಸದಸ್ಯರು, ಜಿಲ್ಲಾಧ್ಯಕ್ಷರು, ರಾಜ್ಯ ಪದಾಧಿಕಾರಿಗಳು, ಪ್ರಮುಖರು ಹಾಗೂ ಕಾರ್ಯಕರ್ತರು ಹಾಜರಿದ್ದರು.
ಮಡಿಕೇರಿ ಫೆ.8 NEWS DESK : 2024ರ ಆ.20 ರಿಂದ ಸೆ.22ರವರೆಗೆ ನಡೆದ ಯುವ ಕಾಂಗ್ರೆಸ್ ಆಂತರಿಕ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿ 4830 ಮತಗಳನ್ನು ಪಡೆದು ಹಕೀಂ ಸುಂಟ್ಟಿಕೊಪ್ಪ ಗೆಲುವು ಸಾಧಿಸಿರುವುದರಿಂದ ಕಿಂಗ್ ಮೇಕರ್ಸ್ ತಂಡದ ಸುಂಟ್ಟಿಕೊಪ್ಪದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಅಲ್ಲದೇ ಹಕೀಂ ಅವರನ್ನು ಸನ್ಮಾನಿಸಿ, ವಿಶೇಷವಾಗಿ ಹಾಲಿನಭಿಷೇಕ ಮಾಡಿದರು. ಈ ಸಂದರ್ಭ ಮಾತಾನಾಡಿದ ಹಕೀಂ ನನ್ನ ಗೆಲುವು ಪ್ರತಿಯೊಬ್ಬರ ಗೆಲುವಾಗಿದೆ. ಯುವ ಕಾಂಗ್ರೆಸ್ ಆಂತರಿಕ ಚುನಾವಣೆಯಲ್ಲಿ ನನ್ನ ಗೆಲುವಿಗಾಗಿ ಶ್ರಮಿಸಿದ ಪ್ರತಿಯೊಬ್ಬರಿಗೂ ಪ್ರೀತಿಯ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇನೆ ಎಂದರು. ಈ ಸಂದರ್ಭ ಯುವ ಉದ್ಯಮಿ ಹಾಗೂ ಸಮಾಜ ಸೇವಕ ಫಾಝಿಲ್, ಕಿಂಗ್ ಮೇಕರ್ಸ್ ತಂಡದ ಗೂಡ, ಅಬ್ಬಾಸ್, ರಮ್ಮಿ, ತನ್ಸೀ, ಎಸ್.ಯು.ಐ ಜಿಲ್ಲಾ ಉಪಾಧ್ಯಕ್ಷ ಹಾರಿಸ್, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾದ ಬಶೀರ್, ರಫೀಕ್, ಸಾದಿಕ್, ಅಝರ್, ನಿಸಾರ್, ಅಮೀನ್, ಬಶೀರ್, ರಮೀಸ್ ಇದ್ದರು.
ಮಡಿಕೇರಿ ಫೆ.8 NEWS DESK : ಯಲಕನೂರು-ಕಾಟಿಕೊಪ್ಪಲು ಶ್ರೀ ಚಾಮುಂಡೇಶ್ವರಿ ದೇವಾಲಯದ ಎರಡನೇ ವಾರ್ಷಿಕೋತ್ಸವ ಹಾಗೂ ಉತ್ಸವ ಮೂರ್ತಿಯ ಮೆರವಣಿಗೆ ಫೆ.8 ಮತ್ತು 9 ರಂದು ನಡೆಯಲಿದೆ. ದೇವಾಲಯದಲ್ಲಿ ಎರಡು ದಿನಗಳ ಕಾಲ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಲಿದೆ. ಫೆ.8 ರಂದು ಸಂಜೆ 6 ಗಂಟೆಗೆ ಶುದ್ದ ಪುಣ್ಯಾಹ ಗಣಪತಿ ಪೂಜೆ, ನವಗ್ರಹ ಪೂಜೆ, ದೇವಾಲಯ ಒಕ್ಕೂಟ ಸಮಿತಿಯ ಸಂಕಲ್ಪ, 8.30 ಗಂಟೆಗೆ ಮಹಾಮಂಗಳಾರತಿ ಹಾಗೂ ಪ್ರಸಾದ ವಿತರಣೆ ನಡೆಯಲಿದೆ. ಫೆ.9 ರಂದು ಚಾಮುಂಡೇಶ್ವರಿ ತಾಯಿಯ ವಾರ್ಷಿಕ ಪೂಜೆ ಜರುಗಲಿದ್ದು, ಬೆಳಿಗ್ಗೆ 6 ಗಂಟೆಗೆ ಮಂಗಳ ವಾಧ್ಯದೊಂದಿಗೆ ಕಳಸ ತರುವುದು, 8 ಗಂಟೆಯಿಂದ ಗಣಪತಿ ಹೋಮ, ತಾಯಿಗೆ ಕಲತತ್ವ ಹೋಮ, ತಾಯಿಯ ಮೂರ್ತಿಗೆ ಪಂಚಾಮೃತ ಅಭಿಷೇಕ, ಅಲಂಕಾರ, ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ ನಡೆಯಲಿದೆ. ನಂತರ ಅನ್ನಪ್ರಸಾದ ವಿನಿಯೋಗ ನೆರವೇರಲಿದೆ. ಸಂಜೆ 6 ಗಂಟೆಯಿಂದ ಉತ್ಸವ ಮೂರ್ತಿಯನ್ನು ಊರಿನ ಪ್ರಮುಖ ಬೀದಿಯಲ್ಲಿ ವಾಧ್ಯಗೋಷ್ಠಿಯೊಂದಿಗೆ ಅಲಂಕೃತ ಮಂಟಪದಲ್ಲಿ ಮೆರವಣಿಗೆ ಮಾಡಲಾಗುವುದು. ಭಕ್ತಾಧಿಗಳು ಹೆಚ್ಚಿನ…






